Tag: Eshani

  • ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ಬಿಕಿನಿ ಧರಿಸಿ ಹಾಟ್ ಅವತಾರ ತಾಳಿದ ‘ಬಿಗ್‌ ಬಾಸ್‌’ ಖ್ಯಾತಿಯ ಇಶಾನಿ

    ‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10) ಸ್ಪರ್ಧಿ ಇಶಾನಿ (Eshani) ಇದೀಗ ಹಾಟ್ ಅವತಾರ ತಾಳಿದ್ದಾರೆ. ಬಿಕಿನಿ ಧರಿಸಿ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಹೊಕ್ಕಳಿಗೆ 2.7 ಕೋಟಿ ಮೌಲ್ಯದ ಡೈಮಂಡ್ ರಿಂಗ್ ಧರಿಸಿದ ಪ್ರಿಯಾಂಕಾ ಚೋಪ್ರಾ- ಬೆಲೆ ಕೇಳಿ ಫ್ಯಾನ್ಸ್‌ ಶಾಕ್

    ಪಿಂಕ್ ಕಲರ್ ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಫೋಟೋವನ್ನು ಇಶಾನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ‘ನನಗೆ ನಿಮ್ಮ ಅನುಮತಿ ಬೇಡ’ ಎಂದು ನೆಗೆಟಿವ್ ಕಾಮೆಂಟ್ ಮಾಡೋರಿಗೆ ಮೊದಲೇ ಎಚ್ಚರಿಕೆ ಕೊಟ್ಟಿದ್ದಾರೆ. ನಟಿಯ ಪೋಸ್ಟ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿದೆ.

    ಅಂದಹಾಗೆ, ದೊಡ್ಮನೆಯಲ್ಲಿ ಮೈಕಲ್ ಜೊತೆ ಲವ್ ವಿಚಾರವಾಗಿ ಇಶಾನಿ ಹೈಲೈಟ್ ಆಗಿದ್ದರು. ಆಟಕ್ಕಿಂತ ಮೈಕಲ್ ಜೊತೆಗಿನ ಗೆಳೆತನದಿಂದ ಇಶಾನಿ ಗುರುತಿಸಿಕೊಂಡಿದ್ದರು. ಬಳಿಕ ಕೆಲವೇ ದಿನಗಳಲ್ಲಿ ಅವರು ಎಲಿಮಿನೇಟ್ ಆಗಿ ಹೊರಬಂದಿದ್ದರು.

    ಇನ್ನೂ ಬಿಗ್ ಬಾಸ್‌ನಲ್ಲಿ ಡ್ರೋನ್ ಪ್ರತಾಪ್‌ಗೆ ಕಾಗೆ ಎಂದು ವಾಗ್ದಾಳಿ ನಡೆಸಿದ್ದರು. ಸಿಂಪಥಿ ಕಾರ್ಡ್ ಯೂಸ್ ಮಾಡಿಕೊಂಡು ಬಿಗ್ ಬಾಸ್‌ನಲ್ಲಿದ್ದಾರೆ ಎಂದು ಇಶಾನಿ ಕೆಣಕಿದ್ದರು.

    ಇದು ಪ್ರತಾಪ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಇಶಾನಿ ಕ್ಷಮೆಯಾಚಿಸುವರೆಗೂ ಬಿಟ್ಟಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಆ ನಂತರ ಇಶಾನಿ ಕ್ಷಮೆ ಕೇಳಿದ್ದರು.

    ಸದ್ಯ ಇಶಾನಿ ಆಲ್ಬಂ ಸಾಂಗ್‌ ಹಾಗೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ಹೊಸ ಪ್ರಾಜೆಕ್ಟ್‌ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ.

  • ದರ್ಶನ್ ಪ್ರಕರಣ: ನೋ ಕಾಮೆಂಟ್ಸ್ ಎಂದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ

    ದರ್ಶನ್ ಪ್ರಕರಣ: ನೋ ಕಾಮೆಂಟ್ಸ್ ಎಂದ ‘ಬಿಗ್ ಬಾಸ್’ ಖ್ಯಾತಿಯ ಇಶಾನಿ

    ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ಇಶಾನಿಗೆ ಇಂದು (ಸೆ.13) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತ್‌ಡೇಯಂದು ಕೆಟ್ಟ ಕಾಮೆಂಟ್ ಮಾಡುವವರಿಗೆ ಟಕ್ಕರ್ ಕೊಡುವಂತಹ ಆಲ್ಬಂ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ. ಈ ವೇಳೆ, ದರ್ಶನ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ (Darshan) ಕೇಸ್‌ ಕುರಿತು ನೋ ಕಾಮೆಂಟ್ಸ್ ಎಂದಿದ್ದಾರೆ.

    ಕೆಟ್ಟ ಕಾಮೆಂಟ್ ಮಾಡುವವರ ಬಗ್ಗೆ ಮತ್ತು ದರ್ಶನ್ ಪ್ರಕರಣದ ಬಗ್ಗೆ ಇಶಾನಿ ಮಾತನಾಡಿ, ಎಲ್ಲಾ ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಿ ಇರೋದಿಲ್ಲ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ. ನಮಗೆ ಎಲ್ಲೂ ಸೇಫ್ ಜಾಗ ಇಲ್ಲ. ಅದಕ್ಕೆ ಈ ಹಾಡಿನ ಮೂಲಕ ಬೋಲ್ಡ್ ಆಗಿ ಟಕ್ಕರ್ ಕೊಟ್ಟಿದ್ದೀನಿ ಎಂದಿದ್ದಾರೆ. ಇದನ್ನೂ ಓದಿ:ಬಾಲಿ ಬ್ಯೂಟಿಗೆ ಬೆರಗಾದ ‘ಪಾರು’ ನಟಿ

    ದರ್ಶನ್ ಕುರಿತು ಎದುರಾದ ಪ್ರಶ್ನೆಗೆ ನೋ ಕಾಮೆಂಟ್ಸ್ ಎಂದಿದ್ದಾರೆ. ಕೆಟ್ಟ ಮೆಸೇಜ್ ಬಂದಾಗ ಇಗ್ನೋರ್ ಮಾಡೋಕೆ ಆಗಲ್ಲ. ದರ್ಶನ್ ಬಗ್ಗೆ ಮಾತನಾಡೋಕೆ ನಾನು ಏನು ಅಲ್ಲ. ನಾನು ತುಂಬಾ ಎಮೋಷನಲ್ ಆಗಿಬಿಡ್ತೀನಿ. ಅದಕ್ಕೆ, ಏನು ಹೇಳೋಕೆ ಆಗೋದಿಲ್ಲ. ರೇಣುಕಾಸ್ವಾಮಿ ಫ್ಯಾಮಿಲಿ ಬಗ್ಗೆ ಹೇಳಬೇಕೆಂದರೆ, ಫ್ಯಾಮಿಲಿ ಈಸ್ ಫ್ಯಾಮಿಲಿ ಎಲ್ಲಾ ಸರಿ ಹೋಗಲಿ ಎಂದು ಮಾತನಾಡಿದ್ದಾರೆ.

    ಈ ವೇಳೆ, ಕೇರಳದ ಹೇಮಾ ಕಮಿಟಿಯಂತೆ ಕನ್ನಡದಲ್ಲೂ ತರುವ ಬಗ್ಗೆ ನಟಿ ಪ್ರತಿಕ್ರಿಯಿಸಿ, ಎಲ್ಲರಿಗೂ ಈ ಥರಹ ಸಮಸ್ಯೆ ಇರುತ್ತದೆ. ನನಗೂ ಈ ಥರ ಎಫೆಕ್ಟ್ ಆಗಿದೆ. ಕಾಸ್ಟಿಂಗ್ ತುಂಬಾ ಅಸಹ್ಯ ಅನಿಸುತ್ತದೆ. ಇದಕ್ಕಾಗಿ ಒಂದು ಸಂಸ್ಥೆ ಮಾಡ್ತಿರೋದು ಒಳ್ಳೆಯದು. ನಾನು ಯಾವಾಗಲೂ ಆ ಸಂಸ್ಥೆ ಜೊತೆ ಗಟ್ಟಿಯಾಗಿ ನಿಲುತ್ತೇನೆ ಎಂದಿದ್ದಾರೆ.

  • ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ಇಶಾನಿ ಮನೆ ಕಾರ್ಯಕ್ರಮದಲ್ಲಿ ‘ಬಿಗ್ ಬಾಸ್’ ಸ್ಪರ್ಧಿಗಳ ಮಸ್ತ್ ಡ್ಯಾನ್ಸ್

    ‘ಬಿಗ್ ಬಾಸ್’ ಖ್ಯಾತಿಯ ಇಶಾನಿ (Eshani) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಇದೀಗ ಬಿಗ್‌ ಬಾಸ್‌ ಬೆಡಗಿ ಇಶಾನಿ ಸಹೋದರ ಕಾರ್ತಿಕ್ ಮದುವೆ ಅದ್ಧೂರಿಯಾಗಿ ಜರುಗಿದೆ. ಈ ವೇಳೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಇಶಾನಿ ಜೊತೆ ಬಿಗ್ ಬಾಸ್  ಸ್ಪರ್ಧಿಗಳು ಆಗಮಿಸಿ ಕುಣಿದು ಕುಪ್ಪಳಿಸಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯನ್ನು ಹೊಗಳಿದ ಮಾನುಷಿ ಚಿಲ್ಲರ್

    ಏ.19ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ವೊಂದರಲ್ಲಿ ಇಶಾನಿ ಸಹೋದರನ ಮದುವೆ ಸಮಾರಂಭ ನಡೆದಿದ್ದು, ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ ಆಗಿದೆ. ಆರತಕ್ಷತೆ ವೇದಿಕೆಯಲ್ಲಿ ಇಶಾನಿ ಜೊತೆ ಸಂಗೀತಾ ಶೃಂಗೇರಿ (Sangeetha Sringeri), ನೀತು, ಪವಿ ಪೂವಪ್ಪ ಡ್ಯಾನ್ಸ್ ಮಾಡಿದ್ದಾರೆ. ಶೇಕ್ ಇಟ್ ಪುಷ್ಪವತಿ ಎಂದು ಕಲರ್‌ಫುಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

    ಈ ಡ್ಯಾನ್ಸ್ ನೋಡಿ ನೀತು ಡ್ಯಾನ್ಸಿಂಗ್ ಸ್ಕಿಲ್‌ಗೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದನ್ನೂ ಓದಿ:‘ವೀರ ಮದಕರಿ’ ಬಾಲನಟಿ ಈಗ ನಾಯಕಿ- ಮಹೇಶ್ ಬಾಬು, ರಕ್ಷಿತ್ ಸಿನಿಮಾದಲ್ಲಿ ಜೆರುಶಾ

    ಇಶಾನಿ ಸದ್ಯ ಹೊಸ ಆಲ್ಬ ಸಾಂಗ್‌ಗೆ ತಯಾರಿ ಮಾಡಿಕೊಳ್ತಿದ್ದಾರೆ. ಸಿನಿಮಾ, ರ್ಯಾಪ್‌ ಸಾಂಗ್ ಅಂತ ನಟಿ ಬ್ಯುಸಿಯಾಗಿದ್ದಾರೆ. ಚಿತ್ರರಂಗದಲ್ಲಿಯೇ ಗುರುತಿಸಿಕೊಳ್ಳಬೇಕು ಎಂಬ ಇಶಾನಿಗೆ ಹಂಬಲವಿದೆ.

  • ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

    ಡಿಬಾಸ್ ಹುಟ್ಟುಹಬ್ಬಕ್ಕೆ ‘ಬಿಗ್ ಬಾಸ್’ ಇಶಾನಿ ಸ್ಪೆಷಲ್ ಸಾಂಗ್ ರಿಲೀಸ್

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದಂದು (ಫೆ.16) ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ಇಶಾನಿ (Eshani) ವಿಶೇಷ ಗೀತೆಯನ್ನು ರಿಲೀಸ್ ಮಾಡಲಿದ್ದಾರೆ. ದರ್ಶನ್ (Darshan) ಕುರಿತಾದ ಗೀತೆ ಇದಾಗಿದ್ದು, ಹಾಡು ಅದ್ಭುತವಾಗಿ ಮೂಡಿ ಬಂದಿದೆ. ‘ಬಾಸ್’ (Boss) ಹಾಡು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

    ದರ್ಶನ್ ನಟಿಸಿದ ಅಷ್ಟು ಸಿನಿಮಾಗಳ ಹೆಸರು ಒಳಗೊಂಡಿರುವ ‘ಬಾಸ್’ ಎಂಬ ಸಾಂಗ್ ರಿಲೀಸ್ ಮಾಡಿದ್ದಾರೆ. ದರ್ಶನ್ ಕುರಿತು ಲಿರಿಕ್ಸ್ ಬರೆದು ಇಶಾನಿ ಹಾಡಿಗೆ ಧ್ವನಿಯಾಗಿದ್ದಾರೆ. ಎಎಸ್ ಪ್ರೊಡಕ್ಷನ್ ಅಡಿಯಲ್ಲಿ ಗಿರಿ ಗೌಡ ನಿರ್ದೇಶಿಸಿದ್ದಾರೆ. ಒಟ್ನಲ್ಲಿ ಇಶಾನಿ ಹಾಡಿಗೆ ಡಿಬಾಸ್ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಮೂಲಕ ಡಿಬಾಸ್ ಮೇಲಿನ ಅಭಿಮಾನವನ್ನು ಇಶಾನಿ ವ್ಯಕ್ತಪಡಿಸಿದ್ದಾರೆ.

     

    View this post on Instagram

     

    A post shared by Eshani (@eshanimusic)

    ಫೆ.16ರಂದು ದರ್ಶನ್ ಅವರು ಆರ್‌ಆರ್ ನಗರದ ನಿವಾಸದಲ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಭಿಮಾನಿಗಳಿಗೆ ಈ ದಿನ ದರ್ಶನ್ ಸಮಯ ಮೀಸಲಿಟ್ಟಿದ್ದಾರೆ. ಇದನ್ನೂ ಓದಿ:ದಚ್ಚುಗೆ ಪ್ರೇಮ್ ಆ್ಯಕ್ಷನ್ ಕಟ್- ‘ಜೈ ಶ್ರೀರಾಮ್’ ಎಂದು ಗದೆ ಎತ್ತಿದ ಡಿಬಾಸ್

    ‘ಕಾಟೇರ’ (Katera) ಸಕ್ಸಸ್ ನಂತರ ದರ್ಶನ್ ಮತ್ತಷ್ಟು ಡಿಮ್ಯಾಂಡ್ ಜಾಸ್ತಿಯಾಗಿದೆ. ಎಂದೂ ಮಾಡಿರದ ಹೊಸ ಬಗೆಯ ಕಥೆಯನ್ನು ದರ್ಶನ್ ಆಯ್ಕೆ ಮಾಡ್ತಿದ್ದಾರೆ. ಕರಿಯ ನಿರ್ದೇಶಕ ಪ್ರೇಮ್, ಮಿಲನ ಖ್ಯಾತಿಯ ಪ್ರಕಾಶ್, ಕಾಟೇರ ನಿರ್ದೇಶಕನ ಜೊತೆ 2 ಸಿನಿಮಾ, ರಮೇಶ್ ಪಿಳ್ಳೈ, ಶೈಲಜಾ ನಾಗ್ ಮತ್ತು ಬಿ.ಸುರೇಶ, ಮೋಹನ್ ನಟರಾಜನ್, ಸೂರಪ್ಪ ಬಾಬು, ಸಚ್ಚಿದಾನಂದ ಇಂಡುವಾಳ, ಕೆ.ಮಂಜುನಾಥ್, ರಘುನಾಥ್ ಸೋಗಿ, ಮಹೇಶ್ ಸುಖಧರೆ, ರಾಘವೇಂದ್ರ ಹೆಗ್ಡೆ ಹೀಗೆ ಸಾಲು ಸಾಲು ನಿರ್ಮಾಪಕರು ದರ್ಶನ್‌ಗಾಗಿ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ದರ್ಶನ್ ಹುಟ್ಟುಹಬ್ಬದಂದು ಸಿನಿಮಾಗಳನ್ನು ಘೋಷಣೆ ಕೂಡ ಮಾಡಿದ್ದಾರೆ.

    ದರ್ಶನ್ ಸಿನಿಮಾಗಳಿಗೆ ಬಂಡವಾಳ ಹಾಕಿದರೆ ಹಣಕ್ಕೆ ಮೋಸವಿಲ್ಲ ಎನ್ನುವ ಮಾತು ಮೊದಲಿನಿಂದಲೂ ಇದೆ. ಕಾಟೇರ ಗೆದ್ದ ನಂತರ ಈ ನಂಬಿಕೆ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿವೆ. ಯಾವೆಲ್ಲ ಸಿನಿಮಾಗಳು, ಯಾವಾಗೆಲ್ಲ ಬರುತ್ತವೆ ಎನ್ನುವುದು ಕಾದು ನೋಡಬೇಕಿದೆ.

  • ಬಿಗ್‌ ಬಾಸ್‌ ಬಳಿಕ ಇಶಾನಿ ಜೊತೆ ರಿಲೇಷನ್‌ಶಿಪ್‌ ಕಂಟಿನ್ಯೂ ಮಾಡ್ತಾರಾ? ಮೈಕಲ್‌ ಸ್ಪಷ್ಟನೆ

    ಬಿಗ್‌ ಬಾಸ್‌ ಬಳಿಕ ಇಶಾನಿ ಜೊತೆ ರಿಲೇಷನ್‌ಶಿಪ್‌ ಕಂಟಿನ್ಯೂ ಮಾಡ್ತಾರಾ? ಮೈಕಲ್‌ ಸ್ಪಷ್ಟನೆ

    ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಹೈಲೆಟ್ ಆಗಿರುವ ಜೋಡಿಗಳಲ್ಲಿ ಮೈಕಲ್- ಇಶಾನಿ ಕೂಡ ಒಬ್ಬರಾಗಿದ್ದರು. ಇಶಾನಿ ಎಲಿಮಿನೇಟ್ ಆಗುವ ಮುನ್ನ ಮನೆಯಲ್ಲಿ ರಂಪಾಟ ನಡೆದಿತ್ತು. ಇಶಾನಿ ನಡೆಗೆ ಮೈಕಲ್ (Michael) ಕೂಡ ಕಿಡಿಕಾರಿದ್ರು ಅದಾದ ಬಳಿಕ ಬ್ರೇಕಪ್ ಆಗಿತ್ತು. ಆದರೆ ಎಲಿಮಿನೇಷನ್ ಸಮಯದಲ್ಲಿ ಪ್ರೀತಿಯಿಂದ ಮೈಕಲ್ ಕಳುಹಿಸಿಕೊಟ್ಟಿದ್ರು. ಇದಾದ ಮೇಲೆ ಏನಾಯ್ತು ಎಂದು ಮತ್ತೆ ಇಶಾನಿ-ಮೈಕಲ್ ಪ್ರೀತಿ ಬಗ್ಗೆ ಇದೀಗ ಉತ್ತರ ಸಿಕ್ಕಿದೆ.

    ಇಶಾನಿ (Eshani) ನನ್ನ ಗರ್ಲ್‌ಫ್ರೆಂಡ್ ಎಂದು ಮೈಕಲ್ ಬಿಗ್ ಮನೆಯಲ್ಲಿ ಸಾರಿ ಸಾರಿ ಹೇಳಿದ್ದರು. ಪ್ರೇಮ ಪಕ್ಷಿಗಳಾಗಿ ಇಬ್ಬರೂ ಹೈಲೆಟ್ ಆಗಿದ್ರು. ಅದಾದ ಮೈಕಲ್ ಇಶಾನಿ ಕಟುವಾಗಿ ನಡೆದುಕೊಳ್ಳುವ ರೀತಿ.. ನಾನ್ನ ಮಾತೇ ನಡೆಯಬೇಕು ಎನ್ನುವ ನಡೆ, ಅದರಲ್ಲೂ ಟಾಸ್ಕ್‌ನಲ್ಲಿ ಉಸ್ತುವಾರಿ ಸಮಯದಲ್ಲಿ ಮೈಕಲ್ ಫೇರ್ ಆಗಿ ಆಟ ಆಡೋಕೆ ಬಿಟ್ಟಿರಲಿಲ್ಲ. ಹೀಗೆ ಹಲವು ವಿಚಾರಗಳಿಂದ ಇಬ್ಬರ ನಡುವೆ ಮನಸ್ತಾಪದ ಹೊಗೆಯಾಡಿತ್ತು.

    ಮೈಕಲ್‌ಗೆ ಕಿಚ್ಚನ ಕ್ಲಾಸ್ ಬಳಿಕ ಸಾಕಮ್ಮಾ ಸಾಕು ನಿನ್ನ ಜೊತೆಗಿನ ರಿಲೇಷನ್‌ಶಿಪ್ ಸಾಕು ಎನ್ನುವಂತೆ ಮೈಕಲ್ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಇಬ್ಬರ ನಡುವಿನ ಲವ್ವಿ-ಡವ್ವಿ ಅಷ್ಟೇನೂ ವರ್ಕ್ ಆಗಿರಲಿಲ್ಲ. ವಾರಾಂತ್ಯದಲ್ಲಿ ಸುದೀಪ್ ಮುಂದೆ ತಮ್ಮ ಹಳೆಯ ರಿಲೇಷನ್‌ಶಿಪ್ ಬಗ್ಗೆ ಹೇಳಿ ಇಶಾನಿ ಕಣ್ಣೀರು ಇಟ್ಟಿದ್ದರು. ಬಳಿಕ ಅವರ ಕಳಪೆ ಆಟಕ್ಕೆ ಎಲಿಮಿನೇಟ್ ಆಗುವ ಮೂಲಕ ಮನೆಮಂದಿಗೆ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ಇದಾದ ಮೇಲೆ ಇಶಾನಿ ಬಗ್ಗೆ ಮೈಕಲ್ ನೆನೆಯಲೇ ಇಲ್ಲ. ಅಸಲಿಗೆ ಇಬ್ಬರಿಗೆ ಲವ್ ಆಯ್ತು. ಮೈಕಲ್ ಇಶಾನಿ ಅವರನ್ನ ಮರೆತ್ರಾ ಎಂಬೆಲ್ಲಾ ಪ್ರಶ್ನೆಯನ್ನ ಅಭಿಮಾನಿಯೊಬ್ಬರು ವಿಡಿಯೋ ಮೆಸೇಜ್ ಮೂಲಕ ಕಿಚ್ಚನ ಪಂಚಾಯಿತಿಯಲ್ಲಿ ಮೈಕಲ್‌ಗೆ ಕೇಳಿದ್ದಾರೆ. ಅದಕ್ಕೆ ನೇರವಾಗಿ ಮೈಕಲ್ ಅಜಯ್ ಉತ್ತರಿಸಿದ್ದಾರೆ.

    ಬಿಗ್ ಬಾಸ್ ನೋಡೋಕೆ ಆಸಕ್ತಿ ಬಂದಿದ್ದೆ ಮೈಕಲ್- ಇಶಾನಿ ಲವ್ ಸ್ಟೋರಿ ನೋಡಿದ ಮೇಲೆ. ಆದರೆ ಒಂದೇ ವಾರದಲ್ಲಿ ಎಲ್ಲೋ ಗೋಜಪ್ಪ ಇಶಾನಿಯನ್ನ ಮರೆತು ಬಿಟ್ರಾ ಅಂತ ಅನಿಸುತ್ತಿದೆ ಎಂದು ಬಿಗ್ ಬಾಸ್ ಅಭಿಮಾನಿಯೊಬ್ಬರು ಪ್ರಶ್ನೆ ಮುಂದಿಟ್ಟಿದ್ದಾರೆ. ಅದಕ್ಕೆ, ಲೈಫ್‌ನಲ್ಲಿ ಸ್ವಲ್ಪ ಕಾಂಪ್ಲಿಕೇಶನ್ಸ್ ಇರುತ್ತೆ. ಸಾಕಷ್ಟು ಭಿನ್ನಾಭಿಪ್ರಾಯ ಮತ್ತೆ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದಿದ್ದಾರೆ ಮೈಕಲ್.

    ನಾನು ಇಶಾನಿ ಈಗ ಫ್ರೆಂಡ್ಸ್ ಆಗಿದ್ವಿ. ಬಿಗ್ ಬಾಸ್ ಆಟ ಮುಗಿದ ಮೇಲೆ ಹೊರಗಡೆ ಬಂದ ಮೇಲೆ ಇಶಾನಿಯನ್ನ ಖಂಡಿತವಾಗಿಯೂ ಮೀಟ್ ಆಗುತ್ತೀನಿ. ದಯವಿಟ್ಟು ನೀವು ನನ್ನ ಇನ್ಸ್ಟಾಗ್ರಾಂ ಫಾಲೋ ಮಾಡಿ. ನಮ್ಮಿಬ್ಬರ ಪೋಸ್ಟ್ ನೀವು ನೋಡಬಹುದು ಎಂದು ಮೈಕಲ್ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಇಶಾನಿಯನ್ನ ನಾನೇ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ. ನೀವ್ಯಾಕೆ ತೆಗೆದುಕೊಂಡಿದ್ದೀರಾ ಎಂಬ ಅರ್ಥದಲ್ಲಿ ಮೈಕಲ್‌ ಚಾಟಿ ಬೀಸಿದ್ದಾರೆ.

  • Bigg Boss: ಮೈಕಲ್‌ ಕನ್ನಡ ಪ್ರೀತಿಗೆ ಸಿಕ್ತು ಕಿಚ್ಚನ ಚಪ್ಪಾಳೆ

    Bigg Boss: ಮೈಕಲ್‌ ಕನ್ನಡ ಪ್ರೀತಿಗೆ ಸಿಕ್ತು ಕಿಚ್ಚನ ಚಪ್ಪಾಳೆ

    ಬಿಗ್ ಬಾಸ್ ಮನೆಗೆ (Bigg Boss Kannada 10) ಬಂದ ಮೇಲೆ ಮೈಕಲ್ ಕನ್ನಡ ಮತ್ತಷ್ಟು ಕಲಿತು ಮಾತನಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕನ್ನಡ ಗೊತ್ತಿದ್ದೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುವವರಿಗೆ ಸುದೀಪ್ ಹೇಳಿ, ಮೈಕಲ್‌ಗಿರುವ ಕನ್ನಡ ಭಾಷೆಯ ಮೇಲಿನ ಪ್ರೀತಿಗೆ ಚಪ್ಪಾಳೆ ನೀಡಿದ್ದಾರೆ. ಮೈಕಲ್ ಪ್ರಯತ್ನಕ್ಕೆ ಕಿಚ್ಚ (Sudeep) ಬೆನ್ನು ತಟ್ಟಿದ್ದಾರೆ.

    ದೊಡ್ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡುತ್ತದೆ. ಆದರೆ ಮೊನ್ನೆ ಆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಕನ್ನಡ ಪದಗಳಲ್ಲೇ ಎದುರಾಳಿಗೆ ಉತ್ತರ ಕೊಡ್ತಾ ಇದ್ರಿ, ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಏನೆಂದು ತಿಳಿದುಕೊಂಡು ಕೊನೆಗೆ ಅವಕಾಶವಾದಿ ಅಂತ ಹೇಳಿದ್ದಕ್ಕೆ ಸುದೀಪ್ ಭೇಷ್ ಎಂದಿದ್ದಾರೆ.

    ನನಗೆ ಕನ್ನಡ ಬರಲ್ಲ ಅನ್ನೋದನ್ನು ನೀವು ಬಳಸಿಕೊಳ್ಳಬಹುದಿತ್ತು. ಆದರೆ ನೀವು ಅದನ್ನು ಬಳಸದೇ, ಕನ್ನಡ ಮಾತನಾಡಲು ನೀವು ಹಾಕಿದ ಎಫರ್ಟ್‌ಗೆ ನಮ್ಮ ಮೆಚ್ಚುಗೆ ಇದೆ. ನಾನು ಏನಕ್ಕೆ ಇನ್ನು ಪ್ರಶಂಸಿಸುತ್ತಿದ್ದೇನೆ ಎಂದರೆ, ಕರ್ನಾಟಕದಲ್ಲೇ ಹುಟ್ಟಿ, ಬೆಳೆದ ಮಿಕ್ಕ ಸ್ಪರ್ಧಿಗಳು ಕೂಡ ಈ ಎಫರ್ಟ್ ಹಾಕಬಹುದಲ್ಲಾ. ನೀವು ಗುಂಪಲ್ಲಿ ನಿಮ್ಮ ನಿಮ್ಮಲ್ಲೇ ಮಾತನಾಡುವಾಗ ಎಷ್ಟೋ ವಿಚಾರಗಳು ಜನರಿಗೆ ಅರ್ಥ ಆಗಲ್ಲ. 20% ಜನರಿಗೆ ನಿಮ್ಮ ಮಾತುಗಳು ಅರ್ಥ ಆಗ್ತಿಲ್ಲ ಅಂದಾಗ, ಅದನ್ನು ಅರ್ಥಪಡಿಸಿ ಕನ್ನಡದಲ್ಲೇ ಮಾತನಾಡಿ ಎಂದು ಸುದೀಪ್ ಹೇಳಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ಕಳೆದ ವಾರ ಕಿಚ್ಚನ ಚಪ್ಪಾಳೆ ನಡೆದಿರಲಿಲ್ಲ. ಆದರೆ ಈ ವಾರ ನೀಡುತ್ತಿದ್ದೇನೆ. ಈ ವಾರ ಒಬ್ಬ ವ್ಯಕ್ತಿಗೆ ಆಟದ ಮೇಲೆ ಫೋಕಸ್ ಜಾಸ್ತಿ ಆಗುತ್ತದೆ, ಎಫರ್ಟ್ ಜಾಸ್ತಿ ಕಾಣಿಸುತ್ತದೆ. ತಂತ್ರಗಾರಿಕೆ ಚೆನ್ನಾಗಿತ್ತು. ಅದ್ಭುತವಾಗಿ ನನ್ನ ಕಣ್ಣಿಗೆ ಕಾಣಿಸಿದ್ದು ಮೈಕಲ್ ಅವರು. ಈ ವಾರ ಕಿಚ್ಚನ ಚಪ್ಪಾಳೆ ಮೈಕಲ್‌ಗೆ ಹೋಗುತ್ತಿದೆ. ನೀವು ಕನ್ನಡ ಮಾತನಾಡಲು ಹಾಕಿದ ಎಫರ್ಟ್ ಎದ್ದು ಕಾಣಿಸ್ತು. ಅದೇ ತುಂಬ ಪ್ಲಸ್ ಆಯ್ತು, ಮೈಕಲ್ ನಡೆಗೆ ಸುದೀಪ್ ಹಾಡಿ ಹೊಗಳಿದ್ದಾರೆ. ಒಟ್ನಲ್ಲಿ ಭಾಷೆ ಗೊತ್ತಿದ್ದರೂ ಮಾತನಾಡದವರ ಮುಂದೆ ಭಾಷೆ ಬರದ ಮೈಕಲ್ (Michael) ಕನ್ನಡ ಕಲಿತು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಿದ್ದಾರೆ.

  • Breaking:ದೊಡ್ಮನೆಯಿಂದ ಭಾಗ್ಯಶ್ರೀ ಔಟ್

    Breaking:ದೊಡ್ಮನೆಯಿಂದ ಭಾಗ್ಯಶ್ರೀ ಔಟ್

    ಬಿಗ್ ಬಾಸ್ ಮನೆಯ (Bigg Boss House) ಆಟ 6ನೇ ವಾರ ಪೂರೈಸಿ 7ನೇ ವಾರದತ್ತ ಮುನ್ನುಗ್ಗುತ್ತಿದೆ. ಈ ವಾರ ಮನೆಮಂದಿಗೆ ಡಬಲ್ ಎಲಿಮಿನೇಷನ್ ಜೊತೆ ಡಬಲ್ ಶಾಕ್ ಕೊಟ್ಟಿದೆ. ಇಶಾನಿ (Eshani) ಎಲಿಮಿನೇಷನ್ ಬೆನ್ನಲ್ಲೇ ಭಾಗ್ಯಶ್ರೀ ಕೂಡ ಬಿಗ್‌ ಬಾಸ್‌ ಔಟ್‌ ಆಗಿದ್ದಾರೆ.‌ ಇದನ್ನೂ ಓದಿ:Bigg Boss: ಲವ್‌ ಯೂ ಎಂದ ಸಂಗೀತಾ- ನಾಚಿ ನೀರಾದ ಕಾರ್ತಿಕ್‌

    ಈ ಹಿಂದೆ ಎರಡೆರೆಡು ಬಾರಿ ಎಲಿಮಿನೇಷನ್ (Elimination) ಪ್ರಕ್ರಿಯೆ ಮಿಸ್ ಆಗಿತ್ತು. ಈ ವಾರ ಇಬ್ಬರೂ ಸ್ಪರ್ಧಿಗಳು ಮನೆಯಿಂದ ಔಟ್ ಆಗಿದ್ದಾರೆ. ಈ ಬಾರಿ ವಾರಾಂತ್ಯದ ಮೊದಲ ಪಂಚಾಯಿತಿಯಲ್ಲೇ ಕಿಚ್ಚ ಎಲಿಮಿನೇಷನ್ ಶಾಕ್ ಕೊಟ್ಟರು. ಇಶಾನಿ ಕಳಪೆ ಆಟದಿಂದ ಬಿಗ್ ಬಾಸ್ ಮನೆಯಿಂದಲೇ (Bigg Boss House) ಗೇಟ್ ಪಾಸ್ ಸಿಕ್ಕಿದ್ರೆ, ಭಾನುವಾರ ಭಾಗ್ಯ ಅವರ ಆಟ ಅಂತ್ಯವಾಗಿದೆ.

    ದಸರಾ ಹಬ್ಬವಿದ್ದ ಕಾರಣ ಭಾಗ್ಯಶ್ರೀ ಅವರು ಅಂದು ಜಸ್ಟ್ ಮಿಸ್ ಆಗಿದ್ದರು. ಎಲಿಮಿನೇಷನ್ ಬಿಸಿ ಇಟ್ಟಿದ ಮೇಲೆ ಭಾಗ್ಯ ಅವರು ಎಚ್ಚೆತ್ತುಕೊಂಡಿದ್ದರು. ಅದಾದ ಬಳಿಕ ಮನೆಯಲ್ಲಿ ಸಖತ್ ಆಗಿ ಭಾಗ್ಯ ಅವರು ಆಟ ಆಡಿದ್ದರು.

    ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ರೂ, ಭಾಗ್ಯಶ್ರೀ ಅವರು ಬಿಗ್ ಮನೆಗೆ ಕಾಲಿಟ್ಟ ದಿನದಿಂದಲೇ ಟಾರ್ಗೆಟ್ ಆಗುತ್ತಲೇ ಬಂದಿದ್ದರು. ಮೊದಲ ವಿನಯ್ ಬಾಯಿಗೆ ಆಹಾರವಾಗಿದ್ದರು. ಆ ನಂತರ ಸ್ನೇಹಿತ್ ಕೆಂಗಣ್ಣಿಗೆ ಗುರಿಯಾಗಿದ್ದರು. ಬೇರೇ ಅವರ ವಿಚಾರದಲ್ಲಿ ಭಾಗ್ಯ ಮುಗುತುರಿಸುತ್ತಾರೆ ಎಂದು ಕಾರಣ ನೀಡಿ ಭಾಗ್ಯ ಕಳಪೆ ಎಂದಿದ್ದರು ಸ್ನೇಹಿತ್.

    ಭಾಗ್ಯ ಅವರಿಗೆ ಕಳೆದ ಬಾರಿ ಎಲಿಮಿನೇಷನ್ ಬಿಸಿ ತಟ್ಟಿದ ಮೇಲೆ ಚುರುಕಾಗಿದ್ದರು. ಇತ್ತೀಚಿನ ದಿನಗಳಲ್ಲಿ ಕೊಂಚ ಸ್ವೀಡ್ ಕೂಡ ಆಗಿದ್ದರು. ಈಗ ಅವರ ಎಲಿಮಿನೇಷನ್ ಮನೆಮಂದಿಗೆ ಮತ್ತು ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಸ್ನೇಕ್ ಶ್ಯಾಮ್, ರಕ್ಷಕ್, ಇಶಾನಿ ನಂತರ ಭಾಗ್ಯಶ್ರೀಗೆ ಎಲಿಮಿನೇಟ್ ಆಗಿದ್ದಾರೆ.

  • ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್

    ಕೊನೆಗೂ ಬಿಗ್‍ಬಾಸ್ ಮನೆಯಲ್ಲಿ ಇಶಾನಿ (Eshani) ಜರ್ನಿ ಎಂಡ್ ಆಗಿದೆ. ಕಳೆದ ವಾರ ವರ್ತೂರ್ ಸಂತೋಷ್ (Varthur Santhosh) ಅವರ ಕಾರಣದಿಂದ ಎಲಿಮಿನೇಷನ್ (Elimination) ನಡೆದಿರಲಿಲ್ಲ. ಈ ವಾರ ಡಬಲ್ ಎಲಿಮಿನೇಷನ್ ವೀಕ್. ಇಬ್ಬರು ಈ ಮನೆಯಿಂದ ಹೊರಗೆ ಹೋಗಲಿದ್ದಾರೆ ಎಂದು ಕಿಚ್ಚ ಹೇಳಿದ್ದರು.

    ಶನಿವಾರದ ಎಪಿಸೋಡ್ ಕೊನೆಯಲ್ಲಿ ಕಿಚ್ಚ, ಈ ವಾರ ಒಬ್ಬರು ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಅವರು ಯಾರು ಎಂದು ನಿಮಗೇ ಗೊತ್ತಿರಬೇಕು. ಅವರೇ ಎದ್ದು ನಿಂತುಕೊಳ್ಳಿ’ ಎಂದು ಕೇಳಿದರು. ಇಶಾನಿ ಎದ್ದು ನಿಂತುಕೊಂಡರು. ಈ ವೇಳೆ ಕಿಚ್ಚ (Kichcha Sudeepa), ನಿಜ. ನಿಮ್ಮ ಪಯಣ ಬಿಗ್‍ಬಾಸ್ (Bigg Boss Kannada) ಮನೆಯಲ್ಲಿ ಮುಗಿಯುತ್ತಿದೆ. ಆಲ್‍ದಿ ಬೆಸ್ಟ್ ಎಂದು ಹೇಳಿದರು. ಭಾನುವಾರದ ಎಪಿಸೋಡ್‍ನಲ್ಲಿ ಇನ್ನೊಬ್ಬರು ಬಿಗ್‍ಬಾಸ್ ಮನೆಯಿಂದ ಎಲಿಮಿನೇಟ್ ಆಗಲಿದ್ದಾರೆ.

    ಹೊರಬಿದ್ದ ಇಬ್ಬರೂ ಸ್ಪರ್ಧಿಗಳ ಜೊತೆ ಇಂದಿನ ಎಪಿಸೋಡ್‍ನಲ್ಲಿ ಕಿಚ್ಚ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ಇಶಾನಿ, ‘ನಾನು ಇನ್ನಷ್ಟು ಎಫರ್ಟ್ ಹಾಕಬೇಕಾಗಿತ್ತು, ಆಗಲಿಲ್ಲ. ಮನೆಯಿಂದ ಸಾಕಷ್ಟು ಕಲಿತುಕೊಂಡಿದ್ದೀನಿ. ಉಳಿದ ಎಲ್ಲ ಸ್ಪರ್ಧೆಗಳಿಗೆ ಆಲ್ ದಿ ಬೆಸ್ಟ್’ ಎಂದು ಹೇಳಿದರು. ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ಅರ್ಜುನ್ ಸರ್ಜಾ

    ಅಲ್ಲಿಗೆ ಶನಿವಾರದ ‘ಕಿಚ್ಚನ ಪಂಚಾಯಿತಿ’ ಮುಗಿದಿದೆ. ಇಂದು ಮತ್ಯಾವ ಸ್ಪರ್ಧಿ ಮನೆಯಿಂದ ಹೊರಬೀಳಲಿದ್ದಾರೆ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

  • Bigg Boss: ಸುದೀಪ್‌ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತ ಇಶಾನಿ

    Bigg Boss: ಸುದೀಪ್‌ ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತ ಇಶಾನಿ

    ದೊಡ್ಮನೆ (Bigg Boss Kannada 10) ಆಟ 5ನೇ ವಾರ ಪೂರೈಸಿದೆ. ಕಳೆದ ವಾರ ಬಳೆ ಜಗಳ ಹೈಲೆಟ್‌ ಆಗಿದ್ರೆ, ಈ ವಾರ ಉಸ್ತುವಾರಿ ನಿರ್ಣಯ ಬೇಸರ ತರಿಸಿದೆ. ಇದರ ನಡುವೆ ಇಶಾನಿ (Eshani) ಅವರು ಸುದೀಪ್ (Sudeep) ಮುಂದೆಯೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮೈಕಲ್ (Michael) ಅವರು ಎಲ್ಲ ತಪ್ಪಿಗೆ ನಾನೇ ಕಾರಣ ಅಂತ ಹೇಳಿದ್ದಕ್ಕೆ ಬೇಸರ ಆಯ್ತು ಎಂದು ಈಶಾನಿ ಕಣ್ಣೀರು ಹಾಕಿದ್ದಾರೆ. ನನ್ನ ಹಳೇ ರಿಲೇಶನ್‌ಶಿಪ್‌ನಲ್ಲಿಯೂ ನಾನೇ ತಪ್ಪು ಮಾಡಿದೆ ಅಂತ ಬಾಯ್‌ಫ್ರೆಂಡ್ಸ್ ಹೇಳಿದ್ರು, ನನಗೆ ಯಾರ ಮನಸ್ಸಿಗೂ ನೋವು ಮಾಡುವ ಉದ್ದೇಶ ಇಲ್ಲ ಎಂದು ಇಶಾನಿ ಕಣ್ಣೀರಿಟ್ಟಿದ್ದಾರೆ.

    ನಾವಿಬ್ಬರೂ ಪ್ರೀತಿ ಮಾಡುತ್ತಿದ್ದೇವೆ ಅಂತ ಈಶಾನಿ, ಮೈಕಲ್ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಆಟವೊಂದರಲ್ಲಿ ಇಶಾನಿ, ಮೈಕಲ್ ಎರಡು ತಂಡಗಳಿಗೆ ಉಸ್ತುವಾರಿಯಾಗಿದ್ದರು. ಈಶಾನಿ ಉಳಿಯಬೇಕು ಅಂತ ಮೈಕಲ್ ಅವರು ತಮ್ಮ ಟೀಂ ಬಿಟ್ಟು, ಇಶಾನಿ ಟೀಂಗೆ ಹೇಗೆ ಆಟ ಆಡಬೇಕು, ತಂತ್ರ ಮಾಡಬೇಕು ಅಂತ ಸಲಹೆ ನೀಡಿದ್ದರು. ಅಷ್ಟೇ ಅಲ್ಲದೆ ಈಶಾನಿ ಮಾತಿಗೆ ಕಟ್ಟುಬಿದ್ದು ನಿರ್ಣಯ ನೀಡಿದ್ದರು. ಈ ಬಗ್ಗೆ ಕಿಚ್ಚ ಪಂಚಾಯಿತಿಯಲ್ಲಿ ಚರ್ಚೆ ಆಗಿದೆ. ಇದನ್ನೂ ಓದಿ:ದೀಪಾವಳಿಗೆ ಬಂತು ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್

    ಇಶಾನಿಗಾಗಿ ನಾನು ಆಟದಲ್ಲಿ ತಪ್ಪು ಮಾಡಿದ್ದೇನೆ, ಇದು ಸರಿ ಅಲ್ಲ, ನಾನು ಮಾಡಿರುವ ಕೆಲಸ ನನಗೆ ಸಮಾಧಾನ ಕೊಡ್ತಿಲ್ಲ. ನನಗೆ ತುಂಬ ಪಶ್ಚಾತ್ತಾಪ ಇದೆ ಅಂತ ಮೈಕಲ್ ಅವರು  ಸುದೀಪ್ ಮುಂದೆ ಹೇಳಿದ್ದರು. ಅಷ್ಟೇ ಅಲ್ಲದೆ ಇಶಾನಿ ಅವರು ಮೈಕಲ್ ಬಳಿ ಬಂದು, ನಾನು ಮಾಡಿರೋದು ತಪ್ಪು ಅಂತ ಗೊತ್ತಾಗಿದೆ. ನನ್ನಿಂದ ನಿಮ್ಮನ್ನು ಎಲ್ಲರೂ ಅಪರಾಧಿ ಎನ್ನುವ ತರ ನೋಡ್ತಾರೆ ಅಂತ ಗೊತ್ತಿರಲಿಲ್ಲ, ಕ್ಷಮಿಸಿ ಅಂತ ಹೇಳಿದ್ದರು. ಆಗ ಮೈಕಲ್ ಅವರು, ನೀನಗೇನು ಅರ್ಥ ಆಗ್ತಿಲ್ಲ. ಬಿಗ್ ಬಾಸ್ ಮನೆಯಲ್ಲಿ ಇದ್ದೇವೆ, ನಾವಿಬ್ಬರೂ ಭೇಟಿ ಆಗಿ 1 ತಿಂಗಳು ಆಗಿದೆ ಅಷ್ಟೇ ಅಂತ ಮೈಕಲ್‌ ಖಡಕ್‌ ಆಗಿ ಮಾತನಾಡಿದರು.

    ಎಲ್ಲ ತಪ್ಪು ನಾನೇ ಮಾಡಿರೋದು ಅಂತ ಮೈಕಲ್ ಹೇಳ್ತಿದ್ದಾರೆ. ನನಗೆ ಇಲ್ಲಿ ಇರೋಕೆ ಇಷ್ಟ ಇಲ್ಲ. ನಾನು ಹೊರಗಡೆ ಹೋಗ್ತೀನಿ ಅಂತ ಇಶಾನಿ ಅವರು ನಮ್ರತಾ ಗೌಡ, ಸ್ನೇಹಿತ್ ಮುಂದೆ ಹೇಳಿಕೊಂಡು ಅತ್ತಿದ್ದಾರೆ. ಆಗ ಸುದೀಪ್ ಅವರು ಇಶಾನಿಗೆ ಸಮಾಧಾನ ಮಾಡಿದ್ದಾರೆ. ಹಾಗೆಯೇ ನೀವು ಮೈಕಲ್ ಅವರ ನಿರ್ಧಾರವನ್ನು ಗೌರವಿಸಬೇಕು. ಬಿಗ್ ಬಾಸ್ ಮನೆಯಲ್ಲಿ ನಿಮಗೆ ತಪ್ಪು ತಿದ್ದಿಕೊಳ್ಳುವ ಅವಕಾಶ ಇದೆ. ನಾನು ಈ ಶೋನಲ್ಲಿ ಮಾತ್ರ ಯಾವ ಪಾತ್ರವನ್ನೂ ಮಾಡದೆ, ನಾನು ನಾನಾಗಿದ್ದೇನೆ. ನನಗೂ ಜನರಿಗೆ ತಲುಪುವ ಅವಕಾಶ ಸಿಕ್ಕಿದೆ ಎಂದು ಇಶಾನಿಗೆ ಸುದೀಪ್ ಪಾಠ ಮಾಡಿದ್ದಾರೆ.

  • Bigg Boss: ಇಶಾನಿಗಾಗಿ ತನ್ನ ತಂಡಕ್ಕೆ ದ್ರೋಹ ಬಗೆದ್ರಾ ಮೈಕಲ್?‌

    Bigg Boss: ಇಶಾನಿಗಾಗಿ ತನ್ನ ತಂಡಕ್ಕೆ ದ್ರೋಹ ಬಗೆದ್ರಾ ಮೈಕಲ್?‌

    ಬಿಗ್ ಬಾಸ್‌‌ ಮನೆಯ (Bigg Boss House) ಅಸಲಿ ಆಟ‌ ಈಗ ಶುರುವಾಗಿದೆ. ಇಶಾನಿಗಾಗಿ (Eshani) ಮೈಕಲ್ (Michael) ಡಬಲ್ ಗೇಮ್ ಮಾಡಲು ಆಡಲು ಶುರು ಮಾಡಿದ್ದಾರೆ. ಇಶಾನಿ ತಂಡದ ಗೆಲುವಿಗಾಗಿ ತನ್ನ ತಂಡ ‘ಗಂಧದ ಗುಡಿ’ಗೆ ದ್ರೋಹ ಬಗೆಯುತ್ತಿದ್ದಾರೆ.

    ಟಾಸ್ಕ್ ವಿಚಾರದಲ್ಲಿ ಮೈಕಲ್ ಸ್ಟ್ರಾಂಗ್ ಇರುವಾಗಲೂ ಡಬಲ್ ಗೇಮ್ ಶುರು ಮಾಡಿದ್ದಾರೆ. ಅದು ಗಂಧದ ಗುಡಿ ತಂಡದಲ್ಲಿದ್ದುಕೊಂಡು ವಜ್ರಕಾಯ ತಂಡಕ್ಕೆ‌ ಬೆಂಬಲ ನೀಡಿದ್ದಾರೆ. ಗೆಲುವು ಸಾಧಿಸುವುದು ಹೇಗೆ ಎಂದು ಸ್ಟ್ಯಾಟರ್ ಜಿ ಹೇಳಿಕೊಟ್ಟಿದ್ದಾರೆ. ಇದನ್ನೂ ಓದಿ:ಮಗಳ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ: ನಟಿ ಸನ್ನಿ ಲಿಯೋನ್

    ಮೈಕಲ್ ಸದ್ಯಕ್ಕೆ ‘ಗಂಧದ ಗುಡಿ’ ತಂಡದಲ್ಲಿದ್ದಾರೆ. ಆದರೆ, ಆಡುತ್ತಿರುವುದು ಮಾತ್ರ ವಜ್ರಕಾಯದ ಪರ. ಅದರಲ್ಲೂ ತಂಡದ ಸೀಕ್ರೆಟ್‌ಗಳನ್ನೇ ಅಲ್ಲಿ ಹೋಗಿ ಬಿಟ್ಟುಕೊಡುತ್ತಿದ್ದಾರೆ. ಬಲೂಮ್ ಒಡೆದು ನೀರು ಸಂಗ್ರಹಿಸುವ ಟಾಸ್ಕ್‌ನಲ್ಲಿ, ಮೈಕಲ್ ಉಸ್ತುವಾರಿ ವಹಿಸಿದ್ದಾರೆ. ಗಂಧದ ಗುಡಿ ಬಿಟ್ಟು ವಜ್ರಕಾಯದ ತಂಡದ ಬಳಿ ಬಂದು, ಈ ಟಾಸ್ಕ್ ಅನ್ನು ಈ ರೀತಿ ಆಡಿ. ಆಗ ಟಾಸ್ಕ್ ಗೆಲ್ಲುತ್ತೀರಿ ಎಂದು ಹೊಸ ಐಡಿಯಾ ಕೊಟ್ಟಿದ್ದಾರೆ.

    ‘ಗಂಧದ ಗುಡಿ’ ಟೀಮ್ ಜಾಸ್ತಿ ನೀರು ಹಾಕಿದ್ದರು. ಆದರೆ ಇಶಾನಿ ಅದನ್ನು ಒಪ್ಪುವುದಕ್ಕೆ ರೆಡಿ ಇಲ್ಲ. ತನಿಷಾ ಎರಡು ಬಲೂನ್ ಕೈಯಲ್ಲಿ ಒಡೆದರು. ಹೀಗಾಗಿ ನೀರು ತೆಗೆಯಬೇಕು ಎಂದು ವಾದ ಮಾಡಿದರು. ಒಂದು ಬಲೂನ್ ತೆಗೆದುಕೊಂಡು ಹೋಗಿ, ಒಡೆದು ನೀರು ಹಾಕಿ ಬಂದಿದ್ದಾರೆ. ಆದರೆ, ಬಿಗ್ ಬಾಸ್ ಅದನ್ನು ಪರಿಗಣನೆಗೆ ತೆಗದುಕೊಳ್ಳದೆ ಹೆಚ್ಚು ನೀರು ಇರುವುದನ್ನು ನೋಡಿ, ಗೆದ್ದವರನ್ನು ಘೋಷಿಸಿ ಎಂದಿದ್ದಾರೆ. ಆದರೆ, ಮೈಕಲ್ ಮಾತ್ರ, ‘ಗಂಧದ ಗುಡಿ’ ಗೆದ್ದಿದೆ ಎಂಬುದನ್ನು ಬೇಸರದಲ್ಲಿಯೇ ಹೇಳಿದ್ದಾರೆ.

    ಇಶಾನಿ ಎರಡು ಟೀಂ ಅನ್ನು ಟೈ ಮಾಡಿದ್ದಾರೆ. ಇದಕ್ಕೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಕ್ಲಾಸ್ ತೆಗೆದುಕೊಂಡಿದ್ದಾರೆ. ಆಗ ಮೈಕೆಲ್, ನಂಗೆ ಚೀಟ್ ಮಾಡುವುದಕ್ಕೆ ಬರಲ್ಲ. ನಿಯಮದಲ್ಲಿ ಎಲ್ಲಿ ಬರೆದಿದೆ. ಕೈಯಲ್ಲಿ ಒಡೆಯಬಾರದು ಅಂತ. ಒಂದು ಬಲೂನ್ ಹಾಕಬೇಕು ಅಂದ್ರೆ ಹಾಕು ಎಂದು ಮೈಕೆಲ್ ಹೇಳಿದರೆ, ಆಗ ಇಶಾನಿ ಇದು ಚೀಟ್ ಅಲ್ಲ. ಮ್ಯಾಜಿಕ್ ಎಂದಿದ್ದಾರೆ.

    ಈಗ ಗೊತ್ತಾಯ್ತು ನಿನ್ನ ನಿಜ ಮುಖ ಏನು ಅಂತ. ಈಗ ಬಲೂನ್ ಹಾಕುವುದಕ್ಕೆ ಏನು ಉಳಿಸಿದ್ದೀಯಾ. ಈಗಾಗಲೇ ಅನೌನ್ಸ್ ಮಾಡಿದ್ದೀಯಲ್ಲ ಎಂದು ರೇಗಾಡಿದ್ದಾರೆ. ಬಿಗ್ ಬಾಸ್ ಕೋಪ ಮಾಡಿಕೊಂಡಿದ್ದಕ್ಕೆ, ಉಸ್ತುವಾರಿಗಳು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಹೇಳಿದ್ದು, ಗಂಧದ ಗುಡಿ ತಂಡಕ್ಕೂ ಬೇಸರ ಆಗಿದೆ.