Tag: European Countries

  • ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

    ಯುರೋಪಿಯನ್ ದೇಶಗಳಿಂದ ಪಾಕ್‌ಗೆ ಶಾಕ್ – ಪಾಕಿಸ್ತಾನ ವಾಯು ಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಹಿಂದೇಟು

    ಬೆಲ್ಜಿಯಂ: ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಉದ್ವಿಗ್ನ ಪರಿಸ್ಥಿತಿಯ ಮಧ್ಯೆ ಇದೀಗ ಯುರೋಪಿಯನ್ (European) ದೇಶಗಳು ಪಾಕಿಸ್ತಾನಕ್ಕೆ ಶಾಕ್ ನೀಡಿದೆ.

    ಏ.22ರಂದು ಪಹಲ್ಗಾಮ್ ದಾಳಿಯ (Pahalgam Terrorist Attack) ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಕಾದಾಟ ಜೋರಾಗಿದೆ. ದಾಳಿಯ ನಂತರ ಭಾರತ ಪಾಕ್‌ಗೆ ಒಂದೊಂದಾಗಿಯೇ ಶಾಕ್ ನೀಡುತ್ತಿದೆ. ಇದೀಗ ಯುರೋಪಿಯನ್ ದೇಶಗಳು ಪಾಕಿಸ್ತಾನಕ್ಕೆ ಶಾಕ್ ನೀಡಿದ್ದು, ಪಾಕ್ ವಾಯು ಪ್ರದೇಶವನ್ನು ವಿಮಾನ ಹಾರಾಟಕ್ಕೆ ಬಳಸದಿರಲು ನಿರ್ಧರಿಸಿದೆ.ಇದನ್ನೂ ಓದಿ: ಬೆಂಗಳೂರಲ್ಲಿ ಇಂದು ಆರ್‌ಸಿಬಿ vs ಸಿಎಸ್‌ಕೆ ಹೈವೋಲ್ಟೇಜ್‌ ಮ್ಯಾಚ್‌ – ಪಂದ್ಯಕ್ಕೆ ಮಳೆ ಅಡ್ಡಿ?

    ಯುರೋಪಿಯನ್ ಒಕ್ಕೂಟ ದೇಶಗಳ ಏರ್ ಫ್ರಾನ್ಸ್, ಬ್ರಿಟಿಷ್ ಏರ್ವೇಸ್ ಮತ್ತು ಸ್ವಿಸ್ ವಿಮಾನಗಳು ಸೇರಿದಂತೆ ಇನ್ನಿತರ ವಿಮಾನಯಾನ ಸಂಸ್ಥೆಗಳು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿವೆ. ಪಾಕಿಸ್ತಾನದ ವಾಯುಪ್ರದೇಶದ ಬದಲಿಗೆ ಏಷ್ಯಾಕ್ಕೆ ಸಂಪರ್ಕಿಸಲು ಇರಾನ್, ಒಮನ್, ಅಥವಾ ಇತರ ಪಕ್ಕದ ರಾಷ್ಟ್ರಗಳ ವಾಯುಪ್ರದೇಶದ ಮೂಲಕ ಕಾರ್ಯಾಚರಿಸುತ್ತಿವೆ. ಈ ಬದಲಾವಣೆಯಿಂದ ವಿಮಾನದ ಸಮಯ ಮತ್ತು ಇಂಧನ ವೆಚ್ಚದಲ್ಲಿ ಹೆಚ್ಚಳವಾಗಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಇದನ್ನು ಅಗತ್ಯ ಕ್ರಮವೆಂದು ವಿಮಾನಯಾನ ಸಂಸ್ಥೆಗಳು ಪರಿಗಣಿಸಿವೆ. ಪ್ರತಿಯೊಂದು ದೇಶವು ಯಾವುದೇ ಪ್ರದೇಶದ ಮೇಲೆ ಹಾರಾಟ ನಡೆಸುವಾಗ ತಮ್ಮದೇ ಆದ ಅಪಾಯದ ಮೌಲ್ಯಮಾಪನಗಳನ್ನು ನಡೆಸುತ್ತದೆ. ಹೀಗಾಗಿ ಪಾಕಿಸ್ತಾನ ವಾಯು ಪ್ರದೇಶ ಹಾರಾಟಕ್ಕೆ ಅಸುರಕ್ಷಿತ ಸ್ಥಳವೆಂದು ಪರಿಗಣಿಸಿದ್ದು, ನೋಟಮ್ (ವಾಯುಪಡೆಗೆ ಸೂಚನೆ) ನೀಡಿಲ್ಲ. ಆದರೆ ವಾಯುಪ್ರದೇಶವನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದೆ.

    ಇತ್ತೀಚಿಗಷ್ಟೇ ಭಾರತ ದೇಶವು ಪಾಕ್ ವಾಯು ಪ್ರದೇಶವನ್ನು ಬಳಸುವುದನ್ನು ನಿಲ್ಲಿಸಿತ್ತು. ಜೊತೆಗೆ ಪಾಕಿಸ್ತಾನವೂ ಕೂಡ ಭಾರತದ ವಾಯು ಪ್ರದೇಶವ ಬಳಸುವುದನ್ನು ನಿಲ್ಲಿಸಿತ್ತು. ಇದರ ಬೆನ್ನಲ್ಲೇ ಯುರೋಪಿಯನ್ ದೇಶಗಳು ನಿರ್ಧಾರ ಕೈಗೊಂಡಿದೆ.

    ಇನ್ನೂ ಭಾರತ ಮತ್ತು ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿ ಕುರಿತು ಯುರೋಪಿಯನ್ ಒಕ್ಕೂಟದ ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಅವರು ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕ್ ವಿದೇಶಾಂಗ ಸಚಿವ ಇಶಾಕ್ ದಾರ್ ಜೊತೆಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎರಡು ದೇಶಗಳು ಸಂಯಮ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದು, ಗಡಿಗಳಲ್ಲಿ ಉದ್ವಿಗ್ನತೆ ಏರಿಕೆಯಿಂದ ಯಾರಿಗೂ ಯಾವುದೇ ಪ್ರಯೋಜನವಿಲ್ಲ. ಇಬ್ಬರೂ ಸಂಯಮ ವಹಿಸುವಂತೆ ಒತ್ಥಾಯಿಸಿದ್ದಾರೆ. ಇನ್ನೂ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಕಲ್ಲಾಸ್ ಜೊತೆಗೆ ಜೈಶಂಕರ್ ಚರ್ಚೆ ನಡೆಸಿದರು. ಇದೇ ವೇಳೆ ಇಶಾಕ್ ದಾರ್, ಭಾರತ ದೇಶವು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಹಾಗೂ ಪಾಕ್ ವಿರುದ್ಧ ಪ್ರಚೋದನಾಕಾರಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಉಗ್ರರ ದಾಳಿ ಮಧ್ಯೆ ಜಮ್ಮು-ಕಾಶ್ಮೀರದಲ್ಲಿ ಶಂಕರಾಚಾರ್ಯ ಜಯಂತಿ ಆಚರಣೆ

  • ಎರಡೇ ವರ್ಷದಲ್ಲಿ ವಿಶ್ವದ ಅತಿದೊಡ್ಡ ಕಾರು ರಫ್ತುದಾರನಾಗಿ ಹೊರಹೊಮ್ಮಿದ ಚೀನಾ!

    ಎರಡೇ ವರ್ಷದಲ್ಲಿ ವಿಶ್ವದ ಅತಿದೊಡ್ಡ ಕಾರು ರಫ್ತುದಾರನಾಗಿ ಹೊರಹೊಮ್ಮಿದ ಚೀನಾ!

    ರಡು ದಶಕಗಳ ಹಿಂದೆ, ಚೀನಾ (China) ಕಾರುಗಳ (Car) ತಯಾರಿಸುವಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿತ್ತು. ಆದರೆ ಈಗ ಯುರೋಪಿಯನ್‌ ದೇಶಗಳನ್ನು ಹಿಂದಿಕ್ಕಿ ಕಾರು ರಫ್ತು (Exports) ಮಾಡುವ ಮೊದಲ ದೇಶವಾಗಿ ಹೊರಹೊಮ್ಮಿದೆ. ಚೀನಾ ಕಾರು ಮಾರುಕಟ್ಟೆ ಅಮೆರಿಕ (America) ಮತ್ತು ಯುರೋಪಿಯನ್ ಮಾರುಕಟ್ಟೆ (European Countries) ಒಟ್ಟುಗೂಡಿಸಿದಷ್ಟು ಬೆಳೆದಿದೆ.

    ಚೀನಾ ಈಗ ತನ್ನ ದೇಶದ ಗ್ರಾಹಕರಿಗೆ ಅಗತ್ಯವಿರುವ ಎರಡು ಪಟ್ಟು ಹೆಚ್ಚು ಕಾರುಗಳನ್ನು ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕಾಗಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಲು ಬೇರೆ ದೇಶಗಳ ಕಡೆ ನೋಡುತ್ತಿದೆ. ಇದರ ನಡುವೆ BYD ಯಂತಹ ಚೈನೀಸ್ ಬ್ರ್ಯಾಂಡ್‌ಗಳು ಸುಧಾರಿತ ಎಲೆಕ್ಟ್ರಿಕ್ ಕಾರುಗಳನ್ನು ಅತ್ಯಂತ ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತಿರುವುದಕ್ಕಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗುತ್ತಿವೆ. ಅಲ್ಲದೇ ಉತ್ತಮ ತಂತ್ರಜ್ಞಾನದಿಂದ ಚೀನಾದ ಕಾರುಗಳು ಜನರ ಮನೆ ಮಾತಾಗಿವೆ.

    ತೈಲದ ಮೇಲೆ ಅವಲಂಬನೆ ತಪ್ಪಿಸಲು ಚೀನಾ ಮಾಸ್ಟರ್‌ ಪ್ಲ್ಯಾನ್!
    ವರ್ಷಕ್ಕೆ ಸುಮಾರು 4 ಕೋಟಿ ಕಾರುಗಳನ್ನು ನಿರ್ಮಿಸುವ 100ಕ್ಕೂ ಹೆಚ್ಚು ಕಾರ್ಖಾನೆಗಳನ್ನು ಚೀನಾ ಹೊಂದಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಮೇಲಿನ ಆಸಕ್ತಿಯಿಂದ ಪೆಟ್ರೋಲ್ ಬಳಕೆಯ ಕಾರುಗಳಿಗೆ ಚೀನಾದಲ್ಲಿ ಬೇಡಿಕೆ ಕುಸಿದಿದೆ. ಚೀನಾ ಆಮದು ಮಾಡಿಕೊಂಡ ತೈಲದ ಮೇಲಿನ ಅವಲಂಬನೆಯನ್ನು ಮಿತಿಗೊಳಿಸಲು ಎಲೆಕ್ಟ್ರಿಕ್ ಕಾರುಗಳನ್ನು ಹೆಚ್ಚಾಗಿ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಚೀನಾ 15 ವರ್ಷಗಳಿಗೂ ಹೆಚ್ಚು ಕಾಲ ಹೂಡಿಕೆ ಮಾಡಿದೆ.

    ಚೀನಾ ಕಾರುಗಳ ರಫ್ತನ್ನು ಹತ್ತಿಕ್ಕಲು ಹೊಸ ಸುಂಕಗಳನ್ನು ವಿಧಿಸಲು ಅಮೆರಿಕ ಮುಂದಾಗಿದೆ. ಅಮೆರಿಕ ಸೇರಿದಂತೆ ಹಲವು ದೇಶಗಳು ಈಗಾಗಲೇ ಚೀನಾದ ಎಲೆಕ್ಟ್ರಿಕ್ ವಾಹನಗಳ ಮೇಲೆ ಹೆಚ್ಚುವರಿ ಸುಂಕವನ್ನು ವಿಧಿಸುತ್ತಿವೆ. ಆದರೆ ಆಟೋಮೇಕಿಂಗ್‌ನಲ್ಲಿ ಚೀನಾ ಹೊಂದಿರುವ ಸಾಮರ್ಥ್ಯದಿಂದ ಅದರ ಪ್ರಾಬಲ್ಯವನ್ನು ತಗ್ಗಿಸಲು ಯಾವ ದೇಶಕ್ಕೂ ಸಾಧ್ಯ ಆಗಿಲ್ಲ.

    ಚೀನಾ ಕಾರು ರಫ್ತಿನಲ್ಲಿ ಜಿಗಿತ ಕಾಣಲು ಕಾರಣವೇನು?
    ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಭಾರೀ ಹಣ ಹೂಡಿಕೆ: ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮೇಲೆ ಭಾರೀ ಹಣ ಹೂಡಿಕೆಯಿಂದಾಗಿ ಚೀನಾದ ಆಟೋ ವಲಯವು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ.

    ಟೆಸ್ಲಾ ಕಂಪನಿಯನ್ನು ಹಿಂದಿಕ್ಕಿದ ಚೀನಾದ ಬಿವೈಡಿ
    ಚೀನಾದ ಬಿವೈಡಿ ಕಂಪನಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚಿನ ಮಾರಾಟದಿಂದಾಗಿ ಟೆಸ್ಲಾ ಕಂಪನಿಯ ಸ್ಥಾನವನ್ನು ಕಸಿದುಕೊಂಡಿದೆ ಎಂದು ವರದಿಯಾಗಿದೆ. ಬಿವೈಡಿ ಕಂಪನಿಯು 1995 ರಲ್ಲಿ ಬ್ಯಾಟರಿ ತಯಾರಕನಾಗಿ ಕೆಲಸವನ್ನು ಪ್ರಾರಂಭಿಸಿತು. ನಂತರ ಈ ಕಂಪನಿ ಪ್ಲಗ್-ಇನ್ ಹೈಬ್ರಿಡ್ ಮತ್ತು ಆಲ್-ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವತ್ತ ತನ್ನ ಗಮನ ಹರಿಸಿದೆ.

    ಚೀನಾ EVಗಳು ಮತ್ತು ಕಾರುಗಳು ಅಗ್ಗವಾಗಲು 6 ಕಾರಣಗಳು
    ಸರ್ಕಾರದ ನೀತಿಗಳು ನಿಯಮಗಳು: ಚೀನಾ ರಫ್ತು ಆಧಾರಿತ ಆರ್ಥಿಕತೆಯಾಗಿದೆ. 2023 ರಲ್ಲಿ, ದೇಶವು 5 ಲಕ್ಷ ಕಾರುಗಳನ್ನು ರಫ್ತು ಮಾಡಿತ್ತು. ಇದು ವಿಶ್ವದ ಅತಿ ದೊಡ್ಡ ಕಾರು ರಫ್ತುದಾರನಾಗಲು ಕಾರಣವಾಯಿತು.

    ಸ್ಥಳೀಯ ವಾಹನ ತಯಾರಕರಿಗೆ ಸಬ್ಸಿಡಿಗಳು ಮತ್ತು ಪ್ರೋತ್ಸಾಹಗಳನ್ನು ಒದಗಿಸುವಲ್ಲಿ ಸರ್ಕಾರವು ಹೆಚ್ಚು ಗಮನಹರಿಸಿದೆ. ಈ ಪ್ರೋತ್ಸಾಹವು ತಯಾರಿಕಾ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಅಲ್ಲದೇ ಚೀನಾ ಸರ್ಕಾರವು ಇವಿ ವಲಯದಲ್ಲಿ ಭಾರೀ ಹೂಡಿಕೆ ಮಾಡಿದೆ. 2009 ರಿಂದ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಬೆಂಬಲಿಸಲು 29 ಶತಕೋಟಿ ಡಾಲರ್‌ಗೂ ಹೆಚ್ಚು ಹಣವನ್ನು ವಿನಿಯೋಗಿಸಿದೆ. ಅಲ್ಲದೆ, EV ಮಾರಾಟವನ್ನು ಉತ್ತೇಜಿಸಲು 520 ಶತಕೋಟಿ ಯುವಾನ್ (71.8 ಶತಕೋಟಿ ಡಾಲರ್) ಮಾರಾಟ ತೆರಿಗೆ ವಿನಾಯಿತಿಗಳ ಪ್ಯಾಕೇಜ್‌ ಘೋಷಿಸಿದೆ. ಇದರಿಂದ ಚೀನಾದಕಂಪನಿಗಳು ವಿಶ್ವದಲ್ಲೇ ಅಗ್ಗದ ಎಲೆಕ್ಟ್ರಿಕ್ ಕಾರುಗಳನ್ನು ಉತ್ಪಾದಿಸಲು ಸಮರ್ಥರಾಗಿದ್ದಾರೆ.

    ಕಡಿಮೆ ಕಾರ್ಮಿಕ ವೆಚ್ಚ: ಚೀನಾದಲ್ಲಿ ಕಾರ್ಮಿಕ ವೆಚ್ಚವು ಅನೇಕ ಪಾಶ್ಚಿಮಾತ್ಯ ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಉದಾಹರಣೆಗೆ, ಚೀನಾದಲ್ಲಿ ಅಸೆಂಬ್ಲಿ ಲೈನ್ ಕೆಲಸಗಾರರಿಗೆ ಗಂಟೆಯ ವೇತನವು 4.20 ಡಾಲರ್‌ ನಿಂದ ಪ್ರಾರಂಭವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೇರಿಕನ್ ಆಟೋ ಕಾರ್ಮಿಕರ ವೇತನ ಪ್ರತಿ ಗಂಟೆಗೆ ಸರಾಸರಿ 29 ಡಾಲರ್‌ ಇದೆ. ಕಾರ್ಮಿಕ ವೆಚ್ಚದಲ್ಲಿನ ಈ ಗಣನೀಯ ವ್ಯತ್ಯಾಸವು ಚೀನೀ ತಯಾರಕರು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ.

    ಕಡಿಮೆ ಕಚ್ಚಾವಸ್ತು ವೆಚ್ಚ: ಕಚ್ಚಾ ವಸ್ತುಗಳ ಸಂಗ್ರಹಣೆಯಲ್ಲಿ ಸ್ಥಳೀಯ ಸಂಪನ್ಮೂಲಗಳ ಕಾರಣದಿಂದಾಗಿ ವಾಹನಗಳಲ್ಲಿ ಬಳಸುವ ವಸ್ತುಗಳ ಬೆಲೆ ಸಾಮಾನ್ಯವಾಗಿ ಚೀನಾದಲ್ಲಿ ಕಡಿಮೆಯಾಗಿದೆ. ವಾಹನ ಉತ್ಪಾದನೆಯಲ್ಲಿ ಬಳಸುವ ಲೋಹಗಳು ಮತ್ತು ಖನಿಜಗಳು ಚೀನಾದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದು ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ, ಚೀನಾದಲ್ಲಿ ಬ್ಯಾಟರಿ ಬೆಲೆಗಳು ಯುಎಸ್‌ಗಿಂತ 24% ಕಡಿಮೆಯಾಗಿದೆ.

    ಕಾರು ಉತ್ಪಾದನೆ ಗುರಿ: 2024 ರ ಹೊತ್ತಿಗೆ, ಚೀನಾ ವಾಹನ ಮಾರಾಟ ಮತ್ತು ಉತ್ಪಾದನೆ ಎರಡರಲ್ಲೂ ಮುಂಚೂಣಿಯಲ್ಲಿದೆ. ದೇಶೀಯ ಉತ್ಪಾದನೆಯು 2025 ರ ವೇಳೆಗೆ 3.5 ಕೋಟಿ ಕಾರುಗಳನ್ನು ತಲುಪುವ ನಿರೀಕ್ಷೆಯಿದೆ.

    ಸ್ಥಳೀಯ ಪೂರೈಕೆದಾರರು: ಸಾರಿಗೆ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚು ಸ್ಥಳೀಯ ಪೂರೈಕೆದಾರರನ್ನು ಕಂಪನಿಗಳು ಅವಲಂಬಿಸಿವೆ. ಇದು ಒಟ್ಟಾರೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ನಿರ್ಣಾಯಕವಾಗಿದೆ.

    ತಂತ್ರಜ್ಞಾನ ಆವಿಷ್ಕಾರಗಳು: ಚೀನಾದ EV ಕಂಪನಿಗಳು ತಾಂತ್ರಿಕ ಆವಿಷ್ಕಾರದಲ್ಲಿ ಮುಂಚೂಣಿಯಲ್ಲಿವೆ. ಅವರು ಹೊಸ ಮಾದರಿಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಾಂಪ್ರದಾಯಿಕ ವಾಹನ ತಯಾರಕರಿಗಿಂತ 30% ವೇಗವನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ, ಇದು ಮಾರುಕಟ್ಟೆಯ ಬೇಡಿಕೆಗಳು ಮತ್ತು ಗ್ರಾಹಕರ ಆದ್ಯತೆಗಳಿಗೆ ತ್ವರಿತವಾಗಿ ಲಭ್ಯವಾಗುತ್ತಿದೆ.