Tag: Ex – Boyfriend

  • Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

    Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್

    ಬೆಂಗಳೂರು: ಮಾಜಿ ಬಾಯ್‌ಫ್ರೆಂಡ್ (Ex Boyfriend) ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ (Stab) ಘಟನೆ ಬೆಂಗಳೂರಿನ (Bengaluru) ವೈಯಾಲಿ ಕಾವಲ್ (Vyalikaval) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಚಂದನ್, ಹಳೆ ಬಾಯ್ ಫ್ರೆಂಡ್‌ನಿಂದ ಚಾಕು ಇರಿತಕ್ಕೆ ಒಳಗಾದ ಯುವಕ. ಯತೀಶ್ ಎಂಬಾತ ಚಂದನ್‌ಗೆ ಚಾಕು ಇರಿದಿದ್ದಾನೆ. ವೈಯಾಲಿ ಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಜಟಕಾ ಸ್ಟ್ಯಾಂಡ್ ಬಳಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಚಂದನ್ ಅದೇ ಏರಿಯಾದ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಯುವತಿ ಕೂಡ ಚಂದನ್‌ನನ್ನು ಪ್ರೀತಿಸುತ್ತಿದ್ದಳು. ಈ ಹಿಂದೆ ಯುವತಿ ಯತೀಶ್ ಎಂಬಾತನ್ನ ಪ್ರೀತಿಸುತ್ತಿದ್ದಳಂತೆ. ಯುವತಿ ಮತ್ತೊಬ್ಬ ಯುವಕನನ್ನ ಪ್ರೀತಿಸುತ್ತಿದ್ದ ವಿಚಾರ ಯತೀಶ್‌ಗೆ ತಿಳಿದು ಚಂದನ್‌ನನ್ನು ಮಾತುಕತೆಗೆ ಅಂತಾ ಕರೆಸಿ ಯತೀಶ್ ಅಂಡ್ ಗ್ಯಾಂಗ್ ಚಾಕು ಇರಿದಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಯುವತಿಯರನ್ನ ಮದ್ವೆಯಾದ್ರೆ 5 ಲಕ್ಷ ಹಣ – ಹೇಳಿಕೆ ಖಂಡಿಸಿ ಯತ್ನಾಳ್ ಕಾರ್‌ಗೆ ಘೇರಾವ್ ಹಾಕಲು ಯತ್ನ

    ಘಟನೆ ಬಳಿಕ ರಕ್ತ ಸಿಕ್ತ ಮೈಯಲ್ಲೇ ನಿತ್ರಾಣನಾಗಿದ್ದ ಚಂದನ್, ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ. ಘಟನಾ ಸ್ಥಳಕ್ಕೆ ತೆರಳಿದ ಚಂದನ್ ಸ್ನೇಹಿತರು ರಕ್ಷಣೆ ಮಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯುನಲ್ಲಿ ಚಂದನ್ ಚಿಕಿತ್ಸೆ ಪಡೆಯುತ್ತಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ. ಘಟನೆ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

  • ಹಳೆ ಲವ್ವರ್ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

    ಹಳೆ ಲವ್ವರ್ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

    ಮಡಿಕೇರಿ: ಹಳೆ ಲವ್ವರ್ ಕಾಟಕ್ಕೆ ಬೇಸತ್ತ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ.

    ದಿವ್ಯಜ್ಯೋತಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ದಿವ್ಯಜ್ಯೋತಿ ಮಡಿಕೇರಿ ಡೈರಿ ಫಾರ್ಮ್ ನಿವಾಸಿಯಾಗಿದ್ದು, ಪೋಷಕರಿಗೆ ತಿಳಿಸದೆ ಬ್ರಿಜೇಶ್ ಎಂಬಾತನ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಳು.

    ದಿವ್ಯಜ್ಯೋತಿ, ಬ್ರಿಜೇಶ್ ಜೊತೆ ಮದುವೆ ಆಗುವ ಮೊದಲು ಪವನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಪೋಷಕರು ಪ್ರೀತಿಗೆ ನಿರಾಕರಿಸಿದ್ದಕ್ಕೆ ದಿವ್ಯಜ್ಯೋತಿ, ಪವನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ಬ್ರೇಕಪ್ ಮಾಡಿಕೊಂಡ ನಂತರ ಪೋಷಕರಿಗೆ ತಿಳಿಸದೇ ಬ್ರಿಜೇಶ್ ಜೊತೆ ರಿಜಿಸ್ಟರ್ ಮಾರೇಜ್ ಆಗಿದ್ದಳು.

    ಮಾಜಿ ಪ್ರೇಯಸಿಯ ಮದುವೆ ವಿಷಯ ತಿಳಿದ ಪವನ್ ಆಕೆಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಪವನ್, ಆತನ ಜೊತೆ ನಿನ್ನ ಮದುವೆ ಆಗಲು ನಾನು ಬಿಡುವುದಿಲ್ಲ. ನೀನು ಮದುವೆಯಾದ ಮೇಲೆ ಆತನ ಜೊತೆ ಹೇಗೆ ಬದುಕುತ್ತೀಯಾ ಎಂದು ನಾನು ನೋಡುತ್ತೇನೆ ಎಂದು ದಿವ್ಯಜ್ಯೋತಿಗೆ ಕಿರುಕುಳ ನೀಡಿದ್ದಾನೆ.

    ಮಾಜಿ ಪ್ರಿಯಕರನ ಕಾಟಕ್ಕೆ ಬೇಸತ್ತ ದಿವ್ಯಜ್ಯೋತಿ, ‘ಪವನ್‍ನಿಂದ ಟಾರ್ಚರ್ ಇದೆ’ ಎಂದು ಡೆತ್‍ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಾರ್ಚರ್ ಕೊಟ್ಟ ಪವನ್ ಹಾಗೂ ರಿಜಿಸ್ಟರ್ ಮದುವೆ ಆಗಿದ್ದ ಬ್ರಿಜೇಶ್‍ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.