Tag: ettinahole

  • ತುಮಕೂರಿನಲ್ಲಿ 62 ಕೆರೆಗೆ ಎತ್ತಿನಹೊಳೆ ನೀರು: ಜಿ.ಪರಮೇಶ್ವರ್

    ತುಮಕೂರಿನಲ್ಲಿ 62 ಕೆರೆಗೆ ಎತ್ತಿನಹೊಳೆ ನೀರು: ಜಿ.ಪರಮೇಶ್ವರ್

    ತುಮಕೂರು: 2008ರಲ್ಲಿ ನಾನು ಕ್ಷೇತ್ರಕ್ಕೆ ಬಂದಾಗ ನೀಡಿದ್ದ ನೀರಾವರಿ ಭರವಸೆ ಈಡೇರಿಸಿದ್ದೇನೆ. ಬೂಟಾಟಿಕೆಯ ರಾಜಕಾರಣ ಮಾಡಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.

    ಕೊರಟಗೆರೆ (Koratagere) ತಾಲೂಕಿನ ಗೊರವನಹಳ್ಳಿ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ನಡೆದ ಎತ್ತಿನಹೊಳೆ (Ettinahole) ಯೋಜನೆಯಡಿ ತಾಲೂಕಿನ 62 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದನ್ನೂ ಓದಿ: Uttar Pradesh | ಅಳಿಯನ ತಂದೆಯೊಂದಿಗೆ 4 ಮಕ್ಕಳ ತಾಯಿ ಪರಾರಿ

    ಗೃಹಸಚಿವ ಸ್ಥಾನದ ಜವಾಬ್ದಾರಿ ಹೊತ್ತಿರುವ ಕಾರಣ ಕ್ಷೇತ್ರದ ಹಳ್ಳಿ, ಹಳ್ಳಿಗೂ ಬರಲು ಸಾಧ್ಯವಾಗಿಲ್ಲ. ಆದರೆ ಕ್ಷೇತ್ರದ ಜನರನ್ನು ಮರೆತಿಲ್ಲ ಎಂದರು. ಇದನ್ನೂ ಓದಿ: IPL 2025 | ಸೂಪರ್‌ ಸಂಡೇನಲ್ಲಿ ಚೆನ್ನೈ Vs ಮುಂಬೈ ಮೆಗಾ ಫೈಟ್‌

  • ವರ್ಷ ವರ್ಷ ಹಬ್ಬ ಬರುತ್ತೆ ಆದ್ರೆ ನಾಳೆಯ ಹಬ್ಬ ಮತ್ತೆ ಬರಲ್ಲ: ಡಿಕೆಶಿ

    ವರ್ಷ ವರ್ಷ ಹಬ್ಬ ಬರುತ್ತೆ ಆದ್ರೆ ನಾಳೆಯ ಹಬ್ಬ ಮತ್ತೆ ಬರಲ್ಲ: ಡಿಕೆಶಿ

    ಬೆಂಗಳೂರು: ವರ್ಷ ವರ್ಷ ಹಬ್ಬ ಬರುತ್ತದೆ. ಆದರೆ ನಾಳೆಯ ಹಬ್ಬ ಮತ್ತೆ ಬರಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

    ಎತ್ತಿನ ಹೊಳೆ ಯೋಜನೆಗೆ (Yettinahole Project) ಚಾಲನೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡಿದ್ದೇವೆ. ಕೆಲವರು ನೀರು ತರಲು ಆಗುವುದಿಲ್ಲ ನಾವು ಮೀಸೆ ಬೋಳಿಸಿಕೊಳ್ಳುತ್ತೇವೆ ಎಂದಿದ್ದರು. ಈಗ ವಾಣಿ ವಿಲಾಸದವರೆಗೆ ನೀರು ಹೋಗುತ್ತಿದೆ. ಮುಂದೆ ಎಲ್ಲಾ ಕಡೆಯೂ ನೀರು ಹರಿಯಲಿದೆ ಎಂದರು.

    ಪಕ್ಷದ ನಾಯಕರಿಗೆ ಮನವಿ ಮಾಡಿದ್ದೇನೆ. ಹಬ್ಬ ವರ್ಷ ವರ್ಷ ಬರುತ್ತದೆ. ಆದರೆ ನಾಳೆಯ ಹಬ್ಬ ಮತ್ತೆ ಬರುವುದಿಲ್ಲ. ಅದಕ್ಕೆ ಎಲ್ಲರೂ ಬರಬೇಕೆಂದು ಕೇಳಿಕೊಂಡಿದ್ದೇನೆ. ಕಾರ್ಯಕ್ರಮ ಹಿನ್ನೆಲೆಯಲ್ಲಿ ನಾನು ಸಂಪುಟ ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: Punjab Economic Crisis | ವಿದ್ಯುತ್‌ ಸಬ್ಸಿಡಿ ರದ್ದುಗೊಳಿಸಿ ಪೆಟ್ರೋಲ್‌, ಡೀಸೆಲ್‌ ಜೊತೆ ಬಸ್‌ ಟಿಕೆಟ್‌ ದರ ಏರಿಸಿದ ಪಂಜಾಬ್‌

    ಬೆಂಗಳೂರು ಗಾರ್ಬೇಜ್ ಸಿಟಿ (Garbage City) ಎಂದು ಬಿಜೆಪಿಯವರು (BJP) ಆರೋಪ‌ ಮಾಡುತ್ತಾರೆ. ಬಿಜೆಪಿಯವರು ಇರುವುದೇ ಆರೋಪ ಮಾಡಲು. ನಾನು ಶುದ್ಧ ಮಾಡಬೇಕು ಅಂತ ಹೊರಟಿದ್ದೇನೆ. ಇದಕ್ಕಾಗಿಯೇ ಹೈದರಾಬಾದ್‌, ಚೆನ್ನೈಗೆ ಹೋಗಿದ್ದೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ನೋಡಿ ಬಂದಿದ್ದೇನೆ. ನಾನು ಆರೋಪಗಳ ಬಗ್ಗೆ ಮಾತನಾಡುವುದಿಲ್ಲ. ನಮ್ಮ‌ಕೆಲಸವೇ ಅವರಿಗೆ ಉತ್ತರ ಕೊಡುತ್ತದೆ ಎಂದು ಹೇಳಿದರು.

    ಕನ್ನಡ ಚಿತ್ರರಂಗದಲ್ಲಿನ ಮೀಟೂ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಮೀಟೂ ಅಂದ್ರೆ ಏನು ಎಂದು ಮಾಧ್ಯಮಗಳಿಗೆ ಮರು‌ಪ್ರಶ್ನೇ ಮಾಡಿದ ಡಿಕೆಶಿ, ಈ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉತ್ತರಿಸಿದರು.

     

  • ಎತ್ತಿನಹೊಳೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ – ಸಂಸದ ಎಲ್.ಹನುಮಂತಯ್ಯ ಮನವಿ

    ಎತ್ತಿನಹೊಳೆ ಯೋಜನೆಯನ್ನ ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ – ಸಂಸದ ಎಲ್.ಹನುಮಂತಯ್ಯ ಮನವಿ

    ನವದೆಹಲಿ: ರಾಜ್ಯದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಿ ಘೋಷಿಸಬೇಕು ಎಂದು ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ರಾಜ್ಯಸಭೆಯಲ್ಲಿ ಆಗ್ರಹಿಸಿದ್ದಾರೆ.

    ಶೂನ್ಯ ವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಅತಿ ಹೆಚ್ಚು ಒಣ ಭೂಮಿ ಮತ್ತು ಕುಡಿಯುವ ನೀರಿಲ್ಲದೆ ಬಳಲುತ್ತಿರುವ 2ನೇ ಅತಿದೊಡ್ಡ ರಾಜ್ಯ ಕರ್ನಾಟಕವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮೀಣ ಜಿಲ್ಲೆ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳು ಕುಡಿಯುವ ನೀರಿಲ್ಲದೆ ತೀವ್ರವಾಗಿ ಹೆಣಗಾಡುತ್ತಿದೆ. ಈ 6 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು “ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ” ಎಂಬ ಯೋಜನೆಯನ್ನು ಕೈಗೆತ್ತಿಕೊಂಡಿದೆ.

    ಮಳೆಗಾಲದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಬಳಿ ಪಶ್ಚಿಮ ಹರಿಯುವ ತೊರೆಗಳ ಮೇಲ್ಭಾಗದಿಂದ 24 ಟಿಎಂಸಿ ನೀರನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ರಾಷ್ಟ್ರೀಯ ಜಲ ಅಭಿವೃದ್ಧಿ ಪ್ರಾಧಿಕಾರ (NWDA) ಪ್ರಸ್ತಾಪಿಸಿರುವ ನೇತ್ರಾವತಿ-ಹೇಮವತಿ ಲಿಂಕ್‍ಗಳಿಗೆ ಬದಲಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಯನ್ನು ಪರಿಗಣಿಸಿ, ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸಬೇಕು ಎಂದರು.

    ಕುಡಿಯುವ ನೀರು ದೇಶದಲ್ಲಿ ಮೂಲಭೂತ ಹಕ್ಕಾಗಿರಬೇಕು. ಕರ್ನಾಟಕದಲ್ಲಿ ಅನೇಕ ಜಿಲ್ಲೆಗಳು ತೀವ್ರ ಬರವನ್ನು ಎದುರಿಸುತ್ತಿವೆ. 30 ಜಿಲ್ಲೆಗಳಲ್ಲಿ ಸುಮಾರು 15 ಜಿಲ್ಲೆಗಳು ಕುಡಿಯುವ ನೀರಿಗೆ ಸಂಬಂಧಿಸಿದಂತೆ ತೀವ್ರ ಬರವನ್ನು ಎದುರಿಸುತ್ತಿವೆ. ಈ 6 ಜಿಲ್ಲೆಗಳ ಸಾಮಾನ್ಯ ಜನರ ಹಿತದೃಷ್ಟಿಯಿಂದ ಭಾರತ ಸರ್ಕಾರವು ಈ ರಾಷ್ಟ್ರೀಯ ಯೋಜನೆಯನ್ನು ಶೀಘ್ರವೇ ಘೋಷಿಸಬೇಕು ಮತ್ತು ಯೋಜನೆಯನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

  • ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಶುರು – ಇತ್ತ ಚಿತ್ರದುರ್ಗದಲ್ಲಿ ಎತ್ತುಗಳಾದ ರೈತರು

    ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಶುರು – ಇತ್ತ ಚಿತ್ರದುರ್ಗದಲ್ಲಿ ಎತ್ತುಗಳಾದ ರೈತರು

    ಹಾಸನ, ಚಿತ್ರದುರ್ಗ: ಬಹುಚರ್ಚೆಯ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ರಾಷ್ಟ್ರೀಯ ಹಸಿರು ಪೀಠ ಗ್ರೀನ್‍ಸಿಗ್ನಲ್ ನೀಡಿದೆ. ಆದ್ರೆ ಹಾಸನ ಜಿಲ್ಲೆಯಲ್ಲಿ ರಾಜಕೀಯ ಕಚ್ಚಾಟ ಮುಂದುವರಿದಿದೆ.

    ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸೋ ಎತ್ತಿನಹೊಳೆ ಕಾಮಗಾರಿಗೆ ಎನ್‍ಜಿಟಿ ಅಸ್ತು ಎಂದಿದ್ರೂ ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪ ಮುಂದುವರಿದಿದೆ. ಕೋಲಾರ- ಚಿಕ್ಕಬಳ್ಳಾಪುರಕ್ಕೆ ನೀರು ಕೊಟ್ಟೇ ಕೊಡ್ತೀವಿ ಅಂತ ಸರ್ಕಾರದವರು ಹೇಳಿ ಹೊರಟಿದ್ದಾರೆ. ಆದ್ರೆ ಈ ವರ್ಷ ಕೊಡ್ತಾರೋ ಮುಂದಿನ ವರ್ಷ ಕೊಡ್ತಾರೋ ಅಥವಾ ಅದರ ಮುಂದಿನ ವರ್ಷ ಕಾಂಗ್ರೆಸ್ ಸರ್ಕಾರ ಬಂದಾಗ ಕೊಡ್ತಾರೋ ಗೊತ್ತಿಲ್ಲ. ಈ ವರ್ಷ ನೀರು ಕೊಡೋದು ಕಷ್ಟ ಅಂತ ಕಾಣತ್ತೆ ಎಂಬುವುದಾಗಿ ಮಾಜಿ ಪ್ರಧಾನಿ ದೇವೇ ಗೌಡ ಹೇಳಿದ್ದಾರೆ.

    ದೇವೇಗೌಡರ ಹೇಳಿಕೆಗೆ ತಿರುಗೇಟು ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಮಂಜು ಎತ್ತಿನಹೊಳೆ ಯೋಜನೆ ವೈಜ್ಞಾನಿಕವಾಗಿಯೇ ಇದೆ. ಮುಂದಿನ ಜನವರಿ ವೇಳೆಗೆ ಮೊದಲ ಹಂತದ ಕಾಮಗಾರಿ ಮುಗಿಸಿ ನೀರನ್ನು ಲಿಫ್ಟ್ ಮಾಡಿ ಬೇಲೂರು ಕಡೆಗೆ ಹರಿಸ್ತೇವೆ ಅಂದ್ರು. ಇದನ್ನು ಮಾಡಲಾಗದವರು ರಾಜಕೀಯಕ್ಕಾಗಿ ಏನೇನೋ ಮಾತಾಡ್ತಿದ್ದಾರೆ ಅಂತ ಕುಟುಕಿದ್ರು.

    ಒಟ್ಟಿನಲ್ಲಿ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಪಶ್ಚಿಮಘಟ್ಟಗಳಲ್ಲಿ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ. ಜೊತೆಗೆ ಹೇಮಾವತಿ ಜಲಾಶಯ ಕೂಡ ಭರ್ತಿ ಆಗಿಲ್ಲ. ಇನ್ನು ಎತ್ತಿನಹೊಳೆ ಮೂಲಕ ನೀರು ಎಲ್ಲಿಂದ ಹರಿಯಲಿದೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ.

    ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಆರೇಳು ವರ್ಷಗಳಿಂದ ಮಳೆಯಿರಲಿಲ್ಲ. ಕೆರೆ-ಕಟ್ಟೆಗಳು ಬರಿದಾಗಿ ಅಂತರ್ಜಲ ಕುಸಿದಿತ್ತು. ಕುಡಿವ ನೀರಿಗೂ ಹಾಹಾಕಾರ ಏರ್ಪಟ್ಟಿತ್ತು. ಇದ್ರಿಂದ ನೊಂದಿದ್ದ ರೈತರು
    ದನಕರು, ಎತ್ತು ಮಾರಾಟ ಮಾಡಿ ಕೃಷಿಯಿಂದ ವಿಮುಖರಾಗಿದ್ರು.

    ಆದ್ರೆ ಈಗ ಪರಿಸ್ಥಿತಿ ಬದಲಾಗಿದೆ. ಉತ್ತಮ ಮಳೆಯಾಗುತ್ತಿದೆ. ಇದು ಮತ್ತೆ ಕೃಷಿ ಚಟುವಟಿಕೆಗೆ ರೈತರನ್ನ ಪ್ರೇರೇಪಿಸಿದೆ. ಎತ್ತುಗಳು ಸಿಗದಿದ್ರೂ ಅನ್ನದಾತ ಉಳುಮೆಗೆ ಮುಂದಾಗಿದ್ದಾನೆ. ಮನೆ ಮಂದಿಯೆಲ್ಲಾ ಸೇರಿ ನೊಗಕ್ಕೆ ಹೆಗಲು ಕೊಟ್ಟು ಉಳುಮೆ ಕಾರ್ಯದಲ್ಲಿ ತೊಡಗಿದ್ದಾರೆ.

    ತಮ್ಮ ಕೈಗಳು ಹೆಪ್ಪುಗಟ್ಟಿದ್ದರೂ ದಿಟ್ಟ ಮನಸ್ಸಿನಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿರೋ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗೊಲ್ಲರಹಟ್ಟಿ ರೈತರನ್ನ ಕೇಳಿದ್ರೆ, ಹಲವಾರು ವರ್ಷಗಳಿಂದ ಮಳೆಯೇ ಇರಲಿಲ್ಲ. ಈಗ ಕಷ್ಟಪಟ್ಟು ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಮಾಡಿದ್ದೇವೆ ಅಂತ ಹೇಳ್ತಿದ್ದಾರೆ.