Tag: Euro

  • ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು

    ಉಕ್ರೇನ್‍ಗೆ 9 ಬಿಲಿಯನ್ ಯುರೋ ಕಳುಹಿಸಲು ಒಪ್ಪಿಕೊಂಡ ಇಯು

    ಬ್ರಸೆಲ್ಸ್: ಉಕ್ರೇನ್ ಮತ್ತು ರಷ್ಯಾ ನಡುವೆ ಕಳೆದ 2 ತಿಂಗಳಿಂದ ನಿರಂತವಾಗಿ ಯುದ್ಧ ನಡೆಯುತ್ತಿದೆ. ಅದಕ್ಕೆ ಉಕ್ರೇನ್ ಆರ್ಥಿಕ ನೆರವನ್ನು ಇತರೆ ರಾಷ್ಟ್ರಗಳಿಗೆ ಕೇಳುತ್ತಿದೆ. ಈ ಹಿನ್ನೆಲೆ ಯುರೋಪಿಯನ್ ಯೂನಿಯನ್(ಇಯು) ನಾಯಕರು ಉಕ್ರೇನ್‍ನಿಗೆ 9 ಬಿಲಿಯನ್(75 ಸಾವಿರ ಕೋಟಿ ರೂ.) ಯುರೋ ಕಳುಹಿಸಲು ಒಪ್ಪಿಗೆ ನೀಡಿದ್ದಾರೆ.

    ರಷ್ಯಾದ ಆಕ್ರಮಣವನ್ನು ಎದುರಿಸುತ್ತಿರುವ ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಇಯು ಮುಂದಾಗಿದೆ. ಈ ಹಿನ್ನೆಲೆ ಉಕ್ರೇನ್‍ಗೆ ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಳ್ಳಲಾಗಿದೆ ಎಂದು ಇಯು ಮುಖ್ಯಸ್ಥ ಚಾರ್ಲ್ಸ್ ಮೈಕೆಲ್ ಸೋಮವಾರ ಘೋಷಿಸಿದ್ದಾರೆ. ಇದನ್ನೂ ಓದಿ: ಮಾಲೇಕಲ್ ತಿರುಪತಿಯಲ್ಲಿ ದುಷ್ಕರ್ಮಿಗಳಿಂದ ವಿಗ್ರಹ ಧ್ವಂಸ 

    Russia-UkraineWar

    ಬ್ರಸೆಲ್ಸ್‌ನಲ್ಲಿ ಸಭೆ ನಡೆಸಿದ ಯುರೋಪಿಯನ್ ಒಕ್ಕೂಟದ ನಾಯಕರು ಉಕ್ರೇನ್‍ಗೆ ಆರ್ಥಿಕವಾಗಿ ಬೆಂಬಲಿಸಲು ಒಂಬತ್ತು ಬಿಲಿಯನ್ ಯುರೋಗಳನ್ನು ಕಳುಹಿಸಲು ಒಪ್ಪಿಕೊಂಡಿದ್ದಾರೆ. ಈ ಕುರಿತು ಮೈಕೆಲ್ ಅವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿಯನ್ನು ತಿಳಿಸಿದ್ದಾರೆ.

  • ಇಂಗ್ಲೆಂಡಿನಲ್ಲಿ ಮನೆಯಿಂದ ಹೊರಬಂದರೆ 91 ಸಾವಿರ ರೂ. ದಂಡ, ಜೈಲು ಶಿಕ್ಷೆ

    ಇಂಗ್ಲೆಂಡಿನಲ್ಲಿ ಮನೆಯಿಂದ ಹೊರಬಂದರೆ 91 ಸಾವಿರ ರೂ. ದಂಡ, ಜೈಲು ಶಿಕ್ಷೆ

    – ಕೊರೊನಾ ನಿಯಂತ್ರಣಕ್ಕೆ ಹರಸ ಸಾಹಸ ಪಡುತ್ತಿದೆ ಇಂಗ್ಲೆಂಡ್
    – ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ

    ಲಂಡನ್: ಮನೆಯಲ್ಲಿ ನಿಗಾದಲ್ಲಿರುವ ಕೊರೊನಾ ಶಂಕಿತರು ಅಥವಾ ಆಸ್ಪತ್ರೆಯಲ್ಲಿರುವ ಕೊರೊನಾ ಪೀಡಿತರು ಹೊರ ಬಂದರೆ ಅವರಿಗೆ 1 ಸಾವಿರ ಯುರೋ(ಅಂದಾಜು 91 ಸಾವಿರ ರೂ) ದಂಡ ಮತ್ತು ಜೈಲು ಶಿಕ್ಷೆ ವಿಧಿಸಲು ಇಂಗ್ಲೆಂಡ್ ಸರ್ಕಾರ ಮುಂದಾಗುವ ಸಾಧ್ಯತೆಯಿದೆ.

    ಕೊರೊನಾ ಪೀಡಿತರು ಅಥವಾ ಕೊರೊನಾ ಶಂಕಿತರು ನಿಗಾದಲ್ಲಿ ಇರಬೇಕು. ಒಂದು ವೇಳೆ ಆಸ್ಪತ್ರೆಯಿಂದ ಅಥವಾ ಮನೆಯಿಂದ ಹೊರ ಬಂದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಇವರ ಮೇಲೆ 1 ಸಾವಿರ ಯುರೋ ದಂಡ ಮತ್ತು ಜೈಲಿಗೆ ಹಾಕಲು ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊರೊನಾ ವಿರುದ್ಧ ಹೋರಾಡಲು ಈಗ ಕೆಲ ತುರ್ತು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಶಂಕಿತರು ಆಸ್ಪತ್ರೆಯಲ್ಲೇ ಇರಬೇಕು. ಕೊರೊನಾ ಪೀಡಿತ ದೇಶದಿಂದ ಆಗಮಿಸಿ ಈಗ ಕೊರೊನಾ ಬಾರದೇ ಇದ್ದರೂ 14 ದಿನಗಳ ಕಾಲ ಮನೆಯಲ್ಲೇ ಪ್ರತ್ಯೇಕ ನಿಗಾದಲ್ಲಿ ಇರಬೇಕು ಎಂದು ಸೂಚಿಸಿದೆ. ಕೊರೊನಾ ವೈರಸ್ ಆರೋಗ್ಯ ರಕ್ಷಣೆ ನಿಯಮಗಳನ್ನು ಇಂಗ್ಲೆಂಡ್ ಸರ್ಕಾರ ತನ್ನ ವೆಬ್‍ಸೈಟಿನಲ್ಲಿ ಪ್ರಕಟಿಸಿದೆ.

    ಈ ನಿಯಮದಲ್ಲಿ ಜನರು ಪ್ರವಾಸದ ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕು. ಒಂದು ವೇಳೆ ಸುಳ್ಳು ಮಾಹಿತಿ ನೀಡಿದರೆ ಭಾರೀ ದಂಡ ವಿಧಿಸಲಾಗುತ್ತದೆ.

    70 ವರ್ಷ ಮೀರಿದ ವ್ಯಕ್ತಿಗಳು ಯಾವುದೇ ಕಾರಣಕ್ಕೆ ಹೊರಗಡೆ ಬರಬೇಡಿ. ಕನಿಷ್ಠ 4 ತಿಂಗಳು ಮನೆಯಲ್ಲೇ ಇರಿ ಎಂದು ಇಂಗ್ಲೆಂಡ್ ಆರೋಗ್ಯ ಕಾರ್ಯದರ್ಶಿ ಮನವಿ ಮಾಡಿಕೊಂಡಿದ್ದಾರೆ. ಭಾನುವಾರ ಒಂದೇ ದಿನ 14 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ ಇಂಗ್ಲೆಂಡಿನಲ್ಲಿ ಒಟ್ಟು 1,391 ಕೇಸ್ ದಾಖಲಾಗಿದ್ದು 35 ಮಂದಿ ಮೃತಪಟ್ಟಿದ್ದಾರೆ.