Tag: england

  • ಭಾರತ ಗೆಲ್ಲಲೆಂದು ಜನಗಣಮನ ಹಾಡಿದ ಪಾಕ್ ಫ್ಯಾನ್ಸ್

    ಭಾರತ ಗೆಲ್ಲಲೆಂದು ಜನಗಣಮನ ಹಾಡಿದ ಪಾಕ್ ಫ್ಯಾನ್ಸ್

    ನವದೆಹಲಿ: ಭಾರತ ಗೆಲ್ಲಲೆಂದು ಪಾಕಿಸ್ತಾನ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದು, ಜನ ಗಣ ಮನ ಹಾಡಿ ಭಾರತಕ್ಕೆ ಹಾರೈಸಿದ್ದಾರೆ.

    ಅರೇ ಇದನಪ್ಪಾ ಪಾಕಿಸ್ತಾನಿಗಳು ನಮಗೇಕೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಆಶ್ಚರ್ಯ ಪಡಬೇಡಿ. ಇದರ ಹಿಂದಿನ ಗುಟ್ಟು ಬೇರೆಯೇ ಇದೆ. ಹೌದು ಭಾರತ ಗೆದ್ದರೆ ಸರ್ಫರಾಜ್ ಅಹ್ಮದ್ ನೇತೃತ್ವದ ಪಾಕಿಸ್ತಾನ ತಂಡ ಸರಾಗವಾಗಿ ಸೆಮಿಫೈನಲ್ ತಲುಪಲಿದೆ ಈ ಹಿನ್ನೆಲೆ ಪಾಕಿಗಳು ಭಾರತ ಗೆಲ್ಲಲೆಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನೇ ಪ್ರಾರಂಭಿಸಿದ್ದು, ಒಬ್ಬ ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿದಾತ ಎಂದು ಹೇಳಿದರೆ, ಇನ್ನೂ ಹಲವರು ಭಾರತ ಗೆದ್ದರೆ ವಿರಾಟ್ ಕೊಹ್ಲಿ ಹಾಗೂ ವಿಂಗ್ ಕಮಾಂಡರ್ ಅಭಿನಂದನ್‍ಗೆ ಚಹಾ ಪಾರ್ಟಿ ಏರ್ಪಡಿಸುತ್ತೇವೆ ಎಂದು ಕಮೆಂಟ್ ಮೂಲಕ ಹೇಳಿದ್ದಾರೆ.

    ಭಾರತ-ಇಂಗ್ಲೆಂಡ್ ಸೆಣಸಾಟದ ಕುರಿತು ಪಾಕಿಸ್ತಾನ ಅಭಿಮಾನಿಗಳು ಈಗಾಗಲೇ ಮೆನ್ ಇನ್ ಬ್ಲ್ಯೂಗೆ ಬೆಂಬಲ ವ್ಯಕ್ತಪಡಿಸಲು ಪ್ರಾರಂಭಿಸಿದ್ದು, ಪಾಕಿಸ್ತಾನ ತಂಡದ ಮಾಜಿ ನಾಯಕ ನಾಸರ್ ಹುಸೇನ್ ಭಾರತ-ಇಂಗ್ಲೆಂಡ್ ತಂಡಗಳಲ್ಲಿ ಯಾವುದನ್ನು ಬೆಂಬಲಿಸುತ್ತೀರಿ ಎಂದು ಟ್ವಿಟ್ಟರ್‍ನಲ್ಲಿ ಅಭಿಮಾನಿಗಳನ್ನು ಕೇಳಿದ್ದಾರೆ. ಇದಕ್ಕೆ ಪಾಕಿಗಳು ವಿಭಿನ್ನ ರೀತಿಯಲ್ಲಿ ಕಮೆಂಟ್ ಮಾಡಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯವಿದ್ದರೆ ಭಾರತ ಮತ್ತು ಪಾಕಿಸ್ತಾನ ಒಂದೇ, ಏಕೆಂದರೆ ಬ್ರಿಟಿಷರ ಆಡಳಿತದ ವಿರುದ್ಧ ಒಟ್ಟಿಗೆ ಧ್ವನಿ ಎತ್ತಿದವರು ನಾವು ಎಂದು ಹೇಳಿದ್ದಾರೆ.

    ಇದಕ್ಕೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ‘ಜನ ಗಣ ಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿದಾತ ಪಂಜಾಬ ಸಿಂಧು ಗುಜರಾತ ಮರಾಠಾ ದ್ರಾವಿಡ ಉತ್ಕಲ ವಂಗ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಭಾರತ ಗೆದ್ದರೆ ವಿಂಗ್ ಕಮಾಂಡರ್ ಅಭಿನಂದನ್ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಚಹಾ ಪಾರ್ಟಿ ಕೊಡಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

    ಭಾರತ ಎರಡು ಕಾರಣಗಳಿಗಾಗಿ ಗೆಲ್ಲಬೇಕು 1. ನಾವು ಅಕ್ಕಪಕ್ಕದವರು, 2 ನಾವು ಕ್ರಿಕೆಟ್ ವಿಷಯದಲ್ಲಿ ಭಾವೋದ್ರೇಕರು ಎಂದು ಒಬ್ಬ ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ನಿಯಮದ ವಿರುದ್ಧ ಹಾಗೂ ಬ್ರಿಟಿಷರನ್ನು ತೊಲಗಿಸಿ ಸ್ವಾತಂತ್ರ್ಯ ಪಡೆಯಲು 1857ರಲ್ಲಿ ಒಟ್ಟಿಗೆ ಹೋರಾಟ ಮಾಡಿದ್ದೇವು. ಹೀಗಾಗಿ ಇಂಗ್ಲೆಂಡ್ ಯಾವಾಗಲೂ ನಮಗೆ ವೈರಿ ಎಂದು ಬರೆದಿದ್ದಾರೆ.

    ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ಥಾನ ಅಫ್ಘಾನಿಸ್ಥಾನವನ್ನು ಸೋಲಿಸಿದ್ದು, ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ 9 ಅಂಕ ಪಡೆದು 4ನೇ ಸ್ಥಾನ ಪಡೆದು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಜುಲೈ 5 ರಂದು ಬಾಂಗ್ಲಾದೇಶದ ವಿರುದ್ಧ ಪಾಕಿಗಳು ಸೆಣಸಲಿದ್ದು, ಇದು ಅವರ ಕೊನೆಯ ಗುಂಪು ಆಟವಾಗಿದೆ.

  • ಇಂದಿನ ಇಂಡೋ-ಅಂಗ್ಲೋ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯ

    ಇಂದಿನ ಇಂಡೋ-ಅಂಗ್ಲೋ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯ

    ಲಂಡನ್: ಇಂದು ಇಂಗ್ಲೆಂಡ್ ಮತ್ತು ಭಾರತದ ನಡುವೆ ನಡೆಯುತ್ತಿರುವ ಮ್ಯಾಚ್ ವಿಶ್ವಕಪ್‍ನಲ್ಲೇ ಅತ್ಯಂತ ವಿಶಿಷ್ಟ ಪಂದ್ಯವಾಗಿದೆ. ಇದಕ್ಕೆ ಕಾರಣ ಇವತ್ತಿನ ಪಂದ್ಯವನ್ನು ಮಕ್ಕಳಿಗೆ ಅರ್ಪಣೆ ಮಾಡಲಾಗಿದೆ.

    ಹೌದು ಇಂದಿನ ಪಂದ್ಯವನ್ನು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯೂನಿಸೆಫ್) ನೂತನವಾಗಿ ಹಮ್ಮಿಕೊಂಡಿರುವ ಮಕ್ಕಳಿಗಾಗಿ ಒಂದು ದಿನ ಎಂಬ ಕಾರ್ಯಕ್ರಮದ ಅಂಗವಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಆಡಲಿವೆ.

    ಈ ಕಾರ್ಯಕ್ರಮದ ಪ್ರಯುಕ್ತ ಮೂರು ಮಕ್ಕಳನ್ನು “ಆಟದ ಮೈದಾನದ ಪಂಡಿತರು” ಎಂದು ನೇಮಕ ಮಾಡಿದ್ದು ಮೈದಾನದ ಹೊರಗಡೆಯ ಎಲ್ಲ ಕರ್ತವ್ಯವನ್ನು ಮಕ್ಕಳಿಂದ ಆರಂಭಿಸುವುದು ಈ ಪಂದ್ಯದ ಮಗದೊಂದು ವಿಶಿಷ್ಟವಾಗಿದೆ. ಟಾಸ್‍ನಿಂದ ಹಿಡಿದು ಪಂದ್ಯದ ಬಳಿಕ ನಡೆಯುವ ಆಟಗಾರರ ಸುದ್ದಿಗೋಷ್ಠಿಯನ್ನು ಕೂಡ ಮಕ್ಕಳ ಕೈಯಲ್ಲೇ ಮಾಡಿಸಲು ಐಸಿಸಿ ಮುಂದಾಗಿದೆ.

    ಈ ಪಂದ್ಯದಲ್ಲಿ ಮಕ್ಕಳ ಕೈಯಲ್ಲಿ ನಿರೂಪಣೆ ಮತ್ತು ಕ್ರೀಡಾಂಗಣದಲ್ಲಿ ಪ್ರಕಟಣೆ ಮಾಡಲು ಅನುಮತಿ ನೀಡಲಾಗಿದೆ. ಜಗತ್ತಿನ ಪ್ರತಿಯೊಂದು ಮಗುವಿಗೂ ಉತ್ತಮ ಜಗತ್ತನ್ನು ನಿರ್ಮಾಣ ಮಾಡುವುದು ಇದರ ಹಿಂದಿನ ಧ್ಯೇಯವಾಗಿದೆ. ಅಲ್ಲದೆ ಆರೋಗ್ಯ ಪಾಠದ ಜೊತೆಗೆ ಕ್ರಿಕೆಟ್ ಆಡಲು ಮಕ್ಕಳಿಗೆ ನೆರವಾಗಲಿದೆ.

    ಈ ವಿಶೇಷ ಪಂದ್ಯದಲ್ಲಿ ಸೆಲೆಬ್ರಿಟಿಗಳು ಮತ್ತು ಕ್ರಿಕೆಟ್‍ನ ಲೆಜೆಂಡ್‍ಗಳು ಭಾಗವಹಿಸಲಿದ್ದಾರೆ. ಇಂದು ಬರ್ಮಿಂಗ್ಹ್ಯಾಮ್‍ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ 24,000 ಜನ ಪ್ರೇಕ್ಷಕರು ಇಂದು ಪಂದ್ಯ ವೀಕ್ಷಣೆ ಮಾಡಲಿದ್ದಾರೆ.

    ಈ ಪಂದ್ಯದ ಅಭಿಯಾನದಲ್ಲಿ ಸಂಗ್ರಹವಾಗುವ ಹಣವನ್ನು ಯುನಿಸಿಫ್ ವಿಶ್ವದಾದ್ಯಂತ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿನ ಮಕ್ಕಳಿಗಾಗಿ ಮೀಸಲು ಇಡಲು ತೀರ್ಮಾನಿಸಿದೆ. ಐಸಿಸಿ ಪ್ರಕಾರ ಮಕ್ಕಳಿಗೆ ಕಲಿಯಲು, ಆಟವಾಡಲು ಮತ್ತು ಆರೋಗ್ಯವಾಗಿರಲು ಅವಕಾಶ ನೀಡುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದೆ.

    ಈ ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಐಸಿಸಿ ಸಿಇಒ ಡೇವಿಡ್ ರಿಚರ್ಡ್‍ಸನ್, ಐಸಿಸಿ ಮತ್ತು ಯುನಿಸಿಫ್ ಸುದೀರ್ಘ ಸಂಬಂಧವನ್ನು ಹೊಂದಿದೆ. ಇಂದು ಅವರ ಜೊತೆ ಮಕ್ಕಳಿಗಾಗಿ ಒಂದು ದಿನ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಮೈದಾನದಲ್ಲಿ ಪ್ರಪಂಚದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಭಾಗಿಯಾಗುತ್ತಾರೆ. ಮಕ್ಕಳು ಆಟವಾಡಲು ಕಲಿಯಲು ಮತ್ತು ಆರೋಗ್ಯಕಾರವಾಗಿರಲು ಈ ಕಾರ್ಯಕ್ರಮ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

  • ವಿಶ್ವಕಪ್ ಟೂರ್ನಿಗೆ ರಿಷಬ್ ಪಂತ್ ಪಾದಾರ್ಪಣೆ – ಹೀಗಿದೆ ಅಭಿಮಾನಿಗಳ ರಿಯಾಕ್ಷನ್

    ವಿಶ್ವಕಪ್ ಟೂರ್ನಿಗೆ ರಿಷಬ್ ಪಂತ್ ಪಾದಾರ್ಪಣೆ – ಹೀಗಿದೆ ಅಭಿಮಾನಿಗಳ ರಿಯಾಕ್ಷನ್

    ಲಂಡನ್: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ವಿಶ್ವಕಪ್ ಟೂರ್ನಿಗೆ ಪಾದಾರ್ಪಣೆ ಮಾಡಿದ್ದಾರೆ.

    ಟೂರ್ನಿಯ ಕಳೆದ 2 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ವಿಜಯ್ ಶಂಕರ್ ಅವರಿಗೆ ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಕೊಕ್ ನೀಡಲಾಗಿದ್ದು, 21 ವರ್ಷದ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಲಾಗಿದೆ. ಶಂಕರ್ ಕಳೆದ ಎರಡು ಪಂದ್ಯಗಳಲ್ಲಿ 58 ರನ್ ಗಳಿಸಿ, 2 ವಿಕೆಟ್ ಪಡೆದಿದ್ದಾರೆ. ಟೀಂ ಇಂಡಿಯಾ ಪರ ಕೇವಲ 5 ಏಕದಿನ ಪಂದ್ಯಗಳನ್ನು ಆಡಿರುವ ರಿಷಬ್ 93 ರನ್ ಗಳಿಸಿದ್ದಾರೆ.

    ಶಿಖರ್ ಧವನ್ ಗಾಯಗೊಂಡ ಬಳಿಕ ತಂಡಕ್ಕೆ ಸೇರ್ಪಡೆಯಾಗಿದ್ದ ರಿಷಬ್ ಪಂತ್ ಅವರಿಗೆ ವಿಶ್ವಕಪ್ ನಲ್ಲಿ ದೊರೆತ ಮೊದಲ ಅವಕಾಶ ಇದಾಗಿದ್ದು, ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಕಳೆದ ಬಾರಿ ಇಂಗ್ಲೆಂಡ್ ಟೂರ್ನಿಯಲ್ಲಿ ಭಾಗವಹಿಸಿದ್ದ ರಿಷಬ್, ಉತ್ತಮ ಪ್ರದರ್ಶನ ನೀಡಿ ಆಯ್ಕೆ ಸಮಿತಿ ಗಮನ ಸೆಳೆದಿದ್ದರು. ಸದ್ಯ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿರುವುದರಿಂದ ದಿನೇಶ್ ಕಾರ್ತಿಕ್ ಅವಕಾಶ ವಂಚಿತರಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನವೇ ರಿಷಬ್ ಪಂತ್ ಅವಕಾಶ ನೀಡಲು ಹಲವು ಹಿರಿಯ ಆಟಗಾರರು ಸಲಹೆ ನೀಡಿದ್ದರು. ಆ ಮೂಲಕ ರಿಷಬ್ ಪಂತ್ ಪರ ಬ್ಯಾಟ್ ಬೀಸಿದ್ದರು. ಇಂಗ್ಲೆಂಡ್ ವಾತಾವರಣದಲ್ಲಿ ಆಡಲು ರಿಷಬ್ ಪಂತ್ ಸೂಕ್ತ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಇತ್ತ ಆಯ್ಕೆ ಸಮಿತಿ ರಿಷಬ್ ಪಂತ್ ಅವರಿಗೆ ಸ್ಥಾನ ನೀಡಿರುವುದಕ್ಕೆ ಹಲವು ಮಂದಿ ವಿವಿಧ ರೀತಿಯ ಮಿಮ್ಸ್‍ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಕೆಲವರು ದಿನೇಶ್ ಕಾರ್ತಿಕ್ ಪರ ಬ್ಯಾಟ್ ಬೀಸಿದ್ದರೆ, ಮತ್ತೆ ಕೆಲವರು ಆಯ್ಕೆ ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

    https://twitter.com/PantArmy/status/1145259190971035649

    https://twitter.com/Uthaleredeva92/status/1145261606026137600

  • ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಲು ಕೇಸರಿ ಸೈನ್ಯ ಸಿದ್ಧ

    ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ ಮಣಿಸಲು ಕೇಸರಿ ಸೈನ್ಯ ಸಿದ್ಧ

    ನವದೆಹಲಿ: ಎಡ್ಜ್ ಬಸ್ಟನ್‍ನಲ್ಲಿ ಇಂದು ಭಾರತ-ಇಂಗ್ಲೆಂಡ್ ನಡುವೆ ವಿಶ್ವಕಪ್ ಕ್ರಿಕೆಟ್ ಪಂದ್ಯ ನಡೆಯಲಿದ್ದು, ಪರಂಗಿಗಳ ನೆಲದಲ್ಲೇ ಯುದ್ಧಕ್ಕೆ ಸಿದ್ಧವಾಗಿರುವ ಕೇಸರಿ ಪಡೆ, ಆಂಗ್ಲರ ಸೋಲಿಸಿ ತಿರಂಗ ಹಾರಿಸಲು ಸಿದ್ಧರಾಗಿದ್ದಾರೆ.

    ಇಂದು ಮಧ್ಯಾಹ್ನ 3 ಗಂಟೆಗೆ ಶುರುವಾಗುವ ಮ್ಯಾಚ್‍ನಲ್ಲಿ ಪಿಚ್ ಬ್ಯಾಟಿಂಗ್ ಹೆಚ್ಚು ಅನುಕೂಲಕಾರಿಯಾಗಿದ್ದು, ರನ್‍ಗಳ ಹೊಳೆಯೇ ಹರಿಯಬಹುದು. ಇಲ್ಲಿವರೆಗೂ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ಭಾರತ ಅಜೇಯವಾಗಿದೆ. ಆದರೆ ಕ್ರಿಕೆಟ್ ಮಹಾಕದನದಿಂದ ಹೊರಬೀಳುವ ಭೀತಿಯಲ್ಲಿರುವ ಇಂಗ್ಲೆಂಡ್ ಇಂದಿನ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.

    ಟೂರ್ನಿ ಆರಂಭದಲ್ಲಿ ಅಬ್ಬರಿಸಿದ್ದ ಆಂಗ್ಲರು, ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸತತ ಎರಡು ಮ್ಯಾಚ್‍ಗಳನ್ನು ಸೋತು ಹೈರಾಣರಾಗಿದ್ದಾರೆ. ಇತ್ತ ಪಾಕಿಸ್ತಾನಕ್ಕೆ ಸೆಮಿಫೈನಲ್ ಆಸೆ ಜೀವಂತವಾಗಿರಬೇಕಾದರೆ ಇಂಗ್ಲೆಂಡ್ ಸೋಲಬೇಕಿದೆ. ಹೀಗಾಗಿ ನೆರೆವೈರಿ ಪಾಕಿಸ್ತಾನದಲ್ಲೂ ಭಾರತದ ಗೆಲುವಿಗಾಗಿ ಪ್ರಾರ್ಥನೆ ನಡೆಯುತ್ತಿದೆ.

    ಸಂಕಷ್ಟದ ಸ್ಥಿತಿಯಲ್ಲೇ ಇಂಗ್ಲೆಂಡ್‍ಗೆ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಮೊಣಕೈ ನೋವಿನಿಂದ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಜಸನ್ ರಾಯ್ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಬೌಲರ್ ಜೋಫ್ರಾ ಆರ್ಚರ್ ಆಡುವುದು ಅನುಮಾನವಾಗಿದೆ. ಎಡ್ಜ್ ಬಸ್ಟನ್ ನಲ್ಲಿ ಇದೂವರೆಗೆ ನಡೆದ ಐದು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡಗಳೇ ಗೆದ್ದಿವೆ. ಅಲ್ಲದೆ ಇದೂವರೆಗೆ ಆಡಿರುವ ಮ್ಯಾಚ್‍ಗಳಲ್ಲಿ ಭಾರತ ಎದುರಾಳಿ ತಂಡದ 9 ವಿಕೆಟ್ ಕಬಳಿಸಿದೆ. ಹೊಸ ಆರೆಂಜ್ ಜರ್ಸಿಯಲ್ಲಿ ವಿರಾಟ್ ಕೊಹ್ಲಿ ಪಡೆ ಮೈದಾನಕ್ಕಿಳಿಯಲಿದೆ.

    ಲಾರ್ಡ್ಸ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನ್ಯೂಜಿಲೆಂಡ್‍ನ್ನ 87 ರನ್‍ಗಳಿಂದ ಸೋಲಿಸಿ ಗೆದ್ದು ಬೀಗಿದೆ. ಮೊದಲು ಬ್ಯಾಟ್ ಮಾಡಿದ ಕಾಂಗಾರುಗಳು 9 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು. ಖವಜಾ 88, ಅಲೆಕ್ಸ್ ಕೆರೇ 71 ರನ್ ಗಳಿಸಿದ್ದರು. ಟಾರ್ಗೆಟ್ ಬೆನ್ನತ್ತಿದ್ದ ಕಿವೀಸ್ ಮಿಚೆಲ್ ಸ್ಟಾರ್ಕ್ ಮಾರಕ ದಾಳಿಗೆ ತತ್ತರಿಸಿತ್ತು. 43.4 ಓವರ್‍ಗಳಲ್ಲಿ 157 ರನ್‍ಗೆ ಆಲೌಟಾಗಿ 87 ರನ್‍ಗಳಿಂದ ಸೋಲಿಗೆ ಶರಣಾಗಿತ್ತು. ವಿಲಿಯಮ್‍ಸನ್ 40, ಟೇಲರ್ 30 ರನ್ ಗಳಿಸಿದ್ದು, ಸ್ಟಾರ್ಕ್ 26ಕ್ಕೆ 5 ವಿಕೆಟ್ ಕಬಳಿಸಿ ಆಸ್ಟ್ರೇಲಿಯಾ ಗೆಲುವಿಗೆ ಕಾರಣರಾಗಿದ್ದಾರೆ.

    ಇತ್ತ ಲೀಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಅಫ್ಘಾನಿಸ್ತಾನ ವಿರುದ್ಧ ಮೂರು ವಿಕೆಟ್‍ಗಳ ರೋಚಕ ಜಯ ಗಳಿಸಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘನ್ನರು 9 ವಿಕೆಟ್ ನಷ್ಟಕ್ಕೆ 227 ರನ್‍ಗಳನ್ನ ಗಳಿಸಿದ್ದರು. ರಹಮತ್ ಶಾ 35, ಅಸ್ಗರ್ ಅಫ್ಘನ್ 42, ನಬೀವುಲ್ಲಾ 42 ರನ್ ಗಳಿಸಿದ್ದರು. ಗುರಿ ಬೆನ್ನತ್ತಿದ್ದ ಪಾಕಿಸ್ತಾನ 2 ಎಸೆತ ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತ್ತು. ಇಮಾಮ್ ಉಲ್ ಹಕ್ 36, ಬಾಬರ್ ಅಜಂ 45, ಇಮಾದ್ ವಾಸೀಂ 49 ರನ್ ಗಳಿಸಿದ್ದರು. ಈ ಜಯದೊಂದಿಗೆ ಸೆಮಿಫೈನಲ್‍ಗೇರುವ ಪಾಕಿಸ್ತಾನದ ಆಸೆ ಜೀವಂತವಾಗಿ ಉಳಿದಿದೆ.

    ಇತಿಹಾಸದಲ್ಲಿ ಸಮಬಲದ ಹೋರಾಟ:
    ವಿಶ್ವಕಪ್ ಇತಿಹಾಸದ ಪುಟಗಳನ್ನ ಒಮ್ಮೆ ಮೆಲುಕು ಹಾಕಿದರೆ ಇಂಡೋ-ಇಂಗ್ಲೆಂಡ್ 7 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಲಾ ಮೂರು ಪಂದ್ಯಗಳನ್ನ ಗೆದ್ದಿದ್ದು, ಒಂದು ಡ್ರಾನಲ್ಲಿ ಅಂತ್ಯಗೊಂಡಿದೆ. ಹೀಗಾಗಿ ಇಂದಿನ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿದೆ.

  • ಟೀಂ ಇಂಡಿಯಾ ಗೆಲುವಿಗೆ ಪಾಕಿಸ್ತಾನಿಗಳ ಪ್ರಾರ್ಥನೆ!

    ಟೀಂ ಇಂಡಿಯಾ ಗೆಲುವಿಗೆ ಪಾಕಿಸ್ತಾನಿಗಳ ಪ್ರಾರ್ಥನೆ!

    – ಅಫ್ಘಾನ್ ವಿರುದ್ಧ ತಿಣುಕಾಡಿ ಗೆದ್ದ ಪಾಕ್

    ಬೆಂಗಳೂರು: ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಗೆಲುವಿನ ನಾಗಾಲೋಟ ಮುಂದುವರಿಸಿರುವ ಭಾರತ ಭಾನುವಾರ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ರಾಜಕೀಯ ಟೀಕೆಗೆ ಗುರಿಯಾಗಿರುವ ಕೇಸರಿ ಟೀ-ಶರ್ಟ್ ಧರಿಸಿ ಕೊಹ್ಲಿ ಪಡೆ ಮೈದಾನಕ್ಕೆ ಇಳಿಯಲಿದೆ.

    ನಂಬರ್ 4ನೇ ಕ್ರಮಾಂಕದಲ್ಲಿ ಆಲ್‍ರೌಂಡರ್ ವಿಜಯ್ ಶಂಕರ್ ವಿಫಲವಾಗುತ್ತಿರುವ ಕಾರಣ, ರಿಷಬ್ ಪಂಥ್‍ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತವರಿನಲ್ಲಿ ಇಂಗ್ಲೆಂಡ್ ಆಟ ಎಲ್ಲರ ಅಚ್ಚರಿಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಶನಿವಾರದ ನಡೆದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಿಣುಕಾಡಿ ಗೆಲುವು ಸಾಧಿಸಿದೆ. ಅಫ್ಘಾನಿಸ್ತಾನ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ಸಿಡಿಸಿತ್ತು. ಈ ಗುರಿಯನ್ನು ತಲುಪಲು ಪಾಕಿಸ್ತಾನ ಪರದಾಡಿತು.

    ಈ ಮೂಲಕ ಪಾಕ್ ಸೆಮಿಫೈನಲ್ ಪ್ರವೇಶ ಮಾಡುವ ಆಸೆಯನ್ನು ಜೀವಂತವಾಗಿಸಿಕೊಂಡಿದೆ. ಆದರೆ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೆ ಮಾತ್ರ ಪಾಕ್ ಕನಸು ಈಡೇರಲಿದೆ.

    ವಿಚಿತ್ರವೆಂದರೆ ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲಲಿ ಎಂದು ಬದ್ಧವೈರಿಯಾಗಿರುವ ಪಾಕಿಸ್ತಾನ ಪ್ರಾರ್ಥಿಸುತ್ತಿದೆ. ಭಾನುವಾರ ಇಂಗ್ಲೆಂಡ್ ಸೋತರೆ ಸೆಮಿಫೈನಲ್ ತಲುಪುವ ಪಾಕ್ ದಾರಿ ಸ್ವಲ್ಪ ಸರಳವಾಗಲಿದೆ ಎನ್ನುವುದು ಪಾಕಿಗಳ ಲೆಕ್ಕಾಚಾರ. ಜೊತೆಗೆ, ಇನ್ನುಳಿದಿರುವ ಶ್ರೀಲಂಕಾವನ್ನೂ ಮಣಿಸಲಿ ಅಂತಲೂ ಪ್ರಾರ್ಥಿಸುತ್ತಿದ್ದಾರೆ.

    ಪಾಕಿಸ್ತಾನ ಸೆಮಿಫೈನಲ್ಸ್ ನಿಂದ ಹೊರಗಟ್ಟಲು, ಉದ್ದೇಶಪೂರ್ವಕವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ಸೋಲಬಹುದು. ಟೀಂ ಇಂಡಿಯಾ ಯಾರಿಗೂ ಅರ್ಥವಾಗದ ರೀತಿ ಆಡುತ್ತಿದೆ. ಅಫ್ಘಾನಿಸ್ಥಾನದ ವಿರುದ್ಧವೂ ಉದ್ದೇಶಪೂರ್ವಕವಾಗಿ ಕಳಪೆಯಾಗಿ ಆಡಿತ್ತು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿಲ್ ಅಲಿ ಹೇಳಿಕೆ ನೀಡಿದ್ದಾರೆ. ಬಸಿಲ್ ಅಲಿ ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

  • ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಲಂಡನ್: ವಿಶ್ವಕಪ್‍ನಲ್ಲಿ ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಕಿತ್ತಳೆ ಬಣ್ಣದ ಜರ್ಸಿ ತೊಟ್ಟು ಆಡಲಿದೆ.

    ಹೊಸ ಜರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಜರ್ಸಿ ತೊಟ್ಟು ಆಟಗಾರು ಪೋಸ್ ನೀಡಿರುವ ಫೋಟೋಗಳು ತುಂಬಾ ವೈರಲ್ ಆಗಿವೆ.

    ಹೊಸ ಜರ್ಸಿತೊಟ್ಟ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು “ಹೊಸ ಜರ್ಸಿಯಲ್ಲಿ ಮಿಂಚಲು ಸಿದ್ಧ” ಎಂದು ಬರೆದಿದ್ದಾರೆ. ಇನ್ನೂ ಕೆ.ಎಲ್ ರಾಹುಲ್ ಜೊತೆ ಹಿಮ್ಮುಖವಾಗಿ ಪೋಸ್ ನೀಡಿ ಫೋಟೋ ಹಾಕಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಹೊಸ ಜರ್ಸಿಯಲ್ಲಿ ಮುಂದಿನ ಪಂದ್ಯಕ್ಕೆ ರೆಡಿ ಎಂದು ಬರೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಬೌಲರ್ ಭುವನೇಶ್ವರ್ ಕುಮಾರ್, ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವರ ಫೋಟೋವನ್ನು ಬಿಸಿಸಿಐ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ. ಅದರಂತೆ ಐಸಿಸಿ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವಿಶೇಷ ಸಮಯದಲ್ಲಿ ವಿಶೇಷ ಜರ್ಸಿ, ಇಂಡಿಯಾ ಈ ಜರ್ಸಿಯನ್ನು ಧರಿಸಿ ಇಂಗ್ಲೆಂಡ್ ವಿರುದ್ಧ ಆಡಲಿದೆ ಎಂದು ಬರೆದುಕೊಂಡಿದೆ.

    https://www.instagram.com/p/BzQzO8EArLx/

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

    ವಿಪಕ್ಷಗಳಿಂದ ಟೀಕೆ:
    ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದೆ. ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

    ವಿಶ್ವಕಪ್‍ನಲ್ಲಿ ಪಾಕಿಗೆ ಭಾರತ ಸಹಾಯ ಮಾಡಲಿ – ಅಕ್ತರ್ ಮನವಿ

    ನವದೆಹಲಿ: ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ಭಾರತ ತಂಡ ಸಹಾಯ ಮಾಡಬೇಕು ಎಂದು ಪಾಕ್‍ನ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಅಡಿರುವ ಏಳು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಮೂರರಲ್ಲಿ ಸೋತಿರುವ ಪಾಕಿಸ್ತಾನ ಒಂದು ಪಂದ್ಯ ಮಳೆಯ ಕಾರಣಕ್ಕೆ ರದ್ದು ಮಾಡಿಕೊಂಡು ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಇನ್ನೂ ಲೀಗ್ ಹಂತದಲ್ಲಿ ಎರಡು ಪಂದ್ಯಗಳು ಉಳಿದಿದ್ದು, 2 ಪಂದ್ಯದಲ್ಲೂ ಗೆದ್ದರೂ ಪಾಕ್ ಸೆಮಿ ಫೈನಲ್ ಪ್ರವೇಶದ ಕನಸು ಬೇರೆ ತಂಡದ ಗೆಲುವು ಸೋಲಿನ ಮೇಲೆ ಅವಲಂಬಿತವಾಗಿದೆ.

    ಈ ವಿಚಾರವಾಗಿ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್ ವಿಶ್ವಕಪ್‍ನಲ್ಲಿ ತಮ್ಮ ತಂಡ ಸೆಮಿಫೈನಲ್‍ಗೆ ಅರ್ಹತೆ ಪಡೆಯಲು ನಮಗೆ ಭಾರತ ತಂಡ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

    ಭಾರತ ತನ್ನ ಮುಂದಿನ ಪಂದ್ಯವನ್ನು ಜೂನ್ 30ರಂದು ಇಂಗ್ಲೆಂಡ್ ವಿರುದ್ಧ ಅಡಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ವಿಶ್ವಕಪ್‍ನಿಂದ ಇಂಗ್ಲೆಂಡ್ ಹೊರಬೀಳುತ್ತದೆ. ಆಗ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ವಿರುದ್ಧ ಉಳಿದ ಎರಡು ಪಂದ್ಯವನ್ನು ಪಾಕ್ ಗೆದ್ದು 11 ಅಂಕಗಳಿಸಿದರೆ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಪಾಕಿಸ್ತಾನ ವಿಶ್ವಕಪ್‍ನಲ್ಲಿ ತುಂಬ ಒಳ್ಳೆಯ ಕಮ್‍ಬ್ಯಾಕ್ ಮಾಡಿದೆ ಎಂದು ನಾನು ಭಾವಿಸುತ್ತೇನೆ. ಈಗ ಭಾರತ ನಮಗೆ ಸಹಾಯ ಮಾಡಬೇಕು ಮುಂದಿನ ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಭಾರತ ಗೆಲ್ಲಬೇಕು ಮತ್ತು ನಾವು ಉಳಿದ ಎರಡು ಪಂದ್ಯಗಳನ್ನು ಗೆದ್ದು ಸೆಮಿಫೈನಲ್‍ಗೆ ಅರ್ಹತೆ ಪಡೆದು, ಸೆಮಿಸ್ ಪಂದ್ಯವನ್ನು ಇಂಡಿಯಾ ವಿರುದ್ಧ ಅಡಿ ಅವರನ್ನು ಸೋಲಿಸಬೇಕು ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.

    ಒಂದು ವೇಳೆ ಜೂನ್ 30 ರಂದು ನಡೆಯುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೂ, ತನ್ನ ಮುಂದಿನ ಪಂದ್ಯ ನ್ಯೂಜಿಲ್ಯಾಂಡ್ ವಿರುದ್ಧ ಸೋಲುತ್ತದೆ. ಅಗ ಮತ್ತೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಅರ್ಹತೆ ಪಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಇದು ಒಂದು ಉತ್ತಮ ವಿಶ್ವಕಪ್ ಟೂರ್ನಿಯಾಗಲಿದೆ ಮತ್ತು ನಮ್ಮ ಪಾಕಿಸ್ತಾನ ಸೆಮಿಫೈನಲ್ ತಲುಪುವ ಹಾದಿಯಲ್ಲಿದೆ. ಪಾಕಿಸ್ತಾನ ತಂಡವನ್ನು ಎಂದಿಗೂ ಮೂಲೆಗುಂಪು ಮಾಡಬೇಡಿ. ಹಾಗೆ ಮಾಡಿದರೆ ನಮ್ಮ ತಂಡ ಮತ್ತೆ ಕಮ್‍ಬ್ಯಾಕ್ ಮಾಡಿ ನಿಮ್ಮನ್ನು ಸೋಲಿಸುತ್ತದೆ ಎಂದು ಶೋಯೆಬ್ ಹೇಳಿದ್ದಾರೆ.

  • ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ಟೀಂ ಇಂಡಿಯಾದ ಹೊಸ ಜರ್ಸಿಗೆ ವಿಪಕ್ಷಗಳಿಂದ ಭಾರೀ ಟೀಕೆ

    ನವದೆಹಲಿ: ಟೀಂ ಇಂಡಿಯಾದ ಕಿತ್ತಳೆ (ಕೇಸರಿ) ಬಣ್ಣದ ಜರ್ಸಿಗೆ ವಿಪಕ್ಷಗಳಿಂದ ಟೀಕೆ ವ್ಯಕ್ತವಾಗಿದೆ.

    ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಆಟಗಾರರು ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಿ ಮೈದಾನಕ್ಕೆ ಇಳಿಯಲಿದ್ದಾರೆ. ಕಿತ್ತಳೆ ಬಣ್ಣದ ಜರ್ಸಿಗೆ ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಅನೇಕ ವಿಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿವೆ.

    ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ ‘ಹೋಮ್’ ಮತ್ತು ‘ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

  • ಇಂಡೋ, ಪಾಕ್ ಕ್ರಿಕೆಟ್ ಕದನ – ಏನು ಹೇಳುತ್ತೆ ಹವಾಮಾನ ವರದಿ!

    ಇಂಡೋ, ಪಾಕ್ ಕ್ರಿಕೆಟ್ ಕದನ – ಏನು ಹೇಳುತ್ತೆ ಹವಾಮಾನ ವರದಿ!

    ಮ್ಯಾಂಚೆಸ್ಟರ್: ವಿಶ್ವ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರ್ಯಾಫೋರ್ಡ್ ಕ್ರೀಡಾಂಗಣ ಸಿದ್ಧವಾಗಿದೆ. ಆದರೆ ಅಭಿಮಾನಿಗಳ ಕುತೂಹಲಕ್ಕೆ ಮಳೆರಾಯ ಅಡ್ಡಿಪಡಿಸುವ ಆತಂಕ ಸೃಷ್ಟಿಯಾಗಿದೆ.

    ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದ್ದು, ಇದಕ್ಕೆ ಮಳೆರಾಯ ಅಡ್ಡಿಪಡಿಸಲಿದ್ದಾನೆ ಎಂಬ ಆತಂಕ ಶುರುವಾಗಿದೆ. ಮ್ಯಾಂಚೆಸ್ಟರ್ ನಲ್ಲಿ ಕಳೆದ 4 ದಿನಗಳಿಂದ ಮಳೆಯಾಗುತ್ತಿತ್ತು. ಆದರೆ ಶುಕ್ರವಾರ ಮೋಡಗಳು ಸರಿದು ಮಧ್ಯಾಹ್ನದ ವರೆಗೂ ಸೂರ್ಯ ಕಾಣಿಸಿಕೊಂಡಿದ್ದ. ಆದರೆ ಸಂಜೆ ವೇಳೆಗೆ ಮತ್ತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಇಂದು ಮಳೆ ಇಲ್ಲದ ಕಾರಣ ಟೀಂ ಇಂಡಿಯಾ ಮಧ್ಯಾಹ್ನ 1 ಗಂಟೆವರೆಗೂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತ್ತು. ಮಧ್ಯಾಹ್ನದ ಬಳಿಕ ಪಾಕ್ ತಂಡ ಅಭ್ಯಾಸಕ್ಕಿಳಿದಿತ್ತು.

    ಟೂರ್ನಿಯಲ್ಲಿ ಭಾರತ, ನ್ಯೂಜಿಲ್ಯಾಂಡ್ ಪಂದ್ಯ ಸೇರಿ ಇದುವರೆಗೂ ನಾಲ್ಕು ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ. ಪಾಕಿಸ್ತಾನ-ಶ್ರೀಲಂಕಾ, ಬಾಂಗ್ಲಾದೇಶ-ಶ್ರೀಲಂಕಾ, ದಕ್ಷಿಣ ಆಫ್ರಿಕಾ-ವೆಸ್ಟ್ ಇಂಡೀಸ್ ಪಂದ್ಯಗಳು ರದ್ದಾಗಿತ್ತು. ಶ್ರೀಲಂಕಾದ ಎರಡು ಪಂದ್ಯಗಳು ಮಳೆಯಿಂದಾಗಿಯೇ ರದ್ದಾಗಿರುವ ಕಾರಣ ತಂಡ ಸೆಮಿ ಫೈನಲ್ ತಲುಪುದರ ಮೇಲೆ ಪರಿಣಾಮ ಬೀರಲಿದೆ.

    ಹವಾಮಾನ ವರದಿ ಪ್ರಕಾರ ಮುಂಜಾನೆ ಅಲ್ಪ ಮಳೆಯಾಗುವ ಸಾಧ್ಯತೆ ಇದ್ದು, ಆ ಬಳಿಕ ಸೂರ್ಯ ಬಂದರು ಪಂದ್ಯದ ಸೆಕೆಂಡ್ ಆಫ್‍ಗೆ ಮತ್ತೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭಿಸಿದೆ. ಈ ವರದಿಯ ಅನ್ವಯ ಪಂದ್ಯ ಸಂರ್ಪೂಣ 50 ಓವರ್ ನಡೆಯುವ ಅವಕಾಶ 50-50 ಎನ್ನಲಾಗಿದೆ.

    ಇಂಗ್ಲೆಂಡ್ ಕಾಲಮಾನದ ಪ್ರಕಾರ ಪಂದ್ಯ ನಾಳೆ ಬೆಳಗ್ಗೆ 10.30ಕ್ಕೆ ಪ್ರಾರಂಭವಾಗಲಿದೆ. ಟೂರ್ನಿಯಲ್ಲಿ ಮಳೆಯಿಂದ ಪಂದ್ಯ ರದ್ದಾಗುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಅಭಿಮಾನಿಗಳು ಹಾಗೂ ಕ್ರಿಕೆಟ್ ವಿಶ್ಲೇಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟೂರ್ನಿಯ ಆಯೋಜನೆ ಹೊಣೆ ಹೊತ್ತಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಉತ್ತಮ ವ್ಯವಸ್ಥೆ ಮಾಡಿಲ್ಲ ಎಂಬ ಟೀಕೆ ಕೇಳಿ ಬಂದಿದೆ.

  • ವಿಶ್ವಕಪ್ 2019 : ಇಂಡೋ, ಪಾಕ್ ಕದನ – ಟೀಂ ಇಂಡಿಯಾ ಗೆಲ್ಲುವ ಫೇವರಿಟ್

    ವಿಶ್ವಕಪ್ 2019 : ಇಂಡೋ, ಪಾಕ್ ಕದನ – ಟೀಂ ಇಂಡಿಯಾ ಗೆಲ್ಲುವ ಫೇವರಿಟ್

    ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್‍ಡೌನ್ ಆರಂಭವಾಗಿದ್ದು, ಇತ್ತಂಡಗಳು ಗೆಲುವಿನ ಲೆಕ್ಕಾಚಾರಗಳನ್ನು ಆರಂಭಿಸಿವೆ.

    ಏಷ್ಯಾದ ಎರಡು ರಾಷ್ಟ್ರಗಳ ಪಂದ್ಯವನ್ನ ವಿಶ್ವ ಕ್ರಿಕೆಟ್ ಅಭಿಮಾನಿಗಳು ಕೂಡ ಕಣ್ತುಂಬಿಕೊಳ್ಳಲು ಸಿದ್ಧರಾಗಿದ್ದಾರೆ. ಎರಡು ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ಆಡದಿರುವುದರಿಂದ ನಾಳೆಯ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಿದೆ. ಈ ಸಂದರ್ಭದಲ್ಲಿ ಎರಡು ತಂಡಗಳ ಬಲಾಬಲ ನೋಡುವುದಾದರೆ ಪಂದ್ಯದಲ್ಲಿ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ಆಗಿದೆ.

    2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮಾತ್ರ ಮುಖಾಮುಖಿಯಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಎರಡು ತಂಡಗಳು 131 ಪಂದ್ಯಗಳನ್ನು ಆಡಿದ್ದು, ಭಾರತ 54 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಪಾಕ್ 73 ಪಂದ್ಯಗಳಲ್ಲಿ ಗೆದ್ದಿದೆ. 1978 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮೊದಲ ಏಕದಿನ ಟೂರ್ನಿಯನ್ನ ಆಡಿದ್ದವು.

    ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಪರಿಗಣಿಸುವುದಾದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ರಲ್ಲಿ ಭಾರತ, 11 ರಲ್ಲಿ ಪಾಕ್ ಗೆಲುವು ಪಡೆದಿದೆ. ಭಾರತ ಹಾಗೂ ಪಾಕ್ ನಡುವ ಅಂತಿಮ ದ್ವಿಪಕ್ಷೀಯ ಕ್ರಿಕೆಟ್ ಸರಣಿ 2012-13 ರಲ್ಲಿ ನಡೆದಿತ್ತು.

    ಉಳಿದಂತೆ 2015ರ ವಿಶ್ವಕಪ್ ಬಳಿಕ ನಡೆದ 4 ಪಂದ್ಯಗಳಲ್ಲಿ ಭಾರತ 3 ರಲ್ಲಿ ಗೆಲುವು ಪಡೆದಿದೆ. 2017ರ ಚಾಂಪಿಯನ್ಸ್ ಟ್ರೋಫಿಯ ಬಾರ್ಮಿಂಗ್‍ಹ್ಯಾಮ್ ಪಂದ್ಯದಲ್ಲಿ ಭಾರತ 124 ರನ್ ಅಂತರದಲ್ಲಿ ಪಾಕ್ ವಿರುದ್ಧ ಗೆಲುವು ಪಡೆದಿತ್ತು. ಪಂದ್ಯದಲ್ಲಿ ರೋಹಿತ್ ಶರ್ಮಾ, ಧವನ್, ವಿರಾಟ್ ಕೊಹ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದರೆ, ಯುವರಾಜ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ತಂಡದ ಮೊತ್ತ 319 ರನ್ ಆಗಲು ಸಹಕಾರಿಯಾಗಿತ್ತು. ಡಿಎಲ್‍ಎಸ್ ನಿಯಮಗಳ ಅನ್ವಯ ಪಾಕ್ 289 ರನ್ ಟಾರ್ಗೆಟ್ ಪಡೆದರು ಕೇವಲ 164 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲುಂಡಿತ್ತು. ಆದರೆ ಟೂರ್ನಿಯ ಫೈನಲ್‍ನಲ್ಲಿ ಭಾರತ 180 ರನ್ ಗಳಿಂದ ಸೋಲುಂಡಿತ್ತು. ಆ ಬಳಿಕ 2018 ರಲ್ಲಿ ನಡೆದ ಏಷ್ಯಾಕಪ್ ಕ್ರಿಕೆಟ್‍ನಲ್ಲಿ ಕೊಹ್ಲಿ ಅನುಪಸ್ಥಿತಿ ನಡುವೆಯೂ ಭಾರತ ಗೆದ್ದು ಬೀಗಿತ್ತು.

    2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಆಡಿರುವ 3 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಗೆಲುವು ಪಡೆದಿದ್ದರೆ, ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಂದ ಗೆದ್ದು ಬೀಗಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ಮಳೆಗೆ ರದ್ದಾಗಿದ್ದ ಕಾರಣ ಅಂಕಪಟ್ಟಿಯಲ್ಲಿ 5 ಅಂಕಗಳೊಂದಿಗೆ 3ನೇ ಸ್ಥಾನ ಪಡೆದಿದೆ.

    ಇತ್ತ ಟೂರ್ನಿಯಲ್ಲಿ ಈಗಾಗಲೇ ನಾಲ್ಕು ಪಂದ್ಯಗಳಲ್ಲಿ ಆಡಿರುವ ಪಾಕಿಸ್ತಾನ 2 ರಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಪಡೆದಿದ್ದರೆ, ಶ್ರೀಲಂಕಾ ವಿರುದ್ಧ ಪಂದ್ಯ ರದ್ದಾಗಿದೆ. 4 ಪಂದ್ಯಗಳಿಂದ 3 ಅಂಕಗಳನ್ನು ಪಡೆದಿರುವ ಪಾಕ್ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದೆ.

    ನಾಳಿನ ಪಂದ್ಯದ ತಂಡದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಪಡೆ ತಂಡ ಬಲವಾಗಿದ್ದರೆ, ಧವನ್ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ಸಮಸ್ಯೆಯಾಗಿದೆ. ಧವನ್ ಸ್ಥಾನದಲ್ಲಿ ಆರಂಭಿಕನಾಗಿ ರಾಹುಲ್ ಕಣಕ್ಕೆ ಇಳಿಯುವುದು ಖಚಿತವಾಗಿದ್ದು, ನಂ.4 ರಲ್ಲಿ ಯಾರು ಬ್ಯಾಟ್ ನಡೆಸಲಿದ್ದಾರೆ ಎಂಬ ಕುತೂಹಲವಿದೆ. ಬಾಂಗ್ಲಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿದ ರಾಹುಲ್ ಹೆಚ್ಚಿನ ಆತ್ಮ ವಿಶ್ವಾಸದಿಂದ ಕಣಕ್ಕಿಳಿಯುತ್ತಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭುವಿ, ಬುಮ್ರಾ ಭಾರತದ ಶಕ್ತಿಯಾಗಿದ್ದರೆ, ಚಹಲ್ ಕಮಲ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ಇದರೊಂದಿಗೆ ಕುಲ್ದೀಪ್ ಯಾದವ್ ಸಾಥ್ ನೀಡಬೇಕಿದೆ.