Tag: Escort

  • ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

    ಮಾನವೀಯತೆ ಮೆರೆದ ಗೃಹ ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ತೀರ್ಥಹಳ್ಳಿ (Thirthahalli) ತಾಲೂಕಿನ ಬೇಗುವಳ್ಳಿ ಸಮೀಪ ಬೈಕ್ ಅಪಘಾತದಲ್ಲಿ (Bike Accident) ಗಾಯಗೊಂಡಿದ್ದ ಯುವಕನನ್ನು ತಮ್ಮ ಬೆಂಗಾವಲು ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಕೊಡುವ ಮೂಲಕ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮಾನವೀಯತೆ ಮೆರೆದಿದ್ದಾರೆ.

    ರಸ್ತೆಯಲ್ಲಿ ಹಸು ಅಡ್ಡ ಬಂದ ಪರಿಣಾಮ, ಹಸುವಿಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸವಾರ ಬಿದ್ದು ಗಂಭೀರ ಗಾಯಗೊಂಡಿದ್ದಾನೆ. ಗಾಯಗೊಂಡಿದ್ದ ಯುವಕನನ್ನು ಸಿಂಗನಬಿದರೆ ಹಳಗ ಗ್ರಾಮದ ನಿವಾಸಿ ಎನ್ನಲಾಗಿದೆ. ಇದನ್ನೂ ಓದಿ: ಬೇನಾಮಿ ಆಸ್ತಿ ಗಳಿಕೆ- ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ಮುತಾಲಿಕ್ ದೂರು

    ರಸ್ತೆ ಬದಿಯಲ್ಲಿ ಗಾಯಾಳು ಯುವಕ ನರಳುತ್ತಿದ್ದ. ಈ ವೇಳೆ ಅದೇ ಮಾರ್ಗದಲ್ಲಿ ಬೆಂಗಳೂರಿಗೆ ಹೊರಟಿದ್ದ ಸಚಿವ, ಗಾಯಾಳು ಯುವಕನನ್ನು ಗಮನಿಸಿ ತಮ್ಮ ವಾಹನ ನಿಲ್ಲಿಸಿದ್ದಾರೆ. ಗಾಯಾಳು ಯುವಕನನ್ನು ಉಪಚರಿಸಿ, ಧೈರ್ಯ ಹೇಳಿದ್ದಾರೆ. ಅಲ್ಲದೇ ತಮ್ಮ ಬೆಂಗಾವಲು ವಾಹನದಲ್ಲಿ  (escort vehicle) ಗಾಯಾಳು ಯುವಕನನ್ನು ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಿಮ್ಮ ಕಾಲಿಗೆ ಬೀಳ್ತಿನಿ, ಟಿಕೆಟ್ ಕೊಡಿ- ಸಮಾರಂಭದಲ್ಲಿ ಮಂಡಿಯೂರಿ ಮಾಜಿ ಶಾಸಕನ ಅಳಲು

  • ಹತ್ಯೆ ಸಂಚು ಆರೋಪ ಬೆನ್ನಲ್ಲೇ ಖಾಕಿ ಅಲರ್ಟ್- ಸಿದ್ದರಾಮಯ್ಯಗೆ SPಯಿಂದ ಫುಲ್ ಎಸ್ಕಾರ್ಟ್

    ಹತ್ಯೆ ಸಂಚು ಆರೋಪ ಬೆನ್ನಲ್ಲೇ ಖಾಕಿ ಅಲರ್ಟ್- ಸಿದ್ದರಾಮಯ್ಯಗೆ SPಯಿಂದ ಫುಲ್ ಎಸ್ಕಾರ್ಟ್

    ಬೆಂಗಳೂರು/ಹಾಸನ: ಸಾವರ್ಕರ್ ವಿರೋಧಿ ಹೇಳಿಕೆ ನೀಡುತ್ತಿರುವ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯಗೆ ಜೀವ ಬೆದರಿಕೆ ಇದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫುಲ್ ಅಲರ್ಟ್ ಆಗಿದೆ.

    ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ ನಂತರವೂ ಮೂಡಿಗೆರೆಯಲ್ಲಿ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕೋ ಪ್ರಯತ್ನ ನಡೆದಿತ್ತು. ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ, ಹಲವರನ್ನು ವಶಕ್ಕೆ ಪಡೆದಿದ್ರು. ಮೂಡಿಗೆರೆಯಿಂದ ಹಾಸನ ಮಾರ್ಗವಾಗಿ ಬೆಂಗಳೂರು ಕಡೆ ಹೊರಟ ಸಿದ್ದರಾಮಯ್ಯಗೆ ಖುದ್ದು ಹಾಸನ ಎಸ್‍ಪಿ ಎಸ್ಕಾರ್ಟ್ ನೀಡಿದ್ರು.

    ಹಾಸನ ಗಡಿ ದಾಟುವವರೆಗೂ ಸಿದ್ದರಾಮಯ್ಯ ವಾಹನದ ಹಿಂದೆ ಮುಂದೆಯೇ ಇದ್ರು. ಮಾರ್ಗದುದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದು ಕಂಡುಬಂತು. ಹಾಸನದ ಹೊರವಲಯದಲ್ಲಿ ಊಟಕ್ಕೆ ತೆರಳಿದ ಸಂದರ್ಭದಲ್ಲೂ ಅಭಿಮಾನಿಗಳು ಸಿದ್ದರಾಮಯ್ಯಗೆ ಜೈ ಅಂದ್ರು. ಇದನ್ನೂ ಓದಿ: ಧರ್ಮ ಒಡೆಯುವುದು ನನ್ನ ಉದ್ದೇಶವಲ್ಲ, ಕೆಲವರು ನನ್ನನ್ನ ದಾರಿ ತಪ್ಪಿಸಿದ್ರು: ಸಿದ್ದರಾಮಯ್ಯ

    ಈ ಮಧ್ಯೆ ಹಾಸನದಲ್ಲಿ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ, ತಮ್ಮ ವಿರುದ್ಧದ ಪ್ರತಿಭಟನೆಗಳೆಲ್ಲಾ ಸರ್ಕಾರಿ ಪ್ರಾಯೋಜಿತ ಎಂಬ ಮಾತನ್ನು ಮೂರನೇ ಬಾರಿಗೆ ಪುನರುಚ್ಚರಿಸಿದ್ರು. ದಾವಣಗೆರೆ ಸಮಾವೇಶದ ಬಳಿಕ ಬಿಜೆಪಿಗೆ ಸೋಲಿನ ಭಯ ಆವರಿಸಿದೆ. ಅದಕ್ಕಾಗಿಯೇ ಅವರು ಹತಾಶರಾಗಿ ಹೀಗೆಲ್ಲಾ ಮಾಡಿಸ್ತಾ ಇದ್ದಾರೆ ಎಂದು ದೂರಿದ್ರು. ಕಪ್ಪು ಬಾವುಟ ತೋಸೋದು. ಧೀರರ ವೀರರ ಲಕ್ಷಣನಾ ಎಂದು ಪ್ರಶ್ನಿಸಿದ್ರು.

    ಕೊಡಗು, ಚಿಕ್ಕಮಗಳೂರು ಮಳೆ ಹಾನಿ ಸಂತ್ರಸ್ತರಿಗೆ ಸರ್ಕಾರದಿಂದ ಚಿಕ್ಕಾಸು ಕೂಡ ನೆರವು ದೊರೆತಿಲ್ಲ. ಮಂತ್ರಿಗಳು ಪರಿಹಾರ ಕೊಟ್ಟಿದ್ದೀವಿ ಅಂತಾರೆ. ಆದ್ರೆ ಯಾರಿಗೂ ತಲುಪಿಲ್ಲ. ರೈತರ ಪಾಡೇನು ಆಗಬೇಕು ಎಂದು ಪ್ರಶ್ನೆ ಮಾಡಿದ್ರು. ಅಸಲಿಗೆ ರಾಜ್ಯದಲ್ಲಿ ಸರ್ಕಾರ ಇಲ್ಲ.. ಗುಪ್ತ ಚರ ಇಲಾಖೆ ಇಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು, ನನ್ನನ್ನ ಬಿಡ್ತಾರಾ? : ಸಿದ್ದರಾಮಯ್ಯ

    Live Tv
    [brid partner=56869869 player=32851 video=960834 autoplay=true]

  • ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಹೇಮಲತಾಗೆ ಪೊಲೀಸ್ ಎಸ್ಕಾರ್ಟ್

    ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಹೇಮಲತಾಗೆ ಪೊಲೀಸ್ ಎಸ್ಕಾರ್ಟ್

    ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಬಿಜೆಪಿ ಅಭ್ಯರ್ಥಿ ಹೇಮಲತಾಗೆ ವಿಧಾನಸೌಧದವರೆಗೂ ಇನ್ನೋವಾ ಕಾರಿನಲ್ಲಿ ಬರಲು ಎಸ್ಕಾರ್ಟ್ ವಾಹನ ಸವಲತ್ತು ಕಲ್ಪಿಸಿದ್ದು, ಇದೀಗ ಭಾರೀ ಟೀಕೆಗೆ ಕಾರಣವಾಗಿದೆ.

    ಬಿಜೆಪಿ ನಾಯಕರೇ ಜಕ್ಕೂರು ಏರ್‌ಫೋರ್ಸ್‌ನಿಂದ ಎಸ್ಕಾರ್ಟ್ ಕೊಟ್ಟು ಇನ್ನೋವಾ ಕಾರಿನಲ್ಲಿ ವಿಧಾನಸೌಧಕ್ಕೆ ಕರೆಸಿದ್ದಾರೆ. ಸೈರನ್ ಹೊಡೆದುಕೊಂಡು ವೇಗವಾಗಿ ವಿಧಾನಸೌಧಕ್ಕೆ ಬಂದು ಹೇಮಲತಾ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಎಸ್ಕಾರ್ಟ್ ಸೌಲಭ್ಯ ಕಲ್ಪಿಸಿದ ಬಿಜೆಪಿ ನಾಯಕರು ನಾಮಪತ್ರ ಸಲ್ಲಿಕೆಗೆ ವಿಳಂಬವಾಗುತ್ತಿತ್ತು. ಹಾಗಾಗಿ ಎಸ್ಕಾರ್ಟ್ ನೀಡಲಾಯಿತು ಎಂದು ಕಾರಣ ನೀಡಿದ್ದಾರೆ. ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ- ಕೊಪ್ಪಳದ ಬಿಜೆಪಿ ನಾಯಕಿಗೆ ಬಂಪರ್‌

    ಈ ಹಿಂದೆ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪ್ರಮಾಣ ವಚನಕ್ಕೆ ಸಿಗ್ನಲ್ ಫ್ರೀ ಸೌಕರ್ಯ ಕಲ್ಪಿಸಿಕೊಟ್ಟಿದ್ದ ಬಿಜೆಪಿ, ಇದೀಗ ಎಂಎಲ್‌ಸಿ ಚುನಾವಣೆ ನಾಮಪತ್ರ ಸಲ್ಲಿಸೋದಕ್ಕೇ ಹೇಮಲತಾಗೆ ಎಸ್ಕಾರ್ಟ್ ವ್ಯವಸ್ಥೆ ಮಾಡಿಕೊಟ್ಟಿದೆ ಎಷ್ಟು ಸರಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಬಿಜೆಪಿ ಪರಿಷತ್‌ ಪಟ್ಟಿ ಪ್ರಕಟ – ಲಕ್ಷ್ಮಣ ಸವದಿಗೆ ಟಿಕೆಟ್

    ಎಸ್ಕಾರ್ಟ್ ಒದಗಿಸಲು ಗೃಹ ಸಚಿವರೇ ಪೊಲೀಸರಿಗೆ ಸೂಚಿಸಿದ್ರಾ? ಯಾರ ಆದೇಶ ಪಾಲನೆ ಮಾಡಿದ್ರು ಪೊಲೀಸರು? ಶಿಸ್ತಿನ ಪಕ್ಷ ಬಿಜೆಪಿಯದ್ದು ಅಧಿಕಾರ ದುರ್ಬಳಕೆ ಅಲ್ಲವಾ ಎಂಬ ಪ್ರಶ್ನೆಗಳನ್ನು ಜನರು ಪ್ರಶ್ನಿಸುತ್ತಿದ್ದಾರೆ.

  • ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

    ಶಾಸಕರ ಬೆಂಗಾವಲು ವಾಹನ ಡಿಕ್ಕಿ – 3 ವರ್ಷದ ಕಂದಮ್ಮ ಸ್ಥಳದಲ್ಲೇ ಸಾವು

    ಹೈದರಾಬಾದ್: ಮುಲುಗು ಕ್ಷೇತ್ರದ ಎಂಎಲ್‍ಎ ದನ್ಸಾರಿ ಅನುಸುಯಾ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ 3 ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.

    ವಾರಂಗಲ್ ಜಿಲ್ಲೆಯ ಜೆಡಿವಾಲು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು. ತಂದೆ ಅರುಣ್ ಮತ್ತು ತಾಯಿ ವಿಜಯ ಜೊತೆ ಬೈಕಿನಲ್ಲಿ ಅಂಗನವಾಡಿಗೆ ಹೋಗುತ್ತಿದ್ದ ಶ್ರಾವಂತಿ (3) ಮೃತಪಟ್ಟ ಕಂದಮ್ಮ. ಅಪಘಾತದಲ್ಲಿ ಬೈಕ್ ಸಂಪೂರ್ಣ ನಜ್ಜುಗಿದ್ದು ಮಗುವಿನ ಪೋಷಕರು ಗಾಯಗೊಂಡಿದ್ದಾರೆ.

    ಮುಲುಗು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗತಿಕೊಯಗುಡೆನ್ ಊರಿಗೆ ಸೇರಿದ ಈ ದಂಪತಿ ತಮ್ಮ ಮಗಳು ಶ್ರಾವಂತಿಯನ್ನು ಅಂಗನವಾಡಿಗೆ ಬಿಟ್ಟು ಬರಲು ಬೈಕಿನಲ್ಲಿ ಬರುತ್ತಿದ್ದರು. ಇದೇ ವೇಳೆಗೆ ಅ ದಾರಿಯಲ್ಲಿ ಎಂಎಲ್‍ಎ ದನ್ಸಾರಿ ಅನುಸುಯಾ ಅವರು ಹೋಗುತ್ತಿದ್ದರು. ಎದುರಿಗೆ ಬಂದ ಬೈಕಿಗೆ ಎಂಎಲ್‍ಎ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಶ್ರಾವಂತಿ ತಲೆಗೆ ಬಲವಾದ ಪೆಟ್ಟಾದ ಕಾರಣ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

    ಈ ಘಟನೆಯ ಬಗ್ಗೆ ಸಂತಾಪ ಸೂಚಿಸಿರುವ ದನ್ಸಾರಿ ಅನುಸುಯಾ ಅವರು, ಕುಟುಂಬಕ್ಕೆ ಅರ್ಥಿಕವಾಗಿ ಇಲ್ಲಾ ರೀತಿಯಲ್ಲೂ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನನಗೆ ಈ ಅಪಘಾತದಲ್ಲಿ 3 ವರ್ಷದ ಮಗು ಸಾವನ್ನಪ್ಪಿರುವುದು ತುಂಬ ನೋವಾಗಿದೆ. ಈ ಮಗುವಿನ ಕುಟುಂಬ ಕಳೆದ ಚುನಾವಣೆಯಲ್ಲಿ ನನ್ನ ಗೆಲುವಿಗೆ ಶ್ರಮಿಸಿತ್ತು. ನಮ್ಮ ಕಡೆಯಿಂದ ತಪ್ಪಾಗಿದೆ ನಾನು ಈ ದುಃಖದ ಸಮಯದಲ್ಲಿ ಈ ಕುಟುಂಬದ ಜೊತೆಗೆ ಇರುತ್ತೇನೆ ಎಂದು ಹೇಳಿದ್ದಾರೆ.

  • ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೆಂಗಾವಲು ವಾಹನ ಪಲ್ಟಿ

    ಚಾಲಕನ ನಿಯಂತ್ರಣ ತಪ್ಪಿ ಸಿಎಂ ಬೆಂಗಾವಲು ವಾಹನ ಪಲ್ಟಿ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬೆಂಗಾವಲು ವಾಹನ ಪಲ್ಟಿಯಾಗಿದೆ.

    ಮೂಡಿಗೆರೆ ತಾಲೂಕಿನ ಶಂಕರ್ ಫಾಲ್ಸ್ ಬಳಿ ಈ ಘಟನೆ ನಡೆದಿದ್ದು. ಇಬ್ಬರು ಪೊಲೀಸರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕೊಪ್ಪ ತಾಲೂಕಿನ ಕುಡ್ನಳ್ಳಿಯಲ್ಲಿ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದ ಸಿ.ಎಂ ಕುಮಾರಸ್ವಾಮಿ ಅವರ ಕುಟುಂಬದವರು ಪೂಜೆ ಮುಗಿಸಿ ಹಾಸನಕ್ಕೆ ವಾಪಸ್ ಹೋಗುವ ವೇಳೆ ಈ ಅಪಘಾತವಾಗಿದೆ.