Tag: ESA

  • 2.9 ಕೋಟಿ ಬೆಳಕಿನ ವರ್ಷಗಳ ಹಿಂದಿನ ನಕ್ಷತ್ರಪುಂಜ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    2.9 ಕೋಟಿ ಬೆಳಕಿನ ವರ್ಷಗಳ ಹಿಂದಿನ ನಕ್ಷತ್ರಪುಂಜ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ವಾಷಿಂಗ್ಟನ್: 2.9 ಕೋಟಿ ಬೆಳಕಿನ ವರ್ಷ ಹಿಂದೆ ಜಗತ್ತು ಹೇಗೆ ಕಂಗೊಳಿಸುತ್ತಿತ್ತು? ನಕ್ಷತ್ರ ಪುಂಜಗಳು (SpiralGalaxy) ಯಾವ ಬಣ್ಣದಲ್ಲಿ ಕಂಗೊಳಿಸುತ್ತಿದ್ದವು ಎಂಬ ಪ್ರಶ್ನೆಗೆ ನಾಸಾ (NASA) ಸ್ಪಷ್ಟ ಉತ್ತರ ಕೊಟ್ಟಿದೆ.

    ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವೈಟ್‌ಹೌಸ್‌ನಲ್ಲಿ, 13 ದಶಕೋಟಿ ವರ್ಷಗಳಷ್ಟು ಹಿಂದಿನ ಬಾಹ್ಯಾಕಾಶ ಲೋಕವನ್ನು ತೆರೆದಿಟ್ಟಿದ್ದ ಜೇಮ್ಸ್‌ವೆಬ್‌ ಟೆಲಿಸ್ಕೋಪ್ (James Webb Telescope) ಇದೀಗ ಮತ್ತೊಂದು ನಕ್ಷತ್ರಪುಂಜವನ್ನು ತೆರೆದಿಡುವ ಮೂಲಕ ವಿಸ್ಮಯ ಉಂಟುಮಾಡಿದೆ. ಈ ನಕ್ಷತ್ರಪುಂಜ ಕ್ಷೀರ ಪತಕ್ಕಿಂತಲೂ ಸ್ವಲ್ಪ ಡೊಡ್ಡದಾಗಿದ್ದು, ಸುರುಳಿಯಾಕಾರದಲ್ಲಿದೆ. ಇದನ್ನೂ ಓದಿ: ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ಈ ಹಿಂದೆ ಹಬಲ್ ದೂರದರ್ಶಕವು ಐಸಿ-5332 ಪ್ರಭಾವಶಾಲಿ ಚಿತ್ರವನ್ನು ಸೆರೆಹಿಡಿದಿತ್ತು. ಆದರೆ ಸೆರೆ ಹಿಡಿಯಲಾದ ಮಿರರ್ ಹೆಚ್ಚು ತಂಪಾಗಿರದ ಕಾರಣ ವಿದ್ಯುತ್ಕಾಂತೀಯ ವರ್ಣಪಲ್ಲಟದಿಂದಾಗಿ ಅತಿಗೆಂಪು ವರ್ಣ ಪ್ರದೇಶಗಳನ್ನು ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನಾಸಾ (NASA) ವಿಜ್ಞಾನಿಗಳು ಎಂಐಅರ್‌ಐ (MIRI) ವಿಧಾನ ಬಳಿಸಿಕೊಂಡು ನಕ್ಷತ್ರ ಪುಂಜಗಳನ್ನು ಸೆರೆಹಿಡಿದೆ. ಎಂಐಆರ್‌ಐ (ಮಿಡ್-ಇನ್‌ಫ್ರಾರೆಡ್ ಇನ್‌ಸ್ಟ್ರುಮೆಂಟ್) ಇತರ ವೀಕ್ಷಣಾಲಯಗಳಿಗಿಂತ 33 ಡಿಗ್ರಿ ಸೆಲ್ಸಿಯಸ್ ಕಡಿಮೆ, ಶೂನ್ಯ ತಾಪಮಾನಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಬೆಚ್ಚಗಿರುವ ಹಾಗೂ 266 ಡಿಗ್ರಿ ಸೆಲ್ಸಿಯಸ್ ನಷ್ಟು ಅತ್ಯಂತ ಶೀತ ತಾಪಮಾನದಲ್ಲಿ ಕಾರ್ಯ ನಿವರ್ಹಿಸುತ್ತದೆ.

    ಪ್ರಸ್ತುತ ಸೆರೆಹಿಡಿಯಲಾದ ಐಸಿ-5332 ಚಿತ್ರವು 66 ಸಾವಿರ ಬೆಳಕಿನ ವರ್ಷಗಳ ವ್ಯಾಸ ಹೊಂದಿದೆ. ಈ ನಕ್ಷತ್ರಪುಂಜವು ಭೂಮಿಗೆ ಬಹುತೇಕ ಮುಖಾಮುಖಿಯಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ. ಇದನ್ನೂ ಓದಿ: ನಮೀಬಿಯಾದಿಂದ ಬಂದ ಚೀತಾ `ಆಶಾ’ ಗರ್ಭಿಣಿಯಾಗಿದ್ಯಾ – ಅಧಿಕಾರಿಗಳು ಹೇಳೋದೇನು?

    2021ರ ಡಿಸೆಂಬರ್‌ನಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಅಮೆರಿಕ ಅಂತರಿಕ್ಷಕ್ಕೆ ಕಳುಹಿಸಿತ್ತು. ವಿಶ್ವದ ಸೃಷ್ಟಿಗೆ ಕಾರಣವಾದ ಬಿಗ್‌ಬ್ಯಾಂಗ್ (ಮಹಾಸ್ಫೋಟ) ಸಂಭವಿಸಿದ 800 ವರ್ಷಗಳ ಬಳಿಕದ ಮಹತ್ವದ ಚಿತ್ರಣ ಸೆರೆಹಿಡಿಯಲಾಗಿತ್ತು. ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಇದೊಂದು ಐತಿಹಾಸಿಕ ದಿನ ಎಂದು ಬಣ್ಣಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಂಧನ ಸೋರಿಕೆ – ಆರ್ಟೆಮಿಸ್ ಮೂನ್ ಮಿಷನ್ ರಾಕೆಟ್ ಲಾಂಚಿಂಗ್ ಮತ್ತೆ ಸ್ಥಗಿತ

    ಇಂಧನ ಸೋರಿಕೆ – ಆರ್ಟೆಮಿಸ್ ಮೂನ್ ಮಿಷನ್ ರಾಕೆಟ್ ಲಾಂಚಿಂಗ್ ಮತ್ತೆ ಸ್ಥಗಿತ

    ವಾಷಿಂಗ್ಟನ್: ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯನ್ನು ಇಂಜಿನಿಯರ್‌ಗಳ ತಂಡವು ಸ್ಥಿತಿಗೊಳಿಸುವಲ್ಲಿ ವಿಫಲವಾಗಿದ್ದು ನಾಸಾ ಮತ್ತೆ ರಾಕೆಟ್ ಉಡಾವಣೆಯನ್ನು ಮುಂದೂಡಿದೆ.

    322 ಅಡಿ ಎತ್ತರದ ರಾಕೆಟ್ ಅನ್ನು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದ್ದು, 2ನೇ ಬಾರಿಗೆ ಮುಂದೂಡಲ್ಪಟ್ಟಿದೆ.

    ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆಗಸ್ಟ್ 29 ರಂದೇ ರಾಕೆಟ್ ಉಡಾವಣೆಯಾಗಬೇಕಿತ್ತು. ಆದರೆ ಆರ್‌ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡು, ಇಂಧನ ಸೋರಿಕೆಯಾಗಿದ್ದರಿಂದಾಗಿ ಸೆಪ್ಟಂಬರ್ 3ಕ್ಕೆ ಮುಂದೂಡಲಾಗಿತ್ತು. ಆದರೆ ರಾಕೆಟ್‌ಗೆ ಇಂಧನ ವರ್ಗಾಯಿಸುವ ಯಂತ್ರಾಂಶದಲ್ಲಿನ ಸೋರಿಕೆಗೆ ಸಂಬಂಧಿಸಿದ ಸಮಸ್ಯೆಯನ್ನು ಸರಿಪಡಿಸಲು ಇಂಜಿನಿಯರ್ ತಂಡವು ವಿಫಲವಾಗಿದ್ದರಿಂದಾಗಿ ಮತ್ತೆ ರಾಕೆಟ್ ಉಡಾವಣೆ ಮುಂದೂಡಲಾಗಿದೆ ಎಂದು ನಾಸಾ ಟ್ವೀಟ್ ಮೂಲಕ ತಿಳಿಸಿದೆ. ಅಲ್ಲದೇ ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುವುದಾಗಿ ಹೇಳಿದೆ.

    ನಾಸಾವು 2024ರಲ್ಲಿ 4 ಗಗನ ಯಾತ್ರಿಗಳನ್ನು ಚಂದ್ರನ ಸುತ್ತ ಕಳುಹಿಸಲು ಹಾಗೂ 2025ರ ಹೊತ್ತಿಗೆ ಚಂದ್ರಲೋಕದಲ್ಲಿ ಮಾನವರನ್ನು ಕಳುಹಿಸುವ ಉದ್ದೇಶ ಹೊಂದಿದೆ.

    ಲಾಂಚ್ ಕಂಟ್ರೋಲರ್‌ಗಳು ಇಂಜಿನ್‌ಗಳಿಗೆ ಕೆಲವು ಕ್ರಯೋಜನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನ ಶ್ರೇಣಿಗೆ ಪಡೆಯಲು ಇಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಸದ್ಯ ಈ ಹಂತದಲ್ಲಿ ಸಮಸ್ಯೆಗಳು ಎದುರಾಗಿದ್ದು, ಪರಿಹರಿಸುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಇಂಧನ ಸೋರಿಕೆ – ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ

    ಇಂಧನ ಸೋರಿಕೆ – ಆರ್ಟೆಮಿಸ್-1 ರಾಕೆಟ್ ಲಾಂಚಿಂಗ್ ಸ್ಥಗಿತ

    ವಾಷಿಂಗ್ಟನ್: ಆರ್ಟೆಮಿಸ್-1 ಮೂನ್ ಮಿಷನ್ ನಲ್ಲಿ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ನಾಸಾ ರಾಕೆಟ್ ಉಡಾವಣೆಯನ್ನು ಸ್ಥಗಿತಗೊಳಿಸಿದೆ.

    322 ಅಡಿ ಎತ್ತರದ ರಾಕೆಟ್ ಅನ್ನು ಇಂದು ನಾಸಾ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲು ಯೋಜಿಸಿತ್ತು. ಭಾರೀ ನಿರೀಕ್ಷೆಯೊಂದಿಗೆ ಉಡಾವಣೆಯಾಗಬೇಕಿದ್ದ ಆರ್ಟಿಮಿಸ್-1 ಮೂನ್ ಮಿಷನ್ ಸದ್ಯಕ್ಕೆ ಸ್ಥಗಿತಗೊಂಡಿದೆ. ಇದನ್ನೂ ಓದಿ: ಗಗನಕ್ಕೆ ಏರಿದ ತರಕಾರಿ ಬೆಲೆ- 1ಕೆ.ಜಿ ಟೊಮೆಟೊಗೆ 500ರೂ, ನಿಂಬೆಹಣ್ಣಿಗೆ ಕೆ.ಜಿಗೆ 400 ರೂ.

    ಇಂಜಿನ್ ಬ್ಲೀಡ್ ಸಮಸ್ಯೆಯಿಂದಾಗಿ ಇಂದು ಆರ್ಟೆಮಿಸ್-1ನ ಉಡಾವಣೆಯು ನಡೆಯುತ್ತಿಲ್ಲ. ಆರ್‌ಎಸ್-25 ಇಂಜಿನ್-3ರಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಇಂಜಿನಿಯರ್‌ಗಳು ಅದನ್ನು ಪತ್ತೆಹಚ್ಚಿದ್ದಾರೆ. ತಂಡಗಳು ಡೇಟಾ ಸಂಗ್ರಹಿಸುವ ಕೆಲಸದಲ್ಲಿ ತೊಡಗಿದ್ದು, ಮುಂದಿನ ಉಡಾವಣಾ ಸಮಯವನ್ನು ಶೀಘ್ರವೇ ತಿಳಿಸುತ್ತೇವೆ ಎಂಬುದಾಗಿ ಟ್ವೀಟ್ ಮೂಲಕ ತಿಳಿಸಿದೆ. ಇದನ್ನೂ ಓದಿ: ಪುತ್ರನ ಭೇಟಿಗೆಂದು ಹೋಗಿದ್ದಾಗ ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ವಿಶ್ವದ ಶ್ರೀಮಂತನ ತಾಯಿ!

    ನಾಸಾವು 2024ರಲ್ಲಿ 4 ಗಗನ ಯಾತ್ರಿಗಳನ್ನು ಚಂದ್ರನ ಸುತ್ತ ಕಳುಹಿಸಲು ಹಾಗೂ 2025ರ ಹೊತ್ತಿಗೆ ಚಂದ್ರಲೋಕದಲ್ಲಿ ಮಾನವರನ್ನು ಕಳುಹಿಸುವ ಉದ್ದೇಶ ಹೊಂದಿದೆ.

    ಲಾಂಚ್ ಕಂಟ್ರೋಲರ್‌ಗಳು ಇಂಜಿನ್‌ಗಳಿಗೆ ಕೆಲವು ಕ್ರಯೋಜನಿಕ್ ಪ್ರೊಪೆಲ್ಲಂಟ್‌ಗಳನ್ನು ಸೋರಿಕೆ ಮಾಡಲು ಕೋರ್ ಸ್ಟೇಜ್ ಟ್ಯಾಂಕ್‌ಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಆ ಮೂಲಕ ಅವುಗಳನ್ನು ಪ್ರಾರಂಭಿಸಲು ಸರಿಯಾದ ತಾಪಮಾನ ಶ್ರೇಣಿಗೆ ಪಡೆಯಲು ಇಂಜಿನ್‌ಗಳನ್ನು ಸ್ಥಿತಿಗೊಳಿಸುತ್ತವೆ. ಸದ್ಯ ಈ ಹಂತದಲ್ಲಿ ಸಮಸ್ಯೆಗಳು ಎದುರಾಗಿದ್ದು, ಪರಿಹರಿಸುವ ಕೆಲಸಗಳನ್ನು ಇಂಜಿನಿಯರ್‌ಗಳು ಮಾಡುತ್ತಿದ್ದಾರೆ ಎಂದು ನಾಸಾ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಬ್ರಸೆಲ್ಸ್: ಸೂರ್ಯನ ಅರ್ಧ ಆಯಸ್ಸು ಮುಕ್ತಾಯಗೊಂಡಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತಿಳಿಸಿದೆ.

    ಈಗ ಸುಮಾರು 4.57 ಶತಕೋಟಿ ವರ್ಷಗಳಷ್ಟು ತಲುಪಿದ್ದು ಸೂರ್ಯನಿಗೆ ಈಗ ಮಧ್ಯ ವಯಸ್ಸು ಎಂದು ಹೇಳಿದೆ. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಜನರಿಂದ ಅತ್ಯಾಚಾರ

    ಇಎಸ್‌ಎ ಸಂಶೋಧನೆಯ ಪ್ರಕಾರ, ಆಗಾಗ್ಗೆ ಸೂರ್ಯನ ಸೌರ ಜ್ವಾಲೆಗಳು, ಪ್ಲಾಸ್ಮಾದಿಂದ ಹೊರಹೊಮ್ಮುವ ವಿಕಿರಣಗಳು (ಕರೋನಲ್ ಮಾಸ್ಕ್ ಎಜೆಕ್ಷನ್ – ಸಿಎಂಇಎಸ್) ಹಾಗೂ ಸೌರ ಬಿರುಗಾಳಿಯೊಂದಿಗೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆಯ `ಗಯಾ ಬಾಹ್ಯಾಕಾಶ ನೌಕೆ’ ಬಿಡುಗಡೆ ಮಾಡಿದ ದತ್ತಾಂಶದ ಮೂಲಕ ವಿಶ್ಲೇಷಿಸಲಾಗಿದೆ. ಇದು ಬ್ರಹ್ಮಾಂಡದ ವಿವಿಧ ನಕ್ಷತ್ರಗಳ ಜೀವಿತಾವಧಿಯನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.

    ಗಯಾ ನೌಕೆ ಬಿಡುಗಡೆ ಮಾಡಿದ 3ನೇ ಪ್ರಮುಖ ದತ್ತಾಂಶವೂ ಇದಾಗಿದ್ದು ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣ ಮಾಹಿತಿಗಳ ಪೈಕಿ ಇದು ಒಂದಾಗಿದೆ. ಈ ದತ್ತಾಂಶವು ನಕ್ಷತ್ರಗಳ ತಾಪಮಾನ, ಗಾತ್ರ ಹಾಗೂ ದ್ರವ್ಯ ರಾಶಿಯ ಮಾಹಿತಿಯನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ನಕ್ಷತ್ರಗಳ ಸ್ಪಷ್ಟ ಹೊಳಪು ಹಾಗೂ ಅವುಗಳ ಬಣ್ಣವನ್ನು ನಿಖರವಾಗಿ ಗಯಾ ನೌಕೆ ಮಾಪನ ಮಾಡುತ್ತದೆ. ಸೂರ್ಯ ಈಗ ಸುಮಾರು 4.57 ಶತಕೋಟಿ ವರ್ಷಗಳ ವಯಸ್ಸಿನೊಂದಿಗೆ ಮಧ್ಯವಯಸ್ಸಿನಲ್ಲಿದ್ದು, ಈ ಅಧ್ಯಯನದಿಂದ ನಕ್ಷತ್ರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲದೇ, ಭವಿಷ್ಯದಲ್ಲಿ ಸೂರ್ಯ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಅಂದಾಜಿಸಬಹುದು ಎಂದು ವರದಿಯಾಗಿದೆ.

    ಸೂರ್ಯನ ಮೇಲ್ಮೈಯಲ್ಲಿ ಬದಲಾವಣೆಗಳು ಕಂಡುಬಂದಂತೆ ಕೆಂಪು ದೈತ್ಯ ನಕ್ಷತ್ರವಾಗಿ ಹೊರಹೊಮ್ಮುತ್ತದೆ. ಈ ವೇಳೆ ಎಷ್ಟು ದ್ರವ್ಯ ರಾಶಿಯನ್ನು ಹೊಂದಿರುತ್ತದೆ ಅದರ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ತನ್ನ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]