Tag: EPFO

  • ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್‌ ಹಣ ನಿಮ್ಮ ಖಾತೆಗೆ – ಎಟಿಎಂ ಮೂಲಕ ಪಿಎಫ್‌ ವಿತ್‌ಡ್ರಾ ಹೇಗೆ?

    ಇನ್ಮುಂದೆ ಕೇವಲ 3 ದಿನಗಳಲ್ಲಿ ಪಿಎಫ್‌ ಹಣ ನಿಮ್ಮ ಖಾತೆಗೆ – ಎಟಿಎಂ ಮೂಲಕ ಪಿಎಫ್‌ ವಿತ್‌ಡ್ರಾ ಹೇಗೆ?

    ರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿನ ಉದ್ಯೋಗಿಗಳಿಗೆ ಮಹತ್ವದ ಉಳಿತಾಯ ಯೋಜನೆಯಲ್ಲೊಂದಾದ ನೌಕರರ ಭವಿಷ್ಯ ನಿಧಿ ಯೋಜನೆಯಲ್ಲಿ, ಇಲಾಖೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಈ ಮೊದಲು ಪಿಎಫ್ ಹಣ ಡ್ರಾ ಮಾಡಲು ಅನೇಕ ಸವಾಲುಗಳನ್ನು ಎದುರಿಸಬೇಕಾಗಿತ್ತು. ಇನ್ಮುಂದೆ ಆ ರೀತಿಯ ಯಾವುದೇ ಪ್ರಮೇಯ ಬರಲ್ಲ. ATM ಮೂಲಕ ಸುಲಭವಾಗಿ ಹಣವನ್ನು ಡ್ರಾ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಕೇವಲ 3 ದಿನಗಳಲ್ಲಿ ನಿಮ್ಮ ಪಿಎಫ್‌ ಹಣ ನಿಮ್ಮ ಖಾತೆ ಸೇರಲಿದೆ. ಹಾಗಿದ್ರೆ ಎಟಿಎಂ ಮೂಲಕ ಪಿಎಫ್‌ ಹಣ ವಿತ್‌ಡ್ರಾ ಮಾಡುವುದು ಹೇಗೆ? ವಿತ್‌ಡ್ರಾ ಲಿಮಿಟ್‌ ಎಷ್ಟು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಈ ಮೊದಲು ಪಿಎಫ್ ಹಣ ಪಡೆಯಲು ಉದ್ಯೋಗಿಗಳು, ನಿವೃತ್ತ ಉದ್ಯೋಗಿಗಳು ಆಫೀಸಿಗೆ ಅಲೆದಾಡಬೇಕಿತ್ತು. ಇಲ್ಲದಿದ್ದರೆ ಆನ್​ಲೈನ್​​ ಮೂಲಕ ಅರ್ಜಿ ಸಲ್ಲಿಸಿಬೇಕಾಗಿತ್ತು. ಇದನ್ನು ತಪ್ಪಿಸಲು ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್‌ ಹಣವಿತ್ ಡ್ರಾ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಕಾರ್ಮಿಕ ಸಚಿವಾಲಯ ಅದಕ್ಕೆ ಅನುಮೋದನೆ ನೀಡಿದೆ. ಜೂನ್‌ ವೇಳೆಗೆ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

    ಕೇಂದ್ರ ಸರ್ಕಾರವು EPFO ಮೂಲಕ ಪಿಎಫ್‌ ಹಣ ಪಡೆಯುವ ನಿಯಮಗಳನ್ನು ಸಡಿಲಗೊಳಿಸಿದೆ. ಈ ಮೂಲಕ ಮುಂಗಡ ಹಣ ಪಡೆಯುವ ಮಿತಿಯನ್ನು ಹೆಚ್ಚಿಸಿದೆ. ಈ ಹಿಂದೆ ಇದ್ದ 1 ಲಕ್ಷದ ಮಿತಿಯನ್ನು ಈಗ 5 ಲಕ್ಷಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಈ ಪ್ರಸ್ತಾವನೆಯನ್ನು ಅನುಮೋದಿಸಿದ್ದಾರೆ. ಈ ನಿಯಮ ಯಾವಾಗಿನಿಂದ ಜಾರಿಗೊಳ್ಳುತ್ತದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ.

    ಏಪ್ರಿಲ್ 2020 ರಲ್ಲಿ EPFO ಆಟೋ ಕ್ಲೈಮ್ ಸೆಟಲ್ಮೆಂಟ್ ಅನ್ನು ಪರಿಚಯಿಸಿತು. ಆಗ ಕೇವಲ 50,000 ರೂ. ವರೆಗಿನ ಹಣವನ್ನು ಪಡೆಯಲು ಅವಕಾಶವಿತ್ತು. ಮೇ 2024 ರಲ್ಲಿ ಈ ಮಿತಿಯನ್ನು 1 ಲಕ್ಷಕ್ಕೆ ಹೆಚ್ಚಿಸಲಾಯಿತು. ಮೊದಲು ಕೇವಲ ಅನಾರೋಗ್ಯ ಅಥವಾ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಮಾತ್ರ ಪಿಎಫ್ ಹಣವನ್ನು ಪಡೆಯಲು ಸಾಧ್ಯವಿತ್ತು. ಆದರೆ ಈಗ ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗೂ ಮುಂಗಡ ಹಣ ಪಡೆಯುವ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನೀವು ಈಗಾಗಲೇ ಪಿಎಫ್‌ ಹಣಕ್ಕೆ ಅಪ್ಲೈ ಮಾಡಿದ್ದರೆ ಕೇವಲ ಮೂರೇ ದಿನದಲ್ಲಿ ಪ್ರಕ್ರಿಯೆ ಮುಗಿದು ಅದು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ. ಇಂಥದ್ದೊಂದು ಹೊಸ ಸೌಲಭ್ಯ ಏ.1ರಿಂದ ಜಾರಿಗೊಂಡಿದೆ.

    ಸುಲಭ ರೀತಿಯಲ್ಲಿ ಹಣ ವಿತ್ ಡ್ರಾ ಹೇಗೆ?
    ಪಿಎಫ್ ನಲ್ಲಿ ಹಣ ಹಿಂಪಡೆಯುವ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗುತ್ತಿದೆ. ಶೇ. 60ರಷ್ಟು ಹಣ ವಿಲೇವಾರಿಯನ್ನು ತ್ವರಿತಗೊಳಿಸಲಾಗುತ್ತಿದೆ. 1 ಲಕ್ಷ ರೂ.ವರೆಗಿನ ಹಣ ಹಿಂಪಡೆಯುವ ಅರ್ಜಿಗಳನ್ನು ಮೂರೇ ದಿನದಲ್ಲಿ ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ, ಆಸ್ಪತ್ರೆಯ ಖರ್ಚು ವೆಚ್ಚಗಳಿಗಾಗಿ, ಮನೆ ಖರೀದಿಗಾಗಿ, ಮಕ್ಕಳ ವಿದ್ಯಾಭ್ಯಾಸದ ಖರ್ಚುಗಳಿಗಾಗಿ, ಮಕ್ಕಳ ಮದುವೆಗಳಿಗಾಗಿ ಪಿಎಫ್ ಹಣವನ್ನು ವಿತ್ ಡ್ರಾ ಮಾಡುವುದಿದ್ದರೆ ಆ ಹಣ ಬೇಗನೇ ಸಿಗಲಿದೆ.

    ಹಣವನ್ನು ಕ್ಲೈಮ್ ಮಾಡುವಾಗ ನಿಮ್ಮ ಚೆಕ್ ಬುಕ್ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಪಿಎಫ್‌ನಲ್ಲಿ ಸಲ್ಲಿಸಿರಬೇಕು. ಇನ್ನು ಕೆವೈಸಿ ಅಪ್ಡೇಟ್ ಮಾಡಿದ್ದವರು ಕ್ಲೈಮ್ ಗಳಿಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಅಂಥ ಅರ್ಜಿಗಳು ಬೇಗನೇ ವಿಲೇವಾರಿ ಆಗುತ್ತವೆ. ಕ್ಲೈಮ್ ಸಲ್ಲಿಸುವ ಮೊದಲು ತಾವು ಎಷ್ಟು ಮೊತ್ತಕ್ಕೆ ಕ್ಲೈಮ್ ಸಲ್ಲಿಸಲು ಅರ್ಹರು ಎಂಬುದನ್ನು ಖಾತೆದಾರರು ತಿಳಿದುಕೊಳ್ಳಬೇಕಾಗುತ್ತದೆ.

    ಆನ್ ಲೈನ್‌ನಲ್ಲೇ ಸ್ವಯಂ ತಿದ್ದುಪಡಿಗೆ ಅವಕಾಶ:
    ನಿಮ್ಮ ಪಿಎಫ್ ಖಾತೆಗೆ ಯುಎಎನ್ ನಂಬರ್ ಇದ್ದರೆ, ಆ ನಂಬರ್ ಆಧಾರ್ ನಂಬರ್‌ಗೆ ಲಿಂಕ್ ಆಗಿದ್ದರೆ, ಅಂಥ ಖಾತೆಗಳನ್ನು ಓಪನ್ ಮಾಡಿ, ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತಿದ್ದುಪಡಿ ಮಾಡುವುದು ಹಾಗೂ ಕಾಲಕ್ಕೆ ತಕ್ಕಂತೆ ಹೊಸ ಮಾಹಿತಿಗಳನ್ನು ನೀವೇ ಮಾಡಿಕೊಳ್ಳಬಹುದು. ಅದಕ್ಕಾಗಿ ಪಿಎಫ್ ಕಚೇರಿಗೆ ಹೋಗುವ ಅಗತ್ಯವಿಲ್ಲ.

    ಸದ್ಯದಲ್ಲೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ಪಾವತಿ:
    ಸದ್ಯದಲ್ಲೇ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಹಾಗೂ ಇನ್ನಿತರ ಯುಪಿಐ ಪೇಮೆಂಟ್ ಆ್ಯಪ್‌ಗಳ ಮೂಲಕ ಪಿಎಫ್ ಹಣವನ್ನು ವಿತ್‌ಡ್ರಾ ಮಾಡುವಂಥ ಸೌಲಭ್ಯ ಬರಲಿದೆ. ಯುಪಿಎ ಪೇಮೆಂಟ್ ಸಂಸ್ಥೆಗಳೊಂದಿಗೆ ಈಗಾಗಲೇ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಇದು ಯಶಸ್ವಿಯಾದರೆ ಸದ್ಯದಲ್ಲೇ ಅಂಥ ಯೋಜನೆಯೊಂದು ಜಾರಿಗೊಳ್ಳಲಿದೆ.

    ಪಿಎಫ್‌ ಹಿಂಪಡೆಯುವುದು ಹೇಗೆ?
    ಯುಪಿಐ ಮುಖಾಂತರ:
    *EPFO ಪೋರ್ಟಲ್ ಅಥವಾ ಮೊಬೈಲ್ ಆಪ್‌ಗೆ ಲಾಗಿನ್ ಆಗಿ.
    *ʼWithdraw PFʼ ಆಯ್ಕೆ ಮಾಡಿ.
    *ಮೊತ್ತವನ್ನು ನಮೂದಿಸಿ ಮತ್ತು ನಿಮ್ಮ ಯುಪಿಐ ಐಡಿ ಎಂಟರ್ ಮಾಡಿ.
    *ಒಟಿಪಿ ದೃಢೀಕರಣದ ನಂತರ, ಹಣ ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

    ಎಟಿಎಂ ಮುಖಾಂತರ:
    *EPFO ಪೋರ್ಟಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿ.
    *ನಿಮ್ಮ ಬ್ಯಾಂಕ್ ಎಟಿಎಂ ಕಾರ್ಡ್ ಬಳಸಿ.
    *ʼPF Withdrawalʼ ಆಯ್ಕೆ ಮಾಡಿ
    *ಹಿಂತೆಗೆದುಕೊಳ್ಳಲು ಅಗತ್ಯವಿರುವ ಮೊತ್ತವನ್ನು ನಮೂದಿಸಿ
    *OTP ದೃಢೀಕರಿಸಿ, ಹಣ ವಿತರಣೆಯಾಗಲಿದೆ.

    ಲಾಭಗಳೇನು?
    *ತ್ವರಿತ ಹಣಕಾಸು ಲಭ್ಯತೆ – ತುರ್ತು ಪರಿಸ್ಥಿತಿಯಲ್ಲಿ ಪಿಎಫ್ ಹಿಂತೆಗೆದುಕೊಳ್ಳುವ ಕಾಲಾವಧಿ ಕಡಿಮೆಯಾಗಲಿದೆ.
    *ಡಿಜಿಟಲ್ ಪಾರದರ್ಶಕತೆ – ಎಲ್ಲಾ ವಹಿವಾಟುಗಳು EPFO ಪೋರ್ಟಲ್ ಮತ್ತು ಯುಪಿಐ ಮೂಲಕ ನೇರವಾಗಿ ಪರೀಕ್ಷಿಸಬಹುದಾಗಿದೆ.
    *ಮನೆ ಖರೀದಿ ಮತ್ತು ಮರುಪಾವತಿಗೆ ಸೌಲಭ್ಯ – ಹೊಸ ವ್ಯವಸ್ಥೆಯೊಂದಿಗೆ, ಸದಸ್ಯರು ಪಿಎಫ್ ಬಳಸಿ ಸುಲಭವಾಗಿ ಮನೆ ಸಾಲ ಮರುಪಾವತಿ ಮಾಡಬಹುದು.
    *ಬ್ಯಾಂಕಿಂಗ್ ಸೇವೆಗಳ ಬೇಡಿಕೆಯಿಲ್ಲ – ಬ್ಯಾಂಕ್ ಪ್ರಕ್ರಿಯೆಗಳಿಲ್ಲದೆ, ಯಾವುದೇ ಸ್ಥಳದಿಂದಲೂ ಹಣ ಹಿಂಪಡೆಯಬಹುದು.

  • ಇನ್ಮುಂದೆ ಯಾವುದೇ ಬ್ಯಾಂಕ್‌ನಿಂದ ಪಿಎಫ್‌ ಪಿಂಚಣಿ ಪಡೆಯಬಹುದು

    ಇನ್ಮುಂದೆ ಯಾವುದೇ ಬ್ಯಾಂಕ್‌ನಿಂದ ಪಿಎಫ್‌ ಪಿಂಚಣಿ ಪಡೆಯಬಹುದು

    – ಏಕೀಕೃತ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದ ಕೇಂದ್ರ ಕಾರ್ಮಿಕ ಸಚಿವಾಲಯ

    ನವದೆಹಲಿ: ಕೇಂದ್ರ ಕಾರ್ಮಿಕ ಸಚಿವಾಲಯವು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇನ್ಮುಂದೆ ಪಿಂಚಣಿದಾರರು ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ ಶಾಖೆಯಲ್ಲಿ ತಮ್ಮ ಪಿಂಚಣಿ ಪಡೆದುಕೊಳ್ಳಬಹುದಾಗಿದೆ.

    ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 1995ರ ಉದ್ಯೋಗಿಗಳ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆಯನ್ನು (ಸಿಪಿಪಿಎಸ್) ಹೊರತಂದಿದೆ ಎಂದು ಕಾರ್ಮಿಕ ಸಚಿವಾಲಯವು ತಿಳಿಸಿದೆ. ಇಪಿಎಫ್‌ಒ ವ್ಯಾಪ್ತಿಗೆ ಬರುವ 68 ಲಕ್ಷ ಪಿಂಚಣಿದಾರರಿಗೆ ಇದರಿಂದ ಲಾಭ ಆಗಲಿದೆ.

    ಪಿಂಚಣಿದಾರರು ಪರಿಶೀಲನೆಗಾಗಿ ಇನ್ಮುಂದೆ ಬ್ಯಾಂಕ್‌ ಶಾಖೆಗೆ ಹೋಗುವ ಅವಶ್ಯಕತೆ ಇಲ್ಲ. ಬಿಡುಗಡೆಯಾಗುವ ಪಿಂಚಣಿ ಮೊತ್ತ ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ. ಪಿಂಚಣಿದಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ನೆಲೆಸಿದರೂ ತಮ್ಮ ಬ್ಯಾಂಕ್‌ ಬ್ರಾಂಚ್‌ ಬದಲಿಸುವ ಅಗತ್ಯವಿಲ್ಲ. ಅದಕ್ಕೆ ಬದಲಾಲಾಗಿ ದೇಶದ ಯಾವುದೇ ರಾಜ್ಯ, ಬ್ಯಾಂಕ್‌, ಶಾಖೆಯಿಂದ ಬೇಕಾದರೂ ಹಣ ಪಡೆಯಬಹುದು.

    ಇದಕ್ಕೂ ಮುನ್ನ 1995ರ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. ಅದರ ಪ್ರಕಾರ, ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಪ್ರತಿ ವಲಯ ಅಥವಾ ಪ್ರಾಂತ್ಯದ ಇಪಿಎಫ್‌ಒ ಕಚೇರಿಗಳು 3-4 ಬ್ಯಾಂಕ್‌ಗಳೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಮೂಲಕವೇ ಹಣ ಪಡೆಯಬೇಕಿತ್ತು.

  • ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ

    ಏಪ್ರಿಲ್‍ನಲ್ಲಿ 7.83% ಕ್ಕೆ ಏರಿದೆ ಭಾರತದ ನಿರುದ್ಯೋಗ ದರ

    ನವದೆಹಲಿ: ಭಾರತದಲ್ಲಿ ನಿರುದ್ಯೋಗ ದರ ಏಪ್ರಿಲ್‍ನಲ್ಲಿ 7.83% ಏರಿಕೆಯಾಗಿದ್ದು, ಈ ಕುರಿತು ಮಾಧ್ಯಮ ಅಂಕಿಅಂಶ ಪ್ರಕಟವಾಗಿದೆ.

    ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ(CMIE) ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ ನಿರುದ್ಯೋಗ ದರವು ಮಾರ್ಚ್‍ನಲ್ಲಿ 7.60% ರಿಂದ ಏಪ್ರಿಲ್‍ನಲ್ಲಿ 7.83%ಕ್ಕೆ ಏರಿದೆ. CMIE ಅಂಕಿಅಂಶಗಳ ಪ್ರಕಾರ, ನಗರ ನಿರುದ್ಯೋಗ ದರವು ಈ ವರ್ಷದ ಮಾರ್ಚ್‍ನಲ್ಲಿ 8.28% ಇತ್ತು. ಆದರೆ ಏಪ್ರಿಲ್ ಅಂದರೆ ಒಂದೇ ತಿಂಗಳ ಅಂತರದಲ್ಲಿ 9.22%ಕ್ಕೆ ಏರಿದೆ. ಆದರೆ ಗ್ರಾಮೀಣ ನಿರುದ್ಯೋಗ ದರವು 7.29% ರಿಂದ 7.18% ಕ್ಕೆ ಇಳಿದಿದೆ ಎಂದು ತಿಳಿಸಿದೆ. ಇದನ್ನೂ ಓದಿ:  ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿದ ಕ್ರೂರಿ

    ಮಾರ್ಚ್‍ನಲ್ಲಿ, ಹಣದುಬ್ಬರವು 17 ತಿಂಗಳ ಗರಿಷ್ಠ 6.95% ತಲುಪಿತು. ಏಪ್ರಿಲ್ 28 ರಂದು ನೀಡಲಾದ ಕೇಂದ್ರದ ತ್ರೈಮಾಸಿಕ ಉದ್ಯೋಗ ಸಮೀಕ್ಷೆ(QES) ಪ್ರಕಾರ, ವಾಣಿಜ್ಯ, ಉತ್ಪಾದನೆ ಮತ್ತು ಮಾಹಿತಿ ತಂತ್ರಜ್ಞಾನ ಸೇರಿದಂತೆ ಒಂಬತ್ತು ಪ್ರಮುಖ ಕೈಗಾರಿಕೆಗಳು ಅಕ್ಟೋಬರ್ ಮತ್ತು ಡಿಸೆಂಬರ್ 2021 ರ ನಡುವೆ 4,00,000 ಉದ್ಯೋಗಗಳನ್ನು ನಿರ್ಮಿಸಿವೆ.

    ಈ ಹಿಂದೆ, ಇತ್ತೀಚಿನ ಎನ್‍ಎಸ್‍ಒ ಅಂಕಿಅಂಶಗಳ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(EPFO) ಸೆಪ್ಟೆಂಬರ್ 2012 ಮತ್ತು ಈ ವರ್ಷದ ಫೆಬ್ರವರಿ ನಡುವೆ ಸುಮಾರು 5.18 ಕೋಟಿ ಚಂದಾದಾರರನ್ನು ನೇಮಿಸಿಕೊಂಡಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ ಒದಗಿಸಿದ ಅಂಕಿಅಂಶಗಳ ಪ್ರಕಾರ, ನಿರ್ದಿಷ್ಟ ಅವಧಿಯೊಳಗೆ ಇಪಿಎಫ್‍ಗೆ ಸೇರಿದ ಸದಸ್ಯರ ಸಂಖ್ಯೆಯು ದೇಶಾದ್ಯಂತ ಆ ಅವಧಿಯಲ್ಲಿ ರಚಿಸಲಾದ ಉದ್ಯೋಗಗಳ ಸಂಖ್ಯೆಯ ಒಳನೋಟವನ್ನು ಒದಗಿಸುತ್ತದೆ ಎಂದು ತಿಳಿಸಿದೆ.

    ರಾಷ್ಟ್ರೀಯ ಅಂಕಿಅಂಶ ಕಚೇರಿ(NSO)ಯ ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೆಪ್ಟೆಂಬರ್ 2017 ರಿಂದ ಫೆಬ್ರವರಿ 2022 ರ ಅವಧಿಗೆ ದೇಶದ ಉದ್ಯೋಗದ ದೃಷ್ಟಿಕೋನ ಕುರಿತು ಮಾಧ್ಯಮ ಟಿಪ್ಪಣಿಯನ್ನು ಬಿಡುಗಡೆ ಮಾಡಿದೆ. ಇದು ಪ್ರಗತಿಯನ್ನು ನಿರ್ಣಯಿಸಲು ಆಯ್ದ ಸರ್ಕಾರಿ ಏಜೆನ್ಸಿಗಳೊಂದಿಗೆ ಲಭ್ಯವಿರುವ ಆಡಳಿತಾತ್ಮಕ ದಾಖಲೆಗಳನ್ನು ಆಧರಿಸಿದೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ 

    ಸರ್ಕಾರವು ತನ್ನದೇ ಆದ ಮಾಸಿಕ ಅಂದಾಜುಗಳನ್ನು ಬಹಿರಂಗಪಡಿಸದ ಕಾರಣ, ಅರ್ಥಶಾಸ್ತ್ರಜ್ಞರು ಮತ್ತು ನೀತಿ ನಿರೂಪಕರು ಮುಂಬೈ ಮೂಲದ CMIE ಯಿಂದ ಡೇಟಾವನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.