Tag: Escort Vehicle

  • ಸಾಧನಾ ಸಮಾವೇಶ ಮುಗಿಸಿ ವಾಪಸ್‌ ಬರುವಾಗ ಡಿಕೆಶಿ ಬೆಂಗಾವಲು ವಾಹನ ಪಲ್ಟಿ – ಪ್ರಾಣಾಪಾಯದಿಂದ ಪಾರು

    ಸಾಧನಾ ಸಮಾವೇಶ ಮುಗಿಸಿ ವಾಪಸ್‌ ಬರುವಾಗ ಡಿಕೆಶಿ ಬೆಂಗಾವಲು ವಾಹನ ಪಲ್ಟಿ – ಪ್ರಾಣಾಪಾಯದಿಂದ ಪಾರು

    ಮಂಡ್ಯ: ಮೈಸೂರಿನಲ್ಲಿ ನಡೆಯುತ್ತಿದ್ದ ಸಾಧನಾ ಸಮಾವೇಶ ಮುಗಿಸಿ ಬೆಂಗಳೂರಿಗೆ ವಾಪಸ್‌ ತೆರಳುತ್ತಿದ್ದ ವೇಳೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಅವರ ಬೆಂಗಾವಲು ವಾಹನ ಪಲ್ಟಿಯಾಗಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bengaluru Mysuru Expressway) ನಡೆದಿದೆ.

    ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ವ್ಯಾಪ್ತಿಯ ಗೌಡಹಳ್ಳಿ ಟಿಎಂ ಹೊಸೂರು ಬಳಿಯ ಎಕ್ಸ್‌ಪ್ರೆಸ್‌ವೇನಲ್ಲಿ ಘಟನೆ ನಡೆದಿದೆ. ಬೆಂಗಾವಲು ವಾಹನ ಪಲ್ಟಿಯಾಗಿದ್ದು, ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ನಮ್ಮ ಸರ್ಕಾರ ದೇವರ ಮನೆಯಿದ್ದಂತೆ, ಸಿದ್ದರಾಮಯ್ಯ ನಮ್ಮೆಲ್ಲರ ನಾಯಕ: ಡಿಕೆಶಿ

    ಮೈಸೂರಿನ ಸಾಧನಾ ಸಮಾವೇಶಕ್ಕೆ ತೆರಳಿದ್ದ ಡಿಕೆಶಿ ಬೆಂಗಳೂರಿಗೆ ವಾಪಸ್‌ ತೆರಳುತ್ತಿದ್ದರು. ಈ ವೇಳೆ ಡಿಕೆಶಿ ಬೆಂಗಾವಲು ವಾಹನ ಹೊಸೂರು ಬಳಿಯ ಎಕ್ಸ್‌ಪ್ರೆಸ್‌ವೇ ಬಳಿ ಡಿವೈಡರ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಎಸ್ಕಾರ್ಟ್‌ ವಾಹನದಲ್ಲಿದ್ದ ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೃಷ್ಟವಶಾತ್‌ ಹಿಂದೆಯೇ ಇದ್ದ ಡಿಕೆಶಿ ಕಾರಿಗೆ ಯಾವುದೇ ಅಪಾಯ ಆಗಿಲ್ಲ, ಘಟನೆ ಬಳಿಕ ಬಳಿಕ ಬೆಂಗಳೂರಿಗೆ ಸೇಫಾಗಿ ಪ್ರಯಾಣ ಮಾಡಿದ್ದಾರೆ. ಇದನ್ನೂ ಓದಿ: ಜು.23-26ರವರೆಗೆ ಪ್ರಧಾನಿ ಮೋದಿ ಬ್ರಿಟನ್, ಮಾಲ್ಡೀವ್ಸ್‌ಗೆ ಭೇಟಿ

  • ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿಯಾಗಿಲ್ಲ: ಸ್ಪಷ್ಟನೆ

    ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra Escort Vehicle) ಅವರ ಬೆಂಗಾವಲು ವಾಹನ ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

    ಸ್ಪಷ್ಟನೆ ಏನು..?: ಗೃಹ ಸಚಿವರ ಬೆಂಗಾವಲು ವಾಹನವು ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದು ನಿಧನಕ್ಕೆ ಕಾರಣವಾಗಿದೆ ಎಂಬ ವರದಿಗಳು ಸತ್ಯಕ್ಕೆ ದೂರವಾಗಿದ್ದಾಗಿದೆ. ಗೃಹ ಸಚಿವರು ಪ್ರಯಾಣಿಸುತ್ತಿದ್ದ ಹಾಗೂ ಅವರ ಬೆಂಗಾವಲು ವಾಹನಗಳು ಯಾವುದೇ ಅಪಘಾತಕ್ಕೆ ಕಾರಣವಾಗಿರುವುದಿಲ್ಲ.

    ಗೃಹ ಸಚಿವರ ಪ್ರವಾಸದ ವೇಳೆಯಲ್ಲಿ ಹಾಸನ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾಗ ಜಿಲ್ಲಾ ಪೊಲೀಸ್ ವಾಹನವೊಂದು ಬೆಂಗಾವಲು ವಾಹನದ ಬಹಳ ಹಿಂದಕ್ಕೆ ಬರುವಾಗ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಇದೊಂದು ಸಚಿವರ ಗಮನಕ್ಕೆ ಬಾರದೆ ಹೋದ ದುರದೃಷ್ಟಕರ ಘಟನೆಯಾಗಿದೆ. ಡಿಕ್ಕಿ ಹೊಡೆದು ಅವಘಡ ನಡೆದರೂ ಸಚಿವರು ಲೆಕ್ಕಿಸದೆ ಹೋದರು ಎಂಬ ವರದಿಗಳು ಸತ್ಯಕ್ಕೆ ದೂರವಾದುದಾಗಿದೆ ಎಂದು ಆರಗ ಜ್ಞಾನೇಂದ್ರ ಅವರ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.

  • ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಗೃಹ ಸಚಿವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಸವಾರ ಸಾವು- ಆರಗ ವಿರುದ್ಧ ಜನಾಕ್ರೋಶ

    ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರ ಎಸ್ಕಾರ್ಟ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಸವಾರನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹಾಸನದಲ್ಲಿ ನಡೆದಿದೆ.

    ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತ ದುರ್ದೈವಿ. ಪೆಟ್ರೋಲ್ ಬಂಕ್‍ನಿಂದ ಬರುತ್ತಿದ್ದ ಎಸ್ಕಾರ್ಟ್ ವಾಹನ (Home Ministers Escort Vehicle Accident) ಕ್ಕೆ ಬೈಕ್ ಅಡ್ಡ ಬಂದ ಪರಿಣಾಮ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೊಮ್ಮಗನ ಮೃತದೇಹ ಕಂಡು ತಾತ ಹೃದಯಾಘಾತದಿಂದ ಸಾವು

    ಆರಗ ಜ್ಞಾನೇಂದ್ರ ಅವರು ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಗೃಹ ಸಚಿವರಿಗೆ ಡಿಆರ್ ಇನ್ಸ್ ಪೆಕ್ಟರ್ ರಾಮು ಎಸ್ಕಾರ್ಟ್ ಮಾಡುತ್ತಿದ್ದರು. ಅಪಘಾತದ ವಿಷಯ ತಿಳಿದ ಗೃಹ ಸಚಿವ ಆರಗ ಜ್ಞಾನೇಂದ್ರ ವಾಹನ ನಿಲ್ಲಿಸದೆ ತೆರಳಿದ್ದು ಸ್ಥಳೀಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಆಗಮಿಸಿದ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಮೃತದೇಹವನ್ನ ಸ್ಥಳೀಯ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.

  • ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಪಲ್ಟಿ – ಪೊಲೀಸರಿಗೆ ಗಂಭೀರ ಗಾಯ

    ಕೇಂದ್ರ ಸಚಿವ ಅಶ್ವಿನಿ ಚೌಬೆ ಬೆಂಗಾವಲು ವಾಹನ ಪಲ್ಟಿ – ಪೊಲೀಸರಿಗೆ ಗಂಭೀರ ಗಾಯ

    ಪಾಟ್ನಾ: ಕೇಂದ್ರ ರಾಜ್ಯ ಸಚಿವ ಅಶ್ವಿನಿ ಚೌಬೆ (Ashwini Choubey) ಅವರ ಬೆಂಗಾವಲು ವಾಹನವು (Escort Vehicle) ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದ್ದು (Accident), ಹಲವಾರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕೇಂದ್ರ ಸಚಿವರು ಬಕ್ಸರ್ ನಿಂದ ಪಾಟ್ನಾಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಪಲ್ಟಿಯಾದ (Overturn) ಬೆಂಗಾವಲು ವಾಹನವನ್ನು ಸಚಿವರು ಪರಿಶೀಲಿಸುತ್ತಿರುವ ವೀಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಈ ಕುರಿತು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಅವರು, ಬಕ್ಸರ್‌ನಿಂದ ಪಾಟ್ನಾಗೆ ತೆರಳುತ್ತಿದ್ದಾಗ ಕೊರಂಸಾರೈ ಪೊಲೀಸ್ ಠಾಣೆಯ ಕಾರು ಕಾರ್ಕೇಡ್‌ನಲ್ಲಿನ ಮಥಿಲ-ನಾರಾಯಣಪುರ ರಸ್ತೆಯ ಸೇತುವೆಯ ಕಾಲುವೆಯಲ್ಲಿ ಬಿದ್ದು, ಅಪಘಾತಕ್ಕೀಡಾಗಿದೆ. ಸದ್ಯ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೆಹಲಿ ವ್ಯಕ್ತಿಯ ದೇಹ 8 ಪೀಸ್ ಮಾಡಿ ವೀಡಿಯೋ ರೆಕಾರ್ಡ್ – ಪಾಕಿಸ್ತಾನಕ್ಕೆ ಶೇರ್

    ವರದಿಗಳ ಪ್ರಕಾರ, ಪೊಲೀಸ್ ಸಿಬ್ಬಂದಿ ಮತ್ತು ಚಾಲಕನಿಗೆ ಗಾಯಗಳಾಗಿದ್ದು, ಅವರನ್ನು ದುಮ್ರಾವ್ ಸದರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯಗಳಾಗಿರುವುದರಿಂದ ಅವರನ್ನು ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ನಿನ್ನ ಬ್ಯಾನರ್ ಇಲ್ಯಾಕೆ..?- ವಿಜಯನಗರ ವಿಧಾನಸಭೆ ಕ್ಷೇತ್ರದ ಕೈ ಆಕಾಂಕ್ಷಿಗಳ ಗಲಾಟೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿ.ಸಿ.ಪಾಟೀಲ್ ಬೆಂಗಾವಲು ವಾಹನ ಅಪಘಾತ- ಪ್ರಾಣಾಪಾಯವಿಲ್ಲ

    ಸಿ.ಸಿ.ಪಾಟೀಲ್ ಬೆಂಗಾವಲು ವಾಹನ ಅಪಘಾತ- ಪ್ರಾಣಾಪಾಯವಿಲ್ಲ

    ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ.ಪಾಟೀಲ್ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಸಮೀಪದ ಆತಿಥ್ಯ ಹೋಟೆಲ್ ಬಳಿ ನಡೆದಿದ್ದು, ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಬೆಳಗಾವಿಯಿಂದ ಬೆಂಗಳೂರಿಗೆ ಹೋಗುತ್ತಿರುವಾಗ ಮಾರ್ಗಮಧ್ಯೆ ಹಿರಿಯೂರು ತಾಲೂಕಿನ ಗುಯಿಲಾಳು ಟೋಲ್ ಸಮೀಪ ಸಚಿವರ ಬೆಂಗಾವಲು ವಾಹನಕ್ಕೆ ಲಾರಿ ಅಡ್ಡ ಬಂದಿದ್ದು, ಬೆಂಗಾವಲು ವಾಹನದ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ವಾಹನವನ್ನು ನಿಯಂತ್ರಿಸಿದ್ದರಿಂದ ಬಾನೆಟ್ ಮಾತ್ರ ಜಖಂ ಆಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಲಾರಿ ಚಾಲಕನ ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಪಘಾತವಾದ ಹಿನ್ನಲೆಯಲ್ಲಿ ಇನ್ನೊಂದು ಬೆಂಗಾವಲು ವಾಹನದ ವ್ಯವಸ್ಥೆ ಮಾಡಿ, ಸಚಿವರನ್ನು ಕಳುಹಿಸಿಕೊಡಲಾಯಿತು. ಈ ಕುರಿತು ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

  • ಸಿಎಂ ಬೆಂಗಾವಲು ವಾಹನ ಪಲ್ಟಿ- ಚಾಲಕನಿಗೆ ಗಾಯ

    ಸಿಎಂ ಬೆಂಗಾವಲು ವಾಹನ ಪಲ್ಟಿ- ಚಾಲಕನಿಗೆ ಗಾಯ

    ಚಿಕ್ಕಮಗಳೂರು: ಮಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಗೆ ಸಿಎಂಗೆ ಬೆಂಗಾವಲು ವಾಹನವಾಗಿ ಹೋಗಿದ್ದ ಚಿಕ್ಕಮಗಳೂರಿನ ಡಿ.ಆರ್.ಪೊಲೀಸ್ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವಂತಹ ಘಟನೆ ತಾಲೂಕಿನ ಜೇನುಗದ್ದೆ ಗ್ರಾಮದ ಬಳಿ ನಡೆದಿದೆ.

    ಬಿಜೆಪಿ ಕಾರ್ಯಕಾರಣಿ ಸಭೆಗೆ ಸಿಎಂ ಕೂಡ ಆಗಮಿಸಿದ್ದ ಹಿನ್ನೆಲೆ ಸಿಎಂ ಬಂದೋಬಸ್ತ್ ಗಾಗಿ ಚಿಕ್ಕಮಗಳೂರಿನಿಂದ ಪೊಲೀಸರು ಹಾಗೂ ಡಿ.ಆರ್.ವಾಹನ ಹೋಗಿತ್ತು. ಸಿಎಂ ನಿನ್ನೆಯೇ ಬೆಂಗಳೂರಿಗೆ ಹಿಂದಿರುಗಿದ್ದರು. ಆದರೆ ಡಿ.ಆರ್.ಕಾರ್ಯಕ್ರಮ ಮುಗಿಸಿ ವಾಹನ ಇಂದು ಚಿಕ್ಕಮಗಳೂರಿಗೆ ಹಿಂದಿರುಗುವಾಗ ಈ ಅವಘಡ ಸಂಭವಿಸಿದೆ.

    ಮಂಗಳೂರಿನಿಂದ ವಾಪಸ್ಸಾಗುವ ವೇಳೆ ಪೊಲೀಸ್ ಜೀಪ್ ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಗ್ರಾಮದ ಬಳಿ ಬರುತ್ತಿದ್ದಂತೆ ಜೀಪಿನ ಬ್ರೇಕ್ ಜಾಮ್ ಆದ ಪರಿಣಾಮ ಜೀಪ್ ಪಲ್ಟಿಯಾಗಿದೆ. ಜೀಪಿನಲ್ಲಿ ಚಾಲಕ ನನ್ನ ಹೊರತುಪಡಿಸಿ ಬೇರೆ ಯಾವುದೇ ಸಿಬ್ಬಂದಿ ಇರಲಿಲ್ಲ. ಜೀಪ್ ಪಲ್ಟಿಯಾದ ಹಿನ್ನೆಲೆ ಚಾಲಕ ಶರತ್‍ಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳು ಚಾಲಕ ಶರತ್ ನನ್ನ ಬಾಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಯಶವಂತಪುರ ಫ್ಲೈ ಓವರ್ ಮೇಲೆ ಸಿಎಂ ಕಾರ್ಯದರ್ಶಿ ಕಾರು ಅಪಘಾತ

    ಬೆಂಗಳೂರು: ಸಿಎಂ ಬೆಂಗಾವಲು ವಾಹನವನ್ನು ಫಾಲೋ ಮಾಡುತ್ತಿದ್ದ ಕಾರೊಂದು ಅತಿವೇಗವಾಗಿ ಬಂದು ಮತ್ತೊಂದು ಬದಿಯ ರಸ್ತೆಗೆ ನುಗ್ಗಿದ ಘಟನೆ ಯಶವಂತಪುರ ಫ್ಲೈ ಓವರ್ ಮೇಲೆ ನಡೆದಿದೆ.

    ಕಾರ್ಯಕ್ರಮದ ನಿಮಿತ್ತ ಸಿಎಂ ಯಡಿಯೂರಪ್ಪ ಬೆಂಗಳೂರಿನಿಂದ ತುಮಕೂರಿಗೆ ಹೊರಟ್ಟಿದ್ದರು. ಆ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಸೆಲ್ವಕುಮಾರ್ ಅವರು ಕೂಡ ಸಿಎಂ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಆದರೆ ಅವರ ಕಾರು ಬೆಂಗಾವಲು ವಾಹನವನ್ನು ಫಾಲೋ ಮಾಡುತಿತ್ತು.

    ಸಿಎಂ ಬೆಂಗವಾಲು ವಾಹನ ಅತಿವೇಗವಾಗಿ ಹೋಗುವಾಗ ಕಾರ್ಯದರ್ಶಿ ಅವರ ಕಾರು ಚಾಲಕ ಅದೇ ವೇಗವನ್ನು ಪಾಲನೆ ಮಾಡಲು ಹೋಗಿದ್ದಾನೆ. ಆದರೆ ಫ್ಲೈ ಓವರ್ ಮೇಲೆ ಗಾಡಿ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೆ ಒಳಗಾಗಿದೆ. ಚಾಲಕ ವಿನಯ್‍ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ. ಅಪಘಾತದ ರಭಸಕ್ಕೆ ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ವಾಹನಗಳಾದ ಕ್ಯಾಂಟರ್ ಮತ್ತು ಆಟೋ ಜಖಂ ಆಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.