Tag: Evil

  • Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

    Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

    ಶಿವಮೊಗ್ಗ: ದೆವ್ವ (Evil) ಅಂಟಿಕೊಂಡಿದೆ, ಬಿಡಿಸುತ್ತೇನೆಂದು ಹೇಳಿ ಚಿತ್ರಹಿಂಸೆ ನೀಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ (Woman) ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ನಡೆದಿದೆ.

    ಜಂಬರಗಟ್ಟೆ ನಿವಾಸಿ ಗೀತಮ್ಮ (50) ಸಾವನ್ನಪ್ಪಿದ ಮಹಿಳೆ. ತಾಯಿಗೆ ಹುಷಾರಿಲ್ಲದ ಹಿನ್ನೆಲೆ ಮಗನೇ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

    ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ. ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ರೌಡಿಶೀಟರ್‌ನಿಂದ ದಾಂಧಲೆ – 18ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿಪುಡಿ, ಮೂವರು ಅರೆಸ್ಟ್

  • ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ಈಗ ಯಾರೇ ನೀ ಮೋಹಿನಿ ಕಾಟ: ಧಾರಾವಾಹಿಯಲ್ಲಿನ ಭೂತ ನೋಡಿ ವಿದ್ಯಾರ್ಥಿನಿಗೆ ಚಳಿ ಜ್ವರ!

    ತುಮಕೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ನಂದಿನಿ ಧಾರಾವಾಹಿಯ ಪಾತ್ರ ಅನುಕರಣೆ ಮಾಡಿ ಬಾಲಕಿಯೊರ್ವಳು ಬಲಿಯಾದ ಘಟನೆ ಮಾಸುವ ಮುನ್ನವೇ `ಯಾರೇ ನೀ ಮೋಹಿನಿ’ ಯ ಕಥೆ ಕೇಳಿ ವಿದ್ಯಾರ್ಥಿನಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ.

    ಹೌದು. ತುಮಕೂರು ನಗರದ ಬೈಲಾಂಜನೇಯಸ್ವಾಮಿ ದೇವಸ್ಥಾನದ ಬಳಿ ಇರುವ ಇಂಡೋಕಿಟ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಧಾರಾವಾಹಿಯಲ್ಲಿನ ಭೂತದ ಕಥೆ ಕೇಳಿ ಇಬ್ಬರು ಮಕ್ಕಳು ಹೆದರಿ ಅದರಲ್ಲಿ ಓರ್ವ ಬಾಲಕಿ ಚಳಿ ಜ್ವರದಿಂದ ಅಸ್ವಸ್ಥಳಾಗಿದ್ದಾಳೆ. ಇದನ್ನೂ ಓದಿ: ಶಾಕಿಂಗ್.. ಸೀರಿಯಲ್ ಸೀನ್ ನೋಡಿ ಬೆಂಕಿ ಹಚ್ಚಿಕೊಂಡು ಬಾಲಕಿ ಸಾವು!

    ಯಾರೇ ನೀ ಮೋಹಿನಿ ಧಾರವಾಹಿ ವೀಕ್ಷಿಸಿದ ಬಾಲಕಿ ಪುಷ್ಮಿತಾ ಶಾಲೆಗೆ ಬಂದು ತನ್ನ ಸಹಪಾಠಿ ಪ್ರತಿಕ್ಷಾಗೆ ಹೇಳಿದ್ದಾಳೆ. ಧಾರಾವಾಹಿಯಲ್ಲಿ ಇರುವಂತೆ ಶಾಲೆಯಲ್ಲೂ ಕೂಡ ಭೂತ-ಪಿಶಾಚಿ ಇದೆ ಎಂದು ಪುಷ್ಮಿತಾ ತಾನು ಹೆದರಿದ್ದಲ್ಲದೇ ಪ್ರತಿಕ್ಷಾಗೂ ಹೆದರಿಸಿದ್ದಾಳೆ.

    ಈ ಭಯದಲ್ಲೇ ಮನೆಗೆ ಹೋಗಿದ್ದ ಪ್ರತಿಕ್ಷಾಗೆ ಚಳಿ-ಜ್ವರ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಪೋಷಕರು ಚಿಕಿತ್ಸೆ ನೀಡಿ ವಿಚಾರಿಸಿದಾಗ ಪ್ರತಿಕ್ಷಾ ಧಾರಾವಾಹಿಯಲ್ಲಿನ ಭೂತದ ಕಥೆ ಹೇಳಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೀರಿಯಲ್ ಗೆ ಬಾಲಕಿ ಬಲಿ ಪ್ರಕರಣ- ಟಿವಿ ಒಡೆದು ನೊಂದ ಪೋಷಕರ ಆಕ್ರೋಶ

  • ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ನಾನು ತೋರಿಸಿದ ವ್ಯಕ್ತಿಯ ಜೊತೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಅಮಾಯಕ ಮಹಿಳೆಯರಿಗೆ ಮೋಸ

    ಬೆಳಗಾವಿ: ನೀಚ ಸ್ವಾಮಿಯಯೊಬ್ಬ ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಿದ್ದ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿ ನಡೆದಿದೆ.

    ನೀಚ ಸ್ವಾಮೀಜಿ ಅಮಾಯಕ ಮಹಿಳೆಯರನ್ನು ಬೇರೆಯವರ ಹಾಸಿಗೆಗೆ ಕಳಿಸುತ್ತಾನೆ. ನಾನು ದೇವ ಮಾನವ. ಮೈಯಲ್ಲಿ ಸಾಕ್ಷಾತ್ ಆಂಜನೇಯ ದೇವ ಬರುತ್ತೆ ಎಂದು ಹೇಳಿದ್ದಾನೆ. ಬ್ರಹ್ಮ ಬರೆದ ಹಣೆ ಬರಹವನ್ನು ಮೊಬೈಲ್ ಟಾರ್ಚ್ ಬಳಸಿ ಓದಿ ಯಾಮಾರಿಸ್ತಾನೆ. ನಿಮ್ಮ ಮನೆಯಲ್ಲಿ ವಾಮಾಚಾರ ನಡೆದಿದೆ. ವಾಮಾಚಾರ ಬಿಡಿಸುತ್ತೇನೆ ಎಂದು ಭವಿಷ್ಯ ಹೇಳ್ತಿನಿ ಎಂದು ಜನರ ಬಳಿ ಹಣ ಪೀಕುತ್ತಾನೆ. ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಮೋಸಗಾರ, ಖತರ್ನಾಕ್ ಸ್ವಾಮಿಯ ಕೃತ್ಯ ಬಯಲಾಗಿದೆ.

    ಈ ಡೇಂಜರಸ್ ಸ್ವಾಮೀಜಿ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ಹಂಜಾನಟ್ಟಿ ಗ್ರಾಮದಲ್ಲಿದ್ದಾನೆ. ಕತ್ತಲಾಗುತ್ತಿದ್ದಂತೆ ಕಾವಿ ತೊಡುತ್ತಾನೆ. ಬೆಳಗಿನ ಜಾವ ವಾಟರ್ ಮ್ಯಾನ್ ಕೆಲಸ ಮಾಡುತ್ತಾನೆ. ಎರಡು ಕೆಲಸದಲ್ಲೂ ಅಮಾಯಕರನ್ನ ಮೋಸ ಮಾಡಿ ಕಳುಹಿಸುತ್ತಾನೆ. ಹುಕ್ಕೇರಿಯ ಪುರಸಭೆಯ ವಾಟರ್ ಮ್ಯಾನ್ ಈರಪ್ಪ ಭೀಮನ್ನವರನಿಂದ ವಂಚನೆ ಮಾಡುತ್ತಾನೆ. ಸಮಸ್ಯೆ ಹೇಳಿಕೊಂಡು ಬರುವ ಅಮಾಯಕ ಮಹಿಳೆಯರ ಬಾಳಿನ ಜೊತೆ ಚೆಲ್ಲಾಟವಾಡುತ್ತಾನೆ.

    ಮಕ್ಕಳಾಗದವರು, ಗಂಡ ಸತ್ತಿರುವ ಮಹಿಳೆಯರೇ ಇವನ ಟಾರ್ಗೆಟ್‍ಯಾಗಿದ್ದು, ನಾನು ತೋರಿಸಿದ ವ್ಯಕ್ತಿಯ ಜೊತೆಗೆ ಹಾಸಿಗೆ ಹಂಚಿಕೊಂಡರೆ ಸಮಸ್ಯೆ ಬಗೆಹರಿಯುತ್ತೆ ಎಂದು ಹೇಳುತ್ತಾನೆ. ಸಮಸ್ಯೆ ಬಗೆಹರಿಸುತ್ತೀನಿ ಎಂದು ಪಿಂಪ್ ಕೆಲಸ ಮಾಡುತ್ತಿದ್ದಾನೆ. ಪಿಂಪ್ ಕೆಲಸದ ಜೊತೆ ದೆವ್ವ ಬಿಡಿಸುತ್ತೀನಿ ಎಂದು ಈ ನೀಚ ಸ್ವಾಮೀಜಿ ವಾಮಾಚಾರದ ಕೆಲಸ ಮಾಡುತ್ತಾನೆ. ಈರಪ್ಪ ಕೃತ್ಯಕ್ಕೆ ಮ್ಮನ್ನೋಳಿ ಗ್ರಾಮ ಪಂಚಾಯತ್ ಸದಸ್ಯೆ ಕೂಡ ಸಾಥ್ ನೀಡಿದ್ದು, ಪಬ್ಲಿಕ್ ಟಿವಿ ಕಾರ್ಯಾಚರಣೆಯಲ್ಲಿ ಖತರ್ನಾಕ್ ಸ್ವಾಮಿಯ ದೊಡ್ಡ ಜಾಲ ಬಟಾ ಬಯಲಾಗಿದೆ.

    ಈ ಸ್ವಾಮೀಜಿ ಬಳಿ ಯಾರೇ ಬರಲಿ ಅವರ ಕೈಯಲ್ಲಿ 2 ನಿಂಬೆ ಹಣ್ಣು ನೀಡಿ ಚಡಿಯಿಂದ ಹೊಡೆಯುತ್ತಾನೆ. ನೀನು ಇವನ ಬಿಟ್ಟು ಹೋಗುವುದಿಲ್ಲ ಎಂದರೆ ತಲೆಯ ಮೇಲೆ ಕರ್ಪೂರ ಸುಡುತ್ತೇನೆ ಎಂದು ಹೆದರಿಸಿ ಜನರನ್ನು ವಂಚಿಸುತ್ತಿದ್ದಾನೆ.

    ಈ ವಂಚನೆ ಕಾರ್ಯವನ್ನು ಇವನು ಅಷ್ಟೇ ಮಾಡದೆ ಈತನ ಪತ್ನಿ ಹುಕ್ಕೇರಿ ತಾಲೂಕಿನ ಎಲಿ ಮುನ್ನೋಳಿ ಗ್ರಾಮ ಪಂಚಾಯತಿ ಸದಸ್ಯೆ ಕೂಡ ಈ ಮಾಟ ಮಂತ್ರದಲ್ಲಿ ತೊಡಗಿಕೊಂಡಿದ್ದಾಳೆ. ಇನ್ನೂ ಈರಪ್ಪ್ ಸ್ವಾಮಿಯ ಒಂದು ಬಹು ದೊಡ್ಡ ಜಾಲವನ್ನು ಮಾಡಿಕೊಂಡಿದ್ದು, ನಿಧಿ ತೆಗೆಯುತ್ತೇನೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದಾನೆ. ಇವನ ಮನೆಯಲ್ಲಿ ಎಲ್ಲಿ ನೋಡಿದರು ನಿಂಬೆ ಹಣ್ಣು, ಗೊಂಬೆಗಳು, ಬೆಕ್ಕು ಮರಿ ಸೇರಿದಂತೆ ಮಾಟ ಮಂತ್ರ ಮಾಡುವ ಸಾಮಗ್ರಿಗಳು ಕಂಡು ಬರುತ್ತವೆ.