Tag: Ettinahole Project

  • ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು

    ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು

    ಹಾಸನ: ಎತ್ತಿನಹೊಳೆ ಯೋಜನೆಯ (Ettinahole Project) 2ನೇ ಹಂತದ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ ಯೋಜನೆ ಕಾಮಗಾರಿಯನ್ನು ನಡೆಸದಂತೆ ಅರಣ್ಯ ಇಲಾಖೆಯು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದೆ. ಹೀಗಾಗಿ 5 ಕಿಮೀ ನೀರು ಹರಿಸುವ ಕಾಮಗಾರಿ ಸ್ಥಗಿತಗೊಂಡ ಕಾರಣ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯದಾಗಿದೆ.

    ಬಯಲು ಸೀಮೆಯ ಜಿಲ್ಲೆಗಳಿಗೆ ನೀರು ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಕಾಮಗಾರಿ ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗಿದ್ದರೂ, ಸದ್ಯ ಎರಡನೇ ಹಂತದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಕಾರ್ಯಕ್ಕೆ ಸೆ.6 ರಂದು ಸಿಎಂ (CM Siddaramaiah), ಡಿಸಿಎಂ ಚಾಲನೆ ನೀಡಿದ್ದಾರೆ. ಆದರೆ, ಅರಣ್ಯ ಇಲಾಖೆಯ ಅಡ್ಡಿಯಿಂದ ಅರಸೀಕೆರೆ ತಾಲ್ಲೂಕಿನ, ಕೆರೆಗಳಿಗೆ ತಲುಪಬೇಕಿದ್ದ ನೀರು ವಾಣಿ ವಿಲಾಸ ಸಾಗರಕ್ಕೆ ಹರಿದಿದೆ. ಬೇಲೂರು ತಾಲ್ಲೂಕಿನ, ಐದಳ್ಳ ಕಾವಲು ಬಳಿ 5 ಕಿ.ಮೀ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವಿದ್ದು ಇಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಸದಂತೆ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದೆ. ಇದರಿಂದಾಗಿ ಈ ವರ್ಷವೂ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯದಂತಾಗಿದೆ. ಇದನ್ನೂ ಓದಿ: 6 ಇಂಡಿಗೋ ವಿಮಾನಗಳಲ್ಲಿ 12 ಬಾಂಬ್‌ – ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಬೆದರಿಕೆ

    8,000 ಕೋಟಿ ರೂ.ನಿಂದ ಆರಂಭವಾದ ಎತ್ತಿನಹೊಳೆ ಕಾಮಗಾರಿಯ ವೆಚ್ಚ ಇದೀಗ 23,251 ಕೋಟಿ ರೂ. ಅಧಿಕವಾಗಿದೆ. 2ನೇ ಹಂತದಲ್ಲಿ ನೀರು ಹರಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಆದರೆ, ಈ ನೀರನ್ನು 43 ಕಿ.ಮೀನಿಂದ ಮುಂದೆ ಹರಿಸಲು ಸಾಧ್ಯವಾಗದೆ, ನೀರನ್ನು ಹಿಡಿಟ್ಟುಕೊಳ್ಳಲೂ ಆಗದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ಸಮೀಪವಿರುವ ವಾಣಿ ವಿಲಾಸ ಸಾಗರಕ್ಕೆ ಹರಿಸಬೇಕಾದ ದುಸ್ತಿತಿ ಎದುರಾಗಿದೆ. ಇದಕ್ಕೆಲ್ಲ ಕಾರಣ ಅರಣ್ಯ ಇಲಾಖೆ ಎಂಬುದು ಜನಪ್ರತಿನಿಧಿಗಳು, ಬಯಲುಸೀಮೆ ಭಾಗದ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಯನ್ನು ನಡೆಸದಂತೆ ಅರಣ್ಯ ಇಲಾಖೆ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಇದರಿಂದಾಗಿ 5 ಕಿ.ಮೀ ನೀರು ಹರಿಸುವ ಕಾಮಗಾರಿ ಸ್ಥಗಿತಗೊಂಡಿದೆ. ಇದನ್ನೂ ಓದಿ: ನಾನು ಅಭ್ಯರ್ಥಿ ಆಗಬೇಕು ಅಂತ ಒತ್ತಾಯ ಮಾಡಿದ್ದಾರೆ‌ – ಡಿ.ಕೆ.ಸುರೇಶ್

    ಅರಸೀಕೆರೆ ತಾಲ್ಲೂಕಿಗೆ ಮೊದಲನೇ ಹಂತದಲ್ಲಿ 1.03 ಟಿಎಂಸಿ ಹಂಚಿಕೆ ಮಾಡಬೇಕಿತ್ತು. ಇದರಿಂದ ಅರಸೀಕೆರೆ ತಾಲ್ಲೂಕಿನಲ್ಲಿರುವ 46 ಬೃಹತ್ ಕೆರೆಗಳು ಭರ್ತಿಯಾಗುತ್ತಿದ್ದವು. ಐದಳ್ಳ ಕಾವಲು ಬಳಿ ಕಾಮಗಾರಿಗೆ ಅರಣ್ಯ ಇಲಾಖೆಯಿಂದ (Forest Department) ಅಡ್ಡಿಯಾಗಿದ್ದು, ಇದೀಗ ಅರಣ್ಯ ಇಲಾಖೆಗೆ 5 ಕಿ.ಮೀ ಅರಣ್ಯ ಜಾಗದ ಬದಲಾಗಿ ಅರಸೀಕೆರೆ ತಾಲ್ಲೂಕಿನಲ್ಲಿರುವ 350 ಎಕರೆ ಸರ್ಕಾರಿ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ 5 ಕಿ.ಮೀ ಜಾಗವನ್ನು ಬಿಡಿಸಿಕೊಳ್ಳಲಾಗಿದೆ. ಇನ್ನೆರಡು 2-3 ತಿಂಗಳಲ್ಲಿ ಆ ಜಾಗ ಕುಲ್ಲಾ ಆಗಲಿದ್ದು, ಕಾಮಗಾರಿ ಆರಂಭವಾಗಲಿದೆ. ಮುಂದಿನ ವರ್ಷ ನೂರಕ್ಕೆ ನೂರು ಭಾಗ ಜೂನ್ ತಿಂಗಳಿನಿಂದ ಅರಸೀಕೆರೆಯ ಕೆರೆಗಳಿಗೆ ಎತ್ತಿನಹೊಳೆ ಯೋಜನೆಯ ನೀರು ಹರಿಯಲಿದೆ. ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಅಷ್ಟೇ ಸತ್ಯವಾಗಿ ಎತ್ತಿನಹೊಳೆ ಯೋಜನೆಯ ನೀರು ಅರಸೀಕೆರೆಗೆ ಬರಲಿದೆ ಎಂದು ಸ್ಥಳೀಯ ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸುದೀಪ್ ತಾಯಿಗೆ ಅಂತಿಮ ನಮನ ಸಲ್ಲಿಸಿದ ಧ್ರುವ ಸರ್ಜಾ,ಗಣೇಶ್

    ಕಾಮಗಾರಿ ಆರಂಭವಾದಗಿನಿಂದಲೂ ಮೊದಲನೇ ಹಂತದಲ್ಲಿ ಹಾಸನ ಜಿಲ್ಲೆ, ಅರಸೀಕೆರೆ ತಾಲ್ಲೂಕಿನ ಮುಕ್ಕಾಲು ಭಾಗದಷ್ಟು ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ಈ ಭಾಗದ ರೈತರು ಕನಸು ಕಂಡಿದ್ದರು. ಆದರೆ ಈ ವರ್ಷವೂ ನೀರು ಹರಿಯದಿದ್ದರಿಂದ ನಿರಾಸೆಗೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿ| ಉದ್ಯಮಿ ಹತ್ಯೆ ಕೇಸ್ – 13 ಹಾರ್ಡ್ ಡಿಸ್ಕ್‌ಗಳಲ್ಲಿ ಸಂತೋಷ್‍ನ ಖಾಸಗಿ ವೀಡಿಯೋ ಪತ್ತೆ!

  • ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರಕ್ಕೆ ನೂರರಷ್ಟು ನೀರು ಸಿಗಲಿದೆ: ಮುನಿಯಪ್ಪ ವಿಶ್ವಾಸ

    ಎತ್ತಿನಹೊಳೆ ಯೋಜನೆಯಲ್ಲಿ ಕೋಲಾರಕ್ಕೆ ನೂರರಷ್ಟು ನೀರು ಸಿಗಲಿದೆ: ಮುನಿಯಪ್ಪ ವಿಶ್ವಾಸ

    ಕೋಲಾರ : ಎತ್ತಿನಹೊಳೆ ಯೋಜನೆಯಲ್ಲಿ (Ettinahole Scheme) ಕೋಲಾರಕ್ಕೆ ನೂರಕ್ಕೆ ನೂರರಷ್ಟು ನೀರು ಸಿಗುತ್ತದೆ. ಯೋಜನೆಗಾಗಿ ಅನೇಕ ಹೋರಾಟಗಳು ಆಗಿವೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.

    ಕೋಲಾರದ (Kolar) ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್ ಅಹ್ಮದ್ (Jameer Ahmed) ಮನೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯಿಂದ 20 ರಿಂದ 24 ಟಿಎಂಸಿ ನೀರು ಸಿಗಲಿದ್ದು, ಸಿಎಂ ಸಹ ಆಶ್ವಾಸನೆ ನೀಡಿದ್ದಾರೆ. ಮೊದಲು ಕುಡಿಯುವ ನೀರಿಗೆ ನೀರು ಹರಿಸಿ ಎರಡನೇ ಹಂತದಲ್ಲಿ ಕೆರೆಗಳಿಗೆ ಹರಿಸುವುದಾಗಿ, ಒಂದು ವರ್ಷದಲ್ಲಿ ಕೋಲಾರದ ನಂಗಲಿಯವರೆಗೂ ನೀರು ಹರಿಯಲಿದೆ ಎಂದು ಹೇಳಿದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಗ್ರಾಮದೊಳಗೆ ದೈತ್ಯಾಕಾರದ ಒಂಟಿಸಲಗ: ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ

    ಕೋಲಾರ-ಚಿಕ್ಕಬಳ್ಳಾಪುರ, ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ನೀರು ಹರಿಸಲಾಗುವುದು ಎಂದರು. ಅಲ್ಲದೆ ಹಾಸನದಿಂದ ನಮಗೆ ನೀರು ಹರಿಸಲು 16 ಟಿಎಂಸಿ ನೀರು ಸಾಕು, ಬಯಲು ಸೀಮೆಯ 7 ಜಿಲ್ಲೆಗಳಿಗೆ ಮೊದಲು ಕುಡಿಯುವ ನೀರು ಪೂರೈಕೆ, ಉಳಿದ ನೀರು ಕೆರೆಗೆ ಹರಿಸಲಾಗುವುದು, ಹೇಮಾವತಿಯಿಂದ ನೀರು ಆರಂಭವಾಗಲಿದ್ದು, ದಾರಿಯಲ್ಲಿ ಸಿಗುವ ಊರುಗಳಿಗೆ ನೀರು ಕೊಡಬೇಕಾಗಿದೆ, ಕೋಲಾರಕ್ಕೆ 3 ರಿಂದ 4 ಟಿಎಂಸಿ ನೀರು ಬರಲಿದೆ ಎಂದರು. ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಕೇಸನ್ನ ಆತ್ಮಹತ್ಯೆ ಅಂತ ಬಿಂಬಿಸಲು ಯತ್ನಿಸಿದ್ದರು: ಸಿಬಿಐ ರಿಮ್ಯಾಂಡ್‌ ಕಾಪಿಯಲ್ಲಿ ರಹಸ್ಯ ಸ್ಫೋಟ!

    ಕೊರಟಗೆರೆವರೆಗೂ ಕಾಲುವೆ ಮುಖಾಂತರ ನೀರು ಬರುತ್ತದೆ. ನಂತರ ದೊಡ್ಡಬಳ್ಳಾಪುರದಿಂದ ಪೈಪ್ ಲೈನ್ ಮಾಡಲಾಗುವುದು, ನೀರು ಕದಿಯುವರಿಗೆ ಕಠಿಣ ಶಿಕ್ಷೆ ನೀಡಲಾಗುವುದೆಂದು ತಿಳಿಸಿದರು. ಇದನ್ನೂ ಓದಿ: ಮುಸ್ಲಿಂ ಯುವಕರ ಬೈಕ್‌ ರ‍್ಯಾಲಿಗೆ ಅನುಮತಿ – ಬಿ.ಸಿ ರೋಡ್‌ನಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ

  • ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ, ಎತ್ತಿನಹೊಳೆ ಯೋಜನೆ ನೀರು ಬಿಡುಗಡೆ: ಡಿಕೆಶಿ

    ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ, ಎತ್ತಿನಹೊಳೆ ಯೋಜನೆ ನೀರು ಬಿಡುಗಡೆ: ಡಿಕೆಶಿ

    ಬೆಂಗಳೂರು: ಗೌರಿ ಹಬ್ಬದ ದಿನ ಸಿಎಂ ಗಂಗೆ ಪೂಜೆ ಮಾಡಿ, ಎತ್ತಿನಹೊಳೆ ಯೋಜನೆ (Ettinahole Project) ನೀರು ಬಿಡುಗಡೆ ಮಾಡಲಿದ್ದಾರೆ ಎಂದು ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, 7 ಕಡೆ ಎತ್ತಿನಹೊಳೆ ಯೋಜನೆ ಪ್ರಾರಂಭ ಮಾಡಲಾಗುತ್ತೆ. ಗೌರಿ ಹಬ್ಬದ ದಿನ ಗಂಗೆಗೆ 12 ಗಂಟೆ 5 ನಿಮಿಷಕ್ಕೆ ಸಿಎಂ (CM Siddaramaiah) ಪೂಜೆ ನೆರವೇರಿಸಲಿದ್ದಾರೆ. ಎಲ್ಲ ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂಓದಿ: ಜಮ್ಮು ಸೇನಾ ನೆಲೆಯ ಮೇಲೆ ಉಗ್ರರ ದಾಳಿ – ಯೋಧನಿಗೆ ಗಾಯ

    ಯೋಜನೆಗೆ ಬಹಳ ಜನ ಅಡಚಣೆ ಮಾಡುತ್ತಿದ್ದರು. ಕೆಲವರು ನೀರು ಹೋಗುವುದೆ ಇಲ್ಲ ಅಂತಾರೆ. ಎಲ್ಲ ಕಡೆ ಮಾತನಾಡಿ ಸರಿ ಮಾಡಿದ್ದೇವೆ. ಎಲ್ಲರೂ ಸಹಕಾರ ಕೊಟ್ಟಿದ್ದಾರೆ. ಈಗಾಗಲೇ ಟ್ರಯಲ್ ರನ್ ಕೂಡ ಮಾಡಿದ್ದೇನೆ ಎಂದು ಹೇಳಿದರು.

    ಕರ್ನಾಟಕ (Karnataka) ರಾಜ್ಯದ ಇತಿಹಾಸದಲ್ಲಿ ದೊಡ್ಡ ಪಂಪ್‌ಗಳನ್ನ ಉಪಯೋಗಿಸುತ್ತಿದ್ದೇವೆ. 5 ವರ್ಷ ಗ್ಯಾರಂಟಿ ಇರಲಿದೆ. 132 ಕಿಮೀ ನೀರು ವಾಣಿವಿಲಾಸಕ್ಕೆ ಬಿಡುಗಡೆ ಮಾಡುತ್ತೇವೆ. ಅದಾದ ಬಳಿಕ ಎಸ್ಕೇಪ್ ರೂಟ್ ಮಾಡಿ ಬಿಡುತ್ತೇವೆ. ಇದಕ್ಕಾಗಿ 502 ಎಕರೆ ಜಮೀನು ಅರಣ್ಯ ಭೂಮಿ ಬಿಟ್ಟುಕೊಡಬೇಕಾಗಿದೆ. ಅರಣ್ಯ ಇಲಾಖೆಯವರದು ಸ್ವಲ್ಪ ಕಸಿವಿವಿ ಇದೆ. ವಾರದೊಳಗೆ ಈ ಸಮಸ್ಯೆ ಬಗೆಹರಿಸಬಹುದು. ನಾಲ್ಕೈದು ತಿಂಗಳಲ್ಲಿ ಎಲ್ಲ ಕೆಲಸ ಆರಂಭ ಆಗಲಿದೆ. ತುಮಕೂರು ತನಕ ನೀರು ತರುತ್ತೇವೆ. 2027ಕ್ಕೆ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ನೀಡಿದರು. ಇದನ್ನೂಓದಿ: ಅಪರಾಧಿ ಎಂದು ಸಾಬೀತಾದರೂ ಮನೆಗಳನ್ನು ಧ್ವಂಸ ಮಾಡಲು ಸಾಧ್ಯವಿಲ್ಲ – ಬುಲ್ಡೋಜರ್ ನ್ಯಾಯದ ವಿರುದ್ಧ ಸುಪ್ರೀಂ ಅಸಮಾಧಾನ

    ಇನ್ನು ಇದೇ ವೇಳೆ ತುಂಗಭದ್ರಾ ಡ್ಯಾಂ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ, ಬೆಳೆಗಿಂತ ಡ್ಯಾಂ ಮುಖ್ಯ ಎಂದು ತೀರ್ಮಾನ ಮಾಡಿ ಡ್ಯಾಂನಿಂದ ನೀರು ಹೊರಗೆ ಬಿಡಲಾಯಿತು. 4 ದಿನದಲ್ಲಿ ಗೇಟ್ ಸರಿಪಡಿಸಿದ್ದೇವೆ, 50% ನೀರು ಹೋಗಿತ್ತು. 105.79 ಟಿಎಮ್‌ಸಿ ನೀರು ಗರಿಷ್ಠ ಸಾಮರ್ಥ್ಯ, ಈಗ 98 ಟಿಎಮ್‌ಸಿ ನೀರು ಸಂಗ್ರಹ ಇದೆ. ಇದನ್ನೂಓದಿ: ಹುದ್ದೆ ಸದ್ಯ ಖಾಲಿ ಇಲ್ಲ, ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ: ಡಿಕೆಶಿ

    ಇನ್ನು ಎರಡು ಮೂರು ದಿನದಲ್ಲಿ ನೀರು ತುಂಬಲಿದೆ. ಕನ್ನಯ್ಯ ನಾಯ್ಡು ಸೇರಿ 108 ಜನ ಎಂಜಿನಿಯರ್ಸ್ ಕೆಲಸ ಮಾಡಿದ್ದಾರೆ. ಅವರನ್ನು ಗೌರವಿಸಿ ಜೊತೆಗೆ ಅವತ್ತು ಸನ್ಮಾನ ಕಾರ್ಯಕ್ರಮ ಕೂಡ ಇರುತ್ತೆ. ಪ್ರಶಸ್ತಿ ಪತ್ರ ಕೊಡಲು ತೀರ್ಮಾನ ಮಾಡಿದ್ದೇವೆ ಎಂದರು.

    ಈಗಾಗಲೇ ರಾಜ್ಯದ ಡ್ಯಾಂಗಳ ಸ್ಥಿತಿಗತಿ ಅಧ್ಯಯನಕ್ಕೆ ಕಮಿಟಿ ರಚನೆ ಆಗಿದೆ. ಸೆಕ್ಷನ್ 38,39 ಡ್ಯಾಂ ಸೇಫ್ಟಿ ಆಕ್ಟ್ ಪ್ರಕಾರ ಡ್ಯಾಂ ಸೇಫ್ಟಿ ಕಮಿಟಿ ರಚನೆ ಮಾಡಿದ್ದೇವೆ. ಸಿಡಬ್ಲ್ಯೂಸಿಯ ಸಿ.ಕೆ.ಬಜಾಜ್ ಅವರ ನೇತೃತ್ವದಲ್ಲಿ ಕಮಿಟಿ ರಚನೆ ಆಗಿದೆ ಎಂದು ಹೇಳಿದರು. ಇದನ್ನೂಓದಿ: ನನಗೂ ಸಿಎಂ ಆಗೋ ಆಸೆ ಇದೆ : ಜಮೀರ್ ಅಹ್ಮದ್

  • ಕರಾವಳಿಗೆ ಮೋಸ ಮಾಡಿದ್ರಾ ಬಿಎಸ್‍ವೈ? – ಕಟೀಲ್‍ಗೆ ಮುಖಭಂಗ

    ಕರಾವಳಿಗೆ ಮೋಸ ಮಾಡಿದ್ರಾ ಬಿಎಸ್‍ವೈ? – ಕಟೀಲ್‍ಗೆ ಮುಖಭಂಗ

    – ಅಂದು ವಿರೋಧ, ಇಂದು ಹಣ ಬಿಡುಗಡೆ

    ಬೆಂಗಳೂರು: ಬಜೆಟ್‍ನಲ್ಲಿ ಎತ್ತಿನಹೊಳೆ ಯೋಜನೆಗೆ 1,500 ಕೋಟಿ ಬಿಡುಗಡೆ ಬಗ್ಗೆ ಪ್ರಸ್ತಾಪ ನೋಡಿದಾಗ ಕರಾವಳಿಗರು ಸುಸ್ತೋ ಸುಸ್ತು. ಯಾಕೆಂದರೇ ಇದೇ ಬಿಜೆಪಿಯವರು ಎತ್ತಿನ ಹೊಳೆ ಯೋಜನೆ ವಿರೋಧಿಸಿ 2016ರಲ್ಲಿ ರಥಯಾತ್ರೆ ಮಾಡಿದ್ದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎತ್ತಿನ ಹೊಳೆ ಯೋಜನೆ ವಿರೋಧಿಸಿ ದೊಡ್ಡ ಮಟ್ಟದ ಹೋರಾಟ ಮಾಡಿದ್ದರು. ಅಲ್ಲದೇ ರಥಯಾತ್ರೆ ಮಾಡಿ ಜನರನ್ನು ಎತ್ತಿನ ಹೊಳೆ ವಿರೋಧಿಸಿ ಹೋರಾಟ ಮಾಡುವಂತೆ ಸಂಘಟಿಸಿದ್ದರು. ಆದರೆ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಬಿಜೆಪಿ ವರಸೆ ಬದಲಾಗಿದೆ.

    ಅಧಿಕಾರಕ್ಕೆ ಬರುವ ಮೊದಲು ಎತ್ತಿನಹೊಳೆ ವಿರೋಧಿಸಿ ರಥಯಾತ್ರೆ ಮಾಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎತ್ತಿನ ಹೊಳೆ ಯೋಜನೆಗೆ ಹಣಕಾಸು ಮಂಜೂರು ಮಾಡಿ ಈಗ ಟೀಕೆಗೆ ಒಳಗಾಗಿದೆ. ಎತ್ತಿನ ಹೊಳೆ ಯೋಜನೆ ಜಾರಿ ಮಾಡಲು ನಾವು ಬಿಡಲು ಸಾಧ್ಯವೇ ಇಲ್ಲ ಅಂತಾ ನಳಿನ್ ದೊಡ್ಡ ದೊಡ್ಡ ಭಾಷಣಗಳನ್ನ ಮಾಡಿದ್ದರು. ಆದರೆ ಈಗ ಅವರದ್ದೇ ಸರ್ಕಾರ ಬಂದ ಮೇಲೆ ಯೋಜನೆಗೆ ದುಡ್ಡು ಬಿಡುಗಡೆ ಮಾಡಿದೆ. ಎತ್ತಿನ ಹೊಳೆ ಹೋರಾಟ ಕೇವಲ ಪಾಲಿಟಿಕ್ಸ್ ಗಿಮಿಕ್ ಎಂದು ಕರಾವಳಿಯವರು ಮಾತಾನಾಡಿಕೊಳ್ಳುತ್ತಿದ್ದಾರೆ.

  • ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    ಮಹದಾಯಿಗೆ 500 ಕೋಟಿ, ಎತ್ತಿನಹೊಳೆಗೆ 1500 ಕೋಟಿ – ನೀರಾವರಿಗೆ ಸಿಕ್ಕಿದ್ದು ಏನು?

    – ಅಡಿಕೆ ಬೆಳೆಗಾರರ ಸಾಲಕ್ಕೆ ಬಡ್ಡಿ ವಿನಾಯಿತಿ
    – ಮಹಿಳಾ ಮೀನುಗಾರರಿಗೆ ದ್ವಿಚಕ್ರ ವಾಹನ

    ಬೆಂಗಳೂರು: ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ ಒಟ್ಟಾರೆ 32,259 ಕೋಟಿ ರೂ. ಅನುದಾನವನ್ನು ಯಡಿಯೂರಪ್ಪ ನೀಡಿದ್ದು ಸೂಕ್ಷ್ಮ ನೀರಾವರಿಗೆ 627 ಕೋಟಿ ರೂ. ಅನುದಾನ ಪ್ರಕಟಿಸಿದ್ದಾರೆ.

    ಮುಖ್ಯಾಂಶಗಳು
    ರಾಜ್ಯದ ಪ್ರತಿ ಗ್ರಾಮದಲ್ಲಿ “ಜಲಗ್ರಾಮ ಕ್ಯಾಲೆಂಡರ್” ಸಿದ್ಧಪಡಿಸಲು ಕ್ರಮ. ಕರಾವಳಿ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ “ಕಿಂಡಿ ಅಣೆಕಟ್ಟು ಯೋಜನೆ”ಗಳ ವ್ಯಾಪಕ ಅನುಷ್ಠಾನಕ್ಕೆ ಮಾಸ್ಟರ್ ಪ್ಲಾನ್.

    ಅಟಲ್ ಭೂ-ಜಲ ಯೋಜನೆಯಡಿ 1202 ಕೋಟಿ ರೂ.ಗಳನ್ನು ಬಳಸಿಕೊಂಡು ರಾಜ್ಯದ ಆಯ್ದ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಿಸಲು ಕ್ರಮ. ರಾಜ್ಯದ ಬೃಹತ್ ನೀರಾವರಿ ಯೋಜನೆಯಡಿಯಲ್ಲಿನ ಅಚ್ಚುಕಟ್ಟು ಪ್ರದೇಶಗಳಲ್ಲಿ ಫ್ಲಡ್ ಇರಿಗೇಷನ್ ಪದ್ಧತಿಯನ್ನು ಇಸ್ರೇಲ್ ಮಾದರಿಯಲ್ಲಿ ಸೂಕ್ಷ್ಮ ನೀರಾವರಿಗೆ ಪರಿವರ್ತಿಸಲು ಕ್ರಮ. ಇದನ್ನೂ ಓದಿ: ಸಂಚಾರಿ ಕೃಷಿ ಹೆಲ್ತ್ ಕ್ಲಿನಿಕ್, ಸಣ್ಣ ರೈತರಿಗೆ 10 ಸಾವಿರ – ಕೃಷಿಗೆ ಸಿಕ್ಕಿದ್ದು ಏನು?

    ಜಲಸಂಪನ್ಮೂಲ ಇಲಾಖೆಯ ಮೂಲಕ ಒಂದು ಲಕ್ಷ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ. ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಿ ನಾಲಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 500 ಕೋಟಿ ರೂ. ಅನುದಾನ.

    ಎತ್ತಿನಹೊಳೆ ಯೋಜನೆಗೆ 1500 ಕೋಟಿ ರೂ. ಅನುದಾನ, ಮೊದಲನೆಯ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲು ಕ್ರಮ. ಹೂಳು ತುಂಬಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯದ ಕೊರತೆಯನ್ನು ನೀಗಿಸಲು ಪರ್ಯಾಯ ಹರಿವು ನಾಲೆ ಮೂಲಕ ನವಲೆ ಹತ್ತಿರ ಸಮತೋಲನಾ ಜಲಾಶಯ ನಿರ್ಮಾಣದ ವಿಸ್ತೃತ ಯೋಜನಾ ವರದಿ ತಯಾರಿಕೆಗೆ 20 ಕೋಟಿ ರೂ. ಅನುದಾನ

    ರಾಜ್ಯದಲ್ಲಿ 5000 ಕೋಟಿ ರೂ.ಗಳ ವೆಚ್ಚದಲ್ಲಿ ಹೊಸ ಏತ ನೀರಾವರಿ ಯೋಜನೆಗಳ ಅನುಷ್ಠಾನ. ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗೆ ಕುಡಿಯುವ ನೀರು ಪೂರೈಕೆಗೆ ತಿಂತಿಣಿ ಬ್ರಿಡ್ಜ್ ಬಳಿ ಕೃಷ್ಣಾ ನದಿಗೆ ಜಲಾಶಯ ನಿರ್ಮಾಣ- ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕ್ರಮ.

    ರಾಮನಗರ ಜಿಲ್ಲೆಯ ಕಣ್ವ ಫಾರ್ಮ್‍ನಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ರೇಷ್ಮೆ ಹುಳು ಸಂಸ್ಕರಣಾ ಘಟಕ ಸ್ಥಾಪನೆಗೆ ಕ್ರಮ. ರಾಜ್ಯದಲ್ಲಿ ಪಶುಸಂಗೋಪನಾ ಆರ್ಥಿಕ ಚಟುವಟಿಕೆಗಳ ವಿಸ್ತರಣೆಗೆ ಸಮೀಕ್ಷೆ ನಡೆಸಿ, ಸಮಗ್ರ ನೀತಿ ರಚನೆ.

    ವಿದೇಶಿ ತಳಿಯ ಹಂದಿಗಳನ್ನು ಆಮದು ಮಾಡಿಕೊಳ್ಳುವ “ಸಮಗ್ರ ವರಾಹ ಅಭಿವೃದ್ಧಿ” ಯೋಜನೆಗೆ ಐದು ಕೋಟಿ ರೂ. ಅನುದಾನ. ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕುಕ್ಕುಟ ತ್ಯಾಜ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನ ಕೇಂದ್ರ ಸ್ಥಾಪನೆ.

    ಲಿಂಗ ನಿರ್ಧಾರಿತ ವೀರ್ಯನಳಿಕೆಗಳಿಂದ ಕೃತಕ ಗರ್ಭಧಾರಣೆ ಮೂಲಕ ಹೆಣ್ಣು ಕರುಗಳ ಜನನ ಹೆಚ್ಚಿಸಲು ಎರಡು ಕೋಟಿ ರೂ. ಅನುದಾನ. ಆಧುನಿಕ ಮೀನುಗಾರಿಕೆ ತಾಂತ್ರಿಕತೆ ಅಳವಡಿಕೆಯ ಉತ್ತೇಜನಕ್ಕೆ 1.5 ಕೋಟಿ ರೂ. ವೆಚ್ಚದಲ್ಲಿ “ಕರ್ನಾಟಕ ಮತ್ಸ್ಯ ವಿಕಾಸ ಯೋಜನೆ” ಜಾರಿ.

    “ಮಹಿಳಾ ಮೀನುಗಾರರ ಸಬಲೀಕರಣ” ಯೋಜನೆಯಡಿ 1,000 ಮೀನುಗಾರ ಮಹಿಳೆಯರಿಗೆ ದ್ವಿಚಕ್ರ ವಾಹನಗಳನ್ನು ನೀಡಲು ಐದು ಕೋಟಿ ರೂ. ಅನುದಾನ. ಮುಲ್ಕಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.

    ಮಂಗಳೂರು ತಾಲ್ಲೂಕು ಕುಳಾಯಿಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಮೀನುಗಾರಿಕೆ ಬಂದರಿನಲ್ಲಿ 12.5 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ. ಉಡುಪಿ ಜಿಲ್ಲೆಯ ಹೆಜಮಾಡಿಕೋಡಿಯಲ್ಲಿ ಪರಿಷ್ಕೃತ ಅಂದಾಜು ವೆಚ್ಚ 181 ಕೋಟಿ ರೂ.ಗಳಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ. ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಬಂದರು ಅಭಿವೃದ್ಧಿಗೆ 130 ಕೋಟಿ ರೂ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮೀನುಗಾರಿಕಾ ಬಂದರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ನಾಲ್ಕು ಕೋಟಿ ರೂ. ಉತ್ತರ ಕನ್ನಡ ಜಿಲ್ಲೆಯ ತೆಂಗಿನಗುಂಡಿ ಬಂದರಿನ ಅಳಿವೆ ಹೂಳೆತ್ತುವ ಕಾಮಗಾರಿಗೆ ಐದು ಕೋಟಿ ರೂ.

    ಉಡುಪಿ ಜಿಲ್ಲೆ ಬೈಂದೂರು ತಾಲ್ಲೂಕಿನ ಮರವಂತೆಯ ಹೊರ ಬಂದರಿನ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು 85 ಕೋಟಿ ರೂ. ಅನುದಾನ. ಕೊಡೇರಿ ಮೀನುಗಾರಿಕೆ ಬಂದರಿನ ಅಭಿವೃದ್ಧಿ ಕಾಮಗಾರಿಗಳಿಗೆ ಎರಡು ಕೋಟಿ ರೂ. ಅನುದಾನ.

    ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (DCC), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (PCARD) ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (PACS) ಗಳಿಂದ ನೀಡಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ. 466 ಕೋಟಿ ರೂ. ನೆರವು. 92 ಸಾವಿರ ರೈತರಿಗೆ ಪ್ರಯೋಜನ.

    ಅಡಿಕೆ ಬೆಳೆಗಾರರ ಪ್ರಾಥಮಿಕ/ ಮಾರುಕಟ್ಟೆ ಸಹಕಾರ ಸಂಘಗಳಲ್ಲಿ ಪ್ರತಿ ರೈತ ಕುಟುಂಬಕ್ಕೆ ನೀಡುವ ದೀರ್ಘಾವಧಿ ಕೃಷಿ ಸಾಲದ ಪೈಕಿ ಗರಿಷ್ಠ ಎರಡು ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.5 ರಷ್ಟು ಬಡ್ಡಿ ವಿನಾಯಿತಿ

    ಕೃಷಿ ಮೌಲ್ಯ ಸರಪಳಿಯ ಅಭಿವೃದ್ಧಿಗಾಗಿ 100 ಎಫ್‍ಪಿಒ ರಚನೆ, ಈ ಎಫ್‍ಪಿಒ ಗಳ ಮೂಲಕ ಮೌಲ್ಯ ಸರಪಳಿ ಅಭಿವೃದ್ಧಿಗೆ ಎಂಟು ಕೋಟಿ ರೂ. ನೆರವು. ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖರೀದಿಗಾಗಿ ಸ್ಥಾಪಿಸಲಾಗಿರುವ ಕನಿಷ್ಠ ಬೆಂಬಲ ಬೆಲೆ ಆವರ್ತ ನಿಧಿಯ ಮೊತ್ತ ಅಗತ್ಯಕ್ಕೆ ಅನುಗುಣವಾಗಿ 2000 ಕೋಟಿ ರೂ. ವರೆಗೆ ಹೆಚ್ಚಳ.

  • ನೀರಿಗಾಗಿ ಭೂಮಿ ಕೊಟ್ಟರು-ಭೂಮಿ ಪಡೆದವರು ಪರಿಹಾರ ಕೊಡಲು ಮರೆತ್ರು

    ನೀರಿಗಾಗಿ ಭೂಮಿ ಕೊಟ್ಟರು-ಭೂಮಿ ಪಡೆದವರು ಪರಿಹಾರ ಕೊಡಲು ಮರೆತ್ರು

    ಹಾಸನ: ದೀಪದ ಕೆಳಗೆ ಕತ್ತಲು ಎನ್ನುವಂತಾಗಿದೆ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ. ಪರ ವಿರೋಧಗಳ ಆರಂಭವಾದ ಯೋಜನೆ ಕಾಮಗಾರಿಗೆ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇವೆ. ಯೋಜನೆಗಾಗಿ ಸ್ವಾಧೀನವಾದ ಭೂಮಿಗೆ ಸೂಕ್ತ ಪರಿಹಾರ ನೀಡದ ಕಾರಣಕ್ಕೆ ರೊಚ್ಚಿಗೆದ್ದಿರುವ ಹಾಸನ ಜಿಲ್ಲೆ ಆಲೂರು ತಾಲೂಕಿನ ನೂರಾರು ರೈತರು, ಕಳೆದೊಂದು ವಾರದಿಂದ ಯೋಜನೆಗೆ ಅಡ್ಡಿ ಪಡಿಸಿದ್ದಾರೆ. ಇದರಿಂದಾಗಿ ಬೃಹತ್ ಕಾಮಗಾರಿ ಆಲೂರು ಭಾಗದಲ್ಲಿ ಸ್ಥಗಿತಗೊಂಡಿದ್ದು, ಪರಿಹಾರ ಕೊಡುವವರೆಗೂ ಕಾಮಗಾರಿ ನಡೆಯಲು ಬಿಡೋದಿಲ್ಲ ಅಂತ ಭೂ ಮಾಲೀಕರು ಪಟ್ಟು ಹಿಡಿದಿದ್ದಾರೆ.

    ಬಯಲುಸೀಮೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಭರವಸೆ ಕೊಟ್ಟಿದ್ದ ಸರ್ಕಾರ ಮಾತು ಬರೀ ಮಾತಾಗಿಯೇ ಉಳಿದಿದೆ. ಹಾಸನದಲ್ಲಿ ಸುಮಾರು 13 ಸಾವಿರ ಕೋಟಿ ರೂಪಾಯಿ ವೆಚ್ಚದ ಎತ್ತಿನಹೊಳೆ ಯೋಜನೆ ಚಾಲನೆ ಪಡೆದು ಈಗಾಗಲೇ ನಾಲ್ಕೈದು ವರ್ಷಗಳೇ ಕಳೆದು ಹೋಗಿವೆ. ಸಕಲೇಶಪುರ ನಂತರ ಆಲೂರು ತಾಲೂಕಿನ ಪಾಳ್ಯ ಹೋಬಳಿ ಮಾರ್ಗವಾಗಿ ಸುಮಾರು 18 ಕಿಲೋ ಮೀಟರ್ ಉದ್ದದ ಎತ್ತಿನಹೊಳೆ ಕಾಲುವೆ ಹಾದು ಹೋಗುತ್ತಿದೆ. ಇದಕ್ಕಾಗಿ 16 ಹಳ್ಳಿಗಳ ವ್ಯಾಪ್ತಿಯ ರೈತರ ಭೂಮಿಯನ್ನು ಪಡೆಯಲಾಗಿದೆ. ಕಾಮಗಾರಿ ಆರಂಭವಾದ 6 ತಿಂಗಳಲ್ಲಿ 1 ಎಕರೆಗೆ 39 ಲಕ್ಷ ರೂಪಾಯಿ, ಖಾಲಿ ಜಮೀನಿಗೆ 24 ಲಕ್ಷ ರೂಪಾಯಿ ಪರಿಹಾರ ಕೊಡ್ತೀವಿ ಅಂದಿದ್ದ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಪರಿಹಾರ ನೀಡೋವರೆಗೆ ಕಾಮಗಾರಿ ಮುಂದುವರಿಸಲು ಬಿಡಲ್ಲ ಅಂತ ರೈತರು ಪಟ್ಟು ಹಿಡಿದಿದ್ದಾರೆ.

    ಕಾಮಗಾರಿ ವೇಳೆ ಬೃಹತ್ ಬಂಡೆ ಸಿಡಿಸಲು ಸ್ಫೋಟಕ ಬಳಸುತ್ತಿರುವುದರಿಂದ ಹಲವು ಗ್ರಾಮಗಳ ಮನೆಗಳು ಬಿರುಕು ಬಿಟ್ಟಿದ್ದು, ನಿವಾಸಿಗಳು ಆತಂಕದಲ್ಲಿದ್ದಾರೆ. ಅಲ್ಲದೇ ಜೆಸಿಬಿಗಳ ಮೂಲಕ ಕಾಲುವೆ ತೋಡಿರುವುದರಿಂದ ಅಂತರ್ಜಲವೂ ಕುಸಿಯುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೂ ಮನವಿ ಸಲ್ಲಿಸಿದ್ದಾರೆ.

    ಕುಡಿಯುವ ನೀರಿಗಾಗಿ ಜಮೀನು ಕಳೆದುಕೊಂಡಿರುವ ರೈತರು ಅತ್ತ ಪರಿಹಾರವೂ ಇಲ್ಲ. ಇತ್ತ ಉಳುಮೆ ಮಾಡಿ ಜೀವನ ಸಾಗಿಸಲು ಜಮೀನು ಇಲ್ಲದೇ ಪರದಾಡುವಂತಾಗಿದೆ. ಇನ್ನಾದರೂ ರೈತರ ಸಂಕಷ್ಟವನ್ನು ಮನದಟ್ಟು ಮಾಡ್ಕೊಂಡು ಸರ್ಕಾರ ಕೊಟ್ಟ ಮಾತು ಈಡೇರಿಸುತ್ತಾ ಕಾದು ನೋಡಬೇಕಿದೆ.

    https://www.youtube.com/watch?v=z0npOVG11L4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv