Tag: eshwar khandre

  • ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ

    ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ ಎಂದು ಹೇಳಿಲ್ಲ: ಈಶ್ವರ ಖಂಡ್ರೆ

    ಬೆಂಗಳೂರು: ಏಟ್ರಿಯಾ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಜು.28ರಂದು ನಡೆದ ಅಂತರ ಜೀವಿ (ಪ್ರಭೇದ) ಸಮಾವೇಶದಲ್ಲಿ ಪಾಲ್ಗೊಂಡಿದ್ದಾಗ ನಾನು “ಪಶ್ಚಿಮ ಘಟ್ಟದಲ್ಲಿ (Western Ghats) ಜೀವವೈವಿಧ್ಯ ಮತ್ತು ಸಸ್ಯ ಸಂಕುಲ ಸಂರಕ್ಷಣೆಗೆ ಸರ್ಕಾರ ಬದ್ಧ’’ ಎಂದು ಹೇಳಿದ್ದೆನೇಯೇ ಹೊರತು “ಡಾ. ಕಸ್ತೂರಿರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ” ಎಂದು ಹೇಳಿಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ (Eshwar Khandre) ಸ್ಪಷ್ಟಪಡಿಸಿದ್ದಾರೆ.

    ಆ ಕಾರ್ಯಕ್ರಮದಲ್ಲಿ ಕೆಲವರು ಪಶ್ಚಿಮ ಘಟ್ಟದ ಬಗ್ಗೆ ಮತ್ತು ಕಸ್ತೂರಿ ರಂಗನ್ ವರದಿ (Kasturirangan  Report) ಕುರಿತಂತೆ ಪ್ರಶ್ನಿಸಿದಾಗ, ಕೇಂದ್ರ ಸರ್ಕಾರ ಸಂಜಯ್ ಕುಮಾರ್ ನೇತೃತ್ವದ ಪುನರ್ ಪರಿಶೀಲನಾ ಸಮಿತಿ ರಚಿಸಿದ್ದು, ಸಮಿತಿ ಸದಸ್ಯರು ತಮ್ಮನ್ನು ಇತ್ತೀಚೆಗೆ ಭೇಟಿ ಮಾಡಿದ್ದರು, ಈ ಸಮಿತಿ ಡಿಸೆಂಬರ್ ವೇಳೆಗೆ ವರದಿ ಸಲ್ಲಿಸಲಿದ್ದು, ಆ ವರದಿ ಬಂದ ಬಳಿಕ ಸಂಪುಟದ ಉಪ ಸಮಿತಿಯಲ್ಲಿ ಅದರ ಸಾಧಕ ಬಾಧಕ ಚರ್ಚಿಸಿ, ಪಶ್ಚಿಮಘಟ್ಟದ ಎಲ್ಲ ಬಾಧ್ಯಸ್ಥರೊಂದಿಗೆ (Stake holders) ಮಾತುಕತೆ ನಡೆಸಿ ನಂತರ ಸರ್ಕಾರ ವರದಿ ಕುರಿತಂತೆ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾಗಿ ಹೇಳಿದ್ದಾರೆ.

    ಕಸ್ತೂರಿ ರಂಗನ್ ವರದಿ 10 ವರ್ಷಗಳಷ್ಟು ಹಳೆಯದಾಗಿದೆ. ಇಂದಿಗೆ ಅದು ಪ್ರಸ್ತುತವೇ ಎಂಬ ವಾದವೂ ಇದೆ. ಪಶ್ಚಿಮಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಿದರೆ ಜೀವನ, ಜೀವನೋಪಾಯಕ್ಕೆ ತೊಂದರೆ ಆಗುತ್ತದೆ ಎಂಬ ಭೀತಿಯೂ ಆ ಭಾಗದ ಜನರಲ್ಲಿದೆ. ಹೀಗಾಗಿ ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಸರ್ಕಾರ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗಲಿ – ಉಡುಪಿಯ ಪಾದಬೆಟ್ಟುವಿನಲ್ಲಿ ವಿಶೇಷ ಹೋಮ

    ಪಶ್ಚಿಮ ಘಟ್ಟದಲ್ಲಿ ಕೆಂಪು ಪ್ರವರ್ಗದ (Red category) ಕೈಗಾರಿಕೆಗಳು ನಡೆಯಬಾರದು, ಅದರ ತ್ಯಾಜ್ಯ ಪಶ್ಚಿಮ ಘಟ್ಟದ ಜಲ ಮೂಲಗಳಿಗೆ ಅಪಾಯ ತಂದೊಡ್ಡುತ್ತದೆ ಎಂಬ ಆತಂಕ ಇದೆ. ಅದು ಸರಿ ಎನಿಸುತ್ತದೆ. ಆದರೆ, ಅಂಗನವಾಡಿ, ಆಸ್ಪತ್ರೆ, ಶಾಲೆ, ಜನವಸತಿ, ಮೂಲಸೌಕರ್ಯ ವಿಚಾರದಲ್ಲಿ ಹಾಗೆ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಇದರಿಂದ ಹಲವು ದಶಕದಿಂದ ಅಲ್ಲಿಯೇ ಬದುಕು ಕಟ್ಟಿಕೊಂಡಿರುವ ಸ್ಥಳೀಯ ಜನರಿಗೆ ತೊಂದರೆ ಆಗುತ್ತದೆ. ಪರಿಸರವೂ ಉಳಿಯಬೇಕು, ಜನರ ಜೀವನೋಪಾಯಕ್ಕೂ ಧಕ್ಕೆ ಆಗಬಾರದು, ಸುಸ್ಥಿರ ಅಭಿವೃದ್ಧಿ ಸರ್ಕಾರದ ನಿಲುವು ಎಂದು ತಿಳಿಸಿದ್ದಾರೆ.

    ಕಸ್ತೂರಿ ರಂಗನ್ ವರದಿಯಲ್ಲಿ ಹಲವು ಸಡಿಲಿಕೆಗೂ ಸಂಜಯ್ ಕುಮಾರ್ ಸಮಿತಿ ಸಮ್ಮತಿಸುತ್ತಿದೆ. ವಿಶ್ವದ ಜೀವವೈವಿಧ್ಯತೆಯ 8 ಅದ್ಭುತ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಉಳಿಸುವ ಜವಬ್ದಾರಿಯೂ ನಮ್ಮ ಮೇಲಿದೆ. ಆದರೆ “ಕಸ್ತೂರಿ ರಂಗನ್ ವರದಿ ಜಾರಿಗೆ ಸರ್ಕಾರ ಬದ್ಧ’’ ಎಂಬ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿರುವ ರೀತಿ ತಾವು ಯಾವುದೇ ಹೇಳಿಕೆ ನೀಡಿಲ್ಲ. ಅಂತಹ ಯಾವುದೇ ನಿರ್ಧಾರವನ್ನು ಸರ್ಕಾರ ಮಾಡಿಲ್ಲ ಎಂದು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ಇದು ದರದ ಪ್ರಶ್ನೆ ಅಲ್ಲ, ಬೇರೆಯವರಿಗೆ ನಾವು ಮಾರುಕಟ್ಟೆ ಬಿಟ್ಟು ಕೊಟ್ಟಂತೆ: ಸೋಮಶೇಖರ ರೆಡ್ಡಿ

    ಪಶ್ಚಿಮಘಟ್ಟ ಮತ್ತು ಅಲ್ಲಿನ ಸಸ್ಯ ಸಂಕುಲ ಮತ್ತು ಪ್ರಾಣಿ ಸಂಕುಲ ಸಂರಕ್ಷಣೆಗೆ ಸರ್ಕಾರ ಬದ್ಧ ಎಂದು ಹೇಳಿದ್ದ, ತಮ್ಮ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ಕೆಲವು ಮಾಧ್ಯಮಗಳಲ್ಲಿ ಮಾತ್ರ ಈ ರೀತಿ ವರದಿ ಪ್ರಕಟಿಸಲಾಗಿದೆ. ಈ ಬಗ್ಗೆ ಬೀದರ್ ನಲ್ಲಿ ನಿನ್ನೆ ನಡೆದ ಪತ್ರಿಕಾ ದಿನಾಚರಣೆಯಲ್ಲೂ ತಾವು ಸ್ಪಷ್ಟೀಕರಣ ನೀಡಿದ್ದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    ಬೀದರ್: ಇರುವ ಅಕ್ಕಿಯನ್ನು ಇಲಿಗಳು ತಿನ್ನಲಿ ಎಂದು ಬಿಜೆಪಿಯವರು (BJP) ಗೋದಾಮುಗಳಲ್ಲಿ ಮುಚ್ಚಿ ಇಟ್ಟಿದ್ದಾರೆ. ಇದು ಬಿಜೆಪಿಯ ಅಕ್ಕಿ (Rice) ರಾಜಕಾರಣವಲ್ಲದೆ ಮತ್ತೇನು ಎಂದು ಸಚಿವ ಈಶ್ವರ್ ಖಂಡ್ರೆ (Eshwar Khandre) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಿದರ್‍ನಲ್ಲಿ ಮಾತನಾಡಿದ ಅವರು, ನಾವು ಅಕ್ಕಿ ಕೊಡುತ್ತೇವೆ. ಆದರೆ ಬಿಜೆಪಿಗೆ ಯಾಕೆ ಹೊಟ್ಟೆ ಕಿಚ್ಚು, ಸೋತ ಹತಾಶಾ ಭಾವನೆಯಲ್ಲಿ ಕಾಂಗ್ರೆಸ್ (Congress) ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ, ಅದರ ಬುದ್ಧಿ ಎರಡೂ ಹ್ಯಾಕ್: ಪ್ರಲ್ಹಾದ್ ಜೋಶಿ

    ರಾಜ್ಯದಲ್ಲೇ 7 ಲಕ್ಷ ಟನ್ ಅಕ್ಕಿ ದಾಸ್ತಾನು ಇದ್ದು, ಈ ಅಕ್ಕಿಯನ್ನು ಏನು ಮಾಡುತ್ತಾರೆ?. ಅಕ್ಕಿ ಇದ್ದರೂ ನೀಡದೆ ನಮ್ಮ ಅನ್ನಭಾಗ್ಯಕ್ಕೆ ಬಿಜೆಪಿ ನಾಯಕರು ಅಡೆತಡೆ ಮಾಡುತ್ತಿದ್ದಾರೆ. ಮೂರು ತಿಂಗಳಿನಲ್ಲಿ ಓಪನ್ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿ ಮಾಡಿ ಜನರಿಗೆ ಅಕ್ಕಿ ಕೊಡುತ್ತೇವೆ. ಎಲ್ಲಿವರೆಗೆ ಅಕ್ಕಿ ವ್ಯವಸ್ಥೆ ಆಗಲ್ವೋ ಅಲ್ಲಿವರೆಗೆ ನಾವು ಜನರಿಗೆ ಹಣ ನೀಡುತ್ತೇವೆ ಎಂದರು.

    ಅಕ್ಕಿ ವಿಷಯದಲ್ಲಿ ಬಿಜೆಪಿ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದು ಬಿಜೆಪಿ ಒಂದೇ ಬಂದು ಭರವಸೆಗಳನ್ನು ಈಡೇರಿಸಿಲ್ಲ. 15 ಲಕ್ಷ ಅಕೌಂಟಿಗೆ ಹಾಕಿದ್ರಾ..?, 2 ಕೋಟಿ ಉದ್ಯೋಗ ಕೋಟ್ರಾ..?, ಮನೆ ಇಲ್ಲದವರಿಗೆ ಸೂರು ಕೊಟ್ರಾ ಎಂದು ಖಂಡ್ರೆ ಬಿಜೆಪಿಯನ್ನು ಪ್ರಶ್ನಿಸಿದರು.

    ಬಿಜೆಪಿ ನಾಯಕರು ಒಳ ಒಳಗೆ ಅವರೇ ಕಿತ್ತಾಟ, ಕಚ್ಚಾಟ ಮಾಡಿಕೊಳ್ಳುತ್ತಿದ್ದು, 100 ಬಣಗಳು ಇದೆಯಾ ಎಂದು ನೀವೇ ಹೇಳಬೇಕು ಎಂದು ಖಂಡ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ನೀಡುತ್ತಿಲ್ಲ: ಖಂಡ್ರೆ ವಾಗ್ದಾಳಿ

    ದುರುದ್ದೇಶದಿಂದಲೇ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆ ಅಕ್ಕಿ ನೀಡುತ್ತಿಲ್ಲ: ಖಂಡ್ರೆ ವಾಗ್ದಾಳಿ

    ನವದೆಹಲಿ: ಭಾರತದ ಆಹಾರ ನಿಗಮದ ಉಗ್ರಾಣಗಳಲ್ಲಿ ಸಾಕಷ್ಟು ಪ್ರಮಾಣ ಅಕ್ಕಿಯ ದಾಸ್ತಾನು ಇದೆ. ಯಥಿನಾಲ್ ಉತ್ಪಾದನೆಗೆ ಅಕ್ಕಿ ಪೂರೈಸುವ ಕೇಂದ್ರ ಸರ್ಕಾರ ಬಡವರಿಗೆ ತಿನ್ನಲು ನೀಡಲು ನಿರಾಕರಿಸುತ್ತಿದೆ. ಅನ್ನಭಾಗ್ಯ ಯೋಜನೆ ತಡೆಯಲು ದುರದ್ದೇಶಪೂರ್ವಕವಾಗಿಯೇ ಅಕ್ಕಿಯನ್ನು ನೀಡುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಚಿವ ಈಶ್ವರ್ ಖಂಡ್ರೆ‌ (Eshwar Khandre) ವಾಗ್ದಾಳಿ ನಡೆಸಿದ್ದಾರೆ.

    ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ (Congress Government) ದ ಮಹತ್ವಾಕಾಂಕ್ಷಿ ಯೋಜನೆ ತಡೆಯಲು ಕೇಂದ್ರ ಸರ್ಕಾರ (Central Government) ದಿಂದ ಪ್ರಯತ್ನ ನಡೆಯುತ್ತಿದೆ. ಕೇಂದ್ರ ಏನೇ ಪ್ರಯತ್ನ ಮಾಡಿದರೂ ಆದರೆ ನಾವು ಯೋಜನೆ ಜಾರಿ ಮಾಡುತ್ತೇವೆ. ಬೇರೆ ರಾಜ್ಯಗಳಿಂದ ಅಕ್ಕಿ ತಂದು ಜನರಿಗೆ ನೀಡುತ್ತೇವೆ ಎಂದರು. ಇದನ್ನೂ ಓದಿ: ಇದೊಂದು ಸುಳ್ಳ, ಮಳ್ಳ ಸರ್ಕಾರ – ತಾಕತ್ತಿದ್ದರೆ ಅಕ್ಕಿ ಕೊಡಿ; ಬೊಮ್ಮಾಯಿ ಕಿಡಿ

    ಭಾರತೀಯ ಆಹಾರ ನಿಗಮ ನಿಯಮ ಬದಲಾಯಿಸಿದೆ ಎಂದು ಸಬೂಬು ಹೇಳುತ್ತಿದೆ. ಈ ನಿಯಮ ಬದಲಾಗಿದ್ದು ಯಾವಾಗ? ಕರ್ನಾಟಕ ಸರ್ಕಾರ ಅಕ್ಕಿಗಾಗಿ ಮನವಿ ಮಾಡಿದ ಬಳಿಕ ನಿಯಮ ಬದಲಾಗಿದೆ. ಇದರ ಹಿಂದಿನ ಉದ್ದೇಶ ಏನು? ಯಥಿನಾಲ್ ಉತ್ಪಾದನೆಗೆ ಅಕ್ಕಿ ಪೂರೈಸುವ ಮೋದಿ ಸರ್ಕಾರ ಬಡವರಿಗೆ ನೀಡಲು ಅಕ್ಕಿ ಯಾಕೆ ಕೊಡುವುದಿಲ್ಲ ಎಂದು ಪ್ರಶ್ನಿಸಿದರು.

    ಕೇಂದ್ರ ಸರ್ಕಾರದ ದುರುದ್ದೇಶದ ನಡೆ ಸ್ಪಷ್ಟವಾಗಿದೆ. ನಾವು ಪಂಜಾಬ್, ತೆಲಂಗಾಣ, ಛತ್ತೀಸ್‍ಗಢ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಅಕ್ಕಿ ಖರೀದಿಗೆ ಪ್ರಯತ್ನ ನಡೆಯುತ್ತಿದೆ. ಬೆಲೆ ಹೆಚ್ಚಾದರೂ ಯಾವುದಾದರೂ ಒಂದು ರಾಜ್ಯದಿಂದ ಅಕ್ಕಿ ತಂದು ಹಂಚಲಿದ್ದೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

  • ಬೀದರ್‌ನಲ್ಲಿ ನೀರುಪಾಲಾದ ಇಬ್ಬರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ

    ಬೀದರ್‌ನಲ್ಲಿ ನೀರುಪಾಲಾದ ಇಬ್ಬರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ

    ಬೀದರ್: ಜಿಲ್ಲೆಯಲ್ಲಿ ನೀರುಪಾಲಾದ ಇಬ್ಬರಿಗೆ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು ವಿತರಿಸಲಾಗಿದೆ.

    ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಮೃತರ ಪತ್ನಿಯರಿಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು 5 ಲಕ್ಷದ ಚೆಕ್ ನೀಡಿದರು. ಇದನ್ನೂ ಓದಿ: ಅಧಿಕಾರಿಗಳ ವರ್ಗಾವಣೆ ವಿಚಾರ: ಸಿಎಂ-ಸಚಿವರ ನಡುವೆ ಮೌನ ಸಂಘರ್ಷ

    ಸೋಮವಾರ 1 ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಕಾರಂಜಾ ನದಿಗೆ ಹೆಚ್ಚಿನ ನೀರು ಹರಿದು ಬಂದು ಇಬ್ಬರು ಕೊಚ್ಚಿ ಹೋಗಿದ್ರು. ಸೇತುವೆ ದಾಟುವಾಗ ನೀರಿನಲ್ಲಿ ಕೊಚ್ಚಿ ಹೋಗಿ ಹುಮ್ನಾಬಾದ್ ತಾಲೂಕಿನ ಜಲಸಂಗಿ ಗ್ರಾಮದ ತುಕಾರಾಮ ಲಕ್ಷ್ಮಣ (40), ಘಾಟಬೋರಾಳದ ತಿಪ್ಪಣ್ಣ ವಿಶ್ವನಾಥ್ (33) ನೀರುಪಾಲಾಗಿದ್ರು. ಭಾಲ್ಕಿ ತಾಲೂಕಿನ ಮರೂರು ಗ್ರಾಮದ ಕಾರಂಜಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರು ಸೇತುವೆ ಮೇಲೆ ದ್ವಿಚಕ್ರದ ಮೇಲೆ ತೆರಳುತ್ತಿದ್ದ ಇಬ್ಬರು ನೀರುಪಾಲಾಗಿದ್ರು.

    ಈ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆ (Bhalki Rural Police Station) ಯಲ್ಲಿ ಪ್ರಕರಣ ದಾಖಲಾಗಿತ್ತು.

  • ಗ್ಯಾರೆಂಟಿ ಜಾರಿ ಮಾಡಿ ಸುಭದ್ರ ಆಡಳಿತ ಕೊಡುವುದೇ ನಮ್ಮ ಮೊದಲ ಆದ್ಯತೆ: ಈಶ್ವರ್ ಖಂಡ್ರೆ

    ಗ್ಯಾರೆಂಟಿ ಜಾರಿ ಮಾಡಿ ಸುಭದ್ರ ಆಡಳಿತ ಕೊಡುವುದೇ ನಮ್ಮ ಮೊದಲ ಆದ್ಯತೆ: ಈಶ್ವರ್ ಖಂಡ್ರೆ

    ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ (Congress) ಗ್ಯಾರೆಂಟಿ ಜಾರಿ ಮಾಡಿ ಸುಭದ್ರ ಆಡಳಿತ ಕೊಡುವುದೇ ನಮ್ಮ ಮೊದಲ ಆದ್ಯತೆ ಎಂದು ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ (Eshwar Khandre) ಹೇಳಿದ್ದಾರೆ.

    ಸಚಿವ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವ ವಿಚಾರದ ಕುರಿತು ದೆಹಲಿಯಲ್ಲಿ (New Delhi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ (Lingayat) ವೀರಶೈವ ಸಮಾಜದಲ್ಲಿ ಸರ್ವರಿಗೂ ಸಾಮಾಜಿಕ ನ್ಯಾಯವನ್ನು ಇಡೀ ಜಗತ್ತಿಗೆ ಪ್ರತಿಪಾದನೆ ಮಾಡಿದವರು ಬಸವಣ್ಣನವರು. ಹೀಗಾಗಿ ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 34 ಜನ ಲಿಂಗಾಯತ ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ. ಸಹಜವಾಗಿ ಆ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ಸಿಗಬೇಕು ಎಂಬ ಅಪೇಕ್ಷೆ ಇರುತ್ತದೆ. ಆ ದೃಷ್ಟಿಯಿಂದ ಮುಂದೆ ರಚಿಸುವ ಸಚಿವ ಸಂಪುಟದಲ್ಲೂ ಹೆಚ್ಚಿನ ಪ್ರಾತಿನಿಧ್ಯ ಮತ್ತು ಉನ್ನತ ಖಾತೆಗಳನ್ನು ಲಿಂಗಾಯತ ಸಮುದಾಯಕ್ಕೆ ವರಿಷ್ಠರು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಮೊದಲ ಕ್ಯಾಬಿನೆಟ್‌ನಲ್ಲಿ ಗ್ಯಾರಂಟಿ ಜಾರಿ – ಕೊಟ್ಟ ಮಾತು ಉಳಿಸಿಕೊಳ್ತೀವಿ: ಡಿಕೆಶಿ

    ನಾನು ಕಾರ್ಯಾಧ್ಯಕ್ಷನಾಗಿ 5 ವರ್ಷದಿಂದ ರಾಜ್ಯಾದ್ಯಂತ ಸುತ್ತಾಡಿ ಪಕ್ಷ ಸಂಘಟನೆಯನ್ನು ಮಾಡಿದ್ದೇನೆ. ಅಲ್ಲದೇ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ನನಗಿದೆ. ಹೀಗಾಗಿ ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೇ 20, 21 ರಂದು ಸಿಇಟಿ ಪರೀಕ್ಷೆ – ಪ್ರಮಾಣವಚನ ಹಿನ್ನೆಲೆ ಟ್ರಾಫಿಕ್ ಆತಂಕ

    ಇಂದು ರಾಜ್ಯಾದ್ಯಂತ ಒಂದು ಹರ್ಷೋಲ್ಲಾಸವಿದೆ. ಅತಿಯಾದ ಉತ್ಸಾಹ ಹಾಗೂ ನಿರೀಕ್ಷೆಗಳಿವೆ. ಅವೆಲ್ಲಾ ನಿರೀಕ್ಷೆಗಳನ್ನು ಪೂರ್ತಿ ಮಾಡುವಂತಹ ಕೆಲಸವನ್ನು ನಾವು ಮಾಡುತ್ತೇವೆ. ಇಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸುರ್ಜೇವಾಲ ಅವರು ದೆಹಲಿಗೆ ಆಗಮಿಸಿ ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರದ ಬಗ್ಗೆ ಹಾಗೂ ನೂತನ ಸಚಿವ ಸಂಪುಟ ರಚನೆ ಬಗ್ಗೆ ವರಿಷ್ಠರ ಜೊತೆ ಚರ್ಚೆ ಮಾಡಲಿದ್ದಾರೆ. ನಾಳೆ (ಶನಿವಾರ) ಯಿಂದ ಕ್ಯಾಬಿನೆಟ್ ರಚನೆ ಆಗುತ್ತದೆ. ಕರ್ನಾಟಕ ರಾಜ್ಯದ ಜನತೆಗೆ ನಾವೇನು ಭರವಸೆಯನ್ನು ಕೊಟ್ಟಿದ್ದೆವೋ ಅವೆಲ್ಲವನ್ನೂ ಈಡೇರಿಸಿ ಉತ್ತಮವಾದ ಆಡಳಿತವನ್ನು ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಇದೇ 28ರಂದು ಹೊಸ ಸಂಸತ್ ಭವನ ಉದ್ಘಾಟಿಸಲಿದ್ದಾರೆ ಮೋದಿ

  • ನಾಳೆ ಬೀದರ್‌ಗೆ ರಾಹುಲ್ ಗಾಂಧಿ ಎಂಟ್ರಿ

    ನಾಳೆ ಬೀದರ್‌ಗೆ ರಾಹುಲ್ ಗಾಂಧಿ ಎಂಟ್ರಿ

    ಬೀದರ್: ಚುನಾವಣಾ ಚಾಣಕ್ಯ ಅಮಿತ್ ಶಾ (Amit shah) ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ ಬಳಿಕ ಈಗ ರಾಹುಲ್ ಗಾಂಧಿ (Rahul Gandhi) ಬೀದರ್ (Bidar) ಜಿಲ್ಲಾ ಪ್ರವಾಸದ ಮೂಲಕ ಕಲ್ಯಾಣ ಕರ್ನಾಟಕ ಟಾರ್ಗೆಟ್ ಮಾಡಿದ್ದಾರೆ.

    ಸೋಮವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಭಾಲ್ಕಿಯಲ್ಲಿ ಈಶ್ವರ್ ಖಂಡ್ರೆ (Eshwar Khandre) ಪರ ಹಾಗೂ ಹುಮ್ನಾಬಾದ್‌ನಲ್ಲಿ ರಾಜಶೇಖರ ಪಾಟೀಲ್ ಪರ ಕ್ಯಾಂಪೇನ್ ಮಾಡಲಿದ್ದಾರೆ. ಸೋಮವಾರ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ 11 ಗಂಟೆಗೆ ಬೀದರ್ ಏರಬೇಸ್‌ಗೆ ಆಗಮಿಸಲಿರುವ ರಾಹುಲ್ 11:30ಕ್ಕೆ ಬೀದರ್ ಏರಬೇಸ್‌ನಿಂದ ಹೆಲಿಕಾಪ್ಟರ್ ಮೂಲಕ ಭಾಲ್ಕಿಗೆ ಆಗಮಿಸಲಿದ್ದಾರೆ.

    11:40ಕ್ಕೆ ನಾಮಪತ್ರ ಸಲ್ಲಿಕೆಯ ಬಹಿರಂಗ ಸಮಾವೇಶ ಭಾಗಿಯಾಗಿ ಬಳಿಕ 1 ಗಂಟೆಗೆ ಬೃಹತ್ ಬಹಿರಂಗ ರ‍್ಯಾಲಿಯಲ್ಲಿ ಹಾಗೂ ಬಳಿಕ 1:30ಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನಾಮಪತ್ರ ಸಲ್ಲಿಕೆ ವೇಳೆ ರಾಹುಲ್ ಭಾಗಿಯಾಗಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್‌ಗೆ ಪ್ರಯಾಣ ಮಾಡಲಿರುವ ರಾಹುಲ್ 1:30 ರಿಂದ 2:30 ರವರೆಗೆ ಹುಮ್ನಾಬಾದ್‌ನ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಅಖಂಡ ಶ್ರೀನಿವಾಸ್ ಮೂರ್ತಿ ಕಾಂಗ್ರೆಸ್‌ಗೆ ಗುಡ್‌ಬೈ

    ಬಳಿಕ ರಾಜಶೇಖರ ಪಾಟೀಲ್ ನಾಮಪತ್ರ ಸಲ್ಲಿಸುವ ಬೃಹತ್ ಬಹಿರಂಗ ಯಾತ್ರೆಯಲ್ಲಿ ಭಾಗಿಯಾಗಿ ಬಳಿಕ ಹುಮ್ನಾಬಾದ್‌ನಿಂದ ಹೆಲಿಕಾಪ್ಟರ್ ಮೂಲಕ ಹೈದರಾಬಾದ್ ಹೋಗಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ರಾಹುಲ್ ಗಾಂಧಿ ಪ್ರಯಾಣ ಬೆಳೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ‌ ಸಿದ್ದರಾಮಯ್ಯ, ರಾಜ್ಯ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್ ಮುಖಂಡರು ರಾಹುಲ್‌ಗೆ ಸಾಥ್ ನೀಡಲಿದ್ದಾರೆ. ಇದನ್ನೂ ಓದಿ: 2 ಹೆಲಿಕಾಪ್ಟರ್ ರೆಡಿ – ರಾಹುಲ್ ಸಮ್ಮುಖದಲ್ಲಿಯೇ ಶೆಟ್ಟರ್ ‘ಕೈ’ ಸೇರ್ಪಡೆ?

  • ಜನವರಿ 15 ರೊಳಗೆ 150 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ – ಈಶ್ವರ ಖಂಡ್ರೆ

    ಜನವರಿ 15 ರೊಳಗೆ 150 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ – ಈಶ್ವರ ಖಂಡ್ರೆ

    ರಾಯಚೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದ ಎಲ್ಲೆಡೆ ಪ್ರಮುಖರ ಸಭೆಗಳನ್ನ ನಡೆಸುತ್ತಿದ್ದೇವೆ. ಜನವರಿ 15 ರೊಳಗೆ ಕನಿಷ್ಠ 150 ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಮಾಡಲು ತಿರ್ಮಾನಿಸಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre) ಹೇಳಿದ್ದಾರೆ.

    ರಾಯಚೂರಿನ (Raichuru) ಜಿಲ್ಲಾ ಕಾಂಗ್ರೆಸ್ (Congress) ಸಮಿತಿ ಕಾರ್ಯಾಲಯದಲ್ಲಿ ನಡೆದ ಕಾಂಗ್ರೆಸ್ ಪ್ರಮುಖರ ಸಭೆ ಬಳಿಕ ಮಾತನಾಡಿದ ಅವರು, ರಾಜ್ಯ ಚುನಾವಣಾ ಸಮಿತಿ ಸಭೆಯ ಮಾರ್ಗಸೂಚಿ ಎಲ್ಲರಿಗೆ ಕೊಡಲಾಗಿದೆ. ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳಿಗೆ ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ. ಎಲ್ಲಾ ಮುಖಂಡರ ಅಭಿಪ್ರಾಯ ಪಡೆದು, ಅಂತಿಮವಾಗಿ ಮೂವರ ಪಟ್ಟಿ ಸಲ್ಲಿಸಲಾಗುವುದು. ಒಂದೊಂದು ಕ್ಷೇತ್ರದಿಂದ ಮೂವರು ಆಕಾಂಕ್ಷಿಗಳ ಹೆಸರನ್ನ ರಾಜ್ಯ ಚುನಾವಣಾ ಸಮಿತಿ ಹಾಗೂ ಎಐಸಿಸಿಗೆ (AICC) ಕಳುಹಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಈಗಿನ ಶಾಸಕರಿಗೆ ಕೋಟಿ ಅಂದ್ರೆ ಕಿಮ್ಮತ್ತಿಲ್ಲ – ಬೊಮ್ಮಾಯಿ

    ಮಸ್ಕಿ ಕ್ಷೇತ್ರದಲ್ಲಿ ಮಾತ್ರ ಒಬ್ಬರೇ ಒಬ್ಬ ಅಭ್ಯರ್ಥಿ ಇದ್ದಾರೆ. ಬಸನಗೌಡ ತುರವಿಹಾಳ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಅರ್ಹ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಬಿ ಫಾರಂ ಮಾತ್ರ ಒಬ್ಬರಿಗೆ ಕೊಡಬೇಕಾಗುತ್ತದೆ. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲು ಒಪ್ಪಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರವನ್ನ ಕಿತ್ತೊಗೆಯುವ ಸಂಕಲ್ಪವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ್ದಾರೆ. ಹೀಗಾಗಿ ಪಕ್ಷಕ್ಕೆ ಯಾವುದೇ ಪರಿಣಾಮ ಆಗುವುದಿಲ್ಲ. ಪಕ್ಷ ಅಧಿಕಾರಕ್ಕೆ ಬಂದಾಗ ಸಂಘಟನೆ ಮಾಡಿದವರಿಗೆ ಅರ್ಹತೆಗೆ ತಕ್ಕ ಸ್ಥಾನಮಾನ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಶ್ವಥ್ ನಾರಾಯಣನ ಮಂದಿರವಾದರೂ ಕಟ್ಟಲಿ ನಾವೇನೂ ಸಿಟ್ಟಾಗಲ್ಲ: ಡಿಕೆಶಿ

    ನಮ್ಮ ಪಕ್ಷದ ಶಿಸ್ತು, ಬದ್ಧತೆ ಒಪ್ಪಿಕೊಂಡರೆ ಬೇರೆ ಪಕ್ಷದಿಂದ ಬಂದವರನ್ನೂ ಸೇರಿಸಿಕೊಳ್ಳಲಾಗುತ್ತೆ. ಕೆಪಿಸಿಸಿ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಟಿಕೆಟ್ ಕೊಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಬೇರೆ ಪಕ್ಷದಿಂದ ಬರುವವರನ್ನ ಪರಿಶೀಲನೆ ಮಾಡುತ್ತೆ. ಕಾಂಗ್ರೆಸ್ ತತ್ವ ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುವವರನ್ನ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

    ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

    ರಾಯಚೂರು: ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿದೆ. ಬಡ ಜನತೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಾಗ್ದಾಳಿ ನಡೆಸಿದರು.

    ಅಮೃತ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಸ್ವಾತಂತ್ರ್ಯೋತ್ಸವ ನಡಿಗೆ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಲೆ ಏರಿಕೆಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡದೆ ಇರುವುದೇ ಬಿಜೆಪಿ ಜನ ವಿರೋಧಿ ಸರ್ಕಾರವಾಗಿರುವುದಕ್ಕೆ ಸಾಕ್ಷಿ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮದುವೆಗೆ ಮುಸ್ಲಿಂ ವಧು ಹಾಜರ್ – ಮಹಲ್ ಸಮಿತಿಯ ಕ್ಷಮೆಗೆ ಆಗ್ರಹ 

    ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿದ್ದು, ಬಡವರ ವಿರೋಧಿ ಸರ್ಕಾರವಾಗಿದೆ. 9.91 ಲಕ್ಷ ಕೋಟಿ ಶ್ರೀಮಂತರ ಸಾಲ ಮನ್ನಾ ಮಾಡುವ ಮೂಲಕ ಕೇಂದ್ರ ಸರ್ಕಾರ ಶ್ರೀಮಂತರ ಪರವಾಗಿರುವ ಸರ್ಕಾರ ಎಂದು ತೋರಿಸಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಖಂಡ್ರೆ ಅವರ ನೇತೃತ್ವದಲ್ಲಿ ಗಿಲ್ಲೇಸುಗೂರಿನಿಂದ ಯರಗೇರಾ ಗ್ರಾಮದವರೆಗೆ ಪಾದಯಾತ್ರೆ ನಡೆಯಿತು. ಮಾಜಿ ಸಚಿವ ಎಚ್.ಆಂಜಿನೇಯ, ಎಂಎಲ್‍ಸಿ ಶರಣಗೌಡ ಬಯ್ಯಾಪುರ, ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: ಜನನಾಂಗಕ್ಕೂ ಟ್ಯಾಟೂ – ಜೀವವೇ ಹೋದಂಗೆ ಆಯ್ತು ಅಂದ ನಟಿ 

    Live Tv
    [brid partner=56869869 player=32851 video=960834 autoplay=true]

  • ಪ್ರಿಯಾಂಕ್ ಖರ್ಗೆಗೆ ನೀಡಿದ ನೋಟಿಸ್ ಕಾನೂನು ಬಾಹಿರ: ಈಶ್ವರ್ ಖಂಡ್ರೆ

    ಪ್ರಿಯಾಂಕ್ ಖರ್ಗೆಗೆ ನೀಡಿದ ನೋಟಿಸ್ ಕಾನೂನು ಬಾಹಿರ: ಈಶ್ವರ್ ಖಂಡ್ರೆ

    ಬೀದರ್: ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಿದ ನೋಟಿಸ್ ಕಾನೂನು ಬಾಹಿರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೀವ್ರ ವಾಗ್ದಾಳಿ ನಡೆಸಿದರು.

    ಪಿಎಸ್‍ಐ ಅಕ್ರಮ ನೇಮಕಾತಿ ವಿಚಾರದಲ್ಲಿ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವ ವಿಚಾರದ ಬಗ್ಗೆ ಭಾಲ್ಕಿ ಪಟ್ಟಣದಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಸರ್ಕಾರ ದಮನಕಾರಿ ನೀತಿ ಅನಿಸರಿಸುತ್ತಿದ್ದು, ನಮ್ಮ ಧ್ವನಿ ಅಡಗಿಸಲು ಈ ಸರ್ಕಾರದಿಂದ ಸಾಧ್ಯವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಪಿಎಸ್‍ಐ ಪರೀಕ್ಷೆ ಅಕ್ರಮದಲ್ಲಿ ಸಚಿವರು ಹಾಗೂ ದೊಡ್ಡ ದೊಡ್ಡವರಿದ್ದು, ಸಮರ್ಪಕವಾಗಿ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನಿಸಿದ ಅವರು, ಬಡವರನ್ನು ಮಾತ್ರ ತನಿಖೆ ನಡೆಸುತ್ತಿದೆ. ರಾಜ್ಯದಲ್ಲಿ ಎಲ್ಲರಿಗೂ ಒಂದೇ ಕಾನೂನು ಇದೆ. ಆದರೆ ಇಲ್ಲಿ ಒಬ್ಬರಿಗೊಂದು ಇನ್ನೊಬ್ಬರಿಗೆ ಒಂದು ಕಾನೂನು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಅಳವಡಿಸುವುದು ಕಡ್ಡಾಯ: ಸುಧಾಕರ್

    YATNAL 1

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವ ಸಿಎಂ ಸ್ಥಾನಕ್ಕೆ 2,500 ಕೋಟಿ ರೂ. ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ರಾಜ್ಯವನ್ನು ಬಿಜೆಪಿ ಯಾವ ತರಹ ಲೂಟಿ ಮಾಡುತ್ತಿದೆ ಎಂಬುವುದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಯೇ ಸಾಕ್ಷಿ ಎಂದು ಸರ್ಕಾರವನ್ನು ಟೀಕಿಸಿದರು. ಇದನ್ನೂ ಓದಿ: ರಾಜಕೀಯ ಪಕ್ಷ ಅಧಿಕಾರ ಹಿಡಿಯಲು ‘ಆಪರೇಷನ್ ಕಮಲ’ ಅನಿವಾರ್ಯ: ಕಟೀಲ್

  • ಕೋಮು ಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ನೀಡಲ್ಲ: ಮುನೇನಕೊಪ್ಪ

    ಕೋಮು ಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ನೀಡಲ್ಲ: ಮುನೇನಕೊಪ್ಪ

    ರಾಯಚೂರು: ಕೋಮುಗಲಭೆ ಮಾಡುವ ವ್ಯಕ್ತಿಗಳಿಗೆ ಸರ್ಕಾರ ರಕ್ಷಣೆ ಕೊಡುವುದಿಲ್ಲ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ್ ಬಿ ಪಾಟೀಲ್ ಮುನೇನಕೊಪ್ಪ ಹೇಳಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಭಾವೈಕ್ಯತೆ ನಾಡು. ಕೋಮುಗಲಭೆ ಮಾಡುವ ಎಂಥಹದ್ದೇ ಶಕ್ತಿ ಇದ್ದರೂ ಅದನ್ನು ಮಟ್ಟ ಹಾಕುವ ಕೆಲಸ ಸರ್ಕಾರ ಮಾಡುತ್ತದೆ ಎಂದ ಅವರು, ಕೋಮು ಗಲಭೆ ಆದರೆ ಬಿಜೆಪಿಗೆ ಲಾಭ ಆಗುತ್ತದೆ ಎಂದು ಹೇಳಿದ್ದ ಈಶ್ವರ ಖಂಡ್ರೆಗೆ ತಿರುಗೇಟು ನೀಡಿದರು. ರಾಜಕಾರಣವನ್ನು ಚುನಾವಣೆ ಸಂದರ್ಭದಲ್ಲಿ ಮಾಡಲಿ ಈಗಲ್ಲ ಎಂದರು.

    ಜನರ ಮಧ್ಯೆ ಈ ರೀತಿಯ ಕೋಮು ಸಂಘರ್ಷ ಹಚ್ಚುವುದು ಸರಿಯಾದದ್ದಲ್ಲ. ಅವರು ಒಂದು ಪಕ್ಷದಲ್ಲಿದ್ದಾರೆ. ನಾವೊಂದು ಪಕ್ಷದಲ್ಲಿದ್ದೇವೆ. ಚುನಾವಣೆ ಬಂದಾಗ ರಾಜಕೀಯ ಮಾಡಲಿ, ರಾಜ್ಯ ಮತ್ತು ದೇಶದ ಶಾಂತಿಯಿಂದ ಇರಬೇಕು ಎನ್ನುವುದನ್ನು ಬಯಸುತ್ತೇವೆ. ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: CFI, PFI ಸಂಘಟನೆಗಳೇ ಮಕ್ಕಳ ಭವಿಷ್ಯ ಹಾಳಾಗೋದಕ್ಕೆ ಕಾರಣ: ಬಿ.ಸಿ.ನಾಗೇಶ್

    ಕೋಮುಗಲಭೆಗೆ ಕಾರಣರಾದವರ ಮೇಲೆ ರಾಜ್ಯದಲ್ಲಿ ಬುಲ್ಡೋಜರ್ ಸಂಸ್ಕೃತಿ ತರಲು ಸರ್ಕಾರ ಮುಂದಾಗಿದೆಯಾ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಮುಖ್ಯಮಂತ್ರಿಗಳು ಬಹಳ ತಿಳುವಳಿಕೆ ಇರುವಂತರು. ಮುಖ್ಯಮಂತ್ರಿಗಳು ತುಂಬಾ ಅನುಭವ ಇರುವಂತವರು. ಮುಖ್ಯಮಂತ್ರಿಗಳು ಒಂದು ತೀರ್ಮಾನವನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಮತ್ತು ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಪಿಎಸ್‍ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿಲ್ಲ: ಪ್ರವೀಣ್ ಸೂದ್