Tag: entertainment industry

  • 26 ವರ್ಷದ ಸಿನಿ ಜರ್ನಿಗೆ ಜೊತೆಯಾದ ಪತ್ನಿಗೆ ಕಿಚ್ಚನ ಧನ್ಯವಾದ

    26 ವರ್ಷದ ಸಿನಿ ಜರ್ನಿಗೆ ಜೊತೆಯಾದ ಪತ್ನಿಗೆ ಕಿಚ್ಚನ ಧನ್ಯವಾದ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್(sudeep) ಅವರು ನಟಿಸಿದ ಸಿನಿಮಾಗಳೆಲ್ಲ ಹಿಟ್ ಎನ್ನುವ ಮಟ್ಟಿಗೆ  ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಕಲಾ ದೇವಿಯ ಸೇವೆ ಮಾಡುತ್ತಾ ಎಲ್ಲಾ ಬಗೆಯ ಪಾತ್ರಗಳಲ್ಲಿ ನಟಿಸುತ್ತಾ ಮನರಂಜನೆ ನೀಡುತ್ತಿರುವ ಸುದೀಪ್ ಅವರ ಸಿನಿ ಬದುಕಿಗೆ ಈಗ 26 ವರ್ಷ ತುಂಬಿದೆ. ಇದನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ. ಟ್ವಿಟ್ಟರ್‌ ಕರ್ನಾಟಕ ಟ್ರೆಂಡ್‍ನಲ್ಲಿ #26YearsOfSudeepism ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದೆ.

    ಸಿನಿ ಜರ್ನಿ: 1997ರಲ್ಲಿ ತೆರೆಕಂಡ ತಾಯವ್ವ ಸಿನಿಮಾ ಮೂಲಕ ಸುದೀಪ್ ಸ್ಯಾಂಡಲ್‍ವುಡ್‍ಗೆ ಕಾಲಿಟ್ಟರು. ಇದು ಅವರ ಮೊದಲ ಸಿನಿಮಾ. 2000ರಲ್ಲಿ ಸ್ಪರ್ಶ ಸಿನಿಮಾ ತೆರೆಗೆ ಬಂತು. ನಂತರ ಇವರು ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕವಾಗಿ ಅಭಿಮಾನಿಗಳ ಪಾಲಿನ ಅಭಿನಯ ಚಕ್ರವರ್ತಿಯಾಗಿದ್ದಾರೆ. ಇದನ್ನೂ ಓದಿ: ಕೊನೆಗೂ ಕತ್ರಿನಾ ಮದುವೆಗೆ ವಿಶ್ ಮಾಡಿದ ಸಲ್ಮಾನ್ ಖಾನ್

    ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿ, ಡೈರೆಕ್ಟರ್ ಆಗಿಯೂ ಸುದೀಪ್ ಸೈ ಎನಿಸಿಕೊಂಡಿದ್ದಾರೆ. 2006ರಲ್ಲಿ ತೆರೆಗೆ ಬಂದ ಮೈ ಆಟೋಗ್ರಾಫ್ ಚಿತ್ರವನ್ನು ಅವರು ನಿರ್ದೇಶನ, ನಿರ್ಮಾಣ ಮಾಡಿದ್ದರು. 2014ರಲ್ಲಿ ತೆರೆಗೆ ಬಂದ ಮಾಣಿಕ್ಯ ಅವರ ನಿರ್ದೇಶನದ ಕೊನೆಯ ಸಿನಿಮಾ. 2018ರಲ್ಲಿ ತೆರೆಗೆ ಬಂದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರಕ್ಕೆ ಸುದೀಪ್ ಬಂಡವಾಳ ಹೂಡಿದ್ದರು. ಕನ್ನಡದ ಬಿಗ್‍ಬಾಸ್ ರಿಯಾಲಿಟಿ ಶೋನ 8 ಸೀಸನ್‍ಗಳನ್ನು ಅವರು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಸ್ಯಾಂಡಲ್‍ವುಡ್ ನಿಂದ ಆರಂಭವಾದ ಇವರ ಸಿನಿಮಾ ಜರ್ನಿಯು ಬಾಲಿವುಡ್‍ನಲ್ಲಿಯೂ ಇವರ ಛಾಪನ್ನು ಮೂಡಿಸಲು ಸಾಧ್ಯವಾಗಿದೆ. ಈಗ ಸುದೀಪ್ ಚಿತ್ರರಂಗದಲ್ಲಿ 26 ವರ್ಷ ಕಳೆದಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆ ಕೇಳಿ ಬರುತ್ತಿದೆ. ಸೆಲೆಬ್ರಿಟಿಗಳು ಕೂಡ ಸುದೀಪ್‌ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ.

    ಸುದೀಪ್ ಅವರ ಸಿನಿಮಾ ಜರ್ನಿಯ ಕುರಿತಾಗಿ ಅವರ ಪತ್ನಿ ಪ್ರಿಯಾ ಸುದೀಪ್ ಟ್ವೀಟ್‌ ಮಾಡಿ, ಪ್ರಪಂಚದಾದ್ಯಂತ ನೀವು ಗಳಿಸಿರುವ ಪ್ರೀತಿ ಮತ್ತು ಗೌರವದ ಬಗ್ಗೆ ನಮಗೆ ಅಪಾರ ಹೆಮ್ಮೆಯಿದೆ. ನಿಮ್ಮ ಕಠಿಣ ಪರಿಶ್ರಮ ಹಾಗೂ ಉತ್ಸಾಹದಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುತ್ತೇವೆ. ಕಳೆದ ವರ್ಷದ ಕ್ಷಣವನ್ನು ಈ ದಿನ ಹಂಚಿಕೊಳ್ಳುತ್ತಿದ್ದೇನೆ ಎಂದು ಒಂದು ಫೋಟೋವನ್ನು ಹಂಚಿಕೊಂಡು ಶುಭ ಕೋರಿದ್ದಾರೆ.

    ಪತ್ನಿ ಪ್ರೀಯಾ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಸುದೀಪ್ ಅವರು, 26 ವರ್ಷ ನೀವು ತುಂಬಾ ಪ್ರೀತಿಯಿಂದ ನಡೆದುಕೊಂಡಿದ್ದೀರಿ, ನೀವು ಮಾಡಿದ ತ್ಯಾಗಗಳು ಸಾಕಷ್ಟು. ನೀವು ನನಗೆ ಉತ್ತಮ ಶಕ್ತಿಯಾಗಿದ್ದಕ್ಕಾಗಿ ಧನ್ಯವಾದಗಳು, ಎಲ್ಲಾ ಕೆಲಸಗಳಲ್ಲಿ ನನ್ನ ಜೊತೆಯಾಗಿದ್ದೀರ, ಧನ್ಯವಾದಗಳು. ಲವ್ ಯೂ ಎಂದು ಪತ್ನಿಯ ವಿಶ್‍ಗೆ ಪ್ರತಿಕ್ರಿಯಿಸಿದ್ದಾರೆ.