Tag: Eshwarapapa

  • ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

    ಪ್ರಧಾನಿ ಒಂದೇ ಒಂದು ಮಾತು – ಈಶ್ವರಪ್ಪ ದಿಢೀರ್‌ ರಾಜೀನಾಮೆ

    ಬೆಂಗಳೂರು: ರಾಜೀನಾಮೆ ನೀಡಲ್ಲ ಎಂದು ಹಠಕ್ಕೆ ಬಿದ್ದಿದ್ದ ಈಶ್ವರಪ್ಪ ದಿಢೀರ್‌ ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸರ್ಕಾರಕ್ಕೆ ಮುಜುಗರ ಆಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆಯೇ ಹೈಕಮಾಂಡ್‌ ಈಶ್ವರಪ್ಪಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಆದರೆ ಹೈಕಮಾಂಡ್‌ ನಾಯಕರೊಬ್ಬರು ಈಶ್ವರಪ್ಪ ರಾಜೀನಾಮೆಯನ್ನು ತಡೆದಿದ್ದರು.

    ESHWARAPPA

    ಹೈಕಮಾಂಡ್‌ ಸೂಚಿಸಿದ್ದರೂ ರಾಜೀನಾಮೆ ನೀಡದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸಿಟ್ಟಾಗಿದ್ದರು. ನಿಯಮ ಎಲ್ಲರಿಗೂ ಒಂದೇ ಎಂದು ಹೇಳಿ ಪ್ರಧಾನಿ ಗರಂ ಆಗಿದ್ದರು. ನಿನ್ನೆ ಈಶ್ವರಪ್ಪ ರಾಜೀನಾಮೆ ‌ತಡೆದಿದ್ದ ಆ ಹೈಕಮಾಂಡ್ ನಾಯಕನಿಗೂ‌ ಮೋದಿ ಕ್ಲಾಸ್‌ ಮಾಡಿದ್ದರು.

    ಹೈಕಮಾಂಡ್‌ ನಾಯಕರಿಂದ ಒತ್ತಡ ಹೆಚ್ಚಾಗುತ್ತಿದ್ದಂತೆ ಸಿಎಂ ಸೂಚನೆ ಮೇರೆಗೆ ಈಶ್ವರಪ್ಪ ತನ್ನ ನಿರ್ಧಾರ ಬದಲಾಯಿಸಿ ಇಂದು ಸಂಜೆ ಶಿವಮೊಗ್ಗದ್ದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ.

    ನಾನು ತಪ್ಪು ಮಾಡಿಲ್ಲ. ಯಾವುದೇ ಅಕ್ರಮ ಎಸಗಿಲ್ಲ. ಇದು ನಮ್ಮ ಕುಲದೇವರು ಚೌಡೇಶ್ವರಿ ಮೇಲೆ ಆಣೆ. ನಾಳೆ ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಅವರಿಗೆ ರಾಜೀನಾಮೆ ಪತ್ರವನ್ನು ನೀಡುತ್ತೇನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.