Tag: eshwar khandre

  • ರಾಜ್ಯದ ಜನತೆಗೆ ಸೆಸ್ ಶಾಕ್ – ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಮುಂದಾದ ಸರ್ಕಾರ

    ರಾಜ್ಯದ ಜನತೆಗೆ ಸೆಸ್ ಶಾಕ್ – ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ ಸಂಗ್ರಹಕ್ಕೆ ಮುಂದಾದ ಸರ್ಕಾರ

    ಬೆಂಗಳೂರು: ರಾಜ್ಯದ ಜನರಿಗೆ ಸರ್ಕಾರ (Karnataka Govt) ಮತ್ತೊಂದು ಸೆಸ್ ಶಾಕ್ ಕೊಟ್ಟಿದೆ. ಪಶ್ಚಿಮ ಘಟ್ಟದ ನದಿ ನೀರು ಪೂರೈಕೆಯಾಗೋ ನಗರಗಳ ಜನರಿಗೆ ಸೆಸ್ ಶಾಕ್ ಕೊಡಲು ಸರ್ಕಾರ ಮುಂದಾಗಿದೆ.

    ಪಶ್ಚಿಮಘಟ್ಟ (Western ghats) ಸಂರಕ್ಷಣೆಗೆ ʻಕಾಪುನಿಧಿʼ ಸಂಗ್ರಹ ಗುರಿ ಹೊಂದಿದ್ದು, ನೀರಿನ ಬಿಲ್‌ನಲ್ಲೇ ʻಹಸಿರು ಸೆಸ್ʼ (Green Cess) ಸಂಗ್ರಹಕ್ಕೆ ಸರ್ಕಾರ ಮುಂದಾಗಿದೆ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸೂಚನೆ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬಿಡಿಗಾಸು ಅನುದಾನ ಬಿಡುಗಡೆ ಮಾಡದೆ ಹಗರಣದ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ: ಸುನಿಲ್ ಕುಮಾರ್ ತಿರುಗೇಟು

    ಪ್ರಕಟಣೆಯಲ್ಲಿ ಏನಿದೆ?
    ಪಶ್ಚಿಮಘಟ್ಟಗಳು ತುಂಗಾ, ಭದ್ರಾ, ಕಾವೇರಿ, ಕಬಿನಿ, ಹೇಮಾವತಿ, ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಹಲವು ನದಿಗಳ ಮೂಲವೂ ಆಗಿದೆ. ರಾಜ್ಯದ ಹಲವು ನಗರ, ಪಟ್ಟಣ ಪ್ರದೇಶಗಳಿಗೆ ಈ ನದಿಗಳ ನೀರನ್ನೇ ಪೂರೈಕೆ ಮಾಡಲಾಗುತ್ತಿದೆ. ಮುಂದೆಯೂ ರಾಜ್ಯದ ನೀರಿನ ಅಗತ್ಯವನ್ನು ಈ ನದಿಗಳೇ ಪೂರೈಸಬೇಕಾಗುತ್ತದೆ. ಹೀಗಾಗಿ ಈ ಎಲ್ಲ ನದಿಗಳ ಮೂಲವಾಗಿರುವ ಪಶ್ಚಿಮಘಟ್ಟವನ್ನು ಸಂರಕ್ಷಿಸಿದರೆ ಮಾತ್ರ ಮುಂದಿನ ದಿನಗಳಲ್ಲಿ ನದಿಗಳು ತುಂಬಿ ಹರಿಯಲು ಸಾಧ್ಯ.

    ಮಂಗಾರು ಮಳೆಯ ಮಾರುತಗಳನ್ನು ತಡೆದು ದೇಶದಾದ್ಯಂತ ವ್ಯಾಪಕ ಮಳೆ ಆಗುವಂತೆ ಮಾಡುವಲ್ಲಿ ಪಶ್ಚಿಮಘಟ್ಟಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟದ ನದಿಗಳಿಂದ ನಗರ, ಪಟ್ಟಣಗಳಿಗೆ ಪೂರೈಕೆ ಆಗುವ ನೀರಿನ ಬಳಕೆಯ ಬಿಲ್ ನಲ್ಲಿ ಕೆಲವೇ ಕೆಲವು ರೂಪಾಯಿ ಹಸಿರು ಸೆಸ್ ವಿಧಿಸಿ, ಕಾಪು ನಿಧಿ ಸ್ಥಾಪನೆ ಸರ್ಕಾರ ಚಿಂತನೆ ನಡೆಸಿದೆ. ಇದನ್ನೂ ಓದಿ: ಸ್ವತಃ ಇಂದಿರಾ ಗಾಂಧಿ ಸ್ವರ್ಗದಿಂದ ಹಿಂತಿರುಗಿಬಂದರೂ 370ನೇ ವಿಧಿ ಮರುಸ್ಥಾಪನೆ ಸಾಧ್ಯವಿಲ್ಲ: ಅಮಿತ್‌ ಶಾ

    ಈ ಹಣವನ್ನು ಪಶ್ಚಿಮಘಟ್ಟ ಅರಣ್ಯ ಅಭಿವೃದ್ಧಿಗಾಗಿ, ವೃಕ್ಷ ಸಂವರ್ಧನೆಗಾಗಿ, ಅರಣ್ಯದಂಚಿನ ರೈತರು ಸ್ವಯಂ ಪ್ರೇರಿತವಾಗಿ ಅರಣ್ಯ ಇಲಾಖೆಗೆ ಮಾರಾಟ ಮಾಡಲು ಇಚ್ಛಿಸುವ ಕೃಷಿ ಭೂಮಿ ಖರೀದಿಸಲು ಬಳಸಬಹುದು. ಜೊತೆಗೆ ಅರಣ್ಯ ಸಂರಕ್ಷಿಸಲು ಮತ್ತು ವನ್ಯಜೀವಿ- ಮಾನವ ಸಂಘರ್ಷ ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೂ ಈ ಹಣ ಬಳಸಬಹುದು. ಈ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ. ನೀರಿನ ಬಿಲ್ ಜೊತೆಯಲ್ಲಿ ಬಳಕೆದಾರರು 2 ಅಥವಾ 3 ರೂ. ಪಾವತಿಸಬೇಕು. ಈ ಹೆಚ್ಚುವರಿ ಹಣವನ್ನು ಪರಿಸರ ಸಂರಕ್ಷಣೆ ಮತ್ತು ಪಶ್ಚಿಮ ಘಟ್ಟದ ಮಹತ್ವದ ಅರಿವು ಮೂಡಿಸಲು ಬಳಕೆ ಮಾಡಲಾಗುತ್ತದೆ. ಹೀಗೆ ಸಂಗ್ರಹವಾಗುವ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಲಾಗುವುದಿಲ್ಲ ಎಂದು ಸಚಿವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

  • ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ ಆರೋಪ – ಎಫ್‍ಐಆರ್ ದಾಖಲು

    ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ ಆರೋಪ – ಎಫ್‍ಐಆರ್ ದಾಖಲು

    ಯಶ್‌ (Yash) ನಟನೆಯ ಟಾಕ್ಸಿಕ್ ಸಿನಿಮಾ (Toxic Film) ಸೆಟ್‍ಗೆ ಮರಗಳನ್ನು ಕಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ.

    ನ್ಯಾಯಾಲಯದ (Court) ಆದೇಶ ಪಡೆದು ಅರಣ್ಯ ಇಲಾಖೆ ಎಫ್‍ಐಆರ್ ದಾಖಲಿಸಿದೆ. ಈ ಸಂಬಂಧ ಕೆವಿನ್ ಸಂಸ್ಥೆ, ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್, ಹೆಚ್‍ಎಂಟಿ ಜನರಲ್ ಮ್ಯಾನೇಜರ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಮರಗಳ ಮಾರಣಹೋಮದ ಆರೋಪ ಕೇಳಿ ಬಂದಿದ್ದ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಸ್ಥಳ ಪರಿಶೀಲನೆ ನಡೆಸಿದ್ದರು. ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದರು.

    ಹೆಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟ್‌ಲೈಟ್ ಚಿತ್ರಗಳಿಂದ ಈ ಕೃತ್ಯ ಸ್ಪಷ್ಟವಾಗಿ ಕಾಣುತ್ತಿದೆ. ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದರು.

  • ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ: ಸಚಿವ ಖಂಡ್ರೆ

    ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ: ಸಚಿವ ಖಂಡ್ರೆ

     – ಕೋವಿಡ್‌ ವೇಳೆ 2000 ಇಂಜೆಕ್ಷನ್ 30,000ಕ್ಕೆ ಕಾಳ ಸಂತೆಯಲ್ಲಿ ಮಾರಾಟ; ಸಚಿವರ ಆರೋಪ

    ಹುಬ್ಬಳ್ಳಿ: ಬಿಜೆಪಿ (BJP) ಭಾರತೀಯ ಜನತಾ ಪಾರ್ಟಿ ಅಲ್ಲಾ, ಭಾರತೀಯ ಜೂಟಾ ಪಾರ್ಟಿ ಎಂದು ಸಚಿವ ಈಶ್ವರ ಖಂಡ್ರೆ (Eshwar Khandre) ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‌ನಲ್ಲಿ ಮೃತ ಪಟ್ಟ ಕುಟುಂಬಸ್ಥರ ಶಾಪ ಬಿಜೆಪಿಗೆ ತಟ್ಟುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ಸರ್ವಾಧಿಕಾರಿ. ಸಿಬಿಐ, ಐಟಿ, ಚುನಾವಣೆ ಆಯೋಗ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದೆ. ಈಗ ನ್ಯಾಯಾಂಗದಲ್ಲೂ ಹಸ್ತಕ್ಷೇಪ ಮಾಡುವುದಕ್ಕೆ ಹೊರಟಿದ್ದಾರೆ. ಬಿಜೆಪಿಯ ಹಿಟ್ಲರ್ ಶಾಹಿ ಮುಂದೆ ನಡೆಯುವುದಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಉಡುಪಿ| ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು

    ಕೋವಿಡ್ ಹಗರಣ ತನಿಖೆ ವಿಚಾರ ಬಗ್ಗೆ ಮಾತನಾಡಿ, ಕೋವಿಡ್‌ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. 2000 ಇಂಜೆಕ್ಷನ್ 30 ಸಾವಿರಕ್ಕೆ ಕಾಳ ಸಂತೆಯಲ್ಲಿ ಮಾರಾಟ ಆಗಿದೆ. ಯಾರ ಕಾಲದಲ್ಲಿ ಇದೆಲ್ಲಾ ಆಗಿದ್ದು ಎಂದು ನಿಮಗೆಲ್ಲಾ ಗೊತ್ತಿದೆ. ಇವರ ದುರಾಡಳಿತದಿಂದ ಸಾವಿರಾರು ಜನ ಮೃತಪಟ್ಟಿದ್ದಾರೆ. ಜನರ ಶಾಪ ಬಿಜೆಪಿಯವರಿಗೆ ತಟ್ಟುತ್ತದೆ ಎಂದರು. ಇದನ್ನೂ ಓದಿ: ಹೊಳೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಯೋಗೇಶ್ವರ್ ಗೆಲುವಿಗೆ ಪತ್ನಿಯಿಂದ ಹೋಮ

    ಮೋದಿ, ಅಮಿತ್ ಶಾ, ಬಿಜೆಪಿ ವಿರುದ್ಧ ಮಾತನಾಡಿದವರನ್ನು ಜೈಲಿಗೆ ಹಾಕಿದ್ದನ್ನು ನೋಡಿದ್ದೇವೆ. ಕಾಂಗ್ರೆಸ್ ಆ ರೀತಿ ಮಾಡುವುದಿಲ್ಲ, ಮಾಡಿದರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಈ ವಾರ ಎಲಿಮಿನೇಟ್ ಆಗೋದು ಯಾರು?: ದೊಡ್ಮನೆಯಲ್ಲಿ ಬಿಗ್ ಟ್ವಿಸ್ಟ್

    ಯಡಿಯೂರಪ್ಪ (B S Yediyurappa) ಕೊಲೆ ಪ್ರಯತ್ನ ಚರ್ಚೆ ವಿಚಾರವಾಗಿ ಮಾತನಾಡಿ, ಯಡಿಯೂರಪ್ಪ ನಮ್ಮ ರಾಜ್ಯದ ಅತ್ಯಂತ ಹಿರಿಯ ಮುಖಂಡರು. ಕಾಂಗ್ರೆಸ್ (Congress) ಆಗಲಿ, ಅವರನ್ನ ಕೊಲೆ ಮಾಡುವ ಪ್ರಶ್ನೆಯೇ ಉದ್ಭವ ಆಗಲ್ಲ. ಸುಳ್ಳೇ ಸತ್ಯ ಎಂಬ ರೀತಿಯಲ್ಲಿ ಬಿಂಬಿಸುತ್ತಾರೆ. ರಾಜ್ಯದ ಮೂರು ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಕಾಂಗ್ರೆಸ್ ಗೆಲುವು ಸಾಧಿಸುತ್ತಾರೆ. ಶಿಗ್ಗಾಂವಿಯಲ್ಲಿ 4 ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದರೂ ಅಭಿವೃದ್ಧಿ ಆಗಲಿಲ್ಲ. ಬೊಮ್ಮಾಯಿ ಮುಖ್ಯಮಂತ್ರಿ ಆದಾಗಲೂ ಅಭಿವೃದ್ಧಿ ಆಗಲಿಲ್ಲ. ಕ್ರೀಡಾಂಗಣ ನಿರ್ಮಾಣ ಮಾಡುವುದಕ್ಕೆ ಆಗಗಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಅಂದಿದ್ದರು. ಗ್ಯಾಸ್, ಸಿಲೆಂಡರ್, ಸಬ್ಸಿಡಿ ಎಂದು ಹೇಳಿ ಮತ ಪಡೆದಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೂಗಳ ಮೇಲೆ ದಾಳಿ – ಕೆನಡಾ ರಾಯಭಾರ ಕಚೇರಿ ಎದುರು ಹಿಂದೂ ಸಿಖ್ ಗ್ಲೋಬಲ್ ಫೋರಂ ಪ್ರತಿಭಟನೆ

  • ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮರ ಕಡಿದ ಆರೋಪ – ಸಚಿವರ ಆರೋಪಕ್ಕೆ ಚಿತ್ರತಂಡದ ಸ್ಪಷ್ಟನೆ ಏನು?

    ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮರ ಕಡಿದ ಆರೋಪ – ಸಚಿವರ ಆರೋಪಕ್ಕೆ ಚಿತ್ರತಂಡದ ಸ್ಪಷ್ಟನೆ ಏನು?

    ಬೆಂಗಳೂರು: ಯಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಸೆಟ್‌ಗಾಗಿ ನೂರಾರು ಮರಗಳನ್ನು ನಾಶ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವ ಕುರಿತು ಚಿಂತನೆಯೂ ನಡೆದಿದೆ.

    ಹೆಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಲಾಗಿದೆ ಎಂಬ ಆರೋಪವನ್ನು ಖುದ್ದು ಅರಣ್ಯ ಸಚಿವರೇ ಮಾಡಿದ್ದಾರೆ. ಈ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರ್ ಖಂಡ್ರೆ (Eshwar Khandre) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಸಾವಿರಾರು ಮರಗಳ ಬಲಿ ಆರೋಪ; ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ

    ಸ್ಯಾಟಲೈಟ್‌ ಫೋಟೋಗಳನ್ನ ಪಡೆದು ಪರಿಶೀಲಿಸುತ್ತಿರುವ ಸಚಿವರು, ಚಿತ್ರೀಕರಣ ಸೆಟ್‌ ಹಾಕಿದ್ದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಚಿವರ ಆರೋಪಕ್ಕೆ ಚಿತ್ರತಂಡವೂ ಸ್ಪಷ್ಟನೆ ಕೊಟ್ಟಿದೆ. ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕೋಕೂ ಮುನ್ನ ತೆಗೆದ ಸ್ಯಾಟಲೈಟ್‌ ಪಿಕ್ಚರ್ ನಮ್ಮ ಬಳಿಯೂ ಇದೆ. 2022ರಲ್ಲೇ ದಾಖಲಾದ ಸ್ಯಾಟಲೈಟ್ ಫೋಟೋ ಸಾಕ್ಷ್ಯ ಇದೆ ಎಂದು ಹೇಳಿದೆ ಎಂಬಂಧ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ದೀಪಾವಳಿ ಹಿನ್ನೆಲೆ ಇಂದು 250ಕ್ಕೂ ಅಧಿಕ ವಿಶೇಷ ರೈಲುಗಳ ಸಂಚಾರ- ರೈಲ್ವೆ ಇಲಾಖೆ

    ಟಾಕ್ಸಿಕ್ ತಂಡದ ಮೇಲೆ ಸಚಿವರ ಆರೋಪವೇನು?
    * ಟಾಕ್ಸಿಕ್ ಚಿತ್ರೀಕರಣದ ಸೆಟ್ ಹಾಕಲು ಅರಣ್ಯಭೂಮಿ ನಾಶ ಮಾಡಲಾಗಿದೆ
    * ಸೆಟ್ ಪೂರ್ವದ ಹಾಗೂ ಸೆಟ್ ಬಳಿಕ ಹಾಕಿರುವ ಸ್ಯಾಟಲೈಟ್ ಫೋಟೋ ಇದೆ
    * ಚಿತ್ರೀಕರಣಕ್ಕಾಗಿ ಅಪಾರ ಪ್ರಮಾಣದಲ್ಲಿ ಅರಣ್ಯ ಪ್ರದೇಶ ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗಿದೆ
    * 2023ರಲ್ಲಿ ಅಲ್ಲಿ ಪ್ರದೇಶ ಅರಣ್ಯ ಒಳಗೊಂಡಿತ್ತು
    * 2024 ರಿಂದ ಟಾಕ್ಸಿಕ್ ಚಿತ್ರೀಕರಣಕ್ಕಾಗಿ ಸೆಟ್ ಕಾರ್ಯ ಪ್ರಾರಂಭವಾದ ಬಳಿಕ ಅರಣ್ಯ ಪ್ರದೇಶ ನಾಶವಾಗಿದೆ
    * ಚಿತ್ರತಂಡದ ವಿರುದ್ಧ ಅರಣ್ಯ ಅಪರಾಧ ಪ್ರಕರಣ ದಾಖಲಿಸುವ ಕುರಿತು ಚಿಂತನೆ

    ಅರಣ್ಯ ಭೂಮಿ ನಾಶ ಆರೋಪಕ್ಕೆ ಟಾಕ್ಸಿಕ್ ಟೀಮ್ ಹೇಳೋದೇನು?
    * ಸೆಟ್ ಹಾಕಲು ಅನುಮತಿ ಕರಾರು ಪತ್ರಕ್ಕೆ ಸಹಿ ಹಾಕೋಕೂ ಮುನ್ನ ತೆಗೆದ ಸ್ಯಾಟಲೈಟ್‌ ಪಿಕ್ಚರ್ ನಮ್ಮ ಬಳಿಯೂ ಇದೆ
    * 2022 ರಲ್ಲೇ ದಾಖಲಾದ ಸ್ಯಾಟಲೈಟ್ ಫೋಟೋ ಸಾಕ್ಷ್ಯ ಇದೆ
    * ಯಾವುದೇ ಪರಿಸರ ನಾಶ ಮಾಡಿಲ್ಲ
    * ಖಾಲಿ ಇದ್ದ ಜಾಗವನ್ನೇ ಬಳಸಿಕೊಂಡು ಸೆಟ್ ನಿರ್ಮಾಣ ಮಾಡಿದ್ದೇವೆ
    * ಸೆಟ್ ಹಾಕೋದಕ್ಕೂ ಮುನ್ನ ಅಲ್ಲಿನ ಚಿತ್ರಣದ ದಾಖಲೆ ಇದೆ ಎಂದು ಹೇಳಿದೆ.

  • ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಸಾವಿರಾರು ಮರಗಳ ಬಲಿ ಆರೋಪ; ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ

    ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಸಾವಿರಾರು ಮರಗಳ ಬಲಿ ಆರೋಪ; ತಪ್ಪಿತಸ್ಥರ ವಿರುದ್ಧ ಕ್ರಮದ ಎಚ್ಚರಿಕೆ ಕೊಟ್ಟ ಅರಣ್ಯ ಸಚಿವ

    ಶ್ (Yash) ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಸೆಟ್‌ಗಾಗಿ ಸಾವಿರಾರು ಮರಗಳನ್ನು ನಾಶ ಮಾಡಿರುವ ಆರೋಪ ಕೇಳಿ ಬಂದಿದೆ. ಆರೋಪದ ಬೆನ್ನಲ್ಲೇ ಸ್ಥಳ ಪರಿಶೀಲನೆ ನಡೆಸಿರುವ ಅರಣ್ಯ ಸಚಿವರು, ಆರೋಪ ಸಾಬೀತಾದಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್ ಸಿನಿಮಾದಲ್ಲಿ ಕನ್ನಡದ ನಟ ಕಿಶೋರ್?

    ‘ಟಾಕ್ಸಿಕ್’ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನ ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

    ಹೆಚ್.ಎಂ.ಟಿ. ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ‘ಟಾಕ್ಸಿಕ್’ ಎಂಬ ಚಲನಚಿತ್ರದ ಚಿತ್ರೀಕರಣಕ್ಕಾಗಿ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಹಾನಿಗೊಳಿಸಿರುವ ವಿಚಾರ ಗಂಭೀರ ಚಿಂತೆ ಮೂಡಿಸಿದೆ. ಸ್ಯಾಟ್‌ಲೈಟ್ ಚಿತ್ರಗಳಿಂದ ಈ ಕೃತ್ಯ ಸ್ಪಷ್ಟವಾಗಿ ಕಾಣುತ್ತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದಿದ್ದಾರೆ.

    ಈ ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹಳೆಯ ಸ್ಯಾಟ್‌ಲೈಟ್ ಚಿತ್ರ ಹಾಗೂ ಈಗಿನ ಸ್ಯಾಟ್ ಲೈಟ್ ಚಿತ್ರವನ್ನ ಹಂಚಿಕೊಂಡಿದ್ದಾರೆ. ಅರಣ್ಯ ಭೂಮಿ ಅಕ್ರಮ ಕೃತ್ಯಗಳು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ ಅಂತಾ ಅರಣ್ಯ ಸಚಿವ ಈಶ್ವರ್ ಖಂಡ್ರೆ ಎಕ್ಸ್ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

  • ದೀಪ ಹಚ್ಚಿ ದೀಪಾವಳಿ ಆಚರಿಸಿ, ಹಸಿರು ಪಟಾಕಿಯನ್ನಷ್ಟೇ ಸಿಡಿಸಿ: ಈಶ್ವರ ಖಂಡ್ರೆ

    ದೀಪ ಹಚ್ಚಿ ದೀಪಾವಳಿ ಆಚರಿಸಿ, ಹಸಿರು ಪಟಾಕಿಯನ್ನಷ್ಟೇ ಸಿಡಿಸಿ: ಈಶ್ವರ ಖಂಡ್ರೆ

    ಬೆಂಗಳೂರು: ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಲು, ಹಿರಿಯ ನಾಗರಿಕರು ಮತ್ತು ಪುಟ್ಟ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಪಟಾಕಿ ತ್ಯಜಿಸಲು ಇಲ್ಲವೇ ಹಸಿರು ಪಟಾಕಿಗಳನ್ನು (Green Crackers) ಮಾತ್ರ ಬಳಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಮನವಿ ಮಾಡಿದ್ದಾರೆ.

    ಈ ಸಂಬಂಧ ವಿಡಿಯೋ ಮೂಲಕ ಮನವಿ ಮಾಡಿರುವ ಅವರು, ಕತ್ತಲೆಂಬ ಅಜ್ಞಾನವನ್ನು ಕಳೆದು ಸುಜ್ಞಾನವೆಂಬ ದೀಪ ಹಚ್ಚುವ ಬೆಳಕಿನ ಹಬ್ಬಕ್ಕೂ ಪಟಾಕಿಗೂ ಅವಿನಾಭಾವ ಬಾಂಧವ್ಯ ಬೆಸೆದಿದೆ. ಆದರೆ ಈ ಪಟಾಕಿಗಳು ಪರಿಸರಕ್ಕೆ ತೀವ್ರ ಹಾನಿ ಉಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಪರಿಸರಕ್ಕೆ ದಟ್ಟ ಹೊಗೆ ಸೇರಿಸುವ, ರಾಸಾಯನಿಕ, ಭಾರ ಲೋಹಯುಕ್ತ ಪಟಾಕಿ ಬಳಸದಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಛತ್ತೀಸ್‌ಗಢ| ಮಾವೋವಾದಿಗಳು ಅಳವಡಿಸಿದ್ದ ಐಇಡಿ ಸ್ಫೋಟ – ಇಬ್ಬರು ಯೋಧರು ಹುತಾತ್ಮ

    GREEN CRACKERS

    ಹಸಿರು ಪಟಾಕಿ ಮಾತ್ರವೇ ಬಳಸಿ. ಹಲವು ಮಕ್ಕಳು ಪಟಾಕಿ ಸಿಡಿಸುವಾಗ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದನ್ನು ನೋಡುತ್ತೇವೆ, ಹಲವರು ಗಾಯಗೊಳ್ಳುತ್ತಾರೆ. ಹೀಗಾಗಿ ಸಾಧ್ಯವಾದಷ್ಟು ಪಟಾಕಿ ಹಚ್ಚದಿರುವುದೇ ಉತ್ತಮ. ಪಟಾಕಿ ಸಿಡಿಸಲೇಬೇಕು ಎಂದಾದರೆ ಪರಿಸರಕ್ಕೆ ಹಾನಿ ಉಂಟು ಮಾಡದ ಹಸಿರು ಪಟಾಕಿ ಮಾತ್ರವೇ ಸಿಡಿಸಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್‌ ಹೆಸರಲ್ಲಿ ವಂಚನೆ – ಜೋಶಿ ಸಹೋದರ ಗೋಪಾಲ್‌ ಜೋಶಿ ಅರೆಸ್ಟ್‌

    125 ಡೆಸಿಬಲ್‌ಗಿಂತ ಕಡಿಮೆ ಶಬ್ದದ ಪಟಾಕಿಗೆ ಮಾತ್ರ ಅವಕಾಶ:
    ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಮತ್ತು ಸುಪ್ರೀಂ ಕೋರ್ಟ್ ತನ್ನ ಹಲವು ತೀರ್ಪುಗಳಲ್ಲಿ 125 ಡೆಸಿಬಲ್‌ಗಿಂತ ಹೆಚ್ಚು ಶಬ್ದ ಮಾಡುವ ಮತ್ತು ಹೆಚ್ಚು ಹೊಗೆ ಹೊರಹೊಮ್ಮುವ ರಾಸಾಯನಿಕಯುಕ್ತ ಪಟಾಕಿಗಳನ್ನು ನಿಷೇಧಿಸಿದೆ. ರಾತ್ರಿ 8 ರಿಂದ 10 ಗಂಟೆವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಹಚ್ಚಲು ಅವಕಾಶ ಕಲ್ಪಿಸಿದೆ. ಸಾರ್ವಜನಿಕರು ಈ ನಿಯಮಗಳನ್ನು ಪಾಲಿಸಬೇಕು ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ. ಇದನ್ನೂ ಓದಿ: ಉಪ ಚುನಾವಣೆಯಲ್ಲಿ 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಕಾರ್ಯತಂತ್ರ: ಬಸವರಾಜ ಬೊಮ್ಮಾಯಿ

    ಮುಚ್ಚಳಿಕೆ ಬರೆಸಿಕೊಳ್ಳಲು ಸೂಚನೆ:
    ಗಣಪತಿ ಹಬ್ಬದ ಸಂದರ್ಭದಲ್ಲಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಪಟಾಕಿ ಮಳಿಗೆಗೆ ಅನುಮತಿ ನೀಡುವಾಗ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಹಾಗೂ ಮಾರಾಟ ಮಾಡುವುದಾಗಿ ಮಳಿಗೆ ಮಾಲೀಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸೂಚಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ಮುಂದಿನ ಸಾಲಿನಿಂದ ಪಟಾಕಿ ಮಳಿಗೆ ಅನುಮತಿ ನೀಡದಂತೆ ತಿಳಿಸಲಾಗಿದೆ. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬೈಕ್ ಸವಾರ ಪಾರು

    ಸಂಘ ಸಂಸ್ಥೆಗಳು, ಶಿಕ್ಷಕರು, ಬೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು, ಜನಪ್ರತಿನಿಧಿಗಳು ಜನರಲ್ಲಿ ಅದರಲ್ಲೂ ಮಕ್ಕಳಲ್ಲಿ ಪಟಾಕಿಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಪಟಾಕಿ ತ್ಯಜಿಸುವಂತೆ ಇಲ್ಲವೇ ಹಸಿರು ಪಟಾಕಿ ಮಾತ್ರ ಬಳಸಲು ಮನವಿ ಮಾಡಬೇಕು ಎಂದೂ ಪರಿಸರ ಸಚಿವರು ಮನವಿ ಮಾಡಿದ್ದಾರೆ. ಹೆಚ್ಚು ಶಬ್ದ ಮತ್ತು ದಟ್ಟ ಹೊಗೆ ಹೊರಹೊಮ್ಮುವ ರಾಸಾಯನಿಕ ಮತ್ತು ಭಾರ ಲೋಹಯುಕ್ತ ಪಟಾಕಿಗಳಿಂದ ಉಸಿರಾಟಕ್ಕೂ ತೊಂದರೆ ಆಗುತ್ತದೆ. ಭಾರೀ ಶಬ್ದ ಮಾಡುವ ಪಟಾಕಿಗಳಿಂದ ಪಶು, ಪಕ್ಷಿಗಳಿಗೂ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ ಪಟಾಕಿಗಳನ್ನು ತ್ಯಜಿಸೋಣ. ದೀಪದಿಂದ ದೀಪ ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಈ ಆಸ್ತಿ ಜಮೀರ್ ಅಹ್ಮದ್ ಅಪ್ಪಂದಾ?: ಯತ್ನಾಳ್ ಕಿಡಿ

  • ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ಪಾವತಿಸಿಲ್ಲ : ಈಶ್ವರ್ ಖಂಡ್ರೆ

    ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಅರಣ್ಯ ಇಲಾಖೆಗೆ 500 ಕೋಟಿ ಪಾವತಿಸಿಲ್ಲ : ಈಶ್ವರ್ ಖಂಡ್ರೆ

    ಬೆಂಗಳೂರು : ಕೇಂದ್ರ ಸಚಿವ ಕುಮಾರಸ್ವಾಮಿ (HD Kumaraswamy) ಅವರು ಹೇಳಿರುವಂತೆ ದೇವದಾರಿ ಗಣಿಗಾರಿಕೆಗಾಗಿ ಕುದುರೆಮುಖ ಕಬ್ಬಿಣದ ಅದಿರು ಕಂಪನಿ (Kudremukh Iron Ore Company) ಅರಣ್ಯ ಇಲಾಖೆಗೆ 500 ಕೋಟಿ ರೂ. ಪಾವತಿಸಿಲ್ಲ ಎಂದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಸ್ಪಷ್ಟಪಡಿಸಿದ್ದಾರೆ.

    ವಿಕಾಸಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ನಡೆಸಿದ ಕೆಐಒಸಿಎಲ್‌ ಪರಿಸರಕ್ಕೆ ಮಾಡಿರುವ ಹಾನಿಯ ಮೊತ್ತ ಸೇರಿದಂತೆ ಇಲಾಖೆಗೆ ಸುಮಾರು 1,400 ಕೋಟಿ ರೂಪಾಯಿ ಬಾಕಿ ಪಾವತಿಸಬೇಕು ಎಂದು ಹೇಳಿದರು. ಅಕ್ರಮವಾಗಿ ಲಕ್ಯಾ ಜಲಾಶಯದ ಎತ್ತರ ಹೆಚ್ಚಿಸಿ, ಅರಣ್ಯ ಮುಳುಗಡೆ ಮಾಡಿದ್ದಕ್ಕಾಗಿ 119.12 ಕೋಟಿ, ಗಣಿಗಾರಿಕೆಗಾಗಿ ಹೊಸ ಭೂಮಿ ಅಗೆದಿದ್ದಕ್ಕಾಗಿ 19.88 ಕೋಟಿ ರೂ.ಸೇರಿದಂತೆ 142.96 ಕೋಟಿ ರೂ.ಗಳನ್ನು ಪರೋಕ್ಷ ಮತ್ತು ಪ್ರತ್ಯಕ್ಷ ಪರಿಸರ ಹಾನಿಗಾಗಿ ಕಂಪನಿ ಪಾವತಿಸಬೇಕು.ಇದಲ್ಲದೆ ಮಹಾ ಲೆಕ್ಕಪರಿಶೋಧಕರು ಉಲ್ಲೇಖಿಸಿರುವಂತೆ ನಿವ್ವಳ ಪ್ರಸ್ತುವ ಮೌಲ್ಯ (ಎನ್.ಪಿ.ವಿ.) ಮೊತ್ತ, ಬಡ್ಡಿ ಸೇರಿ 1349 ಕೋಟಿ ರೂ. ಪಾವತಿಸಬೇಕು ಎಂದು ಖಂಡ್ರೆ ವಿವರ ನೀಡಿದರು. ಇದನ್ನೂ ಓದಿ: ವಕ್ಫ್‌ ಜಾಗದಲ್ಲಿ ಹೊಸ ಸಂಸತ್‌ ಭವನ ನಿರ್ಮಾಣ: ಬದ್ರುದ್ದೀನ್ ಅಜ್ಮಲ್ ವಿವಾದ

    ಇದರ ಜೊತೆಗೆ ಕೆಐಒಸಿಎಲ್‌ ತನ್ನ ಸ್ವಂತ ಭೂಮಿ 114.30 ಹೆಕ್ಟೇರ್, ಸರ್ಕಾರದ ಕಂದಾಯ ಭೂಮಿ 1220.03 ಹೆಕ್ಟೇರ್ ಸೇರಿ ಒಟ್ಟು 1334.33 ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಹಿಂತಿರುಗಿಸಬೇಕು. ಈ ಪೈಕಿ 670 ಹೆಕ್ಟೇರ್ ಪ್ರದೇಶವನ್ನು ಅಂಕೋಲ- ಹುಬ್ಬಳ್ಳಿ ರೈಲು ಮಾರ್ಗಕ್ಕೆ ಗುರುತಿಸಲಾಗಿದೆ ಎಂದೂ ತಿಳಿಸಿದರು. ಕುದುರೇಮುಖ ಕಬ್ಬಿಣದ ಅದಿರು ಕಂಪನಿ ಈ ಹಿಂದೆ ಕುದುರೇಮುಖ ಅರಣ್ಯ ಪ್ರದೇಶದಲ್ಲಿ ನಡೆಸಿದ ಗಣಿಗಾರಿಕೆಯ ವೇಳೆ ಪರಿಸರಕ್ಕೆ ಉಂಟು ಮಾಡಿರುವ ಹಾನಿ ವಿಪರೀತವಾಗಿದೆ. ಈ ಬಗ್ಗೆ ನ್ಯಾಯಾಲಯದ ತೀರ್ಪುಗಳಲ್ಲಿ, ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ವರದಿಯಲ್ಲಿ ಹಾಗೂ 13ನೇ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ನೀಡಿರುವ 3ನೇ ವರದಿಯಲ್ಲೂ ವಿವರವಾಗಿ ತಿಳಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: 2025-26ರ ಹಿಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಳ – ಎಷ್ಟು ಏರಿಕೆಯಾಗಿದೆ?

    ಕಂಪನಿ ಗಣಿ ಉತ್ಖನನ ಆರಂಭಿಸಿದ ವೇಳೆ 27%ರಷ್ಟು ಮಣ್ಣನ್ನು ಲಕ್ಯಾ ಡ್ಯಾಂಗೆ ಸುರಿದಿದ್ದು ಪ್ರಸ್ತುತ ಅಲ್ಲಿ 150 ಮಿಲಿಯನ್ ಟನ್ ಮಣ್ಣು ಸಂಗ್ರಹವಾಗಿದೆ. ಅಣೆಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಮಣ್ಣು ಹಾಕಲು ಅನಧಿಕೃತವಾಗಿ ಕಂಪನಿ ಲಕ್ಯಾ ಡ್ಯಾಂ ಎತ್ತರವನ್ನು ಹೆಚ್ಚಿಸಿತ್ತು. ಇದರಿಂದ 340 ಹೆಕ್ಟೇರ್ ಅರಣ್ಯ ಭೂಮಿಗೆ ಹಾನಿಯಾಗಿದೆ ಎಂದೂ ಹೇಳಿದರು. ಪರಿಷ್ಕರಿಸಿದ ಅದಿರನ್ನು ಮಂಗಳೂರು ಬಂದರಿಗೆ ಸಾಗಿಸಲು ಪೈಪ್ ಲೈನ್ ಅಳವಡಿಸಲಾಗಿದೆ. ಈ ರೀತಿ ಅರಣ್ಯೇತರ ಉದ್ದೇಶದ ಬಳಕೆಗೆ ಕಂಪನಿ ಸೂಕ್ತ ಅನುಮತಿ ಪಡೆದಿಲ್ಲ. ಜೊತೆಗೆ ನಿರಂತರ ವಿದ್ಯುತ್ ಪಡೆಯಲು ವಿದ್ಯುತ್ ಮಾರ್ಗವನ್ನು ಅರಣ್ಯದೊಳಗೆ ಹಾಕಿಕೊಂಡಿದೆ. ಇಂತಹ ಹತ್ತು ಹಲವು ಪರಿಸರ ಹಾನಿಯನ್ನು ಕಂಪನಿ ಮಾಡಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

    ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಎನ್‌ಎಂಡಿಸಿಯಿಂದ ಅದಿರು ಖರೀದಿಸಬಹುದು ಮತ್ತು ಖಾಸಗಿಯವರಿಂದಲೂ ಖರೀದಿಸಬಹುದು. ಪರಿಸರ ಉಳಿಸುವ ಜವಾಬ್ದಾರಿ ಇಲಾಖೆಯ ಮೇಲಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಎಚ್.ಡಿ. ಕುಮಾರಸ್ವಾಮಿ ಅವರು ಸುಖಾ ಸುಮ್ಮನೆ ರಾಜಕೀಯ ಕಾರಣ ಎಂದು ಆರೋಪಿಸುತ್ತಿದ್ದಾರೆ ಎಂದರು.

     

  • ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ

    ಕ್ಯಾಬಿನೆಟ್‌ನಲ್ಲಿ ಜಾತಿಗಣತಿ ವರದಿ ಬಗ್ಗೆ ಅಭಿಪ್ರಾಯ ಹೇಳ್ತೀನಿ – ಈಶ್ವರ್ ಖಂಡ್ರೆ

    – ಈಗಿನ ವರದಿಯಲ್ಲಿ ಅನೇಕ ಸಮುದಾಯಗಳಿಗೆ ಆತಂಕವಿದೆ ಎಂದ ಸಚಿವ

    ಬೆಂಗಳೂರು: ಜಾತಿಗಣತಿ ವರದಿ ಜಾರಿ ಮಾಡುವ ಬಗ್ಗೆ ನನ್ನ ಅಭಿಪ್ರಾಯವನ್ನು ಕ್ಯಾಬಿನೆಟ್ ಸಭೆಯಲ್ಲಿ ಹೇಳುತ್ತೇನೆ ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದ್ದರು.ಇದನ್ನೂ ಓದಿ: ಸಿಎಂ ಹುದ್ದೆ ಕನಸು ಕಂಡರೆ ಹೇಳುವೆ, ಸದ್ಯಕ್ಕೆ ಬೇಡ – ಸಿಎಂ ರಾಜೀನಾಮೆ ಕೊಡುವ ಕಾಲ ಸನ್ನಿಹಿತ: ವಿಜಯೇಂದ್ರ

    ನಗರದ ಕೆಪಿಸಿಸಿ (KPCC) ಕಚೇರಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ನಡೆಯುತ್ತದೆ. ನನ್ನ ಅಭಿಪ್ರಾಯವನ್ನು ಸಚಿವ ಸಂಪುಟ ಸಭೆಯಲ್ಲಿ ಹೇಳುತ್ತೇನೆ. ವರದಿ ಬಗ್ಗೆ ಆತಂಕ ಇತ್ತು ನಿಜ ಆದರೆ ಇಡೀ ದೇಶದಲ್ಲಿ ಜಾತಿಗಣತಿ ಆಗಬೇಕು. ನಮ್ಮ ಪ್ರಣಾಳಿಕೆಯಲ್ಲೂ ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ ಎಂದು ತಿಳಿಸಿದರು.

    ಜಾತಿಗಣತಿಗೆ ಯಾರ ವಿರೋಧವೂ ಇಲ್ಲ. ಈಗ ಇರುವ ವರದಿಯಲ್ಲಿ ಅನೇಕ ಸಮುದಾಯಗಳಿಗೆ ಹಲವು ಆತಂಕಗಳು ಇವೆ. ಈ ಆತಂಕಗಳನ್ನು ನಿವಾರಣೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಕ್ಯಾಬಿನೆಟ್ ಸಭೆಯಲ್ಲಿ ಇದನ್ನು ಚರ್ಚೆ ಮಾಡುತ್ತೇವೆ. ನನ್ನ ಅಭಿಪ್ರಾಯ ಕ್ಯಾಬಿನೆಟ್‌ನಲ್ಲಿ ಹೇಳುತ್ತೇನೆ. ಯಾವುದೇ ಸಮುದಾಯಕ್ಕೂ ಅನ್ಯಾಯ ಆಗಲು ನಾವು ಬಿಡುವುದಿಲ್ಲ ಎಂದು ಭರವಸೆ ನೀಡಿರು.ಇದನ್ನೂ ಓದಿ: ಪಶ್ಚಿಮ ಬಂಗಾಳ| ಕಲ್ಲಿದ್ದಲು ಗಣಿಯಲ್ಲಿ ಸ್ಪೋಟ- 7 ಮಂದಿ ಸಾವು, ಹಲವರಿಗೆ ಗಾಯ

  • ಚಾರಣಕ್ಕೆ ಆನ್‌ಲೈನ್‌ ಟಿಕೆಟ್‌ – ಅರಣ್ಯ ವಿಹಾರ ವೆಬ್‌ಸೈಟ್‌ ಲೋಕಾರ್ಪಣೆ

    ಚಾರಣಕ್ಕೆ ಆನ್‌ಲೈನ್‌ ಟಿಕೆಟ್‌ – ಅರಣ್ಯ ವಿಹಾರ ವೆಬ್‌ಸೈಟ್‌ ಲೋಕಾರ್ಪಣೆ

    ಬೆಂಗಳೂರು: ರಾಜ್ಯದ ಎಲ್ಲ ಚಾರಣ (Trekking) ಕೈಗೊಳ್ಳುವ ಸ್ಥಳಗಳಿಗೆ ಒಂದೇ ವೇದಿಕೆಯಲ್ಲಿ ಟಿಕೆಟ್‌ (Ticket) ಖರೀದಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ (Forest Department) ಆರಂಭಿಸಿದ ಅರಣ್ಯ ವಿಹಾರ ವೆಬ್‌ಸೈಟ್‌ಗೆ (Aranyavihaara Website) ಇಂದು ಚಾಲನೆ ನೀಡಲಾಗಿದೆ.

    ವಿಕಾಸ ಸೌಧದಲ್ಲಿ ಅರಣ್ಯ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಅವರು ಅರಣ್ಯ ವಿಹಾರ ವೆಬ್‌ಸೈಟ್‌ ಲೋಕಾರ್ಪಣೆ ಮಾಡಿದರು. ಒಂದು ಬಾರಿಗೆ 300 ಜನರಿಗೆ ಅವಕಾಶ ಸಿಗಲಿದ್ದು, ಸಂಚಾರ ದಟ್ಟಣೆ ಸೇರಿ ವಿವಿಧ ಕಾರಣಕ್ಕೆ ಮಿತಿ ಹಾಕಲಾಗಿದೆ.

    40 ಲಕ್ಷ ರೂ. ಮೊತ್ತದಲ್ಲಿ ಅಂತರ್ಜಾಲ ವ್ಯವಸ್ಥೆ ಮಾಡಲಾಗಿದೆ. ರಾಜ್ಯದಲ್ಲಿ ಐದು ಚಾರಣ ಪಥ ಇದೆ. ಇನ್ನೂ 18 ಚಾರಣ ಪಥ ಆಗಬೇಕು. ರಾಜ್ಯದಲ್ಲಿ 40 ಚಾರಣ ಪಥ ಗುರುತಿಸಬಹುದು. ಎಲ್ಲಾ ಚಾರಣ ಪ್ರದೇಶಗಳಿಗೆ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಶಿರೂರು ಭೂ ಕುಸಿತ ದುರಂತ – ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ

    ಇಂದು ಪರಿಸರ ಪ್ರವಾಸೋದ್ಯಮ ಸಾಕಷ್ಟು ಅವಕಾಶಗಳಿವೆ. ಬಾಬಾಬುಡನಗಿರಿ ಸೇರಿ 23 ಕಡೆ ಚಾರಣ ಪಥ ನಡೆಯುತ್ತಿತ್ತು. ಈ ಹಿಂದೆ ಅನೇಕ ಕಡೆ ಚಾರಣ ಪಥ ದಲ್ಲಿ ಅವಘಡ ನಡೆದಿತ್ತು. ಹೀಗಾಗಿ ಐದು ಚಾರಣ ಪಥಕ್ಕೆ ಆನ್‌ಲೈನ್‌ ವ್ಯವಸ್ಥೆ ಮಾಡುತ್ತಿದ್ದೇವೆ. ಪರಿಸರ ಪ್ರವಾಸೋದ್ಯಮದ ಕಾರಣದಿಂದ ಅರಣ್ಯಕ್ಕೆ ಧಕ್ಕೆ ಆಗಬಾರದು. ಹಲವು ಕಡೆ ನಕಲಿ ಟಿಕೆಟ್ ಮಾರಾಟ ಆಗುತ್ತಿತ್ತು. ಬ್ಲ್ಯಾಕ್‌ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.

    ಬುಕ್ಕಿಂಗ್‌ ಹೇಗೆ?
    ಒಂದು ಟೀಂನಲ್ಲಿ 10 ಜನರು ಇರಬಹುದು, ಗುಂಪಿನ ನಾಯಕ ಬುಕ್‌ ಮಾಡಿದರೆ ಆತನ ಮೊಬೈಲಿಗೆ ಬುಕ್ಕಿಂಗ್ ಒಟಿಪಿ ಬರುತ್ತದೆ. ದೊಡ್ಡ ಚಾರಣಕ್ಕೆ 350+ ಜಿಎಸ್‌ಟಿ, ಸಣ್ಣ ಚಾರಣಕ್ಕೆ 250+ ಜಿಎಸ್‌ಟಿ ರೂ. ದರ ನಿಗದಿ ಮಾಡಲಾಗಿದೆ.

    ಚಾರಣಕ್ಕೆ ತೆರಳುವ ಎರಡು ದಿನಗಳ ಮುನ್ನ ಬುಕ್ ಮಾಡಬೇಕು. 48 ಗಂಟೆ ಮುಂಚಿತವಾಗಿ ಟಿಕೆಟ್ ರದ್ದು ಮಾಡಬಹುದು. ರದ್ದು ಮಾಡಿದರೆ 75% ಟಿಕೆಟ್‌ ಹಣ ಮರುಪಾವತಿ ಆಗಲಿದೆ.

    ಆರಂಭದಲ್ಲಿ ಯಾವ ಸ್ಥಳಕ್ಕೆ ಹೋಗಬಹುದು?
    ಸುಬ್ರಹ್ಮಣ್ಯ-ಕುಮಾರ ಪರ್ವತ, ಬೀದಳ್ಳಿಯಿಂದ-ಕುಮಾರ ಪರ್ವತ, ತಲಕಾವೇರಿಯಿಂದ-ನಿಶಾನಿ ಮೊಟ್ಟೆ , ಚಾಮರಾಜನಗರದಿಂದ-ನಾಗಮಲೈಗೆ ಈ ವೆಬ್‌ಸೈಟ್‌ ಮೂಲಕ ಟಿಕೆಟ್‌ ಖರೀದಿಸಬಹುದು.

    ಅರಣ್ಯ ವಿಹಾರ ವೆಬ್‌ಸೈಟ್‌ಗೆ ಭೇಟಿ ನೀಡಿ: www.aranyavihaara.karnataka.gov.in

  • ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ

    ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು – ಈಶ್ವರ್ ಖಂಡ್ರೆ ಕಿಡಿ

    ಬೆಂಗಳೂರು: ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಬಿಜೆಪಿ (BJP) ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಹೈಕೋರ್ಟ್ (High Court) ಸಿಎಂ ತನಿಖೆಗೆ ಅನುಮತಿ ನೀಡಿದ ಬೆನ್ನಲ್ಲೇ ಸಿಎಂ (CM Siddaramaiah) ರಾಜೀನಾಮೆ ನೀಡಬೇಕು ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಆಪ್ತರ ಮಾತು ಕೇಳಿ ಸಿಎಂ ಕೆಟ್ಟರು, ಸತ್ಯಕ್ಕೆ ಜಯ ಸಿಕ್ಕಿದೆ : ಶಾಸಕ ಶ್ರೀವತ್ಸ

    ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಬಿಜೆಪಿಯವರು ಹಗಲು ದರೋಡೆ ಮಾಡಿದ್ದಾರೆ. ಬಿಜೆಪಿ ಸರ್ಕಾರಗಳನ್ನೇ ಸಂಪೂರ್ಣ ವಿಸರ್ಜನೆ ಮಾಡಬೇಕು. ಅಷ್ಟು ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡಿದೆ ಎಂದರು.

    ಸಿಎಂ ಯಾಕೆ ರಾಜೀನಾಮೆ ಕೊಡಬೇಕು? ನಾವು ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟಕ್ಕೆ ಹಲವು ಅವಕಾಶಗಳಿವೆ. ಸರ್ಕಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ನಾವು ಉತ್ತಮ ಕೆಲಸ ಮಾಡಿದ್ದೇವೆ. ಜನ ನಮ್ಮ ಜೊತೆ ಇದ್ದಾರೆ, ನಾವು ಮೇಲ್ಮನವಿ ಹಾಕುತ್ತೇವೆ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ ಎಂದು ಹೇಳಿದರು.ಇದನ್ನೂ ಓದಿ: ಹಿಂದಿ ಬಿಗ್ ಬಾಸ್‌ಗೆ ಎಂಟ್ರಿ ಕೊಡ್ತಾರಾ ಮಹೇಶ್ ಬಾಬು ಸಂಬಂಧಿ?