Tag: england

  • ಕೋವಿಡ್ ಬಿಕ್ಕಟ್ಟಿನ ನಡುವೆಯೂ ಹೊಸ ಆಶಾಕಿರಣ- ಬ್ರಿಟನ್ ಸರ್ಕಾರದಿಂದ ರಾಜ್ಯದ 1,000 ನರ್ಸುಗಳಿಗೆ ಉದ್ಯೋಗ

    ಕೋವಿಡ್ ಬಿಕ್ಕಟ್ಟಿನ ನಡುವೆಯೂ ಹೊಸ ಆಶಾಕಿರಣ- ಬ್ರಿಟನ್ ಸರ್ಕಾರದಿಂದ ರಾಜ್ಯದ 1,000 ನರ್ಸುಗಳಿಗೆ ಉದ್ಯೋಗ

    – ವಾರ್ಷಿಕ 20 ಲಕ್ಷ ರೂ. ಪ್ಯಾಕೇಜ್, ಕೌಶಲ್ಯಾಭಿವೃದ್ಧಿ ನಿಗಮದ ಜತೆ ಇಂಗ್ಲೆಂಡ್ ಒಪ್ಪಂದ

    ಬೆಂಗಳೂರು: ಇಡೀ ರಾಜ್ಯವು ಕೊರೊನ ಹೊಸ ಅಲೆಯ ಆತಂಕದಲ್ಲಿದ್ದರೆ ಕೌಶಲ್ಯಾವೃದ್ಧಿ ಖಾತೆ ಮಂತ್ರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.

    ಸದ್ಯಕ್ಕೆ ನಮ್ಮ ರಾಜ್ಯದ ನರ್ಸುಗಳಿಗೆ ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು, ಯುರೋಪ್ ಸೇರಿದಂತೆ ಅನೇಕ ದೇಶಗಳ ಆಸ್ಪತ್ರೆಗಳು ಅವರಿಗೆ ಉದ್ಯೋಗಾವಕಾಶ ನೀಡಲು ಮುಂದೆ ಬಂದಿವೆ. ಈ ನಿಟ್ಟಿನಲ್ಲಿ ಮೊದಲಿಗೆ ಬ್ರಿಟನ್ ಸರ್ಕಾರ 1,000 ಮಂದಿ ನರ್ಸುಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟು ಮಂದಿ ಶುಶ್ರೂಶಕಿಯರನ್ನು ಆ ದೇಶಕ್ಕೆ ಕಳಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಮಾಹಿತಿ ನೀಡಿದರು. ಬೆಂಗಳೂರಿನಲ್ಲಿ ಗುರುವಾರ ಈ ಬಗ್ಗೆ ಸಂಪೂರ್ಣ ವಿವರಗಳನ್ನು ಉಪಮುಖ್ಯಮಂತ್ರಿಗಳು ನೀಡಿದರು.

    * ಬ್ರಿಟನ್‍ಗೆ ಕಳಿಸಲಾಗುತ್ತಿರುವ ಶುಶ್ರೂಶಕಿಯರಿಗೆ ಸಂವಹನ ಕಲೆ ಸೇರಿದಂತೆ ಅವರ ವೃತ್ತಿಗೆ ಸಂಬಂಧಿಸಿದ ಎಲ್ಲ ರೀತಿಯ ಕುಶಲ ತರಬೇತಿಯನ್ನು ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮ (ಕೆವಿಟಿಎಸ್‍ಡಿಸಿ) ವತಿಯಿಂದ ನೀಡಲಾಗುತ್ತದೆ. ಬ್ರಿಟನ್ ಸರ್ಕಾರ ಈ ನರ್ಸುಗಳಿಗೆ ವಾರ್ಷಿಕ ತಲಾ 20 ಲಕ್ಷ ರೂ. ಪ್ಯಾಕೇಜ್ ನಿಗದಿ ಮಾಡಿದೆ.

    * ಈ ಉದ್ದೇಶಕ್ಕಾಗಿ ಅರ್ಹ ಹಾಗೂ ನುರಿತ ಶುಶ್ರೂಶಕಿಯರನ್ನು ನೇಮಕಾತಿ ಮಾಡಿಕೊಳ್ಳಲು ಆ ದೇಶದ ಹೆಲ್ತ್ ಎಜ್ಯೂಕೇಶನ್ ಇಂಗ್ಲೆಂಡ್ (ಎಚ್‍ಇಇ), ನ್ಯಾಷನಲ್ ಹೆಲ್ತ್ ಸರ್ವೀಸಸ್ (ಎನ್‍ಎಚ್‍ಎಸ್) ಸಂಸ್ಥೆಗಳ ಜತೆ ರಾಜ್ಯ ಕೌಶಲ್ಯಾಭಿವೃದ್ಧಿ ಇಲಾಖೆ ಒಪ್ಪಂದ ಮಾಡಿಕೊಂಡಿದೆ.

    * ವಿದೇಶದಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ಸರ್ಕಾರವೇ ಅಂತಾರಾಷ್ಟ್ರೀಯ ವಲಸೆ ಕೇಂದ್ರ ಸ್ಥಾಪಿಸಿದೆ. ಇದರ ಮೂಲಕ ಇಷ್ಟೂ ಶುಶ್ರೂಶಕಿಯರನ್ನು ಕಳಿಸಲಾಗುತ್ತಿದ್ದು, ಅವರ ಜತೆ ನಿರಂತರವಾಗಿ ಈ ಕೇಂದ್ರವು ಸಂಪರ್ಕದಲ್ಲಿರುತ್ತದೆ ಹಾಗೂ ಅವರ ಕುಂದುಕೊರತೆಗಳ ಬಗ್ಗೆ ನಿಗಾ ಇರಿಸುತ್ತದೆ. ಯಾವುದೇ ಸಮಸ್ಯೆ ಅಥವಾ ದೂರು ಇದ್ದರೆ ಬ್ರಿಟನ್‍ನಿಂದಲೇ ಇಲ್ಲಿಗೆ ತಿಳಿಸಬಹುದು. ಕೂಡಲೇ ಅವರಿಗೆ ಸೂಕ್ತ ಸಹಕಾರ ಒದಗಿಸಲಾಗುವುದು.

    * ಸದ್ಯಕ್ಕೆ ರಾಜ್ಯದಲ್ಲಿ ಕುಶಲತೆಯುಳ್ಳ ಮಾನವ ಸಂಪನ್ಮೂಲ ವಿಪುಲವಾಗಿದ್ದು, ಇಂಥ ನಿರುದ್ಯೋಗಿ ಯುವಜನರಿಗೆ ಜಾಗತಿಕ ಮಟ್ಟದಲ್ಲಿ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಈ ವಲಸೆ ಕೇಂದ್ರವನ್ನು ಸ್ಥಾಪಿಸಲಾಗಿದೆ.

    ಸಾಂದರ್ಭಿಕ ಚಿತ್ರ

    * ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯು ವಿದೇಶಗಳಿಗೆ ಉದ್ಯೋಗಕ್ಕಾಗಿ ತೆರಳುವ ಯುವಜನರಿಗೆ ಸೂಕ್ತ ಮಾರ್ಗದರ್ಶನ, ತಾಂತ್ರಿಕ ಬೆಂಬಲ ಹಾಗೂ ಪೂರಕ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪಬ್ಲಿಕ್ ಅಫೇಯರ್ಸ್ ಸೆಂಟರ್ ಜಗೆ ಒಡಂಬಡಿಕೆ ಮಾಡಿಕೊಂಡಿದೆ.

    * ಶುಶ್ರೂಶಕಿಯರ ಜತೆಗೆ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ನಿಗಮವು (ಕೆವಿಟಿಎಸ್‍ಡಿಸಿ) ಕುವೈತ್‍ನ ಅರೆ ಸರಕಾರಿ ಸಂಸ್ಥೆಯಾದ ಅಲ್-ದುರಾ ಮ್ಯಾನ್‍ಪವರ್ ಸಪ್ಲೈ (Al-Durra Manpower Supply) ಜತೆ ಇನ್ನೊಂದು ಒಪ್ಪಂದವನ್ನು ಮಾಡಿಕೊಂಡಿದೆ. ಇದರ ಪ್ರಕಾರ ಕುವೈತ್‍ನಲ್ಲಿ ರಾಜ್ಯದ ಅನುಭವಿ ವಾಹನ ಚಾಲಕರು, ಹೌಸ್ ಬಾಯ್ಸ್ ಹಾಗೂ ಅಡುಗೆ ಮಾಡುವವರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

    * ಕೆವಿಟಿಎಸ್‍ಡಿಸಿ ಮತ್ತು ಕೆನಡಾ ಸರಕಾರದ ನಡುವೆ ಹೊಸ ಒಪ್ಪಂದ ಮಾತುಕತೆ ಪ್ರಗತಿಯಲ್ಲಿದ್ದು, ಅದರ ಪ್ರಕಾರ ಐಟಿ, ವಿಡಿಯೋ ಗೇಮ್ ಮತ್ತು ಎಐ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ವಲಯಕ್ಕೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದ್ದು. ಕ್ಯುಬೆಕ್‍ನ ಮಾಂಟ್ರಿಯಲ್‍ಗೆ ಉದ್ಯೋಗ ಮತ್ತು ವಲಸೆಗೆ ಅನುಕೂಲವಾಗುವಂತೆ ಇಲಾಖೆಯು ಈ ಒಪ್ಪಂದ ಮಾಡಿಕೊಳ್ಳುವ ಕಾರ್ಯದಲ್ಲಿ ಹೆಜ್ಜೆ ಇಟ್ಟಿದೆ.

    * ಕೆವಿಟಿಎಸ್‍ಡಿಸಿ ಮೂಲಕ ವಿದೇಶದಲ್ಲಿ ಸೂಕ್ತ ವಿದೇಶಿ ಉದ್ಯೋಗದಾತರನ್ನು ಗುರುತಿಸುವ, ಸಂಪರ್ಕವನ್ನು ಸ್ಥಾಪಿಸಲು ಮತ್ತು ಕರ್ನಾಟಕ ರಾಜ್ಯದಿಂದ ಸುರಕ್ಷಿತ ವಲಸೆ ಕಾರ್ಯ ವಿಧಾನವನ್ನು ಉತ್ತೇಜಿಸಲು ವಿವಿಧ ದೇಶಗಳಲ್ಲಿನ ಕನ್ನಡ ಸಂಘಗಳ ಜತೆ ಸಂಪರ್ಕದಲ್ಲಿದೆ.

  • ಯುಕೆಯಲ್ಲಿ ಅಸ್ಟ್ರಾಜೆನಿಕಾ ಲಸಿಕೆಗೆ ಅನುಮತಿ

    ಯುಕೆಯಲ್ಲಿ ಅಸ್ಟ್ರಾಜೆನಿಕಾ ಲಸಿಕೆಗೆ ಅನುಮತಿ

    ಲಂಡನ್: ಆಕ್ಸಫರ್ಡ್ ವಿಶ್ವವಿದ್ಯಾಲಯದ ಆಸ್ಟ್ರಾಜೆನಿಕಾ ಲಸಿಕೆಯ ತುರ್ತು ಬಳಕೆಗೆ ಯುಕೆ ಸರ್ಕಾರ ಅನುಮತಿ ನೀಡಿದೆ. ಕೊರೊನಾ ರೂಪಾಂತರಿ ವೈರಸ್ ನಿಂದ ಬಿಗಾಯಿಡಿಸುತ್ತಿರುವ ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಲಸಿಕೆ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.

    ಮುಂದಿನ ವಾರದೊಳಗೆ ಫೈಜರ್ ಲಸಿಕೆಯನ್ನ ಸುಮಾರು 60 ಸಾವಿರ ಜನರಿಗೆ ನೀಡಲಾಗುವುದು. ಬುಧವಾರವೇ ಅಸ್ಟ್ರಾಜೆನಿಕಾ ಲಸಿಕೆ ಮೊದಲ ಡೋಸ್ ನೀಡುವ ಕೆಲಸ ಆರಂಭವಾಗಲಿದೆ. ಮೂರು ತಿಂಗಳಲ್ಲಿ 1 ಕೋಟಿ ಜನರಿಗೆ ಫಸ್ಟ್ ಡೋಸ್ ನೀಡುವ ಗುರಿಯನ್ನು ಯುಕೆ ಸರ್ಕಾರ ಹೊಂದಿದೆ.

    ಸೋಮವಾರ ಆಸ್ಟ್ರಾಜೆನಿಕಾ ಲಸಿಕೆಗೆ ಅಧಿಕೃತವಾಗಿ ಅನುಮತಿ ನೀಡಲಾಗಿದೆ. ಲಸಿಕೆ ಪೂರೈಕೆ ಆಗುವರೆಗೂ ಕಟ್ಟುನಿಟ್ಟಿನ ಲಾಕ್‍ಡೌನ್ ನಿಯಮಗಳು ಇರಲಿದ್ದು, ಹಂತ ಹಂತವಾಗಿ ವಿನಾಯ್ತಿಗಳನ್ನು ನೀಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಹೊಸ ರೂಪಾಂತರಿ ವೈರಸ್ ಭೀತಿಯಿಂದಾಗಿ ಕ್ರಿಸ್‍ಮಸ್ ಆಚರಣೆ ರದ್ದುಗೊಳಿಸಲಾಗಿತ್ತು ಎಂದು ಯುಕೆ ಸಚಿವ ಮೈಕಲ್ ಗೋವ್ ತಿಳಿಸಿದ್ದಾರೆ.

    ಲಂಡನ್ ಮತ್ತು ದಕ್ಷಿಣ ಇಂಗ್ಲೆಂಡ್ ನಲ್ಲಿ ಲಸಿಕೆಯ ತುರ್ತು ಅಗತ್ಯವಿದೆ. ಹೊಸ ರೂಪಾಂತರಿ ವೈರಸ್ ಹರಡುವಿಕೆ ವೇಗ ಹೆಚ್ಚಿದ್ದು ವಿದೇಶಗಳಿಗೆ ವಿಮಾನ ಸಂಚಾರ ರದ್ದುಗೊಳಿಸಲಾಗಿದೆ. ಆಸ್ಟ್ರಾಜೆನಿಕಾ ಇತರ ಲಸಿಕೆಗಿಂತ ಕಡಿಮೆ ತಾಪಮಾನದಲ್ಲಿ ಸ್ಟೋರ್ ಮಾಡಬಹುದಾಗಿದೆ.

    ಯುಕೆಯ ಲಕ್ಷಾಂತರ ಜನಕ್ಕೆ ತುಂಬಾ ಪ್ರಮುಖ ಮತ್ತು ಮಹತ್ವದ ದಿನ. ಇಂಗ್ಲೆಂಡ್ ಜನತೆ ಹೊಸ ಕೊರೊನಾ ಲಸಿಕೆ ಲಭ್ಯವಾಗಲಿದೆ. ಲಸಿಕೆ ಪರಿಣಾಮಕಾರಿಯಾಗಿದ್ದು, ಶೇಖರಣೆ ಮತ್ತು ಪೂರೈಕೆಯೂ ಸರಳವಾಗಿರಲಿದೆ. ಯಾವುದೇ ಲಾಭಾಂಶವಿಲ್ಲದೇ ಈ ಲಸಿಕೆಯನ್ನ ಪೂರೈಸಲಾಗುವುದು ಎಂದು ಅಸ್ಟ್ರಾಜೆನಿಕಾ ಸಿಇಓ ಪಾಸ್ಕಲ್ ಸೊರಿಯಾಟ್ ಸಂತಸ ವ್ಯಕ್ತಪಡಿಸಿದ್ದಾರೆ.

  • ಲಂಡನ್‍ನಿಂದ ವಾಪಸ್ ಆಗಿದ್ದ ಬೆಂಗಳೂರಿನ ತಾಯಿ-ಮಗಳಿಗೆ ಕೊರೊನಾ

    ಲಂಡನ್‍ನಿಂದ ವಾಪಸ್ ಆಗಿದ್ದ ಬೆಂಗಳೂರಿನ ತಾಯಿ-ಮಗಳಿಗೆ ಕೊರೊನಾ

    ಬೆಂಗಳೂರು: ಲಂಡನ್ ನಿಂದ ಬೆಂಗಳೂರಿಗೆ ಆಗಮಿಸಿದ್ದ ತಾಯಿ ಮತ್ತು ಮಗಳಿಗೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದೆ. ಈ ಇಬ್ಬರು ಬೊಮ್ಮನಹಳ್ಳಿಯ ವಿಠಲನಗರದ ನಿವಾಸಿಗಳೆಂದು ತಿಳಿದು ಬಂದಿದೆ.

    ಕೆಲ ದಿನಗಳ ಹಿಂದೆ 35 ವರ್ಷದ ಮಹಿಳೆ ಮತ್ತು 6 ವರ್ಷದ ಮಗಳು ಬೆಂಗಳೂರಿಗೆ ಬಂದಿದ್ದರು. ಸದ್ಯ ಕೊರೊನಾ ಹೊಸ ತಳಿಯ ರೂಪ ತಿಳಿಯಲು ಇಬ್ಬರ ಸ್ಯಾಂಪಲ್ ನ್ನು ಪುಣೆಗೆ ರವಾನಿಸಲಾಗಿದೆ. ಸದ್ಯ ಬೊಮ್ಮನಹಳ್ಳಿ ಇನ್ನು ಆರು ಜನರ ವರದಿಗಾಗಿ ಆರೋಗ್ಯಾಧಿಕಾರಿಗಳು ಕಾಯುತ್ತಿದ್ದಾರೆ. ಇನ್ನು ಸೋಂಕಿಗೆ ತುತ್ತಾಗಿರುವ ಇಬ್ಬರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನ ಪತ್ತೆ ಹೆಚ್ಚುವ ಕೆಲಸ ನಡೆತಯುತ್ತಿದೆ.

    ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಹಿನ್ನೆಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆ ನಡೆಸಿದಾಗ ಐವರಿಗೆ ತಗುಲಿರುವುದು ಗೊತ್ತಾಗಿದೆ. ಇನ್ನೊಬ್ಬ ಪ್ರಯಾಣಿಕ ಲಂಡನ್‍ನಿಂದ ದೆಹಲಿಗೆ ಬಂದು ಅಲ್ಲಿಂದ ಚೆನ್ನೈಗೆ ಹೋಗಿದ್ದಾನೆ. ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ.

    ಈ ಮೂಲಕವಾಗಿ ಯುಕೆ ಕೊರೊನಾ ವೈರಸ್ ಸೋಕು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಇಂಗ್ಲೆಂಡ್, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಜನರಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕವಾಗಿ ಯುಕೆಯಲ್ಲಿರುವ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.

    ಸೋಮವಾರ ಡಿಸೆಂಬರ್ 23 ರಿಂದ 31ರ ತನಕ ಇಂಗ್ಲೆಂಡ್‍ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇಂದು ಕೇಂದ್ರ ಸರ್ಕಾರ ಬ್ರಿಟನ್ ಮೂಲಕ ಭಾರತಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

  • ಭಾರತಕ್ಕೂ ಬಂತು ಯುಕೆ ವೈರಸ್ – ಲಂಡನ್‍ನಿಂದ ದೆಹಲಿಗೆ ಬಂದ 6 ಪ್ರಯಾಣಿಕರಿಗೆ ಸೊಂಕು

    ಭಾರತಕ್ಕೂ ಬಂತು ಯುಕೆ ವೈರಸ್ – ಲಂಡನ್‍ನಿಂದ ದೆಹಲಿಗೆ ಬಂದ 6 ಪ್ರಯಾಣಿಕರಿಗೆ ಸೊಂಕು

    ನವದೆಹಲಿ: ಬ್ರಿಟನ್‍ನಲ್ಲಿ ಕಾಣಿಸಿಕೊಂಡ ಹೊಸ ಕೊರೋನಾ ವೈರಸ್ ಈಗ ಭಾರತಕ್ಕೂ ಬಂದಿದೆ. ದೆಹಲಿಯಲ್ಲಿ ಐವರಿಗೆ, ಚೆನೈನಲ್ಲಿ ಒಬ್ಬರಿಗೆ ಸೋಂಕು ಬಂದಿದೆ.

    ಬ್ರಿಟನ್ ನಿಂದ ದೆಹಲಿಗೆ ಆಗಮಿಸಿದ್ದ 266 ಜನರನ್ನು ವಿಮಾನ ನಿಲ್ದಾಣದಲ್ಲಿಯೇ ಯುಕೆ ಹೊಸ ಕೊರೋನಾ ವೈರಸ್ ಹಿನ್ನಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. 266 ಜನರಲ್ಲಿ ಐವರಿಗೆ ಹೊಸ ಬಗೆಯ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆ ನಡೆಸಿದಾಗ ಐವರಿಗೆ ತಗುಲಿರುವುದು ಗೊತ್ತಾಗಿದೆ.

    ಇನ್ನೊಬ್ಬ ಪ್ರಯಾಣಿಕ ಲಂಡನ್‍ನಿಂದ ದೆಹಲಿಗೆ ಬಂದು ಅಲ್ಲಿಂದ ಚೆನ್ನೈಗೆ ಹೋಗಿದ್ದಾನೆ. ಅವರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ. ಇದನ್ನು ಓದಿ: 4 ವಾರದ ಹಿಂದೆ ಇಂಗ್ಲೆಂಡ್‌ನಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್‌ ಕಡ್ಡಾಯ – ಮಾರ್ಗಸೂಚಿಯಲ್ಲಿ ಏನಿದೆ?

    ಈ ಮೂಲಕವಾಗಿ ಯುಕೆ ಕೊರೊನಾ ವೈರಸ್ ಸೋಕು ಭಾರತಕ್ಕೂ ಕಾಲಿಟ್ಟಿದೆ. ಇದುವರೆಗೆ ಇಂಗ್ಲೆಂಡ್, ಬ್ರಿಟನ್ ನಿಂದ ಭಾರತಕ್ಕೆ ಬಂದ 6 ಜನರಲ್ಲಿ ಹೊಸ ಮಾದರಿಯ ಕೊರೋನಾ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ ಮೂಲಕವಾಗಿ ಯುಕೆಯಲ್ಲಿರುವ ಹೊಸ ವೈರಸ್ ಭಾರತಕ್ಕೂ ಕಾಲಿಟ್ಟಂತೆ ಆಗಿದೆ.

    ಸೋಮವಾರ ಡಿಸೆಂಬರ್ 23 ರಿಂದ 31ರ ತನಕ ಇಂಗ್ಲೆಂಡ್‍ನಿಂದ ಆಗಮಿಸುವ ಎಲ್ಲ ವಿಮಾನ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿತ್ತು. ಇಂದು ಕೇಂದ್ರ ಸರ್ಕಾರ ಬ್ರಿಟನ್ ಮೂಲಕ ಭಾರತಕ್ಕೆ ಆಗಮಿಸಿದ ಪ್ರಯಾಣಿಕರಿಗೆ ಕೊರೊನಾ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

  • ನಾನು ಬೆಂಗ್ಳೂರಲ್ಲೇ ಇದ್ದು, ಸೇಫಾಗಿದ್ದೀನಿ: ಹರ್ಷಿಕಾ ಪೂಣಚ್ಚ

    ನಾನು ಬೆಂಗ್ಳೂರಲ್ಲೇ ಇದ್ದು, ಸೇಫಾಗಿದ್ದೀನಿ: ಹರ್ಷಿಕಾ ಪೂಣಚ್ಚ

    ಬೆಂಗಳೂರು: ನಾನು ಬೆಂಗಳೂರಲ್ಲಿಯೇ ಇದ್ದೀನಿ. ಆರಾಮಾಗಿದ್ದೀನಿ ಎಂದು ನಟಿ ಹರ್ಷಿಕಾ ಪೂಣಚ್ಚ ಸ್ಪಷ್ಟಪಡಿಸಿದ್ದಾರೆ.

    ವಿಡಿಯೋ ಮೂಲಕ ಲಂಡನ್ ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ನಟಿ, ಹೌದು ನಾನು ಲಂಡನ್ ಗೆ ಹೋಗಿದ್ದೆ. ಆದರೆ ಎರಡು ವಾರಗಳ ಹಿಂದೆನೆ ನಾನು ಅಲ್ಲಿಂದ ವಾಪಸ್ ಬಂದಿದ್ದೇನೆ. ಮತ್ತೆ ಅಲ್ಲಿಗೆ ಹೋಗಲಿಲ್ಲ. ಲಂಡನ್ ನನಗೆ ತುಂಬಾ ಇಷ್ಟವಾದ ಜಾಗವಾಗಿರುವುದರಿಂದ ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿರುತ್ತೇನೆ. ಎಂದರು.

    ವಾರದ ಹಿಂದೆ ಅಲ್ಲಿ ನಾನು ಫೋಟೋಶೂಟ್ ಮಾಡಿಸಿದ್ದೆ ಅಷ್ಟೆ. ಆ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತೇನೆ. ಸದ್ಯ ನಾನು ಬೆಂಗಳೂರಿನಲ್ಲಿಯೇ ಇದ್ದೇನೆ. ನಾನು ತುಂಬಾನೇ ಸೇಫಾಗಿದ್ದೇನೆ. ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಹೇಳಿದ್ದಾರೆ.

    ಹರ್ಷಿಕಾ ಅವರು 8 ದಿನಗಳ ಹಿಂದೆಯಷ್ಟೇ ಲಂಡನ್ ಅಡ್ಡಾಡಿ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಲಂಡನ್‍ನ ಬೀದಿ ಬೀದಿಯಲ್ಲಿಯೂ ಸುತ್ತಾಡಿದ್ದು, ಲಂಡನ್‍ನಿಂದ ಬಂದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ. ಬ್ರಿಟನ್‍ನಲ್ಲಿ ಕೊರೊನಾ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ನಟಿ ಹರ್ಷಿಕಾ ಪೂಣಚ್ಚ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಎದ್ದಿತ್ತು.

    ಭೋಜ್‍ಪುರಿ ಚಿತ್ರದ ಶೂಟಿಂಗ್‍ಗಾಗಿ ತೆರಳಿದ್ದ ಹರ್ಷಿಕಾ ಚಿತ್ರೀಕರಣಕ್ಕಾಗಿ ಲಂಡನ್‍ನಲ್ಲಿ ಬೀಡು ಬಿಟ್ಟಿದ್ದರು. ನವೆಂಬರ್-ಡಿಸೆಂಬರ್‍ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪವನ್ ಸಿಂಗ್ ಈ ಸಿನಿಮಾ ಹೀರೋ ಆಗಿ ನಟಿಸಿದ್ದಾರೆ. ಹರ್ಷಿಕಾ ಅಭಿನಯದ ಮೊದಲು ಭೋಜ್‍ಪುರಿ ಸಿನಿಮಾವನ್ನು ಪ್ರೇಮಾಂಶು ಸಿಂಗ್ ನಿರ್ದೇಶನ ಮಾಡಿದ್ದಾರೆ.

  • ಬ್ರಿಟನ್‍ನಲ್ಲಿ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್- ಹೋಂ ಕ್ವಾರಂಟೈನ್‍ಗೆ ಒಳಗಾಗ್ತಾರಾ ಹರ್ಷಿಕಾ…?

    ಬ್ರಿಟನ್‍ನಲ್ಲಿ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್- ಹೋಂ ಕ್ವಾರಂಟೈನ್‍ಗೆ ಒಳಗಾಗ್ತಾರಾ ಹರ್ಷಿಕಾ…?

    ಬೆಂಗಳೂರು: ಬ್ರಿಟನ್‍ನಲ್ಲಿ ಕೊರೊನಾ ಹೊಸ ತಳಿಯಿಂದ ರಾಜ್ಯದಲ್ಲಿ ಟಫ್ ರೂಲ್ಸ್ ಘೋಷಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ನಟಿ ಹರ್ಷಿಕಾ ಪೂನಚ್ಚ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

    14 ದಿನಗಳ ಹಿಂದೆ ವಿದೇಶದಿಂದ ಬಂದವರಿಗೆ ಪಾಸಿಟಿವ್, ನೆಗೆಟಿವ್ ಇದ್ದರೂ ಟೆಸ್ಟ್ ಗೆ ಸರ್ಕಾರ ಸೂಚನೆ ನೀಡಿದೆ. ಹರ್ಷಿಕಾ ಅವರು 8 ದಿನಗಳ ಹಿಂದೆಯಷ್ಟೇ ಲಂಡನ್ ಅಡ್ಡಾಡಿ ಮೊನ್ನೆ ಮೊನ್ನೆಯಷ್ಟೇ ಬೆಂಗಳೂರಿಗೆ ಬಂದಿದ್ದರು. ಇದೀಗ ಅವರು ಟೆಸ್ಟ್‍ಗೆ ಒಳಗಾಗುತ್ತಾರಾ…?, ಸರ್ಕಾರದ ಆದೇಶದಂತೆ ಹೋಂ ಕ್ವಾರಂಟೈನ್‍ಗೆ ಒಳಗಾಗುತ್ತಾರಾ ಎಂಬ ಪ್ರಶ್ನೆ ಮೂಡಿದೆ.

    ಮಾರಕ ರೂಪಾಂತರ ವೈರಸ್ ಹರಡ್ತಿರೋ ಲಂಡನ್‍ನಿಂದ ಕಳೆದ ವಾರವಷ್ಟೇ ನಟಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಲಂಡನ್‍ನ ಬೀದಿ ಬೀದಿಯಲ್ಲಿಯೂ ಸುತ್ತಾಡಿದ್ದು, ಲಂಡನ್‍ನಿಂದ ಬಂದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ.

    ಇಂಗ್ಲೆಂಡ್‍ಗೆ ವಿಮಾನ ಹಾರಾಟ ಬ್ಯಾನ್ ಮಾಡುವ ಮುನ್ನ ಹರ್ಷಿಕಾ ಬೆಂಗಳೂರಿಗೆ ಆಗಮಿಸಿದ್ದರು. ಭೋಜ್‍ಪುರಿ ಚಿತ್ರದ ಶೂಟಿಂಗ್‍ಗಾಗಿ ತೆರಳಿದ್ದ ಹರ್ಷಿಕಾ ಚಿತ್ರೀಕರಣಕ್ಕಾಗಿ ಲಂಡನ್‍ನಲ್ಲಿ ಬೀಡು ಬಿಟ್ಟಿದ್ದರು. ನವೆಂಬರ್-ಡಿಸೆಂಬರ್‍ನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಪವನ್ ಸಿಂಗ್ ಈ ಸಿನಿಮಾ ಹೀರೋ ಆಗಿ ನಟಿಸಿದ್ದಾರೆ. ಹರ್ಷಿಕಾ ಅಭಿನಯದ ಮೊದಲು ಭೋಜ್‍ಪುರಿ ಸಿನಿಮಾವನ್ನು ಪ್ರೇಮಾಂಶು ಸಿಂಗ್ ನಿರ್ದೇಶನ ಮಾಡಿದ್ದಾರೆ.

     

  • ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್ – ನಿಯಮಗಳು ಏನು?

    ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್ – ನಿಯಮಗಳು ಏನು?

    ಲಂಡನ್: ಕೊರೊನಾ ಹೊಸ ರೂಪಕ್ಕೆ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಟಯರ್ 4 ಲಾಕ್‍ಡೌನ್ ವಿಧಿಸಿ ಪ್ರಧಾನಿ ಬೋರಿಸ್ ಜಾನ್ಸಸ್ ಆದೇಶಿಸಿದ್ದಾರೆ. ಕ್ರಿಸ್‍ಮಸ್ ಹೊತ್ತಲ್ಲಿ ಕಠಿಣ ಲಾಕ್‍ಡೌನ್ ಹೇರಿ ಕೊರೊನಾದಿಂದ ಪಾರಾಗಲು ಇಂಗ್ಲೆಂಡ್ ಸರ್ಕಾರ ಮುಂದಾಗಿದೆ.

    ಕೊರೊನಾ ವೈರಸ್ ರೂಪಾಂತರದಿಂದ ಇಂಗ್ಲೆಂಡ್ ತತ್ತರಿಸಿ ಹೋಗಿದ್ದು, ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್‍ನಲ್ಲಿ ಕಠಿಣ ಲಾಕ್‍ಡೌನ್ ವಿಧಿಸಲಾಗಿದೆ. ಸುದ್ದಿಗೋಷ್ಠಿ ನಡೆಸಿ ಬೋರಿಸ್ ಜಾನ್ಸಸ್ ಕಠಿಣವಾದ ‘ಟಯರ್ 4’ ಲಾಕ್‍ಡೌನ್ ವಿಧಿಸಿರುವ ಬಗ್ಗೆ ಮಾಹಿತಿ ನಿಡಿದ್ದಾರೆ. ಸೋಮವಾರ ಕೊರೊನಾ ರೂಪಾಂತರದ ಬಗ್ಗೆ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಖ್ಯ ವೈದ್ಯಕೀಯ ಅಧಿಕಾರಿ ಪ್ರೊ.ಕ್ರಿಸ್ ವಿಟ್ಟಿ ಈ ಕುರಿತು ಮಾಹಿತಿ ನೀಡಿದ್ದು, ರೂಪಾಂತರಗೊಂಡಿರುವ ವೈರಸ್ ಬಹುಬೇಗ ಹರಡುತ್ತದೆ ಎಂದು ಎಚ್ಚರಿಸಿದ್ದಾರೆ.

    ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಎಚ್ಚರಿಕೆ ನೀಡಿದ್ದು, ವೈರಸ್ ಕುರಿತು ತಿಳಿಯಲು ಲಭ್ಯವಿರುವ ಅಂಕಿಗಳನ್ನು ಆಧರಿಸಿ ಹೆಚ್ಚು ತಿಳಿಯಲಾಗುತ್ತಿದೆ. ಅಲ್ಲದೆ ಹೊಸ ವೈರಸ್ ಒತ್ತಡದಿಂದ ಹೆಚ್ಚು ಸಾವು ಸಂಭವಿಸುತ್ತದೆ ಅಥವಾ ಲಸಿಕೆ ಹಾಗೂ ಚಿಕಿತ್ಸೆಗೆ ಸ್ಪಂದಿಸಲಿದೆ ಎಂಬುದನ್ನು ತಿಳಿಸಲು ಯಾವುದೇ ಪುರಾವೆಗಳಿಲ್ಲ. ಇದನ್ನು ಪತ್ತೆಹಚ್ಚಲು ತುರ್ತು ಕೆಲಸ ನಡೆಯುತ್ತಿದೆ ಎಂದು ಕ್ರಿಸ್ ವಿಟ್ಟಿ ಮಾಹಿತಿ ನೀಡಿದ್ದಾರೆ.

    ಈ ಕುರಿತು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಸಲಾಗುತ್ತಿದ್ದು, ತುರ್ತಾಗಿ ಮಾಡಬೇಕಿರುವುದು ಸವಾಲಿನ ಕೆಲಸವಾಗಿದೆ. ದೇಶಾದ್ಯಂತ ಲಾಕ್‍ಡೌನ್ ಹೇರಲಾಗಿಲ್ಲ. ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ಕಠಿಣ ಲಾಕ್‍ಡೌನ್ ಹೇರಿದ್ದರೆ ಕಡಿಮೆ ಸೋಂಕಿತರು ಇರುವ ಪ್ರದೇಶಗಳಲ್ಲಿ ಕೆಲ ವಿನಾಯಿತಿ ನೀಡಲಾಗಿದೆ.

    ಹೊಸ ಲಾಕ್‍ಡೌನ್ ನಿಯಮದ ಪ್ರಕಾರ ಲಂಡನ್‍ನಂತಹ ಪ್ರದೇಶದಲ್ಲಿರುವವರು ಕ್ರಿಸ್‍ಮಸ್‍ಗಾಗಿ ತಮ್ಮ ಮನೆಗಳಿಗೆ ತೆರಳುವಂತಿಲ್ಲ. ಟಯರ್ 1-3 ಲಾಕ್‍ಡೌನ್ ಇರುವ ಪ್ರದೇಶದ ಜನರು ಗರಿಷ್ಟ 3 ಮನೆಗಳಿಗೆ ಮಾತ್ರ ತೆರಳಬಹುದಾಗಿದೆ ಎಂದು ಇಂಗ್ಲೆಂಡ್ ಪ್ರಧಾನಿ ತಿಳಿಸಿದ್ದಾರೆ.

    ಕಠಿಣ ಲಾಕ್‍ಡೌನ್ ನಿಯಮ ಏನು?
    ಲಂಡನ್ ಹಾಗೂ ಆಗ್ನೇಯ ಇಂಗ್ಲೆಂಡ್ ಪ್ರದೇಶಗಳಲ್ಲಿ ಕಠಿಣ ಲಾಕ್‍ಡೌನ್ ಹೇರಲಾಗಿದೆ. ಇದರಿಂದಾಗಿ ಕೊರೊನಾ ವೈರಸ್‍ನ ರೂಪಾಂತರದ ಆರ್ಭಟವನ್ನು ತಗ್ಗಿಸಲು ಪ್ರಯತ್ನಿಸಲಾಗುತ್ತಿದೆ. ಎಲ್ಲ ನಿರ್ಬಂಧಗಳ ವ್ಯಾಪಕ ಪರಿಶೀಲನೆಯ ಭಾಗವಾಗಿ ಡಿಸೆಂಬರ್ 10ರಂದು ಎರಡು ವಾರಗಳ ಅವಧಿಯಲ್ಲಿ ನಿಯಮಗಳನ್ನು ಪರಿಶೀಲಿಸಲು ಉದ್ದೇಶಿಸಲಾಗಿದೆ.

    ಕೆಲಸ, ಶಿಕ್ಷಣ, ಆರೋಗ್ಯ ಮಕ್ಕಳ ರಕ್ಷಣೆ ಹಾಗೂ ವ್ಯಾಯಾಮ ಹೊರತುಪಡಿಸಿ ಯಾರೂ ಎಲ್ಲಿಯೂ ತೆರಳುವ ಹಾಗಿಲ್ಲ. ಮನೆಯಲ್ಲೇ ಇರುವಂತೆ ನಿಯಮ ರೂಪಿಸಲಾಗಿದೆ. ಅಲ್ಲದೆ ಯಾರೂ ಸಹ ಟಯರ್ 4 ಲಾಕ್‍ಡೌನ್ ಹೇರಲಾಗಿರುವ ಪ್ರದೇಶಗಳಿಗೆ ತೆರಳದಂತೆ ಹಾಗೂ ಇಲ್ಲಿನ ವ್ಯಕ್ತಿಗಳನ್ನು ಸಂಪರ್ಕಿಸದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ರಾತ್ರಿಯಿಡಿ ಮನೆಯಿಂದ ಹೊರಗಡೆ ಇರಬಾರದು ಎಂದು ತಿಳಿಸಲಾಗಿದೆ.

    ಈ ಪ್ರದೇಶಗಳಲ್ಲಿ ಒಬ್ಬರು ಮತ್ತೊಬ್ಬರನ್ನು ಭೇಟಿಯಾಗಲು ಮಾತ್ರ ಅವಕಾಶ ನೀಡಲಾಗಿದೆ. ಸಹಾಯ, ಮಕ್ಕಳ ಆರೈಕೆ ಕೇಂದ್ರಗಳು ಹಾಗೂ ಮಕ್ಕಳನ್ನು ಬೇರ್ಪಟ್ಟ ಪೋಷಕರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಬೇರೆ ಕಡೆ ಇದ್ದರೆ ತಕ್ಷಣವೇ ತಮ್ಮ ನಿವಾಸಕ್ಕೆ ಮರಳುವಂತೆ ಸೂಚಿಸಲಾಗಿದೆ.

    ಜಿಮ್, ಸಿನಿಮಾ ಥಿಯೇಟರ್, ಕಟಿಂಗ್ ಶಾಪ್, ಕ್ಯಾಸಿನೋ ಸೇರಿದಂತೆ ಅನಗತ್ಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕು. ವಿದೇಶ ಪ್ರವಾಸಕ್ಕೆ ತೆರಳುವಂತಿಲ್ಲ. ಹೊರಾಂಗಣ ಆಟಗಳಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ.

  • ಅಮ್ಮನ ಕತ್ತು ಹಿಸುಕಿ ಕೊಂದು, 118 ಬಾರಿ ಇರಿದ-ಪೊಲೀಸರಿಗೆ ಹೆಣ ಒಯ್ಯಲು ಬ್ಯಾಗ್ ತನ್ನಿ ಅಂದ!

    ಅಮ್ಮನ ಕತ್ತು ಹಿಸುಕಿ ಕೊಂದು, 118 ಬಾರಿ ಇರಿದ-ಪೊಲೀಸರಿಗೆ ಹೆಣ ಒಯ್ಯಲು ಬ್ಯಾಗ್ ತನ್ನಿ ಅಂದ!

    – ಮೂರು ತಿಂಗಳ ಬಳಿಕ ಮಗನ ಸಾವು
    – ಪೊಲೀಸ್ರು ಬರೋವರೆಗೂ ಶವದ ಪಕ್ಕದಲ್ಲೇ ಕುಳಿತಿದ್ದ!

    ಲಂಡನ್: 17 ವರ್ಷದ ಮಗ ತಾಯಿಯ ಕತ್ತು ಹಿಸುಕಿ ಕೊಂದ ನಂತರ ಚಾಕುವಿನಿಂದ 118 ಬಾರಿ ಇರಿದಿದ್ದಾನೆ. ಕೊಲೆ ಬಳಿಕ ಪೊಲೀಸರಿಗೆ ಕರೆ ಮಾಡಿ ನಾನು ನನ್ನ ತಾಯಿಯನ್ನ ಕೊಂದಿದ್ದೇನೆ. ಹೆಣ ತೆಗೆದುಕೊಂಡು ಹೋಗಲು ಬ್ಯಾಗ್ ತನ್ನಿ ಎಂದು ಹೇಳಿ ಅವರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತಿದ್ದ.

    ಖಾಸಗಿ ಶಾಲೆ ಶಿಕ್ಷಕಿ ಜೋವಾನಾ ಥಾಮಪ್ಸನ್ (50), ಮಗ ರೊವನ್ ಥಾಮಪ್ಸನ್ ನಿಂದ ಕೊಲೆಯಾದ ಮಹಿಳೆ. ಈ ಕೊಲೆ ಅಕ್ಟೋಬರ್ 2019ರಂದು ನಡೆದಿದ್ದು, ಸೋಮವಾರ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಈ ವೇಳೆ ಪ್ರಕರಣಕ್ಕೆ ಸಂಬಂಧಿಸಿದ ಹಲವು ಸತ್ಯಗಳು ಹೊರ ಬಂದಿವೆ. ಇಂಗ್ಲೆಂಡ್ ನ ಹೈಂಪಶಾಯರ್ ನಲ್ಲಿ ಈ ಕೊಲೆ ನಡೆದಿತ್ತು. ಇನ್ನೂ ಮಗ ರೋವನ್ ಘಟನೆ ಬಳಿಕ ಮೂರು ತಿಂಗಳ ನಂತ್ರ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

    ಅಂದು ನಡೆದಿದ್ದೇನು?: ಜೋವಾನಾ ಎಂದಿನಂತೆ ಬೆಳಗಿನ ವಾಕ್ ಮುಗಿಸಿ ಮನೆಗೆ ಹಿಂದಿರುಗಿ ಹಾಲ್ ನಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದರು. ತಂದೆಯ ಜೊತೆಯಲ್ಲಿದ್ದ ರೊವನ್ ಕೆಲ ದಿನಗಳ ಹಿಂದೆಯಷ್ಟೇ ತಾಯಿ ಬಳಿ ಬಂದಿದ್ದನು. ವಿಶ್ರಾಂತಿ ಪಡೆಯುತ್ತಿದ್ದ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತ್ರ ಕಿಚನ್ ನಲ್ಲಿದ್ದ ವಿವಿಧ ಬಗೆಯ ಚಾಕುಗಳಿಂದ 118 ಬಾರಿ ಇರಿದಿದ್ದಾನೆ. ಕೊಲೆಯ ಬಳಿಕ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದ ರೊವನ್, ಇದೀಗ ನನ್ನ ತಾಯಿಯ ಕತ್ತು ಹಿಸುಕಿ, ಚಾಕುಗಳಿಂದ ಇರಿದು ಕೊಲೆ ಮಾಡಿದ್ದೇನೆ. ಶವ ತೆಗೆದುಕೊಂಡು ಹೋಗಲು ಬ್ಯಾಗ್ ಮತ್ತು ಅಂಬುಲೆನ್ಸ್ ಜೊತೆ ಬನ್ನಿ ಎಂದು ಮಾಹಿತಿ ನೀಡಿದ್ದಾನೆ.

    ಘಟನಾ ಸ್ಥಳಕ್ಕೆ ಹೋದಾಗ ಶವದ ಪಕ್ಕದಲ್ಲಿಯೇ ರೊವನ್ ತುಂಬಾ ಶಾಂತನಾಗಿ ಕುಳಿತಿದ್ದನು. ತನಿಖೆ ವೇಳೆ ರೊವನ್ ಓರ್ವ ಮಾನಸಿಕ ರೋಗಿ ಎಂದು ತಿಳಿದು ಬಂದಿತ್ತು. ತಂದೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ತಾಯಿಯನ್ನು ನೋಡಲು ರೊವನ್ ಬಂದಿದ್ದನು. ಇದಕ್ಕೂ ಮೊದಲು ಆತ ಮೆಂಟಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಹ ಪಡೆದುಕೊಂಡಿದ್ದನು ಎಂದು ತನಿಖಾಧಿಕಾರಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

     

  • ಬ್ರಿಟನ್‌ನಲ್ಲಿ ಮಂಗಳವಾರದಿಂದ ಫೈಝರ್‌ ಲಸಿಕೆ ಹಂಚಿಕೆ- ಯಾರಿಗೆ ಮೊದಲು ಸಿಗಲಿದೆ?

    ಬ್ರಿಟನ್‌ನಲ್ಲಿ ಮಂಗಳವಾರದಿಂದ ಫೈಝರ್‌ ಲಸಿಕೆ ಹಂಚಿಕೆ- ಯಾರಿಗೆ ಮೊದಲು ಸಿಗಲಿದೆ?

    – ಭಾರತದಲ್ಲೂ ಲಸಿಕೆ ಹಂಚಿಕೆಗೆ ಅನುಮತಿ ಕೇಳಿದ ಫೈಝರ್‌

    ಲಂಡನ್‌/ನವದೆಹಲಿ: ಇಡೀ ಮಾನವಕುಲಕ್ಕೆ ಕಂಟಕವಾಗಿರುವ ಮಹಾಮಾರಿ ಕೊರೊನಾ ಕಟ್ಟಿಹಾಕಲು ಬ್ರಿಟನ್‍ನಲ್ಲಿ ಫೈಝರ್ ಲಸಿಕೆಯನ್ನು ಮಂಗಳವಾರದಿಂದ ಹಂಚಿಕೆ ಮಾಡಲಾಗುತ್ತಿದೆ.

    ಆರಂಭದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ, 80 ವರ್ಷ ಮೇಲ್ಪಟ್ಟವರಿಗೆ, ಆರೈಕಾ ಕೇಂದ್ರಗಳಲ್ಲಿ ಇರುವ ಮಂದಿಗೆ ಲಸಿಕೆ ನೀಡಲಾಗುತ್ತದೆ. 2 ವಾರಗಳಲ್ಲಿ ಇವರಿಗೆಲ್ಲ ನೀಡಿದ ಮೇಲೆ ಈಗಾಗಲೇ ಗುರುತಿಸಿರುವ ಪ್ರಾಶಸ್ತ್ಯದ ಗುಂಪುಗಳಿಗೆ ಹಂಚಿಕೆ ಮಾಡಲಾಗುತ್ತದೆ.

    ನಂತರ ಯಾವ ವರ್ಷದವರಿಗೆ ಸಿಗುತ್ತೆ?
    75 ಮತ್ತು ಮೇಲ್ಪಟ್ಟು, 70 ಮತ್ತು ಮೇಲ್ಪಟ್ಟು, 65 ಮೇಲ್ಪಟ್ಟು, 16 ರಿಂದ 64 ವರ್ಷವದರಿಗೆ ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ನೀಡಲಾಗುತ್ತದೆ. ಆರಂಭದಲ್ಲಿ 8 ಲಕ್ಷ ಲಸಿಕೆ ಬರಲಿದ್ದು, ಇದು 4 ಲಕ್ಷ ಮಂದಿಗೆ ಸಾಕಾಗುತ್ತದೆ.

    ತಾನು ತಯಾರಿಸಿದ ಕೊರೊನಾ ಲಸಿಕೆ ಶೇ. 95ರಷ್ಟು ಪರಿಣಾಮಕಾರಿಯಾಗಿದೆ ಎಂದು ನ.18 ರಂದು ಫೈಝರ್ ಕಂಪನಿ ಅಧಿಕೃತವಾಗಿ ತಿಳಿಸಿತ್ತು. ಈ ಹೇಳಿಕೆಯ ಬೆನ್ನಲ್ಲೇ ಇಂಗ್ಲೆಂಡ್‌ ಸರ್ಕಾರ ಈ ವಾರದಿಂದಲೇ ಲಸಿಕೆ ವಿತರಿಸಲು ಮುಂದಾಗಿದೆ.

    ಇಂಗ್ಲೆಂಡ್‌ ಸರ್ಕಾರ ಈಗಾಗಲೇ 4 ಕೋಟಿ ಡೋಸ್‌ಗಳಿಗೆ ಆರ್ಡರ್‌ ಮಾಡಿದ್ದು 2 ಕೋಟಿ ಜನರಿಗೆ 2 ಡೋಸ್‌ ನೀಡಬಹುದಾಗಿದೆ. ಆರಂಭದಲ್ಲಿ 1 ಕೋಟಿ ಲಸಿಕೆ ಬರಲಿದ್ದು, ಈ ಪೈಕಿ ಮುಂದಿನ ಕೆಲ ದಿನದಲ್ಲಿ 8 ಲಕ್ಷ ಲಸಿಕೆ ಇಂಗ್ಲೆಂಡ್‌ಗೆ ಬರಲಿದೆ.

    ಭಾರತದಲ್ಲೂ ಲಸಿಕೆ ಮಾರಾಟಕ್ಕೆ ಫೈಝರ್ ಅರ್ಜಿ ಹಾಕಿಕೊಂಡಿದೆ. ಈ ಬೆನ್ನಲ್ಲೇ ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಪುಣೆಯ ಸಿರಂ ಸಂಸ್ಥೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ(ಡಿಸಿಜಿಐ) ಅರ್ಜಿ ಸಲ್ಲಿಸಿದೆ.

    ಭಾರತದಲ್ಲಿಈ ರೀತಿ ಮನವಿ ಮಾಡಿಕೊಂಡ ಮೊದಲ ದೇಶಿಯ ಸಂಸ್ಥೆ ಸಿರಂ ಆಗಿದೆ. ಆಕ್ಸ್‌ಫರ್ಡ್‌ ಮತ್ತು ಆಸ್ಟ್ರಾಜೆನಿಕಾ ಸಂಸ್ಥೆ ಜಂಟಿಯಾಗಿ ಸಂಶೋಧಿಸಿದ ಕೋವಿಶೀಲ್ಡ್ ಲಸಿಕೆಯನ್ನು ಸಿರಂ ಸಂಸ್ಥೆ ಭಾರತದಲ್ಲಿ ಉತ್ಪಾದನೆ ಮಾಡುತ್ತಿದೆ.

    ಸದ್ಯ ಕೋವಿಶೀಲ್ಡ್ ಲಸಿಕೆಯ ಮೂರನೇ ಹಂತದ ಪ್ರಯೋಗ ಭಾರತದಲ್ಲಿ ನಡೆಯುತ್ತಿದೆ. ಇದು ಪೂರ್ಣಗೊಳ್ಳುವ ಮೊದಲೇ ಲಸಿಕೆಗೆ ಬಳಕೆಗೆ ಅನುಮತಿ ಕೋರಲಾಗಿದೆ. ಕೋವಿಶೀಲ್ಡ್‌ನಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲ ಎಂದು ಸಿರಂ ಸಂಸ್ಥೆ ಹೇಳಿಕೊಂಡಿದೆ.

  • ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಭಾರತದ ಕಂಪನಿಯ ಸೈಕಲ್ ಏರಿ ಆರೋಗ್ಯ ಅಭಿಯಾನಕ್ಕೆ ಯುಕೆ ಪಿಎಂ ಚಾಲನೆ

    ಲಂಡನ್: ಭಾರತದ ಪ್ರಸಿದ್ಧ ಹೀರೋ ಕಂಪನಿಯ ಸೈಕಲ್ ಓಡಿಸಿ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಅವರು, ಸರ್ಕಾರದ ಆರೋಗ್ಯ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

    ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಮಾರಕವಾಗಿದ್ದು, ಇಂಗ್ಲೆಂಡ್‌ನಲ್ಲೂ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಕಳೆದ ಮೂರು ತಿಂಗಳ ಹಿಂದೆ ಪಿಎಂ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗಲಿತ್ತು. ಇದಕ್ಕಾಗಿ ಅವರು ಸೈಕಲ್ ಮತ್ತು ವಾಕಿಂಗ್ ಅಭಿಯಾನಕ್ಕೆ ದೇಶದಲ್ಲಿ ಚಾಲನೆ ನೀಡಿದ್ದಾರೆ. ಈ ವೇಳೆ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಓಡಿಸಿದ್ದಾರೆ.

    ಎರಡು ಶತಕೋಟಿ ಪೌಂಡ್ ಮೊತ್ತದ ಅಭಿಯಾನಕ್ಕೆ ಮಂಗಳವಾರ ಬೋರಿಸ್ ಜಾನ್ಸನ್ ಅವರು ಚಾಲನೆ ನೀಡಿದ್ದಾರೆ. ಸೈಕಲ್ ಮತ್ತು ಸಾಮಾಜಿಕ ಅಂತರದ ವಾಕಿಂಗ್ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕೊರೊನಾ ವಿರುದ್ಧ ಹೋರಾಡುವುದು ಇದರ ಉದ್ದೇಶವಾಗಿದೆ. ಈ ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಬೋರಿಸ್ ಜಾನ್ಸನ್ ಅವರು ಹೀರೋ ಕಂಪನಿ ನಿರ್ಮಾಣ ಮಾಡಿದ ವೈಕಿಂಗ್ ಪ್ರೋ ಎಂಬ ಸೈಕಲ್ ಅನ್ನು ಚಲಿಸಿಕೊಂಡು ನಾಟಿಂಗ್‍ಹ್ಯಾಮ್‍ನ ಬೀಸ್ಟನ್‍ನಲ್ಲಿರೋ ಹೆರಿಟೇಜ್ ಸೆಂಟರ್ ಗೆ ಹೋಗಿದ್ದಾರೆ.

    ಈ ವೇಳೆ ಮಾತನಾಡಿರುವ ಜಾನ್ಸನ್ ಅವರು, ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಜನರು ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರ ಜೊತೆಗೆ ನಮ್ಮಲ್ಲಿ ವಾಹನ ಸಂಚಾರ ಜಾಸ್ತಿಯಾಗಿರುವ ಕಾರಣ ಅದು ಪರಿಸರದ ಮೇಲು ಪರಿಣಾಮ ಬೀರಿದೆ. ಇದರಿಂದ ಜನರಿಗೆ ಹಲವಾರು ತೊಂದರೆಗಳು ಆಗುತ್ತಿವೆ. ಈಗ ಜನರು ಹೆಚ್ಚು ಸೈಕಲ್ ಮತ್ತು ವಾಕಿಂಗ್ ಮಾಡುವುದರಿಂದ ಪರಿಸರಕ್ಕೂ ಉಪಯೋಗವಾಗಲಿದೆ ಮತ್ತು ಆರೋಗ್ಯವಾಗಿ ಇರಲು ಸಹಾಯಕವಾಗಲಿದೆ ಎಂದು ಹೇಳಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ಬೋರಿಸ್ ಜಾನ್ಸನ್ ಅವರಿಗೂ ಕೊರೊನಾ ವೈರಸ್ ತಗುಲಿತ್ತು. ಬೋರಿಸ್ ಜಾನ್ಸನ್ ಅವರಿಗೆ ಸ್ವಲ್ಪ ಪ್ರಮಾಣದಲ್ಲಿ ಕೊರೊನಾ ವೈರಸ್ ನ ಗುಣಲಕ್ಷಣಗಳು ಕಂಡು ಬಂದಿದ್ದವು. ಇದಾದ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಭಯಪಡುವ ಅಗತ್ಯವಿಲ್ಲ. ನಾನು ಮನೆಯಲ್ಲೇ ಕುಳಿತು ತಂತ್ರಜ್ಞಾನ ಬಳಸಿ ಸರ್ಕಾರ ನಡೆಸುತ್ತೇನೆ. ನಾವು ಕೊರೊನಾ ವಿರುದ್ಧ ಹೊರಾಡೋಣ ಎಂದು ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದರು. ಇದನ್ನು ಓದಿ: ತನ್ನ ಮಗುವಿಗೆ ವೈದ್ಯರ ಹೆಸರಿಟ್ಟ ಯುಕೆ ಪ್ರಧಾನ ಮಂತ್ರಿ 

    ಬೋರಿಸ್ ಜಾನ್ಸನ್ ಅವರು ಮಂಗಳವಾರ ರೈಡ್ ಮಾಡಿದ ಹೀರೋ ಕಂಪನಿಯ ವೈಕಿಂಗ್ ಪ್ರೊ ಸೈಕಲ್ ಭಾರತದ ಹೀರೋ ಮೋಟಾರ್ಸ್ ಕಂಪನಿಯ ಒಡೆತನದ ಇನ್ಸಿಂಕ್ ಬ್ರಾಂಡ್‍ನ ಒಂದು ಭಾಗವಾಗಿದೆ. ಈ ಬ್ರಾಂಡ್ ಅನ್ನು ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಲ್ಲಿ ಡಿಸೈನ್ ಮಾಡಲಾಗುತ್ತದೆ. ಹೀರೋ ಸೈಕಲ್ಸ್ ವೈಕಿಂಗ್, ರಿಡ್ಡಿಕ್ ಮತ್ತು ರೈಡೇಲ್ ಬ್ರಾಂಡ್‍ಗಳನ್ನು ಇನ್ಸಿಂಕ್ ಎಂಬ ಬ್ರಾಂಡ್ ಹೆಸರಿನಲ್ಲಿ ಇಂಗ್ಲೆಂಡ್‍ನಲ್ಲಿ ಮಾರಾಟ ಮಾಡುತ್ತದೆ.