Tag: Eshwara Khandre

  • ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು – ಸಂರಕ್ಷಿತ ಪ್ರದೇಶ ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ್ ಖಂಡ್ರೆ

    ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು – ಸಂರಕ್ಷಿತ ಪ್ರದೇಶ ಘೋಷಣೆಯಿಂದ ಸ್ಥಳೀಯರಿಗೆ ತೊಡಕಿಲ್ಲ: ಈಶ್ವರ್ ಖಂಡ್ರೆ

    ಬೆಂಗಳೂರು: 133 ಪ್ರಭೇದದ ಪಕ್ಷಿಗಳ ತಾಣ ಗ್ರೇಟರ್ ಹೆಸರಘಟ್ಟ (Hesaraghatta Grassland) ಈಗ ಸುರಕ್ಷಿತ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ (Eshwara Khandre) ಹೇಳಿದ್ದಾರೆ.

    ಭವಿಷ್ಯದ ದೃಷ್ಟಿಯಿಂದ ಬೆಂಗಳೂರಿಗೆ ಅತ್ಯಾವಶ್ಯಕವಾಗಿರುವ ಹೆಸರಘಟ್ಟ ಕೆರೆ ಮತ್ತು ಸುತ್ತಲಿನ ಪ್ರದೇಶವನ್ನು ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’  (Hesaraghatta Conservation Reserve) ಎಂದು ಘೋಷಿಸಿದ ಮುಖ್ಯಮಂತ್ರಿ ಮತ್ತು ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.

    133 ಪ್ರಭೇದದ ಪಕ್ಷಿಗಳು, 40 ಸ್ಥಳೀಯ ಹಾಗೂ ನೈಸರ್ಗಿಕ ಸಸ್ಯಗಳು ಮತ್ತು ಚಿರತೆ, ತೋಳ, ಕಾಡುಪಾಪ ಮೊದಲಾದ ವನ್ಯಜೀವಿಗಳಿಗೆ ಆಶ್ರಯತಾಣವಾದ ಈ ಕಾನನ ಮತ್ತು ಹುಲ್ಲುಗಾವಲು ಪ್ರದೇಶದ ಸಂರಕ್ಷಣೆ ನಮ್ಮ ಆದ್ಯತೆಯ ವಿಷಯವಾಗಿತ್ತು. ಈ ಪ್ರದೇಶದಲ್ಲಿ ಹೆಸರಘಟ್ಟ ಕೆರೆ, ಬ್ಯಾತ ಕೆರೆ ಸೇರಿದಂತೆ ಹಲವು ಕೆರೆಗಳಿದ್ದು ವಲಸೆ ಹಕ್ಕಿಗಳ ಸಂತಾನೋತ್ಪತ್ತಿಯ ತಾಣವೂ ಆಗಿದೆ. ಬೆಂಗಳೂರು ನಗರದ ಜನತೆಯ ನೀರಿನ ಅವಶ್ಯಕತೆ ಪೂರೈಸುತ್ತಿದ್ದ ಹೆಸರಘಟ್ಟ ಕೆರೆ ಭವಿಷ್ಯದಲ್ಲೂ ರಾಜಧಾನಿಯ ಪ್ರಮುಖ ಜಲ ಮೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಬೆಂಗಳೂರು ನಗರ ಜಿಲ್ಲೆ ಯಲಹಂಕ ಉತ್ತರ ತಾಲೂಕಿನ ಒಟ್ಟು 5678.32 ಎಕರೆ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ಅಧಿನಿಯಮ 1972ರ ಕಲಂ 36(ಎ) ಅನ್ವಯ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸಲಾಗಿದ್ದು, ಈಗ ಇಡೀ ಪ್ರದೇಶ ಸುರಕ್ಷಿತವಾಗಿರಲಿದೆ. ಕಳೆದ ಅ.7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಗುರುವಾರ ಸಚಿವ ಸಂಪುಟ ಸಭೆ ಇದಕ್ಕೆ ಅಧಿಕೃತ ಮುದ್ರೆ ಒತ್ತಿದೆ ಎಂದು ತಿಳಿಸಿದ್ದಾರೆ.

    ಈ ಘೋಷಣೆಯಿಂದ ಅಪರೂಪದ ನೈಸರ್ಗಿಕ ಹುಲ್ಲುಗಾವಲಿನ ಸಂರಕ್ಷಣೆ ಆಗಲಿದೆ. ಪಕ್ಷಿ ಮತ್ತು ಕೀಟಗಳ ಸಂರಕ್ಷಣೆಗೆ ಹುಲ್ಲುಗಾವಲಿನ ರಕ್ಷಣೆ ಅತ್ಯಗತ್ಯ. ಬೆಂಗಳೂರಿನೊಳಗೇ (Bengaluru) ಇರುವ ಇಂತಹ ಸುಂದರ ಹುಲ್ಲುಗಾವಲನ್ನು ರಕ್ಷಿಸಲು ಎಲ್ಲ ಒತ್ತಡಗಳನ್ನೂ ಮೀರಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಸ್ಥಳೀಯರಿಗೆ ತೊಡಕಿಲ್ಲ
    ‘ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು’ ಎಂದು ಘೋಷಣೆ ಮಾಡಿರುವುದರಿಂದ ಸ್ಥಳೀಯರಿಗೆ ಯಾವುದೇ ತೊಡಕಾಗುವುದಿಲ್ಲ. ಆದರೆ ಈ ಘೋಷಣೆ ಅತ್ಯಮೂಲ್ಯವಾದ ಭೂಮಿಯ ಒತ್ತುವರಿ ಮತ್ತು ಅಪರೂಪದ ಪಕ್ಷಿ, ಪ್ರಾಣಿಗಳ ಕಳ್ಳಬೇಟೆಯನ್ನು ನಿಯಂತ್ರಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಕಾಂತಾರ-2 ಶೂಟಿಂಗ್ ವಿವಾದ; ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಪ್ರಾಥಮಿಕ ವರದಿ: ಈಶ್ವರ್ ಖಂಡ್ರೆ

    ಕಾಂತಾರ-2 ಶೂಟಿಂಗ್ ವಿವಾದ; ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಪ್ರಾಥಮಿಕ ವರದಿ: ಈಶ್ವರ್ ಖಂಡ್ರೆ

    ಕಾಂತಾರಾ-2 ಶೂಟಿಂಗ್ (Kantara 2) ವಿವಾದಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ ಎಂಬುದು ಪ್ರಾಥಮಿಕ ವರದಿ ಎಂದು ಸಚಿವರು ತಿಳಿಸಿದ್ದಾರೆ.

    ಸಿನಿಮಾ ಚಿತ್ರೀಕರಣಕ್ಕೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗಿದೆ. ನಮ್ಮ ಅರಣ್ಯ ಭೂಮಿಯಲ್ಲಿ ಚಿತ್ರೀಕರಣ ಮಾಡಿಲ್ಲ, ಕಂದಾಯ ಜಮೀನಿನಲ್ಲಿ ಮಾಡಿದ್ದಾರೆ ಎಂದು ಪ್ರಾಥಮಿಕ ವರದಿ ಬಂದಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: BBK 11: ಫಿನಾಲೆ ವಾರಕ್ಕೆ ಘಟಾನುಘಟಿ ಸ್ಪರ್ಧಿಗಳು ಎಂಟ್ರಿ

    ಅರಣ್ಯ ಭೂಮಿಯಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ ಎಂಬುದು ಪ್ರಾಥಮಿಕ ವರದಿ. ಆದರೂ ಸಂಪೂರ್ಣ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮಾಧ್ಯಮಗಳಲ್ಲಿ ಬಂದ ವರದಿಯ ಅನ್ವಯ ಸೂಚನೆ ಕೊಟ್ಟಿದ್ದೇನೆ. ನಿಯಮಗಳ ಪ್ರಕಾರ ಅನುಮತಿ ಕೊಡಲಾಗಿತ್ತು. ಆದರೆ, ಅದು ಕಂದಾಯ ಭೂಮಿ, ಗೋಮಾಳ ಎನ್ನಲಾಗಿದೆ. ಅರಣ್ಯ ಭೂಮಿಯಲ್ಲಿ ಉಲ್ಲಂಘನೆ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕಾಂತಾರ-2 ಚಿತ್ರತಂಡ ಷರತ್ತುಗಳನ್ನು ಉಲ್ಲಂಘಿಸಿ ವನ್ಯಜೀವಿಗಳಿಗೆ ಅಥವಾ ಸಸ್ಯಸಂಕುಲಕ್ಕೆ ಹಾನಿ ಮಾಡಿದ್ರೇ ಚಿತ್ರೀಕರಣ ಸ್ಥಗಿತಗೊಳಿಸಲು ಕ್ರಮ ವಹಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ನಿರ್ದೇಶಕರಿಗೆ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ನಾನು ಸ್ವಲ್ಪ ಕೋಪಿಷ್ಠ ಅದೇ ಸಮಸ್ಯೆ – ನಟ ದುನಿಯಾ ವಿಜಯ್‌

    ಹಾಸನ ಜಿಲ್ಲೆಯ ಸಕಲೇಶಪುರ ಯಸಳೂರು ಭಾಗದಲ್ಲಿ ತಾತ್ಕಾಲಿಕವಾಗಿ ಸೆಟ್ ನಿರ್ಮಾಣ ಮಾಡಲು ಜ.3 ರಿಂದ ಜ.15 ರವರೆಗೆ ಅವಕಾಶ ನೀಡಲಾಗಿತ್ತು. ಜೊತೆಗೆ ಜ.15 ರಿಂದ ಜ.25 ರ ವರೆಗೆ 23 ದಿನ ಶೂಟಿಂಗ್‌ಗೆ ಅವಕಾಶ ನೀಡಲಾಗಿದೆ. ಆದರೆ, ಕಾಂತಾರ ಚಿತ್ರತಂಡ ಕಾಡಿನಂಚಿನ ಅರಣ್ಯ ಪ್ರದೇಶದ ಬಳಿ ನಡೆಸುತ್ತಿರುವ ಚಿತ್ರೀಕರಣದ ವೇಳೆ ಸ್ಫೋಟಕ ಬಳಕೆಯ ಬಗ್ಗೆ ಆರೋಪ ಕೇಳಿಬಂದಿತ್ತು.

  • ಯಾವುದೇ ಸಮುದಾಯಗಳಿಗೆ ಸಮಸ್ಯೆ ಆಗದಂತೆ ಜಾತಿಗಣತಿ ವರದಿ ಬಗ್ಗೆ ನಿರ್ಧಾರ: ಈಶ್ವರ್ ಖಂಡ್ರೆ

    ಯಾವುದೇ ಸಮುದಾಯಗಳಿಗೆ ಸಮಸ್ಯೆ ಆಗದಂತೆ ಜಾತಿಗಣತಿ ವರದಿ ಬಗ್ಗೆ ನಿರ್ಧಾರ: ಈಶ್ವರ್ ಖಂಡ್ರೆ

    ಬೆಂಗಳೂರು: ಯಾವುದೇ ಸಮುದಾಯಗಳಿಗೆ ಸಮಸ್ಯೆ ಆಗದಂತೆ ಜಾತಿಗಣತಿ ವರದಿ (Caste Census Report) ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಸ್ಪಷ್ಟಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಅವರು ಮಾತನಾಡಿದರು. ಈ ವೇಳೆ ಜಾತಿ ಗಣತಿ ವರದಿಯನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಮಂಡನೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ಈಗಾಗಲೇ ನಮ್ಮ ಸರ್ಕಾರ ಜಾತಿಗಣತಿ ವರದಿ ತಯಾರಿ ಮಾಡಿದೆ. ವರದಿಯನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಮಂಡನೆ ಮಾಡ್ತೀವಿ. ಕ್ಯಾಬಿನೆಟ್‌ನಲ್ಲಿ ಅದರ ಸಾಧಕ-ಬಾದಕಗಳನ್ನ ಚರ್ಚೆ ಮಾಡ್ತೀವಿ ಎಂದಿದ್ದಾರೆ.

    ಜಾತಿಗಣತಿ ವರದಿ ಮಂಡನೆ ಬಳಿಕ ವಿವಿಧ ಸಮುದಾಯಗಳ ಜೊತೆ ಚರ್ಚೆ ಮಾಡ್ತೀವಿ. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ಹಾಗೆ ಜಾತಿಗಣತಿ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

  • ಸಿಎಂ, ಸಚಿವರ ಡಿನ್ನರ್ ಪಾರ್ಟಿಗೆ ರಾಜಕೀಯ ಲೇಪನ ಬೇಡ: ಈಶ್ವರ್ ಖಂಡ್ರೆ

    ಸಿಎಂ, ಸಚಿವರ ಡಿನ್ನರ್ ಪಾರ್ಟಿಗೆ ರಾಜಕೀಯ ಲೇಪನ ಬೇಡ: ಈಶ್ವರ್ ಖಂಡ್ರೆ

    ಬೆಂಗಳೂರು: ಸಿಎಂ (Siddaramaiah) ಮತ್ತು ಮಂತ್ರಿಗಳು ಹೊಸ ವರ್ಷದ ಖುಷಿಯಿಂದ ಊಟಕ್ಕೆ ಸೇರಿದ್ದರು. ಅದಕ್ಕೆ ರಾಜಕೀಯ ಕಲ್ಪಿಸೋದು ಬೇಡ ಎಂದು ಡಿನ್ನರ್ ಪಾರ್ಟಿ ಸಭೆಯನ್ನು (Dinner Meeting) ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಸಮರ್ಥಿಸಿಕೊಂಡಿದ್ದಾರೆ.

    ಡಿನ್ನರ್ ಪಾರ್ಟಿ ವಿಚಾರವಾಗಿ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಹೊಸ ವರ್ಷದ ಖುಷಿಯಿಂದ ಊಟಕ್ಕೆ ಎಲ್ಲರೂ ಕರೆಯುತ್ತಾರೆ. ನಾನು ಕೂಡಾ ಊಟಕ್ಕೆ ಕರೆಯುತ್ತೇನೆ. ನಿಮ್ಮನ್ನು ಕರೆಯುತ್ತೇನೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.

    ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ. ಹೊಸ ವರ್ಷದ ಖುಷಿ ಇರುತ್ತೆ‌ ಅದಕ್ಕೆ ಕರೆದು ಊಟ, ಟಿಫನ್‌ಗೆ ಕರೆಯೋದು ಸಾಮಾನ್ಯ. ಅದಕ್ಕೆ ರಾಜಕೀಯ ಅನ್ನೋದು ಬೇಡ ಎಂದಿದ್ದಾರೆ.

    ಏನಿದು ಡಿನ್ನರ್ ಪಾರ್ಟಿ?
    ಇತ್ತೀಚೆಗೆ ಬೆಳಗಾವಿಯಲ್ಲಿ (Belagavi) ಆಪ್ತ ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸದಲ್ಲಿದ್ದರು. ಈ ಹೊತ್ತಿನಲ್ಲೇ ಇತ್ತ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿತ್ತು.

  • ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ: ಈಶ್ವರ್ ಖಂಡ್ರೆ ಪುನರುಚ್ಚಾರ

    ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ: ಈಶ್ವರ್ ಖಂಡ್ರೆ ಪುನರುಚ್ಚಾರ

    ಬೆಂಗಳೂರು: ಬಂಡೀಪುರ (Bandipur) ಅರಣ್ಯದಲ್ಲಿ ರಾತ್ರಿ ಸಂಚಾರ ಇಲ್ಲ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ಪುನರುಚ್ಚರಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಈ ವೇಳೆ ಬಂಡೀಪುರ ಅರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡುವ ಪರವಾಗಿ ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿಯವರು ಇತ್ತೀಚೆಗೆ ಮಾತಾಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಂದಲೂ ಪ್ರಿಯಾಂಕಾ ಗಾಂಧಿ ಅವರ ನಿಲುವಿಗೆ ಬೆಂಬಲ ವ್ಯಕ್ತವಾಗಿತ್ತು. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದ್ಯ ರಾತ್ರಿ 9 ಗಂಟೆವರೆಗೆ ಮಾತ್ರ ರಾತ್ರಿ ಸಂಚಾರಕ್ಕೆ ಅವಕಾಶ ಇದೆ. ಅದು ಹೊರತುಪಡಿಸಿ ರಾತ್ರಿ 9 ಗಂಟೆ ನಂತರ 2 ಬಸ್‌ಗಳ ಮಾತ್ರ ಸಂಚಾರಕ್ಕೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

    ಇದನ್ನು ಹೊರತುಪಡಿಸಿ ಆಸ್ಪತ್ರೆ ಸೇರಿ ಎಮರ್ಜೆನ್ಸಿ ಇದ್ದರೆ ಅದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ ವನ್ಯಜೀವಿ ಸಂರಕ್ಷಣೆ ಹಿನ್ನಲೆ ರಾತ್ರಿ ಸಂಚಾರಕ್ಕೆ ಅವಕಾಶ ಇಲ್ಲ. ಹೀಗಾಗಿ ರಾತ್ರಿ ಸಂಚಾರ ಸಾಧ್ಯವಿಲ್ಲ‌. ಈ ಬಗ್ಗೆ ನಮ್ಮ ನಾಯಕರಿಗೆ ಏನಾದರೂ ಮಾಹಿತಿ ಅಗತ್ಯವಿದ್ದರೆ ಮನವರಿಕೆ ಮಾಡುತ್ತೇನೆ ಎಂದಿದ್ದಾರೆ.

  • ಗುತ್ತಿಗೆದಾರ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ ಘೋಷಣೆ

    ಗುತ್ತಿಗೆದಾರ ಸಚಿನ್ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ ಘೋಷಣೆ

    – ನ್ಯಾಯಯುತವಾಗಿ ತನಿಖೆ ನಡೆಯುತ್ತೆ ಎಂದು ಭರವಸೆ

    ಬೀದರ್: ಗುತ್ತಿಗೆದಾರ ಸಚಿನ್ (Contractor Suicide) ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಘೋಷಿಸಿದ್ದಾರೆ.

    ಬೀದರ್‌ನ (Bidar) ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ್ ಗ್ರಾಮದಲ್ಲಿರುವ ಗುತ್ತಿಗೆದಾರ ಸಚಿನ್ ಮನೆಗೆ ಭಾನುವಾರ ಭೇಟಿ ನೀಡಿದ ಸಚಿವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಿಮ್ಮ ಕುಟುಂಬದ ಜೊತೆಗೆ ನಾನಿದ್ದೇನೆ. ನಿಮಗೆ ನ್ಯಾಯ ಕೊಡಿಸುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿ ಅವರು ಏನೇ ಮಾಡಿದ್ರು ನಾನು ರಾಜೀನಾಮೆ ಕೊಡೊಲ್ಲ: ಪ್ರಿಯಾಂಕ್ ಖರ್ಗೆ

    ಕುಟುಂಬಸ್ಥರ ಭೇಟಿ ನಂತರ ಮಾಧ್ಯಮದವರ ಜೊತೆಗೆ ಮಾತಾಡಿದ ಖಂಡ್ರೆ, ಸಚಿನ್ ಆತ್ಮಹತ್ಯೆ ಒಂದು ನೋವಿನ ಸಂಗತಿಯಾಗಿದೆ. ಇದು ಖೇದಕರ ಸಂಗತಿ. ನಾನು, ನಮ್ಮ ಸರ್ಕಾರ ಸಚಿನ್ ಕುಟುಂಬಸ್ಥರ ಜೊತೆಗೆ ಇದ್ದೇವೆ. ನಾನು ಸಚಿನ್ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದ್ದೇನೆ. ಸಚಿನ್ ಆತ್ಮಹತ್ಯೆ ಕೇಸ್ ನಿರ್ಲಕ್ಷ್ಯ ಮಾಡಿದ ಪೊಲೀಸರು ಮೇಲೆ ಕ್ರಮವಾಗುತ್ತೆ. ಈ ಕೇಸ್ ರೈಲ್ವೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೇಸ್ ತನಿಖೆ ನ್ಯಾಯಯುತವಾಗಿ ನಡೆಯುತ್ತೆ. ಈ ಪ್ರಕರಣದಲ್ಲಿ ಯಾರೇ ಇರಲಿ ಅವರ ಮೇಲೆ ಕಾನೂನು ರೀತಿ ಕ್ರಮವಾಗುತ್ತದೆ. ಸಚಿನ್ ಕುಟುಂಬಕ್ಕೆ ಸರ್ಕಾರ ಹಾಗೂ ಖಾಸಗಿಯಾಗಿ 10 ಲಕ್ಷ ಪರಿಹಾರ ಘೋಷಣೆ ಮಾಡಿದ್ದೇವೆ. ನಾನು ಮೊನ್ನೆಯೇ ಬರಬೇಕಾಗಿತ್ತು, ಬರಲು ಆಗಲಿಲ್ಲ. ಬೆಳಗಾವಿ ಕಾರ್ಯಕ್ರಮ ಹಾಗೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಕಾರಣಕ್ಕೆ ಬರಲಿಲ್ಲ. ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಭವಿಸಿದಂತೆ ಈಗಾಗಲೇ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಕೇಸನ್ನ ನಾನೇ ತನಿಖೆ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಸಚಿನ್ ಮರಣ ಪತ್ರವನ್ನ ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ಆ ವರದಿ ಬರಲಿ ಎಂದು ತಿಳಿಸಿದರು.

    ಕಾಂಗ್ರೆಸ್‌ನ ಐದು ಗ್ಯಾರಂಟಿಯಲ್ಲಿ ಗುತ್ತಿಗೆದಾರ ಆತ್ಮಹತ್ಯೆ ಆರನೇ ಗ್ಯಾರಂಟಿ ವಿಚಾರವಾಗಿ ಮಾತನಾಡಿ, ನಮ್ಮ ಐದು ಗ್ಯಾರಂಟಿ ಸಕ್ಸಸ್ ಆಗಿವೆ. ಅದೇ ಹೊಟ್ಟೆ ಕಿಚ್ಚಿನಿಂದ ಬಿಜೆಪಿಯವರು ಹೀಗೆ ಮಾತಾಡುತ್ತಿದ್ದಾರೆ. ಈ ನೆಲದ ಕಾನೂನಿನ ಅಡಿಯಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತೆ. ಸಚಿನ್ ಆತ್ಮಹತ್ಯೆ ಕೇಸ್ ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿಸುತ್ತೇವೆ ಎಂದರು. ಇದನ್ನೂ ಓದಿ: ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್ – ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಸೇರಿ 6 ಮಂದಿ ವಿರುದ್ಧ ಎಫ್‍ಐಆರ್

    ಸಚಿನ್ ಸಾವಿನಿಂದ ಮನೆಗೆ ಆಧಾರ ಸ್ತಂಭವಾಗಿದ್ದ ಸಾವು ಕುಟುಂಬಕ್ಕೆ ತುಂಬಲಾರದ ನಷ್ಟ. ನಾನು ಹಾಗೂ ನಮ್ಮ ಸರ್ಕಾರ ದುಃಖತಪ್ತ ಕುಟುಂಬದ ಜೊತೆಗೆ ಇದ್ದೇವೆ. ಈಗಾಗಲೇ ಪರವಾರದ ಜೊತೆ ಸುದೀರ್ಘ ಸಮಾಲೋಚನೆ ಮಾಡಿದ್ದೇನೆ. ಪ್ರಮುಖವಾಗಿ ಸಚಿನ್ ಆತ್ಮಹತ್ಯೆ ಮಾಹಿತಿ ಬಂದಾಗ ಪೊಲೀಸರು ದೂರು ತೆಗೆದುಕೊಳ್ಳಬೇಕಿತ್ತು. ನಿಷ್ಪಕ್ಷಪಾತ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಅಂತಾ ಸೂಚನೆ ನೀಡದ್ದೇನೆ. ಯಾವ ಠಾಣೆ ಪೊಲೀಸರ ನಿರ್ಲಕ್ಷ್ಯ ಇದೆಯೋ ಅವರ ಮೇಲೆ ಕ್ರಮ ಆಗುತ್ತೆ. ಸಚಿನ್ ಆತ್ಮಹತ್ಯೆ ಪ್ರಕರಣವನ್ನು ರೈಲ್ವೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಸಿಎಂ ಜೊತೆಗೂ ಮಾತನಾಡಿದ್ದೇನೆ. ಸಾವಿಗೆ ಕಾರಣರಾದ ವಿರುದ್ಧ ಕ್ರಮವಾಗುತ್ತೆ. ಸಮಾಜದಲ್ಲಿ ಎಲ್ಲರಿಗೂ ಭರವಸೆ ಬರುವ ರೀತಿಯಲ್ಲಿ ಕ್ರಮವಾಗುತ್ತೆ. ತನಿಖೆಯನ್ನ ಸಿಓಡಿಗೆ ವಹಿಸ್ತೇವೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ 10 ಲಕ್ಷ ಪರಿಹಾರ ನೀಡುತ್ತೇವೆ ಎಂದು ತಿಳಿಸಿದರು.

  • ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ: ಈಶ್ವರ್ ಖಂಡ್ರೆ

    ಯತ್ನಾಳ್ ಒಬ್ಬ ಜೋಕರ್, ಮಾನಸಿಕ ರೋಗಿ: ಈಶ್ವರ್ ಖಂಡ್ರೆ

    ಬೀದರ್: ಯತ್ನಾಳ್ (Basanagouda Patil Yatnal) ಒಬ್ಬ ಜೋಕರ್, ಮಾನಸಿಕ ರೋಗಿಯಾಗಿದ್ದು ಅವರು ಮಾನಸಿಕ ತಜ್ಞರ ಹತ್ತಿರ ಚಿಕಿತ್ಸೆ ಪಡೆದುಕೊಳ್ಳೋದು ಸೂಕ್ತ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwara Khandre) ವ್ಯಂಗ್ಯವಾಡಿದ್ದಾರೆ.

    ಬೀದರ್‌ನಲ್ಲಿ (Bidar) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಯತ್ನಾಳ್ ಅವರು ಬಸವಣ್ಣ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮೂಲಕ ರಣಹೇಡಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆರ್‍ಎಸ್‍ಎಸ್ (RSS) ಮನವೊಲಿಸಲು ಈ ರೀತಿ ಹೇಳಿಕೆಗಳನ್ನು ಅವರು ನೀಡುತ್ತಿರುವುದು ಖಂಡನೀಯ ಎಂದು ಕಿಡಿಕಾರಿದ್ದಾರೆ.

    ವೈಯಕ್ತಿಕ ಸ್ವಾರ್ಥ, ಪಕ್ಷದ ಆಂತರಿಕ ಕಲಹಕ್ಕಾಗಿ ಅವರು ಪ್ರತಿಭಟನೆಯ ನಾಟಕ ಮಾಡುತ್ತಿದ್ದಾರೆ. ಯತ್ನಾಳ್ ಹೇಳಿಕೆ ಬಸವ ಅನುಯಾಯಿಗಳಿಗೆ ತೀವ್ರ ನೋವಾಗಿದೆ. ಅವರಿಗೆ ವಿನಾಶ ಕಾಲೇ ವಿಪರೀತ ಬುದ್ಧಿ ಬಂದಿದೆ. ಬಸವಣ್ಣ ನಮ್ಮೆಲ್ಲರ ಆರಾಧ್ಯ ದೈವ, ಅವರ ಕುರಿತಾಗಿ ಮಾತನಾಡಿರುವುದನ್ನು ಖಂಡಿಸುತ್ತೇನೆ ಎಂದಿದ್ದಾರೆ.

    ಬಿಜೆಪಿಯವರಿಗೆ (BJP) ಬಸವಣ್ಣನವರ ಅನುಯಾಯಿಗಳ ಮತ ಬೇಕು, ಆದರೆ ಲಘುವಾಗಿ ಮಾತನಾಡಿರುವ ಯತ್ನಾಳ್ ವಿರುದ್ಧ ತುಟಿ ಬಿಚ್ಚುತ್ತಿಲ್ಲ. ಯತ್ನಾಳ್ ಮೂಲಕ ಬಸವಣ್ಣನವರಿಗೆ ಅವಮಾನ ಮಾಡಲು ಬಿಜೆಪಿ ಅವರನ್ನು ಚೂ ಬಿಟ್ಟಿದೆ ಎಂದು ಆರೋಪಿಸಿದ್ದಾರೆ.

    ಇನ್ನೂ ಬಿಜೆಪಿ ಅವಧಿಯಲ್ಲೇ ಅತಿಹೆಚ್ಚು ವಕ್ಫ್ ಬೋರ್ಡ್ ನೊಟೀಸ್ ಹೋಗಿದೆ. ಹೋರಾಟದ ಮೂಲಕ ಬಡ ರೈತರನ್ನ ಬಲಿಪಶು ಮಾಡೋಕೆ ಬಿಜೆಪಿ ಹೊರಟಿದೆ ಎಂದು ಕಿಡಿಕಾರಿದ್ದಾರೆ.

  • ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಜೆಸ್ಕಾಂ – ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಈಶ್ವರ್ ಖಂಡ್ರೆ

    ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಜೆಸ್ಕಾಂ – ಅಧಿಕಾರಿಯನ್ನು ತರಾಟೆ ತೆಗೆದುಕೊಂಡ ಈಶ್ವರ್ ಖಂಡ್ರೆ

    ಬೀದರ್: ರೈತರ ಜಮೀನುಗಳಿಗೆ ಬಳಸುವ ಪಂಪ್‌ಸೆಟ್‌ಗಳಿಗೆ ಸರಿಯಾಗಿ ವಿದ್ಯುತ್ ನೀಡದ ಜೆಸ್ಕಾಂ ಅಧಿಕಾರಿಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwara Khandre) ತರಾಟೆಗೆ ತೆಗೆದುಕೊಂಡಿದ್ದಾರೆ.

    ಬೀದರ್‌ನಲ್ಲಿ (Bidar) ನಡೆದ ಕೆಡಿಪಿ ಸಭೆಯಲ್ಲಿ ಜೆಸ್ಕಾಂ (GESCOM) ಅಧಿಕಾರಿಯೊಬ್ಬರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾವು 300ಕ್ಕೂ ಅಧಿಕ ಸೋಲಾರ್ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದೇವೆ. ಆದರೂ ಕೂಡ ರಾತ್ರಿ ವೇಳೆ ರೈತರಿಗೆ ವಿದ್ಯುತ್ ನೀಡಿದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ‘ಜೀಬ್ರಾ’ಗೆ ‘ಭೀಮ’ ಬೆಂಬಲ- ಡಾಲಿ, ಸತ್ಯದೇವ್ ಚಿತ್ರಕ್ಕೆ ದುನಿಯಾ ವಿಜಯ್ ಸಾಥ್

     ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಪರಿಹಾರ ನೀಡುವ ಸಂಬಂಧ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾಖಾನ್ ಜೊತೆಗೆ ಮಾತನಾಡುತ್ತಾ, ರೈತರ ಕುಟುಂಬಕ್ಕೆ ನೀಡಿರುವ ಪರಿಹಾರದ ಚೆಕ್ ರಿಜೆಕ್ಟ್ ಆಗಿದೆ. ಪರಿಹಾರ ಚೆಕ್ ಕೊಟ್ಟರೂ ರಿಜೆಕ್ಟ್ ಆಗುತ್ತಾ? ನಿಮಗೆ ಕಾಮನ್‌ಸೆನ್ಸ್ ಇದೆಯಾ? ಎಂದು ಗರಂ ಆದರು.

    ಇದೇ ವೇಳೆ ಬಿಜೆಪಿ ಶಾಸಕರ ವಿರುದ್ಧ ಹರಿಹಾಯ್ದ ಅವರು, 2.5 ಲಕ್ಷ ಮತಗಳಿಂದ ಗೆದ್ದ ಜನಪ್ರತಿನಿಧಿಗಳಿಗೆ ಅವಮಾನ ಮಾಡುತ್ತಿದ್ದಿರಿ ಎಂದು ಶರಣ ಸಲಗರ್, ಶೈಲೇಂದ್ರ ಬೇಲ್ದಾಳೆ ವಿರುದ್ಧ ಅಸಮಧಾನ ಹೊರಹಾಕಿದರು.

    ಸಚಿವ ರಹೀಂಖಾನ್, ಶಾಸಕರಾದ ಶರಣು ಸಲಗರ್, ಶೈಲೇಂದ್ರ ಬೆಲ್ದಾಳೆ, ಡಿಸಿ ಶಿಲ್ಪಾ ಶರ್ಮಾ, ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.ಇದನ್ನೂ ಓದಿ: ತಮಿಳುನಾಡು | 68 ಮಂದಿ ಬಲಿ ಪಡೆದ ಮದ್ಯ ದುರಂತ – ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

  • ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧರಾಗಿದ್ದರು: ಅಜ್ಜಂಪೀರ್ ಖಾದ್ರಿ ವಿವಾದಾತ್ಮಕ ಹೇಳಿಕೆ

    ಹಾವೇರಿ: ಅಂಬೇಡ್ಕರ್ (B R Ambedkar) ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು ಎಂದು ಶಿಗ್ಗಾಂವಿಯ (Shiggaon) ‘ಕೈ’ ಮುಖಂಡ ಅಜ್ಜಂಪೀರ್ ಖಾದ್ರಿ ವಿವಾದಿತ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಬೌದ್ಧಧರ್ಮ ಸ್ವೀಕರಿಸಿದ್ದರು. ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸದಿದ್ದರೆ ದಲಿತರೆಲ್ಲಾ ಮುಸ್ಲಿಮರಾಗುತ್ತಿದ್ದರು. ಆರ್.ಬಿ ತಿಮ್ಮಾಪುರ್ ಹೋಗಿ ರಹೀಮ್ ಖಾನ್, ಡಾ.ಜಿ ಪರಮೇಶ್ವರ್ ಬದಲು ಫೀರ್ ಸಾಹೇಬ್, ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಿದ್ದರೆ ಎಲ್ ಹನುಮಂತಯ್ಯ ಹೋಗಿ ಹಸನ್ ಸಾಬ್ ಆಗುತ್ತಿದ್ದರು. ಆದರೆ ಈಗಲೂ ಎಲ್ಲೆಲ್ಲಿ ದಲಿತ ಕೇರಿ ಇದೆಯೋ ಅಲ್ಲೆಲ್ಲ ಪಕ್ಕದಲ್ಲೇ ಮುಸ್ಲೀಂ ದರ್ಗಾ ಇದೆ. ದಲಿತರಿಗೂ ಮುಸ್ಲಿಮರಿಗೂ ಇರುವ ಬಾಂಧವ್ಯ ಹಾಗೆ ಇದೆ ಎಂದು ಸೋಮವಾರ ಶಿಗ್ಗಾಂವಿಯ ಹನುಮಂತ್ ಪಾಟೀಲ್ ಕಲ್ಯಾಣ ಮಂಟಪದಲ್ಲಿ ನಡೆದಿದ ಆದಿಜಾಂಬವ ಜಾಗೃತಿ ಸಮಾವೇಶ ಖಾದ್ರಿ (Ajjampir Khadri) ಹೇಳಿದ್ದರು. ಇದಕ್ಕೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ವಕ್ಫ್ ಬೋರ್ಡ್ ವಿರುದ್ಧ ತಿರುಗಿ ಬಿದ್ದ ಅಥಣಿಯ 60 ಮುಸ್ಲಿಂ ಕುಟುಂಬಗಳು

    ಈ ಬೆನ್ನಲ್ಲೇ, ಖಾದ್ರಿ ಹೇಳಿಕೆಯಿಂದ ಕಾಂಗ್ರೆಸ್ ಅಂತರ ಕಾಯ್ದುಕೊಂಡಿದೆ. ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ. ಇಷ್ಟೆಲ್ಲಾ ಆದಮೇಲೆ, ಅಜ್ಜಂಪೀರ್ ಖಾದ್ರಿ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: Madikeri| ಕೊಲೆಯಾದ 18 ವರ್ಷಗಳ ಬಳಿಕ ಬಾಲಕಿಯ ದಫನ – ಪ್ರಕರಣ ಇತ್ಯರ್ಥ

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ಇರಲಿಲ್ಲ. ನಾನು ಎಲ್ಲೋ ಕಾರ್ಯಕ್ರಮದಲ್ಲಿ ಕೇಳಿದ್ದೆ, ಅದನ್ನು ನಿನ್ನೆ ಭಾಷಣ ಮಾಡುವಾಗ ಹೇಳಿದ್ದೇನೆ. ನಮ್ಮ ಕ್ಷೇತ್ರದಲ್ಲಿ ನಾವು ದಲಿತ ಬಾಂಧವರು ತುಂಬಾ ಪ್ರೀತಿಯಿಂದ ಇದ್ದೇವೆ. ಅಂಬೇಡ್ಕರ್ ಅವರ ಬಗ್ಗೆ ನನಗೆ ಅಪಾರ ಗೌರವ ಇದೆ. ಇದರಿಂದ ಯಾವುದೇ ತಪ್ಪು ಸಂದೇಶ ಹೋಗುವುದಿಲ್ಲ. ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಅಂಬೇಡ್ಕರ್, ವಾಲ್ಮೀಕಿ ಎಲ್ಲರ ಫೋಟೋ ಹಾಕಿದ್ದೇನೆ. ನಾವೆಲ್ಲರೂ ಜೊತೆಗೆ ಉತ್ತಮವಾದ ಸಂಬಂಧ ಹೊಂದಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: Shiggaon| ವಿವಾದದ ಬಳಿಕ ಸಂತೆ ಮೈದಾನದಲ್ಲಿ ಹಸಿರು ಬಾವುಟ, ಭಗವಾಧ್ವಜ ತೆರವು

  • ಜಾತಿ ಜನಗಣತಿ ಮತ್ತೊಮ್ಮೆ‌ ಮಾಡಬೇಕೆಂಬ ಆಗ್ರಹ ವೀರಶೈವ ನಾಯಕರಲ್ಲಿದೆ: ಈಶ್ವರ್ ಖಂಡ್ರೆ

    ಜಾತಿ ಜನಗಣತಿ ಮತ್ತೊಮ್ಮೆ‌ ಮಾಡಬೇಕೆಂಬ ಆಗ್ರಹ ವೀರಶೈವ ನಾಯಕರಲ್ಲಿದೆ: ಈಶ್ವರ್ ಖಂಡ್ರೆ

    ಬೆಂಗಳೂರು: ಜಾತಿ ಜನಗಣತಿ (Caste Census) ಸರಿಯಾಗಿ ನಡೆದಿಲ್ಲ. ಸಮುದಾಯದ ಗಣತಿ ಮತ್ತೊಮ್ಮೆ‌ ಮಾಡಬೇಕು ಎಂಬ ಆಗ್ರಹ ವೀರಶೈವ (Veerashaiva Lingayat) ನಾಯಕರಲ್ಲಿದೆ ಎಂದು ಸಚಿವ ಈಶ್ವರ್ ಖಂಡ್ರೆ (Eshwara Khandre) ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂತರಾಜು ವರದಿಯಲ್ಲಿ (Kantharaj Commission) ಏನಿದೆ ಯಾರಿಗಾದ್ರೂ ಗೊತ್ತಿದೆಯಾ? ಜಾತಿ ಜನಗಣತಿ ಬಗ್ಗೆ ಯಾರದ್ದೂ ವಿರೋಧ ಇಲ್ಲ. ಅದರಲ್ಲಿ ರಾಜಕೀಯವೂ ತರಬಾರದು. ಲಿಂಗಾಯತ ಸಮುದಾಯದ ನಾಯಕರು ವೈಜ್ಞಾನಿಕ ಸಮೀಕ್ಷೆ ಆಗಲಿ ಎಂದು ಹೇಳ್ತಿದ್ದಾರೆ. 2011 ರಲ್ಲಿ ಜನಗಣತಿ ಆಗಿದ್ದು. ಇನ್ನೂ ಜನಗಣತಿ ಆಗಿಲ್ಲ. ಜನಗಣತಿ ಸಮಯದಲ್ಲೇ ಜಾತಿ ಗಣತಿ ಮಾಡಬೇಕು ಎಂಬ ಕೂಗಿದೆ. ಈ ಬಗ್ಗೆ ಸಿಎಂಗೆ ಭೇಟಿ ಮಾಡಿ ಅಭಿಪ್ರಾಯ ತಿಳಿಸಿದ್ದೇವೆ ಎಂದರು.

    ಯಾವ ಸಮುದಾಯಕ್ಕೂ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ವರದಿ ಬಿಡುಗಡೆ ಆಗಬೇಕಾ? ಬೇಡವಾ? ಎಂಬುದನ್ನು ಸಚಿವ ಸಂಪುಟದಲ್ಲಿಯೇ ಚರ್ಚೆ ಮಾಡುತ್ತೇವೆ. ವರದಿ ಕ್ಯಾಬಿನೆಟ್‌ಗೆ ಬಂದ ಬಳಿಕ ಅಲ್ಲಿಯೇ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಹತ್ತು ವರ್ಷ ವರದಿ ವಿಳಂಬ ಆಗಿದೆ. ಈ ಬಗ್ಗೆ ಮಾಧ್ಯಮದಲ್ಲಿ ವರದಿ ಬಂದಿದೆ. ಒಂದು ಸಮುದಾಯದ ಜನಸಂಖ್ಯೆ ವರದಿಯಲ್ಲಿ ಕ್ಷೀಣವಾಗುತ್ತಿದ್ದರೆ ಶಂಕೆ ಬರುವುದಿಲ್ವಾ? ವೀರಶೈವ ಲಿಂಗಾಯತ ಸಮುದಾಯದ ನಾಯಕರಿಗೆ ಮತ್ತೊಮ್ಮೆ ಸಮೀಕ್ಷೆ ಮಾಡಬೇಕು ಎಂಬ ಆಗ್ರಹವಿದೆ ಎಂದಿದ್ದಾರೆ.