Tag: evacuation

  • ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

    ಸುಡಾನ್ ಸಂಘರ್ಷ – ಭಾರತೀಯರು ಸೇರಿದಂತೆ 150 ಜನರನ್ನು ಸುರಕ್ಷಿತವಾಗಿ ಕರೆತಂದ ಸೌದಿ ಅರೇಬಿಯಾ

    ರಿಯಾದ್/ಖಾರ್ಟೂಮ್: ಸೇನೆ ಹಾಗೂ ಅರೆಸೇನಾಪಡೆಗಳ ಸಂಘರ್ಷಕ್ಕೆ ಗುರಿಯಾಗಿರುವ ಸುಡಾನ್‌ನಲ್ಲಿ (Sudan) ಸಿಲುಕಿಕೊಂಡಿರುವ ವಿದೇಶಿಗರ ರಕ್ಷಣೆ ಪ್ರಾರಂಭಿಸಲಾಗಿದೆ. ಭಾರತ (India) ಸೇರಿದಂತೆ ಇತರ ದೇಶಗಳ ಸುಮಾರು 150ಕ್ಕೂ ಹೆಚ್ಚು ಜನರನ್ನು ಸುಡಾನ್‌ನಿಂದ ಕರೆತರಲಾಗಿದೆ ಎಂದು ಸೌದಿ ಅರೇಬಿಯಾ (Saudi Arabia) ತಿಳಿಸಿದೆ.

    ಸೇನೆ ಹಾಗೂ ಅರೆಸೇನೆ ಸಂಘರ್ಷದಲ್ಲಿ ಸುಡಾನ್‌ನಲ್ಲಿರುವ ಜನರು ಭಯಭೀತರಾಗಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಜನರು ತಮ್ಮ ದೇಶಗಳಿಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಸಂಘರ್ಷ ಪೀಡಿತ ಸುಡಾನ್‌ನಿಂದ ವಿದೇಶಿ ರಾಜತಾಂತ್ರಿಕರು, ಅಧಿಕಾರಿಗಳು ಸೇರಿದಂತೆ 150ಕ್ಕೂ ಅಧಿಕ ಜನರನ್ನು ಸುಡಾನ್‌ನಿಂದ ರಕ್ಷಿಸಲಾಗಿದೆ (Evacuation) ಹಾಗೂ ಎಲ್ಲರನ್ನೂ ಜೆಡ್ಡಾಗೆ ಕರೆತರಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಸೈನ್ಯದ ಇತರ ಶಾಖೆಗಳ ಬೆಂಬಲದೊಂದಿಗೆ ಸೌದಿ ಅರೇಬಿಯಾದ ನೌಕಾಪಡೆಗಳು ನಾಗರಿಕರನ್ನು ಸ್ಥಳಾಂತರಗೊಳಿಸುವ ಕಾರ್ಯವನ್ನು ಮಾಡಿದೆ. ಅದರಲ್ಲಿ 91 ಸೌದಿಯ ನಾಗರಿಕರು ಆಗಮಿಸಿದ್ದು, ಭಾರತ ಸೇರಿದಂತೆ 12 ದೇಶಗಳ ಸುಮಾರು 66 ಪ್ರಜೆಗಳನ್ನೂ ಸುರಕ್ಷಿತವಾಗಿ ಕರೆತರಲಾಗಿದೆ. ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್, ಈಜಿಪ್ಟ್, ಟುನೀಶಿಯಾ, ಪಾಕಿಸ್ತಾನ, ಬಲ್ಗೇರಿಯಾ, ಬಾಂಗ್ಲಾದೇಶ, ಫಿಲಿಪೈನ್, ಕೆನಡಾ ಹಾಗೂ ಬುರ್ಕಿನಾ ಫಾಸೋದ ನಾಗರಿಕರನ್ನು ಕೂಡಾ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಪರಾರಿಯಾಗಿದ್ದ ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್ ಸಿಂಗ್ ಸರೆಂಡರ್

    ಸುಡಾನ್ ರಾಜಧಾನಿ ಖಾಟೂಮ್ ಸೇರಿದಂತೆ ಹಲವು ನಗರಗಳಲ್ಲಿ ಗುಂಡಿನ ದಾಳಿ ಸೇರಿದಂತೆ ಭೀಕರ ಯುದ್ಧವೇ ನಡೆದಿದೆ. ಮೊದಲು ಖಾರ್ಟೂಮ್‌ನಿಂದ ಪ್ರಾರಂಭವಾದ ಕಾದಾಟ ಈಗ ಇಡೀ ದೇಶವನ್ನೇ ವ್ಯಾಪಿಸಿದೆ. ಇದೀಗ ಅಲ್ಲಿ ಆಹಾರ ಹಾಗೂ ವಿದ್ಯುತ್ ಕೊರತೆಯನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಮಾತ್ರವಲ್ಲದೇ ಅನಿರೀಕ್ಷಿತ ಗುಂಡಿನ ದಾಳಿಯಿಂದಾಗಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮತ್ತೆ 3 ದಿನಗಳ ಕಾಲ ಮಳೆ

  • 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

    107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

    – ಭಾರತಕ್ಕೆ ಕಾಲಿಡುತ್ತಿದ್ದಂತೆ ಗಳಗಳನೆ ಅತ್ತ ಅಫ್ಘಾನ್ ಸಂಸದ

    ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಅತಿರೇಕಕ್ಕೆ ತಿರುಗಿದ್ದು, 107 ಭಾರತೀಯರು ಸೇರಿ ಒಟ್ಟು 168 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತರಲಾಗಿದೆ. ಭಾರತೀಯ ಸೇನೆಯ ವಿಮಾನದ ಮೂಲಕ ಕಾಬೂಲ್‍ನಿಂದ ಹಿಂಡನ್ ಏರ್ ಫೋರ್ಸ್ ಬೇಸ್‍ನ ಗಾಜಿಯಾಬಾದ್‍ಗೆ ಕರೆತರಲಾಗಿದೆ.

    ಭಾರತೀಯ ವಾಯು ಸೇನೆಯ ಸಿ-17 ವಿಮಾನದ ಮೂಲಕ ಕಾಬೂಲ್‍ನಿಂದ ಇಂದು ಬೆಳಗ್ಗೆ 107 ಜನ ಭಾರತೀಯರು ಸೇರಿ ಒಟ್ಟು 168 ಜನ ಭಾರತಕ್ಕೆ ಬಂದಿಳಿದಿದ್ದಾರೆ. ವಿದೇಶಾಂಗ ಸಚಿವಾಲಯದ ಅರಿಂದಮ್ ಬಾಗ್ಚಿ ಅವರು ಈ ಕುರಿತು ಟ್ವೀಟ್ ಮಾಡಿ ಖಚಿತಪಡಿಸಿದ್ದಾರೆ. ಸ್ಥಳಾಂತರಿಸುವ ಕಾರ್ಯ ಮುಂದುವರಿದಿದ್ದು, ಭಾರತೀಯ ವಾಯು ಸೇನೆಯ ವಿಶೇಷ ವಿಮಾನದ ಮೂಲಕ 107 ಭಾರತೀಯರು ಸೇರಿ ಒಟ್ಟು 168 ಜನರು ಭಾರತಕ್ಕೆ ಬಂದಿಳಿದಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಆಪರೇಷನ್ ಇಂಡಿಯನ್ಸ್ – ಕಾಬೂಲ್‍ನಿಂದ ದೋಹಾ ಮೂಲಕ ದೆಹಲಿಗೆ ಭಾರತೀಯರು

    ಇದೇ ವೇಳೆ ಅಫ್ಘಾನಿಸ್ತಾನದ ಸಂಸದ ನರೇಂದ್ರ ಸಿಂಗ್ ಖಲ್ಸಾ ಅವರು ಕಾಬೂಲ್‍ನಿಂದ ಭಾರತಕ್ಕೆ ಲ್ಯಾಂಡ್ ಆಗುತ್ತಿದ್ದಂತೆ ಭಾವುರಾಗಿ ಕಣ್ಣೀರಿಟ್ಟಿದ್ದಾರೆ. ನನಗೆ ಅಳು ಬರುತ್ತಿದೆ. ಕಳೆದ 20 ವರ್ಷಗಳಿಂದ ನಾವು ಸಂಪಾದಿಸಿದ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇದೀಗ ಝೀರೋ ಆಗಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು

    ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಹೀಗಾಗಿ ನನ್ನ ಮಗಳು ಹಾಗೂ ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದಿದ್ದೇವೆ. ನಮ್ಮ ಭಾರತದ ಸಹೋದರ, ಸಹೋದರಿಯರು ಕಾಪಾಡಲು ಬಂದಿದ್ದರು. ತಾಲಿಬಾನಿಗಳು ನಮ್ಮ ಮನೆಯನ್ನು ಸುಟ್ಟು ಹಾಕಿದರು. ನಮಗೆ ಸಹಾಯ ಮಾಡಿದ್ದಕ್ಕೆ ಭಾರತಕ್ಕೆ ನಾನು ಧನ್ಯವಾದ ಸಮರ್ಪಿಸುತ್ತೇನೆ ಎಂದು ಹೇಳಿದ್ದಾರೆ.

    ವಿಮಾನದಲ್ಲಿ ಬಂದವರ ಪೈಕಿ ಬಹುತೇಕ ಸಿಖ್ಖರಿದ್ದು, 87 ಜನ ಇತರೆ ಭಾರತೀಯರಿದ್ದಾರೆ. ಇಬ್ಬರು ನೇಪಾಳದವರಿದ್ದಾರೆ. ಕೆಲ ದಿನಗಳ ಹಿಂದೆ ಯುಎಸ್ ಹಾಗೂ ನಾಟೊ ವಿಮಾನದ ಮೂಲಕ ಕಾಬೂಲ್‍ನಿಂದ ದೋಹಾಗೆ ಸ್ಥಳಾಂತರಿಸಲಾಗಿದ್ದ 135 ಭಾರತೀಯರು ಸಹ ಭಾರತಕ್ಕೆ ಮರಳಿದ್ದಾರೆ.

  • ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

    ಖಚಿತ ಮಾಹಿತಿ ನೀಡಿ 10 ಲಕ್ಷ ಮಂದಿಯನ್ನು ರಕ್ಷಿಸಿದ್ದ ಭಾರತೀಯ ಹವಾಮಾನ ಇಲಾಖೆಗೆ ವಿಶ್ವಸಂಸ್ಥೆ ಶ್ಲಾಘನೆ

    ನವದೆಹಲಿ: ಭಾರತದ ಪೂರ್ವ ಕರಾವಳಿಗೆ ಅಪ್ಪಳಿಸಿದ ಫೋನಿ ಚಂಡಮಾರುತದ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ 10 ಲಕ್ಷಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವ ಮೂಲಕ ಸಾವು ನೋವಿನ ಪ್ರಮಾಣವನ್ನು ಕನಿಷ್ಟ ಮಟ್ಟಕ್ಕೆ ಇಳಿಸಿದ ಭಾರತದ ಕಾರ್ಯ ವೈಖರಿಗೆ ವಿಶ್ವಸಂಸ್ಥೆ ಹಾಗೂ ವಿವಿಧ ರಂಗದ ತಜ್ಞರು ಶ್ಲಾಘಿಸಿದ್ದಾರೆ.

    ಚಂಡಮಾರುತದಿಂದಾಗಿ ಪುರಿಯಲ್ಲಿ ಭೂ ಕುಸಿತ ಉಂಟಾಗುವ ಸ್ಥಳವನ್ನು ನಿಖರವಾಗಿ ಗುರುತಿಸಿದ್ದ ಭಾರತೀಯ ಹವಾಮಾನ ಇಲಾಖೆಯ(ಐಎಂಡಿ) ಸಿಬ್ಬಂದಿಯ ಕಾರ್ಯದ ಬಗ್ಗೆ ವಿಶ್ವಸಂಸ್ಥೆ ಮೆಚ್ಚುಗೆ ಸೂಚಿಸಿದೆ. “ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ ಜನಸಾಮಾನ್ಯರನ್ನು ರಕ್ಷಿಸುವ ನಿಟ್ಟಿನಲ್ಲಿ ಐಎಂಡಿ ಮಾಡಿರುವ ಕೆಲಸ ಅನುಕರಣೀಯ” ಎಂದು ವಿಶ್ವಸಂಸ್ಥೆಯ ಪ್ರಕೃತಿ ವೈಪರೀತ್ಯ ನಿರ್ವಹಣಾ ವಿಭಾಗದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿರುವ ಮಾಮಿ ಮಿಝುತೋರಿ ಹೊಗಳಿದ್ದಾರೆ.

    ಫೋನಿ ಚಂಡಮಾರುತ ಪುರಿಯ ಸಮುದ್ರ ತೀರಕ್ಕೆ ಶುಕ್ರವಾರ ಅಪ್ಪಳಿಸಲಿದೆ ಮತ್ತು ಅಲ್ಲಿ ಭೂ ಕುಸಿತ ಸಂಭವಿಸಲಿದೆ ಎಂದು ಐಎಂಡಿ ನಿಖರವಾಗಿ ಗುರುತಿಸಿತ್ತು. ಈ ಚಂಡಮಾರುತ ಭಾರೀ ಪ್ರಮಾಣದಲ್ಲಿ ಹಾನಿ ಮಾಡಲಿದೆ ಎಂದು ಅಂದಾಜಿಸಿದ್ದ ಭಾರತ ಸುಮಾರು 12 ಲಕ್ಷ ಮಂದಿಯನ್ನು ಮೊದಲೇ ಸ್ಥಳಾಂತರ ಮಾಡಿತ್ತು. ಹೀಗಾಗಿ ಸಾವು ನೋವಿನ ಸಂಖ್ಯೆಯನ್ನು ಕಡಿಮೆ ಮಾಡಿದ್ದಕ್ಕೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.

    ಮಾಮಿ ಮಿಝುತೋರಿ ಪ್ರತಿಕ್ರಿಯಿಸಿ, ಭಾರತ ಸರ್ಕಾರ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಲಕ್ಷಾಂತರ ಜೀವಗಳನ್ನು ಉಳಿಸಿದೆ. ಈ ಆಪರೇಷನ್‍ನಲ್ಲಿ 45 ಸಾವಿರ ಸ್ವಯಂಸೇವಕರು ಹಾಗೂ 2 ಸಾವಿನ ತುರ್ತು ನಿರ್ವಹಣಾ ಸಿಬ್ಬಂದಿ ಶ್ರಮವಹಿಸಿದ್ದಾರೆ. ನಿರಂತರವಾಗಿ ಸುಮಾರು 30 ಲಕ್ಷಕ್ಕೂ ಅಧಿಕ ಜನರಿಗೆ ಮಾಧ್ಯಮಗಳ ಮುಖಾಂತರ ಫೋನಿ ಚಂಡಮಾರುತದ ಬಗ್ಗೆ ಮಾಹಿತಿ ನೀಡಿದ ಭಾರತ ಸರ್ಕಾರದ ಕ್ರಮ ಶ್ಲಾಘಾನೀಯ ಎಂದಿದ್ದಾರೆ.

    ಒಡಿಶಾದಲ್ಲಿ 4.6 ಕೋಟಿ ಜನರು ಫೋನಿ ಚಂಡಮಾರುತದಿಂದ ಸಂತ್ರಸ್ಥರಾಗಿದ್ದು ಆಸ್ತಿ-ಪಾಸ್ತಿ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ, ಫೋನಿ ಚಂಡಮಾರುತ ಇದೀಗ ಪಶ್ಚಿಮ ಬಂಗಾಳದತ್ತ ತಿರುಗಿದೆ.

    ಈವರೆಗೆ ಫಾನಿ ಚಂಡಮಾರುತಕ್ಕೆ ಆರ್ಭಟಕ್ಕೆ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಒಡಿಶಾದ 9 ಜಿಲ್ಲೆಗಳಲ್ಲಿ ಫಾನಿ ಚಂಡಮಾರುತ ತನ್ನ ರೌದ್ರಾವಾತಾರ ಪ್ರದರ್ಶಿಸುತ್ತಿದೆ. ಭುವನೇಶ್ವರ ಒಂದೇ ಜಿಲ್ಲೆಯಲ್ಲಿ ಈವರೆಗೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮಯೂರ್‍ಬಂಜ್ ಜಿಲ್ಲೆಯಲ್ಲಿ 4 ಮಂದಿ, ಪುರಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಈ ಹಿಂದೆ 1999ರಲ್ಲಿ ಒಡಿಶಾಗೆ ಕಾಲಿಟ್ಟಿದ್ದ ಸೂಪರ್ ಚಂಡಮಾರುತಕ್ಕೆ 10 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಈ ಸೂಪರ್ ಚಂಡಮಾರುತಕ್ಕಿಂತಲೂ ಈ ಬಾರಿಯ ಫೋನಿ ಜಾಸ್ತಿ ಪ್ರಮಾಣದಲ್ಲಿ ಹಾನಿ ಮಾಡಿದ್ದರೂ ಸಾವು ನೋವಿನ ಸಂಖ್ಯೆ ತಗ್ಗಿದೆ.