Tag: england

  • ಭಾರತಕ್ಕೆ ಹೀನಾಯ ಸೋಲು – ಮೈಕಲ್ ವಾನ್‍ರನ್ನ ಟ್ರೋಲ್ ಮಾಡಿ ತಿರುಗೇಟು ಕೊಟ್ಟ ಅಭಿಮಾನಿಗಳು

    ಭಾರತಕ್ಕೆ ಹೀನಾಯ ಸೋಲು – ಮೈಕಲ್ ವಾನ್‍ರನ್ನ ಟ್ರೋಲ್ ಮಾಡಿ ತಿರುಗೇಟು ಕೊಟ್ಟ ಅಭಿಮಾನಿಗಳು

    ಹ್ಯಾಮಿಲ್ಟನ್: ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಅವರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ಟೀಂ ಇಂಡಿಯಾದ ಯುವ ಪಡೆ 30.5 ಓವರ್ ಗಳಲ್ಲಿ 92 ರನ್ ಗಳಿಗೆ ಅಲೌಟ್ ಆಗಿ ಕಳಪೆ ಪ್ರದರ್ಶನವನ್ನು ನೀಡಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ತಂಡದ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ವ್ಯಂಗ್ಯ ಮಾಡಿದ್ದಾರೆ.

    ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಟ್ವೀಟ್ ಮಾಡಿರುವ ವಾನ್, ಟೀಂ ಇಂಡಿಯಾ 92 ರನ್ ಗಳಿಗೆ ಅಲೌಟ್.. ಇಂದಿನ ದಿನಗಳಲ್ಲಿ 100 ರನ್ ಗಳಿಗಿಂತ ಕಡಿಮೆ ಮೊತ್ತಕ್ಕೆ ಅಲೌಟ್ ಆಗಿರುವುದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದರು. ವಾನ್ ಈ ಟ್ವೀಟ್‍ಗೆ ತಿರುಗೇಟು ಕೊಟ್ಟಿರುವ ಭಾರತದ ಕ್ರಿಕೆಟ್ ಅಭಿಮಾನಿಗಳು, ಕಳೆದ ವಾರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 77 ರನ್ ಗಳಿಗೆ ಆಲೌಟ್ ಆಗಿರುವುದನ್ನು ನೆನಪಿಸಿ ಟಾಂಗ್ ಕೊಟ್ಟಿದ್ದಾರೆ.

    ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನ್ಯೂಜಿಲೆಂಡ್ ತಂಡದ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ತಂಡದ ಸ್ಪಿನ್ನರ್ ಚಹಾಲ್ 37 ಎಸೆತಗಳಲ್ಲಿ 18 ರನ್ ಗಳಿಸಿದ್ದೇ ಟಾಪ್ ಸ್ಕೋರ್ ಆದ್ರೆ, ನಾಲ್ಕು ಮಂದಿ ಬ್ಯಾಟ್ಸ್ ಮನ್ ಗಳು ಮಾತ್ರ ಎರಡು ಅಂಕಿ ಮೊತ್ತ ದಾಟಿದರು. ಕೇವಲ 30.5 ಓವರ್ ಗಳಲ್ಲಿ ಟೀಂ ಇಂಡಿಯಾ 92 ರನ್ ಗಳಿಗೆ ಸರ್ವಪತನ ಕಂಡಿತು.

    ನ್ಯೂಜಿಲೆಂಡ್ ಪರ 21 ರನ್ ನೀಡಿದ 5 ವಿಕೆಟ್ ಪಡೆದು ಟ್ರೆಂಟ್ ಬೌಲ್ಟ್ ಮಿಂಚಿದರು. ಉಳಿದಂತೆ ಗ್ರ್ಯಾಂಡ್ ಹೋಮ್ 26 ರನ್ ಕೊಟ್ಟು 3 ವಿಕೆಟ್ ಪಡೆದು ಟೀಂ ಇಂಡಿಯಾ ಪತನಕ್ಕೆ ಕಾರಣರಾದರು. ಇತ್ತ ಸುಲಭ ಮೊತ್ತ ಬೆನ್ನತ್ತಿದ್ದ ಕಿವೀಸ್ 14.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 212 ಎಸೆತ ಬಾಕಿ ಇರುವಂತೆಯೇ 8 ವಿಕೆಟ್ ಜಯ ಪಡೆಯಿತು.

    ಕಿವೀಸ್ ವಿರುದ್ಧ ಕಳಪೆ ಪ್ರದರ್ಶನ: ಟೀಂ ಇಂಡಿಯಾ ಈಗಾಗಲೇ ಸರಣಿಯಲ್ಲಿ ಜಯ ಪಡೆದಿದ್ದರು ಕೂಡ, 92ಗೆ ಆಲೌಟ್ ಆಗುವ ಮೂಲಕ ನ್ಯೂಜಿಲೆಂಡ್ ತಂಡದ ವಿರುದ್ಧ ತಂಡದ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಟೀಂ ಇಂಡಿಯಾ 108 ರನ್ ಗಳಿಗೆ ಆಲೌಟ್ ಆಗಿದ್ದು, ಈ ಹಿಂದಿನ ಕಳಪೆ ಪದರ್ಶನ ಆಗಿತ್ತು. ಸೌರವ್ ಗಂಗೂಲಿ ನಾಯಕತ್ವದ ತಂಡ 2003ಲ್ಲಿ ನಡೆದ ಪಂದ್ಯದಲ್ಲಿ 108 ರನ್ ಗಳಿಗೆ ಆಲೌಟ್ ಆಗಿತ್ತು.

    https://twitter.com/magicumesh/status/1090831824928964609?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪತ್ನಿ ಕೊಲ್ಲಲು ಗೂಗಲ್ ಸರ್ಚ್ ಮಾಡಿದ್ದ ಗೇ ಪತಿ

    ಪತ್ನಿ ಕೊಲ್ಲಲು ಗೂಗಲ್ ಸರ್ಚ್ ಮಾಡಿದ್ದ ಗೇ ಪತಿ

    ಲಂಡನ್: ತನ್ನ ಸಲಿಂಗಿ ಗೆಳೆಯನೊಂದಿಗೆ ಜೀವನ ನಡೆಸಲು ಪತ್ನಿಯನ್ನು ಕೊಲೆ ಮಾಡಿದ್ದ ಭಾರತದ ಮೂಲದ ಫಾರ್ಮಸಿಸ್ಟ್ ಗೆ ಇಂಗ್ಲೆಂಡ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

    ಮಿತೇಶ್ ಪಟೇಲ್ (37) ಕೊಲೆಗೈದ ಪತಿಯಾಗಿದ್ದು, ಜೆಸ್ಸಿಕಾ (34) ಕೊಲೆಯಾದ ದುರ್ದೈವಿ. ಪತ್ನಿಯ ಹೆಸರಿನಲ್ಲಿದ್ದ 2 ಮಿಲಿಯನ್ ಪೌಂಡ್ (ಸುಮಾರು 17 ಕೋಟಿ ರೂ.) ವಿಮೆ ಹಣವನ್ನು ಪಡೆಯಲು ಸಂಚು ರೂಪಿಸಿದ್ದ ಮಿತೇಶ್ ಪಟೇಲ್ ಪತ್ನಿಯನ್ನೇ ಕೊಲೆ ಮಾಡಿದ್ದು, ಅದಕ್ಕೂ ಮುನ್ನ ಕೊಲೆ ಮಾಡಲು ಗೂಗಲ್‍ನಲ್ಲಿ ಸರ್ಚ್ ಮಾಡಿದ್ದ.

    ತನ್ನ ಪತ್ನಿಯನ್ನು ಕೊಲೆ ಮಾಡಿದ್ದ ಮಿತೇಶ್ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಸುಳ್ಳು ಹೇಳಿ ಪ್ರಕಣದ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಆದರೆ ಪ್ರಕರಣದ ತನಿಖೆಯ ವೇಳೆ ಪೊಲೀಸರಿಗೆ ಮಿತೇಶ್ ಸಂಚು ತಿಳಿದುಬಂದಿದೆ.

    ಸಿಕ್ಕಿ ಬಿದ್ದಿದ್ದು ಹೇಗೆ?
    ಮಿತೇಶ್ ತನ್ನ ಪತ್ನಿಯನ್ನು ಕೊಲೆ ಮಾಡಲು ಗೂಗಲ್ ನಲ್ಲಿ ಸರ್ಚ್ ಮಾಡಿ ಮಾಹಿತಿ ಸಂಗ್ರಹಿಸಿದ್ದ. ಅಲ್ಲದೇ ಪತ್ನಿ ಹಾಗೂ ಆತನ ಬಳಕೆ ಮಾಡುತ್ತಿದ್ದ ಐಫೋನ್ ಹೆಲ್ತ್ ಆ್ಯಪ್ ಅಂದು ನಡೆದ ಘಟನೆ ಬಗ್ಗೆ ಮಾಹಿತಿ ಸಂಗ್ರಹಿಸಿತ್ತು. ಇದನ್ನೇ ಪ್ರಕರಣದ ಪ್ರಮುಖ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ ಪೊಲೀಸರು ಮಿತೇಶ್‍ಗೆ ಶಿಕ್ಷೆ ಆಗುವಂತೆ ಮಾಡಲು ಯಶಸ್ವಿಯಾಗಿದ್ದಾರೆ.

    ಮೊಬೈಲ್ ನಲ್ಲಿ ಅಳವಡಿಸಿದ್ದ ಆ್ಯಪ್ ದಿನದಲ್ಲಿ ವ್ಯಕ್ತಿ ನಡೆದ ಪ್ರತಿ ಹೆಜ್ಜೆಯನ್ನು ಲೆಕ್ಕ ಮಾಡಿ ಸಂಗ್ರಹ ಮಾಡುತ್ತಿತ್ತು. ಅದರಂತೆ ಅಂದು ಪತ್ನಿಯನ್ನು ಕೊಲೆ ಮಾಡಿದ್ದ ಸಮಯದಲ್ಲಿನ ನಡೆದ ಉದ್ರಿಕ್ತ ಚಟುವಟಿಕೆಯ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಿತ್ತು. ಮಿತೇಶ್ ಕೊಲೆಯನ್ನು ಕಳ್ಳ ಮಾಡಿದ್ದಂತೆ ಸಾಕ್ಷಿ ಸೃಷ್ಟಿ ಮಾಡಲು ಪ್ರಯತ್ನಿಸಿದ್ದ. ಇದರಂತೆ ಪತ್ನಿಯನ್ನು ಕೊಲೆ ಮಾಡಿ ಬಳಿಕ ಆಕೆಯ ಬಳಿ ಇದ್ದ ಮೊಬೈಲನ್ನು ಮನೆಯ ಹೊರ ಆವರಣದಲ್ಲಿ ಎಸೆದಿದ್ದ. ಕಳ್ಳ ಸ್ಥಳದಿಂದ ಪರಾರಿ ಆಗುವ ವೇಳೆ ಮೊಬೈಲ್ ಬಿದ್ದಿದೆ ಎಂದು ಪೊಲೀಸರನ್ನು ನಂಬಿಸುವುದು ಆತನ ಉದ್ದೇಶವಾಗಿತ್ತು.

    ಕಳೆದ 6 ವರ್ಷಗಳ ಹಿಂದೆ ಮದುವೆಯಾಗಿದ್ದ ಮಿತೇಶ್ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ಸಲಿಂಗಿ ಸ್ನೇಹಿತನ ಜೊತೆ ಬಾಳಲು ಮುಂದಾಗಿದ್ದ. ಪತಿ ಬೇರೆ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಆತ ಸಲಿಂಗಿ ಎನ್ನುವುದು ಜೆಸ್ಸಿಕಾಗೆ ತಿಳಿದಿತ್ತು. ಆದರೆ ಇದನ್ನು 6 ವರ್ಷಗಳಿಂದ ಹೊರ ಜಗತ್ತಿಗೆ ತಿಳಿಯದಂತೆ ಆಕೆ ಸಹಿಸಿಕೊಂಡು ಬಂದಿದ್ದಳು.

    ಕೊಲೆ ಮಾಡಿದ್ದು ಹೇಗೆ?
    ಗೂಗಲ್‍ನಲ್ಲಿ ಪತ್ನಿಯನ್ನು ಕೊಲೆ ಮಾಡುವುದು ಹೇಗೆ ಎಂದು ಮಾಹಿತಿ ಪಡೆದಿದ್ದ ಮಿತೇಶ್ ಪ್ಲಾಸ್ಟಿಕ್ ಬ್ಯಾಗ್ ಬಳಸಿ ತನ್ನ ಕೈಯಾರೆ ಪತ್ನಿಯನ್ನು ಉಸಿರುಗಟ್ಟಿಸಿ ಮೇ 14 ರಂದು ಕೊಲೆ ಮಾಡಿದ್ದ. ಜೆಸ್ಸಿಕಾ ಅಂದು ಮನೆಗೆ ಪ್ಲಾಸ್ಟಿಕ್ ಬ್ಯಾಗ್ ಹಿಡಿದು ಬಂದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ದಾಖಲಾಗಿದೆ.

    ಐವಿಎಫ್ ಚಿಕಿತ್ಸೆ ಪಡೆದಿದ್ದ ದಂಪತಿ: ಪತಿ ಮಿತೇಶ್ ಸಲಿಂಗಿ ಎಂದು ಗೊತ್ತಾದ ಬಳಿಕ ಜೆಸ್ಸಿಕಾ ಮಕ್ಕಳನ್ನು ಪಡೆಯಲು ಮೂರು ಬಾರಿ ಐವಿಎಫ್ ಚಿಕಿತ್ಸೆ ಪಡೆದ್ದರು. ಶೇಖರಿಸಿಟ್ಟ ಅಂಡಾಣು ಹಾಗೂ ವೀರ್ಯಾಣುಗಳನ್ನು ಕೃತಕವಾಗಿ ಗರ್ಭಾಶಯಕ್ಕೆ ವರ್ಗಾಯಿಸುವ ಈ ಚಿಕಿತ್ಸೆ ಪ್ರಯೋಜನಕ್ಕೆ ಬಂದಿರಲಿಲ್ಲ. ನಾಲ್ಕನೇ ಬಾರಿಗೆ ಇಬ್ಬರ ವೀರ್ಯವನ್ನು ಶೇಖರಿಸಿ ಲ್ಯಾಬ್ ನಲ್ಲಿ ಇಡಲಾಗಿತ್ತು. ಬಳಿಕ ಮಿತೇಶ್ ಪತ್ನಿಯನ್ನು ಕೊಲೆ ಮಾಡಲು ತೀರ್ಮಾನಿಸಿದ್ದ.

    ಪತಿ ಎಲ್ಲಾ ವರ್ತನೆಗಳು ಜೆಸ್ಸಿಕಾಗೆ ತಿಳಿಯುತ್ತಿತ್ತು. ಪತಿ ತನ್ನ ಸಲಿಂಗಿ ಸ್ನೇಹಿತನೊಂದಿಗೆ ಸೆಕ್ಸ್ ಮಾಡುವುದು ಬಗ್ಗೆ ಆತನ ಮೊಬೈಲ್ ನಲ್ಲಿದ್ದ ಸಂದೇಶಗಳ ಮೂಲಕ ತಿಳಿದಿದ್ದಳು. ಅಲ್ಲದೇ ಪತಿ ತನ್ನ ಗೆಳೆಯರನ್ನು ಮನೆಗೆ ಕರೆದುಕೊಂಡು ಬಂದು ಕಾಂಡೋಮ್ ಬಳಸಿ ಸೆಕ್ಸ್ ಮಾಡಿದ್ದ ಎನ್ನುವುದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿತ್ತು.

    ಇಂಗ್ಲೆಂಡ್‍ನ ಮಿಡಲ್ಸ್ ಬರೊ ಪಟ್ಟಣದಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಮಿತೇಶ್ ಹಿಂದೂ ಧರ್ಮದ ವ್ಯಕ್ತಿಯಾಗಿದ್ದರೂ ಸಂಪ್ರದಾಯಗಳಿಂದ ಸದಾ ದೂರ ಇರಲು ಬಯಸುತ್ತಿದ್ದ. ಆದರೆ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ಹಿಂದೂ ಧರ್ಮದ ಪ್ರಕಾರ ನಡೆಸಲು ಗೂಗಲ್ ಮಾಡಿದ್ದ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 20 ವರ್ಷದ ಹಿಂದಿನ ದಾಖಲೆ ಮುರಿದ ಶ್ರೀಲಂಕಾ, ಇಂಗ್ಲೆಂಡ್ ಸ್ಪಿನ್ನರ್‌ಗಳು!

    20 ವರ್ಷದ ಹಿಂದಿನ ದಾಖಲೆ ಮುರಿದ ಶ್ರೀಲಂಕಾ, ಇಂಗ್ಲೆಂಡ್ ಸ್ಪಿನ್ನರ್‌ಗಳು!

    ಕೊಲಂಬೋ: ಶ್ರೀಲಂಕಾ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಪಿನ್ನರ್‌ಗಳು 20 ವರ್ಷದ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.

    ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳ ಸ್ಪಿನ್ನರ್ ಗಳು ಒಟ್ಟು 82 ವಿಕೆಟ್ ಗಳನ್ನು ಪಡೆಯುದರ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಈ ಹಿಂದೆ 1998ರಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ ಪಂದ್ಯದಲ್ಲಿ ಸ್ಪಿನ್ನರ್‌ಗಳು 79 ವಿಕೆಟ್ ಗಳನ್ನು ಪಡೆದಿದ್ದರು.ಈ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯವನ್ನು 211 ರನ್ ಗಳಿಂದ ಗೆದ್ದುಕೊಂಡರೆ, ಎರಡನೇ ಪಂದ್ಯವನ್ನು 57 ರನ್ ಗಳಿಂದ ಗೆದ್ದುಕೊಂಡಿತ್ತು.

    ಮೂರನೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 336 ರನ್ ಗಳಿಸಿದ್ದರೆ ಶ್ರೀಲಂಕಾ 240 ರನ್ ಗಳಿಸಿತ್ತು. ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮುಂದುವರಿಸಿರುವ ಇಂಗ್ಲೆಂಡ್ ಇತ್ತೀಚಿನ ವರದಿ ಬಂದಾಗ 199 ರನ್ ಗಳೊಂದಿಗೆ ಇಂಗ್ಲೆಂಡ್ ಮುನ್ನಡೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಸೆಮಿಫೈನಲ್‍ನಲ್ಲಿ ಮಿಥಾಲಿ ರಾಜ್ ಕೈಬಿಟ್ಟದಕ್ಕೆ ವಿಷಾದವಿಲ್ಲ: ಹರ್ಮನ್ ಪ್ರೀತ್ ಕೌರ್

    ಸೆಮಿಫೈನಲ್‍ನಲ್ಲಿ ಮಿಥಾಲಿ ರಾಜ್ ಕೈಬಿಟ್ಟದಕ್ಕೆ ವಿಷಾದವಿಲ್ಲ: ಹರ್ಮನ್ ಪ್ರೀತ್ ಕೌರ್

    ಆಂಟಿಗುವಾ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದ್ದು, ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ.

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 19.3 ಓವರ್ ಗಳಲ್ಲಿ 112 ರನ್ ಗಳಿಸಿತ್ತು. ಆದರೆ ಭಾರತದ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 17.2 ಓವರ್ ಗಳಲ್ಲೇ ಗುರಿ ತಲುಪಿ 8 ವಿಕೆಟ್ ಗಳ ಜಯ ಪಡೆಯಿತು. ಪಂದ್ಯದಲ್ಲಿ ಭಾರತದ ಸೃತಿ ಮಂದಣ್ಣ 33 ರನ್, ಜೆಮಿಯಾ 26 ರನ್, ನಾಯಕಿ ಹರ್ಮನ್ ಪ್ರೀತ್ ಕೌರ್ 16 ರನ್ ಗಳಿಸಿದ್ದರು.

    ಟೂರ್ನಿಯ ಪ್ರಮುಖ ಪಂದ್ಯದಲ್ಲಿ ತಂಡ ಅನುಭವಿ ಆಟಗಾರ್ತಿ ಮಿಥಾಲಿರಾಜ್ ರನ್ನು ಆಡುವ 11ರ ಕೈ ಬಿಡಲಾಗಿತ್ತು. ಈ ಕುರಿತು ಪಂದ್ಯದ ಬಳಿಕ ಪ್ರತಿಕ್ರಿಯೆ ನೀಡಿದ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್, ಮಿಥಾಲಿರಾಜ್‍ರನ್ನು ಆಡುವ 11ರ ಬಳಗದಿಂದ ಕೈಬಿಟ್ಟಿದಕ್ಕೆ ಯಾವುದೇ ವಿಷಾದವಿಲ್ಲ ಎಂದು ತಿಳಿಸಿದ್ದಾರೆ.

    ತಂಡದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗುತ್ತದೆ. ಆದರೆ ಕೆಲವು ಬಾರಿ ಅದರಲ್ಲಿ ಯಶಸ್ವಿಯಾದರೆ, ಮತ್ತೆ ಕೆಲವು ಬಾರಿ ಸೋಲುತ್ತೇವೆ. ಈ ಪಂದ್ಯ ನಮ್ಮ ಯುವ ಪಡೆಗೆ ಒಂದು ಪಾಠವಾಗಿದ್ದು, ಟೂರ್ನಿಯಲ್ಲಿ ತಂಡ ತೋರಿದ ಪ್ರದರ್ಶನಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದರು.

    ಮಿಥಾಲಿ ರಾಜ್ ಭಾರತದ ಪರ ಟಿ20 ಮಾದರಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಅಲ್ಲದೇ ಪುರುಷ ತಂಡದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿ ವಿಶೇಷ ಸಾಧನೆ ನಿರ್ಮಿಸಿದ್ದರು. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ 85 ಪಂದ್ಯಗಳ 80 ಇನ್ನಿಂಗ್ಸ್ ಗಳಿಂದ 2,283 ರನ್ ಗಳಿಸಿದ್ದಾರೆ.

    ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿದೆ. ಆಸೀಸ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುವತಿಯರಿಗಾಗಿ ಬಂತು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್

    ಯುವತಿಯರಿಗಾಗಿ ಬಂತು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್

    ನವದೆಹಲಿ: ಯುವತಿಯರಿಗಾಗಿ ಡೈಸನ್ ಸೂಪರ್ ಸೋನಿಕ್ ಕಂಪೆನಿಯವರು 23.75 ಕ್ಯಾರೆಟ್ ಚಿನ್ನದ ಹೇರ್ ಡ್ರೈಯರ್ ಅನ್ನು ಬಿಡುಗಡೆ ಮಾಡಿದ್ದಾರೆ.

    ಡೈಸನ್ ಸೂಪರ್ ಸೋನಿಕ್ ಕಂಪೆನಿಯು 23.75 ಕ್ಯಾರೆಟ್ ಚಿನ್ನವನ್ನು ಬಳಸಿ ವಿನ್ಯಾಸಗೊಳಿಸಿದ್ದು, ಈ ಹೇರ್ ಡ್ರೈಯರ್ ಗೆ 37,900 ರೂ. ದರವನ್ನು ನಿಗದಿ ಮಾಡಿದೆ.

    ಚಿನ್ನ ಎಂಬುದು ವಿಶ್ವದ ಅತ್ಯಂತ ದುಬಾರಿ ವಸ್ತುಗಳಲ್ಲಿ ಒಂದು. ಶತಮಾನಗಳಿಂದ ಶಿಲ್ಪ, ಹಲವು ವಿನ್ಯಾಸಗಳಿಗೆ ಚಿನ್ನವನ್ನು ಬಳಸಲಾಗುತ್ತದೆ. ಇದರ ಬಣ್ಣದಿಂದಲೇ ಹೆಚ್ಚಿನವರು ಆಕರ್ಷಿಸಲ್ಪಡುತ್ತಾರೆ. ಇದೀಗ ಚಿನ್ನದಿಂದ ಹೇರ್ ಡ್ರೈಯರ್ ಅನ್ನು ವಿನ್ಯಾಸಗೊಳಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಇದನ್ನು ವಿನ್ಯಾಸಗೊಳಿಸಲು ನಾವು ಪಟ್ಟ ಶ್ರಮ ಸಾರ್ಥಕವಾಗಿದೆ ಎಂದು ಚಿನ್ನದ ಹೇರ್ ಡ್ರೈಯರ್ ವಿನ್ಯಾಸಗೊಳಿಸಿದ ಜೇಮ್ಸ್ ಹೇಳಿದ್ದಾರೆ.

    ಹೇರ್ ಡೈಯರ್ ಅನ್ನು ವಿನ್ಯಾಸಗೊಳಿಸಲು ವಿನ್ಯಾಸ ಎಂಜಿನಿಯರ್ ಗಳು ಮೊದಲಿಗೆ ಚಿನ್ನವನ್ನು ಲೇಪಿಸುವುದು ಹೇಗೆ ಎನ್ನುವುದನ್ನು ಕಲಿತುಕೊಂಡೆವು. ಬಳಿಕ ನಮ್ಮ ತಂಡ ಹೇರ್ ಡ್ರೈಯರ್ ಕೆಲಸವನ್ನು ಪೂರ್ಣಗೊಳಿಸಿತು. ಕೂದಲಿಗೆ ಯಾವುದೇ ಅಪಾಯವಾಗಬಾರದ ಕಾರಣ ಬಹಳ ಎಚ್ಚರಿಕೆಯಿಂದ ಈ ಸವಾಲನ್ನು ಪೂರ್ಣಗೊಳಿಸಿದೆವು ಎಂದು ತಿಳಿಸಿದ್ದಾರೆ.

    ಹೇರ್ ಡ್ರೈಯರ್ ನೀಲಿ ಬಣ್ಣ ಮತ್ತು ಚಿನ್ನದ ಬಣ್ಣವನ್ನು ಒಳಗೊಂಡಿದ್ದು ಹೊಸ ವಿನ್ಯಾಸವಾದ್ದರಿಂದ ಜೇಮ್ಸ್ ಡೈಸನ್ ಆನ್ ಲೈನ್‍ಲ್ಲಿ ಬುಕ್ ಮಾಡಿ ಖರೀದಿಸಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publict

  • ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಮುಂಬೈ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಅಭಿಯಾನ ಇಂದು ಮತ್ತೆ ಜೀವ ಪಡೆದಿದೆ. ಒಂದು ಹಂತದಲ್ಲಿ ಇಂದು #ಸ್ಯಾಕ್_ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಟ್ರೆಂಡ್ ಆಗಿತ್ತು. ಈ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಚೌಹಾಣ್ ರವಿಶಾಸ್ತ್ರಿ ಕೋಚಿಂಗ್ ಕೆಲಸ ಸಾಕು, ಅವರಿಗೆ ಕಮೆಂಟ್ರಿಯೇ ಬೆಟರ್ ಎಂಬ ಸಲಹೆ ನೀಡಿದ್ದಾರೆ.

    ಈಗಷ್ಟೇ ಅಂತ್ಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-4 ಅಂತರದಲ್ಲಿ ಸೋಲುಂಡ ಬಳಿಕ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯನ್ನು ಸೋಲಿನ ಹೊಣೆ ಮಾಡಿ ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಹಲವರು ಆಗ್ರಹಿಸಿದ್ದರು. ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಚೇತನ್ ಚೌಹಾಣ್ ಕೂಡ ತಂಡದ ಸೋಲಿಗೆ ರವಿಶಾಸ್ತ್ರಿ ಕಾರಣವಾಗಿದ್ದು, ಮುಂದಿನ ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ಮುನ್ನ ರವಿಶಾಸ್ತ್ರಿಯನ್ನು ತಂಡದಿಂದ ಕೈಬಿಡುವಂತೆ ಹೇಳಿದ್ದಾರೆ.

    https://twitter.com/Bhuklagiheyaar/status/1042774411013705728

    ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಬಳಿಕ ಚೌಹಾಣ್ ಅವರು ರವಿಶಾಸ್ತ್ರಿ ಕೋಚ್ ಹುದ್ದೆ ತ್ಯಜಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಚೌಹಾಣ್, ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಆಗ ಎರಡು ತಂಡಗಳು ಸಮರ್ಥವಾಗಿ ಪೈಪೋಟಿ ನಡೆಸಲಿವೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ವೈಫಲ್ಯಗಳನ್ನು ಅರಿತುಕೊಳ್ಳಲು ವಿಫಲವಾಗಿದೆ. ಇದಕ್ಕೆ ನೇರ ಕಾರಣ ಕೋಚ್ ರವಿಶಾಸ್ತ್ರಿ. ಅದ್ದರಿಂದ ಮುಂದಿನ ಟೂರ್ನಿ ಆರಂಭಕ್ಕೂ ಮೊದಲು ಅವರನ್ನು ಕೋಚ್ ಹುದ್ದೆಯಿಂದ ತೆಗೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

    https://twitter.com/Amit_smiling/status/1028647401375105025?

    ಇದೇ ವೇಳೆ ರವಿಶಾಸ್ತ್ರಿ ಉತ್ತಮ ವೀಕ್ಷಕ ವಿವರಣೆ ನೀಡಬಲ್ಲರು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಚೌಹಾಣ್, ರವಿಶಾಸ್ತ್ರಿ ಅವರಿಗೆ ಆ ಹುದ್ದೆ ನೀಡಿದರೆ ಉತ್ತಮ ಎಂದು ತಿಳಿಸಿದ್ದಾರೆ. ಅಲ್ಲದೇ 1980ರ ದಶಕ ಬಳಿಕ ಸದ್ಯದ ಟೀಂ ಇಂಡಿಯಾ ಅತ್ಯುತ್ತಮ ತಂಡ ಎಂಬ ರವಿಶಾಸ್ತ್ರಿ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

    ಚೇತನ್ ಚೌಹಾಣ್ ಹಿನ್ನೆಲೆ: 1969ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೇತನ್ ಚೌಹಾಣ್ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾದಲ್ಲಿ 1969 ರಿಂದ 1981 ಅವಧಿಯಲ್ಲಿ ಸ್ಥಾನ ಪಡೆದಿದ್ದರು. ಒಟ್ಟಾರೆ ಚೌಹಾಣ್ 40 ಟೆಸ್ಟ್ ಪಂದ್ಯ ಆಡಿ 2,084 ರನ್ ಗಳಿಸಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ಉಳಿದಂತೆ 7 ಅಂತರಾಷ್ಟ್ರೀಯ ಏಕದಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮುಖ್ಯವಾಗಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದರು.

    ಇದೇ ವೇಳೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲೂ ಸ್ಯಾಕ್ ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಅಭಿಯಾನ ಆರಂಭವಾಗಿದೆ. ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಟ್ವೀಟಿಗರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://twitter.com/Dhruv1607/status/1027983938214658049?

    https://twitter.com/imkrishnendu92/status/1042791215945547776

  • ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಸುದ್ದಿಗೋಷ್ಠಿಯಲ್ಲಿ ರವಿಶಾಸ್ತ್ರಿ ಹೇಳಿಕೆಯನ್ನು ಉದಾಹರಿಸಿ ಕೇಳಿದ ಪ್ರಶ್ನೆಗೆ ಸಿಟ್ಟಾದ ಕೊಹ್ಲಿ!

    ಲಂಡನ್: ಇಂಗ್ಲೆಂಡ್ ವಿರುದ್ಧದ ಬಹು ನಿರೀಕ್ಷಿತ ಐದು ಪಂದ್ಯಗಳ ಟೆಸ್ಟ್ ಟೂರ್ನಿಯಲ್ಲಿ ಟೀಂ ಇಂಡಿಯಾ 4-1 ಅಂತರದಲ್ಲಿ ಮುಗ್ಗರಿಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪತ್ರಿಕ್ರಿಯೆ ನೀಡಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮಾತನಾಡಿದ್ದ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಇಂದಿನ ತಂಡ 15-20 ವರ್ಷಗಳ ಹಿಂದಿದ್ದ ಎಲ್ಲ ತಂಡಗಳಿಗಿಂತ ಉತ್ತಮ ತಂಡ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಉದಾಹರಿಸಿ ಕೊಹ್ಲಿಗೆ ಪ್ರಶ್ನೆ ಮಾಡಿದ ಪತ್ರಕರ್ತರೊಬ್ಬರು, “ರವಿಶಾಸ್ತ್ರಿ ಹೇಳಿಕೆಯನ್ನು ಹೇಗೆ ಸಮರ್ಥಿಸುತ್ತಿರಿ” ಎಂದು ಪ್ರಶ್ನಿಸಿದರು.

    ಈ ವೇಳೆ ಕೊಹ್ಲಿ,”ನಮ್ಮದು ಉತ್ತಮ ತಂಡ ಎಂದು ನಂಬುತ್ತೇವೆ. ಏಕೆ ಆಗಬಾರದು” ಎಂದು ಪ್ರಶ್ನಿಸುವ ತಾಳ್ಮೆಯಿಂದಲೇ ಉತ್ತರಿಸಿದರು. ಈ ವೇಳೆ ಪತ್ರಕರ್ತ,”ಕಳೆದ 15 ವರ್ಷಗಳಲ್ಲಿ ಭಾರತ ಕಂಡ ಅತ್ಯುತ್ತಮ ತಂಡವಾಗಿದೆಯೇ” ಎಂದು ಮರು ಪ್ರಶ್ನೆ ಕೇಳಿದರು.

    ಈ ಪ್ರಶ್ನೆಗೆ ಗರಂ ಆದ ಕೊಹ್ಲಿ,”ನಿಮಗೆ ಏನು ಅನಿಸುತ್ತದೆ” ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಪತ್ರಕರ್ತ,”ನನಗೆ ಅನಿಸುವುದಿಲ್ಲ” ಎಂದು ಉತ್ತರಿಸಿದರು. ಈ ಉತ್ತರಕ್ಕೆ ಮತ್ತಷ್ಟು ಖಾರವಾಗಿ ಪತ್ರಿಕ್ರಿಯೆ ನೀಡಿದ ಕೊಹ್ಲಿ,”ಅದು ನಿಮ್ಮ ನಂಬಿಕೆ. ನಾನೇನು ಮಾಡಲಾಗದು” ಎಂದು ಉತ್ತರಿಸಿ ಕಿಡಿಕಾರಿದರು.

    ಅಂತಿಮ ಓವೆಲ್ ಪಂದ್ಯ ನಡೆಯುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೋಚ್ ರವಿಶಾಸ್ತ್ರಿ, ಇಂಗ್ಲೆಂಡ್ ಟೂರ್ನಿಯ ವೇಳೆ ತಂಡದ ಉತ್ತಮ ಪ್ರದರ್ಶನ ನೀಡಿದೆ. ಅಲ್ಲದೇ ಈ ಹಿಂದಿನ 3 ವರ್ಷಗಳ ತಂಡದ ಪ್ರದರ್ಶನವನ್ನು ಗಮನಿಸಿದರೆ ನಾವು ವಿದೇಶಿ ನೆಲದಲ್ಲಿ 9 ಪಂದ್ಯಗಳನ್ನು ಗೆದ್ದಿದ್ದು, 3 ಸರಣಿ ಜಯಪಡೆದಿದ್ದೇವೆ. ಈ ಹಿಂದಿನ ಭಾರತದ ತಂಡಗಳು ಕಳೆದ 15-20 ವರ್ಷದಲ್ಲಿ ಕಡಿಮೆ ಅವಧಿಯಲ್ಲಿ ಇಂತಹ ಪ್ರದರ್ಶನ ನೀಡಿರುವುದನ್ನು ನಾನು ಕಂಡಿಲ್ಲ. ಅಂದು ಹಲವು ಸ್ಟಾರ್ ಆಟಗಾರರು ತಂಡದಲ್ಲಿ ಇದ್ದರು. ಸದ್ಯ ಯಂಗ್ ಟೀಮ್ ಸರಣಿಯಲ್ಲಿ ಭಾಗವಹಿಸಿದೆ ಎಂದು ಶಾಸ್ತ್ರಿ ತಂಡದ ಸಾಧನೆಯನ್ನು ಹೊಗಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    10 ಅಂಕ ಕಳೆದುಕೊಂಡರೂ ಭಾರತ ನಂ.1 -7 ಅಂಕ ಪಡೆದು ನ್ಯೂಜಿಲೆಂಡ್ ಹಿಂದಿಕ್ಕಿದ ಇಂಗ್ಲೆಂಡ್

    ದುಬೈ: ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-4 ರ ಅಂತದ ಮೂಲಕ ಮುಗ್ಗರಿಸಿದ ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲೇ ಮುಂದುವರಿದಿದೆ.

    ಸರಣಿಯ ಅಂತಿಮ ಓವೆಲ್ ಟೆಸ್ಟ್ ಹೋರಾಟದಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಹೋರಾಟದ ಬಳಿಕವೂ ಟೀಂ ಇಂಡಿಯಾ ಪಂದ್ಯದಲ್ಲಿ ಸೋಲುಂಡಿತು. ಆದರೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 115 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಆದರೆ ಸರಣಿ ಸೋಲಿನ ಹಿನ್ನೆಲೆಯಲ್ಲಿ ಬರೋಬ್ಬರಿ 10 ಅಂಕಗಳನ್ನು ಕಳೆದುಕೊಂಡಿದೆ.

    ಇತ್ತ ಸರಣಿ ಗೆದ್ದ ಇಂಗ್ಲೆಂಡ್ 105 ಅಂಕಗಳನ್ನು ಪಡೆದು 4ನೇ ಸ್ಥಾನಕ್ಕೆ ಏರಿದೆ. 4ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್ 102 ಅಂಕ ಗಳಿಸಿದ್ದು 5ನೇ ಸ್ಥಾನಕ್ಕೆ ಕುಸಿದಿದೆ. ಟೀಂ ಇಂಡಿಯಾ ವಿರುದ್ಧದ ಟೂರ್ನಿಗೂ ಮುನ್ನ ಇಂಗ್ಲೆಂಡ್ 97 ಅಂಕಗಳನ್ನು ಹೊಂದಿತ್ತು.

    ಇಂಗ್ಲೆಂಡ್ ಪರ ವಿದಾಯ ಪಂದ್ಯವಾಡಿದ ಕುಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ವೃತ್ತಿ ಜೀವನದಲ್ಲಿ 33ನೇ ಶತಕ ಸಿಡಿದ ಕುಕ್‍ಗೆ ಇಂಗ್ಲೆಂಡ್ ತಂಡದ ಆಟಗಾರಾರರು 33 ಬೀಯರ್ ಬಟಲ್ ಗಿಫ್ಟ್ ನೀಡಿದ್ದಾರೆ.

    ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು ತಲಾ 106 ಅಂಕಗಳಿಂದ ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಮುಂದುವರಿದಿದೆ. ಅಕ್ಟೋಬರ್ ನಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಆಡಲಿದ್ದು, ಅಕ್ಟೋಬರ್ 4ರಿಂದ ರಾಜಕೋಟ್ ನಲ್ಲಿ ಪ್ರಥಮ ಟೆಸ್ಟ್ ಪಂದ್ಯ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ವಿರಾಟ್ ಗೋಲ್ಡನ್ ಡಕ್ – ಸಂಕಷ್ಟದಲ್ಲಿ ಟೀಂ ಇಂಡಿಯಾ

    ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಸರಣಿ ಸೋಲುಂಡರೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳವ ನಿರೀಕ್ಷೆ ಇತ್ತು. ಆದರೆ ಅಂತಿಮ ಟೆಸ್ಟ್ 2ನೇ ಇನ್ನಿಂಗ್ಸ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗಿ ಗೋಲ್ಡನ್ ಡಕ್ ಆಗುವ ಮೂಲಕ ಟೀಂ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ.

    https://twitter.com/DRVcricket/status/1039185894039871488?

    ಇದಕ್ಕೂ ಮುನ್ನ ವಿದಾಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಭಾರೀ ಮುನ್ನಡೆ ಪಡೆಯಲು ಕಾರಣದ ಕುಕ್ ತಮ್ಮ ಕೊನೆಯ ಪಂದ್ಯವನ್ನು ಸ್ಮರಣೀಯವಾಗಿಸಿದರು. 147 ರನ್ ಸಿಡಿಸಿ ಕುಕ್ ಔಟಾಗುತ್ತಿದಂತೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವ ನೀಡಿದರು. ಇದರೊಂದಿಗೆ ವೃತ್ತಿ ಜೀವನದ 33ನೇ ಶತಕ ಪೂರೈಸಿದ ಕುಕ್ ಪಾದಾರ್ಪಣೆ ಪಂದ್ಯ ಹಾಗೂ ಅಂತಿಮ ಪಂದ್ಯ ಎರಡರಲ್ಲೂ ಶತಕ ಸಿಡಿಸಿದ ಹೆಗ್ಗಳಿಕೆ ಪಡೆದರು.

    ಎರಡನೇ ಇನ್ನಿಂಗ್ಸ್ ನಲ್ಲಿ 423 ರನ್ ಗಳಿಸಿದ ಇಂಗ್ಲೆಂಡ್ ಡಿಕ್ಲೇರ್ ನೀಡಿ ಟೀಂ ಇಂಡಿಯಾಗೆ 464 ರನ್ ಗುರಿ ನೀಡಿತು. ಇಂಗ್ಲೆಂಡ್ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ನಾಯಕ ರೂಟ್ (125) ಕೂಡ ಶತಕ ಸಿಡಿಸಿ ಮಿಂಚಿದರು. ಇತ್ತ ಇಂಗ್ಲೆಂಡ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ 3 ರನ್ ಗಳಿಸುವಷ್ಟರಲ್ಲಿ ಆರಂಭಿಕ ಧವನ್ (1), ಪೂಜಾರ (0), ಕೊಹ್ಲಿ (0) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಟೀಂ ಇಂಡಿಯಾ 58/3 ಕಳೆದುಕೊಂಡಿದ್ದು ಕೆಎಲ್ ರಾಹುಲ್ (46*), ರಹಾನೆ (10*) ರನ್  ಗಳಿಸಿ  ಕ್ರೀಸ್ ನಲ್ಲಿದ್ದಾರೆ. ಇಂಗ್ಲೆಂಡ್ ಪರ ಮಿಂಚಿನ ದಾಳಿ ನಡೆಸಿದ ಆ್ಯಂಡರ್ ಸನ್ 2, ಬ್ರಾಡ್ 1 ವಿಕೆಟ್ ಗಳಿಸಿದ್ದಾರೆ.

    https://twitter.com/DRVcricket/status/1039186174244528129

    https://twitter.com/DRVcricket/status/1039186681793077248

  • ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    ಲಾರಾ ವಿಶ್ವದಾಖಲೆ ಮುರಿದ ವಿರಾಟ್, ಸಚಿನ್‍ರನ್ನೂ ಹಿಂದಿಕ್ಕಿದ್ರು!

    – ಸಚಿನ್, ದ್ರಾವಿಡ್, ಗಂಗೂಲಿ ದಿಗ್ಗಜರ ಸಾಲಿಗೆ ಕೊಹ್ಲಿ

    ಲಂಡನ್: ಓವೆಲ್ ಕ್ರೀಡಾಂಗಣ ನಡೆಯುತ್ತಿರುವ ಇಂಗ್ಲೆಂಡ್ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಹತ್ವದ ಸಾಧನೆ ಮಾಡಿದ್ದು, ವಿಶ್ವ ಕ್ರಿಕೆಟ್‍ನಲ್ಲಿ ವೇಗವಾಗಿ 18 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಕೊಹ್ಲಿ 382 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದು, ಈ ಹಿಂದೆ ವೆಸ್ಟ್ ಇಂಡೀಸ್‍ನ ಬ್ರಿಯಾನ್ ಲಾರಾ 411 ಇನ್ನಿಂಗ್ಸ್ 18 ಸಾವಿರ ರನ್ ಪೂರೈಸಿದ್ದರು. ಇನ್ನು ಸಚಿನ್ ತೆಂಡೂಲ್ಕರ್ 412 ಇನ್ನಿಂಗ್ಸ್‍ಗಳಲ್ಲಿ ಈ ಸಾಧನೆ ಮಾಡಿದ್ದರು. ಟೀಂ ಇಂಡಿಯಾ ಪರ ಸಚಿನ್ (34,357) ಸೇರಿದಂತೆ ರಾಹುಲ್ ದ್ರಾವಿಡ್ (24,208), ಸೌರವ್ ಗಂಗೂಲಿ (18,575) ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾ ಪರ 18 ಸಾವಿರ ರನ್ ಪೂರೈಸಿದ 4ನೇ ಆಟಗಾರನಾಗಿ ದಿಗ್ಗಜರ ಸಾಲಿಗೆ ಸೇರಿದ್ದಾರೆ.

    ಅಂತಿಮ 5ನೇ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕದಿಂದ ವಂಚಿತರಾದ ಕೊಹ್ಲಿ 49 ರನ್ ಗಳಿಗೆ ಬೇನ್ ಸ್ಟೋಕ್ಸ್‍ಗೆ ವಿಕೆಟ್ ಒಪ್ಪಿಸಿದರು. ಟೀಂ ಇಂಡಿಯಾ 174 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಹಿನ್ನಡೆ ಅನುಭವಿಸುವ ಸಂಕಷ್ಟದಲ್ಲಿದ್ದು, ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಲು ಇನ್ನು 158 ರನ್ ಗಳಿಸಬೇಕಿದೆ. ಮೊದಲ ಟೆಸ್ಟ್ ಪಂದ್ಯವಾಡುತ್ತಿರುವ ಹನುಮ ವಿಹಾರಿ 25 ರನ್ ಮತ್ತು ಜಡೇಜಾ 8 ರನ್ ಗಳಿಸಿ 3ನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

    ಕೊಹ್ಲಿ ರನ್ ಸಾಧನೆ:
    15 ಸಾವಿರ ರನ್ (333 ಇನ್ನಿಂಗ್ಸ್)
    16 ಸಾವಿರ ರನ್ (350 ಇನ್ನಿಂಗ್ಸ್)
    17 ಸಾವಿರ ರನ್ (363 ಇನ್ನಿಂಗ್ಸ್)
    18 ಸಾವಿರ ರನ್ (382 ಇನ್ನಿಂಗ್ಸ್)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv