Tag: EO

  • ಲೋಕಾಯುಕ್ತ ದಾಳಿ ವೇಳೆ ಹೈಡ್ರಾಮಾ – ಅಧಿಕಾರಿಗಳೇ ಎದುರಲ್ಲೇ ರಸ್ತೆ ಮೇಲೆ ಬಿದ್ದು ಉರುಳಾಡಿದ ಇಓ

    ಲೋಕಾಯುಕ್ತ ದಾಳಿ ವೇಳೆ ಹೈಡ್ರಾಮಾ – ಅಧಿಕಾರಿಗಳೇ ಎದುರಲ್ಲೇ ರಸ್ತೆ ಮೇಲೆ ಬಿದ್ದು ಉರುಳಾಡಿದ ಇಓ

    ಕೋಲಾರ: ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅಧಿಕಾರಿಗಳ ಎದುರು ತಾಲೂಕು ಪಂಚಾಯತ್‌ ಇಓ (EO) ವೆಂಕಟೇಶಪ್ಪ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ.

    ಜಿಲ್ಲೆಯ ಬಂಗಾರಪೇಟೆಯಲ್ಲಿ (Bangarapete) ಲೋಕಾಯುಕ್ತ ಅಧಿಕಾರಿಗಳು ವೆಂಕಟೇಶಪ್ಪ ಅವರ ಮನೆ ಸೇರಿದಂತೆ 5 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದರು. ಈ ವೇಳೆ ಇಓ ವೆಂಕಟೇಶಪ್ಪ ಮನೆಯಲ್ಲಿ ಇಲ್ಲದೆ ಕರ್ತವ್ಯದ ಮೇರೆಗೆ ಬಾಗೇಪಲ್ಲಿಗೆ ಹೋಗಿದ್ದರು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಇಓ ವೆಂಕಟೇಶಪ್ಪ ಬಂಗಾರಪೇಟೆಯ ಮನೆಗೆ ಬಂದಿದ್ದು, ಈ ವೇಳೆ ಅಧಿಕಾರಿಗಳ ಮುಂದೆ ಬಿದ್ದು ಅಯ್ಯಯ್ಯೋ, ಅಯ್ಯಯ್ಯೋ ಎಂದು ಒದ್ದಾಡಿ ಹೈಡ್ರಾಮಾ ಸೃಷ್ಟಿಸಿದ್ದಾರೆ.

    ವೆಂಕಟೇಶಪ್ಪ ಈಗಾಗಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ದಾಳಿಗೆ ಬಂದಿದ್ದ ಅಧಿಕಾರಿಗಳೇ ಆಂಬುಲೆನ್ಸ್‌ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ದಾಳಿ ಮುಂದುವರಿಸಿದ್ದು ದಾಖಲೆ ಪರಿಶೀಲನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತೊಡಗಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ 3 ಕಡೆ ಹಾಗೂ ಮುಳಬಾಗಿಲು ತಾಲೂಕಿನ ತಿಪ್ಪದೊಡ್ಡಿಯಲ್ಲಿ 2 ಕಡೆ ಸೇರಿದಂತೆ ತಾಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಅವರಿಗೆ ಸೇರಿದ ಒಟ್ಟು 5 ಕಡೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಇದನ್ನೂ ಓದಿ: ನಾಲ್ವರಲ್ಲಿ ಯಾರ ಕೈ ಹಿಡಿಯಲಿದೆ ರಾಯಬಾಗ ಮೀಸಲು ಕ್ಷೇತ್ರದ ಜನತೆ

    ಬಂಗಾರಪೇಟೆಯಲ್ಲಿ ಇಓ ಆಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶಪ್ಪ ಕಳೆದ 2 ದಿನದ ಹಿಂದಷ್ಟೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಗೆ ವರ್ಗಾವಣೆಗೊಂಡಿದ್ದರು. ಅಲ್ಲದೆ ಗ್ರಾಪಂ ಕಾರ್ಯದರ್ಶಿಯಾಗಿ, ಪಿಡಿಓ ಆಗಿ ಕಾರ್ಯನಿರ್ವಹಿಸಿದ್ದ ವೆಂಟೇಶಪ್ಪ, ಬಂಗಾರಪೇಟೆ ತಾಲೂಕು ಕಚೇರಿಯಲ್ಲಿ ಇಓ ಆಗಿ 8 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದರು.

    ವೆಂಕಟೇಶಪ್ಪ ಬಂಗಾರಪೇಟೆಯಲ್ಲಿ 3 ನಿವೇಶನ, ಅಂಗಡಿ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಎಸ್ಪಿ ಉಮೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಇದನ್ನೂ ಓದಿ: ರೆಡ್ಡಿ ಕುಟುಂಬಗಳ ನಡುವಿನ ಕಾಳಗಕ್ಕೆ ಸಾಕ್ಷಿಯಾಗಲಿದೆಯಾ ಬಳ್ಳಾರಿ ನಗರ ಕ್ಷೇತ್ರ?

  • ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ನೀನು ದನ ಕಾಯೋನು, EO ಕೆಲಸದಲ್ಲಿ ಇದ್ದೀಯ – ಅಧಿಕಾರಿ ವಿರುದ್ಧ ಎಚ್‍.ಡಿ.ರೇವಣ್ಣ ಗರಂ

    ಹಾಸನ: ನೀನು ದನ ಕಾಯೋನು ಇಓ ಕೆಲಸದಲ್ಲಿ ಇದ್ದೀಯ. ದನಗೆ ಇಂಜೆಕ್ಷನ್ ಕೊಡೋಕೆ ಹೋಗು ಎಂದು ತಾ.ಪಂ ಇಓಗೆ ಏಕವಚನದಲ್ಲೇ ಮಾಜಿ ಸಚಿವ ಎಚ್.ಡಿ.ರೇವಣ್ಣ ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.

    ಹಾಸನದ ಕೆಂಚಟ್ಟಹಳ್ಳಿ ಬಳಿ ಇರುವ ಹೇಮಗಂಗೋತ್ರಿ ಸ್ನಾತಕೋತ್ತರ ಕೇಂದ್ರದ ಮುಂಭಾಗ ಟ್ರಕ್ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳು, ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾಮಗಾರಿ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿ ಬಳಿ ಆಗಮಿಸಿ ಜಿಲ್ಲಾಧಿಕಾರಿ ಮತ್ತು ತಾಪಂ ಇಒ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಎಚ್.ಡಿ.ರೇವಣ್ಣ, ತಾಪಂ ಇಒ ಕುರಿತು ನೀನು ದನ ಕಾಯೋನು, ಇಓ ಕೆಲಸದಲ್ಲಿ ಇದ್ದೀಯ. ಹೆಣ್ಣುಮಕ್ಕಳನ್ನು ಹೆದರಿಸ್ತೀಯಾ, ದನ ಕಾಯಕೆ ಹೋಗು ಎಂದು ಗದರಿದ್ರು. ಅದಕ್ಕೆ ಇಒ ಕಾಮಗಾರಿ ನಡೆಸಲು ಡಿಸಿ ನಿರ್ದೇಶನ ನೀಡಿದ್ದರು ಹಾಗಾಗಿ ಕಾಮಗಾರಿ ನಡೆಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭು ಚವ್ಹಾಣ್ ಬಳಿ ಸಾಕ್ಷ್ಯ ಕೇಳಲ್ಲ ಯಾಕೆ – ಆರಗಗೆ ಪ್ರಿಯಾಂಕ್‌ ಖರ್ಗೆ ಸವಾಲು

    ಈ ಉತ್ತರ ಕೇಳಿ ಮತ್ತಷ್ಟು ಕೆರಳಿದ ರೇವಣ್ಣ, ಡಿಸಿ ಮನೆಗೆ ನುಗ್ಗು ಅಂತಾನೆ ಹೋಗಿ ನುಗ್ಗು ನೀನು. ಏ ಪಿಎ ಕರೆಯೋ ಅವನ್ಯಾರು? ಡಿಸಿ. ಇವರಿಬ್ಬರು ಸೇರಿಕೊಂಡು ಅದೇನ್ ಮಾಡ್ತರೆ ಮಾಡ್ಲಿ. ಎಷ್ಟು ಹೆಣ ಉರುಳಿಸುತ್ತಾರೆ ಉರುಳಿಸಲಿ. ವರ್ಗಾವಣೆಗೋಸ್ಕರ ಈ ರೀತಿ ಮಾಡ್ತೀರ ಎಂದು ಕಿಡಿಕಾರಿದರು. ಇದನ್ನೂ ಓದಿ: ಭಾರತದ 10, ಪಾಕಿಸ್ತಾನದ 6 ಯೂಟ್ಯೂಬ್ ಚ್ಯಾನೆಲ್‌ಗಳು ಬ್ಯಾನ್

    ಈ ವೇಳೆ ಜಿಲ್ಲಾಧಿಕಾರಿ ಆರ್.ಗಿರೀಶ್, ಸ್ವಲ್ಪ ಸಮಾಧಾನವಾಗಿ ಕೇಳಿ ಸರ್ ಎಂದು ರೇವಣ್ಣ ಅವರಿಗೆ ತಿಳಿಸಿದ್ರು. ಆಗ ರೇವಣ್ಣ ಜನ ವಿರೋಧ ಮಾಡುತ್ತಿದ್ದಾರೆ. ಟ್ರಕ್ ಟರ್ಮಿನಲ್ ಕಾಮಗಾರಿ ನಿಲ್ಲಿಸಿ. ಟ್ರಕ್ ಟರ್ಮಿನಲ್‍ಗೆ ಬೇರೆ ಕಡೆ ಜಾಗ ಕೊಡಿ. ಮಿನಿಸ್ಟರ್ ಹೇಳ್ತಾರೆ ಡಿಸಿ ಕಚೇರಿ ಎಂಎಲ್‍ಎಗೆ ಬರೆದು ಕೊಡಿ ಅಂತ, ಬರೆದು ಕೊಡುತ್ತೀರಾ? ಹಾಸನನ ಏನ್ ಎಂಎಲ್‍ಎಗೆ ಬರೆದುಕೊಟ್ಟಿದ್ದಾರ ಎಂದು ಪ್ರಶ್ನಿಸಿದರು. ಈ ವೇಳೆ ರೇವಣ್ಣ ಅವರಲ್ಲಿ ಮನವಿ ಮಾಡಿದ ಜಿಲ್ಲಾಧಿಕಾರಿ ಆರ್.ಗಿರೀಶ್, ನಾಳೆ, ನಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆಯುತ್ತೇನೆ ಎಂದು ತಿಳಿಸಿದರು.

  • ಕಮಿಷನ್ ನೀಡುವಂತೆ ಪಿಡಿಓಗಳನ್ನು ಪೀಡಿಸಿದ ಇಓ ಅಧಿಕಾರಿ – ವೀಡಿಯೋ ವೈರಲ್

    ಕಮಿಷನ್ ನೀಡುವಂತೆ ಪಿಡಿಓಗಳನ್ನು ಪೀಡಿಸಿದ ಇಓ ಅಧಿಕಾರಿ – ವೀಡಿಯೋ ವೈರಲ್

    ಮಂಡ್ಯ: ಪಿಡಿಓಗಳನ್ನು ಶ್ರೀರಂಗಪಟ್ಟಣದ ಇಓ ಹಣ ನೀಡುವಂತೆ ಪೀಡಿಸುವುದರ ಜೊತೆಗೆ ಕಿರುಕುಳ ನೀಡುತ್ತಿದ್ದ ಆಡಿಯೋ ಮತ್ತು ವೀಡಿಯೋ ವೈರಲ್ ಆಗಿದೆ.

    ಶ್ರೀರಂಗಪಟ್ಟಣದ ಇಓ ಬೈರಪ್ಪ ಆರೋಪಿ. ಇವರು ಪಿಡಿಓಗಳಿಗೆ ಕಾಮಗಾರಿಗಳ ಬಿಲ್‍ನಲ್ಲಿ 30% ಕಮಿಷನ್ ನೀಡುವಂತೆ ಪೀಡಿಸುತ್ತಿರುವ ವಿಡಿಯೋ ಮತ್ತು ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ವೀಡಿಯೋದಲ್ಲಿ ಪಿಡಿಓಗಳು ಪದೇ ಪದೇ ಹಣ ನೀಡಿದರೂ ಇಷ್ಟು ಹಣ ಸಾಕಗಲ್ಲ. ಇನ್ನೂ ಅಧಿಕ ಹಣಬೇಕೆಂದು ಒತ್ತಾಯಿಸಿದ್ದಾರೆ. ಒಂದು ವೇಳೆ ಪಿಡಿಓಗಳು ಹಣ ನೀಡಲಿಲ್ಲ ಎಂದರೆ ಬಿಲ್ ಪಾಸ್ ಆಗದ ರೀತಿಯಲ್ಲಿ ಇಓ ವರ್ತನೆ ಮಾಡುತ್ತಿದ್ದಾರೆ. ಜೊತೆಗೆ ನಾನು ಸಿಇಓಗೂ ಹಣ ನೀಡಬೇಕು ಎಂದು ಆಡಿಯೋದಲ್ಲಿ ಪ್ರಸ್ತಾಪ ಮಾಡಿದ್ದಾರೆ.

    ಈ ರೀತಿಯ ದೌರ್ಜನ್ಯಕ್ಕೆ ಪಿಡಿಓಗಳು ಬೇಸತ್ತು ಮಂಡ್ಯ ಜಿಲ್ಲಾ ಪಂಚಾಯತಿ ಸಿಇಓ ದಿವ್ಯಾ ಪ್ರಭು ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಪಿಡಿಓಗಳು ಆರೋಪಿಸಿದ್ದಾರೆ. ಇದನ್ನೂ ಓದಿ: ಹಾವು ತಪ್ಪಿಸಲು ಹೋಗಿ ತುಂಗಾ ನಾಲೆಗೆ ಬಿದ್ದ ಕಾರು – ಮಹಿಳೆ ಸಾವು

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪಂಚಾಯಿತಿ ಸಿಇಓ ದಿವ್ಯ ಪ್ರಭು ಅವರು, ಈ ಬಗ್ಗೆ ಪಿಡಿಓಗಳು ದೂರು ನೀಡಿದ್ದಾರೆ. ನಾವು ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ರಚಿಸಿದ್ದೇವೆ. ಅವರು ಈ ಬಗ್ಗೆ ವರದಿ ನೀಡಿದ್ದಾರೆ. ಇಓ ಭೈರಪ್ಪ ಅವರು ಹಣಕ್ಕಾಗಿ ಪಿಡಿಸುತ್ತಿರುವುದು ನಿಜ ಎಂದು ವರದಿಯಲ್ಲಿ ಹೇಳಿದ್ದಾರೆ. ಹೀಗಾಗಿ ನಾನು ಸರ್ಕಾರಕ್ಕೆ ಈ ವರದಿಯನ್ನು ಕಳಿಸಿ ಅವರನ್ನು ಅಮಾನತು ಮಾಡಬೇಕೆಂದು ತಿಳಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ನಿಮಗೆ ಪ್ರವೇಶವಿಲ್ಲ – ಹಿಜಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಗೇಟ್‍ನಲ್ಲೇ ತಡೆದ ಪ್ರಿನ್ಸಿಪಾಲ್