Tag: england

  • ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

    ಲಂಡನ್: ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಅಪರೂಪದ ಸಾಧನೆ ಮಾಡಿದ್ದು, ಟೂರ್ನಿಯಲ್ಲಿ 13 ಕ್ಯಾಚ್ ಪಡೆಯುವ ಮೂಲಕ ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ್ದಾರೆ.

    ಓವೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ರಾಹುಲ್, ಸ್ಟುವರ್ಟ್ ಬ್ರಾಡ್ (98) ಕ್ಯಾಚ್ ಪಡೆಯುವ ಮೂಲಕ ಈ ಸಾಧನೆ ಮಾಡಿದರು. ಈ ಹಿಂದೆ ಟೀಂ ಇಂಡಿಯಾದ ರಾಹುಲ್ ದ್ರಾವಿಡ್ 2004-05 ರಲ್ಲಿ ನಡೆದ ಆಸೀಸ್ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ ಟೂರ್ನಿಯಲ್ಲಿ 13 ಕ್ಯಾಚ್ ಪಡೆದಿದ್ದರು. ಈ ಪಟ್ಟಿಯಲ್ಲಿ ಆಸೀಸ್ ಆಟಗಾರ ಜಾಕ್ ಗ್ರೆಗೊರಿ 1920-21ರಲ್ಲಿ ನಡೆದ ಆಸಿಸ್ ಟೆಸ್ಟ್ ಟೂರ್ನಿಯಲ್ಲಿ 15 ಕ್ಯಾಚ್ ಪಡೆದು ದಾಖಲೆ ನಿರ್ಮಿಸಿದ್ದರು.

    ವಿಶೇಷವಾಗಿ ಇಂಗ್ಲೆಂಡ್ ನೆಲದಲ್ಲಿ ನಡೆದ ಟೂರ್ನಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ದಾಖಲೆಯನ್ನು ಕೆಎಲ್ ರಾಹುಲ್ ಪಡೆದಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾದ ಜಾನ್ ಇಕಿನ್ 1951 ರಲ್ಲಿ 12 ಕ್ಯಾಚ್ ಪಡೆದಿದ್ದರು. ಉಳಿದಂತೆ ಮೂರನೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 7 ಕ್ಯಾಚ್ ಹಿಡಿದಿದ್ದ ಕೆಎಲ್ ರಾಹುಲ್ ಟೆಸ್ಟ್ ನಲ್ಲಿ ವಿಕೆಟ್ ಕೀಪರ್ ಹೊರತು ಪಡಿಸಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು.

    ಅಂತಿಮ ಟೆಸ್ಟ್ ಪಂದ್ಯದ 2ನೇ ದಿನದಾಟವನ್ನು 198/7 ರನ್‍ಗಳಿಂದ ಮುಂದುವರೆಸಿದ ಇಂಗ್ಲೆಂಡ್ ಬಾಲಂಗೋಚಿಗಳು ಟೀಂ ಇಂಡಿಯಾ ಬೌಲರ್ ಗಳನ್ನು ಕೆಲ ಕಾಲ ಕಾಡಿದರು. ಈ ನಡುವೆ ಅರ್ಧ ಶತಕ ಸಿಡಿದ ಬಟ್ಲರ್ ತಂಡದ ಸ್ಕೋರ್ 300 ಗಡಿ ದಾಟಲು ನೆರವಾದರು. ಬಟ್ಲರ್ ಗೆ ಇತರೇ ಆಟಗಾರರು ಉತ್ತಮ ಬೆಂಬಲ ನೀಡಿದರು. ಈ ವೇಳೆ ಬಿರುಸಿನ ಆಟಕ್ಕೆ ಮುಂದಾದ ಬಟ್ಲರ್ 89 ರನ್ ಗಳಸಿ ವಿಕೆಟ್ ಒಪ್ಪಿಸಿದರು. ಅದಾಗಲೇ ಇಂಗ್ಲೆಂಡ್ ಸ್ಪರ್ಧಾತ್ಮಕ ಮೊತ್ತ (332 ರನ್) ಕಲೆಹಾಕಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ ಧರಿಸಿದ ಹನುಮ ವಿಹಾರಿ

    ಲಂಡನ್: ಇಂಗ್ಲೆಂಡ್ ವಿರುದ್ಧ ಓವೆಲ್‍ನಲ್ಲಿ ಆರಂಭವಾಗಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಯುವ ಆಟಗಾರ ಹನುಮ ವಿಹಾರಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಪಂದ್ಯದ ಆರಂಭಕ್ಕೂ ಮುನ್ನ 24 ವರ್ಷದ ಹನುಮ ವಿಹಾರಿ ನಾಯಕ ವಿರಾಟ್ ಕೊಹ್ಲಿ ಅವರಿಂದ ಕ್ಯಾಪ್ ಪಡೆದು ಟೀಂ ಇಂಡಿಯಾ 292ನೇ ಟೆಸ್ಟ್ ಆಟಗಾರರಾಗಿ ಪಾದಾರ್ಪಣೆ ಮಾಡಿದರು.

    ಈ ಕುರಿತು ಸಂತಸ ವ್ಯಕ್ತಪಡಿಸಿರುವ ವಿಹಾರಿ, ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯ. ಆದರೆ ಒಮ್ಮೆ ತಂಡದಲ್ಲಿ ಸ್ಥಾನ ಲಭಿಸಿದರೆ ಸಿಕ್ಕ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಬೇಕು. ನಾನು ಈ ಕುರಿತು ಹೆಚ್ಚಿನ ಗಮನ ನೀಡಿದ್ದಾಗಿ ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯಕ್ಕೆ ತಂಡದ ಆಡುವ 11ರ ಬಳಗದಲ್ಲಿ ಎರಡು ಬದಲಾವಣೆ ಆಗಿದ್ದು, ಆರ್ ಅಶ್ವಿನ್ ಸ್ಥಾನದಲ್ಲಿ ರವೀಂದ್ರ ಜಡೇಜಾ ಹಾಗೂ ಪಾಂಡ್ಯ ಸ್ಥಾನದಲ್ಲಿ ಹನುಮ ವಿಹಾರಿಗೆ ಅವಕಾಶ ನೀಡಲಾಗಿದೆ. ಇಂಗ್ಲೆಂಡ್ ವಿರುದ್ಧದ ಅಂತಿಮ 2 ಪಂದ್ಯಗಳಿಗೆ ಪೃಥ್ವಿ ಶಾ ಹಾಗೂ ಹನುಮ ವಿಹಾರಿ ಅವರನ್ನು ಸಮಿತಿ ಆಯ್ಕೆ ಮಾಡಿತ್ತು.

    ಹನುಮ ವಿಹಾರಿ ಟೀಂ ಇಂಡಿಯಾ ಎ ತಂಡದಲ್ಲಿ ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದು, ದಕ್ಷಿಣ ಅಫ್ರಿಕಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 148 ರನ್ ಸಿಡಿಸಿದ್ದರು. ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿದ್ದರು.

    ಹನುಮ ವಿಹಾರಿ ಸಾಧನೆ:
    ಪ್ರಥಮ ದರ್ಜೆ ಕ್ರಿಕೆಟ್ – 63 ಪಂದ್ಯ, 5,142 ರನ್, 59.79 ಸರಾಸರಿ
    ಲಿಸ್ಟ್ ಎ ಕ್ರಿಕೆಟ್- 56 ಪಂದ್ಯ, 2268 ರನ್, 83.90 ಸರಾಸರಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ರೋಲ್ ಮಾಡಿದವರಿಗೆ ಕೆಎಲ್ ರಾಹುಲ್ ತಿರುಗೇಟು!

    ಟ್ರೋಲ್ ಮಾಡಿದವರಿಗೆ ಕೆಎಲ್ ರಾಹುಲ್ ತಿರುಗೇಟು!

    ಲಂಡನ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದ ಬಳಿಕ ಸ್ಟೈಲಿಶ್ ಫೋಟೋ ಪೋಸ್ಟ್ ಮಾಡಿ ಟ್ರೋಲ್‍ಗೊಳಗಾಗಿದ್ದ ಕೆಎಲ್ ರಾಹುಲ್, ಏಳುಬಾರಿ ಬಿದ್ದರು, ಎಂಟನೇ ಬಾರಿಗೆ ಮೇಲೆದ್ದು ಬರುವೇ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ತಮ್ಮ ಟ್ವೀಟ್‍ನಲ್ಲಿ ಈ ಕುರಿತು ವೀಡಿಯೋ ಪೋಸ್ಟ್ ಮಾಡಿರುವ ರಾಹುಲ್, ಏಳು ಬಾರಿ ಬಿದ್ದರು ಎಂಟನೇ ಬಾರಿ ಮೇಲೆದ್ದು ಬರುತ್ತೇನೆ. ಎಲ್ಲವೂ ಭಿನ್ನವಾಗಿರುತ್ತವೆ. ಕಠಿಣ ಪರಿಶ್ರಮದೊಂದಿಗೆ ಮುಂದೇ ಸಾಗುವಂತೆ ವೀಡಿಯೋಗೆ ಹಣೆಬರಹ ನೀಡಿದ್ದಾರೆ. ಅಲ್ಲದೇ ವೀಡಿಯೋದಲ್ಲಿ ರಾಹುಲ್ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಕ್ಕೆ ಜಿಮ್ ನಲ್ಲಿ ಬೆವರು ಹರಿಸುತ್ತಿರುವುದನ್ನು ಕಾಣಬಹುದಾಗಿದೆ. ವೀಡಿಯೋದಲ್ಲಿ ಅಮೆರಿಕನ್ ಪಾಪ್ ಸಿಂಗರ್ ಎಮಿನೆಮ್ ರ ಪ್ರಸಿದ್ಧ ಹಾಡು ಕೇಳಿಬಂದಿದೆ.

    ಇಂಗ್ಲೆಂಡ್ ಟೂರ್ನಿಗೆ ಆಯ್ಕೆ ಆಗುವ ಮೂಲಕ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯಲು ಅವಕಾಶ ಹೊಂದಿದ್ದ ಕೆಎಲ್ ರಾಹುಲ್, ಕಳೆದ 8 ಇನ್ನಿಂಗ್ಸ್ ಗಳಲ್ಲಿ ಕೇವಲ 113 ರನ್ ಮಾತ್ರ ಗಳಿಸಿದ್ದಾರೆ. ಇನ್ನು ಇಂಗ್ಲೆಂಡ್ ಟೂರ್ನಿಗೆ ಆಯ್ಕೆ ಮಾಡುವ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಆಟಗಾರರು ರಾಹುಲ್ ಪರ ಬ್ಯಾಟ್ ಬೀಸಿದ್ದರು.

    ಟೀಂ ಇಂಡಿಯಾ ಸದ್ಯ 5 ಟೆಸ್ಟ್ ಪಂದ್ಯಗಳ ಸರಣಿಯನ್ನು 3-1 ರಲ್ಲಿ ಕಳೆದುಕೊಂಡಿದ್ದು, ಓವೆಲ್ ಅಂತಿಮ ಟೆಸ್ಟ್ ನಲ್ಲಿ ಗೆಲುವು ಪಡೆಯುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • 4ನೇ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್

    4ನೇ ಟೆಸ್ಟ್‌ನಲ್ಲಿ ಮತ್ತೊಂದು ದಾಖಲೆ ಬರೆದ ವಿರಾಟ್

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವೇಗವಾಗಿ 4 ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆ ಬರೆದಿದ್ದಾರೆ.

    ಕೊಹ್ಲಿ 39 ಪಂದ್ಯ, 65 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದಾರೆ. ಈ ಹಿಂದೆ ವೆಸ್ಟ್ ಇಂಡೀಸ್ ಬ್ರಿಯಾನ್ ಲಾರಾ 40 ಪಂದ್ಯ, 71 ಇನ್ನಿಂಗ್ಸ್ ಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು. ಉಳಿದಂತೆ ಪಟ್ಟಿಯಲ್ಲಿ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ (42 ಪಂದ್ಯ, 75 ಇನ್ನಿಂಗ್ಸ್), ಗ್ರೇಗ್ ಚಾಪೆಲ್ (45 ಪಂದ್ಯ, 80 ಇನ್ನಿಂಗ್ಸ್), ಅಲಾನ್ ಬಾರ್ಡರ್ (49 ಪಂದ್ಯ, 83 ಇನ್ನಿಂಗ್ಸ್) ಕ್ರಮವಾಗಿ ಸ್ಥಾನ ಪಡೆದಿದ್ದಾರೆ.

    ಇನ್ನು 4ನೇ ಇನ್ನಿಂಗ್ಸ್ ನಲ್ಲಿ 58 ರನ್ ಗಳಿಸಿ ಔಟಾದ ಕೊಹ್ಲಿ ಈ ಟೂರ್ನಿಯಲ್ಲಿ 544 ರನ್ ಪೂರೈಸಿದರು. ಈ ಮೂಲಕ ವಿದೇಶಿ ನೆಲದಲ್ಲಿ ನಡೆದ ಟೂರ್ನಿಯೊಂದರಲ್ಲಿ 500 ಪ್ಲಸ್ ರನ್ ಸಿಡಿಸಿದ ಟೀಂ ಇಂಡಿಯಾ ನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದರು. ಅಲ್ಲದೇ ಇಂಗ್ಲೆಂಡ್ ನೆಲದಲ್ಲಿ ಈ ಸಾಧನೆ ಮಾಡಿದ ಮೊದಲ ಏಷ್ಯನ್ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದರು. ಇದನ್ನು ಓದಿ : ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಟೆಸ್ಟ್‌ನಲ್ಲಿ ಸಚಿನ್ ಸಾಧನೆ ಹಿಂದಿಕ್ಕಿದ ಕೊಹ್ಲಿ

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 6 ಸಾವಿರ ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.

    ಸಚಿನ್ 120 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಗಳಿಸಿದ್ದರೆ ಕೊಹ್ಲಿ 71 ಟೆಸ್ಟ್ ಪಂದ್ಯಗಳ 119 ಇನ್ನಿಂಗ್ಸ್ ನಲ್ಲಿ 6 ಸಾವಿರ ರನ್ ಗಳ ಗಡಿಯನ್ನು ದಾಟಿದ್ದಾರೆ. ಇದರಲ್ಲಿ 23 ಶತಕಗಳು, 18 ಅರ್ಧ ಶತಕಗಳು ಸೇರಿದೆ. ಭಾರತದ ಪರ ಸುನೀಲ್ ಗವಾಸ್ಕರ್ 117 ಇನ್ನಿಂಗ್ಸ್ ಗಳಲ್ಲಿ 6 ಸಾವಿರ ರನ್ ಪೂರೈಸಿ ಮೊದಲ ಸ್ಥಾನ ಪಡೆದಿದ್ದಾರೆ. ಅಲ್ಲದೇ ಟೀಂ ಇಂಡಿಯಾ ಪರ ಈ ಸಾಧನೆ ಮಾಡಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಪಂದ್ಯದ 22ನೇ ಓವರ್ ನ ವೇಳೆ 9 ರನ್ ಗಳಿಸಿದ್ದ ಕೊಹ್ಲಿ 6 ಸಾವಿರ ರನ್ ದಾಟಿದರು. ಈ ಹಿಂದೆ ಟೀಂ ಇಂಡಿಯಾ ಪರ ವೀರೇಂದ್ರ ಸೆಹ್ವಾಗ್ (72 ಟೆಸ್ಟ್, 123 ಇನ್ನಿಂಗ್ಸ್), ರಾಹುಲ್ ದ್ರಾವಿಡ್ (73 ಟೆಸ್ಟ್, 125 ಇನ್ನಿಂಗ್ಸ್), ಮತ್ತು ಸಚಿನ್ ತೆಂಡೂಲ್ಕರ್ (76 ಟೆಸ್ಟ್, 120 ಇನ್ನಿಂಗ್ಸ್) ಗಳಲ್ಲಿ 6 ಸಾವಿರ ರನ್ ಪೂರೈಸಿದ್ದರು.

    ಕೊಹ್ಲಿ ರನ್ ಸಾಧನೆ:
    27 ಇನ್ನಿಂಗ್ಸ್ 1 ಸಾವಿರ ರನ್
    26 ಇನ್ನಿಂಗ್ಸ್ 1 ರಿಂದ 2 ಸಾವಿರ ರನ್
    20 ಇನ್ನಿಂಗ್ಸ್ 2 ರಿಂದ 3 ಸಾವಿರ ರನ್
    16 ಇನ್ನಿಂಗ್ಸ್ 3 ರಿಂದ 4 ಸಾವಿರ ರನ್
    16 ಇನ್ನಿಂಗ್ಸ್ 4 ರಿಂದ 5 ಸಾವಿರ ರನ್
    14 ಇನ್ನಿಂಗ್ಸ್ 5 ರಿಂದ 6 ಸಾವಿರ ರನ್

    ಕೊಹ್ಲಿ ಈಗಾಗಲೇ 23 ಶತಕ ಸಿಡಿಸಿ ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ದಾಖಲೆ ಮುರಿದಿದ್ದಾರೆ. ಇಂದಿನ ಪಂದ್ಯದಲ್ಲಿ 46 ರನ್ ಗಳಿಸಿದ ಕೊಹ್ಲಿ, ಕರ್ರನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಟೆಸ್ಟ್ ಮೊದಲ ದಿನವೇ ನಿರ್ಮಾಣವಾಯ್ತು ಹಲವು ದಾಖಲೆ

    4ನೇ ಟೆಸ್ಟ್ ಮೊದಲ ದಿನವೇ ನಿರ್ಮಾಣವಾಯ್ತು ಹಲವು ದಾಖಲೆ

    ಲಂಡನ್: ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತೀಯ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 246 ರನ್ ಗಳಿಗೆ ಅಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 15 ರನ್ ಗಳಿಸಿದೆ. ಇದೇ ವೇಳೆ ಮೊದಲ ದಿನದಲ್ಲಿ ದಾಖಲಾದ ಕೆಲ ಇನ್‍ಟ್ರೆಸ್ಟಿಂಗ್ ದಾಖಲೆಗಳ ಅಂಕಿ ಅಂಶಗಳು ಇಂತಿದೆ.

    5 ಬೌಲರ್: ಟೀಂ ಇಂಡಿಯಾ ಪರ 5 ಬೌಲರ್ ಗಳು ಮೊದಲ ಬಾರಿಗೆ ಟೆಸ್ಟ್ ಸರಣಿಯೊಂದರಲ್ಲಿ 10 ಪ್ಲಸ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಜಸ್‍ಪ್ರೀತ್ ಬುಮ್ರಾ 3, ಶರ್ಮಾ, ಮಹಮ್ಮದ್ ಶಮಿ, ಅಶ್ವಿನ್ ತಲಾ 2, ಪಾಂಡ್ಯ 1 ವಿಕೆಟ್ ಪಡೆದು ಮಿಂಚಿದ್ದಾರೆ.

    23 ಬೈ ರನ್: ಮೊದಲ ದಿನದಾಟದ ವೇಳೆ ಟೀಂ ಇಂಡಿಯಾ 23 ಬೈ ರನ್ ನೀಡಿದ್ದು, ಕಳೆದ 100 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಂದ್ಯದ ಆರಂಭಿಕ ದಿನವೇ ಟೀಂ ಇಂಡಿಯಾ ಹೆಚ್ಚು ಬೈ ರನ್ ನೀಡಿದೆ. ಈ ಹಿಂದೆ 1964 ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೊದಲ ದಿನ 29 ಬೈ ರನ್ ನೀಡಿತ್ತು.

    39 ಟೆಸ್ಟ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 39 ಟೆಸ್ಟ್ ಪಂದ್ಯಗಳ ಬಳಿಕ ಮೊದಲ ಬಾರಿಗೆ ಆಡುವ 11 ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದಾರೆ. ಈ ಹಿಂದೆ ಗ್ರೇಮ್ಸ್ ಸ್ಮಿತ್ ತಮ್ಮ ನಾಯಕತ್ವದ 44 ಪಂದ್ಯಗಳ ಬಳಿಕ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡದೆ ಕಣಕ್ಕೆ ಇಳಿದಿದ್ದರು.

    86 ಟೆಸ್ಟ್: ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ತಮ್ಮ 86ನೇ ಟೆಸ್ಟ್ ಪಂದ್ಯದಲ್ಲಿ 250 ವಿಕೆಟ್ ಗಳಿಸಿದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೇ ಭಾರತದ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    200 ಕ್ಯಾಚ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 200 ಕ್ಯಾಚ್ ಪಡೆದ ಸಾಧನೆ ಮಾಡಿದ್ದಾರೆ. ಈ ಹಿಂದೆ ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್ ಮತ್ತು ಸಚಿನ್ 200 ಕ್ಯಾಚ್ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    4ನೇ ಟೆಸ್ಟ್ ನಲ್ಲಿ ಇಶಾಂತ್ ಶರ್ಮಾ ರೆಕಾರ್ಡ್

    ಲಂಡನ್: ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಮಿಂಚಿನ ದಾಳಿಗೆ ಇಂಗ್ಲೆಂಡ್ ಬಾಟ್ಸ್ ಮನ್ ಪೆವಿಲಿಯನ್ ಪರೇಡ್ ನಡೆಸಿದ್ದು, ಲಂಚ್ ಬ್ರೇಕ್ ಬಳಿಕ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

    ಸೌಥಾಂಪ್ಟನ್ ರೋಸ್ ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ, ಜೋ ರೂಟ್ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಭಾರತದ ಪರ ಈ ಸಾಧನೆ ಮಾಡಿದ 7ನೇ ಬೌಲರ್ ಎಂಬ ಹೆಗ್ಗಳಿಕೆ ಶರ್ಮಾ ಪಡೆದಿದ್ದಾರೆ. ಅಲ್ಲದೇ ವೇಗದ ಬೌಲರ್ ಗಳಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್ ಆಗಿದ್ದು, ಈ ಹಿಂದೆ ಕಪಿಲ್ ದೇವ್, ಜಹೀರ್ ಖಾನ್ ಕ್ರಮವಾಗಿ 434, 311 ವಿಕೆಟ್ ಗಳಿಸಿದ್ದರು. ಈ ಪಂದ್ಯದಲ್ಲಿ ಇಶಾಂತ್ ಶರ್ಮಾ ಮತ್ತೊಂದು ಹೆಗ್ಗಳಿಕೆಯನ್ನು ಪಡೆದಿದ್ದು ಇಂಗ್ಲೆಂಡ್ ವಿರುದ್ಧ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡಕ್ಕೆ ಜಸ್‍ಪ್ರೀತ್ ಬುಮ್ರಾ ಆರಂಭಿಕ ಕೇಟನ್ ವಿಕೆಟ್ ಪಡೆದು ಅಘಾತ ನೀಡಿದರು. ಇದರ ಬೆನ್ನಲ್ಲೇ ದಾಳಿಗಿಳಿದ ಇಶಾಂತ್ ಶರ್ಮಾ 4 ರನ್ ಗಳಿಸಿದ್ದ ರೂಟ್ ರನ್ನು ಎಲ್‍ಬಿ ಬಲೆಗೆ ಕೆಡವಿದರು. ಬಳಿಕ ಬಂದ ಜಾನಿ ಬೈರ್ ಸ್ಟೋವ್ (6) ಕೂಡ ಹೆಚ್ಚು ಸಮಯ ಕ್ರಿಸ್ ನಲ್ಲಿ ನಿಲ್ಲಲಿಲ್ಲ. ಈ ಮಧ್ಯೆ ಕುಕ್, ಸ್ಟೋಕ್ಸ್ ಜೋಡಿ 4ನೇ ವಿಕೆಟ್ ಗೆ 33 ರನ್ ಜೊತೆಯಾಟ ನೀಡಿದ್ದ ವೇಳೆ ಕುಕ್ ವಿಕೆಟ್ ಪಡೆದ ಬುಮ್ರಾ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 4ನೇ ಟೆಸ್ಟ್‍ಗೆ ಆಯ್ಕೆಯಾಗಿದ್ದ ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಆಲಿ ತಂಡಕ್ಕೆ ಕೆಲ ಕಾಲ ಆಸರೆಯಾದರು. ಆದರೆ 40 ರನ್ ಗಳಿಸಿದ್ದ ಆಲಿ, ಅಶ್ವಿನ್ ಬೌಲಿಂಗ್ ನಲ್ಲಿ ಬುಮ್ರಾಗೆ ಕ್ಯಾಚ್ ನೀಡಿ ಔಟಾದರು.

    ಇಂಗ್ಲೆಂಡ್ 65 ಓವರ್ ಗಳಲ್ಲಿ 178/8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿ ಟೀಂ ಇಂಡಿಯಾ ಸರಣಿಯಲ್ಲಿ ಸಮಬಲ ಸಾಧಿಸುವ ಒತ್ತಡಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ರಿಷಭ್ ಪಂತ್‍ಗೆ ನಿಂದಿಸಿದ್ದ ಬ್ರಾಡ್‍ಗೆ ಕೊಹ್ಲಿ ತಿರುಗೇಟು-ವೀಡಿಯೋ ವೈರಲ್

    ಲಂಡನ್: ನಾಟಿಂಗ್ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾ ಯುವ ಆಟಗಾರ ರಿಷಭ್ ಪಂತ್‍ರನ್ನು ನಿಂದಿಸಿದ್ದ ಸ್ಟುವರ್ಟ್ ಬ್ರಾಡ್‍ಗೆ ಕೊಹ್ಲಿ ಆನ್ ಫೀಲ್ಡ್ ನಲ್ಲೇ ತಿರುಗೇಟು ನೀಡಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಪಂತ್ ಪಾದಾರ್ಪಣೆ ಮಾಡಿದ್ದು, ಮೊದಲ ಇನ್ನಿಂಗ್ಸ್ ನ 92 ನೇ ಓವರ್ ನಲ್ಲಿ 26 ರನ್ ಗಳಿಸಿದ್ದ ಪಂತ್ ಔಟಾಗಿದ್ದರು. ಈ ವೇಳೆ ಪೆವಿಲಿಯನ್ ನತ್ತ ನಡೆದಿದ್ದ ಪಂತ್ ಬಳಿ ಬಂದ ಸ್ಟುವರ್ಟ್ ಬ್ರಾಡ್ ನಿಂದಿಸಿದ್ದರು. ಈ ದೃಶ್ಯಗಳು ವೀಡಿಯೋದಲ್ಲಿ ಕೂಡ ಸೆರೆಯಾಗಿತ್ತು. ಸದ್ಯ ಪಂತ್ ರನ್ನು ನಿಂದಿಸಿದ್ದ ಬ್ರಾಡ್‍ಗೆ ಅದೇ ಪಂದ್ಯದಲ್ಲಿ ಕೊಹ್ಲಿ ತಿರುಗೇಟು ನೀಡಿದ್ದಾರೆ. ಕೊಹ್ಲಿ ಮಾತಿಗೆ ಬ್ರಾಡ್ ಉತ್ತರವನ್ನು ಸಹ ನೀಡಿದ್ದು, ಇಬ್ಬರ ನಡುವಿನ ಸಂಭಾಷಣೆಯ ವೀಡಿಯೋ ವೈರಲ್ ಆಗಿದೆ.

    ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ವಿರುದ್ಧ ಕ್ರಮಕೈಗೊಂಡಿದ್ದ ಐಸಿಸಿ, ನಿಯಮ 2.2.7 ರ ಉಲ್ಲಂಘನೆ ಎಂದು ತೀರ್ಮಾನಿಸಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿತ್ತು. ಬ್ರಾಡ್ ವರ್ತನೆ ವಿರುದ್ಧ ಗರಂ ಆಗಿದ್ದ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಕೂಡ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಘಟನೆಯನ್ನು ನೆನಪು ಮಾಡಿ ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದಿದ್ದರು.

    ಉಳಿದಂತೆ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸುವ ಮೂಲಕ ರನ್ ಖಾತೆ ತೆರೆದಿದ್ದ ಪಂತ್ ದಾಖಲೆ ಬರೆದಿದ್ದರು. ಅಲ್ಲದೇ ಮೊದಲ ಟೆಸ್ಟ್‍ನಲ್ಲೇ ವಿಕೆಟ್ ಕೀಪಿಂಗ್ ನಲ್ಲಿ 7 ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.

    ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಗೆಲುವಿನ ಆಸೆಯನ್ನು ಜೀವಂತವಾಗಿಸಿದ್ದು, ಇನ್ನುಳಿದ 2 ಟೆಸ್ಟ್ ಪಂದ್ಯದಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಇಂಗ್ಲೆಂಡ್ ವಿರುದ್ಧ ದ 4ನೇ ಟೆಸ್ಟ್ ಪಂದ್ಯ ಸೌಥಾಂಪ್ಟನ್‍ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ಆಗಸ್ಟ್ 30 ರಂದು ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456?

  • ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಪೃಥ್ವಿ ಶಾ ಕುರಿತು 10 ವರ್ಷಗಳ ಹಿಂದೆ ಸಚಿನ್ ನುಡಿದಿದ್ದ ಭವಿಷ್ಯ ನಿಜವಾಯ್ತು!

    ಮುಂಬೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಟೂರ್ನಿಯ ಅಂತಿಮ 2 ಪಂದ್ಯಗಳಿಗೆ 18 ವರ್ಷದ ಯುವ ಆಟಗಾರ ಪೃಥ್ವಿ ಶಾ ಅವರನ್ನು ಬಿಸಿಸಿಐ ಆಯ್ಕೆ ಮಾಡಿದ್ದು, ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು 10 ವರ್ಷದ ಹಿಂದೆ ಸಚಿನ್ ತೆಂಡೂಲ್ಕರ್ ಹೇಳಿದ ಮಾತು ಇಂದು ನಿಜವಾಗಿದೆ.

    ಶಾ ಭವಿಷ್ಯದ ಕುರಿತು ತನ್ನ ಸ್ನೇಹಿತನಿಗೆ ಹೇಳಿದ್ದ ಮಾತನ್ನು ಸಚಿನ್ ತಮ್ಮ 100MB ಆ್ಯಪ್ ಬಿಡುಗಡೆಯ ವೇಳೆ ರಿವೀಲ್ ಮಾಡಿದ್ದಾರೆ. ಶಾ 8 ವರ್ಷ ಬಾಲಕನಾಗಿದ್ದ ವೇಳೆ ಆತನ ಬ್ಯಾಟಿಂಗ್ ಶೈಲಿ ಕಂಡು ಕೆಲವು ಸಲಹೆ ನೀಡಿದ್ದೆ. ಅಲ್ಲದೇ ಯಾವುದೇ ಕಾರಣಕ್ಕೂ ಈ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳದಂತೆ ಹೇಳಿದ್ದಾಗಿ ತಿಳಿಸಿದ್ದಾರೆ.

    ಹತ್ತು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸುವಂತೆ ಹೇಳಿದ್ದ. ಅಲ್ಲದೇ ಆತನ ಬ್ಯಾಟಿಂಗ್ ಶೈಲಿ ಕುರಿತು ವಿಶ್ಲೇಷಣೆ ಮಾಡಿ ಸಲಹೆ ನೀಡಲು ತಿಳಿಸಿದ್ದ. ಈ ವೇಳೆ ಕೆಲವು ಸಲಹೆ ನೀಡಿದ್ದೆ. ಅಲ್ಲದೇ ನನ್ನ ಸ್ನೇಹಿತನಿಗೆ ಮುಂದೊಂದು ದಿನ ಶಾ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದು ಹೇಳಿದ್ದೆ ಅಂದ್ರು.  ಇದನ್ನು ಓದಿ: ಇಂಗ್ಲೆಂಡ್ ಟೆಸ್ಟ್: ಫೈನಲ್ ಟೆಸ್ಟ್ ಪಂದ್ಯಗಳಿಗೆ ಪೃಥ್ವಿ ಶಾ, ವಿಹಾರಿಗೆ ಅವಕಾಶ 

    ಸದ್ಯ ಸಚಿನ್ ಭವಿಷ್ಯದ ಮಾತು ನಿಜವಾಗಿದ್ದು, ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಪೃಥ್ವಿ ಶಾ ಪಾದಾರ್ಪಣೆ ಮಾಡಲು ಕಾತುರರಾಗಿದ್ದಾರೆ. ಅಂದಹಾಗೇ ಶಾ ಈಗಾಗಲೇ ತಮ್ಮ ಬ್ಯಾಟಿಂಗ್ ಮೂಲಕ ಹಲವು ಕ್ರಿಕೆಟ್ ದಿಗ್ಗಜರ ಗಮನ ಸೆಳೆದಿದ್ದಾರೆ. 14 ವಯಸ್ಸಿನಲ್ಲೇ ಪೃಥ್ವಿ ಶಾ ಪಂದ್ಯವೊಂದರಲ್ಲಿ 330 ಎಸೆಗಳಲ್ಲಿ 546 ರನ್ ಗಳಿಸಿ ಮಿಂಚಿದ್ದರು. ಬಳಿಕ ಅಂಡರ್ 19 ತಂಡದ ನಾಯಕತ್ವ ವಹಿಸಿ ವಿಶ್ವಕಪ್ ಗೆದ್ದು ತಂದಿದ್ದರು.

    ಸದ್ಯ ಪೃಥ್ವಿ ಶಾ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 14 ಪಂದ್ಯಗಳಿಂದ 56.72 ರ ಸರಾಸರಿಯಲ್ಲಿ 1,418 ರನ್ ಗಳಿಸಿದ್ದಾರೆ. ಉಳಿದಂತೆ ಟೀಂ ಇಂಡಿಯಾ ಎ ತಂಡದ ಪರ ಇಂಗ್ಲೆಂಡ್ ನೆಲದಲ್ಲೇ 3 ಶತಕ ಗಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ರಿಷಭ್ ಪಂತ್ ನಿಂದಿಸಿ ದಂಡ ತೆತ್ತ ಸ್ಟುವರ್ಟ್ ಬ್ರಾಡ್ – ಟ್ವಿಟ್ಟರ್ ನಲ್ಲಿ ಬ್ರಾಡ್ ಕಾಲೆಳೆದ ಅಭಿಮಾನಿಗಳು!

    ಲಂಡನ್: ಟೀಂ ಇಂಡಿಯಾ ಪರ ಪಾದಾರ್ಪಣೆ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಯುವ ಆಟಗಾರ ರಿಷಭ್ ಪಂತ್‍ರನ್ನು ಆನ್‍ಫೀಲ್ಡ್ ನಲ್ಲಿ ನಿಂದಿಸಿದ ಕಾರಣ ಐಸಿಸಿ ಇಂಗ್ಲೆಂಡ್ ಬೌಲರ್ ಬ್ರಾಡ್‍ಗೆ ದಂಡ ವಿಧಿಸಿದೆ.

    ನಾಟಿಂಗ್ ಹ್ಯಾಮ್ ಟೆಸ್ಟ್ ನ ಭಾರತದ ಮೊದಲ ಇನ್ನಿಂಗ್ಸ್ 92 ನೇ ಓವರ್ ವೇಳೆ ಸ್ಟುವರ್ಟ್ ಬ್ರಾಡ್ ಅನುಚಿತವಾಗಿ ಅನುಚಿತವಾಗಿ ವರ್ತಿಸಿ ನಿಂದನೆ ಮಾಡಿದ್ದರು. ಬ್ರಾಡ್ ವರ್ತನೆ ಐಸಿಸಿ ನಿಯಮ 2.2.7 ರ ನಿಯಮ ಉಲ್ಲಂಘನೆ ಎಂದು ತೀರ್ಮಾನಿಸಿದ ಪಂದ್ಯದ ರೆಫರಿ ಪಂದ್ಯದ ಸಂಭಾವನೆಯ 15% ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ.

    ಬ್ರಾಡ್ ವರ್ತನೆ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು ಸಹ ಗರಂ ಆಗಿದ್ದು, ಈ ಹಿಂದೆ 2007 ರ ಟಿ20 ವಿಶ್ವಕಪ್ ನಲ್ಲಿ ಯುವರಾಜ್ ಸಿಂಗ್ ಸಿಡಿಸಿದ 6 ಸಿಕ್ಸರ್ ಗಳ ಘಟನೆಯನ್ನು ನೆನಪು ಮಾಡಿ ಕಾಲೆಳೆದಿದ್ದಾರೆ.

    ಸಂಭಾವಿತರ ಕ್ರೀಡೆ ಎಂದು ಹೆಸರು ಪಡೆದಿರುವ ಕ್ರಿಕೆಟ್‍ಗೆ ಕೆಲ ದಿನಗಳ ಹಿಂದೆಯಷ್ಟೇ ಐಸಿಸಿ (ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಹೊಸ ತಿದ್ದುಪಡಿ ತಂದು ಮತ್ತಷ್ಟು ಕಠಿಣ ಶಿಕ್ಷೆ ನೀಡಲು ಮುಂದಾಗಿತ್ತು. ಇದರ ಅನ್ವಯ ಹೊಸ ತಿದ್ದುಪಡಿಗಳನ್ನು ಜಾರಿಗೆ ಮಾಡಿ ಮೋಸದಾಟ, ಬಾಲ್ ಟ್ಯಾಂಪರಿಂಗ್, ವೈಯಕ್ತಿಕ ನಿಂದನೆ ಕೃತ್ಯಗಳನ್ನು ಲೆವೆಲ್ 2 ಮತ್ತು 3 ಅಪರಾಧಗಳ ಅಡಿ ಎಂದು ಪರಿಗಣಿಸಿತ್ತು. ಅಲ್ಲದೇ ಅಶ್ಲೀಲ ಪದ ಬಳಕೆ, ಅಂಪೈರ್ ತೀರ್ಮಾನಕ್ಕೆ ವಿರೋಧ ಕೃತ್ಯಗಳನ್ನು ಲೆವೆಲ್ 1 ಅಪರಾಧ ಅಡಿ ಹಾಗೂ ವಿಶೇಷವಾಗಿ ಬಾಲ್ ಟ್ಯಾಂಪರಿಂಗ್ ಮಾಡಿದರೆ ಲೆವೆಲ್ 3 ಅಡಿ ಶಿಕ್ಷೆ ವಿಧಿಸುವ ಅವಕಾಶ ನೀಡಿತ್ತು. ತಿದ್ದುಪಡಿ ನಿಯಮಗಳ ಅನ್ವಯ ಲೆವೆಲ್ 3ರ ಕೃತ್ಯಗಳಿಗೆ 8 ಋಣಾತ್ಮಕ ಅಂಕಗಳಿಂದ 12 ಅಂಕಗಳಿಗೆ ಹೆಚ್ಚಿಸಿತ್ತು. ಅಲ್ಲದೇ 6 ಟೆಸ್ಟ್ ಅಥವಾ 12 ಏಕದಿನ ಪಂದ್ಯಗಳ ನಿಷೇಧಕ್ಕೆ ಸಮಾನಾಗಿರುವಂತೆ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/rocktheworld62/status/1032146978619027456