ಬೆಂಗಳೂರು: ಅಟೆಂಡೆನ್ಸ್ ಬೋನಸ್ ಹಾಗೂ ವೇತನಭತ್ಯೆಗೆ ಆಗ್ರಹಿಸಿ ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ (BMTC) ಡಿಪೋದಲ್ಲಿ ಎಲೆಕ್ಟ್ರಿಕ್ ಬಸ್ ಚಾಲಕರು (Electric Bus Driver) ದಿಢೀರ್ ಪ್ರತಿಭಟನೆ (Protest) ನಡೆಸುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಅಟೆಂಡೆನ್ಸ್ ಬೋನಸ್, ವೇತನ ಭತ್ಯೆ ನೀಡುತ್ತಿಲ್ಲ. ಅಪಘಾತವಾದಾಗ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಚಾಲಕರಿಗೆ ಭದ್ರತೆಯಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಇವಿ ಬಸ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ.
ಎಲೆಕ್ಟ್ರಿಕ್ ಬಸ್ಸು ಚಾಲಕರು ನೇರವಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವುದಿಲ್ಲ. ಇವರು ಗುತ್ತಿಗೆ ನೌಕರರಾಗಿದ್ದು ಖಾಸಗಿ ಸಂಸ್ಥೆ ನೇಮಕ ಮಾಡುತ್ತದೆ. ಈ ಸಂಸ್ಥೆ ಚಾಲಕರನ್ನು ನೇಮಕ ಮಾಡುವಾಗ ಯಾವ ರೀತಿ ಒಪ್ಪಂದ ಮಾಡಿಕೊಂಡಿರುತ್ತದೋ ಒಪ್ಪಂದಂತೆ ಸಂಬಳ, ಭತ್ಯೆಯನ್ನು ನೀಡಬೇಕಾಗುತ್ತದೆ.
ಬೆಂಗಳೂರು: ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ನಡೆದಿದ್ದ ಇವಿ ಬಸ್ (EV Bus) ಸರಣಿ ಅಪಘಾತದಲ್ಲಿ 9 ವಾಹನಗಳು ಜಖಂಗೊಂಡಿದ್ದವು. ಅಪಘಾತದ ಸಿಸಿಟಿವಿ ದೃಶ್ಯ ಬಿಡುಗಡೆಯಾಗಿದ್ದು, ಘಟನೆ ಬೆಚ್ಚಿ ಬೀಳಿಸುವಂತಿದೆ.
ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಿಎಂಟಿಸಿ ಇವಿ ಬಸ್‌ನಿಂದ ಸರಣಿ ಅಪಘಾತವೊಂದು ಸಂಭವಿಸಿತ್ತು. ಈ ಘಟನೆಗೆ ಚಾಲಕನ ಅನಾರೋಗ್ಯವೇ ಕಾರಣ ಅನ್ನೋದು ಗೊತ್ತಾಗಿದೆ. ಬಸ್ ಓಡಿಸುತ್ತಿದ್ದಾಗಲೇ ಚಾಲಕನಿಗೆ ಮೂರ್ಛೆ ಬಂದ ಕಾರಣದಿಂದಲೇ ಈ ಅಪಘಾತ ಆಗಿರೋದು ಎಂಬುದು ಬಸ್ ಒಳಭಾಗದ ಸಿಸಿಟಿವಿ ಮೂಲಕ ಬಯಲಾಗಿದೆ. ಇದನ್ನೂ ಓದಿ: Bengaluru| ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸರಣಿ ಅಪಘಾತ – 9 ವಾಹನಗಳಿಗೆ ಇವಿ ಬಸ್ ಡಿಕ್ಕಿ
ಹೌದು, ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಗರದ ಚಿನ್ನಸ್ವಾಮಿ ಸ್ಟೇಡಿಯಂ ಸಿಗ್ನಲ್ ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬಂದ ಬಿಎಂಟಿಸಿ ಇವಿ ಬಸ್ ಏಕಾಏಕಿ ನಿಂತಿದ್ದ 9 ವಾಹನಗಳನ್ನ ಗುದ್ದಿಕೊಂಡು ಹೋಗಿ ನಿಂತಿತ್ತು. ಘಟನೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದರು. ಬಳಿಕ ಘಟನೆ ಸಂಬಂಧ ಬಸ್ ಒಳಭಾಗದ ಸಿಸಿಟಿವಿ ಪರಿಶೀಲಿಸಿದಾಗ ಘಟನೆಗೆ ಕಾರಣ ಚಾಲಕನ ಅನಾರೋಗ್ಯ ಅನ್ನೋದು ತಿಳಿದು ಬಂದಿದೆ. ಇದನ್ನೂ ಓದಿ: ತಾಕತ್ತಿದ್ದರೆ RSS ನಿಷೇಧ ಮಾಡಿ ಚುನಾವಣೆಗೆ ಬನ್ನಿ: ಪ್ರಿಯಾಂಕ್ ಖರ್ಗೆಗೆ ಸುನಿಲ್ ಕುಮಾರ್ ಸವಾಲ್
ಬಸ್ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬಂದಾಗ ಚಾಲಕನಿಗೆ ಮೂರ್ಛೆ ರೋಗ ಬಂದಿದೆ. ಪರಿಣಾಮ ಚಾಲಕ ಜೋರಾಗಿ ಬಸ್ ಎಕ್ಸಲೇಟರ್ ತುಳಿದಿದ್ದಾನೆ. ಇದರ ಪರಿಣಾಮ ಮುಂದೆ ಇದ್ದ ವಾಹನಗಳನ್ನ ಬಸ್ ಗುದ್ದಿಕೊಂಡು ಹೋಗಿದೆ. ಬಸ್ ಒಳಗೆ ನಿರ್ವಾಹಕ ಬಸ್ ನಿಯಂತ್ರಿಸಲು ಪ್ರಯತ್ನಿಸಿದರೂ ಸಾಧ್ಯವಾಗದೇ 4 ಆಟೋ, 4 ಕಾರು 1 ಬೈಕ್ ಘಟನೆಯಲ್ಲಿ ನಜ್ಜುಗುಜ್ಜು ಆಗಿದ್ದು, ಸಂಪೂರ್ಣ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ʻಏಯ್ ಕರಿ ಟೋಪಿ ಎಂಎಲ್‌ಎ ಬಾರಪ್ಪʼ – ಡಿಕೆಶಿ Vs ವರ್ಸಸ್ ಮುನಿರತ್ನ ನಡ್ವೆ ʻಕರಿ ಟೋಪಿʼ ಕದನ!
ಇನ್ನೂ ಘಟನೆ ಬಳಿಕ ಬಿಎಂಟಿಸಿ ಯಡವಟ್ಟು ಕೂಡ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಚಾಲಕರ ನೇಮಕ ವಿಚಾರದಲ್ಲಿ ಗುತ್ತಿಗೆ ಕಂಪನಿಗಳ ನಿರ್ಧಾರವೇ ಅಂತಿಮವಾಗಿದ್ದು, ಸಾರ್ವಜನಿಕ ಸಾರಿಗೆ ಚಾಲಕರ ನೇಮಕ ವಿಚಾರದಲ್ಲಿ ಜವಾಬ್ದಾರಿ ಮರೆಯಿತಾ ಬಿಎಂಟಿಸಿ ಅನ್ನೋ ಪ್ರಶ್ನೆಗಳು ಉದ್ಭವವಾಗಿವೆ. ಕಾರಣ ಗುತ್ತಿಗೆ ಕಂಪನಿಗಳು ನೇಮಿಸಿಕೊಳ್ಳುವ ಚಾಲಕರನ್ನ ನಂಬಿ, ಹಿನ್ನೆಲೆ ವಿಚಾರಿಸದೆ ರಸ್ತೆಗೆ ಬಸ್ ಇಳಿಸುತ್ತಿರುವ ಹಿನ್ನೆಲೆ ಅಪಘಾತ ಹೆಚ್ಚಳಕ್ಕೆ ಕಾರಣವಾಗಿದೆ ಅನ್ನೋ ಆರೋಪಗಳು ಕೂಡ ಕೇಳಿ ಬರುತ್ತಿವೆ. ಇದನ್ನೂ ಓದಿ: 2 ವರ್ಷದ ಹಿಂದೆ ಮನೆ ಬಿಟ್ಟಿದ್ದ ವ್ಯಕ್ತಿ ಸಿಕ್ಕಿದ್ದು ಅಸ್ಥಿಪಂಜರವಾಗಿ – ಧರಿಸಿದ್ದ ಟೀ-ಶರ್ಟ್, ಹಲ್ಲು ಸೆಟ್‌ನಿಂದ ಗುರುತು ಪತ್ತೆ
ಬೆಂಗಳೂರು: ಇವಿ ಬಸ್ (EV Bus) ಚಾಲಕನ ನಿರ್ಲಕ್ಷ್ಯಕ್ಕೆ ಸರಣಿ ಅಪಘಾತ ಸಂಭವಿಸಿ, 9 ವಾಹನಗಳು ಜಖಂಗೊಂಡಿರುವ ಘಟನೆ ಬೆಂಗಳೂರಿನ (Bengaluru) ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಮುಂಭಾಗ ನಡೆದಿದೆ.
ಬೆಳಗ್ಗೆ 11:30ರ ಸುಮಾರಿಗೆ ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದಾಗ ಏಕಾಏಕಿ ಬಸ್ ನುಗ್ಗಿದ ಪರಿಣಾಮ ಮುಂಭಾಗದಲ್ಲಿದ್ದ 4 ಕಾರು, 4 ಆಟೋ ಒಂದು ಬೈಕ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ವಾಹನಗಳು ಸಂಪೂರ್ಣ ಜಖಂ ಆಗಿದ್ದು, ಅದೃಷ್ಟವಶಾತ್ ವಾಹನಗಳಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪವರ್ ಶೇರಿಂಗ್, ಸಂಪುಟ ವಿಸ್ತರಣೆ ಬಗ್ಗೆ ಯಾರು ಮಾತಾಡಬಾರದು: ಸಂತೋಷ ಲಾಡ್
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವಿ ಬಸ್ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ. ಘಟನೆ ಬಳಿಕ ಡ್ಯಾಮೇಜ್ ಆದ ವಾಹನ ಸವಾರರು ಬೇಸರ ವ್ಯಕ್ತಪಡಿಸಿದ್ದು, ಗುತ್ತಿಗೆ ಆಧಾರದಲ್ಲಿ ಯರ‍್ಯಾರನ್ನೋ ಚಾಲಕರಾಗಿ ತೆಗೆದುಕೊಂಡಿರುವ ಕಾರಣ ಹೀಗೆಲ್ಲ ಆಗುತ್ತಿದೆ, ಜನ ಹೇಗೆ ನಂಬಿಕೆ ಇಟ್ಟು ಬಸ್ ಹತ್ತೋದು? ನಮ್ಮ ನಷ್ಟಕ್ಕೆ ಹೊಣೆ ಯಾರೆಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ, ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪ್ರಶಂಸೆಗೆ ಬಿಎಂಟಿಸಿ (BMTC) ಹೆಸರುವಾಸಿಯಾಗಿತ್ತು. ಆದರೆ ಬಿಎಂಟಿಸಿ ಸಂಸ್ಥೆ ಇತ್ತೀಚಿನ ಕೆಲ ವರ್ಷಗಳಿಂದ ನಷ್ಟದಲ್ಲಿದ್ದು, ನಷ್ಟವನ್ನು ಕಡಿತಗೊಳಿಸಲು ಅನೇಕ ರೀತಿಯಲ್ಲಿ ಸರ್ಕಸ್ ಮಾಡ್ತಿದೆ. ಈಗ ಬಿಎಂಟಿಸಿಯ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಖಾಸಗಿಯವರ ಸಹಭಾಗತ್ವದಲ್ಲಿ ರಸ್ತೆಗೆ ಇಳಿದಿರುವ ಪರಿಸರ ಸ್ನೇಹಿ ಎಲೆಕ್ರ್ಟಿಕ್ ಬಸ್‌ಗಳು (EV Bus) ಮಂಗಳವಾರ ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ (Bengaluru) ಬರುವಾಗ ಸಿಗುವ ಮಾರಸಂದ್ರ ಟೋಲ್ ಬಳಿಯೇ ನಿಂತುಹೋಗಿದೆ. ಬಸ್ ಬ್ಯಾಟರಿ ಚಾರ್ಜ್ ಸರಿಯಾಗಿಯೇ ಇತ್ತು, ಆದರೇ ಫಾಸ್ಟ್ ಟ್ಯಾಗ್‌ನ ಚಾರ್ಜ್ ಖಾಲಿಯಾಗಿತ್ತು. 15ಕ್ಕೂ ಹೆಚ್ಚು ಬಸ್‌ಗಳು ಟೋಲ್ ಪಾಸ್ ಆಗಲು ಫಾಸ್ಟ್ ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಇಲ್ಲದೇ ಟೋಲ್ ಕ್ರಾಸ್ ಆಗದೇ ಅಲ್ಲೇ ನಿಂತುಕೊಳ್ಳುವಂತಹ ಪರಿಸ್ಥಿತಿ ಹೋಗಿತ್ತು.
ಬಸ್ ಹೀಗೆ ಟೋಲ್ ಬಳಿ ನಿಂತುಕೊಳ್ಳುತ್ತಿದ್ದಂತೆ ಪ್ರಯಾಣಿಕರು ವಿಧಿಯಿಲ್ಲದೇ ಅಲ್ಲೇ ಇಳಿದು ಬೇರೆ ಬಸ್‌ಗೆ ಹತ್ತಿಕೊಂಡು ಬರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿ ಬಿಎಂಟಿಸಿ ಮಾಡಿರುವ ಎಡವಟ್ಟಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ. ಇದನ್ನೂ ಓದಿ: ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚರಣೆ- 3,905 ಲೀಟರ್ ಮದ್ಯ ವಶ
ಖಾಸಗಿಯವರು ಈ ಇವಿ ಬಸ್‌ಗಳ ನಿರ್ವಹಣೆ ಮಾಡುತ್ತಿರುವುದೇ ಟೋಲ್ ಕಟ್ಟದೇ ಇರೋದಕ್ಕೆ ಪ್ರಮುಖ ಕಾರಣ ಅನ್ನೋದು ಮುನ್ನೋಟಕ್ಕೆ ಕಂಡುಬಂದಿದೆ. ಬಿಎಂಟಿಸಿಯೊಂದಿಗೆ ಕರಾರು ಮಾಡಿಕೊಂಡಿರುವ ಖಾಸಗಿ ಅವ್ರು ಇನ್ಮುಂದೆ ಈ ರೀತಿ ಆಗದಂತೆ ಕ್ರಮವಹಿಸುವಂತೆ ಬಿಎಂಟಿಸಿ ಹಿರಿಯ ಅಧಿಕಾರಿಗಳು ನೋಡಿಕೊಳ್ಳದೇ ಹೋದರೆ ಇವಿ ಬಸ್‌ಗಳಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ಹಿಂದೇಟು ಹಾಕಬಹುದು. ಇದನ್ನೂ ಓದಿ:ಬೆಂಗ್ಳೂರು ಮಹಿಳೆಯರಿಗೆ ಗುಡ್‍ನ್ಯೂಸ್- ಇಂದು ದಿನಪೂರ್ತಿ ಬಿಎಂಟಿಸಿನಲ್ಲಿ ಸುತ್ತಾಡ್ಬೋದು