Tag: eviction

  • ದಾವಣಗೆರೆಯಲ್ಲಿ ಏಕಾಏಕಿ 36 ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು

    ದಾವಣಗೆರೆಯಲ್ಲಿ ಏಕಾಏಕಿ 36 ಮನೆಗಳ ತೆರವು – ಬೀದಿಗೆ ಬಿದ್ದ ಕುಟುಂಬಗಳು

    – ಪಾರ್ಕ್ ಜಾಗದಲ್ಲಿ ಮನೆ ಕಟ್ಟಿದ್ದಕ್ಕೆ ಕ್ರಮ

    ದಾವಣಗರೆ: ನಗರದ (Davanagere) ರಾಮನಗರ ಕೈಗಾರಿಕಾ ಪ್ರದೇಶದಲ್ಲಿದ್ದ 36 ಮನೆಗಳನ್ನು ಪಾಲಿಕೆ ಅಧಿಕಾರಿಗಳು ಏಕಾಏಕಿ ತೆರವು ಮಾಡಿದ್ದಾರೆ.

    2013-14ರಿಂದ ಪಾಲಿಕೆಯ ಪಾರ್ಕ್ ಜಾಗದಲ್ಲಿ ಜನ ಮನೆ ಕಟ್ಟಿಕೊಂಡಿದ್ದರು. ಅದು ಪಾಲಿಕೆಯ ಪಾರ್ಕ್ ಜಾಗ ಎಂದು 2018ರಲ್ಲಿ ನ್ಯಾಯಾಲಯದಲ್ಲಿ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ದೂರುದಾರರ ಹಾಗೂ ಮನೆ ಮಾಲೀಕರ ವಾದ ಆಲಿಸಿದ್ದ ನ್ಯಾಯಾಲಯ ಪಾಲಿಕೆ ಪಾರ್ಕ್ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರೋದು ಅಕ್ರಮ. ಆ ಮನೆಗಳನ್ನು ತಕ್ಷಣವೇ ತೆರವುಗೊಳಿಸಿ ಎಂದು ತಹಸೀಲ್ದಾರ್ ಅವರಿಗೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ ತಹಸೀಲ್ದಾರ್ ಡಾ.ಅಶ್ವಥ್ ಅಲ್ಲಿನ ನಿವಾಸಿಗಳಿಗೆ ಮನೆ ತೆರವುಗೊಳಿಸುವಂತೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಅಲ್ಲಿನ ನಿವಾಸಿಗಳು ಮನೆ ತೆರವು ಮಾಡದ ಕಾರಣ ಇಂದು (ಅ.11) ಬೆಳಗ್ಗೆ ಪೊಲೀಸರ ಬಿಗಿ ಬಂದೋಬಸ್ತ್‍ನಲ್ಲಿ ಮನೆ ತೆರವುಗೊಳಿಸಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    ಮನೆ ತೆರವಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಒಂದೆರಡು ದಿನ ಅವಕಾಶ ಕೊಡಿ ನಾವೇ ಮನೆ ಖಾಲಿ ಮಾಡ್ತಿವಿ ಎಂದು ಗೊಗರೆದರು. ಕೆಲವರು ಜೆಸಿಬಿಗೆ ಅಡ್ಡ ಹೋಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಅಲ್ಲಿನ ನಿವಾಸಿಗಳ ಪರವಾಗಿ ಪಾಲಿಕೆ ಮಾಜಿ ಸದಸ್ಯ ಪಾಮೇನಹಳ್ಳಿ ನಾಗರಾಜ್ ಅಧಿಕಾರಿಗಳ ಕಾಲು ಹಿಡಿಯಲು ಮುಂದಾಗಿದ್ದರು. ಆದರೂ ಅಧಿಕಾರಿಗಳ ಮನಸ್ಸು ಕರಗದ ಹಿನ್ನೆಲೆ ಪ್ರತಿಭಟನೆ ನಡೆಸಲು ಮುಂದಾದಾಗಾ ಪೊಲೀಸರು ಅಲ್ಲಿಂದ ಕಳಿಸಿದ್ದಾರೆ.

    ನಿವಾಸಿಗಳು ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ರು. ಪಾಲಿಕೆ ವತಿಯಿಂದ ನೀರು ಸೌಲಭ್ಯ ಕೂಡ ಕಲ್ಪಿಸಲಾಗಿತ್ತು. ಅಷ್ಟೇ ಅಲ್ಲ ವೋಟರ್ ಐಡಿ, ಪಡಿತರ ಕೂಡ ವಿತರಣೆ ಮಾಡುತ್ತಿದ್ದರು. ಆರಂಭದಲ್ಲೇ ಇದು ಪಾರ್ಕ್ ಜಾಗ ಅಂತ ಹೇಳಿದ್ರೆ ನಾವು ಮನೆಗಳನ್ನೇ ಕಟ್ಟುತ್ತಿರಲಿಲ್ಲ. ಮನೆಗಳನ್ನ ಕಟ್ಟಿಕೊಂಡ್ಮೇಲೆ ಅಧಿಕಾರಿಗಳು ಮತ್ತು ಕೆಲವರು ಬಂದು ಇದು ಪಾರ್ಕ್ ಜಾಗ ಅಂತ ತಗಾದೆ ತೆಗೆದಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಬೆಲೆ ಕೊಡ್ತಿವಿ. ಮನೆ ಖಾಲಿ ಮಾಡೋಕೆ ಸಮಯವಕಾಶ ನೀಡಿ ಎಂದು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಜನರಿಗೆ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳು ಬೂದಾಳ್ ರಸ್ತೆ ಹಾಗೂ ತುರ್ಚಘಟ್ಟ ಬಳಿ ಜಾಗ ಗೊತ್ತುಪಡಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆ | ಆಟ ಆಡುವಾಗ ಭದ್ರಾ ನಾಲೆಗೆ ಬಿದ್ದು ಕೊಚ್ಚಿ ಹೋದ ಬಾಲಕ

  • Bigg Boss: ಬಿಗ್ ಬಾಸ್ ಸ್ಪರ್ಧಿ ಅರ್ಚನಾರನ್ನು ಉಚ್ಚಾಟಿಸಿದ ಕಾಂಗ್ರೆಸ್

    Bigg Boss: ಬಿಗ್ ಬಾಸ್ ಸ್ಪರ್ಧಿ ಅರ್ಚನಾರನ್ನು ಉಚ್ಚಾಟಿಸಿದ ಕಾಂಗ್ರೆಸ್

    ದೇಶಾದ್ಯಂತ ಬಿಗ್ ಬಾಸ್ ಜ್ವರ ಜೋರಾಗಿದೆ. ಹಿಂದಿಯಲ್ಲಿ ಈಗಾಗಲೇ ಬಿಗ್ ಬಾಸ್ (Bigg Boss)  ಶೋ ಮುಗಿದಿದ್ದು, ತಮಿಳಿನಲ್ಲಿ ಈಗಷ್ಟೇ ಶುರುವಾಗಿದೆ. ತೆಲುಗುನಲ್ಲೂ ನಡೆಯುತ್ತಿದೆ. ಇದೇ ವಾರ ಕನ್ನಡದಲ್ಲೂ ಬಿಗ್ ಬಾಸ್ ಶುರುವಾಗಲಿದೆ. ಹೀಗೆ ಎಲ್ಲ ಕಡೆ ಬಿಗ್ ಬಾಸ್ ಹವಾ ಇರುವಾಗಲೇ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಅರ್ಚನಾ ಗೌತಮ್ (Archana Gautam) ಅವರನ್ನು ಕಾಂಗ್ರೆಸ್ (Congress) ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಲಾಗಿದೆ.

    ಬಿಗ್ ಬಾಸ್ ಸೀಸನ್ 16ರಲ್ಲಿ ಅರ್ಚನಾ ಭಾಗಿಯಾಗಿದ್ದರು. ಸಿನಿಮಾಗಳ ಜೊತೆ ಜೊತೆಗೆ ರಾಜಕಾರಣದಲ್ಲೂ ಸಕ್ರಿಯರಾಗಿದ್ದರು.  ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಇವರು ಗುರುತಿಸಿಕೊಂಡಿದ್ದರು. ಪಕ್ಷದ ಕಾರ್ಯಕರ್ತರೊಂದಿಗೆ ಆಕೆ ಅನುಚಿತವಾಗಿ ವರ್ತನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪಕ್ಷದ ವಕ್ತಾರ ಅಂಶು ಅವಸ್ತಿ ಹೇಳಿದ್ದಾರೆ.

    ಬಿಗ್ ಬಾಸ್ ನಿಂದ ಬಂದ ನಂತರ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು ಅರ್ಚನಾ. ಜನಪ್ರಿಯತೆಯೂ ಸಾಕಷ್ಟಿತ್ತು. ಜೊತೆಗೆ ಪ್ರಿಯಾಂಕಾ ಗಾಂಧಿ ಅವರ ಜೊತೆಯೂ ಗುರುತಿಸಿಕೊಂಡಿದ್ದರು. ಹಾಗಾಗಿ 2022ರಲ್ಲಿ ಕಾಂಗ್ರೆಸ್ ಪಕ್ಷವು ಹಸ್ತಿನಾಪುರ ಕ್ಷೇತ್ರದಿಂದ ಅರ್ಚನಾ ಅವರನ್ನು ಕಣಕ್ಕಿಳಿಸಿತ್ತು. ಇವರ ಬೆಂಬಲಕ್ಕೆ ನಿಂತ ಅಲ್ಲಿನ ಜನರ ಜೊತೆಗೆ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

     

    ಹಾಗಂತ ಹಸ್ತಿನಾಪುರ ಕ್ಷೇತ್ರದಿಂದ ಅರ್ಚನಾ ಗೆದ್ದಿರಲಿಲ್ಲ. ಕೇವಲ 1519 ಮತಗಳನ್ನು ಪಡೆದಿದ್ದರು. ಈ ಮೂಲಕ ಠೇವಣಿ ಕೂಡ ಕಳೆದುಕೊಂಡಿದ್ದರು. ಈ ಹೀನಾಯ ಸೋಲನ್ನು ಕಾಂಗ್ರೆಸ್ ಅರಗಿಸಿಕೊಳ್ಳಲು ಆಗಿರಲಿಲ್ಲ. ಹೀಗಾಗಿ ಪದೇ ಪದೇ ಅರ್ಚನಾ ಅವರ ಜೊತೆ ಕಾರ್ಯಕರ್ತರು ಜಗಳ ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]