Tag: eshwar khandre

  • Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    Forest Martyrs Day | ಹುತಾತ್ಮರಿಗೆ 50 ಲಕ್ಷ ರೂ. ಪರಿಹಾರ: ಈಶ್ವರ್ ಖಂಡ್ರೆ

    – ಕರ್ನಾಟಕವೂ ಡೇಂಜರ್ ಝೋನ್‌, ಅರಣ್ಯ ಸಂಪತ್ತನ್ನು ಉಳಿಸೋದು ಮಾತ್ರ ಪರಿಹಾರ
    – ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ 1, ಹುಲಿಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನ

    ಬೆಂಗಳೂರು: ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರಿಗೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಹುತಾತ್ಮರ ದಿನಾಚರಣೆ (National Forest Martyrs Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 62 ಜನ ಹುತಾತ್ಮರಾಗಿದ್ದಾರೆ. ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರು ಇವರು. ಹುತಾತ್ಮರಾದವರಿಗೆ 50 ಲಕ್ಷ ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಾಕಿದ ನಾಯಿಯ ಮೇಲೆ ಮಾರಣಾಂತಿಕ ಹಲ್ಲೆ – ಕರುಳು ಕಿತ್ತು ಹೋಗುವಂತಿದೆ ಈ ದೃಶ್ಯ

    ಈಗ ಹವಾಮಾನ ಬದಲಾವಣೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತಿದೆ. ಏಕಾಏಕಿ ಮೇಘಸ್ಫೋಟ, ಅತಿಯಾದ ಮಳೆ ಬರುತ್ತಿದೆ. ಮನುಕುಲವೇ ನಾಶವಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಕರ್ನಾಟಕವೂ (Karnataka) ಕೂಡ ಡೇಂಜರ್ ಝೋನ್‌ನಲ್ಲಿದೆ. ಭೂ ಕುಸಿತ ಸಂಭವಿಸುತ್ತಿದೆ. ಅರಣ್ಯ ಸಂಪತ್ತನ್ನು ಉಳಿಸೋದು ಮಾತ್ರ ಇದಕ್ಕೆ ಪರಿಹಾರ. ರಾಜ್ಯದಲ್ಲಿ ಸಂಪತ್ತು ಭರಿತವಾದ ಅರಣ್ಯವಿದೆ. ಪಶ್ಚಿಮ ಘಟ್ಟದಲ್ಲಿ ವಿವಿಧ ಪ್ರಭೇದ ಜೀವ ವೈವಿಧ್ಯ ತಾಣಗಳು ಇದೆ. ಮಳೆ ಮಾರುತವನ್ನು ಬದಲಾವಣೆ ಮಾಡಿ, ಮಳೆಯನ್ನು ತರಿಸುವ ಶಕ್ತಿ ಪಶ್ಚಿಮ ಘಟ್ಟಗಳಿಗೆ ಇದೆ. 2 ಲಕ್ಷ ಎಕ್ರೆ ಭೂಮಿಯ ಒತ್ತುವರಿಯಾಗಿದೆ. ಮೂವತ್ತು- ನಲವತ್ತು ಸಾವಿರ ಎಕ್ರೆ ಭೂಮಿಯನ್ನು ಮರುವಶಪಡಿಸಿಕೊಂಡು ಸಂರಕ್ಷಿತ ತಾಣ ಅಂತಾ ಘೋಷಿಸಿದ್ದೇವೆ ಎಂದರು. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ-ಪಾಕ್‌ ಪಂದ್ಯ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ

    ಐದು ಹುಲಿಗಳು ಮೃತಪಟ್ಟಿದ್ದು ಬಹಳ ನೋವಾಗಿತ್ತು. ಸಿಎಂ ಕೂಡ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಅರಣ್ಯ ಭೂಮಿ ಕಡಿಮೆ ಇದೆ. ಹೀಗಾಗಿ ಇದರೆ ಬಗ್ಗೆಯೂ ವ್ಯವಸ್ಥೆಗೆ ಅಧ್ಯಯನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಸ್ಸಿನಲ್ಲಿ ಪುತ್ರಿಗೆ ಲೈಂಗಿಕ ಕಿರುಕುಳ – ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ

  • ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನಕ್ಕೆ ಈಶ್ವರ್ ಖಂಡ್ರೆ ಚಾಲನೆ

    ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನಕ್ಕೆ ಈಶ್ವರ್ ಖಂಡ್ರೆ ಚಾಲನೆ

    ಬೀದರ್: ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬಸವ ಸಂಸ್ಕೃತಿ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ಚಾಲನೆ ನೀಡಿದರು.

    ಬೀದರ್ (Bidar) ನಗರದ ಬಸವೇಶ್ವರ ವೃತದಲ್ಲಿ ಬಲೂನ್ ಹಾರಿಸುವ ಮೂಲಕ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿಶೇಷವಾಗಿ ನಿರ್ಮಿಸಲಾಗಿದ್ದ ಬಸವಣ್ಣನ ಮೂರ್ತಿಯ ರಥ, ಇಷ್ಟಲಿಂಗ ರಥ, ರುದ್ರಾಕ್ಷಿ ರಥ, ವಿಭೂತಿ ರಥಗಳಿಗೆ ಚಾಲನೆ ನೀಡುವ ಮೂಲಕ ಸಾಂಸ್ಕೃತಿಕ ನಡಿಗೆಗೆ ಚಾಲನೆ ನೀಡಿದರು.ಇದನ್ನೂ ಓದಿ: PUBLiC TV Impact | ಸರ್ಕಾರದ ದುಡ್ಡನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದ ಪಿಡಿಓ ಅಮಾನತು

    ಬಸವ ಪರಂಪರೆಯ ಸಮವಸ್ತ್ರಗಳಲ್ಲಿ ನಗರದ ಬಸವೇಶ್ವರ ವೃತ್ತದಿಂದ ಗುಂಪಾವರೆಗೆ ಬೃಹತ್ ಬಸವ ಸಾಂಸ್ಕೃತಿಕ ನಡಿಗೆ ನಡೆಯಿತು. ಈ ವೇಳೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಕೂಡಾ ಭಾಗಿಯಾಗಿದ್ದರು.

    ಮಾಜಿ ಸಚಿವ ರಾಜಶೇಖರ ಪಾಟೀಲ್, ಸಿರಿಗೇರಿ ಶ್ರೀಗಳು, ನಿಜಗುಣಾನಂದ ಸ್ವಾಮೀಜಿ, ಬಸವಲಿಂಗ ಪಟ್ಟದೇವರು ಸೇರಿದಂತೆ ಪ್ರಮುಖ ಸ್ವಾಮೀಜಿಗಳು, ಸಾವಿರಾರು ಬಸವ ಅನುಯಾಯಿಗಳು ಬಸವ ಸಂಸ್ಕೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಇದನ್ನೂ ಓದಿ: ಮನೆ ಖರೀದಿಸುವಾಗ ರಾಧಿಕಾ ಕುಮಾರಸ್ವಾಮಿ 2 ಕೋಟಿ ಸಾಲ ಕೊಟ್ಟಿದ್ದರು: ಜಮೀರ್‌

  • ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ

    ಅಭಿಮಾನ್‌ ಸ್ಟುಡಿಯೋ ಜಮೀನು ವಿವಾದ – ವಿಷ್ಣುಸೇನಾ ಸಮತಿಯಿಂದ ಅರಣ್ಯ ಸಚಿವರ ಭೇಟಿ

    ಹಿರಿಯ ನಟ ಬಾಲಣ್ಣ ಅವರ ಅಭಿಮಾನ್‌ ಸ್ಟುಡಿಯೋಗೆ (Abhiman Studio) ಸರ್ಕಾರ ನೀಡಿದ್ದ ಜಾಗವನ್ನು ವಶಪಡಿಸಿಕೊಳ್ಳಬೇಕು ಅಂತ ಬೆಂಗಳೂರಿನ ಜಿಲ್ಲಾಧಿಕಾರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಈ ಪತ್ರ ಬರೆದ ಬೆನ್ನಲ್ಲೇ ಡಾ.ವಿಷ್ಣುಸೇನಾ ಸಮತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಅವರನ್ನು ಭೇಟಿ ಮಾಡಿದ್ದಾರೆ. ಅಭಿಮಾನ್‌ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿಯನ್ನು ನೆಲಸಮಗೊಳಿಸಲಾಗಿದೆ. ಆ ಸಮಾಧಿಯನ್ನು ಮರುಸ್ಥಾಪಿಸಬೇಕು ಮತ್ತು ಅಭಿಮಾನ್‌ ಸ್ಟುಡಿಯೋ ಜಾಗವನ್ನು ಸರ್ಕಾರ ವಾಪಸ್ಸು ಪಡೆಯಬೇಕು ಅಂತ ಮನವಿ ನೀಡಿದ್ದಾರೆ.

    ಭಾರಿ ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಡುಡಿಯೋ ಮುಟ್ಟುಗೋಲಿಗೆ ಆಗ್ರಹ ಕೇಳಿ ಬಂದಿತ್ತು. ಅಭಿಮಾನ್ ಸ್ಡುಡಿಯೋಗಾಗಿ ಬಾಲಕೃಷ್ಣಗೆ ನೀಡಿದ್ದ ಪ್ರದೇಶವನ್ನ ಹಿಂಪಡೆಯಲು ಹೋರಾಟ ಕೂಡ ಮಾಡಲಾಗಿತ್ತು. ಇದೀಗ ಅರಣ್ಯ ಇಲಾಖೆಯು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದೆ. ಸಹಜವಾಗಿಯೇ ಇದು ಕುತೂಹಲಕ್ಕೆ ಕಾರಣವಾಗಿದೆ.ಇದನ್ನೂ ಓದಿ: ಕಿಚ್ಚನ ಬರ್ತ್‌ಡೇ ಸೆಲಬ್ರೇಷನ್‌ಗೆ ಸ್ಥಳ, ಟೈಮಿಂಗ್ ಫಿಕ್ಸ್!

    ಜಿಲ್ಲಾಧಿಕಾರಿಗೆ ಬರೆದ ಪತ್ರದಲ್ಲಿ ಏನಿದೆ?
    ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಡುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ. ಈ ಮೂಲಕ ಅಭಿಮಾನ್ ಸ್ಟುಡಿಯೋ ಜಾಗ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ.

    ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದುಪಡಿಸಿ ಜಾಗ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಜಿಲ್ಲಾಧಿಕಾರಿ ಜಗದೀಶ್ ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಿ ಆದೇಶದ ಅನ್ವಯ 09-04-1969 ರಂದು ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ರವರಿಗೆ ಅಭಿಮಾನ್ ಚಿತ್ರ ಸ್ಡುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ ಗೇಣಿ ಆಧಾರದ ಮೇಲೆ ನೀಡಲಾಗಿತ್ತು. ಸರ್ಕಾರಿ ಆದೇಶದಲ್ಲಿ ಅಭಿಮಾನ್ ಸ್ಡುಡಿಯೋ ಅಭಿವೃದ್ಧಿ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ಬಳಸದಿರಲು ಮಾರಾಟ/ ಪರಭಾರೆ ಕೊಡದಿರಲು ಷರತ್ತು ವಿಧಿಸಿ ಆದೇಶ ನೀಡಲಾಗಿತ್ತು. ಉಲ್ಲಂಘನೆಯಾದಲ್ಲಿ ಮಂಜೂರಾತಿ ರದ್ಧುಪಡಿಸಿ ಭುಮಿಯನ್ನು ಸರ್ಕಾರ ಹಿಂಪಡೆಯಲಾಗುವುದು ಎನ್ನುವ ಆದೇಶ ಸ್ಪಷ್ಟವಾಗಿ ನಮೂದಿಸಲಾಗಿತ್ತು. ಇದನ್ನ ಮನವಿ ಪತ್ರದಲ್ಲಿ ಮತ್ತೆ ಸೂಚಿಸಿ ಅರಣ್ಯ ಇಲಾಖೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

    ಇದೀಗ ವಿಷ್ಣು ಅಭಿಮಾನಿಗಳಿಂದ ಮೇಲಿಂದ ಮೇಲೆ ಮರು ತನಿಖೆಗೆ ಆದೇಶ, ಅಭಿಮಾನ್ ಸ್ಡುಡಿಯೋ ಉದ್ದೇಶ ಉಲ್ಲಂಘನೆ ವಿಚಾರವಾಗಿ ಕಾನೂನು ಹೋರಾಟ ಜಾರಿಯಲ್ಲಿರುವ ವೇಳೆಯೇ ಪ್ರದೇಶವನ್ನ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಕೋರಿದೆ. ಅಂದಹಾಗೆ ಬಾಲಕೃಷ್ಣ ನಿಧನದ ಬಳಿಕ ಅವರ ಮಕ್ಕಳಾದ ಗಣೇಶ್ ಹಾಗೂ ಮೊಮ್ಮಗ ಕಾರ್ತಿಕ್ ಅನಧಿಕೃತವಾಗಿ 10 ಎಕರೆ ಆಸ್ತಿ ಮಾರಾಟ ಮಾಡಿದ್ದಾರೆ ಎಂದು ನಮೂದಿಸಲಾಗಿದೆ. ಅಭಿಮಾನ್ ಸ್ಡುಡಿಯೋ ನವೀಕರಣ ಮಾಡುವ ಸಲುವಾಗಿ ಬೇಕಾಗುವ ಹಣಕ್ಕಾಗಿ ಆಸ್ತಿ ಮಾರಾಟಕ್ಕೆ ಅನುಮತಿ ಕೇಳಿ ಮಾರಿದ್ದರು. ಆದರೆ ಸ್ಡುಡಿಯೋ ಅಭಿವೃದ್ಧಿಪಡಿಸದೆ ವೈಯಕ್ತಿಕವಾಗಿ ಉಪಯೋಗಿಸಿಕೊಂಡಿದ್ದಾರೆ. ಹೀಗಾಗಿ ಇಲ್ಲಿಯೂ ಉದ್ದೇಶವನ್ನ ಉಲ್ಲಂಘನೆ ಮಾಡಿದ್ದಾರೆ ಅನ್ನೋದು ಕೂಡ ಅರ್ಜಿ ಪತ್ರದಲ್ಲಿ ದಾಖಲಾಗಿದೆ. ಹೀಗಾಗಿ ಕೂಡಲೇ ಅಭಿಮಾನ್ ಸ್ಡುಡಿಯೋ ಆಸ್ತಿಯನ್ನ ಮುಟ್ಟುಗೋಲು ಹಾಕಬೇಕೆನ್ನುವುದು ಅರಣ್ಯ ಇಲಾಖೆಯ ಬೇಡಿಕೆಯಾಗಿದೆ.ಇದನ್ನೂ ಓದಿ: ರಿಷಿ ಹೊಸ ಸಿನಿಮಾಗೆ ಮುಹೂರ್ತ: ಬಿಗ್ ಬಾಸ್ ಸ್ಪರ್ಧಿ ನಾಯಕಿ

  • ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ ಮಾಡಬೇಕು ಅಂತಾ ಸರ್ಕಾರ ನಿರ್ಧರಿಸುತ್ತೆ: ಈಶ್ವರ್ ಖಂಡ್ರೆ

    ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ ಮಾಡಬೇಕು ಅಂತಾ ಸರ್ಕಾರ ನಿರ್ಧರಿಸುತ್ತೆ: ಈಶ್ವರ್ ಖಂಡ್ರೆ

    ಬೀದರ್: ವಿಷ್ಣುವರ್ಧನ್ ಓರ್ವ ಮೇರು ನಟ. ಹೀಗಾಗಿ ಅವರ ಸಮಾಧಿ ಎಲ್ಲಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.

    ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾವು ನಿಯಮ, ಕಾಯ್ದೆ, ಕಾನೂನುಗಳ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ, ಯಾವ ರೀತಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡುತ್ತಾರೆ ಎಂದರು.ಇದನ್ನೂ ಓದಿ: ಬಾನು ಮುಷ್ತಾಕ್ ದೇವಿ ಪೂಜೆ ಮಾಡಿದ್ರೆ ಫತ್ವಾ ಇನ್‌ಸ್ಟಿಟ್ಯೂಷನ್‌ ಅನುಮತಿ ಪಡೆಯಬೇಕು:ಮಕ್ಸೂದ್ ಇಮ್ರಾನ್

    ನಮ್ಮ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ, ಇದು ರೋಟಿನ್ ಕೆಲಸವಾಗಿದ್ದು, ಪ್ರಗತಿ ಪರಿಶೀಲನೆ ಮಾಡುವಾಗ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಸಮಯ ತಕ್ಕಂತೆ ನಾನು ಸೂಚನೆ ಹಾಗೂ ಆದೇಶಗಳನ್ನು ಕೊಡುತ್ತಿದ್ದು, ಬೆಂಗಳೂರಿಗೆ ಹೋಗಿ ವಿಷ್ಣು ಸಮಾಧಿ ಜಾಗದ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

    ಯಾವುದು ಅರಣ್ಯ ಭೂಮಿ ಅದು ಉಳಿದೇ ಉಳಿಯುತ್ತದೆ. HMT ಜಾಗ ಅಂತ ಯಾರಿಗೆ ಗೊತ್ತಿತ್ತಾ? ನನ್ನ ಗಮಕ್ಕೆ ಬಂದ ತಕ್ಷಣ ನಾನು ವಾಪಸ್ ಪಡೆದಿದ್ದೇನೆ ಎಂದು ತಿಳಿಸಿದರು.ಇದನ್ನೂ ಓದಿ: ಇಲಿ ಗಣೇಶನ ವಾಹನವಾಗಿದ್ದು ಹೇಗೆ?

  • ಬೀದರ್ `ಕೈ’ ನಾಯಕರಿಂದ ಖಂಡ್ರೆ ವಿರುದ್ಧ ಸಿಎಂ, ಡಿಸಿಎಂಗೆ ದೂರು

    ಬೀದರ್ `ಕೈ’ ನಾಯಕರಿಂದ ಖಂಡ್ರೆ ವಿರುದ್ಧ ಸಿಎಂ, ಡಿಸಿಎಂಗೆ ದೂರು

    ಬೆಂಗಳೂರು/ಬೀದರ್: ಬಿಜೆಪಿ ನಾಯಕರೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಆರೋಪಿಸಿ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಬೀದರ್ ಜಿಲ್ಲಾ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ.ಇದನ್ನೂ ಓದಿ: ನನ್ನ ಬಾಹ್ಯಾಕಾಶ ಯಾತ್ರೆಯೂ ಇಡೀ ದೇಶದ ಧ್ಯೇಯವಾಗಿತ್ತು – ಧನ್ಯವಾದ ತಿಳಿಸಿದ ಶುಭಾಂಶು ಶುಕ್ಲಾ

    ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹಾಗೂ ಜಿಲ್ಲಾಧ್ಯಕ್ಷ ಇಬ್ಬರನ್ನು ಬದಲಿಸಿ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹುಮ್ನಾಬಾದ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ದೂರು ಸಲ್ಲಿಸಿದ್ದಾರೆ.

    ಜಿಲ್ಲೆಯಲ್ಲಿ ಬಿಜೆಪಿ ಮನಃಸ್ಥಿತಿಯ ಅಧಿಕಾರಿಗಳು ಇದ್ದಾರೆ, ಹೀಗಾಗಿ ಅವರನ್ನು ಬದಲಿಸಿ ಎಂದು ಮನವಿ ಮಾಡಿ, ದೂರಿನಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ, ಮಹಾರಾಷ್ಟ್ರ ಅಡ್ಡಿ: ಡಿಕೆಶಿ

  • ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿದ್ದರೆ ಕ್ರಮ: ಈಶ್ವರ ಖಂಡ್ರೆ

    ಧರ್ಮಸ್ಥಳ ಅರಣ್ಯದಲ್ಲಿ ಶವ ಹೂತಿದ್ದರೆ ಕ್ರಮ: ಈಶ್ವರ ಖಂಡ್ರೆ

    ಬೆಂಗಳೂರು/ಮಂಗಳೂರು: ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ, ಶವ ಹೂತಿರುವುದು ತನಿಖೆಯಿಂದ ಸಾಬೀತಾದರೆ, ಅರಣ್ಯ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ (Eshwar Khandre) ತಿಳಿಸಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೀಸಲು ಅರಣ್ಯದಲ್ಲಿ ಯಾವುದೇ ಅರಣ್ಯೇತರ ಚಟುವಟಿಕೆ ನಡೆಸಲು ಅವಕಾಶ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಅಥವಾ ಸಾರ್ವಜನಿಕ ಉದ್ದೇಶಕ್ಕೆ ಅರಣ್ಯ ಭೂಮಿ ಬಳಕೆ ಮಾಡಬೇಕಾದಲ್ಲಿ ನಿಯಮಾನುಸಾರ ಕ್ಲಿಯರೆನ್ಸ್ ಅನುಮತಿ (ಎಫ್‌ಸಿ) ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು. ಅರಣ್ಯದಲ್ಲಿ ಅಕ್ರಮವಾಗಿ ಶವ ಸಂಸ್ಕಾರ ಮಾಡಿರುವುದು ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆಯಿಂದ ಸಾಬೀತಾದರೆ ನಿಯಮಾನುಸಾರ ಕ್ರಮ ಆಗುತ್ತದೆ ಎಂದು ಸ್ಪಷ್ಟಪಡಿಸಿದರು.ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

    ಇದೇ ವೇಳೆ ಸಿಎಜಿ ವರದಿ ಬಗ್ಗೆ ಬಿಜೆಪಿ ಟೀಕೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಕೇಂದ್ರದ ಮೋದಿ ಸರ್ಕಾರವನ್ನ ಕೇಳಲಿ. 200 ಲಕ್ಷ ಕೋಟಿ ರೂ. ಹಣವನ್ನು ಕೇಂದ್ರದ ಬಿಜೆಪಿ ಸಾಲ ತೆಗೆದುಕೊಂಡಿದೆ. ಯಾಕೆ ಇಷ್ಟು ಹಣ ಸಾಲ ತೆಗೆದುಕೊಂಡಿದ್ದಾರೆ ಕೇಳಿ? ನಾವು 7 ಲಕ್ಷ ಕೋಟಿ ರೂ. ಸಾಲ ತೆಗೆದುಕೊಂಡಿದ್ದೇವೆ. ಫಿಸಿಕಲ್ ರೆಸ್ಪಾನ್ಸಿಬಿಲಿಟಿ ಕಾಯ್ದೆ ಪ್ರಕಾರ ನಾವು ಮಿತಿ ಮೀರಿಲ್ಲ. ಗ್ಯಾರಂಟಿ ಯೋಜನೆ, ಬಡವರ ಬಲವರ್ಧನೆಗೆ ಉಪಯೋಗ ಮಾಡಿದ್ದೇವೆ. ಇಡೀ ದೇಶದಲ್ಲಿಯೇ ನಮ್ಮ ತಲಾ ಆದಾಯ, ಆರ್ಥಿಕತೆ ಹೋಲಿಸಿದ್ರೆ ಕರ್ನಾಟಕ ನಂ.1, ಇದರ ವರದಿ ಕೇಂದ್ರ ಸರ್ಕಾರ ಬಳಿಯೇ ಇದೆ. ನಮ್ಮ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ, ಜಗತ್ತಿಗೆ ಮಾದರಿಯಾಗಿವೆ. ನಾವು ಮಾಡಿದ ಗ್ಯಾರಂಟಿ ಯೋಜನೆಗಳನ್ನ ವಿಪಕ್ಷಗಳು ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು.

    ಸಂಸದ ಸೆಂಥಿಲ್ ವಿರುದ್ಧ ಜನಾರ್ದನ ರೆಡ್ಡಿ ಆರೋಪ ವಿಚಾರವಾಗಿ ಮಾತನಾಡಿ, ಬಿಜೆಪಿಯವರ ಆರೋಪ ಯಾವಾಗಲೂ ಸುಳ್ಳು. ಸುಳ್ಳು ಹೇಳುವುದು ಅವರ ಚಾಳಿಯಾಗಿದೆ. ಜನರ ದಿಕ್ಕು ತಪ್ಪಿಸುವುದು ಅವರ ಕೆಲಸ. ಜನಾರ್ದನ ರೆಡ್ಡಿ ಹೇಳಿಕೆಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದರು.

    ಇನ್ನೂ ಗಣೇಶೋತ್ಸವ ಸಂಭ್ರಮದಲ್ಲಿ ಪರಿಸರ ಸ್ನೇಹಿ ಗಣಪನನ್ನು ಪೂಜಿಸಿ. ನಾವು ಜಾಗೃತಿ ಮೂಡಿಸುವ ಕೆಲಸ ಮಾಡ್ತಿದ್ದೇವೆ. ಇದು ಮಾಲಿನ್ಯ ನಿಯಂತ್ರಣ ಮಾಡುತ್ತದೆ. ಮಾಲಿನ್ಯ ಆಗಬಾರದು, ಪಿಒಪಿ ಬಳಕೆ ಬೇಡ. ರಾಸಾಯನಿಕ ಇರುತ್ತೆ, ನೀರಿನಲ್ಲಿ ಮುಳುಗುವುದಿಲ್ಲ. ರಾಸಾಯನಿಕ ಸೇವನೆಯಿಂದ ಜಲ ಮೂಲಗಳು ಸಾಯುತ್ತವೆ. ಅದರ ಸೇವನೆಯಿಂದ ಜನ ರೋಗಿಗಳಾಗುತ್ತಾರೆ. ಪಿಒಪಿ ಗಣಪ ಬೇಡ, ಮಣ್ಣಿನ ಗಣಪತಿಗೆ ಪೂಜೆ ಮಾಡಿ ಎಂದು ಒತ್ತಾಯಿಸಿದರು.ಇದನ್ನೂ ಓದಿ: ವಿಜಯನಗರ ಸಾಧನಾ ಸಮಾವೇಶಕ್ಕೆ 10 ಕೋಟಿ – ಲಾಡ್ V/S ಸಿ.ಟಿ.ರವಿ ವಾಕ್ಸಮರ

  • 540 ಗಸ್ತು ಅರಣ್ಯ ರಕ್ಷಕರ ನೇಮಕಾತಿಗೆ ಪ್ರಕ್ರಿಯೆ: ಈಶ್ವರ್ ಖಂಡ್ರೆ

    540 ಗಸ್ತು ಅರಣ್ಯ ರಕ್ಷಕರ ನೇಮಕಾತಿಗೆ ಪ್ರಕ್ರಿಯೆ: ಈಶ್ವರ್ ಖಂಡ್ರೆ

    ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಮುಂಚೂಣಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ವಹಿಸಲಾಗಿದ್ದು, ಈಗಾಗಲೇ 310 ಅರಣ್ಯ ವೀಕ್ಷಕರ ನೇಮಕಾತಿ ಮಾಡಲಾಗಿದೆ. ಈಗ 540 ಅರಣ್ಯ ರಕ್ಷಕರ (ಗಾರ್ಡ್) ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಕೇಶವ್ ಪ್ರಸ್ತಾಪ ಪ್ರಶ್ನೆ ಕೇಳಿದರು. ಆನೆ ತುಳಿತದಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡ್ತೀರಾ. ಅದೇ ರೀತಿ ಬೇರೆ ಪ್ರಾಣಿಯಿಂದ ಸತ್ತವರಿಗೆ 20 ಲಕ್ಷ ಪರಿಹಾರ ಕೊಡಿ. ಹುಲಿಗಳ ಸಾವು ಆಯ್ತು. ಅದರ ಬಗ್ಗೆ ಕ್ರಮ ಮಾಡಬೇಕು. ಹಾವು ಕಡಿತದಿಂದ ಸತ್ತವರಿಗೂ ಸರ್ಕಾರ ಪರಿಹಾರ ಕೊಡಬೇಕು. ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಅಪಪ್ರಚಾರಕರ ವಿರುದ್ಧ ಸ್ವಯಂಪ್ರೇರಿತ ಕೇಸ್ ಹಾಕಿ: ಅಶ್ವಥ್ ನಾರಾಯಣ್ ಆಗ್ರಹ

    ಇದಕ್ಕೆ ಸಚಿವ ಈಶ್ವರ್ ಖಂಡ್ರೆ ಉತ್ತರ ನೀಡಿ, ಕಾಡಾನೆ ದಾಳಿ, ಹುಲಿ ದಾಳಿ ಸೇರಿದಂತೆ ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ಪ್ರಸ್ತುತ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಹಾವು ಕಚ್ಚಿ ಮೃತಪಟ್ಟವರಿಗೆ ಕೃಷಿ ಇಲಾಖೆಯ ವತಿಯಿಂದ 2 ಲಕ್ಷ ರೂ. ಪರಿಹಾರ ಒದಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ರಾಜ್ಯದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸರ್ಕಾರ ಮಾನವ-ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕವಾಗಿ ಆನೆ ಕಾರ್ಯಪಡೆಯನ್ನು ಮಂಜೂರು ಮಾಡಲು ಸೂಚಿಸಲಾಗಿದ್ದು, 2-3 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಾಗುವುದು. ಈ ಪಡೆಯಲ್ಲಿ 32 ಸಿಬ್ಬಂದಿ ಇರುತ್ತಾರೆ. ಅವರು ಆನೆಗಳನ್ನು ಕಾಡಿಗೆ ಓಡಿಸುವ ಕಾರ್ಯದ ಜೊತೆಗೆ ಪುಂಡಾನೆ ಸೆರೆ ಕಾರ್ಯಾಚರಣೆಯಲ್ಲೂ ಸಹಕರಿಸಲಿದ್ದಾರೆ ಎಂದರು.

    ಆನೆಪಥ (ಕಾರಿಡಾರ್) ಮತ್ತು ಆವಾಸಸ್ಥಾನ ಸಂರಕ್ಷಣೆಗಾಗಿ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ದೊಂದಿಗೆ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಪ್ರೊ. ಆರ್.ಸುಕುಮಾರ್ ಅವರ ತಂಡ ಅಧ್ಯಯನ ಆರಂಭಿಸಿದೆ ಎಂದು ತಿಳಿಸಿದರು. ಮಲೆ ಮಹದೇಶ್ವರ ಬೆಟ್ಟದ ವನ್ಯಜೀವಿಧಾಮದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟಿದ್ದು, ಅತ್ಯಂತ ನೋವಿನ ಸಂಗತಿ. ಈಗಾಗಲೇ ತಪ್ಪಿತಸ್ಥರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗಿದೆ.

    ಹೊರಗುತ್ತಿಗೆ ಮುಂಚೂಣಿ ಸಿಬ್ಬಂದಿಗೆ ಸಕಾಲದಲ್ಲಿ ವೇತನ ಪಾವತಿಸುವಲ್ಲಿ ವಿಫಲರಾದ ಉಪ ವಲಯ ಅರಣ್ಯಾಧಿಕಾರಿ ಸೇರಿ ಅಧಿಕಾರಿ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ಮುಂದಿನ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

  • ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ

    ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರಗಳ ಸಾವು – ಮಣ್ಣಿನ ಗಣಪನ ಪೂಜಿಸಲು ಈಶ್ವರ್ ಖಂಡ್ರೆ ಮನವಿ

    ಬೆಂಗಳೂರು: ಭಾದ್ರಪದ ಶುಕ್ಲ ಚತುರ್ಥಿಯಂದು ಮನೆ ಮನೆಯಲ್ಲೂ ಪೂಜೆಗೊಳ್ಳುವ ಗಣೇಶ (Ganesha) ಪರಿಸರದಿಂದಲೇ (ಮಣ್ಣಿನಿಂದ) ಹುಟ್ಟಿದ ದೇವರಾಗಿದ್ದು, ಪರಿಸರ ಸ್ನೇಹಿಯಾದ ಬಣ್ಣರಹಿತ ಮಣ್ಣಿನ ಮೂರ್ತಿಗಳನ್ನೇ ಪೂಜಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ (Eshwar Khandre) ನಾಡಿನ ಜನತೆಗೆ ಮನವಿ ಮಾಡಿದ್ದಾರೆ.

    ಗೌರಿ – ಗಣೇಶ ಹಬ್ಬದ ಸಂದರ್ಭದಲ್ಲಿ ಚಿನ್ನದಿಂದ, ಬೆಳ್ಳಿಯಿಂದ ಅಥವಾ ಮಣ್ಣಿನಿಂದ ಮಾಡಿದ ಮೂರ್ತಿಗಳನ್ನು ಪೂಜಿಸುವುದು ಅನೂಚಾನವಾಗಿ ನಡೆದುಬಂದಿರುವ ಸಂಪ್ರದಾಯ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರಲ್ಲಿ ಕರಗದ ಪ್ಲಾಸ್ಟರ್ ಆಫ್ ಪ್ಯಾರೀಸ್ ಮತ್ತು ವಿಷಕಾರಿಯಾದ ಭಾರಲೋಹಯುಕ್ತ ರಾಸಾಯನಿಕ ಬಣ್ಣ ಲೇಪಿತ – ಪಿಓಪಿ (POP) ಮೂರ್ತಿಗಳ ಸಂಖ್ಯೆ ಹೆಚ್ಚಾಗಿದ್ದು, ಇದರ ವಿಸರ್ಜನೆಯಿಂದ ಜಲಚರಗಳು, ಪಶುಪಕ್ಷಿಗಳ ಸಾವಿಗೆ ಕಾರಣವಾಗುತ್ತಿದೆ ಎಂದೂ ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಕನ್ನಡ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಭಾರೀ ಮಳೆ – ಯಾವ ತಾಲೂಕಿನ ಶಾಲೆಗಳಿಗೆ ರಜೆ?

    ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯಿದೆ 1974ರ ಕಲಂ 33(ಎ) ಅಡಿಯಲ್ಲಿ ರಾಜ್ಯದ ನದಿ, ಸರೋವರ, ಕೆರೆ, ಕಟ್ಟೆ, ಬಾವಿ ಸೇರಿದಂತೆ ಯಾವುದೇ ಜಲ ಮೂಲದಲ್ಲಿ ಪಿಓಪಿ ಮೂರ್ತಿಗಳ ವಿಸರ್ಜನೆ ನಿಷೇಧಿಸಲಾಗಿದೆ. ಪ್ರಜ್ಞಾವಂತ, ಜವಾಬ್ದಾರಿಯುತ ನಾಗರಿಕರು, ಧಾರ್ಮಿಕರು ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳನ್ನು ಮಾತ್ರವೇ ಪೂಜಿಸಿ ಪರಿಸರ ಉಳಿಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ – ಅನಾಮಿಕನ ಹಿಂದಿರುವ ವ್ಯಕ್ತಿಗಳಿಗೆ ನೋಟಿಸ್‌ ನೀಡಲು ಸಿದ್ಧತೆ

    ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಷಿಯಂ, ಸಲ್ಫೇಟ್, ಹೆಮಿಹೈಡ್ರೇಟ್‌ಯುಕ್ತ ಪುಡಿಯಿಂದ ತಯಾರಿಸಲಾಗುತ್ತದೆ. ಇದರಲ್ಲಿ ಗಂಧಕ, ರಂಜಕ, ಜಿಪ್ಸಮ್ ಮತ್ತು ಮ್ಯಾಗ್ನೀಷಿಯಂ ಸೇರಿದಂತೆ ಅನೇಕ ಅಪಾಯಕಾರಿ ಅಂಶಗಳಿರುತ್ತವೆ. ಇಂತಹ ಮೂರ್ತಿಗಳಿಗೆ ಪಾದರಸ, ಕ್ಯಾಡ್ಮಿಯಂ, ಸೀಸ ಮತ್ತು ಇಂಗಾಲ ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ಕೆರೆ, ಬಾವಿ, ನದಿಯಲ್ಲಿ ವಿಸರ್ಜಿಸಿದಾಗ ಭಾರ ಲೋಹ ಕರಗಿ ಜನ ಜಾನುವಾರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಜಲಚರಗಳ ಸಾವಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಆಸ್ಪತ್ರೆಗೆ ದಾಖಲು

    ಹಬ್ಬದ ಸಂಭ್ರಮದಲ್ಲಿ ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ನೋವು ಉಂಟು ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಆದರೆ ಪರಿಸರಕ್ಕೆ ಮಾರಕವಾದ ಪಿಓಪಿ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿ 2023ರ ಸೆ.15ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆ. ಇತ್ತೀಚೆಗೆ ರಾಜ್ಯ ಹೈಕೋರ್ಟ್ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿಯಾದ ಮಣ್ಣಿನ ಮೂರ್ತಿಗಳನ್ನು ಪೂಜಿಸಿ ಪರಿಸರ ಉಳಿಸುವಂತೆ ಕೋರಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ರಾಜ್ಯಪಾಲ ಸಿಪಿ ರಾಧಾಕೃಷ್ಣನ್‌ NDA ಉಪರಾಷ್ಟ್ರಪತಿ ಅಭ್ಯರ್ಥಿ

  • ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್‌ ಖಂಡ್ರೆ ಬಾಂಬ್‌

    ಧರ್ಮಸ್ಥಳ ಬುರುಡೆ ಕೇಸ್‌ ಬಿಜೆಪಿಯ ಸೃಷ್ಟಿ: ಈಶ್ವರ್‌ ಖಂಡ್ರೆ ಬಾಂಬ್‌

    ಬೀದರ್‌: ಧರ್ಮಸ್ಥಳ ತಲೆಬುರುಡೆ ಪ್ರಕರಣ (Dharmasthala Mass Burial Case) ಬಿಜೆಪಿಯ ಸೃಷ್ಟಿ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಉಸ್ತುವಾರಿ ಸಚಿವರು, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಸರ್ಕಾರದಿಂದ ಧರ್ಮಸ್ಥಳಕ್ಕೆ ಕಳಂಕ ಆಗುವುದಿಲ್ಲ. ಬಿಜೆಪಿಯವರೇ (BJP) ಈ ಅನಾಮಿಕ ವ್ಯಕ್ತಿಯನ್ನು ಸೃಷ್ಟಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿಯವರು ಇಂಥವರನ್ನು ಸೃಷ್ಟಿ ಮಾಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ

    ಬಿಜೆಪಿಯವರು ಅವರ ಸ್ವಾರ್ಥಕ್ಕಾಗಿ ಸೃಷ್ಟಿ ಮಾಡಿ ತನಿಖೆ ಮಾಡಿ ಎಂದು ಹೇಳುತ್ತಾರೆ. ತನಿಖೆ ಮಾಡುವಾಗ ಅದರ ದಾರಿ ತಪ್ಪಿಸುವ ಕೆಲಸ ಮಾಡತ್ತಾರೆ. ಧರ್ಮಸ್ಥಳಕ್ಕೆ ಕಳಂಕ ತರುವ ಯಾವ ಮನಸ್ಸು ನಮಗಿಲ್ಲ. ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು

    ನಾವು ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಆದರೆ ಬಿಜಪಿಯವರು ಹೊಟ್ಟೆ ಕಿಚ್ಚಿನಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡತ್ತಿದ್ದಾರೆ. ನಾನು ಧರ್ಮಸ್ಥಳಕ್ಕೆ ಹಲವಾರು ಬಾರಿ ಹೋಗಿ ಮಂಜುನಾಥ ದೇವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.

    ಬುರುಡೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವ ಉದ್ದೇಶ ಇಲ್ಲ. ದೂರು ಬಂದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ನೋಡಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.

  • ಚಿರತೆ ದಾಳಿ| ಬನ್ನೇರುಘಟ್ಟ ಸಫಾರಿ ವಾಹನದ ಮೇಲೆ ಜಾಲರಿ ಅಳವಡಿಸಲು ಖಂಡ್ರೆ ಸೂಚನೆ

    ಚಿರತೆ ದಾಳಿ| ಬನ್ನೇರುಘಟ್ಟ ಸಫಾರಿ ವಾಹನದ ಮೇಲೆ ಜಾಲರಿ ಅಳವಡಿಸಲು ಖಂಡ್ರೆ ಸೂಚನೆ

    ಬೆಂಗಳೂರು: ಬನ್ನೇರುಘಟ್ಟ (Bannerghatta) ಸಫಾರಿ ವಾಹನದ ಮೇಲೆ ಜಾಲರಿ ಅಳವಡಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆಯ ಸಚಿವ ಈಶ್ವರ ಖಂಡ್ರೆ (Eshwar khandre) ಸೂಚನೆ ನೀಡಿದ್ದಾರೆ.

    ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿಂದು ಚಿರತೆ ಸಫಾರಿ ಅಂಗಳದಲ್ಲಿ ವಾಹನದ ಕಿಟಕಿ ಬಳಿ ಕೈ ಇಟ್ಟಿದ್ದ ಬಾಲಕನಿಗೆ ಚಿರತೆ ಗಾಯಗೊಳಿಸಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ ಸಚಿವರು ಎಲ್ಲಾ ಸಫಾರಿ ವಾಹನಗಳ ಕಿಟಕಿ ಮತ್ತು ಛಾಯಾಗ್ರಹಣದ ರಂಧ್ರಗಳಿಗೆ ಕಡ್ಡಾಯವಾಗಿ ಜಾಲರಿ ಅಳವಡಿಸಲು ಸೂಚಿಸಿದ್ದಾರೆ. ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ

     

    ಸಫಾರಿಯ ವೇಳೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮತ್ತು ಪ್ರವಾಸಿಗರಿಗೆ ಸೂಕ್ತ ಎಚ್ಚರಿಕೆ ನೀಡಲು ಹಾಗೂ ಸಫಾರಿ ಟಿಕೆಟ್ ನಲ್ಲಿಯೇ ಎಚ್ಚರಿಕೆಯ ಸಂದೇಶ ಮುದ್ರಿಸುವಂತೆ ಅವರು ಸೂಚಿಸಿದ್ದಾರೆ.