Tag: evidence

  • ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ಡಿವೋರ್ಸ್‌ ಕೇಸ್‌| ಸಂಗಾತಿ ರೆಕಾರ್ಡ್ ಮಾಡಿದ ಕರೆಯನ್ನು ಸಾಕ್ಷಿಯಾಗಿ ಪರಿಗಣಿಸಬಹುದು – ಸುಪ್ರೀಂ

    ನವದೆಹಲಿ: ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು (Recorded Calls) ನ್ಯಾಯಾಲಯದಲ್ಲಿ ಸಾಕ್ಷಿಯಾಗಿ (Evidence) ಸ್ವೀಕರಿಸಬಹುದು ಎಂದು ಸುಪ್ರೀಂ ಕೋರ್ಟ್ (Supreme Court)  ಮಹತ್ವದ ತೀರ್ಪು ನೀಡಿದೆ.

    ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್  ತನ್ನ ತೀರ್ಪಿನಲ್ಲಿ ಪತಿ (Husband) ಮತ್ತು ಪತ್ನಿಯ (Wife) ನಡುವಿನ ರಹಸ್ಯ ಸಂಭಾಷಣೆಗಳನ್ನು ಸಾಕ್ಷ್ಯ ಕಾಯ್ದೆಯ ಸೆಕ್ಷನ್ 122 ರ ಅಡಿಯಲ್ಲಿ ರಕ್ಷಿಸಲಾಗಿದೆ ಮತ್ತು ನ್ಯಾಯಾಂಗ ವಿಚಾರಣೆಯಲ್ಲಿ ಬಳಸಲಾಗುವುದಿಲ್ಲ ಎಂದು ಹೇಳಿತ್ತು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ ಚಂದ್ರ ಶರ್ಮಾ ಅವರ ಪೀಠ ಹೈಕೋರ್ಟ್‌ ಆದೇಶವನ್ನು ವಜಾಗೊಳಿಸಿದೆ.

    ಪತಿ ಮತ್ತು ಪತ್ನಿ ಪರಸ್ಪರರ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿಕೊಳ್ಳುವುದೇ ಅವರ ದಾಂಪತ್ಯ ಚೆನ್ನಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಮತ್ತು ಆದ್ದರಿಂದ ಅದನ್ನು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ಬಳಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.  ಇದನ್ನೂ ಓದಿ: ಕೇರಳದ ನರ್ಸ್‌ಗೆ ಜು.16ರಂದು ಯೆಮೆನ್‌ನಲ್ಲಿ ನೇಣು; ಮರಣದಂಡನೆ ತಡೆಯಲು ಸಾಧ್ಯವಿಲ್ಲ ಸುಪ್ರೀಂಗೆ ಕೇಂದ್ರ ಮಾಹಿತಿ

    court order law

    ವಿವಾಹವು ಪತಿ ಮತ್ತು ಪತ್ನಿ ಪರಸ್ಪರ ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುವ ಹಂತವನ್ನು ತಲುಪಿದ್ದರೆ ಅದು ಅವರ ನಡುವಿನ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಉಲ್ಲೇಖಿಸಿದ್ದಾರೆ.

    ದಾಂಪತ್ಯ ವಿಚಾರಣೆಯ ಸಮಯದಲ್ಲಿ ದಾಖಲಾದ ಸಂಭಾಷಣೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು. ದಾಖಲಾದ ಸಂಭಾಷಣೆಗಳನ್ನು ನ್ಯಾಯಾಂಗದ ಗಮನಕ್ಕೆ ತೆಗೆದುಕೊಂಡ ನಂತರ ಪ್ರಕರಣವನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಕುಟುಂಬ ನ್ಯಾಯಾಲಯಕ್ಕೆ ಹೇಳಿದೆ.

    ಏನಿದು ಪ್ರಕರಣ?
    ಭಟಿಂಡಾ ಕುಟುಂಬ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆ, 1955 ರ ಸೆಕ್ಷನ್ 13 ರ ಅಡಿಯಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪತ್ನಿ ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾಳೆ ಎಂಬ ಆರೋಪಕ್ಕೆ ಸಾಕ್ಷಿಯಾಗಿ ಪತಿ ಆಡಿಯೋ ಸಿಡಿಯನ್ನು ನೀಡಿದ್ದರು. ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿತ್ತು.

    ಕುಟುಂಬ ನ್ಯಾಯಾಲಯ ಆಡಿಯೋವನ್ನು ಸಾಕ್ಷಿಯಾಗಿ ಪರಿಗಣಿಸಿದ್ದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ ಮೊರೆ ಹೋಗಿದ್ದರು. ನನ್ನ ಒಪ್ಪಿಗೆ ಇಲ್ಲದೇ ರೆಕಾರ್ಡ್‌ ಮಾಡುವುದು ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದ್ದರು. ಪತ್ನಿಯ ವಾದವನ್ನು ಪುರಸ್ಕರಿಸಿದ ಹೈಕೋರ್ಟ್‌ ವೈವಾಹಿಕ ಪ್ರಕರಣಗಳಲ್ಲಿ ಪತಿ ಮತ್ತು ಪತ್ನಿಯ ನಡುವಿನ ಸಂಭಾಷಣೆಯ ರಹಸ್ಯ ಧ್ವನಿಮುದ್ರಣವನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು.

  • ಮಾನಸ ಜೋಶಿ ನಟನೆಯ ‘ಎವಿಡೆನ್ಸ್’ ಲಿರಿಕಲ್ ಸಾಂಗ್ ರಿಲೀಸ್

    ಮಾನಸ ಜೋಶಿ ನಟನೆಯ ‘ಎವಿಡೆನ್ಸ್’ ಲಿರಿಕಲ್ ಸಾಂಗ್ ರಿಲೀಸ್

    ಇಂಟರಾಗೇಶನ್ (Evidence) ರೂಮ್ ನಲ್ಲಿ ನಡೆಯುವ ಕ್ರೈಂ ಕಂಟೆಂಟ್  ಜೊತೆಗೊಂದು ತ್ರಿಕೋನ‌ ಪ್ರೇಮಕಥೆ ಇಟ್ಟುಕೊಂಡು ಪ್ರವೀಣ ಸಿಪಿ (Praveen CP). ಆಕ್ಷನ್ ಕಟ್ ಹೇಳಿರುವ ಚಿತ್ರ ಎವಿಡೆನ್ಸ್. ತೆರೆಗೆ ಬರಲು ಸಿದ್ದವಾಗಿರುವ ಈ ಚಿತ್ರದ ‘ಅಯ್ಯಯ್ಯೋ ಅರೆಮನಕೆ’ ಎಂಬ ಲಿರಿಕಲ್ ಹಾಡಿನ ಬಿಡುಗಡೆ ಹಾಗೂ ಪತ್ರಿಕಾಗೋಷ್ಟಿ ನಡೆಯಿತು.  ಶ್ರೀಧೃತಿ ಪ್ರೊಡಕ್ಷನ್ಸ್ ಹಾಗೂ ರೋಷಿರಾ ಪ್ರೊಡಕ್ಷನ್ಸ್  ಲಾಂಛನದಲ್ಲಿ  ಕೊಡ್ಲಾಡಿ ಸುರೇಂದ್ರ ಶೆಟ್ಟಿ, ಶ್ರೀನಿವಾಸ್‌ಪ್ರಭು ಕೆ, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಿಸಿರುವ  ಈ ಚಿತ್ರಕ್ಕೆ ಪ್ರವೀಣ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ.

    ನಿರ್ಮಾಪಕ ಸುರೇಂದ್ರ ಶೆಟ್ಟಿ ಮಾತನಾಡಿ ನಾನು ಚಿತ್ರರಂಗಕ್ಕೆ ಹೊಸಬ. ಪ್ರವೀಣ್  ಬರೀ 2 ಪಾತ್ರ ಇಟ್ಟುಕೊಂಡು ಮಾಡಿದ್ದೇನೆ  ಎಂದಾಗ ಇಂಟರೆಸ್ಟಿಂಗ್ ಅನಿಸಿ ಕೈ ಹಾಕಿದೆವು. ನಂತರ ಅದು  ಮಲ್ಟಿಪಲ್ ರೋಲ್ ಆಯ್ತು. 15 ಲಕ್ಷ ಹೋಗಿ ಡಬಲ್ ಆಯ್ತು.  ಚಿತ್ರ ನಿಜಕ್ಕೂ  ತುಂಬಾ ಚೆನ್ನಾಗಿ ಬಂದಿದೆ. ಮುಂದಿನ ತಿಂಗಳು ರಿಲೀಸಾಗುತ್ತಿದೆ ಎಂದರು. ಮತ್ತೊಬ್ಬ ನಿರ್ಮಾಪಕ ರವೀಂದ್ರರಾವ್ ಮಾತನಾಡಿ ಮರ್ಡರ್ ಮಿಸ್ಟ್ರಿ ಜೊತೆಗೆ ಒಳ್ಳೆ ಕಂಟೆಂಟ್ ಕೂಡ ಚಿತ್ರದಲ್ಲಿದೆ. ಅತಿಯಾದ ವ್ಯಾಮೋಹ ಏನೆಲ್ಲ ಮಾಡುತ್ತದೆ ಎಂದು ತೋರಿಸಿದ್ದೇವೆ.

    ನಿರ್ದೇಶಕ ಪ್ರವೀಣ ಮಾತನಾಡಿ ನಿರ್ಮಾಪಕರಿಲ್ಲ ಅಂದ್ರೆ ನಾನಿಲ್ಲ, ರೋಬೋ ಗಣೇಶ್, ಮಾನಸ ಜೋಷಿ ಎಲ್ಲರೂ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸೂಸೈಡ್ ಕೇಸ್ ತನಿಖೆ ಮಾಡಲು ಬರುವ ವಿಶೇಷ ತನಿಖಾಧಿಕಾರಿಯಾಗಿ ಮಾನಸ ಜೋಷಿ ನಟಿಸಿದ್ದು, 360 ಡಿಗ್ರಿ ಶಾಟ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಎವಿಡೆನ್ಸ್ ಪದದ ಸುತ್ತ ನಡೆಯುವ ಕಥೆಯಿದು. ಕೋವಿಡ್ ಟೈಂನಲ್ಲಿ ಎರಡೇ ಪಾತ್ರ ಅಂತ ಸ್ಟಾರ್ಟ್ ಮಾಡಿದೆವು. ನಂತರ ಕಮರ್ಷಿಯಲ್ಲಾಗಿರಲೆಂದು ಬೇರೆ  ಪಾತ್ರಗಳನ್ನು ರಿಯಲ್ಲಾಗಿ  ತೋರಿಸಿದ್ದೇವೆ. 10 ಜನ ನಿರ್ಮಾಪಕರು ಕೈ ಜೋಡಿಸಿದ್ದರಿಂದಲೇ ಸಿನಿಮಾ ಆಗಿದೆ. ನಮ್ಮದೇ ಸ್ಪೈಡರ್ ಆಡಿಯೋ ಮೂಲಕ ಹಾಡು ರಿಲೀಸ್ ಮಾಡಿದ್ದೇವೆ ಎಂದರು.

    ನಟ ಆಕರ್ಷ್ ಆದಿತ್ಯ ಮಾತನಾಡಿ ಹತ್ತಕ್ಕೂ ಹೆಚ್ಚು ಸೀರಿಯಲ್ ಮಾಡಿದ್ದು, ಇದು ನನ್ನ 2ನೇ ಚಿತ್ರ ಎಂದರು. ನಂತರ ಕಾರ್ತೀಕ್ ವರ್ಣೇಕರ್, ರೇಣು ಶಿಕಾರಿ, ಪವನ್ ಸುರೇಶ್, ಶಿವಕುಮಾರ್ ಆರಾಧ್ಯ ತಮ್ಮ‌  ಪಾತ್ರಗಳ ಕುರಿತು ಹೇಳಿಕೊಂಡರು. ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ‌ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ.

    ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು  ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಈ ಚಿತ್ರದಲ್ಲಿದೆ. ಜೋಶ್ ಖ್ಯಾತಿಯ ರೋಬೊ ಗಣೇಶನ್  ನಾಯಕನಾಗಿ ನಟಿಸಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದತೆ   ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಶಶಿಧರ ಕೋಟೆ, ಮನಮೋಹನ್ ರೈ ನಟಿಸಿದ್ದಾರೆ.

     

    ಈ  ಚಿತ್ರದಲ್ಲಿ 4 ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ಡಾ.ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ ಹಾಗೂ ಕಾರ್ತೀಕ್  ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

  • ಸದ್ಯದಲ್ಲೇ ‘ಎವಿಡೆನ್ಸ್’ ಚಿತ್ರದ ಟೀಸರ್ : ರೋಬೊ ಖ್ಯಾತಿಯ ಗಣೇಶನ್ ನಾಯಕ

    ಸದ್ಯದಲ್ಲೇ ‘ಎವಿಡೆನ್ಸ್’ ಚಿತ್ರದ ಟೀಸರ್ : ರೋಬೊ ಖ್ಯಾತಿಯ ಗಣೇಶನ್ ನಾಯಕ

    ಶ್ರೀಧೃತಿ ಪ್ರೊಡಕ್ಷನ್ ಲಾಂಛನದಲ್ಲಿ ಕೊಡ್ಲಾಡಿ ಸುರೇಂದ್ರಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್‌ಪ್ರಭು, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್ (ಚನ್ನಸಂದ್ರ) ಸೇರಿ ನಿರ್ಮಿಸುತ್ತಿರುವ ‘ಎವಿಡೆನ್ಸ್’ (Evidence) ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ  (Praveen Ramakrishna) ಆಕ್ಷನ್‌ ಕಟ್ ಹೇಳಿದ್ದಾರೆ. ಇದೇ ತಿಂಗಳ ಅಂತ್ಯದಲ್ಲಿ ಚಿತ್ರದ ಟೀಸರ್ (Teaser) ಬಿಡುಗಡೆ ಮಾಡುವ  ಯೋಜನೆ ಚಿತ್ರತಂಡಕ್ಕಿದೆ. ಅಲ್ಲದೆ ಚಿತ್ರವನ್ನು ಆಗಸ್ಟ್ ವೇಳೆಗೆ ರಿಲೀಸ್ ಮಾಡುವ ಪ್ಲಾನ್ ಕೂಡ ಇದೆ.

    ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.  ಸದ್ಯದಲ್ಲೇ ಸೆನ್ಸಾರ್ ಮನೆಗೆ ಹೋಗಲು ಅಣಿಯಾಗುತ್ತಿರುವ ‌ಈ ಚಿತ್ರಕ್ಕೆ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನೂ ಓದಿ:ಕೊನೆಗೂ ತನ್ನ ಮಗುವಿನ ತಂದೆ ಬಗ್ಗೆ ಗುಟ್ಟು ರಟ್ಟು ಮಾಡಿದ ಇಲಿಯಾನಾ

    ಕೊಲೆಯೊಂದು ನಡೆದಾಗ ಅದರ ಸಾಕ್ಷಾಧಾರಗಳನ್ನು  ಹುಡುಕುವ ಪ್ರಕ್ರಿಯೆ ಸುತ್ತ ನಡೆಯುವ ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ  ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕ್ಷಣ ಕ್ಷಣಕ್ಕೈ ಕುತೂಹಲ ಕೆರಳಿಸುವಂಥ, ಕೊನೆಯವರೆಗೂ ಸಸ್ಲೆನ್ಸ್ ಓಪನ್ ಆಗದಂಥ ಗಟ್ಟಿ ಕಥೆ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ.

    ಜೋಶ್ ಖ್ಯಾತಿಯ ರೋಬೊ ಗಣೇಶನ್ (Robo Ganeshan)ಚಿತ್ರದ ನಾಯಕನಾಗಿ ನಟಿಸಿದ್ದು, ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ (Manasa Joshi) ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಗಳಲ್ಲಿ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಪವನ್‌ಸುರೇಶ್, ಶಶಿಧರಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ, ಆರಾಧ್ಯ ಶಿವಕುಮಾರ್ ಮುಂತಾದವರು ನಟಿಸಿದ್ದಾರೆ.

     

    ಇನ್ನು  ಚಿತ್ರದಲ್ಲಿ 4 ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತವನ್ನು ಸಿ.ಜೆ. ಮಾಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್ ಮತ್ತು ಪ್ರವೀಣ್‌ ರಾಮಕೃಷ್ಣ ಹಾಗೂ ಕಾರ್ತೀಕ್  ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು

    ಹೆಂಡತಿ ಇಬ್ಬರು ಮಕ್ಕಳನ್ನು ಕೊಲೆಗೈದು ವ್ಯಕ್ತಿ ನೇಣಿಗೆ ಶರಣು

    ಚಂಡೀಗಢ: ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ (Haryana) ಮದನ ಖುರ್ದ್ (Madana Khurd) ಎಂಬಲ್ಲಿ ಸೋಮವಾರ ನಡೆದಿದೆ.

    ಮೃತರ ಕುತ್ತಿಗೆ ಮತ್ತು ತಲೆಯ ಮೇಲೆ ಗುರುತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಮೊದಲು ವ್ಯಕ್ತಿ ತನ್ನ ಹೆಂಡತಿ, ಮಗಳು ಮತ್ತು ಮಗನನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ನೇಣು ಬಿಗಿದುಕೊಂಡಿದ್ದಾನೆ. ಮೃತ ವ್ಯಕ್ತಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಅವರ ಮಗಳು ಜವಾಹರ ನವೋದಯ ವಿದ್ಯಾಲಯದಲ್ಲಿ (Jawahar Navodaya Vidyalaya) 11ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಮಗ 9ನೇ ತರಗತಿಯಲ್ಲಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

    CRIME

    ದುಜಾನಾ ಪೊಲೀಸ್ ಠಾಣಾಧಿಕಾರಿ (SHO) ಸುನೀಲ್ ಕುಮಾರ್ ಮಾತನಾಡಿ, ಸೋಮವಾರ ಮನೆಯೊಂದರಲ್ಲಿ ನಾಲ್ವರು ಮೃತಪಟ್ಟಿರುವ ಬಗ್ಗೆ ನಮಗೆ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ (Forensic Science Laboratory team) ತಂಡ ತನಿಖೆಗಾಗಿ ಸಾಕ್ಷ್ಯಗಳನ್ನು (Evidence) ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ.

    ಮೃತನ ಸಹೋದರನ ಹೇಳಿಕೆ ಮೇರೆಗೆ ದುಜಾನಾ (Dujana) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

  • ‘ಎವಿಡೆನ್ಸ್’ ಸಿನಿಮಾದಲ್ಲಿ ರೋಬೊ ಖ್ಯಾತಿಯ ಗಣೇಶನ್

    ‘ಎವಿಡೆನ್ಸ್’ ಸಿನಿಮಾದಲ್ಲಿ ರೋಬೊ ಖ್ಯಾತಿಯ ಗಣೇಶನ್

    ಕೊಡ್ಲಾಡಿ ಸುರೇಂದ್ರಶೆಟ್ಟಿ ಅವರು ಅರ್ಪಿಸಿ, ಶ್ರೀನಿವಾಸ್‌ಪ್ರಭು, ಕೆ.ಮಾದೇಶ್ (ಕೊಡಿಹಳ್ಳಿ), ನಟರಾಜ್ ಸಿ.ಎಸ್.(ಚನ್ನಸಂದ್ರ) ಸೇರಿ ನಿರ್ಮಿಸುತ್ತಿರುವ “ಎವಿಡೆನ್ಸ್” (Evidence) ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ಅರವಿಂದ್ ಅಚ್ಚು, ಎಂ.ಎನ್.ರವೀಂದ್ರ ರಾವ್ (ದೂರದರ್ಶನ), ಪ್ರಶಾಂತ್ ಸಿ.ಪಿ. ರಮೇಶ್ ಕೆ, ಕಿಶೋರ್‌ಬಾಬು ಮತ್ತು ನರಸಿಂಹಮೂರ್ತಿ ಚಿತ್ರದ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ವಿಷ್ಯುಯಲ್ ಮ್ಯಾಜಿಕ್ ಸ್ಟುಡಿಯೋದಲ್ಲಿ ಈ ಚಿತ್ರದ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಹಾಡುಗಳು ಮತ್ತು ಟೀಸರ್, ಟ್ರೇಲರನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.

    ಕ್ರೈಮ್, ಸಸ್ಪೆನ್ಸ್ , ಥ್ರಿಲ್ಲರ್ ಜೊತೆಗೆ ತ್ರಿಕೋನ ಪ್ರೇಮಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರವೀಣ್ ರಾಮಕೃಷ್ಣ (Praveen Ramakrishna) ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮತ್ತು ನೆಲಮಂಗಲ ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ.  ಈ ಚಿತ್ರದಲ್ಲಿ ಜೋಶ್ ಖ್ಯಾತಿಯ ರೋಬೊ (Robo) ಗಣೇಶನ್ (Ganeshan) ನಾಯಕನಾಗಿ ನಟಿಸಿದ್ದಾರೆ. ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಮಾನಸ ಜೋಶಿ (Manasa Joshi) ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಗಳಲ್ಲಿ ಆಕರ್ಷ್ ಆದಿತ್ಯ, ರಚಿತಾ, ಪೂಜಿತ ಬೋಬೆಗೌಡ, ಚಮಕ್‌ಚಂದ್ರ, ಪವನ್‌ಸುರೇಶ್, ಶಶಿಧರಕೋಟೆ, ಕಾರ್ತಿಕ್ ವರ್ಣೇಕರ್, ಮನಮೋಹನ್ ರೈ, ರೇಣು ಶಿಕಾರಿ, ಆರಾಧ್ಯ ಶಿವಕುಮಾರ್  ಮುಂತಾದವರು ನಟಿಸಿದ್ದಾರೆ. ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ಈ ಚಿತ್ರದಲ್ಲಿ 4 ಹಾಡುಗಳಿದ್ದು, ಆರೋನ್ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ಹಾಡೊಂದಕ್ಕೆ “ಸ ರಿ ಪ” ಎನ್ನುವ ಮೂರೇ ಸ್ವರದಲ್ಲಿ ರಾಗ ಸಂಯೋಜನೆ ಮಾಡುವ ಜೊತೆಗೆ 2 ಹಾಡಿನ ಸಾಹಿತ್ಯವನ್ನೂ ಬರೆದಿದ್ದಾರೆ. ಉಳಿದಂತೆ ಡಾ.ವಿ.ನಾಗೇಂದ್ರಪ್ರಸಾದ್ ಮತ್ತು ಪ್ರವೀಣ್‌ ರಾಮಕೃಷ್ಣ ಸಾಹಿತ್ಯ ರಚಿಸಿದ್ದಾರೆ. ಹನುಮಯ್ಯ ಬಂಡಾರು ಮತ್ತು ಆರ್. ಚಂದ್ರಶೇಖರ ಪ್ರಸಾದ್ ಅವರ ಸಂಭಾಷಣೆ, ರವಿ ಸುವರ್ಣ ಅವರ ಛಾಯಾಗ್ರಹಣ, ಶೇಷಾಚಲ ಕುಲಕರ್ಣಿ ಅವರ ಸಂಕಲನ, ಕರಿಯ ನಂದ ಮತ್ತು ರಘು ಆರ್.ಜೆ. ನೃತ್ಯ ನಿರ್ದೇಶನ, ಜಾನಿ ಮಾಸ್ಟರ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    – ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ

    ಲಕ್ನೋ: ಉತ್ತರಪ್ರದೇಶ ಲಖೀಂಪುರ್ ಹಿಂಸಾಚಾರದಲ್ಲಿ ರೈತರು ಮೃತಪಟ್ಟಿದ್ದಾರೆ. ಆ ಘಟನೆ ವೇಳೆ ನನ್ನ ಮಗ ಅಲ್ಲಿ ಇದ್ದದ್ದು ನಿಜವಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ. ಇದನ್ನೂ ಓದಿ:  FIR ಇಲ್ಲದೇ ನನ್ನನ್ನು ಗೃಹ ಬಂಧನದಲ್ಲಿರಿಸಿದೆ: ಪ್ರಿಯಾಂಕಾ ಗಾಂಧಿ ಕಿಡಿ

    ಇಂದು ಪ್ರತಿಕ್ರಿಯೆ ನೀಡಿರುವ ಅಜಯ್ ಮಿಶ್ರಾ, ರೈತರ ಹತ್ಯೆ ನಡೆದ ಸ್ಥಳದಲ್ಲಿ ನನ್ನ ಮಗ ಇದ್ದುದಕ್ಕೆ ಸಾಕ್ಷಿ ಸಿಕ್ಕಿದರೆ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ. ಭಾನುವಾರ ರಾತ್ರಿ ಆ ಸ್ಥಳದಲ್ಲಿ ನನ್ನ ಮಗ ಆಶಿಶ್ ಇರಲೇ ಇಲ್ಲ. ಅವನು ಅಲ್ಲಿದ್ದ ಎಂಬುದಕ್ಕೆ ಯಾವುದೇ ಫೋಟೋ, ವೀಡಿಯೋಗಳ ಸಾಕ್ಷಿಯಿಲ್ಲ. ಆದರೆ ಆತ ಅಲ್ಲಿರಲಿಲ್ಲ ಎಂಬುದಕ್ಕೆ ನನ್ನ ಬಳಿ ವೀಡಿಯೋ ಸಾಕ್ಷಿಗಳಿವೆ. ವಿನಾಕಾರಣ ಅವನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆಶಿಶ್ ಭಾನುವಾರ ಬೇರೊಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಂದು ಅಜಯ್ ಮಿಶ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ:  ನಿರ್ಭೀತ, ನೈಜ ಕಾಂಗ್ರೆಸ್ಸಿಗಳು ಪ್ರಿಯಾಂಕಾ ಗಾಂಧಿ: ರಾಗಾ

    ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ, ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೇಶವ ಪ್ರಸಾದ್ ಇದ್ದ ಕಾರನ್ನು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ಇಬ್ಬರು ರೈತರು ಮೃತಪಟ್ಟಿದ್ದರು. ಅದರಲ್ಲಿ ಒಂದು ಖಾರು ಚಲಾಯಿಸಿದ್ದು ಅಜಯ್ ಮಿಶ್ರಾ ಅವರ ಮಗ ಆಶಿಶ್ ಎಂದು ಎಫ್‍ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ:  ಗೆಸ್ಟ್ ಹೌಸ್‌ನಲ್ಲಿ ಕಸ ಗುಡಿಸುತ್ತಿರೋ ಪ್ರಿಯಾಂಕಾ ಗಾಂಧಿ ವೀಡಿಯೋ ವೈರಲ್

     

    ಲಖಿಂಪುರ ಖೇರಿಯ ಹಿಂಸಾಚಾರದ ಬಳಿಕ ಅಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೃತಪಟ್ಟವರ ಕುಟುಂಬಗಳನ್ನು ಭೇಟಿಯಾಗಲು ಬಂದಿದ್ದ ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅಜಯ್ ಮಿಶ್ರಾ ಅವರ ಮಗ ಆಶಿಶ್ ಸೇರಿದಂತೆ ಇನ್ನಿತರರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದಿಂದ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು, ಅವರ ಮಗನನ್ನು ಬಂಧಿಸಬೇಕೆಂಬ ಒತ್ತಾಯಗಳು ಹೆಚ್ಚಾಗಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ರಾಜ್ಯ ಸಚಿವ ಅಜಯ್ ಮಿಶ್ರಾ, ಲಖಿಂಪುರ ಹಿಂಸಾಚಾರದ ಸ್ಥಳದಲ್ಲಿ ನನ್ನ ಮಗ ಇದ್ದುದು ಸಾಬೀತಾದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ಇತ್ತ ಸರ್ಕಾರ ಮೃತ ರೈತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ ಹಾಗೂ ಉದ್ಯೋಗ ನೀಡುವ ಭರವಸೆ ನೀಡಿದೆ. ಹಾಗೇ ಗಾಯಾಳುಗಳಿಗೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡುವುದಾಗಿ ಹೇಳಿದೆ.

  • ಹಿಟ್ ಆಂಡ್ ರನ್ ಕೇಸ್ – ನಲಪಾಡ್ ಪರಾರಿ ಕೃತ್ಯಕ್ಕೆ ಸಾಕ್ಷಿ ಒದಗಿಸಿದ್ದ ಪೊಲೀಸರು

    ಹಿಟ್ ಆಂಡ್ ರನ್ ಕೇಸ್ – ನಲಪಾಡ್ ಪರಾರಿ ಕೃತ್ಯಕ್ಕೆ ಸಾಕ್ಷಿ ಒದಗಿಸಿದ್ದ ಪೊಲೀಸರು

    ಬೆಂಗಳೂರು: ಬಳ್ಳಾರಿ ರಸ್ತೆಯ ಮೇಕ್ರಿ ಸರ್ಕಲ್ ಅಂಡರ್ ಪಾಸ್‍ನಲ್ಲಿ ನಲಪಾಡ್‍ನೇ ಅಪಘಾತ ಎಸಗಿದ್ದು ಎನ್ನುವುದಕ್ಕೆ ಸಾಕ್ಷಿ ಲಭ್ಯವಾಗಿದೆ.

    ನಲಪಾಡ್ ಓಡಿಸುತ್ತಿದ್ದ ಕಪ್ಪು ಕಲರ್ ಬೆಂಟ್ಲಿ ಕಾರಿನ ದೃಶ್ಯಗಳು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಮಾಡಿದ್ದಾರೆ. ಏರ್‌ಪೋರ್ಟ್ ಟೋಲ್‍ನಿಂದ ಮೇಕ್ರಿ ಸರ್ಕಲ್‍ವರೆಗೆ ಪೊಲೀಸರು ಸಿಸಿಟಿವಿ ಚೆಕ್ ಮಾಡಿದ್ದಾರೆ. ಅಪಘಾತ ಮಾಡಿದ ದಿನ ಏರ್‌ಪೋರ್ಟ್ ಟೋಲ್‍ನಿಂದ ನಲಪಾಡ್ ವಾಹನ ಮೂವ್ ಆಗಿರಲಿಲ್ಲ. ಇದನ್ನೂ ಓದಿ: ಹಿಟ್ ಆಂಡ್ ರನ್ ಕೇಸ್, ಗನ್‍ಮ್ಯಾನ್ ಅರೆಸ್ಟ್ – ಅತಿ ಬುದ್ಧಿವಂತಿಕೆ ಪ್ರದರ್ಶಿಸಲು ಹೋಗಿದ್ದ ನಲಪಾಡ್ ಸಿಕ್ಕಿ ಬಿದ್ದಿದ್ದು ಹೇಗೆ?

    ಮೊಬೈಲ್ ಟವರ್ ಡಂಪ್ ಮತ್ತು ಪೊಲೀಸ್ ಪೇದೆಯೊಬ್ಬರ ಸಾಕ್ಷಿ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ನಲಪಾಡ್ ಅಪಘಾತ ಮಾಡಿರುವುದು ಎಂದು ಗೊತ್ತಾಗಿದ್ದರಿಂದಲೇ ನೋಟಿಸ್ ನೀಡಿದ್ದರು ಎನ್ನಲಾಗಿದೆ. ನಲಪಾಡ್ ಓಡಿಸುತ್ತಿದ್ದ ಬೆಂಟ್ಲಿ ಕಾರಿನ ಚಲನೆಯ ಸಿಸಿಟಿವಿ ವಿಡಿಯೋವನ್ನು ತೆಗೆದಿದ್ದಾರೆ. ಇದನ್ನೂ ಓದಿ: ನಾನೇನು ಮನುಷ್ಯನಲ್ವ, ದಯವಿಟ್ಟು ನನ್ನನ್ನು ಬಿಟ್ಟು ಬಿಡಿ – ಕೈ ಮುಗಿದು ನಲಪಾಡ್ ಕಣ್ಣೀರು

    ಅಲ್ಲದೇ ಅಪಘಾತ ಆದ ದಿನ ಕರ್ತವ್ಯದಲ್ಲಿದ್ದ ಸಂಚಾರಿ ಪೇದೆ ಅಪಘಾತ ಮಾಡಿದ್ದು ನಲಪಾಡ್ ಎನ್ನುವುದನ್ನು ಖಚಿತಪಡಿಸಿಕೊಂಡಿದ್ದರು. ನಲಪಾಡ್ ಟವರ್ ಡಂಪ್ ಸಹ ಮೇಕ್ರಿ ಸರ್ಕಲ್ ಬಳಿಯೇ ತೋರಿಸುತ್ತಿತ್ತು. ಇದೆಲ್ಲದರ ಸಾಕ್ಷಿಗಳ ಆಧಾರದ ಮೇಲೆ ನಲಪಾಡ್‍ಗೆ ನೋಟಿಸ್ ನೀಡಿ ಬಂಧಿಸಿ, ಬಳಿಕ ಜಾಮೀನು ಮಂಜೂರು ಮಾಡಿದ್ದಾರೆ.

  • ಪತ್ನಿಯ ಕೊಲೆಗೈದು ಎಲ್ಲ ಸಾಕ್ಷ್ಯ ನಾಶಮಾಡಿದ್ರೂ ಮಾಂಸದ ತುಣುಕಿನಿಂದ ಜೈಲು ಸೇರಿದ!

    ಪತ್ನಿಯ ಕೊಲೆಗೈದು ಎಲ್ಲ ಸಾಕ್ಷ್ಯ ನಾಶಮಾಡಿದ್ರೂ ಮಾಂಸದ ತುಣುಕಿನಿಂದ ಜೈಲು ಸೇರಿದ!

    ಹಾಸನ: ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಎಲ್ಲ ಸಾಕ್ಷ್ಯಗಳನ್ನು ನಾಶ ಮಾಡಿದ್ದ ಪತಿರಾಯನೊಬ್ಬ ತನ್ನ ಮಾಂಸದ ತುಣುಕಿನಿಂದಾಗಿ ಕೊನೆಗೂ ಜೈಲು ಸೇರಿದ್ದಾನೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಹೊಂಗಡಹಳ್ಳದ ನಿವಾಸಿ ಸುರೇಶ್ ಶಿಕ್ಷೆಗೆ ಗುರಿಯಾಗಿರೋ ಅಪರಾಧಿ. ಹಾಸನದ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸುರೇಶನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ಪ್ರಕಟಿಸಿದೆ.

    ಏನಿದು ಪ್ರಕರಣ?
    ಮದುವೆಯಾಗಿ 20 ವರ್ಷ ಕಳೆದು ಪಿಯುಸಿ ಓದುತ್ತಿದ್ದ ಮಗ ಇದ್ದರೂ, ಸುರೇಶ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರವಾಗಿ ಸುರೇಶ್ ಮತ್ತು ಪತ್ನಿ ಗೀತಾ ನಡುವೆ ಅನೇಕ ಸಲ ಜಗಳ ನಡೆದಿತ್ತು. ಈ ಜಗಳ ವಿಕೋಪಕ್ಕೆ ಹೋಗಿ, 2015ರ ಮಾರ್ಚ್ 8 ರಂದು ಮನೆಯಲ್ಲಿಯೇ ಪತ್ನಿ ಗೀತಾಳನ್ನು ಸುರೇಶ್ ಕೊಲೆ ಮಾಡಿದ್ದ.

    ಸಾಕ್ಷ್ಯ ನಾಶಪಡಿಸಿ ತಾನು ಬಚಾವಾಗಲು, ಗೀತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ತಾನೇ ಅಂಬುಲೆನ್ಸ್ ನಲ್ಲಿ ಮೃತದೇಹವನ್ನು ಪತ್ನಿಯ ತವರು ಮನೆಗೆ ಕೊಂಡೊಯ್ದಿದ್ದ. ಆದರೆ ಸುರೇಶ್ ಮುಖ ಹಾಗೂ ಮೃತ ಗೀತಾಳ ಮೈಮೇಲೆ ಗಾಯಗಳಾಗಿದ್ದರಿಂದ ಅನುಮಾನಗೊಂಡ ಗೀತಾ ತಂದೆ ಗೋವಿಂದೇಗೌಡ, ಸಕಲೇಶಪುರ ನಗರ ಠಾಣೆಗೆ ದೂರು ನೀಡಿದ್ದರು. ಪ್ರಕರರಣ ದಾಖಲಿಸಿಕೊಂಡು ಪೋಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಹ ಸಲ್ಲಿಸಿದ್ದರು.

    ಡಿಎನ್‍ಎ ಪರೀಕ್ಷೆ:
    ವಿಚಾರಣೆ ವೇಳೆ ಗೀತಾ ಪೋಷಕರು ಹಾಗೂ ಸಂಬಂಧಿಕರು ಪ್ರತಿಕೂಲ ಸಾಕ್ಷಿ ನುಡಿದಿದ್ದರಿಂದ ಇಡೀ ಪ್ರಕರಣ ಬಿದ್ದು ಹೋಗುವ ಹಂತಕ್ಕೆ ಬಂದಿತ್ತು. ಮರಣೋತ್ತರ ಪರೀಕ್ಷೆ ವೇಳೆ ಗೀತಾ ಉಗುರಲ್ಲಿದ್ದ ಸಣ್ಣ ಮಾಂಸದ ತುಣುಕನ್ನು ವೈದ್ಯರು ಸಂಗ್ರಹ ಮಾಡಿದ್ದರಿಂದ ಅದನ್ನೇ ಡಿಎನ್‍ಎ ಪರೀಕ್ಷೆಗೆ ಕಳುಹಿಸಲಾಗಿತ್ತು. ಆರೋಪಿಯ ರಕ್ತವನ್ನೂ ಸಂಗ್ರಹಿಸಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿತ್ತು.

    ಅಂತಿಮವಾಗಿ ಉಗುರಿನಲ್ಲಿದ್ದ ಸಣ್ಣ ಚರ್ಮದ ಕಲೆ ಸುರೇಶನದ್ದೇ ಎನ್ನುವುದು ಸಾಬೀತಾದ ಹಿನ್ನೆಲೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಇಂದು ಶಿಕ್ಷೆಯನ್ನು ಪ್ರಕಟಿಸಿತು. ನನ್ನ ವಿರುದ್ಧ ಸಾಕ್ಷ್ಯವೇ ಇಲ್ಲ ಎಂದು ಖುಲಾಸೆ ಕನಸು ಕಾಣುತ್ತಿದ್ದ ಕೊಲೆಗಡುಕನನ್ನು ಆತನದೇ ಸಣ್ಣ ಮಾಂಸದ ತುಣುಕು ಬದುಕಿರುವವರೆಗೂ ಜೈಲಿನಲ್ಲಿ ಕೊಳೆಯುವಂತೆ ಮಾಡಿರುವುದು ವಿಶೇಷ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಳ್ಳ ಹಿಡಿಯುತ್ತಿದೆ ಶೃತಿ ಹರಿಹರನ್ ಮೀಟೂ ಪ್ರಕರಣ..!

    ಹಳ್ಳ ಹಿಡಿಯುತ್ತಿದೆ ಶೃತಿ ಹರಿಹರನ್ ಮೀಟೂ ಪ್ರಕರಣ..!

    ಬೆಂಗಳೂರು: ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ.

    ಹೌದು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಖ್ಯಾತನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡ ತನಿಖೆಗೆ ಬೇಕಾದ ಎಲ್ಲಾ ಆಯಾಮಗಳಿಂದ ಮಹಜರು ಮಾಡಿದ್ದರು. ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸುಮಾರು 40 ಸಾಕ್ಷಿಗಳಿಂದ ಮಾಹಿತಿ ಕಲೆ ಹಾಕೋಕೆ ಪ್ಲಾನ್ ಮಾಡಿದ್ದ ಪೊಲೀಸರಿಗೆ ಕೇವಲ 10 ಜನರು ಸಾಕ್ಷಿಗಳನ್ನಾಗಿ ಮಾಡೋಕು ಒದ್ದಾಡ್ತಿದ್ದಾರಂತೆ.

    ವಿಸ್ಮಯ ಚಿತ್ರದ ವೇಳೆ ನಟ ಅರ್ಜುನ್ ಸರ್ಜಾನ್ ಲೈಂಗಿಕ ಕಿರುಕುಳ ನೀಡಿದ್ರು ಅನ್ನೋ ಆರೋಪಕ್ಕೆ ತಕ್ಕಂತೆ ಶೃತಿ ಪರವಾಗಿ ಸಾಕ್ಷಿ ಹೇಳೋಕೆ ಯಾರು ಮುಂದೆ ಬರ್ತಿಲ್ಲ. ವಿಸ್ಮಯ ಚಿತ್ರದ ವೇಳೆ ಜೊತೆಗಿದ್ದ ಹತ್ತಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿಚಾರಣೆ ವೇಳೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದಾರೆ. ಇನ್ನು ಶೃತಿ ಹರಿಹರನ್ ಕೂಡ ಘಟನೆ ನಡೆದ ಎರಡು ವರ್ಷಗಳ ನಂತರ ದೂರು ನೀಡಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಪ್ರಕರಣಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿ ಸಿಕ್ಕದ ಹಿನ್ನೆಲೆಯಲ್ಲಿ ಶೃತಿ ಹರಿಹರನ್ ಮೀಟೂ ಪ್ರಕರಣಕ್ಕೆ ಪೊಲೀಸರು ಎಳ್ಳು ನೀರು ಬಿಡೋಕೆ ಮುಂದಾಗಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

    ತನಿಖೆ ಹಳ್ಳ ಹಿಡಿಯೋಕೆ ಕಾರಣಗಳೇನು..?
    * ಅರ್ಜುನ್ ಸರ್ಜಾನ್ ಶೂಟಿಂಗ್ ವೇಳೆ ಆಶ್ಲೀಲವಾಗಿ ವರ್ತಿಸಿದ್ರು ಅನ್ನೋಕೆ ಯಾವುದೇ ಸಾಕ್ಷಿಗಳಿಲ್ಲ.
    * ದೇವನಹಳ್ಳಿ ಹೈವೇಯಲ್ಲಿ ರೂಮ್ ಗೆ ಕರೆದ್ರು ಅನ್ನೋಕು ಸೂಕ್ತ ಸಾಕ್ಷಿಗಳಿಲ್ಲ.
    * ಶೂಟಿಂಗ್ ನಲ್ಲಿ ಚಿತ್ರಕ್ಕೆ ಬೇಕಾದಂತೆ ನಟಿಸಿದೆ ಅಷ್ಟೇ ಅಂತಾರೆ ನಟ ಅರ್ಜುನ್ ಸರ್ಜಾ.
    * ನಲವತ್ತು ಜನರನ್ನು ಸಾಕ್ಷಿಗಳನ್ನಾಗಿ ಮಾಡೋಕೆ ಹೊರಟಿದ್ದ ಪೊಲೀಸರಿಗೆ ಸಿಕ್ಕಿದ್ದು ಕೇವಲ ಹತ್ತು ಜನ.
    * ಯುಬಿ ಸಿಟಿಯಲ್ಲಿ ರೂಮ್ ಬುಕ್ ಮಾಡಿದ್ದು ನಿಜವಾದ್ರೂ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಯಾವುದೇ ಸಿಸಿಟಿವಿ ಇಲ್ಲ.
    * ಘಟನೆ ನಡೆದು 2 ವರ್ಷಗಳ ನಂತ್ರ ದೂರು ನೀಡಿರೋದು ಕೇಸ್‍ಗೆ ಹಿನ್ನೆಡೆ ಉಂಟುಮಾಡಿದೆ.
    * ಶೂಟಿಂಗ್ ನಡೆದ ಜಾಗದಲ್ಲೂ ಯಾವುದೇ ಸಾಂದರ್ಭಿಕ ಸಾಕ್ಷಿಗಳು ಪತ್ತೆಯಾಗಿಲ್ಲ.

    ಈ ಎಲ್ಲಾ ಕಾರಣಗಳು ಒಂದು ಕಡೆಯಾದರೆ, ನಟಿ ಶೃತಿ ಹರಿಹರನ್ ಕೇಸ್ ದಾಖಲಿಸಿದ್ದು ತಡವಾಯ್ತೋ ಅಥವಾ ಪ್ರಭಾವಿ ನಟ ಅನ್ನೋ ಕಾರಣಕ್ಕೆ ಸಾಕ್ಷಿಗಳು ಹಿಂದೇಟು ಹಾಕಿದ್ರೋ ಗೊತ್ತಿಲ್ಲ. ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿದ್ದ ಮೀಟೂ ಪ್ರಕರಣ ಅಷ್ಟೇ ಸಣ್ಣಮಟ್ಟದಲ್ಲಿ ತೆರೆಮರೆಗೆ ಸರಿತಿರೋದಂತೂ ಸುಳ್ಳಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv