Tag: Entrance

  • ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ – ಬೈಕ್ ಸವಾರ ಸಾವು

    ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ – ಬೈಕ್ ಸವಾರ ಸಾವು

    ಬೆಂಗಳೂರು: ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪ ಅಡಕಮಾರನಹಳ್ಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

    ದೇವಾಲಯದ ಪ್ರವೇಶ ದ್ವಾರಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಕಂಬ ಕುಸಿದು, ಬೈಕ್ ಸವಾರನ ಮೇಲೆ ಬಿದ್ದಿದೆ. ಕಂಬದ ಅವಶೇಷಗಳಡಿ ಸಿಲುಕಿದ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕ ನರಸಪ್ಪ ಬೈಕ್‌ನಲ್ಲಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ನರಸಪ್ಪ ಕೇವಲ 3 ದಿನಗಳ ಹಿಂದೆ ಕೂಲಿ ಅರಸಿ ಕುಟುಂಬ ಸಮೇತರಾಗಿ ಆಂಧ್ರಪ್ರದೇಶದಿಂದ ಅಡಕಮಾರನಹಳ್ಳಿಗೆ ಬಂದಿದ್ದರು. ಆದರೆ ಲಾರಿ ಚಾಲಕನ ನಿರ್ಲಕ್ಷ್ಯದಿಂದಾಗಿ ಪ್ರವೇಶ ದ್ವಾರದ ಕಂಬ ಬೈಕ್ ಮೇಲೆ ಬಿದ್ದು, ನರಸಪ್ಪ ಬಲಿಯಾಗಿದ್ದಾನೆ. ಇದನ್ನೂ ಓದಿ: ಕಲುಷಿತ ನೀರು ಕುಡಿದು ಜನ ಸಾವನ್ನಪ್ಪಿರೋದು ತಲೆ ತಗ್ಗಿಸುವ ವಿಚಾರ: ಡಾ.ಶಿವರಾಜ್ ಪಾಟೀಲ್

    ಗ್ರಾಮದ ಪಕ್ಕದ ರಾವುತ್ತನಹಳ್ಳಿ ರಸ್ತೆ ಸಂಪೂರ್ಣ ಹಾಳಾಗಿರುವ ಹಿನ್ನೆಲೆ ಲಾರಿಗಳು ಗ್ರಾಮದ ರಸ್ತೆಯಲ್ಲಿ ಸಂಚಾರ ಮಾಡುತ್ತಿವೆ. ಈ ಕಾರಣದಿಂದಾಗಿ ಇಂದು ನಮ್ಮ ಗ್ರಾಮದಲ್ಲಿ ದೇವಾಲಯದ ಹಾಗೂ ಗ್ರಾಮದ ಮುಖ್ಯ ಪ್ರವೇಶ ದ್ವಾರಕ್ಕೆ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಾರದ ಪಿಲ್ಲರ್ ಕುಸಿದು ಬೈಕ್ ಸವಾರನ ಮೇಲೆ ಬಿದ್ದಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ಯುವತಿ – ಅನುಮಾನಸ್ಪದ ಸಾವು

    ಯಲಹಂಕ ಶಾಸಕ ವಿಶ್ವನಾಥ್‌ಗೆ ತಕ್ಷಣವೇ ರಸ್ತೆ ಅಭಿವೃದ್ಧಿ ಮಾಡುವಂತೆ ಆಗ್ರಹಿಸಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

  • ತುಲಾ ಲಗ್ನದಲ್ಲಿ ಮೈಸೂರು ಅರಮನೆ ಪ್ರವೇಶಿಸಿದ ದಸರಾ ಆನೆಗಳು

    ತುಲಾ ಲಗ್ನದಲ್ಲಿ ಮೈಸೂರು ಅರಮನೆ ಪ್ರವೇಶಿಸಿದ ದಸರಾ ಆನೆಗಳು

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆ ಭರದಿಂದ ಸಾಗಿದ್ದು, ಇಂದು ತುಲಾ ಲಗ್ನದಲ್ಲಿ ಗಜಪಡೆ ಅರಮನೆಯನ್ನು ಪ್ರವೇಸಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಆನೆಗಳನ್ನು ಸ್ವಾಗತಿಸಿದ್ದಾರೆ.

    ಅಂಬಾವಿಲಾಸ ಅರಮನೆಯಂಗಳಕ್ಕೆ ಗಜಪಡೆ ಆಗಮಿಸಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಎಂಟು ಆನೆಗಳು ಅರಮನೆಗೆ ಬಂದಿವೆ. ಬೆಳಗ್ಗೆ 6:45ಕ್ಕೆ ಮೈಸೂರಿನ ಅಶೋಕಪುರಂನ ಅರಣ್ಯ ಭವನದಲ್ಲಿ ಸಾಂಪ್ರದಾಯಿಕ ಪೂಜೆ ನೆರವೇರಿದ್ದು, ಬಳಿಕ 7:35ಕ್ಕೆ ಅರಣ್ಯ ಭವನದಿಂದ ಅರಮನೆಯತ್ತ ಮೆರವಣಿಗೆ ಮೂಲಕ ಆನೆಗಳು ಆಗಮಿಸಿವೆ. ಇದನ್ನೂ ಓದಿ: 2022ರಲ್ಲಿ ಭಾರತದ ಜಿಡಿಪಿ ಶೇ.6.7 – ವಿಶ್ವದಲ್ಲೇ ಅತ್ಯಂತ ವೇಗದ ಬೆಳವಣಿಗೆ

    ಬೆಳಗ್ಗೆ 8:36 ರಿಂದ 9:11ರ ತುಲಾ ಲಗ್ನದಲ್ಲಿ ಆನೆಗಳು ಅರಮನೆ ಪ್ರವೇಶ ಮಾಡಿವೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಗೆ ಸಾಂಪ್ರದಾಯಿಕ, ಪೂಜೆ, ಸರ್ಕಾರಿ ಗೌರವಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪಡೆಗೆ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದಾರೆ.

    ಬೆಚ್ಚಿದ ಅಶ್ವತ್ಥಾಮ
    ನಗರದ ಸದ್ದುಗದ್ದಲಕ್ಕೆ ಅಶ್ವತ್ಥಾಮ ಬೆಚ್ಚಿದ್ದಾನೆ. ಅಶ್ವತ್ಥಾಮ ಆನೆ ಮೊದಲ ಬಾರಿಗೆ ದಸರಾಗೆ ಬಂದಿದೆ. ಹೀಗಾಗಿ ನಗರದ ಸದ್ದುಗದ್ದಲಕ್ಕೆ ಬೆಚ್ಚಿ ಫುಟ್‍ಪಾತ್ ಏರಿತ್ತು. ಅರಣ್ಯಭವನದಿಂದ ಅರಮನೆಗೆ ಬರುವ ವೇಳೆ ರಸ್ತೆಯಿಂದ ಫುಟ್‍ಪಾತ್ ಮಾರ್ಗಕ್ಕೆ ತೆರಳಿತ್ತು. ಬಳಿಕ ಮಾವುತ, ಕಾವಾಡಿ ಆನೆಯನ್ನು ನಿಯಂತ್ರಿಸಿ, ಫುಟ್‍ಪಾತ್‍ನಿಂದ ಕೆಳಗಿಳಿಸಿ, ರಸ್ತೆಯಲ್ಲಿ ಆನೆಯನ್ನು ಕರೆದುಕೊಂಡು ಅರಮನೆಗೆ ಕರೆತರಲಾಯಿತು.

  • ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರ್ಯೋತ್ಸವದ ಗಿಫ್ಟ್

    ಬೆಂಗಳೂರು: ಕೇವಲ ವಿಐಪಿ ಹಾಗೂ ವಿವಿಐಪಿಗಳಿಗೆ ಮಾತ್ರ ಸಿಮೀತವಾಗಿದ್ದ ರಾಜಭವನ ಪ್ರವೇಶವನ್ನು ಸ್ವಾತಂತ್ರೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.

    ರಾಜಭವನದಿಂದ ಸಾರ್ವಜನಿಕರಿಗೆ ಸ್ವಾತಂತ್ರೋತ್ಸವದ ಗಿಫ್ಟ್ ನೀಡಲಾಗಿದ್ದು, ಈ ಮೂಲಕ ರಾಜಭವನ ಸಾಮಾನ್ಯ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನಕ್ಕೆ ಕೈ ಹಾಕಿದೆ. ಇದೇ ಆಗಸ್ಟ್ 16 ರಿಂದ 31 ರವರೆಗೆ ಸಾರ್ವಜನಿಕರ ಪ್ರವೇಶ ಕಲ್ಪಿಸಿಕೊಟ್ಟಿದ್ದು, ರಾಜಭವನ ನಿರ್ಧರಿಸಿರುವಂತೆ ಸಂಜೆ 4 ರಿಂದ 6.30 ರವರೆಗೆ ಸಾರ್ವಜನಿಕರು ಪ್ರವೇಶಿಸಬಹುದಾಗಿದೆ.

    ರಾಜಭವನದ ವಿಶೇಷತೆ ಏನು? ಒಳಗೆ ಏನೇನಿದೆ?
    ಬ್ರಿಟಿಷ್ ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ರಾಜಭವನದ ನಿರ್ಮಾಣ ಮಾಡಿದ್ದರು. ಈ ಕಟ್ಟಡವು ಸುಮಾರು 42,380 ಅಡಿ ವ್ಯಾಪ್ತಿಯನ್ನು ಹೊಂದಿದ್ದು, ಇಂಡೋ ಸಾರ್ಥಾನಿಕ್ ಶೈಲಿಯ ಹೊರಾಂಗಣ ಮತ್ತು ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕಟ್ಟಡದೊಳಗೆ 19ನೇ ಶತಮಾನದ ಕಲಾಕೃತಿಗಳಿದ್ದು, ಭಾರತೀಯ ಪರಂಪರೆಯನ್ನು ಬಿಂಬಿಸುವ ಅನೇಕ ಕಲಾಕೃತಿಗಳನ್ನು ಕಾಣಬಹುದಾಗಿದೆ.

    ಪ್ರಮುಖವಾಗಿ ಗ್ಲಾಸ್ ಹೌಸ್ ಸೇರಿದಂತೆ ಸುಮಾರು 16 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹರಡಿರುವ ಗುಲಾಬಿ ಉದ್ಯಾನವನ, ಮಲ್ಲಿಗೆ ಸೇರಿದಂತೆ ವಿವಿಧ ಹೂ ಗಿಡಗಳ ಉದ್ಯಾನವನಗಳನ್ನು ಕಾಣಬಹುದು. ಅಲ್ಲದೇ ಕೂಕ್‍ಪೈನ್ ಮರಗಳು ಆಕರ್ಷಣೀಯ ಕೇಂದ್ರಬಿಂದುವಾಗಿದೆ.

    ರಾಜಭವನಕ್ಕೆ ಪ್ರವೇಶ ಹೇಗೆ?
    ರಾಜಭವನದ ಭೇಟಿಗೆ ಸಾರ್ವಜನಿಕರನ್ನು ತಂಡಗಳಾಗಿ ವಿಂಗಡಿಸಿ ಪ್ರವೇಶ ಕಲ್ಪಿಸಿಕೊಡಲಾಗುತ್ತಿದ್ದು, ಒಂದು ತಂಡದಲ್ಲಿ 30 ಜನರು ಹೋಗಬಹುದಾಗಿದೆ. ಒಂದು ತಂಡ ಸುಮಾರು 20 ರಿಂದ 30 ನಿಮಿಷಗಳ ಕಾಲ ರಾಜಭವನದೊಳಗಿನ ಪರಿಸರ, ವಿಶೇಷತೆಯನ್ನು ವೀಕ್ಷಿಸಬಹುದಾಗಿದೆ.

    ರಾಜಭವನಕ್ಕೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ. ಬುಕ್ಕಿಂಗ್ ಮಾಡಿದ ನಂತರ ರಾಜಭವನದಿಂದ ಅಧಿಕೃತವಾಗಿ ಈ-ಮೇಲ್ ಅಥವಾ ಮೊಬೈಲ್ ಎಸ್‍ಎಂಎಸ್ ಮೂಲಕ ಭೇಟಿಯ ದಿನಾಂಕ ಹಾಗೂ ಸಮಯವನ್ನು ತಿಳಿಸಲಾಗುತ್ತದೆ.

    ಸಾರ್ವಜನಿಕರ ಪ್ರವೇಶದ ವೇಳೆಯಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಹೊಣೆಯನ್ನು ರಾಜಭವನ ಈಗಾಗಲೇ ಬಿಬಿಎಂಪಿಗೆ ನೀಡಿದೆ. ಹೀಗಾಗಿ ರಾಜಭವನದ ಒಳಗಡೆ ಸಾರ್ವಜನಿಕರಿಗಾಗಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಸಾರ್ವಜನಿಕ ತಂಗುದಾಣಗಳನ್ನು ಬಿಬಿಎಂಪಿ ನಿರ್ಮಿಸಲಿದೆ. ದೆಹಲಿಯಲ್ಲಿನ ರಾಷ್ಟ್ರಪತಿ ಭವನ ಮಾದರಿಯಲ್ಲಿ ರಾಜಭವನ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

    ರಾಜಭನದ ಭೇಟಿಗೆ www.rajbhavan.kar.nic.in ವೆಬ್‌ಸೈಟ್‌ ಗೆ ಭೇಟಿ ನೀಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಸಾರ್ಜಜನಿಕರು ರಾಜಭವನದ ಪ್ರವೇಶಕ್ಕೂ ಮುನ್ನ ಕಡ್ಡಾಯವಾಗಿ ಯಾವುದಾದರೂ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

    ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ.

    ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ ಸೇರಿದ ದೀಪಕ್ ಕುಮಾರ್ ಹಾಗೂ ನಿತೀಶ್ ಗಂಜಾನ್ ದೆಹಲಿ ಐಐಟಿಯಲ್ಲಿ ಪ್ರವೇಶ ಪಡೆದವರು. ಬಡತನದ ಮಧ್ಯೆಯೂ ಆದಿವಾಸಿ ವಿದ್ಯಾರ್ಥಿಗಳು ಮಾಡಿರುವ ಸಾಧನೆ ಇತರರಿಗೆ ಮಾದರಿಯಾಗಿದೆ.

    ಈ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಪ್ರತಿಷ್ಠಿತ ಐಐಟಿಯಲ್ಲಿ ಟೆಕ್ಸ್‍ಟೈಲ್ ಬ್ರ್ಯಾಂಚ್‍ನಲ್ಲಿ ಪ್ರವೇಶ ಪಡೆದಿದ್ದಾರೆ. ಈ ಸಾಧನೆಯಿಂದ ವಿದ್ಯಾರ್ಥಿಗಳ ಕುಟುಂಬಸ್ಥರು ಸಂತಸಗೊಂಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು ತಮ್ಮ ಈ ಸಾಧನೆಗೆ ಕುಟಂಬಸ್ಥರು ಹಾಗೂ ಜಿಲ್ಲಾಡಳಿತ ಪ್ರೇರಣೆ ಕಾರಣ ಎಂದು ತಿಳಿಸಿದ್ದಾರೆ.