Tag: europe travel

  • ಕೋವಿಡ್‌ ಲಸಿಕೆ ಪಡೆದವರು ಯೂರೋಪ್‌ಗೆ ಪ್ರಯಾಣಿಸಲು 9 ತಿಂಗಳಷ್ಟೇ ಮಾನ್ಯತೆ

    ಕೋವಿಡ್‌ ಲಸಿಕೆ ಪಡೆದವರು ಯೂರೋಪ್‌ಗೆ ಪ್ರಯಾಣಿಸಲು 9 ತಿಂಗಳಷ್ಟೇ ಮಾನ್ಯತೆ

    ನವದೆಹಲಿ: ಕೋವಿಡ್‌-19 ಲಸಿಕೆಯ ಎರಡು ಡೋಸ್‌ ಪಡೆದವರು ಯೂರೋಪ್‌ ದೇಶಗಳಿಗೆ ಪ್ರಯಾಣ ಬೆಳೆಸಲು 9 ತಿಂಗಳ ಅವಧಿಯ ಮಾನ್ಯತೆಯಷ್ಟೇ ಇರುತ್ತದೆ ಎಂದು ಯೂರೋಪಿಯನ್‌ ಒಕ್ಕೂಟವು ತನ್ನ ಹೊಸ ನಿಯಮಗಳಲ್ಲಿ ತಿಳಿಸಿದೆ.

    ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಕೋವಿಡ್‌ ಲಸಿಕೆಯ ಎರಡು ಡೋಸ್‌ ಪಡೆದು 9 ತಿಂಗಳು ಪೂರೈಸಿದ್ದರೆ ಅಂತಹವರಿಗೆ ಪ್ರಯಾಣ ಕೈಗೊಳ್ಳಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಭಾರತ-ಮ್ಯಾನ್ಮಾರ್ ಗಡಿಯಲ್ಲಿ 6.1 ತೀವ್ರತೆಯ ಭೂಕಂಪ

    ಇಯು ನ್ಯಾಯ ಆಯುಕ್ತ ಡಿಡಿಯರ್‌ ರೇಯ್‌ಮಂಡ್‌ ಅವರು ಆಂತರಿಕ ಇಯು ಪ್ರಯಾಣಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಘೋಷಿಸಿದ್ದಾರೆ. ಬಾಹ್ಯ ಪ್ರಯಾಣದ ಕುರಿತ ನಿಯಮಗಳನ್ನು ಮುಂದಿನ ವಾರ ಹೊರಡಿಸಲಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಯಲ್ಲಿ ಕೊರೊನಾ ಸ್ಫೋಟ – 33 ವಿದ್ಯಾಥಿಗಳಿಗೆ ಸೋಂಕು

    ಕೋವಿಡ್‌ ಲಸಿಕೆ ಎರಡು ಡೋಸ್‌ ಪಡೆದುಕೊಂಡವರು ಯೂರೋಪ್‌ಗೆ ಪ್ರಯಾಣಿಸಲು 9 ತಿಂಗಳ ಮಾನ್ಯತೆ ಇರುತ್ತದೆ. ನಂತರದ ಅವಧಿಗೆ ಪ್ರತಿಯೊಬ್ಬರೂ ಬೂಸ್ಟರ್‌ ಪಡೆಯುವ ಅಗತ್ಯವಿದೆ. ಆದರೆ ಬೂಸ್ಟರ್‌ ಶಾಟ್‌ಗಳ ಆಧಾರದ ಮೇಲೆ ನೀಡಲಾದ ಪ್ರಮಾಣ ಪತ್ರಗಳಿಗೆ ಮಾನ್ಯತೆಯ ಅವಧಿಯನ್ನು ಪ್ರಸ್ತಾಪಿಸಲು ಸಿದ್ಧವಿಲ್ಲ ಎಂದು ಇಯು ಹೇಳಿದೆ.