Tag: environmental pollution

  • ಪರಿಸರ ಸಂರಕ್ಷಣಾ ಕಾಯ್ದೆ ಹಲ್ಲಿಲ್ಲದ ಹಾವು, ಇದು ರಾಜಕೀಯವಲ್ಲದೆ ಮತ್ತೇನು ಅಲ್ಲ: ಸುಪ್ರೀಂ ತರಾಟೆ

    ಪರಿಸರ ಸಂರಕ್ಷಣಾ ಕಾಯ್ದೆ ಹಲ್ಲಿಲ್ಲದ ಹಾವು, ಇದು ರಾಜಕೀಯವಲ್ಲದೆ ಮತ್ತೇನು ಅಲ್ಲ: ಸುಪ್ರೀಂ ತರಾಟೆ

    – ದೆಹಲಿ ಮಾಲಿನ್ಯ ಹಿನ್ನೆಲೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಚಾಟಿ

    ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿನ (Delhi) ವಾಯು ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್ (Supreme Court) ಕಳವಳ ವ್ಯಕ್ತಪಡಿಸಿದೆ. ಪರಿಣಾಮಕಾರಿಯಲ್ಲದ ಪರಿಸರ ಸಂರಕ್ಷಣಾ ಕಾಯಿದೆ (Environmental Protection Act) ಜಾರಿ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಇದೇ ವೇಳೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ನೆರೆ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಮಾಲಿನ್ಯ ನಿಯಂತ್ರಣಕ್ಕೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಪರಿಸರ ಸಂರಕ್ಷಣಾ ಕಾಯಿದೆ ಹಲ್ಲಿಲ್ಲದ ಹಾವಿನಂತಾಗಿದೆ. ಕಾಯಿದೆಯಲ್ಲಿ ತಪ್ಪಿತಸ್ಥರನ್ನು ಶಿಕ್ಷೆಯಿಂದ ಮುಕ್ತಗೊಳಿಸಿ, ದಂಡದ ಮೂಲಕ ಅದನ್ನು ಬದಲಾಯಿಸಿದ್ದೀರಿ. ಇಂತಹ ನಿಯಮಗಳಿಂದ ಮಾಲಿನ್ಯ ನಿಯಂತ್ರಣ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದೆ.ಇದನ್ನೂ ಓದಿ: ಕರ್ನಾಟಕ ಫ್ರಾಡ್‌ಗಳ ಸಂತೆಯಾಗಲು ಸಿದ್ದರಾಮಯ್ಯ ಕಾರಣ – ಹೆಚ್‌. ವಿಶ್ವನಾಥ್‌ ಲೇವಡಿ

    ಪಂಜಾಬ್ ಮತ್ತು ಹರಿಯಾಣದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಶೋಕಾಸ್ ನೋಟಿಸ್ ನೀಡಿದ ಕೋರ್ಟ್, ಹುಲ್ಲು ಸುಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಸರ್ಕಾರಗಳು ಹಾಗೂ ಕೇಂದ್ರ ಪರಿಸರವನ್ನು ರಕ್ಷಿಸಲು ಗಂಭೀರವಾಗಿ ಸಿದ್ಧರಿದ್ದರೆ, ಸೆಕ್ಷನ್ 15ನ್ನು ತಿದ್ದುಪಡಿ ಮಾಡುವ ಮೊದಲು ಎಲ್ಲವನ್ನೂ ಸರಿಪಡಿಸಲಾಗುತ್ತಿತ್ತು. ಇದೆಲ್ಲವೂ ರಾಜಕೀಯ ಬೇರೇನೂ ಅಲ್ಲ ಎಂದು ಹೇಳಿದೆ.

    ಟ್ರ್ಯಾಕ್ಟರ್‌ ಮತ್ತು ರೈತರಿಗೆ ಡೀಸೆಲ್ ಹಣಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪಂಜಾಬ್‌ನ ಅಡ್ವೊಕೇಟ್ ಜನರಲ್‌ಗೆ ಸುಳ್ಳು ಹೇಳಿಕೆಯನ್ನು ನೀಡಿತ್ತು. ಅದನ್ನು ಯಾಕೆ ನೀಡಿದ್ದೀರಿ ಎಂದು ನೀವು ಉತ್ತರಿಸಬೇಕು. ಇಲ್ಲಿಯವರೆಗೂ ಒಂದೇ ಒಂದು ಪ್ರಾಸಿಕ್ಯೂಷನ್ ಮಾಡಿಲ್ಲ, ಆದರೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ನಾವು ನಿಮ್ಮನ್ನು ಬಿಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.

    ಇದಕ್ಕೆ ಪಂಜಾಬ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿ, ನಾವು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಕೇಂದ್ರ ಸರ್ಕಾರ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಮುಂದಿನ 10 ದಿನಗಳಲ್ಲಿ ಪರಿಸರ ಸಂರಕ್ಷಣಾ ನಿಯಮಗಳನ್ನು ಬದಲಿಸಿ, ಅಂತಿಮಗೊಳಿಸಲಾಗುವುದು ಮತ್ತು ಕಾಯಿದೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಬಹುಮತದಿಂದ ಜಯಗಳಿಸುವುದು ನಿಶ್ಚಿತ: ಸಿದ್ದರಾಮಯ್ಯ

  • ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಉಡುಪಿಯ ಯುಪಿಸಿಎಲ್‍ಗೆ ಹಸಿರುಪೀಠ ಚಾಟಿ – ಅವಾಂತರಕ್ಕೆ 52 ಕೋಟಿ ರೂ. ದಂಡ

    ಉಡುಪಿ: ಪಡುಬಿದ್ರೆಯ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಕಳೆದ ಒಂದು ದಶಕಗಳಲ್ಲಿ ಸಾವಿರಾರು ಕೋಟಿ ರೂಪಾಯಿಯ ಸಮಸ್ಯೆ ತಂದೊಡ್ಡಿದೆ.

    ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರಕ್ಕೆ ರಾಷ್ಟ್ರೀಯ ಹಸಿರು ಪೀಠ (NGT) ಬರೋಬ್ಬರಿ 52 ಕೋಟಿ ರೂಪಾಯಿ ದಂಡ ವಿಧಿಸಿದೆ. ಯುಪಿಸಿಎಲ್‍ನಿಂದ ಆಗಿರುವ ಮತ್ತು ಆಗುತ್ತಿರುವ ಅನಾಹುತಕ್ಕೆ ಸಂಬಂಧಪಟ್ಟಂತೆ ನಂದಿಕೂರು ಜನಜಾಗೃತಿ ಸಮಿತಿಯು 2005ರಲ್ಲಿ ಈ ಕುರಿತು ರಾಷ್ಟ್ರೀಯ ಹಸಿರು ಪೀಠದಲ್ಲಿ ದಾವೆ ಹೂಡಿತ್ತು. ವಿಶೇಷ ತಂಡಗಳ ಮೂಲಕ ಅಧ್ಯಯನ ನಡೆಸಿದ ಪೀಠವು, ಮೇ 31ರಂದು ಯುಪಿಸಿಎಲ್‍ಗೆ 52 ಕೋಟಿ ರೂ. ದಂಡ ವಿಧಿಸಿದೆ. ಪರಿಸರ ಕಾಳಜಿಯನ್ನು ಮರೆತಿರುವ ಕಂಪನಿ ವಿರುದ್ಧ ಕೋರ್ಟ್ ಚಾಟಿ ಬೀಸಿದೆ. ಇದನ್ನೂ ಓದಿ: ಲವ್ ಜಿಹಾದ್ ಆರೋಪ – ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

    ಕಾಪು ತಾಲೂಕು ಪಡುಬಿದ್ರಿ ಸಮೀಪದ ಎಲ್ಲೂರು ಗ್ರಾಮದಲ್ಲಿ ಕಳೆದ ಒಂದೂವರೆ ದಶಕದಿಂದ ಸಕ್ರಿಯವಾಗಿರುವ, ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಕಾರ್ಯಾಚರಿಸುತ್ತಿದೆ. ಈ ಯೋಜನೆಯು ಪರಿಸರದ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಪರಿಸರದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಿರುವುದನ್ನು ಪರಿಗಣಿಸಿ ಬೃಹತ್ ಮೊತ್ತದ ದಂಡ ಪಾವತಿಸುವಂತೆ ಕೋರ್ಟ್ ಆದೇಶಿಸಿದೆ. ಇದನ್ನೂ ಓದಿ: ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತ ಸೂಪರ್ ಪವರ್ ದೇಶವಾಗಿದೆ: ಶೋಭಾ ಕರಂದ್ಲಾಜೆ

    ಯುಪಿಸಿಯಲ್ ಸ್ಥಾವರವು ಐದು ಕೋಟಿ ರೂಪಾಯಿಯನ್ನು ಠೇವಣಿ ಯಾಗಿ ಇರಿಸಿದೆ. ಈ ಮೊತ್ತವನ್ನು ದಂಡದ ಸ್ವರೂಪದಲ್ಲಿ ವಿನಿಯೋಗ ಮಾಡಿಕೊಳ್ಳಲು ಹಸಿರು ಪೀಠ ಸೂಚಿಸಿದೆ. ಬರುವ ಮೂರು ತಿಂಗಳ ಒಳಗಾಗಿ ಯುಪಿಸಿಎಲ್ ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ದಂಡದ ಮೊತ್ತವನ್ನು ಪಾವತಿಸಬೇಕೆಂದು ಹೇಳಿದೆ. ಈ ಹಣವನ್ನು ಪರಿಸರದ ಸುರಕ್ಷತೆಯ ದೃಷ್ಟಿಯಿಂದ ಬಳಸಿಕೊಳ್ಳುವಂತೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಹಸಿರು ಪೀಠ ನಿರ್ದೇಶನ ನೀಡಿದೆ.

    ಯುಪಿಸಿಎಲ್ ಪರಿಸರದ 10 ಕಿ.ಮೀ. ಪ್ರದೇಶದಲ್ಲಿ ಪರಿಸರ, ಬೆಳೆ ಹಾನಿ, ಮಣ್ಣಿನ ಫಲವತ್ತತೆಯ ಪರೀಕ್ಷೆ ಮಾಡಬೇಕು. ಈ ಪರಿಸರದ ಕುಡಿಯುವ ನೀರು ಕಪ್ಪು ವರ್ಣಕ್ಕೆ ತಿರುಗಿರುವ ಬಗ್ಗೆಯೂ ದೂರು ಕೇಳಿಬಂದಿದೆ. ಗಾಳಿಯ ಗುಣಮಟ್ಟ ಪರಿಶೀಲನೆಗಳನ್ನು ಮಾಡಬೇಕು. ಗ್ರಾಮದ ರೈತ ಹಾಗೂ ಪರಿಸರದ ಮನೆಮಂದಿಯನ್ನೂ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಯುಪಿಸಿಎಲ್ ನಿಂದಾಗಿರುವ ನಷ್ಟವನ್ನು ಅಂದಾಜಿಸಲು ಸಮಿತಿಯೊಂದನ್ನು ರಚಿಸಲು ಸೂಚಿಸಿದೆ. ಇದನ್ನೂ ಓದಿ: ಜೂನ್ 13ಕ್ಕೆ ಹಾಜರಾಗಿ – ರಾಹುಲ್‌ಗೆ ಇಡಿ ಸಮನ್ಸ್

    ಈ ಸಮಿತಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಅಥವಾ ಸಹಾಯಕ ಕಮಿಷನರ್ ಅಥವಾ ತಾಲೂಕು ದಂಡಾಧಿಕಾರಿಗಳ ಸಹಿತ ಯುಪಿಸಿಎಲ್‍ನ ಓರ್ವ ಪ್ರತಿನಿಧಿ ಇರಬಹುದು. ಉಳಿದಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಹಿರಿಯ ವಿಜ್ಞಾನಿಗಳು ಈ ವಿಶೇಷ ಸಮಿತಿಯಲ್ಲಿರುತ್ತಾರೆ. ಸಮಿತಿಯು ಅಂದಾಜಿಸುವ ಮೊತ್ತವನ್ನು ಯುಪಿಸಿಎಲ್ ಮೂಲಕ ಆಯಾಯ ರೈತರಿಗೆ, ಸಂತ್ರಸ್ತರಿಗೆ ತಲುಪುವಂತೆಯೂ ನೋಡಿ ಕೊಳ್ಳಬೇಕೆಂದು ಪೀಠವು ಆದೇಶಿಸಿದೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಹೋರಾಟಗಾರ ವಿಜಯ್ ಹೆಗ್ಡೆ, ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಕರಾವಳಿಗೆ ಮಾರಕ. ಕೃಷಿ ಜನಜೀವನ ಪರಿಸರ ನದಿ ಸಮುದ್ರ ಹೇಗೆ ಎಲ್ಲಾ ಕಡೆ ಯುಪಿಸಿಎಲ್ ಎಂಬ ಕಂಪನಿ ಜನ ವಿರೋಧಿಯಾಗಿ ನಡೆದುಕೊಂಡಿದೆ. ಕಂಪನಿ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಕೋರ್ಟ್ ವಿಧಿಸಿರುವ 52 ಕೋಟಿ ರೂಪಾಯಿ ಯಾವ ಲೆಕ್ಕಕ್ಕೂ ಇಲ್ಲ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಕಂಪನಿ ಬಂದ್ ಆಗುವತನಕ ನಾವು ವಿರಮಿಸುವುದಿಲ್ಲ ಎಂದು ಹೋರಾಟಗಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಪರಿಸರ ಮಾಲಿನ್ಯದ ದೂರು- ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಮುದ್ರೆ

    ಬಳ್ಳಾರಿ: ಭಾರೀ ಪ್ರಮಾಣದಲ್ಲಿ ಹೊಗೆ ಹೊರಸೂಸುವುದು ಹಾಗೂ ಧೂಳಿನಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು. ಹೀಗಾಗಿ ಹೆಚ್ಚು ದೂರು ಕೇಳಿ ಬರುತ್ತಿದ್ದವು. ಈ ಹಿನ್ನೆಲೆ ಎರಡು ಸ್ಪಾಂಜ್ ಐರನ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಯಿತು.

    ಜಿಲ್ಲೆಯ ಸಂಡೂರು ತಾಲೂಕಿನ ಸುಲ್ತಾನಪುರ ಗ್ರಾಮದ ಬಳಿಯಿರುವ ಪದ್ಮಾವತಿ ಸ್ಪಾಂಜ್ ಐರನ್ ಮತ್ತು ಜೆಎಸ್ ಡಬ್ಲ್ಯು ಪ್ರಾಜೆಕ್ಟ್ ಫ್ಯಾಕ್ಟರಿಗಳಿಗೆ ಬೀಗ ಜಡಿಯಲಾಗಿದೆ. ಸುಲ್ತಾನಪುರ ಗ್ರಾಮದ ಯುವಕ ಕೆ.ಎಸ್.ಜಂಬಯ್ಯ ನೀಡಿದ್ದ ದೂರಿನ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ತಂಡ ಬೀಗ ಜಡಿದಿದೆ. ಸೋಮವಾರ ಫ್ಯಾಕ್ಟರಿಗಳಿಗೆ ತೆರಳಿ ತಹಶೀಲ್ದಾರ್ ತಂಡ ಪರಿಶೀಲನೆ ನಡೆಸಿದ್ದು, ಈ ವೇಳೆ ಫ್ಯಾಕ್ಟರಿಗಳಿಂದ ಪರಿಸರ ಮಾಲಿನ್ಯ ಉಂಟಾಗುವುದು ತಿಳಿದಿದೆ. ಈ ಹಿನ್ನೆಲೆ ಎರಡೂ ಫ್ಯಾಕ್ಟರಿಗಳಿಗೆ ಬೀಗಮುದ್ರೆ ಜಡಿದಿದ್ದಾರೆ.

    ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳು ಹಾಗೂ ಸಂಡೂರು ತಹಶೀಲ್ದಾರ್ ರಶ್ಮಿ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಫ್ಯಾಕ್ಟರಿಗಳನ್ನು ಸೀಜ್ ಮಾಡಿರುವುದಕ್ಕೆ ಸುತ್ತ ಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾಲಿನ್ಯಕಾರಕ ಕಾರ್ಖಾನೆಗಳನ್ನು ಮುಚ್ಚಿಸಿರುವ ರಾಜ್ಯ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮ ನನಗೂ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಸಂತಸ ತಂದಿದೆ. ಭವಿಷ್ಯದಲ್ಲಿ ಸರ್ಕಾರ ಮಾಲಿನ್ಯಕಾರಕ ಕಾರ್ಖಾನೆಗಳನ್ನು ತೆರೆಯಲು ಅವಕಾಶ ಕೊಡಬಾರದು. ಇಂತಹ ಕಾರ್ಖಾನೆಗಳಿಂದ ಈಗಾಗಲೇ ಪರಿಸರ, ರೈತರ ಬೆಳೆಗಳು, ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ. ಈ ಬಗ್ಗೆ ಕೂಡಲೇ ತಜ್ಞರ ತಂಡ ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹಾಳಾಗಿರುವ ಪರಿಸರವನ್ನು ಮರು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸುಲ್ತಾನಪುರ ಗ್ರಾಮದ ಜನ ಆಗ್ರಹಿಸಿದ್ದಾರೆ.

  • ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ.

    ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್‍ಗಳು ಲಾರಿ ಮೂಲಕ ಬರುತ್ತಿದೆ. ಆಲೆಮನೆಗಳಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ.

    ಈ ಕುರಿತು ಎಚ್ಚೆತ್ತಿರುವ ಪೊಲೀಸರು ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಯನ್ನು ಜಿಲ್ಲೆಯ ಶ್ರೀರಂಗಪಟ್ಣದಲ್ಲಿ ಜಪ್ತಿ ಮಾಡಿದ್ದಾರೆ. ಕೇರಳದಿಂದ ತ್ಯಾಜ್ಯ ತುಂಬಿರುವ 25 ಕ್ಕೂ ಹೆಚ್ಚು ಲಾರಿಗಳು ಕರ್ನಾಟಕಕ್ಕೆ ಬಂದಿವೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಟೌನ್ ರಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

    ಲಾರಿಯಲ್ಲಿ ತಂದ ತ್ಯಾಜ್ಯವನ್ನು ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಲಾರಿ ಚಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನ ಹಳ್ಳಕ್ಕೆ ಬಿಡ್ತಿರೋ ಕಾರ್ಖಾನೆ- ಜಾನುವಾರುಗಳ ಸಾವು, ಬೆಳೆ ಹಾನಿ

    ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನ ಹಳ್ಳಕ್ಕೆ ಬಿಡ್ತಿರೋ ಕಾರ್ಖಾನೆ- ಜಾನುವಾರುಗಳ ಸಾವು, ಬೆಳೆ ಹಾನಿ

    ರಾಯಚೂರು: ಜಿಲ್ಲೆಯ ಜನರಿಗೆ ಅದ್ಯಾಕೋ ನೆಮ್ಮದಿ ಅನ್ನೋದೇ ಸಿಗುತ್ತಿಲ್ಲ. ಮಳೆ ಬರಲ್ಲ, ಅಪ್ಪಿತಪ್ಪಿ ಬಂದ್ರೆ ಪ್ರವಾಹ. ನೆಮ್ಮದಿಯಾಗಿ ಬದುಕೋಣ ಅಂದ್ರೆ ಒಳ್ಳೆಯ ಗಾಳಿ ಕೂಡ ಸಿಗುತ್ತಿಲ್ಲ. ಯಾಕಂದ್ರೆ ವಿಷ ಹೊರಹಾಕುವ ಕಂಪನಿಗಳು ಜನರ ಜೀವ ತೆಗೆಯುತ್ತಿವೆ.

    ರಾಯಚೂರು-ಹೈದರಾಬಾದ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳು ಮಾಡುವ ಪರಿಸರ ಮಾಲಿನ್ಯವನ್ನು ಪ್ರಶ್ನೆ ಮಾಡುವವರೇ ಇಲ್ಲ. ಈ ಹಿಂದೆ ಶಿಲ್ಪಾ ಫಾರ್ಮಾಸಿಟಿಕಲ್ ಫ್ಯಾಕ್ಟರಿಯ ನಿರ್ಲಕ್ಷ್ಯದ ಬಗ್ಗೆ ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ಆದರೂ ಕಾರ್ಖಾನೆಗಳ ಆಟಾಟೋಪಕ್ಕೆ ಬ್ರೇಕ್ ಬಿದ್ದಿಲ್ಲ.

    ಯರಮರಸ್ ಬಳಿಯ ಮಂಚುಕೊಂಡ ಆಗ್ರೋಟೆಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಸ್ಟೀಮ್ ಅಕ್ಕಿ ತಯಾರಿಕೆಗೆ ಬಳಸಿದ ರಾಸಾಯನಿಕ ನೀರನ್ನು ನೇರವಾಗಿ ಚಿಕ್ಕಸುಗೂರು ಹಳ್ಳಕ್ಕೆ ಬಿಡುತ್ತಿದೆ. ವಿಷದ ನೀರನ್ನು ಕುಡಿಯುವ ಎತ್ತು, ಎಮ್ಮೆ, ಕುರಿಗಳು ಸಾವನ್ನಪ್ಪುತ್ತಿವೆ. ಸುತ್ತಮುತ್ತಲಿನ ಜನರು ನಾನಾ ಚರ್ಮ ರೋಗಕ್ಕೆ ತುತ್ತಾಗಿದ್ದಾರೆ. ವಿಷದ ನೀರಿಗೆ ರೈತರು ಬೆಳೆದ ಹತ್ತಿ, ಮೆಣಸಿನಕಾಯಿ ಬೆಳೆ ಬಾಡಿ ಹೋಗಿವೆ.

    ಕಾರ್ಖಾನೆಗಳ ವಿರುದ್ಧ ಗ್ರಾಮಸ್ಥರು ಎಷ್ಟೇ ಹೋರಾಟ ಮಾಡಿದರೂ ಯಾರೊಬ್ಬರೂ ತಲೆ ಕೆಡಿಸಿಕೊಂಡಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ. ಈ ಬಗ್ಗೆ ಶಾಸಕರನ್ನು ಪ್ರಶ್ನಿಸಿದರೆ ಅವರು ತೇಪೆ ಹಚ್ಚುವ ಸ್ಟೇಟ್‍ಮೆಂಟ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಕಾರ್ಖಾನೆಗಳಿಂದಾಗಿ ರಾಯಚೂರಿನ ಜನರಿಗೆ ಶುದ್ಧ ನೀರು, ಶುದ್ಧ ಗಾಳಿ ಅನ್ನೋದು ಮರೀಚಿಕೆಯಾಗಿದೆ.