ಜಗತ್ತಿನಲ್ಲಿ ಹೊಸ ಬದಲಾವಣೆಗಳು ಆಗುತ್ತಿದ್ದಂತೆ ಅದರ ಜೊತೆ ಜೊತೆಗೆ ವಂಚನೆ, ಮೋಸ ಮಾಡುವ ವಿಧಾನವು ಕೂಡ ಬದಲಾಗುತ್ತಿದೆ.. ಒಂಥರ ಅಪಹಾಸ್ಯ ಎನಿಸಬಹುದು, ಆದರೆ ನಿಜ. ಆದರೆ ಅದರಂತೆ ಮುಂದಾಲೋಚನೆ ದೃಷ್ಟಿಯಿಂದ ತಾಂತ್ರಿಕ ಅಭಿವೃದ್ಧಿಯು ಹೆಚ್ಚಾಗುತ್ತಿದೆ. ಅದೇ ರೀತಿ ಇದೀಗ ಯುರೋಪ್ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ.
ಹೌದು, ಯುರೋಪ್ ಖಂಡವು ಇದೀಗ ಶೇಂಜಿನ್ ವಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವ್ಯವಸ್ಥೆಗಳನ್ನು ಜಾರಿಗೆ ತಂದಿದೆ. ಅದೇ EES ವ್ಯವಸ್ಥೆ. ಎಂಟ್ರಿ ಹಾಗೂ ಎಕ್ಸಿಟ್ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಅಕ್ಟೋಬರ್ 12ರಿಂದ ಈ ವ್ಯವಸ್ಥೆ ಯುರೋಪ್ ನ ಎಲ್ಲಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಜಾರಿಯಾಗಿದೆ. ಏನು ಈ ವ್ಯವಸ್ಥೆ? ಇದು ಹೇಗೆ ಕಾರ್ಯನಿರ್ವಹಿಸುತ್ತೆ? ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
EES ವ್ಯವಸ್ಥೆ ಎಂದರೇನು?
ವಿಮಾನ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆಯು ಡಿಜಿಟಲ್ ಮೂಲಕ ದಾಖಲಾಗಲಿದೆ. ಅಂದರೆ ನೀವು ಪ್ರವೇಶಿಸುವ ಹಾಗೂ ನಿರ್ಗಮಿಸುವುದೆಲ್ಲವೂ ಡಿಜಿಟಲೀಕರಣಗೊಳ್ಳಲಿದೆ. ಯುರೋಪ್ ನ ಶೇಂಜಿನ್ ವಲಯಕ್ಕೆ ಪ್ರವೇಶಿಸುವ ಎಲ್ಲಾ ಪ್ರವಾಸಿಗರು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೇಶಿಸಿದಾಗ ಈ ವ್ಯವಸ್ಥೆಯ ಮೂಲಕ ಅವರ ದಾಖಲೆಗಳು ಡಿಜಿಟಲೀಕರಣ ಗೊಳ್ಳುತ್ತವೆ. ಈ ಮೊದಲು ಯಾವುದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಲ್ಲಿನ ಅಧಿಕಾರಿಗಳು ಪಾಸ್ಪೋರ್ಟ್ ಸಂಗ್ರಹಿಸಿ, ಅದಕ್ಕೆ ಮುದ್ರೆ ಹಾಕುತ್ತಾರೆ. ಈ ಎಲ್ಲಾ ಹಂತಗಳು ಇನ್ನು ಮುಂದೆ ಡಿಜಿಟಲೀಕರಣಗೊಳ್ಳಲಿವೆ.
ವೈಯಕ್ತಿಕ ಡೇಟಾ, ಬಯೋಮೆಟ್ರಿಕ್ (ಬೆರಳಚ್ಚು ಹಾಗೂ ಫೇಸ್ ರಿಕಗ್ನಿಷನ್) ಹಾಗೂ ಪ್ರವೇಶ ಮತ್ತು ನಿರ್ಗಮನಗಳನ್ನು ಈ ವ್ಯವಸ್ಥೆಯು ದಾಖಲಿಸುತ್ತದೆ. ಒಂದು ಬಾರಿ ಶೇಂಜಿನ್ ವಲಯವನ್ನು ಪ್ರವೇಶಿಸಿದಾಗ ಎಲ್ಲಾ ಮಾಹಿತಿಗಳು ಸಂಗ್ರಹವಾದ ಬಳಿಕ, ಪ್ರತಿ ಬಾರಿ ಶೇಂಜಿನ್ ವಲಯದ ಯಾವುದೇ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಪ್ರವೇಶ ಹಾಗೂ ನಿರ್ಗಮನವನ್ನು ಸ್ವಯಂ ಚಾಲಿತವಾಗಿ ಈ ವ್ಯವಸ್ಥೆ ದಾಖಲಿಸಿಕೊಳ್ಳುತ್ತದೆ.
ಪ್ರವಾಸಿಗರು ಒಂದು ದೇಶದಲ್ಲಿ ಎಷ್ಟು ಸಮಯಗಳ ಕಾಲ ಇರುತ್ತಾರೆ ಹಾಗೂ ಯಾವಾಗ ಅಲ್ಲಿಂದ ಹೊರ ಹೋಗುತ್ತಾರೆ ಎನ್ನುವ ಎಲ್ಲಾ ಮಾಹಿತಿಯನ್ನು ಇದು ತನ್ನಲ್ಲಿ ದಾಖಲಿಸಿಕೊಳ್ಳುತ್ತದೆ. ಈ ನಿಯಮ ಯುರೋಪ್ ಒಕ್ಕೂಟದ ಹೊರಗಿನ ಎಲ್ಲಾ ಪ್ರಯಾಣಿಕರಿಗೆ ಅನಿಸುತ್ತದೆ. ಕಡಿಮೆ ಸಮಯದ ಪ್ರವಾಸಕ್ಕಾಗಿ ವೀಸಾ ಇಲ್ಲದೆ ಆಗಮಿಸುವವರಿಗೂ ಕೂಡ ಇದು ಅನ್ವಯಿಸುತ್ತದೆ.
ಈ ವ್ಯವಸ್ಥೆಗೆ ಕಾರಣ?
ಇತ್ತೀಚಿನ ವರ್ಷಗಳಲ್ಲಿ ಯುರೋಪ್ ಗಡಿಗಳಲ್ಲಿ ಕೆಲವು ಸಮಸ್ಯೆಗಳು ಉಂಟಾಗುತ್ತಿದ್ದು, ಅದರ ನಿರ್ವಹಣೆ ತುಂಬಾ ಕಷ್ಟವಾಗಿದೆ. ಅದಲ್ಲದೆ ಯುರೋಪ್ ಒಕ್ಕೂಟದ ಹೆಚ್ಚಿನ ಪ್ರದೇಶದಲ್ಲಿ ಪಾಸ್ಪೋರ್ಟ್ ಇಲ್ಲದೆ ಪ್ರಯಾಣಿಸಿರುವುದು ಹಾಗೂ ಶೇಂಜಿನ್ ಪ್ರದೇಶದಿಂದ ಲಕ್ಷಾಂತರ ಜನರು ಪಾಸ್ಪೋರ್ಟ್ ಇಲ್ಲದೆ ಗಡಿ ದಾಟಿರುವುದು ಕಂಡು ಬಂದಿದೆ.
EES ವ್ಯವಸ್ಥೆಯ ಗುರಿ ಏನು?
– ಹಳೆಯ ಪಾಸ್ಪೋರ್ಟ್ ಮೇಲೆ ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ತೆಗೆದು, ದೋಷಗಳನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ.
– ಪ್ರವಾಸಿಗರು ದೇಶಕ್ಕೆ 90 ದಿನಗಳಿಗೆ ಮಾತ್ರ ಪ್ರವೇಶಿಸುವಂತೆ ಮಾಡುವುದು
– ಬಯೋಮೆಟ್ರಿಕ್ ಹಾಗೂ ಫೇಸ್ ರಿಕಗ್ನಿಷನ್ ಮೂಲಕ ಕ್ರಮ ಪ್ರವೇಶ ಹಾಗೂ ವಂಚನೆ ನ ತಡೆಯುವ ಉದ್ದೇಶವನ್ನು ಹೊಂದಿದೆ.
ಹೊಸ ವ್ಯವಸ್ಥೆ ಹೇಗೆ ಕೆಲಸ ಮಾಡಲಿದೆ?
ಯುರೋಪಿನ ಯಾವುದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಪಾಸ್‌ಪೋರ್ಟ್ ನೀಡುವ ಸೆಕ್ಷನ್ ಅಲ್ಲಿ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಲಾಗುವುದು. ಅದಾದ ಬಳಿಕ ಪಾಸ್‌ಪೋರ್ಟ್ ಅನ್ನು ಸ್ಕ್ಯಾನ್ ಮಾಡಿ ಬಳಿಕ ಬೆರಳಚ್ಚು ಹಾಗೂ ಫೇಸ್ ರಿಕಗ್ನಿಷನ್ ಮಾಡಲಾಗುತ್ತದೆ. ಈ ಮೂಲಕ EES ವ್ಯವಸ್ಥೆಗೆ ಡೇಟಾ ದಾಖಲಾಗುತ್ತದೆ. ಇಲ್ಲಿ ವ್ಯಕ್ತಿಯ ಪ್ರಯಾಣದ ಪ್ರೊಫೈಲ್ ರಚನೆಯಾಗುತ್ತದೆ. ಇದಾದ ನಂತರ ಪ್ರವೇಶ ದಾಖಲಾಗುತ್ತದೆ.
ಇದಾದ ಬಳಿಕ ಇನ್ನೊಮ್ಮೆ ಯುರೋಪ್ ಪ್ರವಾಸಕ್ಕೆ ಹೋದಾಗ ಈ ಎಲ್ಲಾ ಹಂತಗಳನ್ನು ವಿಮಾನ ನಿಲ್ದಾಣದಲ್ಲಿ ಪುನರಾವರ್ತಿಸುವ ಅಗತ್ಯವಿರುವುದಿಲ್ಲ. ಕೇವಲ ಬೆರಳಚ್ಚು ಹಾಗೂ ಫೇಸ್ ರಿಕಗ್ನಿಶನ್ ಮಾಡಿದರೆ ಸುಲಭವಾಗಿ ಪ್ರವೇಶಿಸಬಹುದು.
ಈ ವ್ಯವಸ್ಥೆಯು ಯುರೋಪ್ ಒಕ್ಕೂಟದ ಹೊರಗಿನ ಎಲ್ಲಾ ಪ್ರಯಾಣಿಕರಿಗೂ ಅನ್ವಯಿಸುತ್ತದೆ. ಶೇಂಜಿನ್ ವೀಸಾ ಹೊಂದಿರುವ ಭಾರತೀಯ ನಾಗರಿಕರಿಗೂ ಹಾಗೂ ಪ್ರವಾಸಿಗರು ಸೇರಿದಂತೆ ಎಲ್ಲರಿಗೂ ಇದು ಅನ್ವಯಿಸುತ್ತದೆ. ಅಮೆರಿಕ, ಯುಕೆ ಹಾಗೂ ಕೆನಡಾದಂತಹ ವಿಚಾರ ಹಿತ ದೇಶದ ನಾಗರಿಕರಿಗೂ ಇದು ಅನ್ವಯಿಸುತ್ತದೆ.
ಇನ್ನು ಯುರೋ ಒಕ್ಕೂಟದ ನಾಗರಿಕರಿಗೆ ಹಾಗೂ ದೀರ್ಘಕಾಲಿನ ವೀಸಾ ಹೊಂದಿರುವವರಿಗೆ ಈ ವ್ಯವಸ್ಥೆ ಅನ್ವಯಿಸುತ್ತದೆ. 12 ವರ್ಷದೊಳಗಿನ ಮಕ್ಕಳಿಗೆ ಫಿಂಗರ್ ಪ್ರಿಂಟ್‌ನಿಂದ ವಿನಾಯಿತಿ ನೀಡಲಾಗುತ್ತದೆ. ಈ ಮೂಲಕ ಯುರೋಪ್ ನಲ್ಲಿ ಕ್ರಮೇಣವಾಗಿ ಪಾಸ್‌ಪೋರ್ಟ್ ಸ್ಟ್ಯಾಂಪಿಂಗ್ ವ್ಯವಸ್ಥೆಯು ಕಡಿಮೆಯಾಗುತ್ತಿದೆ.
ವಾಷಿಂಗ್ಟನ್: ಭಾರತದ (India) ಮೇಲೆ ತಾನು ಹೇಗೆ ಸುಂಕ ವಿಧಿಸಿದ್ದೇನೋ ಅದೇ ರೀತಿ ನೀವು ಸುಂಕ ವಿಧಿಸಬೇಕೆಂದು ಯುರೋಪಿಯನ್ ಒಕ್ಕೂಟಗಳಿಗೆ (European Union) ಟ್ರಂಪ್ ಸರ್ಕಾರ ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ 25% ತೆರಿಗೆ ವಿಧಿಸಿದ ಅಮೆರಿಕ ಈಗ ರಷ್ಯಾದಿಂದ (Russia) ಕಚ್ಚಾ ತೈಲವನ್ನು (Crude Oil) ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ವಿಧಿಸಿದೆ. ಹೀಗಾಗಿ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 50% ಸುಂಕ ಹೇರಿದೆ. ಇದನ್ನೂಓದಿ: ಆಮದುಸುಂಕಕಾನೂನುಬಾಹಿರ: ಟ್ರಂಪ್ಗೆಯುಎಸ್ ಕೋರ್ಟ್ನಿಂದಲೇಛೀಮಾರಿ
ತಾನು ಹೇರಿದ ಸುಂಕಾಸ್ತ್ರ ಅಷ್ಟೊಂದು ಪರಿಣಾಮ ಬೀರದ ಕಾರಣ ಅಮೆರಿಕ ಈಗ ಯುರೋಪ್ ದೇಶಗಳನ್ನು ಒತ್ತಾಯಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದೇ ಇದ್ದರೆ ಯುರೋಪ್ ಭಾರತದ ಮೇಲೆ ದ್ವಿತೀಯ ಸುಂಕಗಳನ್ನು ವಿಧಿಸಬೇಕೆಂದು ಶ್ವೇತ ಭವನ (White House) ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂಓದಿ: PublicTV Explainer: ಟ್ರಂಪ್ಟ್ಯಾರಿಫ್ವಾರ್–ಭಾರತದಯಾವವಲಯಗಳಮೇಲೆಪ್ರಭಾವಹೆಚ್ಚು?
ರಷ್ಯಾ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತಿರುವುದರಿಂದ ರಷ್ಯಾ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾತುಕತೆ ನಡೆಸಲಿರುವ ಬೆನ್ನಲ್ಲೇ ಅಮೆರಿಕದ ಒತ್ತಡ ಹೆಚ್ಚಾಗುತ್ತಿದೆ.
ರಣದೀಪ್ ಸುರ್ಜೇವಾಲಾ ಅವರು ರಾಜ್ಯದಲ್ಲಿ ಸರಣಿ ಸಭೆ ನಡೆಸುತ್ತಿದ್ದಾರೆ. ಹೀಗಾಗಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು, ನಾನು ಯುರೋಪ್‌ಗೆ ಹೋಗಬೇಕು, ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ನಿಮ್ಮ ಮೀಟಿಂಗ್ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಾಸ್ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ರಾಜಣ್ಣ ಪುತ್ರ ರಾಜೇಂದ್ರ ಮಾತನಾಡಿ, ನಮ್ಮ ತಂದೆ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ. ನಮ್ಮ ತಾಯಿ, ಅವರ ಕಸಿನ್ಸ್ ಜೊತೆ ಹೋಗಿದ್ದಾರೆ, ಒಂದೂವರೆ ತಿಂಗಳ ಹಿಂದೆ ನಿಗದಿಯಾಗಿತ್ತು. ಸುರ್ಜೇವಾಲಾ ಅವರ ಗಮನಕ್ಕೆ ತಂದಿದ್ದಾರೆ. ಮೌಖಿಕವಾಗಿ ಮಾತನಾಡಿದ್ದಾರೆ. ವಿದೇಶ ಪ್ರವಾಸದಿಂದ ಬಂದ ಬಳಿಕ ಸುರ್ಜೇವಾಲಾ ಅವರನ್ನ ಭೇಟಿ ಮಾಡುತ್ತಾರೆ. ಪ್ರವಾಸಕ್ಕೆ ಹೋಗುವುದನ್ನ ಸಿಎಂ ಅವರ ಗಮನಕ್ಕೆ ತಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಲ್ಲಿ ಭಾರತ ಅದ್ಭುತ ಸಾಧನೆ – ಪ್ರಧಾನಿ ಮೋದಿ ಶ್ಲಾಘನೆ
ವ್ಯಾಟಿಕನ್ ಸಿಟಿ: ಕ್ಯಾಥೋಲಿಕ್ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್ (Pope Francis) ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶ ಮೇ 7ರಿಂದ ಆರಂಭವಾಗಲಿದೆ.
ಅನಾರೋಗ್ಯದಿಂದ ಏ.21 ರಂದು ನಿಧನರಾದ ಕ್ರಿಶ್ಟಿಯನ್ ಕ್ಯಾಥೋಲಿಕ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆ ಏ.26ರಂದು ನೆರವೇರಿದೆ. ಅಂತ್ಯಕ್ರಿಯೆ ಬಳಿಕ ಸೋಮವಾರ ಕಾರ್ಡಿನಲ್‌ಗಳ ಅನೌಪಚಾರಿಕ ಸಭೆ ನಡೆಸಲಾಗಿತ್ತು. ಸಭೆಯಲ್ಲಿ 180ಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶದ ದಿನಾಂಕ ಪ್ರಕಟಿಸಲಾಗಿದೆ.ಇದನ್ನೂ ಓದಿ:ಹೊಸ ಪೋಪ್ ಆಯ್ಕೆ ಹೇಗೆ ಮಾಡಲಾಗುತ್ತೆ? ಹೊಗೆ ಹಾಕೋದು ಯಾಕೆ?
ಹೊಸ ಪೋಪ್ ಆಯ್ಕೆಗೆ ಮತದಾನ ನಡೆಯಲಿದ್ದು, ಕಾರ್ಡಿನಲ್ ಕಾಲೇಜು ಎಂದು ಕರೆಯಲ್ಪಡುವ 135 ಮಂದಿಯ ಸಣ್ಣ ಗುಂಪು ಮತದಾನ ಮಾಡಲಿದೆ.
ಹೊಸ ಪೋಪ್ ಆಯ್ಕೆ ಹೇಗೆ?
ಪೋಪ್ ನಿಧನರಾದ 15 ರಿಂದ 20 ದಿನಗಳ ಬಳಿಕ ನೂತನ ಪೋಪ್ ಆಯ್ಕೆಯ ಪ್ರಕ್ರಿಯೆ ಆರಂಭವಾಗುತ್ತದೆ. 80 ವರ್ಷದೊಳಗಿನ ಕಾರ್ಡಿನಲ್‌ಗಳು ವಿಶ್ವದ ವಿವಿಧೆಡೆಯಿಂದ ವ್ಯಾಟಿಕನ್‌ಗೆ ಆಗಮಿಸುತ್ತಾರೆ. ಬಳಿಕ ಪೋಪ್ ಆಯ್ಕೆಗಾಗಿ ಸಂತಾ ಮಾರ್ತಾನಲ್ಲಿ ಕಾರ್ಡಿನಲ್‌ಗಳು ಚರ್ಚೆ ನಡೆಸುತ್ತಾರೆ. ಸಿಸ್ಟೀನ್ ಛಾಪೆಲ್‌ನಲ್ಲಿ ಈ ಮತದಾನ ಪ್ರಕ್ರಿಯೆಯು ನಡೆಯುತ್ತದೆ.
ಎಲ್ಲಾ ಕಾರ್ಡಿನಲ್‌ಗಳು ಈ ಚರ್ಚೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ಚರ್ಚೆಯಲ್ಲಿ ಯಾರು ಹೇಗೆ ಮಾತನಾಡುತ್ತಾರೆ. ಅವರ ಧಾರ್ಮಿಕ ಜ್ಞಾನದ ಆಧಾರದ ಮೇಲೆ ಒಬ್ಬರನ್ನು ಆಯ್ಕೆ ಮಾಡುತ್ತಾರೆ. ಇವರಲ್ಲಿ ಒಬ್ಬರು ಮೂರನೇ ಎರಡಷ್ಟು ಮತ ಪಡೆಯುವವರೆಗೂ ದಿನದಲ್ಲಿ 2 ಬಾರಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಇದು ಒಂದೇ ದಿನದಲ್ಲಿ ಮುಗಿಯುವ ಪ್ರಕ್ರಿಯೆಯಲ್ಲ.ಇದನ್ನೂ ಓದಿ:Pahalgam Attack | ಟಿಆರ್‌ಎಫ್‌ಗೆ ಭಾರತೀಯ ಯುವಕರೇ ಟಾರ್ಗೆಟ್ – ಈ ಭಯೋತ್ಪಾದಕ ಗುಂಪು ಹೇಗೆ ಕೆಲಸ ಮಾಡುತ್ತೆ?
ಈ ಮತದಾನ ಪ್ರಕ್ರಿಯೆಯು ತುಂಬಾ ರಹಸ್ಯವಾಗಿ ನಡೆಯುತ್ತದೆ. ಈ ಉದ್ದೇಶದಿಂದ ಅವರನ್ನು ಒಂದು ಸ್ಥಳಕ್ಕೆ ಸೇರಿಸಿ ಹೊರಗಿನಿಂದ ಬೀಗ ಹಾಕಲಾಗುತ್ತದೆ. ಬಾಹ್ಯ ಪ್ರಪಂಚದ ಸಂಪರ್ಕದಿಂದ ಅವರನ್ನು ದೂರ ಇಡಲಾಗುತ್ತದೆ. ಅಲ್ಲಿ ಫೋನ್ ಸೌಲಭ್ಯವೂ ಇರುವುದಿಲ್ಲ.
ಕಪ್ಪು, ಬಿಳಿ ಹೊಗೆಯ ಸಂಕೇತ:
ಜನರಿಗೆ ಪ್ರತಿದಿನವು ಪೋಪ್ ಆಯ್ಕೆಯ ಮಾಹಿತಿಯನ್ನು ನೀಡಲಾಗುತ್ತದೆ. ಈ ಆಯ್ಕೆಯ ಮಾಹಿತಿಯನ್ನು ಕಪ್ಪು, ಬಿಳಿ ಹೊಗೆಯ ಸಂಕೇತದ ಮೂಲಕ ತಿಳಿಸಲಾಗುತ್ತದೆ. 3ನೇ 2ರಷ್ಟು ಮತ ಪಡೆದವರು ಪೋಪ್ ಆಗಿ ಆಯ್ಕೆ ಆಗುತ್ತಾರೆ. ಆಯ್ಕೆ ಆಗದೇ ಇರುವುದನ್ನು ಸೂಚಿಸಲು ಕಪ್ಪು ಹೊಗೆಯನ್ನು ಹೊರಬಿಡಲಾಗುತ್ತದೆ. ಆಯ್ಕೆ ಆಗಿರುವುದನ್ನು ಸೂಚಿಸಲು ಬಿಳಿ ಹೊಗೆಯನ್ನು ಹೊರಸೂಸಲಾಗುತ್ತದೆ. ಈ ಬಿಳಿ ಹೊಗೆ ಕ್ರೈಸ್ತ್ರರ ಅಧಿಕೃತ ಪೋಪ್ ಆಯ್ಕೆಯ ಸಂಕೇತವಾಗಿರುತ್ತದೆ.
ಒಣ ಹುಲ್ಲುಗಳನ್ನು ಸುಡುವ ಮೂಲಕ ಕಪ್ಪುಹೊಗೆಯು ಕಾಣಿಸುತ್ತದೆ. ಬಿಳಿ ಹೊಗೆ ಕಾಣಿಸಲು ಹಸಿ ಹುಲ್ಲುಗಳನ್ನು ಸುಡಲಾಗುತ್ತಿತ್ತು. ಆದರೆ ಈಗ ರಾಸಾಯನಿಕಗಳನ್ನು ಬಳಸುವ ಮೂಲಕ ಕಪ್ಪು ಹಾಗೂ ಬಿಳಿ ಹೊಗೆಯನ್ನು ತೋರಿಸಲಾಗುತ್ತದೆ. ಈ ಮತದಾನ ಪ್ರಕ್ರಿಯೆಯು ರಹಸ್ಯವಾಗಿರುವುದರಿಂದ ಮತದಾನದ ಪತ್ರಗಳನ್ನು ಸುಡಲಾಗುತ್ತದೆ.ಇದನ್ನೂ ಓದಿ:ಮನೆಯಲ್ಲೇ ಮಾಡಿ ಹಲಸಿನ ಹಣ್ಣಿನ ಐಸ್‌ಕ್ರೀಮ್!
– ‘ಬಿಕ್ಕಟ್ಟು ಅಥ್ವಾ ಯುದ್ಧ ಆದ್ರೆ’; 32 ಪುಟಗಳ ಕಿರುಪುಸ್ತಕ ರಿಲೀಸ್ – ಜನರಿಗೆ ಲಕ್ಷ ಲಕ್ಷ ಪ್ರತಿ ಹಂಚುತ್ತಿರುವ ಪುಸ್ತಕದಲ್ಲೇನಿದೆ?
ವಿಶ್ವದಲ್ಲಿ ಮೂರನೇ ಮಹಾಯುದ್ಧ (World War 3) ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಒಂದೆಡೆ ರಷ್ಯಾ-ಉಕ್ರೇನ್ ಯುದ್ಧ ಮತ್ತೊಂದೆಡೆ ಇಸ್ರೇಲ್-ಇರಾನ್ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಯುದ್ದೋನ್ಮಾದ ಹೆಚ್ಚುತ್ತಿದೆ. ಒಬ್ಬರ ಮೇಲೊಬ್ಬರು ಹಗೆಯ ಶಸ್ತಾçಸ್ತçಗಳನ್ನು ಪ್ರಯೋಗಿಸುತ್ತಿದ್ದಾರೆ. ಪರಮಾಣು ಯುದ್ಧವಾದರೆ ಏನಾಗುತ್ತದೆಯೋ ಎಂಬ ಆತಂಕ ಜಗತ್ತಿನ ರಾಷ್ಟ್ರಗಳಲ್ಲಿ ಮನೆಮಾಡಿದೆ. 3ನೇ ಮಹಾಯುದ್ಧ ಊಹಿಸುವುದು ಬಲು ಕಷ್ಟ. ಜಗತ್ತಿನಲ್ಲಿ ಗತಿಸಿದ ಎರಡು ಮಹಾಯುದ್ಧಗಳಿಂದ ಸತ್ತವರ ಸಂಖ್ಯೆ ಅದೆಷ್ಟೋ. ದಶಕಗಳ ಹಿಂದೆ ಅಣುಬಾಂಬ್ ದಾಳಿಗೆ ತುತ್ತಾದ ನಗರಗಳು ಈಗಲೂ ಅದರ ಪರಿಣಾಮ ಎದುರಿಸುತ್ತಿವೆ. ಲಕ್ಷಾಂತರ ಜನರ ಮಾರಣಹೋಮ, ಬದುಕಿದವರ ಡೋಲಾಯಮಾನ ಸ್ಥಿತಿ, ಬಿಕ್ಕಟ್ಟುಗಳ ಸರಮಾಲೆ, ಅಸ್ತಿತ್ವದ ಪ್ರಶ್ನೆ ಎಲ್ಲವೂ ಕಾಡುತ್ತದೆ. ಮಾನವಪ್ರೇರಿತ ದುರಂತಗಳು ಜಗತ್ತನ್ನು ವಿನಾಶದ ಅಂಚಿಗೆ ನೂಕುತ್ತವೆ. ಈಗ ಮತ್ತದೇ ಯುದ್ಧದ ಕಾರ್ಮೋಡದ ಭೀತಿ ಆವರಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ಭರ್ತಿ 1,000 ದಿನ ಪೂರೈಸಿದೆ. ಈ ಹೊತ್ತಿನಲ್ಲಿ, ಅಮೆರಿಕ ನಿರ್ಮಿತ ದೀರ್ಘ ಶ್ರೇಣಿಯ ಕ್ಷಿಪಣಿಗಳನ್ನು ರಷ್ಯಾ ಮೇಲೆ ಉಡಾಯಿಸಲು ಉಕ್ರೇನ್‌ಗೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕರೆ ನೀಡಿದರು. ಅದರಂತೆ ರಷ್ಯಾ ಮೇಲೆ ಉಕ್ರೇನ್ ಕ್ಷಿಪಣಿಗಳನ್ನು ಪ್ರಯೋಗಿಸಿತು. ಇತ್ತ ಪರಮಾಣು ದಾಳಿಗಳಿಗೆ ಇದ್ದ ಬಿಗಿ ನಿಯಮಗಳನ್ನು ಸಡಿಲಗೊಳಿಸುವ ನೀತಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಹಿ ಹಾಕಿದ್ದಾರೆ. ಮತ್ತೊಂದು ಕಡೆ ಇಸ್ರೇಲ್-ಇರಾನ್ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಎಲ್ಲಾ ಬೆಳವಣಿಗೆಗಳು 3ನೇ ಮಹಾಯುದ್ಧ ಸಾಧ್ಯತೆಯ ಆತಂಕ ಮೂಡಿಸಿವೆ. ಇದರ ನಡುವೆ ಅದಾಗಲೇ ಕೆಲವು ರಾಷ್ಟçಗಳು ಯುದ್ಧದ ಪರಿಣಾಮಗಳನ್ನು ಮೆಟ್ಟಿ ನಿಲ್ಲಲು ತಮ್ಮ ನಾಗರಿಕರಿಗೆ ಎಚ್ಚರಿಕೆ ಕರೆ ನೀಡಿವೆ. ಯುದ್ಧ ನಡೆದು ಬಿಕ್ಕಟ್ಟು ತಲೆದೋರಿದರೆ ಅದನ್ನು ಹೇಗೆ ಎದುರಿಸಬೇಕು ಎಂದು ಜನರಿಗೆ ಮಾರ್ಗದರ್ಶನ ನೀಡುತ್ತಿವೆ. ಹೆಚ್ಚಿದ ಭದ್ರತಾ ಬೆದರಿಕೆಗಳು ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳ ಮಧ್ಯೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ತಮ್ಮ ನಾಗರಿಕರನ್ನು ಯುದ್ಧದಿಂದಾಗುವ ಸಂಭಾವ್ಯ ಬಿಕ್ಕಟ್ಟುಗಳಿಗೆ ಸಿದ್ಧರಾಗುವಂತೆ ಸೂಚಿಸಿದೆ.
ಬಿಕ್ಕಟ್ಟು ಅಥವಾ ಯುದ್ಧ ಆದ್ರೆ?
ಸ್ವೀಡನ್‌ನ (Sweden) ಮಾಜಿ ಸೇನಾ ಮುಖ್ಯಸ್ಥ ಮೈಕೆಲ್ ಬೈಡೆನ್ ಈಚೆಗೆ ಒಂದು ಕರೆ ನೀಡಿದ್ದರು. ‘ಸ್ವೀಡನ್ ಜನತೆ ಮಾನಸಿಕವಾಗಿ ಯುದ್ಧಕ್ಕೆ ಸಿದ್ಧರಾಗಬೇಕು’ ಎಂದು ಹೇಳಿದ್ದರು. ಇದನ್ನು ಸರ್ಕಾರ ಅಭಿಯಾನವಾಗಿ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ, ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ದೇಶಗಳು ‘ಬಿಕ್ಕಟ್ಟು ಅಥವಾ ಯುದ್ಧ ನಡೆದರೆ’ ಎಂಬ ಶೀರ್ಷಿಕೆಯ ಕಿರುಪುಸ್ತಕವನ್ನು ಹೊರತಂದಿದೆ. ಅದನ್ನು ತಮ್ಮ ನಾಗರಿಕರಿಗೆ ಲಕ್ಷ ಲಕ್ಷ ಪ್ರತಿಗಳನ್ನಾಗಿ ಮುದ್ರಿಸಿ ಹಂಚುತ್ತಿದೆ. ಸುಮಾರು 32 ಪುಟಗಳ ಈ ಕಿರುಪುಸ್ತಕವು ಯುದ್ಧದಂತಹ ಬಿಕ್ಕಟ್ಟಿನ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಮುನೆಚ್ಚರಿಕೆಯಾಗಿ ಏನೇನು ಕ್ರಮಕೈಗೊಳ್ಳಬೇಕು ಎಂಬುದರ ಸಾರವನ್ನು ಒಳಗೊಂಡಿದೆ. ನಿಜಕ್ಕೂ ಅದರಲ್ಲಿರುವ ಅಂಶಗಳು ಕುತೂಹಲಕರಿಯಾಗಿವೆ.
ಸ್ವೀಡನ್ ಬಿಕ್ಕಟ್ಟಿನ ಬುಕ್‌ಲೆಟ್ ಲಕ್ಷ ಲಕ್ಷ ಹಂಚಿಕೆ
ಸ್ವೀಡಿಷ್ ಸಿವಿಲ್ ಕಾಂಟಿಎಜೆನ್ಸಿಸ್ ಏಜೆನ್ಸಿ (ಎಂಎಸ್‌ಬಿ), ‘ಬಿಕ್ಕಟ್ಟು ಅಥವಾ ಯುದ್ಧ ಬಂದರೆ’ ಶೀರ್ಷಿಕೆಯ ಬಿಕ್ಕಟ್ಟಿನ ಸನ್ನದ್ಧತೆಯ ಕಿರುಪುಸ್ತಕದ ಆವೃತ್ತಿಯನ್ನು ಐದು ದಶಲಕ್ಷಕ್ಕೂ ಹೆಚ್ಚು ಮನೆಗಳಿಗೆ ವಿತರಿಸಲು ಪ್ರಾರಂಭಿಸಿದೆ. ಸ್ವೀಡನ್ 2ನೇ ಮಹಾಯುದ್ಧದಲ್ಲಿ ಇದೇ ರೀತಿ ತನ್ನ ನಾಗರಿಕರಿಗಾಗಿ ಐದು ಬಾರಿ ಕರಪತ್ರಗಳನ್ನು ಹಂಚಿತ್ತು. ಅದನ್ನು ನವೀಕರಿಸಿ ಕಿರುಪುಸ್ತಕ ಬಿಡುಗಡೆ ಮಾಡಿದೆ. ವಿಶ್ವ ಸಮರ 3 ರ ಜೊತೆಗೆ ಎದುರಾಗಬಹುದಾದ ಸೈಬರ್ ದಾಳಿಗಳು, ಭಯೋತ್ಪಾದನೆ ಮತ್ತು ಹವಾಮಾನ ವೈಪರಿತ್ಯದಂತಹ ಸಮಕಾಲೀನ ಸಮಸ್ಯೆಗಳಿಗೆ ಸಜ್ಜಾಗಲು ಕಿರುಪುಸ್ತಕದಲ್ಲಿ ತಿಳಿಸಲಾಗಿದೆ. ಎಂಎಸ್‌ಬಿ ನಿರ್ದೇಶಕ ಮೈಕೆಲ್ ಫ್ರಿಸೆಲ್ ಅವರು ಪುಸ್ತಕದಲ್ಲಿ ವಿವರ ನೀಡಿದ್ದಾರೆ. ‘ಭದ್ರತಾ ಪರಿಸ್ಥಿತಿಯು ಗಂಭೀರವಾಗಿದೆ. ನಾವೆಲ್ಲರೂ ವಿವಿಧ ಬಿಕ್ಕಟ್ಟುಗಳು ಮತ್ತು ಅಂತಿಮವಾಗಿ ಯುದ್ಧವನ್ನು ಎದುರಿಸಲು ನಮ್ಮ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಬೇಕಾಗಿದೆ’ ಎಂದು ಕರೆ ನೀಡಿದ್ದಾರೆ.
ಕಿರುಪುಸ್ತಕದಲ್ಲಿ ಏನಿದೆ?
ನೀರು, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಸಂಗ್ರಹಿಸುವುದು, ವಿದ್ಯುತ್ ಮತ್ತು ಸಂವಹನ ಕಡಿತಕ್ಕೆ ಈಗಲಿಂದಲೇ ತಯಾರಿ ಮಾಡುವುದು, ಬಿಕ್ಕಟ್ಟಿನ ಸಮಯದಲ್ಲಿ ಆತಂಕವನ್ನು ನಿಭಾಯಿಸುವುದು, ಶಿಶುಗಳಿಗಾಗಿ ಆಹಾರ ಮತ್ತು ಔಷಧಿಗಳನ್ನು ಸಂರಕ್ಷಿಸುವುದು, ತುರ್ತು ಸಂದರ್ಭಗಳಲ್ಲಿ ಸಾಕುಪ್ರಾಣಿಗಳ ಆರೈಕೆಯನ್ನು ಖಾತ್ರಿಪಡಿಸುವುದು ಮುಂತಾದ ಪ್ರಾಯೋಗಿಕ ಸಲಹೆಯನ್ನು ಕಿರುಪುಸ್ತಕ ನೀಡಿದೆ. ಜೊತೆಗೆ, ರಾಷ್ಟ್ರೀಯ ಏಕತೆ ಮತ್ತು ಪ್ರತಿರೋಧವನ್ನು ಸಹ ಒತ್ತಿಹೇಳುತ್ತದೆ. ‘ಸ್ವೀಡನ್ ಅನ್ನು ಇನ್ನೊಂದು ದೇಶವು ಆಕ್ರಮಣ ಮಾಡಿದರೆ, ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ಪ್ರತಿರೋಧ ಇರುವುದಿಲ್ಲ ಎಂದುಕೊಳ್ಳುವ ಮಾಹಿತಿಯು ಸುಳ್ಳು’ ಎಂದು ಸ್ಪಷ್ಟಪಡಿಸಲಾಗಿದೆ.
ಸುಲಭವಾಗಿ ಬೇಯಿಸಬಹುದಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ. ದೇಹಕ್ಕೆ ಅಗತ್ಯ ಪೋಷಕಾಂಶ ನೀಡುವ ತಿನಿಸುಗಳು ಮತ್ತು ಔಷಧಿಗಳನ್ನು ಶೇಖರಿಸಿಕೊಳ್ಳಿ. ಯುದ್ಧ ನಡೆದರೆ ಕನಿಷ್ಠ ಮೂರು ದಿನಗಳ ವರೆಗೆ ನಿಮ್ಮ ಅಗತ್ಯಗಳನ್ನು ನೀವೇ ಪೂರೈಸಿಕೊಳ್ಳುವಷ್ಟು ಈಗಲಿಂದಲೇ ಸಿದ್ಧತೆ ಮಾಡಿಕೊಳ್ಳಿ. ಪರಮಾಣು ದಾಳಿಗಳಿಂದ ಆಹಾರ, ವಿದ್ಯುತ್, ಮೂಲಸೌಕರ್ಯ ಬಿಕ್ಕಟ್ಟುಗಳು ಎದುರಾಗಬಹುದು. ಆದ್ದರಿಂದ ಆಹಾರ ಸಂರಕ್ಷಣೆಗೆ ಒತ್ತು ಕೊಡಿ. ದೀರ್ಘ ಕಾಲದ ವಿದ್ಯುತ್ ಕಡಿತದಂತಹ ಸಮಸ್ಯೆ ನಿಭಾಯಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಜಾನುವಾರುಗಳ ರಕ್ಷಣೆಗೂ ಆದ್ಯತೆ ನೀಡಿ. ನಿಮ್ಮ ಮಕ್ಕಳನ್ನು ಯುದ್ಧದ ಸನ್ನಿವೇಶಗಳಿಗೆ ಭಯಪಡೆದಂತೆ ಮಾನಸಿಕವಾಗಿ ಸಿದ್ಧಗೊಳಿಸಿ. ಹಿರಿಯ ನಾಗರಿಕರು, ದುರ್ಬಲ ಜನರಿಗಾಗಿ ಕಾಳಜಿ ಕ್ರಮಗಳನ್ನು ವಹಿಸಿ ಎಂದು ಸಲಹೆಗಳನ್ನು ನೀಡಲಾಗಿದೆ.
ವಿವಿಧ ಭಾಷೆ, ಡಿಜಿಟಲ್‌ನಲ್ಲೂ ಪುಸ್ತಕ ಲಭ್ಯ
ಹೆಚ್ಚಿನ ಜನರನ್ನು ತಲುಪುವ ಉದ್ದೇಶದಿಂದ ಅರೇಬಿಕ್, ಪಾರ್ಸಿ ಮತ್ತು ಉಕ್ರೇನಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ಡಿಜಿಟಲ್ ರೂಪದಲ್ಲಿ ಪುಸ್ತಕ ಲಭ್ಯವಿದೆ. ಹೆಚ್ಚಿನ ಸಂಖ್ಯೆಯ ಜನರು ಡಿಜಿಟಲ್ ಆವೃತ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಪುಸ್ತಕ ಬಿಡುಗಡೆಯಾಗಿದ್ದು, ಇದುವರೆಗೂ ಡಿಜಿಟಲ್‌ನಲ್ಲೇ 55,000 ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಫಿನ್‌ಲ್ಯಾಂಡ್‌ನಿಂದಲೂ ಪುಸ್ತಕ ಬಿಡುಗಡೆ
ರಷ್ಯಾ ಜೊತೆಗೆ 830 ಮೈಲಿಯಷ್ಟು ಗಡಿಯನ್ನು ಫಿನ್‌ಲ್ಯಾಂಡ್ ಹಂಚಿಕೊಂಡಿದೆ. ಆದ್ದರಿಂದ ಸಹಜವಾಗಿ ದೇಶವು ಮುನ್ನೆಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಉಕ್ರೇನ್‌ನ ಮೇಲೆ ಮಾಸ್ಕೋದ ಆಕ್ರಮಣದ ನಂತರ, ಫಿನ್‌ಲ್ಯಾಂಡ್ 200 ಕಿಲೋಮೀಟರ್ ಗಡಿ ಬೇಲಿಯನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಿತು. ಗಡಿಯುದ್ದಕ್ಕೂ 10 ಅಡಿ ಎತ್ತರ ಮತ್ತು ಮುಳ್ಳುತಂತಿ ಬೇಲಿ ಹಾಕಲು ಮುಂದಾಗಿದೆ. ಇದು 2026 ರ ವೇಳೆಗೆ ಪೂರ್ಣಗೊಳ್ಳಲಿದೆ. ಯುದ್ಧದ ಭೀಕರ ಸನ್ನಿವೇಶಗಳನ್ನು ನಿಭಾಯಿಸಲು ಫಿನ್‌ಲ್ಯಾಂಡ್ ಕೂಡ ಕರೆ ನೀಡಿ ಪುಸ್ತಕ ಹೊರತಂದಿದೆ. ಫಿನ್‌ಲ್ಯಾಂಡ್‌ನ ಆಂತರಿಕ ಸಚಿವಾಲಯವು, ದೀರ್ಘಾವಧಿಯ ವಿದ್ಯುತ್ ಕಡಿತ, ದೂರಸಂಪರ್ಕ ಅಡೆತಡೆಗಳು ಮತ್ತು ಮಿಲಿಟರಿ ಸಂಘರ್ಷಗಳನ್ನು ನಿಭಾಯಿಸಲು ಈಗಲಿಂದಲೇ ತಯಾರಾಗುವಂತೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.
ನ್ಯಾಟೊ ಸೇರಿದ ಸ್ವೀಡನ್, ಫಿನ್‌ಲ್ಯಾಂಡ್
2022ರಲ್ಲಿ ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ನಂತರ ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ಎರಡೂ ನ್ಯಾಟೋಗೆ ಸೇರಿಕೊಂಡವು. ತಮ್ಮ ದೀರ್ಘಕಾಲದ ತಟಸ್ಥ ನೀತಿಗಳನ್ನು ತ್ಯಜಿಸಿದವು. ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಈ ದೇಶಗಳು ತಮ್ಮ ರಕ್ಷಣಾ ಕ್ರಮಗಳನ್ನು ಹೆಚ್ಚಿಸಿವೆ. ಈ ಬದಲಾವಣೆಯು ಒಕ್ಕೂಟದೊಳಗೆ ಸಾಮೂಹಿಕ ರಕ್ಷಣೆ ಮತ್ತು ಬಿಕ್ಕಟ್ಟಿನ ಸಿದ್ಧತೆಗೆ ಕರೆ ನೀಡಲು ಪ್ರಮುಖ ಕಾರಣವಾಗಿದೆ. ಯೂರೋಪ್ ಎದುರಿಸುತ್ತಿರುವ ಭದ್ರತಾ ಸವಾಲುಗಳನ್ನು ಸ್ವೀಡಿಷ್ ಎಂಎಸ್‌ಬಿಯ ಹೇಳಿಕೆಯಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ‘ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಸ್ಥಿತಿಯು ತೀವ್ರವಾಗಿ ಹದಗೆಟ್ಟಿದೆ. ನಮ್ಮ ಆಸುಪಾಸಿನಲ್ಲಿ ಯುದ್ಧ ನಡೆಯುತ್ತಿದೆ. ಹವಾಮಾನ ವೈಪರಿತ್ಯಗಳು ಸಾಮಾನ್ಯವಾಗುತ್ತಿವೆ. ನಮ್ಮನ್ನು ದುರ್ಬಲಗೊಳಿಸಲು ಭಯೋತ್ಪಾದಕ ಬೆದರಿಕೆಗಳು, ಸೈಬರ್ ದಾಳಿಗಳು ಹೆಚ್ಚುತ್ತಿವೆ’ ತಿಳಿಸಿದೆ.
ರಷ್ಯಾ-ಉಕ್ರೇನ್ ಯುದ್ಧವು ಅನೇಕ ಯುರೋಪಿಯನ್ ರಾಷ್ಟ್ರಗಳು ತಮ್ಮ ರಕ್ಷಣಾ ಕಾರ್ಯತಂತ್ರಗಳನ್ನು ಮರುಮೌಲ್ಯಮಾಪನ ಮಾಡಲು ಪ್ರೇರೇಪಿಸಿದೆ. ಸ್ವೀಡನ್ ಮತ್ತು ಫಿನ್‌ಲ್ಯಾಂಡ್ (Finland) ದೇಶಗಳು ತಮ್ಮ ಮಿಲಿಟರಿ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸಿವೆ. ನ್ಯಾಟೋ ಒಕ್ಕೂಟದ 32 ಸದಸ್ಯ ರಾಷ್ಟ್ರಗಳ ಪೈಕಿ 23 ದೇಶಗಳು ತಮ್ಮ ಜಿಡಿಪಿಯ 2 ಪ್ರತಿಶತದಷ್ಟನ್ನು ಮಿಲಿಟರಿಗಾಗಿ ಖರ್ಚು ಮಾಡುವ ನಿರ್ಣಯ ಕೈಗೊಂಡಿವೆ. ಇತ್ತ ಒಕ್ಕೂಟದ ಭಾಗವಾಗಿರುವ ಸ್ವೀಡನ್, ಫಿನ್‌ಲ್ಯಾಂಡ್ ದೇಶಗಳು ಸಾಮಾಜಿಕ ಸ್ಥಿತಿಸ್ಥಾಪಕತ್ವಕ್ಕಾಗಿ ಸಮಗ್ರ ಸಾರ್ವಜನಿಕ ಜಾಗೃತಿ ಉಪಕ್ರಮಗಳನ್ನು ಪರಿಚಯಿಸಿವೆ. ಪರಮಾಣು, ಜೈವಿಕ ಅಥವಾ ರಾಸಾಯನಿಕ ದಾಳಿಗಳಂತಹ ಭೀಕರ ಸನ್ನಿವೇಶಗಳನ್ನು ಎದುರಿಸಲು ಸಿದ್ಧರಾಗಬೇಕೆಂದು ಸೂಚಿಸಿವೆ.
ರಷ್ಯಾ-ಉಕ್ರೇನ್ ಯುದ್ಧ
ಉಕ್ರೇನ್ ನ್ಯಾಟೋ ಒಕ್ಕೂಟ ಸೇರುವುದನ್ನು ವಿರೋಧಿಸಿದ ರಷ್ಯಾ ಯುದ್ಧ ಘೋಷಿಸಿತು. 2022ರ ಫೆಬ್ರವರಿ 4 ರಂದು ಉಕ್ರೇನ್ ಮೇಲೆ ದಾಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶ ಹೊರಡಿಸಿದರು. ಎರಡು ದೇಶಗಳ ನಡುವಿನ ಯುದ್ಧದಿಂದ ಇದುವರೆಗೂ ಲಕ್ಷಾಂತರ ಸಾವುನೋವುಗಳಾಗಿವೆ. ರಷ್ಯಾದಲ್ಲೇ 6,96,410 ಸೈನಿಕರು ಮೃತಪಟ್ಟಿದ್ದಾರೆ. ರಷ್ಯಾ ಆಕ್ರಮಣದಿಂದ ಉಕ್ರೇನ್‌ನಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ.
ಇಸ್ರೇಲ್-ಹಮಾಸ್ ಯುದ್ಧ
2023ರ ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ನಡೆಸಿ ಹಲವು ನಾಗರಿಕರ ಹತ್ಯೆಗೆ ಕಾರಣರಾದರು. 200 ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡರು. ಇದಕ್ಕೆ ಪ್ರತಿಯಾಗಿ ಹಮಾಸ್ ಬಂಡುಕೋರರ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿತು. ಪರಿಣಾಮವಾಗಿ ಪ್ಯಾಲೆಸ್ತೀನ್‌ನಲ್ಲಿ ಸಾವಿರಾರು ಜನರ ಸಾವುನೋವಾಯಿತು. ಹಮಾಸ್ ಜೊತೆಗೆ ಹಿಜ್ಬುಲ್ಲಾ ಗುಂಪು ಕೈಜೋಡಿಸಿದ್ದು ಸಂಘರ್ಷ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ. ಈ ನಡುವೆ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿಯನ್ನು ನಡೆಸಿದೆ. ಇದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಜಗತ್ತಿನಲ್ಲಿ ಕೋವಿಡ್ -19, ಎಂಪಾಕ್ಸ್, ಝಿಕಾ ವೈರಸ್ ಹೀಗೆ ದಿನಕ್ಕೊಂದು ಹೊಸಹೊಸ ರೋಗಗಳು ಹುಟ್ಟಿಕೊಳ್ಳುತ್ತಿವೆ. ಇದೀಗ ಯುರೋಪ್‌ನಲ್ಲಿ ಮೊದಲ ಬಾರಿಗೆ ʼಸ್ಲಾತ್ ವೈರಸ್ʼ ಎಂಬ ಹೊಸ ವೈರಸ್ ಪತ್ತೆಯಾಗಿದ್ದು,ಈಗಾಗಲೇ 19 ಜನರಲ್ಲಿ ಈ ವೈರಸ್ ಕಾಣಿಸಿಕೊಂಡಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ECDC) ಓರೊಪೌಚೆ ವೈರಸ್ (ಸ್ಲಾತ್ ಫೀವರ್) ವರದಿ ಪ್ರಕಾರ, ಸ್ಪೇನ್‌ನಲ್ಲಿ 12, ಇಟಲಿಯಲ್ಲಿ ಐದು ಮತ್ತು ಜರ್ಮನಿಯಲ್ಲಿ ಎರಡು ಸೇರಿದಂತೆ ಯುರೋಪ್‌ನಲ್ಲಿ 19 ಪ್ರಕರಣಗಳು ಪತ್ತೆಯಾಗಿದೆ. ಇಷ್ಟು ಮಾತ್ರವಲ್ಲದೇ ಬ್ರೆಜಿಲ್‌ನಲ್ಲಿ ಈ ವೈರಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಏನಿದು ʼಸ್ಲಾತ್ ಫೀವರ್ʼ? ರೋಗಲಕ್ಷಣಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
ಓರೊಪೌಚೆ ವೈರಸ್ (ಸ್ಲಾತ್ ಫೀವರ್) ಎಂದರೇನು?
ಈ ರೋಗವು ಸಾಮಾನ್ಯವಾಗಿ ಕೀಟಗಳ ಕಡಿತದಿಂದ ಹರಡುತ್ತದೆ. ಆದರೆ ಕೆಲವು ಜಾತಿಯ ಸಸ್ತನಿಗಳು ಮತ್ತು ಪಕ್ಷಿಗಳಲ್ಲಿ ಕೂಡ ಈ ವೈರಸ್ ಹುಟ್ಟಿಕೊಳ್ಳುತ್ತದೆ. ಸ್ಲಾತ್ ವೈರಸ್ ಎಂಬುದು ಓರೊಪೌಚೆ ವೈರಸ್‌ನ ಇನ್ನೊಂದು ಹೆಸರು.
ಇದು ಯಾವುದೇ ವಯಸ್ಸಿನ ಜನರಿಗೆ ಹರಡಬಹುದಾದ ವೈರಲ್ ಕಾಯಿಲೆಯಾಗಿದೆ. ಇದನ್ನು ಸಾಮಾನ್ಯವಾಗಿ ಡೆಂಗ್ಯೂ ಎಂದು ತಪ್ಪಾಗಿ ಗ್ರಹಿಸಲಾಗುತ್ತದೆ .ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಪ್ರಕಾರ ಸೊಳ್ಳೆಗಳಿಂದ ಜನರಿಗೆ ಹರಡುವ ಗಂಭೀರ ಸೋಂಕು ಇದಾಗಿದದೆ. ಕೆಮ್ಮುವುದು, ಸ್ಪರ್ಶಿಸುವುದು ಅಥವಾ ಸೀನುವ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಈ ವೈರಸ್ ಹರಡುವುದಿಲ್ಲ ಸಿಡಿಸಿ ವರದಿಗಳು ತಿಳಿಸಿವೆ.
ಓರೊಪೌಚೆ ವೈರಸ್ ಸ್ಲಾತ್ ಪ್ರಾಣಿ, ಕೋತಿಗಳು ಮತ್ತು ಪಕ್ಷಿಗಳಂತಹ ಮಾನವರಲ್ಲದ ಸಸ್ತನಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಇದು ಕೆಲವು ಕೀಟಗಳ ಮೂಲಕ ಜನರಿಗೆ ಹರಡಬಹುದು. ಇದನ್ನು ಸಾಮಾನ್ಯವಾಗಿ ರಕ್ತ ಪರೀಕ್ಷೆಯಿಂದ ನಿರ್ಣಯಿಸಲಾಗುತ್ತದೆ.
ಒರೊಪೌಚೆ ವೈರಸ್ ಮೊದಲು 1955ರಲ್ಲಿ ಕಾಣಿಸಿಕೊಂಡಿತು. ಬಳಿಕ ದಕ್ಷಿಣ ಅಮೆರಿಕ ಹಾಗೂ ಮಧ್ಯ ಅಮೆರಿಕದಲ್ಲಿ ಹೆಚ್ಚಾಗಿ ಕಾಣಿಸತೊಡಗಿತು.ಈಗ ಯುರೋಪ್‌ನಿಂದ ಅಮೆರಿಕ, ಅಥವಾ ವೈರಸ್ ಹೆಚ್ಚಿರುವ ದೇಶಗಳಿಗೆ ಪ್ರಯಾಣ ಬೆಳೆಸಿದವರಲ್ಲಿ ಈ ರೋಗ ಕಾಣಿಸಿಕೊಂಡಿದ್ದು,ಮರಳಿ ಬಂದವರ ಜೊತೆ ಯುರೋಪ್‌ಗೂ ಈ ವೈರಸ್ ಕಾಲಿಟ್ಟಿದೆ ಎಂದು ಡಾ.ಅಡಾಲ್ಜಾ ಹೇಳಿದ್ದಾರೆ.
ರೋಗಲಕ್ಷಣಗಳೇನು?
*ತಲೆನೋವು
*ಜ್ವರ
*ಸ್ನಾಯು ನೋವುಗಳು
*ಗಟ್ಟಿಯಾದ ಕೀಲುಗಳು
*ವಾಕರಿಕೆ
*ವಾಂತಿ
*ಚಳಿ
*ಬೆಳಕಿಗೆ ಒಗ್ಗಿಕೊಳ್ಳದಿರುವುದು ಮುಂತಾದವುಗಳು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ.
ಈ ರೋಗಕ್ಕೆ ತುತ್ತಾಗಿ 4ರಿಂದ 8 ದಿನಗಳ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳತೊಡಗುತ್ತವೆ. ಈ ವೈರಸ್ ಹಲವು ವಾರಗಳವೆಗೆ ಕಾಣಿಸಿಕೊಳ್ಳಬಹುದು ಎಂದು ಡಾ.ಶಾಫ್ನರ್ ತಿಳಿಸಿದ್ದಾರೆ. ಅಲ್ಲದೇ ಹಲವು ವಾರಗಳವರೆಗೆ ಆಯಾಸ ಮತ್ತು ಕೀಲುನೋವುಗಳು ಕಾಣಿಸಿಕೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.
ಚಿಕಿತ್ಸೆ ಏನು?
ವೈರಸ್‌ಗೆ ಯಾವುದೇ ಲಸಿಕೆ ಇಲ್ಲ. ಈ ವೈರಸ್ ಝಿಕಾ ಮತ್ತು ಡೆಂಗ್ಯೂ ವೈರಸ್‌ಗಳ ತಳಿಯಿಂದ ಬಂದಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಇನ್ನು ಜ್ವರ ಮತ್ತು ಸ್ನಾಯು ನೋವುಗಳಿಗೆ ಸಹಾಯ ಮಾಡಲು ಪೈನ್ ರಿಲೀಫ್ ಔಷಧಗಳನ್ನು ಒಳಗೊಂಡಿರುತ್ತದೆ, ಜೊತೆಗೆ ವಾಕರಿಕೆ ಮತ್ತು ವಾಂತಿಗೆ ನೀಡುವ ಔಷಧಿಗಳನ್ನು ಚಿಕಿತ್ಸೆ ಒಳಗೊಂಡಿರುತ್ತದೆ.
ಇನ್ನು ಈ ರೋಗ ಹೆಚ್ಚಾದರೆ ಮಾರಣಾಂತಿಕವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಈ ವೈರಸ್ ನರಮಂಡಲದ ಮೇಲೆ ಆಕ್ರಮಣ ಮಾಡಬಹುದು. ಇದು ಸಿಡಿಸಿ ಪ್ರಕಾರ ಮೆನಿಂಜೈಟಿಸ್, ಎನ್ಸೆಫಾಲಿಟಿಸ್ ಅಥವಾ ಇತರ ಗಂಭೀರ ನರವೈಜ್ಞಾನಿಕ ತೊಡಕುಗಳನ್ನು ಈ ವೈರಸ್ ಉಂಟುಮಾಡುತ್ತದೆ. ಈ ಸೋಂಕಿಗೆ ಒಳಗಾದವರ ಪೈಕಿ 4% ಜನರಲ್ಲಿ ಇದು ಸಂಭವಿಸುತ್ತದೆ.
ಇನ್ನು ಈ ರೋಗವನ್ನು ತಡೆಗಟ್ಟುವ ಸಲುವಾಗಿ ಸೊಳ್ಳೆ ಪರದೆ, ಕೀಟನಾಶಕ ಔಷಧಿಗಳನ್ನು ಬಳಸಿದರೆ ಉತ್ತಮ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾಗುತ್ತಿದ್ದಂತೆಯೇ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ಅನಾರೋಗ್ಯಕ್ಕೀಡಾಗುತ್ತಿದ್ದಾನೆ. ಶೀತ, ಜ್ವರ ಹಾಗೂ ಕೆಮ್ಮು ಸಾಮಾನ್ಯವಾಗಿರುತ್ತದೆ. ಡೆಂಗ್ಯೂ, ಮಲೇರಿಯಾ, ಟೈಫಾಯ್ಡು, ಹಂದಿ ಜ್ವರ, ಕೊರೊನಾ ವೈರಸ್, ಹಕ್ಕಿ ಜ್ವರ ಕೇಳಿದ್ದೇವೆ. ಸದ್ಯ ಈ ಜ್ವರಗಳ ಜೊತೆ ಅಪರೂಪದಲ್ಲಿ ಅಪರೂಪದ ಗಿಳಿ ಜ್ವರವೂ ಸೇರಿಕೊಂಡಿದೆ.
ಹೌದು. ಗಿಳಿ ಜ್ವರ ನಾವು ಹೊಸದಾಗಿ ಕೇಳಿಸಿಕೊಂಡ ಸೋಂಕಾದರೆ ಯುರೋಪ್‌ನಾದ್ಯಂತ (Europe) ಈ ವರ್ಷ ಐವರ ಸಾವಿಗೆ ಕಾರಣವಾಗಿದೆ. ಈ ಮೂಲಕ ಯೂರೋಪಿಯನ್ನರನ್ನು ಭಾರೀ ಆತಂಕಕ್ಕೆ ದೂಡಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಡೆನ್ಮಾರ್ಕ್‌ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ನೆದರ್‌ಲ್ಯಾಂಡ್‌ನಲ್ಲಿ ಓರ್ವ, ಮತ್ತು ಆಸ್ಟ್ರಿಯಾ, ಜರ್ಮನಿ ಮತ್ತು ಸ್ವೀಡನ್‌ನಾದ್ಯಂತ ಡಜನ್‌ಗಟ್ಟಲೆ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಿದ್ರೆ ಏನಿದು ಗಿಳಿ ಜ್ವರ..?, ಇದರ ಲಕ್ಷಣಗಳೇನು..?, ಚಿಕಿತ್ಸೆ ಏನು ಎಂಬುದನ್ನು ನೋಡೋಣ.
ಏನಿದು ಗಿಳಿ ಜ್ವರ?: ಈ ಜ್ವರವನ್ನು ಸಿಟ್ಟಾಕೋಸಿಸ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಗಂಭೀರ ಸಮಸ್ಯೆ ಉಂಟು ಮಾಡುವ ವೈರಸ್ ಆಗಿದೆ. ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಇದು ಉಂಟಾಗುತ್ತದೆ. ಇದು ಪಕ್ಷಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ವಿಶೇಷವಾಗಿ ಗಿಳಿಗಳು, ಪಾರಿವಾಳಗಳು ಹಾಗೂ ಕೋಳಿಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಈ ಬ್ಯಾಕ್ಟೀರಿಯಾವು ಗಾಳಿಯಿಂದ ಮನುಷ್ಯರಿಗೂ ಹರಡುತ್ತದೆ ಎಂಬುದಾಗಿ ವೈದ್ಯ ಮೂಲಗಳು ತಿಳಿಸಿವೆ.
ಗಿಳಿ ಜ್ವರವನ್ನು ಅಪರೂಪದ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಕೆನಡಾದಲ್ಲಿ (Canada) ಮನುಷ್ಯರ ಮೇಲೆ ಗಿಳಿ ಜ್ವರ (Parrot Fever) ಅಷ್ಟಾಗಿ ಪರಿಣಾಮ ಬೀರಿಲ್ಲ. ಹೀಗಾಗಿ ರಾಷ್ಟ್ರೀಯವಾಗಿ ಸೂಚಿಸಬಹುದಾದ ರೋಗವಲ್ಲ ಎಂದು ಕೆನಡಾ ಆರೋಗ್ಯ ಸಂಸ್ಥೆ ತಿಳಿಸಿದೆ.
ಗಿಳಿ ಜ್ವರ ಹೇಗೆ ಬರುತ್ತದೆ?: ಗಿಳಿ ಜ್ವರವು ಕ್ಲಮೈಡಿಯ ಸಿಟ್ಟಾಸಿ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಬ್ಯಾಕ್ಟೀರಿಯಾದ ಸೋಂಕು. ಇದು ಸೋಂಕಿತ ಪಕ್ಷಿಗಳ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ಹಿಕ್ಕೆಗಳು, ಗರಿಗಳು ಅಥವಾ ಉಸಿರಾಟದ ಸ್ರವಿಸುವಿಕೆಯ ಮೂಲಕ ಮನುಷ್ಯರಿಗೆ ಹರಡುತ್ತದೆ. ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವ ಅಥವಾ ಮೊದಲೇ ಅಸ್ತಿತ್ವದಲ್ಲಿರುವ ಉಸಿರಾಟದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಈ ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ.
ಗಿಳಿ ಜ್ವರವು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ಬಳಿಕ ವಿವಿಧ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಿಯನ್ ಸೆಂಟರ್ ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ (CCOHS) ಹೇಳಿದೆ. ಅಪರೂಪದ ಸಂದರ್ಭದಲ್ಲಿ, ಯಕೃತ್ತಿನ ಉರಿಯೂತ, ಪೆರಿಕಾರ್ಡಿಯಮ್ (ಹೃದಯ ಕುಹರದ ಒಳಪದರ), ಮಯೋಕಾರ್ಡಿಯಂ (ಹೃದಯ ಸ್ನಾಯು) ಮತ್ತು ಮೆದುಳಿನ ಉರಿಯೂತ ವರದಿಯಾಗಿದೆ. ಸೋಂಕಿತ ಪ್ರಾಣಿಗಳನ್ನು ತಿನ್ನುವುದರಿಂದ ರೋಗವು ಹರಡುವುದಿಲ್ಲ ಎಂದು CCOHS ಹೇಳಿದೆ.
ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಈ ಸೋಂಕು ಧೂಳಿನ ಕಣಗಳು, ನೀರಿನ ಹನಿಗಳ ಮೂಲಕ ಹಾಗೂ ಪಕ್ಷಿಗಳು ಮನುಷ್ಯರನ್ನು ಕಚ್ಚಿದಾಗಲೂ ಹರಡುತ್ತದೆ. ಇದಾದ ಕೆಲವು ದಿನಗಳ ಬಳಿಕ ರೋಗಲಕ್ಷಣಗಳು ಉಲ್ಬಣಗೊಳ್ಳುತ್ತಾ ಹೋಗುತ್ತದೆ.ಕ್ರಮೇಣ ಈ ಸೋಂಕಿನಿಂದ ನ್ಯುಮೋನಿಯಾ ಮತ್ತು ಹೃದಯ ರಕ್ತನಾಳಗಳ ಉರಿಯೂತ ಸಂಭವಿಸಬಹುದು. ಹೆಪಟೈಟಿಸ್ ಮತ್ತು ನರಸಂಬಂಧಿ ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳಿವೆ. ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಸರಿಯಾದ ವೈದ್ಯಕೀಯ ನೆರವು ದೊರೆಯದಿದ್ದರೆ ಸಾವು ಸಂಭವಿಸುವ ಸಾಧ್ಯತೆಗಳಿವೆ.
ಲಕ್ಷಣಗಳೇನು..?: ಸೋಂಕು ತಗುಲಿದ ಕೂಡಲೇ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳಲ್ಲ. 5 ರಿಂದ 14 ದಿನಗಳ ಬಳಿಕ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ಬ್ಯಾಕ್ಟೀರಿಯಾದ ಸಂಪರ್ಕಕ್ಕೆ ಬಂದಾಗ ಆತನಿಗೆ ಶೀತ, ಒಣ ಕೆಮ್ಮು, ವಾಂತಿ, ಭೇದಿ, ತಲೆನೋವು, ಸ್ನಾಯು ಸೆಳೆತ ಮತ್ತು ಆಯಾಸ ಹಾಗೂ ಜ್ವರದ ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ಸೌಮ್ಯವಾದ ಪ್ರಕರಣಗಳಲ್ಲಿ ಜ್ವರವು ಮೂರು ವಾರಗಳವರೆಗೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು. ಇದು ನ್ಯುಮೋನಿಯಾ ಹಾಗೂ ಕೆಲವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಇನ್ನೂ ಕೆಲವರಲ್ಲಿ ಎದೆನೋವು ಕಾಣಿಸಿಕೊಳ್ಳುವ ಸಾಧ್ಯತೆಗಳು ಕೂಡ ಇವೆ.
ಚಿಕಿತ್ಸೆ ಏನು?: ಸಾಮಾನ್ಯವಾಗಿ ಗಿಳಿ ಜ್ವರಕ್ಕೆ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ. ರೋಗ ಲಕ್ಷಣಗಳು ಹೆಚ್ಚಾದಂತೆ ಔಷಧಗಳೂ ಬೇರೆ ಬೇರೆಯಾಗುತ್ತಾ ಹೋಗುತ್ತದೆ. ಏಕೆಂದರೆ ರೋಗ ಲಕ್ಷಣಗಳು ತೀವ್ರಗೊಂಡಾಗ ನ್ಯುಮೋನಿಯಾ ಹಾಗೂ ಹೃದಯದ ರಕ್ತನಾಳಗಳ ಉರಿಯೂತ ಕೂಡಾ ಆಗಬಹುದು. ಹೆಪಟೈಟೀಸ್ ಹಾಗೂ ನರಗಳ ಸಮಸ್ಯೆ ಕೂಡ ಎದುರಾಗಬಹುದು. ಸೂಕ್ತ ಸಮಯದಲ್ಲಿ ವೈದ್ಯಕೀಯ ನೆರವು ಸಿಗದಿದ್ದರೆ ಸಾವನ್ನಪ್ಪುವ ಸಾಧ್ಯತೆಯೂ ಇದೆ.
ಪಾರಾಗುವುದು ಹೇಗೆ?: ಗಿಳಿ ಜ್ವರವನ್ನು ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಪಕ್ಷಿಗಳನ್ನು ನಿರ್ವಹಿಸುವಾಗ ಅಥವಾ ಪಕ್ಷಿಗಳು ಇರುವ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು. ನೀವು ಪಕ್ಷಿಗಳು ಅಥವಾ ಅವುಗಳ ಪಂಜರಗಳನ್ನು ನಿರ್ವಹಿಸುವಾಗ, ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಮತ್ತು ಪಕ್ಷಿ ಪಂಜರಗಳನ್ನು ಸ್ವಚ್ಛಗೊಳಿಸುವಾಗ ಕೈಗೆ ಗ್ಲೌಸ್‌ಗಳು ಮತ್ತು ಮಖಕ್ಕೆ ಮಾಸ್ಕ್ ಧರಿಸುವುದು ಅತ್ಯಗತ್ಯ. ಅಲ್ಲದೆ ಅದರ ಅಪಾಯಗಳ ಬಗ್ಗೆ ನಿಮಗೆ ಮತ್ತು ಇತರರಿಗೆ ಶಿಕ್ಷಣ ನೀಡುವುದು ಮತ್ತು ಅಗತ್ಯವಿದ್ದರೆ ವೈದ್ಯಕೀಯ ಆರೈಕೆಯನ್ನು ಪಡೆಯುವುದು ಅತ್ಯಗತ್ಯ.
ಯುರೋಪಿನಲ್ಲಿ ಏಕಾಏಕಿ ಸಂಭವಿಸುವ ಬಗ್ಗೆ ಹೇಳುವುದಾದರೆ WHO ಪ್ರಕಾರ, ಆಸ್ಟ್ರಿಯಾದಲ್ಲಿ ಹಿಂದಿನ 8 ವರ್ಷಗಳಲ್ಲಿ ವರ್ಷಕ್ಕೆ ಸರಾಸರಿ ಎರಡು ಪ್ರಕರಣಗಳಿಗೆ ಹೋಲಿಸಿದರೆ, 2023 ರಲ್ಲಿ 14 ಗಿಳಿ ಜ್ವರದ ಪ್ರಕರಣಗಳು ವರದಿಯಾಗಿವೆ. 2024 ರ ಮಾರ್ಚ್ 4 ರ ಹೊತ್ತಿಗೆ ದೇಶವು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದೆ. ಡೆನ್ಮಾರ್ಕ್ 2023 ರ ಅಂತ್ಯದಿಂದ 2024 ರ ಜನವರಿ ಮಧ್ಯದವರೆಗೆ ಗಿಳಿ ಜ್ವರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡಿದೆ ಎಂದು WHO ಹೇಳಿದೆ. ಫೆಬ್ರವರಿ 27 ರ ಹೊತ್ತಿಗೆ 23 ವ್ಯಕ್ತಿಗಳು ರೋಗಕ್ಕೆ ತುತ್ತಾದರು. 17 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ 15 ಮಂದಿಗೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ ಇದೆ. ಇನ್ನು ನಾಲ್ವರು ಸಾವನ್ನಪ್ಪಿದ್ದಾರೆ.
2023ರ ಡಿಸೆಂಬರ್‌ನಲ್ಲಿ ಜರ್ಮನಿಯಲ್ಲಿ ಐವರಲ್ಲಿ ಗಿಳಿ ಜ್ವರ ದೃಢಪಟ್ಟಿತ್ತು. ಈ ಮೂಲಕ ಇದೇ ವರ್ಷ ಒಟ್ಟು 14 ಮಂದಿಯಲ್ಲಿ ಈ ಜ್ವರ ಕಾಣಿಸಿಕೊಂಡಿತ್ತು. 2024 ರ ಈ ಅವಧಿಯಲ್ಲಿ ಫೆಬ್ರವರಿ 20ರೊಳಗೆ ಮತ್ತೆ 5 ಪ್ರಕರಣಗಳು ವರದಿಯಾಗಿವೆ. 2023 ರ ನವೆಂಬರ್ ಕೊನೆಯಲ್ಲಿ ಮತ್ತು ಡಿಸೆಂಬರ್ ತಿಂಗಳ ಆರಂಭದಲ್ಲಿ ಸ್ವೀಡನ್ ನಲ್ಲಿಯೂ ಒಂದಷ್ಟು ಪ್ರಕರಣಗಳು ವರದಿಯಾಗಿವೆ. ನವೆಂಬರ್ ನಲ್ಲಿ 7 ಪ್ರಕರಣಗಳು ಮತ್ತು ಡಿಸೆಂಬರ್ ನಲ್ಲಿ 19 ಪ್ರಕರಣಗಳು ವರದಿಯಾಗಿವೆ. ಇದು ಹಿಂದಿನ ತಿಂಗಳುಗಳಲ್ಲಿ ಆಯಾ ತಿಂಗಳುಗಳಿಗೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತದೆ. ಒಟ್ಟಿನಲ್ಲಿ ಯುರೋಪ್‌ನಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು WHO ಹೇಳಿದೆ.
ಬ್ರಸೆಲ್ಸ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಂಗಳವಾರ ಒಂದು ವಾರದ ಯುರೋಪ್ (Europe) ಪ್ರವಾಸಕ್ಕೆ ತೆರಳಿದ್ದು, ಯುರೋಪಿಯನ್ ಯೂನಿಯನ್ (EU) ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸೆಪ್ಟೆಂಬರ್ 9ರಂದು ರಾಹುಲ್ ಗಾಂಧಿ ಪ್ಯಾರಿಸ್‌ನಲ್ಲಿರುವ ಫ್ರಾನ್ಸ್‌ನ ಲೇಬರ್ ಯೂನಿಯನ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ನಾರ್ವೆಗೆ ಭೇಟಿ ನೀಡಲಿರುವ ಅವರು, ಸೆಪ್ಟೆಂಬರ್ 10ರಂದು ಓಸ್ಲೋದಲ್ಲಿ ಡಯಾಸ್ಪೋರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮೂರನೇ ಮದ್ವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ
ಬೆಂಗಳೂರು: ಯುರೋಪ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀ ಮತ್ತೆ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಹೌದು. ಹೆಚ್. ಡಿ ಕುಮಾರಸ್ವಾಮಿಯವರು ಸೋಮವಾರ ರಾತ್ರಿ ಕಾಂಬೋಡಿಯಾಗೆ (Cambodia) ತೆರಳಿದ್ದಾರೆ. ಆಪ್ತರ ಜೊತೆ 4 ದಿನಗಳ ಕಾಲ ಪ್ರವಾಸಕ್ಕೆ ತೆರಳಿದ್ದಾರೆ. ಆಗಸ್ಟ್ 12 ರಂದು ವಾಪಸ್ ಆಗಲಿದ್ದಾರೆ.
ಕುಟುಂಬದ ಸದಸ್ಯರೊಂದಿಗೆ ಜು.23ರಂದು ಹೆಚ್‍ಡಿಕೆ ಯೂರೋಪ್ (Europe) ಪ್ರವಾಸ ಕೈಗೊಂಡಿದ್ದರು. ಕುಮಾರಸ್ವಾಮಿ ಅವರು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ (Anitha Kumaraswamy) ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ವಿದೇಶಕ್ಕೆ ತೆರಳಿದ್ದರು. ಯೂರೋಪಿನ ವಿವಿಧ ನಗರ ಹಾಗೂ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದು, ಎರಡು ವಾರಗಳ ಪ್ರವಾಸ ಪೂರ್ಣಗೊಳಿಸಿ, ಬೆಂಗಳೂರಿಗೆ ವಾಪಸ್ಸಾಗಿದ್ದರು.
ಹೆಚ್‍ಡಿಕೆ ಫಾರಿನ್ ಟೂರ್ ನಿಂದ ವಾಪಸ್ ಬರ್ತಿದ್ದಿದ್ದಂತೆ ಚಾರ್ಜ್‍ಶೀಟ್ ಪಾಲಿಟಿಕ್ಸ್ ಶುರುವಾಗಿತ್ತು. ಸಿಎಂ, ಪರಂ ಸಭೆಯಲ್ಲಿ `ವೈಎಸ್‍ಟಿ ಟ್ಯಾಕ್ಸ್ ಏಕೆ ಇದ್ದರು..? ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್‍ನಲ್ಲಿ ಸಭೆ ನಡೆದಿತ್ತು ಎಂದು ಹೆಚ್‍ಡಿಕೆ ಫ್ರೆಶ್ ಫೈಲ್ಸ್ ಬಿಟ್ಟಿದ್ದರು. ಹಲವು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೆ ತಡೆ ಬೆನ್ನಲ್ಲೇ ಹೆಚ್‍ಡಿಕೆ ವೈಎಸ್‍ಟಿ ರಹಸ್ಯ ಬಾಂಬ್ ಹಾಕಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಇತ್ತಿಚೀನ ವರ್ಷಗಳಲ್ಲಿ ಮೋಹಕ ತಾರೆ ರಮ್ಯಾ (Ramya) ಹೆಚ್ಚಾಗಿ ಸೀರೆಯಲ್ಲೇ ಕಾಣಿಸಿಕೊಳ್ಳುವುದು ರೂಢಿಯಾಗಿತ್ತು. ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆದ ನಂತರ ರಮ್ಯಾ ಕಾಟನ್ ಸೀರೆಯಲ್ಲಿ ಮಿಂಚುತ್ತಿದ್ದರು. ಸಿನಿಮಾ ಕಾರ್ಯಕ್ರಮವಿರಲಿ, ರಾಜಕೀಯದ ಪಡಸಾಲೆಯಲ್ಲೇ ಕಾಣಿಸಿಕೊಳ್ಳಲಿ ಗರಿಗರಿ ಸೀರೆಯಲ್ಲಿ ಅವರು ಕಂಗೊಳಿಸುತ್ತಿದ್ದರು. ಆದರೆ, ಅಚ್ಚರಿ ಎನ್ನುವಂತೆ ರಮ್ಯಾ ಲಾಂಗ್ ಶರ್ಟ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುವಿನ ಸಮಯದಲ್ಲಿ ವಿದೇಶಗಳನ್ನು ಸುತ್ತುವ ಅವರು, ಇದೀಗ ಯುರೋಪ್ (Europe) ದೇಶದ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ವೇಳೆ ಲಾಂಗ್ ಶರ್ಟ್ (Long Shirt) ಧರಿಸಿದ್ದು, ಆ ಫೋಟೋವನ್ನು ಅವರು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿದ್ದು, ರಮ್ಯಾ ಹೀಗೂ ಉಂಟಾ? ಎಂದು ಪ್ರಶ್ನೆ ಮಾಡಿದ್ದಾರೆ. ಯುರೋಪ ಸೌಂದರ್ಯವನ್ನೂ ಮೀರಿಸುವಂತೆ ರಮ್ಯಾ ಆ ಫೋಟೋದಲ್ಲಿ ಕಂಡಿದ್ದಾರೆ. ಈ ಫೋಟೋಗೆ ರಮ್ಯಾ ಅಭಿಮಾನಿಗಳು ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ:ಪ್ಯಾರಿಸ್‌ನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಅದಿತಿ ಪ್ರಭುದೇವ
ನಿರ್ಮಾಪಕಿಯಾಗಿ ಸ್ಯಾಂಡಲ್ ವುಡ್ ಗೆ ಮತ್ತೆ ಪ್ರವೇಶ ಮಾಡಿರುವ ರಮ್ಯಾ, ಒಂದು ಸಿನಿಮಾವನ್ನು ಆಗಲೇ ನಿರ್ಮಾಣ ಮಾಡಿದ್ದಾರೆ. ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಹೆಸರಿನ ಸಿನಿಮಾ ಸಂಪೂರ್ಣ ಶೂಟಿಂಗ್ ಮುಗಿಸಿದೆ. ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದ್ದು, ಮೊದ ಮೊದಲು ಈ ಚಿತ್ರಕ್ಕೆ ರಮ್ಯಾ ಅವರೇ ನಾಯಕಿ ಎಂದು ಹೇಳಲಾಗಿತ್ತು. ನಂತರ ಅದು ಬದಲಾಯಿತು. ಈ ಚಿತ್ರದಲ್ಲಿ ರಮ್ಯಾ ಇಲ್ಲ ಎನ್ನುವುದು ಅಭಿಮಾನಿಗಳಿಗೆ ನಿರಾಸೆ ತರಿಸಿತ್ತು.
ಈ ನಡುವೆ ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ ರಮ್ಯಾ. ಡಾಲಿ ಧನಂಜಯ್ ನಾಯಕನಾಗಿ ನಟಿಸುತ್ತಿರುವ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮುಹೂರ್ತವಾಗಿದ್ದು ಇನ್ನೂ ಶೂಟಿಂಗ್ ಶುರುವಾಗಿಲ್ಲ. ಹಾಗಾಗಿ ಈ ಸಿನಿಮಾದಲ್ಲಿ ಅವರು ಇರುತ್ತಾರಾ? ಅಥವಾ ಈ ಅವಕಾಶವನ್ನೂ ಕೈ ಬಿಡ್ತಾರಾ ಗೊತ್ತಿಲ್ಲ.