Tag: Entrepreneurs

  • ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಶಾಕ್‌ – ಬೆಂಗಳೂರಿನ 30 ಕಡೆ ದಾಳಿ

    ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಶಾಕ್‌ – ಬೆಂಗಳೂರಿನ 30 ಕಡೆ ದಾಳಿ

    ಬೆಂಗಳೂರು: ಬೆಂಗಳೂರಿನ (Bengaluru) ಉದ್ಯಮಿಗಳಿಗೆ ಬುಧವಾರ ಬೆಳ್ಳಂಬೆಳಗ್ಗೆ ಐಟಿ ಶಾಕ್‌ ನೀಡಿದೆ. ನಗರದ 30 ಕಡೆಗಳಲ್ಲಿ ದಾಳಿ ನಡೆಸಿರುವ ಐಟಿ (IT Raid) ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಚಿನ್ನದ ಅಂಗಡಿಗಳು, ಮೆಡಿಕಲ್‌ ಶಾಪ್‌ಗಳು, ಆಸ್ಪತ್ರೆಗಳ ಮಾಲೀಕರ ಮನೆ ಹಾಗೂ ಉದ್ಯಮಿಗಳ ಸಂಸ್ಥೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚರಾಸ್ತಿ ಹಾಗೂ ಸ್ಥಿರಾಸ್ತಿ ವರಮಾನದ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ, ಉತ್ತರ ಕನ್ನಡ, ಬೆಳಗಾವಿ ಅರಣ್ಯದಲ್ಲಿ ತರಬೇತಿ: ಉಗ್ರರಿಂದ ಸ್ಫೋಟಕ ಮಾಹಿತಿ

    ವಿಜಯನಗರ, ಬಿಟಿಎಂ ಲೇಔಟ್, ಸದಾಶಿವನಗರ, ಹುಳಿಮಾವು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಒಂದೊಂದು ತಂಡದಲ್ಲಿ 5 ರಿಂದ 6 ಮಂದಿ ಅಧಿಕಾರಿಗಳಿದ್ದಾರೆ.

    ತೆರಿಗೆ ವಂಚನೆ ಆರೋಪದಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಕಾವೇರಿ ಥಿಯೇಟರ್ ಬಳಿಯಿರುವ ಚಿನ್ನದ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಾಂತಿನಗರದಲ್ಲಿರುವ ಉದ್ಯಮಿಯೊಬ್ಬರ ಮನೆ ಮೇಲೂ ರೇಡ್‌ ನಡೆದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಬ್ಬರು ಉದ್ಯಮಿಗಳ 40.22 ಕೋಟಿ ರೂ. ಆಸ್ತಿ ಜಪ್ತಿಗೆ ED ಅದೇಶ

    ಇಬ್ಬರು ಉದ್ಯಮಿಗಳ 40.22 ಕೋಟಿ ರೂ. ಆಸ್ತಿ ಜಪ್ತಿಗೆ ED ಅದೇಶ

    ಹುಬ್ಬಳ್ಳಿ: ವಂಚನೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯವು ಆರೋಪಿಗಳ ಆಸ್ತಿ ಜಪ್ತಿ ಮಾಡಿದೆ. ಇಡಿ (ED) ಯಿಂದ ಇಬ್ಬರು ಉದ್ಯಮಿಗಳ 40.22 ಕೋಟಿ ಆಸ್ತಿ ಜಪ್ತಿಗೆ ಅದೇಶಿಸಲಾಗಿದೆ. ಶೀತಲ್ ಕುಮಾರ್, ಜಿನೇಂದ್ರ ಮಗ್ದುಮ್ ಅವರಿಗೆ ಸೇರಿದ ಆಸ್ತಿ ಜಪ್ತಿ ಮಾಡಲಾಗಿದೆ. ಈ ಇಬ್ಬರು ಉದ್ಯಮಿ ಸಂಜಯ್ ಘೋಡಾವತ್‌ಗೆ ವಂಚಿಸಿದ್ದ ಆರೋಪವಿತ್ತು.

    ಸ್ಟಾರ್ ಏರ್‌ಲೈನ್ಸ್ ಮಾಲೀಕ ಸಂಜಯ್ ಘೋಡಾವತ್ ಜೊತೆ ಆರೋಪಿಗಳು ಸ್ನೇಹ ಬೆಳೆಸಿದ್ದರು. ರಿಯಲ್ ಎಸ್ಟೇಟ್ ಉದ್ಯಮದ ಹೆಸರಲ್ಲಿ ವಂಚಿಸಿದ್ದರು. ಬೇರೊಬ್ಬರ 525 ಕೋಟಿ ರೂ. ಹಣವನ್ನು ತಮ್ಮ ವೈಯಕ್ತಿಕ ಖಾತೆ ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಉದ್ಯಮಿ ಸಂಜಯ್ ದನ್ ಚೆಂದ್ ಘೋಡಾವತ್ ವಂಚನೆ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಉಡುಪಿ ವೀಡಿಯೋ ಪ್ರಕರಣ – SITಗೆ ವಹಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ

    ಹುಬ್ಬಳ್ಳಿಯ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಘೋಡಾವತ್ ದೂರು ದಾಖಲಿಸಿದ್ದರು. ಬಹು ಕೋಟಿ ವಂಚನೆ ಪ್ರಕರಣವಾಗಿದ್ದರಿಂದ ಹುಬ್ಬಳ್ಳಿ ಪೊಲೀಸರು ED ಗೆ ಪ್ರಕರಣ ಹಸ್ತಾಂತರ ಮಾಡಿದ್ರು. ED ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ತನಿಖೆ ನಡೆಸುತ್ತಿದೆ.

    ಇದೀಗ ಇಬ್ಬರು ಆರೋಪಿಗಳಿಗೆ ಸೇರಿದ ಆಸ್ತಿ ಜಪ್ತಿ ಮಾಡಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯದಲ್ಲಿನ ಮನೆ, ಅಪಾರ್ಟ್ಮೆಂಟ್, ವಿಂಡ್ ಮಿಲ್ ಸೇರಿದಂತೆ 12 ಆಸ್ತಿಗಳನ್ನು ಇಡಿ ಜಪ್ತಿ ಮಾಡಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ನಿಯಮ ಉಲ್ಲಂಘಿಸಿದವರಿಗೆ ಬಿತ್ತು ದಂಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು – ಸಿ.ಎನ್.ಅಶ್ವಥ್ ನಾರಾಯಣ ಕರೆ

    ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಬೇಕು – ಸಿ.ಎನ್.ಅಶ್ವಥ್ ನಾರಾಯಣ ಕರೆ

    ಬೆಂಗಳೂರು: ಒಕ್ಕಲು ಮಕ್ಕಳು ಒಕ್ಕಲುತನ ಮೀರಿ ಉದ್ಯಮಿಗಳಾಗಲು ಶ್ರಮಿಸಿದರೆ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ. ಮಣ್ಣಿನ ಮಕ್ಕಳು ಸ್ವತಃ ಶ್ರಮಜೀವಿಗಳು, ಉದ್ಯಮಶೀಲತೆಯ ಸ್ಫೂರ್ತಿ ಹೊಂದಿರುವವರು ಎಂದು ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ (Ashwath Narayan) ಹೇಳಿದರು.

    ಪ್ರಾದೇಶಿಕ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ರಚಿಸಲಾದ ವೇದಿಕೆ “ಫರ್ಸ್ಟ್ ಸರ್ಕಲ್” (First Circle) ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಬಿಸಿನೆಸ್ ನೆಟ್‌ವರ್ಕಿಂಗ್ ಎಕ್ಸ್‌ಪೋ ಹಾಗೂ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಇದನ್ನೂ ಓದಿ: ಮೈಸೂರಿನಲ್ಲಿ ಬೇಕಾಬಿಟ್ಟಿ ಮನೆ ಬಾಡಿಗೆ ಕೊಡುವಂತಿಲ್ಲ – ಪೊಲೀಸ್ ಕ್ಲಿಯರೆನ್ಸ್ ಕಡ್ಡಾಯ

    ಕರ್ನಾಟಕದ ಬೆಂಗಳೂರು ಇಡೀ ವಿಶ್ವಕ್ಕೆ ಆವಿಷ್ಕಾರದ ನಾಡು ಎನಿಸಿದೆ. ಎಲ್ಲಾ ಕ್ಷೇತ್ರದಲ್ಲೂ ಬೆಂಗಳೂರು ವಿಶ್ವಕ್ಕೆ ಮಾದರಿಯಾಗಿದೆ. ಇಂತಹ ಪುಣ್ಯಭೂಮಿ, ಭರವಸೆಯ ನಾಡಿನಲ್ಲಿ ನಾವು ಇದ್ದೇವೆ. ಇಂತಹ ಅವಕಾಶಗಳ ನಾಡಿನ ಶಕ್ತಿಯನ್ನು ಅರಿಯಬೇಕು. ಉದ್ಯಮಿಗಳಾಗಿ ಯಶಸ್ಸು ಗಳಿಸಿದ ನಂತರ ಅದನ್ನು ಸಮಾಜಕ್ಕೆ ವಾಪಸ್ ಕೊಡಬೇಕು. ಹೊಸ ಐಡಿಯಾಗಳನ್ನು ಹೊಂದಿರುವ ಉದ್ಯಮಿಗಳನ್ನು ಸದಾ ನಾನು ಬೆಂಬಲಿಸುತ್ತೇನೆ. ನನ್ನ ಕರ್ತವ್ಯವೇ ಅವರನ್ನು ಸನ್ನದ್ಧರನ್ನಾಗಿಸುವುದು, ಅವರಿಗೆ ಸೌಲಭ್ಯ ಒದಗಿಸುವುದು. ನಮ್ಮ ಜೊತೆಯಲ್ಲಿರುವ ನೂರಾರು ಮಂದಿ ಇಂದು ಉದ್ಯಮಿಗಳಾಗಿದ್ದಾರೆ. ಅವರ ಪ್ರಯತ್ನಕ್ಕೆ ನಮ್ಮ ಬೆಂಬಲವಷ್ಟೇ. ನಾವು ಉದ್ಯಮಿಗಳಾಗಲು ಬಯಸುವ ಎಲ್ಲರಿಗೂ ಬೆಂಬಲ, ಸಹಕಾರ ನೀಡುತ್ತೇವೆ ಎಂದರು.

    ಬಿಬಿಎಂಪಿ ವಿಶೇಷ ಆಯುಕ್ತ ಜೈರಾಮ್ ರಾಯ್ಪುರ, ಬೆಂಗಳೂರಿನಲ್ಲಿ ಪ್ರಾರಂಭಗೊಂಡ ಈ ಫರ್ಸ್ಟ್‌ ಸರ್ಕಲ್ ಇನ್ನೂ 25 ಜಿಲ್ಲೆಗಳಿಗೆ ವಿಸ್ತರಿಸಲಿದೆ. ಕ್ರಮೇಣ ದೇಶದ ವಿವಿಧ ರಾಜ್ಯಗಳಿಗೆ ವಿಸ್ತರಿಸಲಿದೆ. ಇನ್ನೂ 250ಕ್ಕೂ ಹೆಚ್ಚು ಉದ್ಯಮಿಗಳು ಇದರ ವ್ಯಾಪ್ತಿಗೆ ಸೇರಿಕೊಳ್ಳಲಿದ್ದಾರೆ. ಇದು ಆಂತರಿಕ ಅರ್ಥ ವ್ಯವಸ್ಥೆ ಸುಧಾರಣೆಗೆ ನೆರವಾಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಾಣಂತಿ ಡಿಸ್ಚಾರ್ಜ್ ಮಾಡಲು ಲಂಚಕ್ಕೆ ಬೇಡಿಕೆ – ಇಬ್ಬರು ವೈದ್ಯ ಸಿಬ್ಬಂದಿ ಅಮಾನತು

    ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ಬಿ.ಎನ್.ಬಚ್ಚೇಗೌಡ, ಫ್ರೀಡಂ ಆಪ್ ಸಂಸ್ಥಾಪಕ ಸುಧೀರ್, ಕರ್ನಾಟಕ ಗ್ಯಾಸ್ಟ್ರೊ ಎಂಟರಾಲಜಿ ಇನ್‌ಸ್ಟಿಟ್ಯೂಟ್ ಸಂಸ್ಥಾಪಕ ನಿರ್ದೇಶಕ ಡಾ.ನಾಗೇಶ್, ಫರ್ಸ್ಟ್ ಸರ್ಕಲ್ ಸದಸ್ಯರಾದ ಮನೋಹರ್ ಗೌಡ, ನಂದೀಶ್, ಇಂದ್ರೇಶ್, ಫಿಡೆಲಿಟಸ್ ಸಂಸ್ಥಾಪಕ, ಉದ್ಯಮಿ ಅಚ್ಚುತ್ ಗೌಡ ಮುಂತಾದವರು ಉಪಸ್ಥಿತರಿದ್ದರು.

    ಫರ್ಸ್ಟ್‌ ಸರ್ಕಲ್ ಸಂಸ್ಥೆಯು ಪ್ರಾದೇಶಿಕ ಸಮುದಾಯದ ಏಳಿಗೆಗಾಗಿ ಕೊಡುಗೆ ನೀಡಲು ಸಿದ್ಧರಿರುವ ವೃತ್ತಿಪರರು, ಸ್ವಯಂ ಉದ್ಯೋಗಿಗಳು ಹಾಗೂ ವ್ಯಾಪಾರಸ್ಥರನ್ನು ಒಳಗೊಂಡಿದೆ. ಜಾಗತಿಕ ನೆಟ್‌ವರ್ಕಿಂಗ್ ಮೂಲಕ ಉದ್ದಿಮೆಗಳನ್ನು ಬೆಳೆಸಲು ಫರ್ಸ್ಟ್‌ ಸರ್ಕಲ್ ಸಹಾಯ ಮಾಡುತ್ತಿದೆ. ಬಹಳ ಅಲ್ಪ ಕಾಲದಲ್ಲಿ ಸಂಸ್ಥೆಯು ರಾಜ್ಯಾದ್ಯಂತ ವಿಸ್ತರಿಸುತ್ತಿದೆ. ಆದಾಗ್ಯೂ ಬೆಂಗಳೂರು ನಗರಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಕ್ರಮೇಣ ಕರ್ನಾಟಕದ ಎಲ್ಲಾ ನಗರಗಳಿಗೂ ವಿಸ್ತರಿಸಲಿದೆ. ಇದನ್ನೂ ಓದಿ: BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

    ಪ್ರಸ್ತುತ ಫರ್ಸ್ಟ್‌ ಸರ್ಕಲ್ ಸಂಸ್ಥೆಯು 6 ವಲಯಗಳಲ್ಲಿ 150 ಸದಸ್ಯರು ಹಾಗೂ 500+ ಸದಸ್ಯರನ್ನು ಒಳಗೊಂಡಿದ್ದು, ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ 57 ಕೋಟಿ ರೂ. ವ್ಯವಹಾರ ನಡೆಸಲಾಗಿದೆ. ಫಸ್ಟ್ ಸರ್ಕಲ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಾವಿರಾರು ಸಂಭಾವ್ಯ ಗ್ರಾಹಕರೊಂದಿಗಿರುವ ಹಲವು ವಲಯಗಳ ಹೂಡಿಕೆದಾರರು, ಉದ್ಯಮಿಗಳು, ವಾಣಿಜ್ಯೋದ್ಯಮಿಗಳು, ಯಶಸ್ವಿ ವೃತ್ತಿಪರರು, ಅಧಿಕಾರಿಗಳು ಮಾತ್ರವಲ್ಲದೆ ದೇಶಾದ್ಯಂತ ಇರುವ ನವನವೀನ ಸ್ಟಾರ್ಟ್ ಅಪ್‌ಗಳು, ವ್ಯಾಪಾರೀ ಸಂಸ್ಥೆಗಳು ಮತ್ತು ಉದ್ಯಮಿಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಭಾರತದ ಅತ್ಯಂತ ದೊಡ್ಡ ಬೃಹತ್ ಬಿಸಿನೆಸ್ ಎಕ್ಸ್ ಪೋದಲ್ಲಿ ಪ್ರಪಂಚದ ವಿವಿಧ ಭಾಗಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಅರಮನೆ ಮೈದಾನದ 6ನೇ ದ್ವಾರದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜೈ ಜವಾನ್, ಜೈ ಕಿಸಾನ್ ಜತೆ ‘ಜೈ ಅನ್ವೇಷಕ’ವೂ ಸೇರಬೇಕು: ಡಾ.ಅಶ್ವತ್ಥನಾರಾಯಣ

    ಜೈ ಜವಾನ್, ಜೈ ಕಿಸಾನ್ ಜತೆ ‘ಜೈ ಅನ್ವೇಷಕ’ವೂ ಸೇರಬೇಕು: ಡಾ.ಅಶ್ವತ್ಥನಾರಾಯಣ

    ಬೆಂಗಳೂರು: ಭವಿಷ್ಯದಲ್ಲಿ ಭಾರತ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವಲ್ಲಿ ಅನ್ವೇಷಕರು (ಇನ್ನೋವೇಟರ್ಸ್), ಉದ್ಯಮಿಗಳ ಪಾತ್ರ ಮಹತ್ವದ್ದು ಎಂದಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ, ಮುಂದಿನ ದಿನಗಳಲ್ಲಿ ಜೈ ಜವಾನ್, ಜೈ ಕಿಸಾನ್ ಜತೆ ‘ಜೈ ಅನ್ವೇಷಕ’ವೂ ಸೇರಬೇಕು ಎಂದು ಹೇಳಿದ್ದಾರೆ.

    ನಗರದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ಮಂಗಳವಾರ ಆಯೋಜಿಸಿದ್ದ ಎಲಿವೇಟ್ ಕಾಲ್-2, ಉನ್ನತಿ ಕಾರ್ಯಕ್ರಮದಲ್ಲಿ ಅಶ್ವತ್ಥ ನಾರಾಯಣ ಭಾಗವಹಿಸಿದ್ದರು. ಈ ವೇಳೆ ನಾವೀನ್ಯತೆಯುಳ್ಳ ವಾಣಿಜ್ಯೋದ್ಯಮಿಗಳಿಗೆ 50 ಲಕ್ಷ ರೂ.ವರೆಗೆ ಅನುದಾನ ಬೆಂಬಲ ನೀಡುವುದೇ ಎಲಿವೇಟ್, ಉನ್ನತಿ ಕಾರ್ಯಕ್ರಮವಾಗಿದ್ದು, ಸಮಾರಂಭದಲ್ಲಿ 113 ಸ್ಟಾರ್ಟ್‍ಅಪ್‍ಗಳನ್ನು ವಿಜೇತರನ್ನಾಗಿ ಘೋಷಿಸಲಾಗಿದೆ.

    ಭಾರತ ಸೂಪರ್ ಪವರ್ ಆಗುವುದೆಂಬ ವಿಶ್ವಾಸ ಮೂಡಿರುವುದೇ ಅನ್ವೇಷಕರು, ಉದ್ಯಮಿಗಳಿಂದ. ಇವರಿಲ್ಲದೇ ಭವಿಷ್ಯ ಇಲ್ಲ. ಅದಕ್ಕಾಗಿಯೇ ‘ಜೈ ಇನ್ನೋವೇಟರ್ಸ್’ ಎಂದೂ ಹೇಳಬೇಕು. ಸಮಾಜದಲ್ಲಿ ಭರವಸೆ ಮೂಡುತ್ತಿರುವುದು ಅನ್ವೇಷಕರಿಂದ, ಇವರಿಲ್ಲದಿದ್ದರೆ ಜನಜೀವನ ಸಮಸ್ಯೆಗಳಿಂದ ತುಂಬಿ ಹೋಗುತ್ತಿತ್ತು. ಇವರಿಂದ ಸಮಾಜ, ಜೀವನ ಮಟ್ಟ ಸುಧಾರಿಸುತ್ತಿದೆ. ಇಂಥ ಪ್ರತಿಭಾನ್ವಿತರಿಗೆ ಪ್ರೋತ್ಸಾಹ ನೀಡಲು ಖುಷಿ ಆಗುತ್ತಿದೆ. ಇಂಥ ಪ್ರತಿಭಾನ್ವಿತರ ಪ್ರಯತ್ನಕ್ಕೆ ನಮ್ಮ ಸರ್ಕಾರದ ಬೆಂಬಲ ಇರುತ್ತದೆ ಎಂದು ಹೇಳಿದರು.

    ನಾಡಿನಲ್ಲಿರುವ ಪ್ರತಿಭಾನ್ವಿತರನ್ನು ಗುರುತಿಸಿ ಬೆಂಬಲಿಸಲೆಂದೇ ‘ಗ್ರಾಂಟ್ ಇನ್ ನೀಡ್’ ಕಾರ್ಯಕ್ರಮ ರೂಪಿಸಲಾಗಿದೆ. ಅನ್ವೇಷಕರಿಗೆ ಅವರ ಕೆಲಸ, ಜವಾಬ್ದಾರಿ ಗೊತ್ತಿದೆ. ಅವರ ಪ್ರತಿಭೆಯನ್ನು ಗುರುತಿಸಿ, ಬೆಂಬಲ ನೀಡುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ಈ ಬಜೆಟ್‍ನಲ್ಲಿ ಇನ್ನೋವೇಷನ್ ಹಬ್ ಸ್ಥಾಪನೆ ಪ್ರಸ್ತಾಪ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ಆಯ್ಕೆ ಆದವರಿಗೆ ಮುಂದಿನ ಹಂತದಲ್ಲಿ ಇನ್ನೋವೇಷನ್ ಹಬ್ ಮೂಲಕ ಮಾರ್ಗದರ್ಶನ, ಪೂರಕ ನೆರವು ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ವಿವರಿಸಿದರು.

    ಉದ್ಯಮ ಸ್ನೇಹಿ ಕರ್ನಾಟಕ:
    ಈ ಸ್ಪರ್ಧೆಯಲ್ಲಿ ಆಯ್ಕೆಯಾದವರಿಗೆ ಅಭಿನಂದನೆ ಎಂದ ಡಿಸಿಎಂ, ಆಯ್ಕೆ ಆಗದವರು ಬೇಸರ ಮಾಡಿಕೊಳ್ಳವ ಅಗತ್ಯ ಇಲ್ಲ, ನಿಮ್ಮ ಪ್ರಯತ್ನ ಮುಂದುವರಿಯಲಿ. ಯಾರೂ ಧೃತಿಗೆಡಬೇಕಿಲ್ಲ. ಇಂಥ ಸ್ಪರ್ಧೆಯಲ್ಲಿ ಭಾಗವಹಿಸಿರುವುದೇ ದೊಡ್ಡದು ಎಂದು ಹೇಳಿದರು.

    ಈಸ್ ಆಫ್ ಡೂಯಿಂಗ್ ಬಿಸಿನೆಸ್‍ನ (ಸುಲಲಿತ ವ್ಯವಹಾರ) ಪರಿಣಾಮಕಾರಿ ಜಾರಿ ಮೂಲಕ ನಂ.1 ಸ್ಥಾನದಲ್ಲಿರುವುದು ಕರ್ನಾಟಕದ ಉದ್ದೇಶ. ಉದ್ದಿಮೆಗೆ ಯಾವುದೇ ರೀತಿಯ ಅಡಚಣೆ ಇಲ್ಲದೇ ಸಂತೋಷದಿಂದ ಕೆಲಸ ಮಾಡುವ ವ್ಯವಸ್ಥೆ ನಿರ್ಮಾಣ ಮಾಡಿ, ವಿಶ್ವದಲ್ಲೇ ಕರ್ನಾಟಕ ಉದ್ಯಮಿ ಮತ್ತು ಉದ್ಯಮ ಸ್ನೇಹಿ ಸ್ಥಳ ಆಗಿರಬೇಕು ಎಂದು ಪಣ ತೊಟ್ಟು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.

    ಉದ್ಯಮಿಗಳ ರಿಸ್ಕ್ ದೊಡ್ಡದು:
    ರಾಜಕಾರಣಿಗಳೇ ಹೆಚ್ಚು ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂಬ ಭಾವನೆ ಇದೆ. ಆದರೆ ಉದ್ಯಮಿಗಳು ಎದುರಿಸುವ ಸವಾಲಿನ ಮುಂದೆ ನಮ್ಮದು ಏನೂ ಇಲ್ಲ ಅನಿಸಿದೆ. ಉದ್ಯಮಿಗಳಾಗಿ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಹೊಸ ಆಲೋಚನೆ, ಪರಿಹಾರ ಮತ್ತು ಸೇವೆ ಒದಗಿಸುವ ವಿಚಾರದಲ್ಲಿ ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಯೋಚಿಸುತ್ತಾರೆ. ಅಂಥವರಿಗಾಗಿಯೇ ವ್ಯವಸ್ಥೆಯಲ್ಲಿ ಸ್ಟಾರ್ಟ್‍ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ, ಮುದ್ರಾ ಮುಂತಾದ ಹಲವಾರು ಕಾರ್ಯಕ್ರಮಗಳಿವೆ. ರಾಜ್ಯ ಸರ್ಕಾರದಲ್ಲೂ ಹಲವು ನಿಗಮಗಳ ಮೂಲಕ ಪ್ರೋತ್ಸಾಹ ನೀಡಲು ಅವಕಾಶ ಇದ್ದು, ಇನ್ನೂ ಹಲವು ಹೊಸ ಕಾರ್ಯಕ್ರಮಗಳ ರೂಪಿಸುವ ಪ್ರಯತ್ನವೂ ನಡೆದಿದೆ. ಈಗಾಗಲೇ ಟ್ಯಾಲೆಂಟ್ ಆಕ್ಸಿಲರೇಟರ್, ಕರ್ನಾಟಕ ಟೆಕ್ನಾಲಜಿ ವಿಷನ್ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಹೊಸ ಐಟಿ ನೀತಿ ಜಾರಿ ತರಲಾಗುವುದು ಎಂದು ತಿಳಿಸಿದರು.

    ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಬೆಂಗಳೂರು ಮಿಂಚಬೇಕು:
    ಉತ್ತರ ಅಮೆರಿಕ, ಯೂರೋಪ್‍ನ ಗಮನ ಸೆಳೆಯುವಲ್ಲಿ ಬೆಂಗಳೂರು ಯಶಸ್ವಿಯಾಗಿದೆ. ಆದರೆ ದಕ್ಷಿಣ ಏಷ್ಯಾ ರಾಷ್ಟ್ರಗಳಿಗೆ ನಮ್ಮ ಬೆಂಗಳೂರಿನ ಸಾಮಥ್ರ್ಯ ಗೊತ್ತಿಲ್ಲ. ಏಷ್ಯಾದ ಇತರ ರಾಷ್ಟ್ರಗಳಿಗೆ ಬೆಂಗಳೂರಿನ ಸಾಮಥ್ರ್ಯ ತಿಳಿಸಿಕೊಡುವ ಪ್ರಯತ್ನಗಳು ಆಗಬೇಕು. ನಮ್ಮವರಷ್ಟೇ ಹೊರಗಿನಿಂದ ಬಂದವರೂ ಬೆಂಗಳೂರು ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರುವುದನ್ನು ಕಂಡಾಗ ಬಹಳ ಸಂತೋಷವಾಗುತ್ತದೆ. ಬೆಂಗಳೂರಿನ ಅಭಿವೃದ್ಧಿಗೆ ಅವರ ನಿಸ್ವಾರ್ಥ ಸೇವೆ ದೊಡ್ಡದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಎಲಿವೇಟ್ ಕರ್ನಾಟಕದ ನಿರ್ದೇಶಕ ಪ್ರಶಾಂತ್ ಮಿಶ್ರಾ, ರಾಜ್ಯದ ಸ್ಟಾರ್ಟ್‍ಅಪ್ ವಿಷನ್ ಗ್ರೂಪ್‍ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್ ಉಪಸ್ಥಿತರಿದ್ದರು.

    ವಿಜೇತರ ವಿವರ:
    2019-20ನೇ ಹಣಕಾಸು ವರ್ಷದ ಒಟ್ಟು 113 ವಿಜೇತರ ಪೈಕಿ ಎಲಿವೇಟ್ ಕಾಲ್-2ರಲ್ಲಿ 93 ಸ್ಟಾರ್ಟ್‍ಅಪ್‍ಗಳು ಹಾಗೂ ಉನ್ನತಿ ಕಾರ್ಯಕ್ರಮದ ಅಡಿಯಲ್ಲಿ 20 ಸ್ಟಾರ್ಟ್‍ಅಪ್‍ಗಳಿವೆ. ಇದರಲ್ಲಿ 33 ಮಹಿಳಾ ವಾಣಿಜ್ಯೋದ್ಯಮಿಗಳಿಂದ ಸ್ಥಾಪನೆಗೊಂಡಿವೆ. 38 ಸ್ಟಾರ್ಟ್‍ಅಪ್‍ಗಳು 2 ಹಾಗೂ 3 ಹಂತದ್ದಾಗಿವೆ. ಬೆಂಗಳೂರಿನ 78, ಧಾರವಾಡದ 13, ಬೆಳಗಾವಿ 4, ಕಲಬುರಗಿ ಮತ್ತು ತುಮಕೂರಿನಿಂದ ತಲಾ 3, ಬೀದರ್, ಬೆಂಗಳೂರು ಗ್ರಾಮೀಣ, ಬಳ್ಳಾರಿಯ ತಲಾ 2, ರಾಮನಗರ, ಚಿಕ್ಕಮಗಳೂರು, ಮೈಸೂರು, ರಾಯಚೂರು, ಹಾವೇರಿ ಹಾಗೂ ಉಡುಪಿಯ ತಲಾ 1 ಸ್ಟಾರ್ಟ್‍ಅಪ್‍ಗಳು ಸ್ಪರ್ಧೆಯಲ್ಲಿ ಗೆದ್ದಿವೆ.

    ಎಲಿವೇಟ್- ಉನ್ನತಿ ಅಡಿ 20 ವಿಜೇತರ ಪೈಕಿ 15 ಸ್ಟಾರ್ಟ್‍ಅಪ್‍ಗಳು ಪರಿಶಿಷ್ಟ ಜಾತಿ ಹಾಗೂ 5 ಪರಿಶಿಷ್ಟ ಪಂಗಡದ ಹಿನ್ನೆಲೆಯಿಂದ ಬಂದವರು. 113 ವಿಜೇತ ಸ್ಟಾರ್ಟ್‍ಅಪ್‍ಗಳು 50 ಲಕ್ಷ ರೂ. ವರೆಗಿನ ಅನುದಾನಕ್ಕೆ ಅರ್ಹರನ್ನಾಗಿಸಲಾಗಿದೆ.