Tag: Entry

  • ಆಕಾಶದಿಂದ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ-ವಧು: ವಿಡಿಯೋ ವೈರಲ್

    ಆಕಾಶದಿಂದ ಮದುವೆ ಮನೆಗೆ ಎಂಟ್ರಿ ಕೊಟ್ಟ ವರ-ವಧು: ವಿಡಿಯೋ ವೈರಲ್

    ನವದೆಹಲಿ: ವಧು- ವರ ತಮ್ಮ ಮದುವೆಯಲ್ಲಿ ಹದ್ದಿನ ಪಂಜರ(ಈಗಲ್ ಕೇಜ್) ನಲ್ಲಿ ಆಕಾಶದಿಂದ ಎಂಟ್ರಿ ಕೊಟ್ಟ ಅಪರೂಪದ ಘಟನೆಯೊಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

    ವರ ಕುದುರೆ ಸವಾರಿ ಮಾಡುವ ಮೂಲಕ ಮದುವೆ ಮನೆಗೆ ಎಂಟ್ರಿ ಕೊಡುತ್ತಾನೆ. ಆದರೆ ಈ ನವದಂಪತಿ ಆಕಾಶದಿಂದ ಹದ್ದಿನ ಪಂಜರಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈ ಜೋಡಿ ಎಂಟ್ರಿ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ತಮ್ಮ ಮದುವೆಯಲ್ಲಿ ವಿಶಿಷ್ಟ ಎಂಟ್ರಿ ಇರಲಿ ಎಂದು ಈ ಜೋಡಿ ಹದ್ದಿನ ಪಂಜರದಲ್ಲಿ ಮೇಲಿಂದ ಕೆಳಗೆ ಬರುತ್ತಿರುವಾಗ ಖ್ಯಾತ ಗಾಯಕ ಮೊಹಮದ್ ರಫಿ ಅವರ ‘ಬಾಹಾರೋ ಪೂಲ್ ಬರಸಾವೋ’ ಹಾಡನ್ನು ಬ್ಯಾಕ್‍ಗ್ರೌಂಡ್ ಹಾಡಾಗಿ ನೀಡಿದ್ದರು. ನವಜೋಡಿ ಮದುವೆ ಮನೆ ತಲುಪುತ್ತಿದ್ದಂತೆ ಪಂಜರಕ್ಕೆ ಹಾಕಿದ ಪಟಾಕಿಗಳು ಸಿಡಿಯಲು ಆರಂಭಿಸಿತ್ತು.

    ಈ ವಿಡಿಯೋವನ್ನು ವ್ಯಕ್ತಿಯೊಬ್ಬರು ಟ್ವಿಟ್ಟರಿನಲ್ಲಿ ಶೇರ್ ಮಾಡಿ “ಇದು ಪಕ್ಷಿ, ಇದು ವಿಮಾನ, ಇದು ವಧು-ವರ. ಭಾರತೀಯ ಮದುವೆ ಹದ್ದು ಮೀರುತ್ತಿದೆ” ಎಂದು ಕ್ಯಾಪ್ಷನ್ ನೀಡಿ ಟ್ವೀಟ್ ಮಾಡಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ರಾಜಕೀಯ ಪ್ರವೇಶದ ಬಗ್ಗೆ ಖಡಕ್ ಉತ್ತರ ನೀಡಿದ ರಾಜಮಾತೆ ಪ್ರಮೋದಾದೇವಿ!

    ಮೈಸೂರು: ಯದುವಂಶದ ಪ್ರಮೋದಾದೇವಿ ಒಡೆಯರ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸ್ವತಃ ಪ್ರಮೋದಾದೇವಿ ಒಡೆಯರ್ ಅವರೇ ಇಂದು ತೆರೆ ಎಳೆದಿದ್ದಾರೆ.

    ಮೈಸೂರಿನ ಅರಮನೆಯಲ್ಲಿ ಎಂದು ಸುದ್ದಿಗೋಷ್ಠಿ ನಡೆಸಿ ರಾಜಕೀಯದ ಬಗ್ಗೆ ಸ್ಪಷ್ಟನೆ ನೀಡಿದರು. ನನಗೆ ರಾಜಕಾರಣ ಬಗ್ಗೆ ಆಸಕ್ತಿ ಇಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಮ್ಮನ್ನು ಭೇಟಿಯಾಗಿದ್ದರಲ್ಲಿ ಯಾವುದೇ ವಿಶೇಷ ಇಲ್ಲ. ಈ ಹಿಂದೆ ತುಂಬಾ ಜನ ರಾಜಕಾರಣಿಗಳು ಅರಮನೆಗೆ ಬಂದಿದ್ದಾರೆ. ಆಗ ಮಾಧ್ಯಮಗಳು ಹೆಚ್ಚು ಇರಲಿಲ್ಲ. ಇದೀಗ ಮಾಧ್ಯಮಗಳು ಹೆಚ್ಚಾಗಿದ್ದರಿಂದ ವಿಷಯ ದೊಡ್ಡದಾಗಿದೆ ಅಷ್ಟೇ ಎಂದು ಪ್ರಮೋದಾದೇವಿ ತಿಳಿಸಿದರು.

    ಅಮೀತ್ ಶಾ ಭೇಟಿ ಸೌಜನ್ಯದ ಭೇಟಿ ಎಂದು ಸ್ಪಷ್ಟಪಡಿಸಿದರು. ಅವರು ರಾಜ್ಯಸಭಾ ಸ್ಥಾನದ ಆಫರ್ ಕೊಟ್ಟಿಲ್ಲ. ಹಾಗೇನಾದ್ದರು ಕೊಟ್ಟರೆ ತಕ್ಷಣ ನಿಮ್ಮನ್ನ ಕರೆದು ಹೇಳುತ್ತೇನೆ. ನನಗೆ ಖಂಡಿತವಾಗಲೂ ರಾಜಕೀಯ ಮತ್ತು ಚುನಾವಣೆಯಲ್ಲಿ ಆಸಕ್ತಿ ಇಲ್ಲ. ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ. ಯಾರ ಪರವಾಗಿಯೂ ಪ್ರಚಾರ ಮಾಡುವುದಿಲ್ಲ. ಕೇವಲ ಜನರ ಪರವಾಗಿ ಕೆಲಸ ಮಾಡುತ್ತೇವೆ ಅಷ್ಟೇ ಎಂದು ಹೇಳಿದರು.

    ನನ್ನ ಮಗ ಯದುವೀರ್‍ಗೆ ರಾಜಕೀಯ ಇಷ್ಟವಿದ್ದರೆ ಹೋಗಬಹುದು. ಅವರು ಅದಕ್ಕೆ ನನ್ನ ಅನುಮತಿ ಪಡೆಯುವ ಅಗತ್ಯವಿಲ್ಲ. ಅವರಿಗೆ ಏನು ಇಷ್ಟ ಅದನ್ನು ಮಾಡಬಹುದು. ನನ್ನ ಸಮ್ಮತಿ ಕೇಳಿ ಅವರು ರಾಜಕೀಯಕ್ಕೆ ಬರಬೇಕಿಲ್ಲ. ಆದರೆ ಯದುವೀರ್ ತಮಗೆ ರಾಜಕೀಯ ಇಷ್ಟವಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರರೂ ಎಂದು ಕೂಡ ಸ್ಪಷ್ಟಪಡಿಸಿದರು.

    ಇದೇ ವೇಳೆ ಪ್ರಮೋದಾ ದೇವಿ ಒಡೆಯರ್ ನಾ ರಾಜಕೀಯಕ್ಕೆ ಬರಬೇಕಾ ಬೇಡವಾ ನೀವೇ ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿ, ಈಗ ನಮ್ಮ ಕೆಲ ವಿಚಾರಗಳನ್ನು ಮಾಧ್ಯಮಗಳಲ್ಲೇ ತಿಳಿದುಕೊಳ್ಳುವಂತಾಗಿದೆ. ಹಾಗಾಗಿ ನೀವೇ ಹೇಳಿ ನಾ ರಾಜಕೀಯಕ್ಕೆ ಬರಬೇಕೇ? ಬೇಡವೇ ಎಂದು ಅವರು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.

  • ಸೌದಿ ಅರೇಬಿಯಾದಲ್ಲಿ ಬದಲಾವಣೆ ಗಾಳಿ- ವಾಹನ ಚಲಾವಣೆ ಪರವಾನಗಿ ಬಳಿಕ ಮಹಿಳೆಯರಿಗೆ ಕ್ರೀಡಾಂಗಣ ಪ್ರವೇಶ

    ಸೌದಿ ಅರೇಬಿಯಾದಲ್ಲಿ ಬದಲಾವಣೆ ಗಾಳಿ- ವಾಹನ ಚಲಾವಣೆ ಪರವಾನಗಿ ಬಳಿಕ ಮಹಿಳೆಯರಿಗೆ ಕ್ರೀಡಾಂಗಣ ಪ್ರವೇಶ

    ರಿಯಾದ್: ಕ್ರೀಡಾಂಗಣಕ್ಕೆ ಮಹಿಳೆಯರಿಗೆ ಪ್ರವೇಶ ನೀಡುವ ಕುರಿತು ಈ ಹಿಂದೆ ಮಾಹಿತಿ ನೀಡಿದ್ದ ಸೌದಿ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡಿದೆ.

    ಕ್ರೀಡಾಂಗಣದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕವಾದ ಆಸನ ವ್ಯವಸ್ಥೆ ಮಾಡಲಾಗಿದ್ದು, ಹಲವು ಮಹಿಳೆಯರು ಕುಟುಂಬ ಸಮೇತರಾಗಿ ಕುಳಿತು ಫುಟ್ ಬಾಲ್ ವಿಕ್ಷೀಸಿದರು.

    ಮಹಿಳೆಯರಿಗೆ ಅತ್ಯಂತ ಹೆಚ್ಚು ಕಟ್ಟುಪಾಡುಗಳನ್ನು ವಿಧಿಸಿದ್ದ ದೇಶ ಎಂದೇ ಕರೆಸಿಕೊಂಡಿದ್ದ ಸೌದಿ ಅರೇಬಿಯಾ, ಕ್ರೀಡಾ ಕ್ಷೇತ್ರದಿಂದ ಮಹಿಳೆಯರನ್ನು ದೂರವೇ ಇಟ್ಟಿತ್ತು. ಆದರೆ ಇದೀಗ ಮಹಿಳೆಯರಿಗೆ ಕ್ರೀಡಾಂಗಣಕ್ಕೆ ಪ್ರವೇಶ ನೀಡುವ ಐತಿಹಾಸಿಕ ನಿರ್ಧಾರದಿಂದ ಸೌದಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.

    ಸೌದಿಯ ರಿಯಾದ್, ಜೆದ್ದಾ, ದಮ್ಮಮ್‍ನ ಮೂರು ಕ್ರೀಡಾಂಗಣಗಳಲ್ಲಿ ಕುಟುಂಬ ಸಮೇತರಾಗಿ ಬರುವವರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರಿಗಾಗಿಯೇ ಪ್ರತ್ಯೇಕ ರೆಸ್ಟೋರೆಂಟ್, ಕೆಫೆ ಮತ್ತು ವಿಡಿಯೋ ಪರದೆಗಳು, ಪ್ರವೇಶದ್ವಾರ, ಪಾರ್ಕಿಂಗ್ ಗೆ ಸ್ಥಳವನ್ನು ಮೀಸಲಿಡಲಾಗಿತ್ತು. ಪುರುಷರು ಕುಳಿತುಕೊಳ್ಳುವ ಆಸನಗಳು, ಮಹಿಳಾ ಅಭಿಮಾನಿಗಳ ಆಸನ ನಡುವೆ ಗ್ಲಾಸ್ ಪ್ಯಾಲನ್ ಅಳವಡಿಸಲಾಗಿತ್ತು.

    ಈ ಕುರಿತು ಘಾಬ್ಡಿ ಎಂಬ ಯುವತಿ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತಾನು ತನ್ನ ತಂದೆ ಹಾಗೂ ಸಹೋದರರೊಂದಿಗೆ ಬಂದಿದ್ದೇನೆ. ತಾನು ಆಲ್ ಆಲಿ ತಂಡದ ಅಭಿಮಾನಿ. ಇಷ್ಟು ದಿನ ನಾವು ಮನೆಯಿಂದಲೇ ಅವರಿಗೆ ಬೆಂಬಲ ನೀಡುತ್ತಿದ್ದೇವು, ಆದರೆ ಇಂದು ಕ್ರೀಡಾಂಗಣದಲ್ಲಿ ಬೆಂಬಲ ನೀಡುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

    ಕಳೆದ ಜೂನ್ ನಲ್ಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಸರ್ಕಾರ ಮಹಿಳೆಯರಿಗೆ ಕಾರು ಚಾಲನೆಗೆ ಪರವಾನಗಿ ನೀಡಿತ್ತು.

  • ಕಾಲಿವುಡ್, ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ನೀನಾಸಂ ಸತೀಶ್

    ಕಾಲಿವುಡ್, ಬಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ ನೀನಾಸಂ ಸತೀಶ್

    ಬೆಂಗಳೂರು: ಬ್ಯೂಟಿಫುಲ್ ಮನಸ್ಸುಗಳು ಚಿತ್ರದ ಯಶಸ್ಸಿನ ನಂತರ ಸತೀಶ್ ಕೆಲವು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಸಾಲುಸಾಲಾಗಿ ಅವರ ಚಿತ್ರ ಸೆಟ್ಟರಲಿದೆ. ಇದರ ನಡುವೆ ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಡಲಿದ್ದಾರೆ.

    ಸತೀಶ್ ನಟಿಸುತ್ತಿರುವ ಆಕ್ಷನ್ ಚಿತ್ರ ‘ಟೈಗರ್ ಗಲ್ಲಿ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅಯೋಗ್ಯ ಮತ್ತು ಗೋದ್ರ ಚಿತ್ರಗಳು ಸೆಟ್ಟೀರಿವೆ. ಇದರ ಮಧ್ಯೆ ನೀನಾಸಂ ಸತೀಶ್ ಕಾಲಿವುಡ್‍ಗೆ ಎಂಟ್ರಿ ಕೊಡುವ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ 2018ರಲ್ಲಿ ಬಾಲಿವುಡ್‍ಗೂ ಎಂಟ್ರಿ ಕೊಡಲಿದ್ದಾರೆ.

    ಸತೀಶ್ ಕಾಲಿವುಡ್‍ನಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. ಆದರೆ ಚಿತ್ರದ ನಿರ್ದೇಶಕರು ಯಾರು ಮತ್ತು ಯಾವ ಕಲಾವಿದರು ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬುದನ್ನು ಗುಟ್ಟಾಗಿಯೇ ಇಟ್ಟಿದ್ದಾರೆ. ಅಕ್ಟೋಬರ್ ಮೂರನೇ ವಾರದಲ್ಲಿ ಸತೀಶ್ ಅವರ ತಮಿಳು ಚಿತ್ರದ ಫಸ್ಟ್ ಲುಕ್ ಹೊರ ಬೀಳಲಿದ್ದು, ನವೆಂಬರ್ ಮೊದಲ ವಾರದಲ್ಲಿ ಶೂಟಿಂಗ್ ಶುರುವಾಗಲಿದೆ.

    ತಮಿಳು ಚಿತ್ರದ ಟೈಟಲ್ ಇನ್ನೂ ಅಂತಿಮಗೊಂಡಿಲ್ಲ. ಸೋಮವಾರ ಚೆನ್ನೈಗೆ ಹೋಗುತ್ತಿದ್ದೇನೆ. ಶೀಘ್ರದಲ್ಲೇ ಎಲ್ಲವೂ ಫೈನಲ್ ಆಗಲಿದೆ ಹಾಗೂ ಈ ಚಿತ್ರವು ದೊಡ್ಡ ಬ್ಯಾನರ್‍ವೊಂದರಲ್ಲಿ ಸಿದ್ಧವಾಗಲಿದೆ. ಸದ್ಯ ಈ ಬಗ್ಗೆ ಹೆಚ್ಚೇನೂ ಮಾಹಿತಿ ನೀಡುವಂತಿಲ್ಲ ಎಂದು ನೀನಾಸಂ ಹೇಳಿದ್ದಾರೆ.

    ಈ ಚಿತ್ರ ಕನ್ನಡ ಹಾಗೂ ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ಈ ಚಿತ್ರ ಮೂಡಿ ಬರುವುದಿಲ್ಲ. ತಮಿಳಿನಲ್ಲಷ್ಟೇ ಸಿದ್ಧವಾಗಲಿದ್ದು ಸತೀಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಉಳಿದ ಪಾತ್ರಗಳ ಆಯ್ಕೆ ನಡೆಯುತಿದೆ. ಸತೀಶ್ ತಮ್ಮ ಫಸ್ಟ್ ಲುಕ್‍ಗಾಗಿ ಇನ್ನಷ್ಟು ಗಡ್ಡ ಬೆಳೆಸಬೇಕಿದೆ. ನಂತರ ಅದ್ಧೂರಿ ಕಾರ್ಯಕ್ರಮದ ಮೂಲಕವೇ ಫಸ್ಟ್ ಲುಕ್ ಲಾಂಚ್ ಮಾಡುವ ಪ್ಲಾನ್ ಚಿತ್ರತಂಡ ಮಾಡುತ್ತಿದೆ.