Tag: EV charging

  • ದೇಶದಲ್ಲಿ 72,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು 2,000 ಕೋಟಿ ವೆಚ್ಚ: ಹೆಚ್‌ಡಿಕೆ

    ದೇಶದಲ್ಲಿ 72,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸಲು 2,000 ಕೋಟಿ ವೆಚ್ಚ: ಹೆಚ್‌ಡಿಕೆ

    – ಪ್ರಮುಖ ನಗರ, ಹೆದ್ದಾರಿ, ವಿಮಾನ ನಿಲ್ದಾಣ, ಕೈಗಾರಿಕಾ ಕಾರಿಡಾರ್‌ಗಳಲ್ಲಿ ಚಾರ್ಜಿಂಗ್ ಕೇಂದ್ರ

    ನವದೆಹಲಿ: ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಅನುಷ್ಠಾನವನ್ನು ಪರಿಶೀಲನೆ ಹಾಗೂ ಅದನ್ನು ಮತ್ತಷ್ಟು ವೇಗವಾಗಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರದ ಬೃಹತ್ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ(H D KUmaraswamy) ಅವರು ಅಂತರ್ ಸಚಿವಾಲಯ ಸಮನ್ವಯ ಸಭೆಯನ್ನು ನಡೆಸಿದರು.

    ನವದೆಹಲಿಯ(NewDelhi) ತಮ್ಮ ಸಚಿವಾಲಯದಲ್ಲಿ ಸಚಿವರು ಕರೆದಿದ್ದ ಈ ಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ಬೃಹತ್ ಕೈಗಾರಿಕೆ ಸಚಿವಾಲಯದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಮೈಸೂರಲ್ಲಿ ಅನುಮಾನಾಸ್ಪದವಾಗಿ ಯುವತಿಯ ಶವ ಪತ್ತೆ – ರೇಪ್ & ಮರ್ಡರ್ ಶಂಕೆ

    ಭೂಸಾರಿಗೆ ವಲಯದಲ್ಲಿ ವಾಯುಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ(Narendra MOdi) ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಇ-ಡ್ರೈವ್ ಅನುಷ್ಠಾನಕ್ಕೆ ಬಂದಿದ್ದು, ಇದನ್ನು ರಾಷ್ಟ್ರೀಯ ಮಹತ್ವದ ಯೋಜನೆ ಎಂದು ಪರಿಗಣಿಸಿ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕಟಿಬದ್ಧವಾಗಿ ಕೆಲಸ ಮಾಡಬೇಕು ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ‘ಆರ್ಯ 3’ ಟೈಟಲ್ ರಿಜಿಸ್ಟರ್ ಮಾಡಿಸಿದ ನಿರ್ಮಾಪಕ- ಸಾಥ್ ನೀಡ್ತಾರಾ ಅಲ್ಲು ಅರ್ಜುನ್?

    ಪ್ರಧಾನಿಗಳ ದೂರದೃಷ್ಟಿಯಂತೆ ಈ ಯೋಜನೆಯು ಮಾಲಿನ್ಯ ಮುಕ್ತ ಸಾರಿಗೆ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಸಾಂಪ್ರದಾಯಿಕ ಇಂಧನಗಳ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ರಾಷ್ಟ್ರವ್ಯಾಪಿ ವಿದ್ಯುತ್ ಚಾಲಿತ ವಾಹನ ಕ್ಷೇತ್ರಕ್ಕೆ ಅಗತ್ಯವಾದ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಮನ್ವಯ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ತಿಂಗಳಿಗೆ 40 ಲಕ್ಷ ಕೊಡಿ – ರವಿ ಮೋಹನ್ ಬಳಿ ಭಾರೀ ಜೀವನಾಂಶ ಕೇಳಿದ ಆರತಿ!

    2,000 ಕೋಟಿ ರೂ. ವೆಚ್ಚ
    ಪಿಎಂ ಇ-ಡ್ರೈವ್ ಯೋಜನೆ ಮೂಲಕ 2,000 ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂತ ಸುಮಾರು 72,000 ಸಾರ್ವಜನಿಕ ಎಲೆಕ್ಟ್ರಿಕ್ ಚಾರ್ಜಿಂಗ್(Electric Charging) ಕೇಂದ್ರಗಳ ಸ್ಥಾಪನೆಗೆ ಬೆಂಬಲ ನೀಡುತ್ತದೆ. ಈ ಕೇಂದ್ರಗಳನ್ನು 50 ರಾಷ್ಟ್ರೀಯ ಹೆದ್ದಾರಿ ಕಾರಿಡಾರ್‌ಗಳಲ್ಲಿ, ಮೆಟ್ರೋ ನಗರಗಳು, ಟೋಲ್ ಪ್ಲಾಜಾಗಳು, ರೈಲ್ವೆ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಇಂಧನ ಮಳಿಗೆಗಳು ಮತ್ತು ರಾಜ್ಯ ಹೆದ್ದಾರಿಗಳಂತಹ ಹೆಚ್ಚಿನ ದಟ್ಟಣೆಯ ತಾಣಗಳಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಪಹಲ್ಗಾಮ್ ದಾಳಿಗೂ ಮುಂಚೆಯೇ ಪಾಕ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೆ – ತಪ್ಪೊಪ್ಪಿಕೊಂಡ ಜ್ಯೋತಿ ಮಲ್ಹೋತ್ರಾ

    ಭಾರತವು ಸುಸ್ಥಿರ ಸಾರಿಗೆಗೆ ಜಾಗತಿಕ ಮಟ್ಟದಲ್ಲಿ ಮಾದರಿಯಾಗುವ ಹಾದಿಯಲ್ಲಿದೆ. ಪಿಎಂ ಇ-ಡ್ರೈವ್ ಯೋಜನೆಯು ನಮ್ಮ ನಾಗರಿಕರಿಗೆ ಸ್ವಚ್ಛ, ಕೈಗೆಟುಕುವ ಮತ್ತು ಅನುಕೂಲಕರ ಸಾರಿಗೆ ಆಯ್ಕೆಗಳಿಗೆ ಅವಕಾಶ ನೀಡುವ ಗುರಿಯನ್ನು ಹೊಂದಿರುವ ಪರಿವರ್ತನಾತ್ಮಕ ಉಪಕ್ರಮವಾಗಿದೆ. ನಾವು ಕೇವಲ ಮೂಲಸೌಕರ್ಯವನ್ನು ನಿರ್ಮಿಸುತ್ತಿಲ್ಲ. ಇಂಧನ ಭದ್ರತೆ ಮತ್ತು ಹಸಿರು ಆರ್ಥಿಕ ಬೆಳವಣಿಗೆಗೆ ನಾವು ಅಡಿಪಾಯವನ್ನು ನಿರ್ಮಿಸುತ್ತಿದ್ದೇವೆ ಎಂದರು.

    ನೋಡೆಲ್ ಏಜೆನ್ಸಿಯಾಗಿ ಬಿಹೆಚ್‌ಇಎಲ್:
    ಈ ಉಪಕ್ರಮದ ಅನುಷ್ಠಾನದಲ್ಲಿ ವಿವಿಧ ಪಾಲುದಾರರ ಸಮಗ್ರ ಪಾತ್ರವನ್ನು ಸಚಿವರು ಶ್ಲಾಘಿಸಿದರು. ಬಿಹೆಚ್‌ಇಎಲ್ (ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್)ಅನ್ನು ಬೇಡಿಕೆ ಒಟ್ಟುಗೂಡಿಸುವಿಕೆಗೆ ಮತ್ತು ಭಾರತದಾದ್ಯಂತ ಇವಿ ಬಳಕೆದಾರರಿಗೆ ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುವ ಏಕೀಕೃತ ಡಿಜಿಟಲ್ ಸೂಪರ್ ಅಪ್ಲಿಕೇಶನ್‌ನ ಅಭಿವೃದ್ಧಿಗಾಗಿ ನೋಡಲ್ ಏಜೆನ್ಸಿಯಾಗಿ ಪರಿಗಣಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: Anekal | ಸೂಟ್‌ಕೇಸ್‌ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ

    ಪಿಎಂ ಇ-ಡ್ರೈವ್ ಯೋಜನೆಯಡಿಯಲ್ಲಿ ರಾಷ್ಟ್ರೀಯ ನಿಯೋಜನೆಯನ್ನು ಪತ್ತೆಹಚ್ಚಲು ಈ ಅಪ್ಲಿಕೇಶನ್ ನೈಜ-ಸಮಯದ ಸ್ಲಾಟ್ ಬುಕಿಂಗ್, ಪಾವತಿ ವ್ಯವಸ್ಥೆ, ಚಾರ್ಜರ್ ಲಭ್ಯತೆಯ ಸ್ಥಿತಿ ಮತ್ತು ಪ್ರಗತಿ ಡ್ಯಾಶ್‌ಬೋರ್ಡ್‌ಗಳನ್ನು ಒಳಗೊಂಡಿರುತ್ತದೆ. ಚಾರ್ಜರ್ ಸ್ಥಾಪನೆಗಳಿಗೆ ಪ್ರಸ್ತಾವನೆಗಳನ್ನು ಸಂಗ್ರಹಿಸಲು ಮತ್ತು ಮೌಲ್ಯಮಾಪನ ಮಾಡಲು ಬಿಹೆಚ್‌ಇಎಲ್ ವತಿಯಿಂದ ರಾಜ್ಯಗಳು ಮತ್ತು ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸಲಾಗುವುದು ಎಂದು ತಿಳಿಸಿದರು.

  • ದೇಶದಲ್ಲೇ ಮೊದಲ ಏಥರ್ ಕಂಪೆನಿಯ ಇವಿ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ

    ದೇಶದಲ್ಲೇ ಮೊದಲ ಏಥರ್ ಕಂಪೆನಿಯ ಇವಿ ಚಾರ್ಜಿಂಗ್ ವ್ಯವಸ್ಥೆಗೆ ಚಾಲನೆ

    ಮಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಹಿಂದೂಸ್ತಾನ್ ಪೆಟ್ರೋಲಿಯಂ (ಹೆಚ್‌ಪಿಸಿಎಲ್) ಏಥರ್ ಕಂಪೆನಿಯ ಇಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯು ಶನಿವಾರದಿಂದ ತನ್ನ ಒಡೆತನದ ಪೆಟ್ರೋಲ್ ಪಂಪ್ ಆಗಿರುವ ಇಲ್ಲಿನ ವಿಜಯ ಫ್ಯೂಲ್ ಪಾರ್ಕ್‌ನಲ್ಲಿ ಪ್ರಾರಂಭಿಸಿತು. ಮಂಗಳೂರು ಉತ್ತರ ಕ್ಷೇತ್ರದ ಶಾಸಕ ವೈ. ಭರತ್ ಶೆಟ್ಟಿ (Bharat Shetty) ಅವರು ಉದ್ಘಾಟನೆ ನೆರವೇರಿಸಿದರು.

    ಬಳಿಕ ಮಾತಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಚಾರ್ಜಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ದೇಶದಲ್ಲೇ ಮೊದಲ ಬಾರಿಗೆ ಏಥರ್ ಕಂಪೆನಿಯ ಸಹಭಾಗಿತ್ವದಲ್ಲಿ ದ್ವಿಚಕ್ರ ಚಾರ್ಜಿಂಗ್ ಸ್ಟೇಷನ್ ಅನ್ನು ಹೆಚ್‌ಪಿಸಿಎಲ್ (HPCL) ಸುರತ್ಕಲ್‌ನಲ್ಲಿ (Surathkal) ಪ್ರಾರಂಭಿಸಿದ್ದು, ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಲಿದೆ. ಡಿಸೆಂಬರ್ ಅಂತ್ಯದವರೆಗೆ ಫ್ರೀ ಚಾರ್ಜಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ ಎಂದರು.

    ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ. ಮಾತನಾಡಿ, ಹಿಂದೂಸ್ತಾನ್ ಪೆಟ್ರೋಲಿಯಂ ದೇಶದಲ್ಲೇ ಮೊದಲ ವೆಹಿಕಲ್ ಚಾರ್ಜಿಂಗ್ ವ್ಯವಸ್ಥೆಯನ್ನು ಅಳವಡಿಸಿದ್ದು ಮುಂದಿನ ದಿನಗಳಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪ್ ನ ಆಯ್ದ ಪಂಪ್‌ಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು. ಸದ್ಯ ಒಂದು ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದ್ದು ಉಳಿದಂತೆ ನಾರ್ಮಲ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್‍ನವರಿಗೆ ಧ್ಯಾನ ಅಂದ್ರೆ ಸೋನಿಯಾ, ರಾಹುಲ್ ಗಾಂಧಿಯೇ ಆಗಿದೆ: ಪ್ರಹ್ಲಾದ್ ಜೋಶಿ

    ಹೆಚ್‌ಪಿಸಿಎಲ್ ರಿಟೇಲ್ ವಿಭಾಗದ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಮಂಗಳೂರು ಟರ್ಮಿನಲ್ ಇನ್ಸ್ಟಾಲೇಷನ್ ವಿಭಾಗದ ಡಿಜಿಎಂ ಬೊಪ್ಪೆ ಸೂರ್ಯಲಿಂಗಂ, ಏರಿಯಾ ಸೇಲ್ಸ್ ಮೆನೇಜರ್ ಕೆ. ಉದಯ್ ಶಂಕರ್ ಶೆಟ್ಟಿ, ರಿಟೇಲ್ ವಿಭಾಗದ ಸೀನಿಯರ್ ಮೆನೇಜರ್ ಪ್ರದೀಪ್ ಕುಮಾರ್, ಮೆನೇಜರ್ ವಸಂತ ಬಿ. ಶೆಟ್ಟಿ, ಸೀನಿಯರ್ ಮೆನೇಜರ್ ಪಿ. ಪ್ರಕಾಶ್, ರೆಂಜಿತ್ ರಾಜನ್, ಹೆಚ್ ಪಿಸಿಎಲ್ ಗುತ್ತಿಗೆದಾರ ಶಿವಪ್ರಸಾದ್ ಶೆಟ್ಟಿ, ಏಥರ್ ಸಂಸ್ಥೆಯ ಟೀಮ್ ಮೆನೇಜರ್ ಭರತ್ ಕುಮಾರ್, ವಿಜಯ ಫ್ಯೂಲ್ ಪಾರ್ಕ್ ಮಾಲಕ ಡಿ. ದಯಾನಂದ ಶೆಟ್ಟಿ, ಹರ್ಷಿಣಿ ಶೆಟ್ಟಿ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರದೀಪ್, ಮೀರಾ ಶೆಟ್ಟಿ, ಪ್ರಶಾಂತ್ ಮುಡಾಯಿಕೋಡಿ ಉಪಸ್ಥಿತರಿದ್ದರು. ಇದನ್ನೂ ಓದಿ: ಕುಸಿದ ಬೆಲೆ- ರಸ್ತೆಗೆ ಹೂವು ಚೆಲ್ಲಿ ರೈತ ಕಣ್ಣೀರು

    Live Tv
    [brid partner=56869869 player=32851 video=960834 autoplay=true]

  • ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

    ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

    – ಇವಿ ಚಾರ್ಜಿಂಗ್ ಮೂಲಸೌಕರ್ಯ
    – ಇಂಟರ್ ನ್ಯಾಷನಲ್ ಆನ್-ದಿ-ಮೂವ್ ಬ್ರ್ಯಾಂಡ್, ವೈಲ್ಡ್ ಬೀನ್ ಕೆಫೆ

    ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ಬಿಪಿ ಯ ಇಂಧನ ಮತ್ತು ಮೊಬಿಲಿಟಿಯ ಜಂಟಿ ಉದ್ಯಮ, ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ತನ್ನ ಮೊದಲ ಜಿಯೋ-ಬಿಪಿ ಬ್ರಾಂಡ್ ಮೊಬಿಲಿಟಿ ಸ್ಟೇಷನ್ ಅನ್ನು ಮಹಾರಾಷ್ಟ್ರದ ನವಿ ಮುಂಬೈನ ನಾವ್ಡೆಯಲ್ಲಿ ಆರಂಭಿಸಿದೆ.

    ಸಾಂಕ್ರಾಮಿಕ-ಪೀಡಿತ ಪರಿಸರದಲ್ಲಿ ಕೆಲಸ ಮಾಡುವುದು ಸವಾಲಾದರೂ ಜಿಯೋ-ಬಿಪಿ ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ಮೂಲಕ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್ ಗಳ ನೆಟ್ ವರ್ಕ್ ಅನ್ನು ಪರಿಚಯಿಸಿದೆ. ಭಾರತದಲ್ಲಿ ಮೊಬಿಲಿಟಿ ಪರಿಹಾರಗಳನ್ನು ಮರುರೂಪಿಸುವಾಗ, ಜಿಯೊ-ಬಿಪಿ ಬ್ರ್ಯಾಂಡ್ ಸಾಟಿಯಿಲ್ಲದ ಮತ್ತು ವಿಶಿಷ್ಟವಾದ ಗ್ರಾಹಕ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಅಸ್ತಿತ್ವದಲ್ಲಿರುವ 1400 ಇಂಧನ ಪಂಪ್ ಗಳ ನೆಟ್ ವರ್ಕ್ ಅನ್ನು ಜಿಯೊ-ಬಿಪಿ ಎಂದು ಮರುಬ್ರಾಂಡ್ ಮಾಡಲಾಗುವುದರ ಜೊತೆಗೆ ಮುಂದಿನ ತಿಂಗಳುಗಳಲ್ಲಿ ಹೊಸ ಶ್ರೇಣಿಯ ಗ್ರಾಹಕ ಮೌಲ್ಯದ ಪ್ರಸ್ತಾಪಗಳನ್ನು ಮುಂದಿಡಲಿದೆ.

    ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್ ಗಳನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ. ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್ ಮೆಂಟ್ ಗಳು ಮತ್ತು ಆಹಾರ(ಹೊಟೇಲ್) ಸೇರಿದಂತೆ – ಸಂಚಾರ ನಡೆಸುವ ಗ್ರಾಹಕರಿಗೆ ನೆರವಾಗುವಂತೆ ಹಲವು ಸೇವೆಗಳನ್ನು ಜೊತೆಯಾಗಿ ನೀಡಲಿದೆ. ಮುಂದಿನ ದಿನಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಸರಳ ಯೋಜನೆಗಳನ್ನು ರೂಪಿಸಲಿದೆ.

    ಎಕ್ಸ್‌ಪ್ರೆಸ್‌ ಆಯಿಲ್‌ ಚೇಂಜ್‌

    ಜಿಯೋ ಮತ್ತು ರಿಲಯನ್ಸ್ ರೀಟೇಲ್ ನಲ್ಲಿ ನೂರಾರು ಮಿಲಿಯನ್ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ತನ್ನ ವಿಶಾಲ ನೆಟ್ ವರ್ಕ್ ನಿಂದ ಭಾರತದಾದ್ಯಂತ ಗ್ರಾಹಕ ವ್ಯವಹಾರಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದ ಉದ್ಯಮದಲ್ಲಿ ನಾಯಕರಾಗುವ ಲಕ್ಷಣಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕಂಟ್ ಗಳು, ಅನುಕೂಲತೆ ಮತ್ತು ಸುಧಾರಿತ ಕಡಿಮೆ ಇಂಗಾಲದ ಮೊಬಿಲಿಟಿ ಸೊಲ್ಯೂಷನ್ ಗಳನ್ನು ಒಳಗೊಂಡಿದೆ.

    ಇವಿ ಚಾರ್ಜಿಂಗ್

    ಸಾಮಾನ್ಯ ಇಂಧನಗಳ ಬದಲಿಗೆ, ದೇಶಾದ್ಯಂತ ಜಿಯೋ-ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಿತ ಇಂಧನವನ್ನು ನೀಡುತ್ತವೆ. ಇಂಧನದ ಕೊಡುಗೆಯು ಅಂತರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ‘ACTIVE’ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಇಂಜಿನ್ ಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಎಂಜಿನ್ ಭಾಗಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

    ಜಿಯೋ-ಬಿಪಿ ತನ್ನ ಮೊಬಿಲಿಟಿ ಕೇಂದ್ರಗಳು ಮತ್ತು ಇತರ ಸ್ವತಂತ್ರ ಸ್ಥಳಗಳಲ್ಲಿ – ಮೊಬಿಲಿಟಿ ಪಾಯಿಂಟ್‌ಗಳಲ್ಲಿ ಇವಿ(EV) ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ಬ್ಯಾಟರಿ ಸ್ವಾಪ್ ಸ್ಟೇಷನ್ ಗಳ ನೆಟ್ವರ್ಕ್ ಅನ್ನು ಸ್ಥಾಪಿಸುತ್ತದೆ. ಜಂಟಿ ಉದ್ಯಮವು ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ ಕ್ಷೇತ್ರದಲ್ಲಿ ಮೊದಲಿಗನಾಗುವ ಗುರಿಯನ್ನು ಹೊಂದಿದೆ.

    ವೈಲ್ಡ್ ಬೀನ್ ಕೆಫೆಯ ಮೂಲಕ ಪ್ರಯಾಣದಲ್ಲಿರುವ ಗ್ರಾಹಕರಿಗೆ ಉಪಹಾರಗಳು ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇವು ದಿನವಿಡೀ ತೆರೆದಿರುತ್ತವೆ. ಇವು ದೈನಂದಿನ ವಸ್ತುಗಳಿಗಾಗಿ, ತಿಂಡಿ, ತಿನಿಸುಗಳಿಗಾಗಿ ಭಾರತದ ಅತಿದೊಡ್ಡ ರಿಟೇಲ್ ಆಗಿರುವ ರಿಲಯನ್ಸ್ ರಿಟೇಲ್ ನೊಂದಿಗೆ ಪಾಲುದಾರಿಕೆ ಹೊಂದಿರುತ್ತದೆ. ವೈಲ್ಡ್ ಬೀನ್ ಕೆಫೆ, ಬಿಪಿಯ ಅಂತಾರಾಷ್ಟ್ರೀಯ ಆನ್-ದಿ-ಮೂವ್ ಬ್ರ್ಯಾಂಡ್, ಮಸಾಲಾ ಚಾಯ್, ಸಮೋಸಾ, ಉಪ್ಮಾ, ಪನೀರ್ ಟಿಕ್ಕಾ ರೋಲ್ ಮತ್ತು ಚಾಕೊಲೇಟ್ ಲಾವಾ ಕೇಕ್ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ದರಗಳಲ್ಲಿ ಒದಗಿಸಲಿದೆ.‌  ಇದನ್ನೂ ಓದಿ: ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

    ಜಿಯೋ-ಬಿಪಿ ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್‌ ಗಳ ನೆಟ್ವರ್ಕ್ ಅನ್ನು ತನ್ನ ಮೊಬಿಲಿಟಿ ಸ್ಟೇಷನ್ ಗಳಲ್ಲಿ ಕ್ಯಾಸ್ಟ್ರೋಲ್ ಸಹಭಾಗಿತ್ವದಲ್ಲಿ ನೀಡುತ್ತದೆ, ವೃತ್ತಿಪರವಾಗಿ ತರಬೇತಿ ಪಡೆದ ತಜ್ಞರು ಉಚಿತ ವಾಹನ ತಪಾಸಣೆ ಮತ್ತು ಉಚಿತ ಆಯಿಲ್ ಚೇಂಜ್ ಸೇವೆಯನ್ನು ನೀಡಲಿದ್ದಾರೆ. ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್ಲೆಟ್ ಗಳಲ್ಲಿ ಕ್ಯಾಸ್ಟ್ರೋಲ್ ಲೂಬ್ರಿಕಂಟ್ ಖರೀದಿಸುವ ಪ್ರತಿಯೊಬ್ಬ ದ್ವಿಚಕ್ರ -ವಾಹನದ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ ತೈಲ ಬದಲಾವಣೆ ಸೇವೆಯನ್ನು ಪಡೆಯಲಿದ್ದಾರೆ.

    ಈ ಹೊಸ ಮೌಲ್ಯದ ಪ್ರಸ್ತಾಪಗಳ ಜೊತೆಗೆ, ಜಿಯೋ-ಬಿಪಿ ಎಂಡ್-ಟು-ಎಂಡ್ ಆಟೊಮೇಷನ್ ಬೆಂಬಲಿತ ‘ಗುಣಮಟ್ಟ ಮತ್ತು ಪ್ರಮಾಣ’ದ ಭರವಸೆಯನ್ನು ಖಾತ್ರಿಗೊಳಿಸುತ್ತದೆ, ಪ್ರತಿ ಗ್ರಾಹಕನಿಗೆ ಜಿಯೊ-ಬಿಪಿ ಮೊಬಿಲಿಟಿ ಸ್ಟೇಷನ್‌ಗಳಲ್ಲಿ ಖರ್ಚು ಮಾಡುವ ಪ್ರತಿ ರೂಪಾಯಿಗೂ ಮೌಲ್ಯವನ್ನು ನೀಡುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವುದರ ಜೊತೆಗೆ, ಡೈನಾಮಿಕ್ ಬೆಲೆಗಳು, ತ್ವರಿತ ರಿಯಾಯಿತಿಗಳು, ಹ್ಯಾಪಿ ಅವರ್ ಯೋಜನೆಗಳು, ನೆಟ್ವರ್ಕ್‌ ಆದ್ಯಂತ ಹೊಂದಿಕೊಳ್ಳುವ ಮತ್ತು ಏಕರೂಪದ ಡಿಜಿಟಲ್ ಪಾವತಿಯ ಅನುಷ್ಠಾನದಂತಹ ಅತ್ಯಾಕರ್ಷಕ ಹೊಸ ಯೋಜನೆಗಳು ಕೂಡ ಇದರಲ್ಲಿದೆ.