ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಏನು ತಪ್ಪು ಮಾಡಿಲ್ಲ, ಕಾನೂನಿಗೆ ಗೌರವ ಕೊಟ್ಟು ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಡಿಸಿಎಂ ಡಿಕೆಶಿವಕುಮಾರ್ (DCM DK Shivakumar) ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.ಇದನ್ನೂ ಓದಿ: 132 ವರ್ಷ ದಾಖಲೆ ಸರಿಗಟ್ಟಿದ ಟ್ರಂಪ್ – ಗೆದ್ದಿದ್ದು ಹೇಗೆ?
ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ (Lokayuktha) ವಿಚಾರಣೆಗೆ ಹಾಜರಾದ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಅವರು ಕಾನೂನಿಗೆ ಗೌರವ ಕೊಟ್ಟಿದ್ದಾರೆ. ಸಿಎಂಗೆ ನೋಟಿಸ್ ಕೊಟ್ಟಿದ್ರು, ಚುನಾವಣೆ ಪ್ರಚಾರ ಇದ್ದರೂ ಕೂಡ ಅವರು ವಿಚಾರಣೆಗೆ ಹಾಜರಾಗಿದ್ದಾರೆ. ಕಾನೂನಿಗೆ ಗೌರವ ಕೊಡಬೇಕು ಎಂದು ಪ್ರಚಾರವನ್ನು ಕೈಬಿಟ್ಟು ವಿಚಾರಣೆಗೆ ಹಾಜರಾಗಿದ್ದಾರೆ. ಸಿಎಂ ಅವರು ಒಂದು ವಾರ ವಿನಾಯಿತಿ ಕೇಳಬಹುದಿತ್ತು. ಆದರೆ ಅಧಿಕಾರದಲ್ಲಿ ಇದ್ದುಕೊಂಡು ಅಧಿಕಾರ ದುರುಪಯೋಗ ಮಾಡಬಾರದು ಎಂದು ಹೇಳಿ ಕಾನೂನಿಗೆ ಗೌರವ ಕೊಟ್ಟು ಹೋಗಿದ್ದಾರೆ. ಸಿಎಂ ಏನು ತಪ್ಪು ಮಾಡಿಲ್ಲ. ಲೋಕಾಯುಕ್ತ ಏನು ಕೇಳುತ್ತಾರೋ ಅದಕ್ಕೆ ಉತ್ತರ ಕೊಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಲೋಕಾಯುಕ್ತ ಕೇಳಿರುವ ಪ್ರಶ್ನೆಗಳ ಕುರಿತು ಮುಡಾದಲ್ಲಿ ಹಗರಣದಲ್ಲಿ ಏನಿದೆ? ಏನು ಇಲ್ಲ? ಮಂಜೂರು ಮಾಡಿಲ್ಲ, ಸಹಿಯೂ ಹಾಕಿಲ್ಲ ಎಂದು ನೀವು ಲೋಕಾಯುಕ್ತ ಅಧಿಕಾರಿಗಳಿಗೆ ಕೇಳಬೇಕು. ಲೋಕಾಯುಕ್ತದವರು ಕರೆದಿದ್ದರು. ಸಿಎಂ ಹೋಗಿದ್ದಾರೆ ಅಷ್ಟೇ ಎಂದು ತಿಳಿಸಿದರು.ಇದನ್ನೂ ಓದಿ: ‘ಜೈ ಹನುಮಾನ್’ ಸಿನಿಮಾದಲ್ಲಿ ರಾಮನಾಗಿ ರಾಣಾ ದಗ್ಗುಬಾಟಿ?
ತಮ್ಮ ಮನೆಯ ನಾಯಿಯು (Dog) ಮಹಿಳೆಯೊಬ್ಬರಿಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ (Darshan) ವಿಚಾರಣೆಗೆ ಹಾಜರಾದರು. ಪೊಲೀಸ್ ಕೇಳಿದ ಹಲವಾರು ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಘಟನೆ ನಡೆದಾಗ ನಾನು ಗುಜರಾತ್ ನಲ್ಲಿ ಶೂಟಿಂಗ್ ನಲ್ಲಿದ್ದೆ. ಹುಡುಗರಿಗೆ ಕರೆಕ್ಟಾಗಿ ನೋಡಿಕೊಳ್ಳುವಂತೆ ಹೇಳಿದ್ದೆ. ಕೇರ್ ಟೇಕರ್ ಗೆ ಸರಿಯಾಗಿ ನೋಡಿಕೊಳ್ಳುವಂತೆ ಸೂಚನೆ ಕೊಟ್ಟಿದ್ದೆ’ ಎಂದು ತಿಳಿಸಿದ್ದಾರೆ.
‘ಸೆಲೆಬ್ರಿಟಿಗಳ ಮನೆ ಬಳಿ ಸಾಕಷ್ಟು ಜನ ಬರ್ತಿರ್ತಾರೆ. ಹೀಗಾಗಿ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ ತೊಂದರೆಯಾಗುತ್ತೆ . ಯಾರೆ ಬಂದ್ರೂ ವಿಚಾರಿಸುವಂತೆ ನೋಡಿಕೊಳ್ಳುವಂತೆ ಹೇಳಿರುತ್ತೇನೆ. ಈ ಹಿನ್ನೆಲೆಯಲ್ಲಿ ಕಾರ್ ಪಾರ್ಕಿಂಗ್ ವಿಚಾರವಾಗಿ ಕೇಳಿದ್ದಾರೆ. ಎಚ್ಚರಿಕೆ ವಹಿಸಬೇಕಿತ್ತು ಅಂತಾ ಹುಡುಗರಿಗೆ ಹೇಳಿದ್ದೇನೆ. ಅಮಿತಾ ಜಿಂದಾಲ್ ಅವರಿಗೆ ಈ ರೀತಿಯಾದಾಗ ಅವರ ಆಸ್ಪತ್ರೆ ವೆಚ್ಚ ಭರಿಸುವಂತೆ ಹೇಳಿದ್ದೇನೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ’ ಎಂದು ಮಾತುಗಳನ್ನು ದರ್ಶನ್ ದಾಖಲಿಸಿದ್ದಾರೆ.
ಘಟನೆ ನಡೆದ ದಿನದಂದು ಸಿಸಿಟಿವಿ ವರ್ಕ್ ಆಗ್ತಿರಲಿಲ್ಲ. ಘಟನೆ ಆದ ಬಳಿಕ ಸಿಸಿಟಿವಿ ಮೈಂಟೇನ್ ಮಾಡುವಂತೆ ಹೇಳಿದ್ದೀನಿ ಎಂದೂ ಪೊಲೀಸರಿಗೆ ದರ್ಶನ್ ತಿಳಿಸಿದ್ದಾರೆ. ಸದ್ಯಕ್ಕೆ ಸಿಸಿಟಿವಿ ಫೂಟೇಜ್ ನೀಡುವಂತೆ ಪೊಲೀಸರು ತಿಳಿಸಿದ್ದು, ಸಿಸಿಟಿವಿ ಫೂಟೇಜ್ ಪಡೆದು ಮುಂದೆ ಚಾರ್ಜ್ ಶೀಟ್ ಹಾಕಲಿದ್ದಾರೆ ಎನ್ನುವ ಮಾಹಿತಿ ಇದೆ.
ಮಹಿಳೆಗೆ ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಟ ದರ್ಶನ್ (Darshan) ಆರ್.ಆರ್.ನಗರ (RR Nagar) ಪೊಲೀಸ್ ಠಾಣೆಯಲ್ಲಿ ವಿಚಾರಣೆಗಾಗಿ (Enquiry) ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 11.30 ಕ್ಕೆ ಸ್ಟೇಷನ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲಿದ್ದಾರೆ ದರ್ಶನ್. ಮೂರು ದಿನದ ಒಳಗೆ ವಿಚಾರಣೆಗೆ ಬರಬೇಕೆಂದು ಪೊಲೀಸ್ ರು ನೋಟೀಸ್ ಕೊಟ್ಟಿದ್ದರು. ಸಿಸಿಟಿವಿ ಫೂಟೇಜ್ ಜೊತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಲು ಸೂಚಿಸಲಾಗಿತ್ತು.
ಏನಿದು ಪ್ರಕರಣ?
ಈ ಹಿಂದೆ ದರ್ಶನ್ ವಿರುದ್ಧ ಆರ್ಆರ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ದರ್ಶನ್ ಮನೆಯ ನಾಯಿಗಳು ಮಹಿಳೆಯೊಬ್ಬರ ಮೇಲೆ ಎರಗಿ ಕಚ್ಚಿದ ಸಂಬಂಧ ಐಪಿಸಿ 289ರ ಅಡಿ ನಾಯಿ (Dog) ನೋಡಿಕೊಳ್ಳುತ್ತಿದ್ದವನ ಮೇಲೆ ಮತ್ತು ನಟ ದರ್ಶನ್ ವಿರುದ್ಧ ಕೇಸ್ ದಾಖಲಾಗಿತ್ತು.
ಈ ಬಗ್ಗೆ ಸ್ವತಃ ದೂರುದಾರರಾದ ಅಮಿತಾ ಜಿಂದಾಲ್ (Amita) ಪ್ರತಿಕ್ರಿಯೆ ನೀಡಿದ್ದರು. ಆರ್ಆರ್ ನಗರದಲ್ಲಿ ಆಸ್ಪತ್ರೆ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದೆ. ದರ್ಶನ್ ಮನೆಯ ಬಳಿ ಖಾಲಿ ಜಾಗದಲ್ಲಿ ಕಾರನ್ನು ಪಾರ್ಕ್ ಮಾಡಿದ್ದು, ಕಾರ್ಯಕ್ರಮ ಮುಗಿಸಿ ಮರಳಿ ಬಂದಾಗ ಕಾರು ನಿಲ್ಲಿಸಿದ್ದ ಜಾಗದಲ್ಲಿ ಮೂರು ನಾಯಿಗಳು ಇದ್ದವು. ದರ್ಶನ್‌ರ ಮನೆ ಸಿಬ್ಬಂದಿಗೆ ನಾಯಿಗಳನ್ನು ಪಕ್ಕಕ್ಕೆ ಕರೆದುಕೊಳ್ಳುವಂತೆ ಕೇಳಿದೆ, ಆಗ ಈ ಜಾಗದಲ್ಲಿ ನೀವು ಕಾರು ಪಾರ್ಕ್ ಮಾಡುವಂತಿಲ್ಲ ಎಂದು ಸಿಬ್ಬಂದಿ ಹೇಳಿದ್ದರು ಎಂದು ಅಮಿತಾ ಮಾತನಾಡಿದ್ದರು.
ಮಾತಿನ ಚಕಮಕಿಯ ಬಳಿಕ ನಾಯಿಗಳು ತನ್ನ ಮೇಲೆ ದಾಳಿ ನಡೆಸಿ ಹೊಟ್ಟೆ ಹಾಗೂ ಕೈಗೆ ಕಡಿದು ಗಾಯಗೊಳಿಸಿವೆ. ಅವರ ಸಿಬ್ಬಂದಿ ನಾಯಿಗೆ ಇಂಜೆಕ್ಷನ್ ಆಗಿದೆ ಹೋಗಿ ಎಂದು ಕಳುಹಿಸಿಬಿಟ್ರು. ಸ್ನೇಹಿತರ ಮಗನ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಆರ್ಆರ್ ನಗರ ಪೊಲೀಸ್ ಠಾಣೆಗೆ ಹೋಗಿ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದು ಅವರು ವಿವರಿಸಿದ್ದರು.
ಸಿಬ್ಬಂದಿಯನ್ನ ಮೊದಲ ಆರೋಪಿ, ದರ್ಶನ್ರನ್ನು ಎರಡನೇ ಆರೋಪಿಯನ್ನಾಗಿಸಿ ಪ್ರಕರಣ ದಾಖಲಾಗಿತ್ತು. ದರ್ಶನ್ ಅವರು ಯಾವುದೇ ಕರೆ ಮಾಡಿಲ್ಲ ಮತ್ತು ಭೇಟಿ ಮಾಡಲಿಲ್ಲ. ಯಾರೋ ವ್ಯಕ್ತಿಯೊಬ್ಬರು ಆಸ್ಪತ್ರೆಯ ಖರ್ಚು ಭರಿಸೋದಾಗಿ ತಿಳಿಸಿದ್ದರು. ಅವರು ಯಾರು ಎಂದು ತಿಳಿದು ಬಂದಿಲ್ಲ. ಪೊಲೀಸರು ನಮಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಸ್ ದಾಖಲಾಗಿದೆ, ತನಿಖೆ ನಡೆಯಲಿ ಎಂದು ಗಾಯಗೊಂಡ ಮಹಿಳೆ ಅಮಿತಾ ತಿಳಿಸಿದ್ದರು. ಈಗ ನೋಟಿಸ್ ನೀಡುವ ಮೂಲಕ ಪೊಲೀಸರು ತನಿಖೆಗೆ ಇಳಿದಿದ್ದಾರೆ.
ಬೆಂಗಳೂರು: ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರಿಗೆ ವಿಚಾರಣೆ (Enquiry) ಶಾಕ್ ಎದುರಾಗಿದ್ದು, ಪ್ರತಿಯೊಬ್ಬ ಗುತ್ತಿಗೆದಾರರಿಗೆ (Contractors) ಶೇಷಾದ್ರಿಪುರಂ ಎಸಿಪಿ ಪ್ರಕಾಶ್ ಪ್ರತ್ಯೇಕ ವಿಚಾರಣೆ ನಡೆಸಿ ಪ್ರಶ್ನೆಗಳ ಸುರಿಮಳೆ ಸುರಿದಿದ್ದಾರೆ.
ಉಪಮುಖ್ಯಮಂತ್ರಿಯೂ ಆಗಿರುವ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಅವರು ಬಾಕಿ ಬಿಲ್ ಬಿಡುಗಡೆಗೆ ಕಮಿಷನ್ ಕೇಳುತ್ತಿದ್ದಾರೆ ಎಂದು ಬಿಬಿಎಂಪಿ (BBMP) ಗುತ್ತಿಗೆದಾರರು ರಾಜ್ಯಪಾಲರಿಗೆ ದೂರು ನೀಡಿದ್ದರು. ಮುಖ್ಯಮಂತ್ರಿಗಳು ಹಣ ಬಿಡುಗಡೆ ಮಾಡಿದ್ದರೂ ಉಪಮುಖ್ಯಮಂತ್ರಿಗಳು ತಡೆ ಹಿಡಿದಿದ್ದಾರೆ ಎಂದು ದೂರಲ್ಲಿ ಉಲ್ಲೇಖಿಸಿದ್ದರು. ಇದನ್ನೂ ಓದಿ: ಮುಗಿಯದ ಶಿವಾಜಿ ಮೂರ್ತಿ ಗಲಾಟೆ – ಬಾಗಲಕೋಟೆ ಬಂದ್‌ಗೆ ಮುಂದಾದ ಬಿಜೆಪಿಗರು
ಇದನ್ನೇ ಅಸ್ತ್ರವಾಗಿಸಿಕೊಂಡಿದ್ದ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಡಿಕೆಶಿ ವಿರುದ್ಧ ಮುಗಿಬಿದ್ದಿದ್ದರು. ಇದರಿಂದಾಗಿ ಡಿಕೆಶಿ ತೀವ್ರ ಮುಜುಗರ ಅನುಭವಿಸುವಂತಾಗಿತ್ತು. ಇದರ ಬೆನ್ನಲ್ಲೇ ಕೆಲ ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿಲ್ಲ ಎಂದು ಆರೋಪ ಹಿಂಪಡೆದಿದ್ದರು. ಆದರೆ ಈಗ ರಾಜ್ಯಪಾಲರಿಗೆ ದೂರು ಕೊಟ್ಟ ಗುತ್ತಿಗೆದಾರರಿಗೇ ಶಾಕ್ ಆಗಿದೆ. ಸುಮ್ಮನೇ ಆರೋಪ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಬಿಬಿಎಂಪಿ ಹಣಕಾಸು ಅಪರ ಆಯುಕ್ತ ಮಹದೇವ್ ದೂರು ದಾಖಲಿಸಿದ್ದರು. ಇದನ್ನೂ ಓದಿ: ಎನ್‌ಇಪಿ ರದ್ದು ಮಾಡುವ ಸಿಎಂ ಹೇಳಿಕೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆಕ್ಷೇಪ
ಬೆಂಗಳೂರು: ಬಿಗ್ ಬಾಸ್ ಸೀಸನ್ ಸ್ಪರ್ಧಿ ಕವಿತಾ ಗೌಡಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಆ್ಯಂಡಿ ಇಂದು ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.
ರಾಜ್ಯ ಮಹಿಳಾ ಆಯೋಗವು ಕವಿತಾ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು ಆ್ಯಂಡಿ ಹಾಗೂ ಕವಿತಾರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಲಿದ್ದಾರೆ. ಸದ್ಯ ಆ್ಯಂಡಿ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಕವಿತಾ ಹಾಜರಾಗಬೇಕಿದೆ.
ಏನಿದು ಪ್ರಕರಣ?
ಟಾಸ್ಕ್ ಹೊರತಾಗಿಯೂ ಆ್ಯಂಡಿ ನಡೆದುಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ. ಇತ್ತೀಚೆಗೆ ನಡೆದ ಖಾಸಗಿ ವಾಹಿನಿ ಶೋದಲ್ಲಿ ಉಂಟಾದ ಅಹಿತಕರ ಘಟನೆಯಿಂದ ದೂರು ದಾಖಲಿಸಲು ನಿರ್ಧರಿಸಿದ್ದೇನೆ. ಟಾಸ್ಕ್ ನಲ್ಲಿಯೇ ಆ್ಯಂಡಿ ಏನಾದರು ಮಾಡಲು ಪ್ರಯತ್ನಿಸುತ್ತಿದ್ದರು. ಎರಡು ದಿನ ನಡೆದಿದ್ದ ಸೂಪರ್ ಹೀರೋ ವರ್ಸಸ್ ಸೂಪರ್ ವಿಲನ್ ಟಾಸ್ಕ್ ನಲ್ಲಿ ಆ್ಯಂಡಿ ತುಂಬಾ ಕಿರುಕುಳ ನೀಡಿದ್ದರು. ಆ ಟಾಸ್ಕ್ ನ ದೃಶ್ಯಗಳು ವೂಟ್‍ನಲ್ಲಿ ಸಿಕ್ಕಿವೆ. ಬಿಗ್‍ಬಾಸ್ ಮನೆಯಿಂದ ಹೊರಗೆ ಬಂದು ನೋಡಿದಾಗ ಆ್ಯಂಡಿ ವರ್ತನೆ ಮುಜುಗುರಕ್ಕೆ ಉಂಟು ಮಾಡಿತು ಎಂದು ಕವಿತಾ ಅವರು ಆ್ಯಂಡಿ ಮೇಲೆ ಆರೋಪಿಸಿದ್ದರು.
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಆ್ಯಂಡಿ, “ಬಿಗ್ ಬಸ್ ಮನೆಯಲ್ಲಿ ಎಷ್ಟೋ ಕ್ಯಾಮೆರಾಗಳಿದ್ದವು. ಅಲ್ಲಿ ಕವಿತಾ ಅವರಿಗೆ ತೊಂದರೆ ಆದಾಗ ಅವರು ಅಲ್ಲೇ ದೂರು ನೀಡಬಹುದಿತ್ತು. ಅಲ್ಲಿ ಚೆನ್ನಾಗಿ ಆಟವಾಡಿಕೊಂಡು ಜೊತೆಯಲ್ಲಿ ಊಟ ಮಾಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಾನು ಅವರಿಗೆ ಹೆಡ್ ಮಸಾಜ್ ಮಾಡಿದೆ. ಆಗ ಅವರು ಮಾಡಿಸಿಕೊಂಡಿದ್ದರು. ಆಗ ಅವರಿಗೆ ಏಕೆ ತೊಂದರೆ ಆಗಲಿಲ್ಲ. ಆಗ ಅವರು ಏಕೆ ಏನೂ ಹೇಳಲಿಲ್ಲ. ಆಗ ಸುಮ್ಮನಿದ್ದು ಈಗ ಏಕೆ ಅವರು ದೊಡ್ಡ ಸಮಸ್ಯೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ಯಾರಿಗಾದರೂ ತೊಂದರೆ ಆದರೆ ಅವರು ಕ್ಯಾಮೆರಾ ಮುಂದೆ ಹೇಳುವ ಅವಕಾಶ ಇದೆ. 100 ದಿನ ಆಟವಾಡಬೇಕು ಎಂದು ಅಲ್ಲಿ ಇದ್ದು, ಬಳಿಕ ಆಟ ಗೆಲಿಲ್ಲ ಎಂದಾಗ ಹೀಗೆ ಮಾಡುವುದು ಸರಿಯಲ್ಲ” ಎಂದು ಹೇಳಿದ್ದರು.
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಂದು ಅಧಿಕಾರಿಗಳು ಸ್ಟಾರ್ ನಟರ ವಿಚಾರಣೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳ ಪ್ರಶ್ನೆಗೆ ಸ್ಟಾರ್ ನಟರು ಖಡಕ್ ಆಗಿ ಉತ್ತರ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಗುರುವಾರ ಐಟಿ ಅಧಿಕಾರಿಗಳು ಯಶ್, ಸುದೀಪ್, ಪುನೀತ್, ಶಿವಣ್ಣ ಹಾಗೂ ರಾಧಿಕಾ ಅವರ ಮನೆ ಮೇಲೆ ನಡೆಸಿದ್ದರು. ಈ ವೇಳೆ ಹಲವು ದಾಖಲೆಗಳು ಸಿಕ್ಕಿದ್ದು, ಸ್ಟಾರ್ ನಟರು ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ವ್ಯವಹಾರಗಳ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಎರಡನೇ ದಿನವೂ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳುತ್ತಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಯಶ್ ಉತ್ತರವೇನು….? ಐಟಿ ಪ್ರಶ್ನೆ: 70 ಕೋಟಿ ವೆಚ್ಚದಲ್ಲಿ ಕೆಜಿಎಫ್ ನಿರ್ಮಿಸಲಾಗಿದೆ. ಹೂಡಿಕೆ ಬಗ್ಗೆ ನಿಮಗೇನು ಗೊತ್ತು? ಯಶ್ ಉತ್ತರ: ಹಣಕಾಸಿನ ವ್ಯವಹಾರ ಬಗ್ಗೆ ನನಗೇನೂ ಗೊತ್ತಿಲ್ಲ. ನಿರ್ಮಾಪಕರನ್ನೇ ಕೇಳಬೇಕು ಐಟಿ: ನಿಮಗೆ ಸ್ವಲ್ಪನೂ ಮಾಹಿತಿ ಇಲ್ಲದೆ ಬಹುಕೋಟಿ ಸಿನಿಮಾದಲ್ಲಿ ನಟಿಸಿದ್ರಾ? ಯಶ್: ನಿರ್ಮಾಪಕರ ವ್ಯವಹಾರ ಬಗ್ಗೆ ನನಗೇನೂ ತಿಳಿದಿಲ್ಲ. ನಾನು ಒಬ್ಬ ನಟನಷ್ಟೇ. ಐಟಿ: ನೀವು ಕನ್ನಡದ ಸೂಪರ್ ಸ್ಟಾರ್. ನಿಮ್ಮ ಸಂಭಾವನೆ ಎಷ್ಟು? ಯಶ್: ಒಂದೊಂದು ಸಿನಿಮಾಕ್ಕೆ ಒಂದೊಂದು ಸಂಭಾವನೆ ಇರುತ್ತೆ. ಅದು ಬದಲಾಗುತ್ತಿರುತ್ತದೆ. ಐಟಿ: ನಿಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಮಾಹಿತಿ ನೀಡಬಹುದೇ? ಯಶ್: ನನಗೆ 40 ಕೋಟಿ ಸಾಲವಿದೆ. 2 ಬ್ಯಾಂಕ್‍ನಲ್ಲಿ ಸಾಲ ಮಾಡಿದ್ದೇನೆ. ಐಟಿ: ನೀವು ಹೊಸ ಮನೆ ಖರೀದಿ ಮಾಡಿದ್ದೀರಿ. ಇದರ ಬಗ್ಗೆ ದಾಖಲೆ ಕೊಡಬಹುದಾ? ಯಶ್: ಸಾಲ ಪಡೆದು ಮನೆ ಖರೀದಿಸಲಾಗಿದೆ. ಇದರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಪುನೀತ್ ಉತ್ತರವೇನು….? ಐಟಿ ಪ್ರಶ್ನೆ: ನೀವು ಬಹು ಬೇಡಿಕೆಯ ನಟ. ನಿಮ್ಮ ಸಿನಿಮಾಗಳ ಸಂಭಾವನೆ ಎಷ್ಟು? ಪುನೀತ್ ಉತ್ತರ: ಒಂದೊಂದು ಸಿನಿಮಾಗಳಿಗೆ ಒಂದು ಸಂಭಾವನೆ ಇದೆ. ಐಟಿ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಬಹುದಾ? ಪುನೀತ್: ಎಲ್ಲದಕ್ಕೂ ರಸೀತಿ ಇದೆ. ಸ್ವಲ್ಪ ಟೈಂ ಬೇಕು. ಐಟಿ: ನೀವು ಕೋರಮಂಗಲದಲ್ಲಿ ಆಸ್ತಿ-ಪಾಸ್ತಿ ಹೊಂದಿದ್ದೀರಿ. ಇದರ ವಿವರಣೆ ನೀಡಿ. ಪುನೀತ್: ಎಲ್ಲದಕ್ಕೂ ದಾಖಲಾತಿಗಳಿವೆ. ನನ್ನ ಅಕೌಂಟೆಂಟ್ ಮಾಹಿತಿ ನೀಡ್ತಾರೆ. ಐಟಿ: ಇತ್ತೀಚೆಗೆ ಹೊಸ ಪ್ರಾಜೆಕ್ಟ್‍ಗಳನ್ನು ಆರಂಭಿಸಿದ್ದೀರಿ. ಏನದು? ಪುನೀತ್: ಪಿಆರ್ ಕೆ ಆಡಿಯೋ ಹಾಗೂ ಪಿಆರ್ ಕೆ ಪ್ರೊಡಕ್ಷನ್ ಆರಂಭಿಸಿದ್ದೇವೆ. ಐಟಿ: ದೊಡ್ಡ ದೊಡ್ಡ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದೀರಾ. ಅದರ ಮಾಹಿತಿ ಕೊಡಿ. ಪುನೀತ್: ದೊಡ್ಡ ವ್ಯವಹಾರ ಆಗುತ್ತಿರೋದ್ರಿಂದ ಮಾಹಿತಿಗೆ ಕಾಲಾವಕಾಶ ಬೇಕು.
* ಐಟಿ ಕೇಳಿದ ಪ್ರಶ್ನೆಗೆ ಸುದೀಪ್ ಉತ್ತರವೇನು….? ಐಟಿ ಪ್ರಶ್ನೆ: ನಿಮ್ಮ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿ. ಸುದೀಪ್ ಉತ್ತರ: ನನಗೆ ಸ್ವಲ್ಪ ಕಾಲಾವಕಾಶ ಬೇಕಾಗಿದೆ. ಐಟಿ: ನಿಮ್ಮಲ್ಲಿ ಐಷಾರಾಮಿ ಕಾರುಗಳಿವೆ. ಅದರ ಮಾಹಿತಿ ನೀಡಿ. ಸುದೀಪ್: ಹೊಸದಾಗಿ ಯಾವುದು ಖರೀದಿಸಿಲ್ಲ. ಇವೆಲ್ಲಾ ಹಳೆಯದ್ದು ಐಟಿ: ನೀವು ಬೆಳ್ಳಿತೆರೆ ಅಲ್ಲದೆ, ಕಿರುತೆರೆಯಲ್ಲೂ ನಟನೆ ಮಾಡುತ್ತಿದ್ದೀರಿ. ಎಷ್ಟು ಸಂಭಾವನೆ ಪಡೆಯುತ್ತೀರಿ? ಸುದೀಪ್: ಸಂಭಾವನೆ, ವ್ಯವಹಾರ ಬಗ್ಗೆ ನಮ್ಮ ಅಕೌಂಟೆಂಟ್ ಮಾಹಿತಿ ಕೊಡಲಿದ್ದಾರೆ ಐಟಿ: ಚಿತ್ರರಂಗವಲ್ಲದೆ ಇತರ ವ್ಯವಹಾರಗಳ ಬಗ್ಗೆ ಮಾಹಿತಿ ಕೊಡಿ. ಸುದೀಪ್: ಎಲ್ಲವನ್ನೂ ಲಿಖಿತ ರೂಪದಲ್ಲಿ ನಮ್ಮ ಅಕೌಂಟೆಂಟ್ ನೀಡಲಿದ್ದಾರೆ.
* ಐಟಿ ಕೇಳಿದ ಪ್ರಶ್ನೆಗೆ ಶಿವಣ್ಣ ಉತ್ತರವೇನು….? ಐಟಿ ಪ್ರಶ್ನೆ: ಮೋಸ್ಟ್ ಬ್ಯುಸಿ ನಟ ನೀವು. ವರ್ಷಕ್ಕೆ ಎಷ್ಟು ಸಿನಿಮಾಗಳ ನಟಿಸುತ್ತೀರಾ? ಶಿವಣ್ಣ ಉತ್ತರ: ವರ್ಷಕ್ಕೆ 7ರಿಂದ 8 ಸಿನಿಮಾಗಳಲ್ಲಿ ನಟಿಸುತ್ತೇನೆ. ಐಟಿ: ನಿಮ್ಮ ಪುತ್ರಿಯ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್ ಇದೆ. ಇದರ ಮಾಹಿತಿ ಕೊಡಿ. ಶಿವಣ್ಣ: ನಮ್ಮ ಅಕೌಂಟೆಂಟ್ ಸಂಪರ್ಕಿಸಿ ಕೊಡುತ್ತೇನೆ. ಐಟಿ: ನೀವು ಸಿನಿಮಾವಲ್ಲದೆ, ಸೀರಿಯಲ್ ನಿರ್ಮಾಣದಲ್ಲಿ ತೊಡಗಿದ್ದೀರಾ? ಶಿವಣ್ಣ: ಹೌದು, ಅದರ ವ್ಯವಹಾರವನ್ನೆಲ್ಲಾ ಪತ್ನಿ ನೋಡಿಕೊಳ್ಳುತ್ತಾರೆ. ಐಟಿ: ರಿಯಲ್ ಎಸ್ಟೇಟ್‍ನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಾ? ಶಿವಣ್ಣ: ಹೂಡಿಕೆಯ ಬಗ್ಗೆ ನನ್ನ ಅಕೌಂಟೆಂಟ್ ಮಾಹಿತಿ ಕೊಡುತ್ತಾರೆ.