Tag: england

  • ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ – ಫೈನಲ್‌ಗೆ ಏರಬೇಕಾದರೆ ಭಾರತ ಏನು ಮಾಡಬೇಕು?

    ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ – ಫೈನಲ್‌ಗೆ ಏರಬೇಕಾದರೆ ಭಾರತ ಏನು ಮಾಡಬೇಕು?

    ಚೆನ್ನೈ: ಭಾರತದ ವಿರುದ್ಧ 227 ರನ್‌ಗಳ ಅಂತರದಿಂದ ಗೆದ್ದ ಇಂಗ್ಲೆಂಡ್‌ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ರ‍್ಯಾಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಜಿಗಿದಿದ್ದು, ಮೊದಲ ಸ್ಥಾನದಲ್ಲಿದ್ದ ಭಾರತ 4ನೇ ಸ್ಥಾನಕ್ಕೆ ಜಾರಿದೆ.

    ಭಾರತ 4ನೇ ಸ್ಥಾನಕ್ಕೆ ಜಾರಿದ್ದರೂ ಟೆಸ್ಟ್‌ ಚಾಂಪಿಯನ್‌ ಫೈನಲ್‌ಗೆ ಏರಲು ಅವಕಾಶವಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಆಸ್ಟ್ರೇಲಿಯಾ ಹಿಂದೆ ಸರಿಯುವುದರೊಂದಿಗೆ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ ಪಡೆ ಈಗಾಗಲೇ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್‌ಗೆ ಏರಿದೆ.

    ಪ್ರಸ್ತುತ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಪಟ್ಟಿಯಲ್ಲಿ ಇಂಗ್ಲೆಂಡ್‌ 11 ಜಯ, 4 ಸೋಲು, 3 ಡ್ರಾದೊಂದಿಗೆ 442 ಅಂಕ ಗಳಿಸಿದೆ. ಭಾರತ 8 ಜಯ, 4 ಸೋಲಿನೊಂದಿಗೆ 430 ಅಂಕ ಪಡೆದಿದೆ. ಆದರೆ ಪರ್ಸಂಟೇಜ್‌ ಆಫ್‌ ಪಾಯಿಂಟ್‌ನಲ್ಲಿ ಆಸ್ಟ್ರೇಲಿಯಾ ಮುಂದಿರುವ ಕಾರಣ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಾರಿದೆ.

    ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಹೋಗಬೇಕಾದರೆ ಭಾರತ ಮುಂದೆ ನಡೆಯಲಿರುವ ಟೆಸ್ಟ್‌ ಪಂದ್ಯದಲ್ಲಿ ಯಾವುದೇ ಕಾರಣಕ್ಕೂ ಸೋಲಬಾರದು. ಒಂದು ವೇಳೆ ಸೋತರೆ ಫೈನಲ್‌ಗೆ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ. ಭಾರತ ಒಂದು ಪಂದ್ಯವನ್ನು ಡ್ರಾ ಮಾಡಿ 2-1 ಅಂತರ ಅಥವಾ 3-1 ಅಂತರದಿಂದ ಪಂದ್ಯ ಗೆದ್ದರೆ ಮಾತ್ರ ಫೈನಲ್‌ ಪ್ರವೇಶಿಸಲಿದೆ. ಇಂಗ್ಲೆಂಡ್‌ 4-0, 3-0, 3-1 ಅಂತರದಿಂದ ಗೆದ್ದರೆ ಫೈನಲ್‌ ಪ್ರವೇಶಿಸಲಿದೆ.

    ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿದ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ. ಗೆಲ್ಲಲು 420 ರನ್‌ಗಳ ವಿಶ್ವ ದಾಖಲೆಯ ಗುರಿಯನ್ನು ಪಡೆದಿದ್ದ ಭಾರತ 58.1 ಓವರ್‌ಗಳಲ್ಲಿ192 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿದೆ.

    39 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದ್ದ ಭಾರತ ಜ್ಯಾಕ್‌ ಲೀಚ್‌ ಮತ್ತು ಜೇಮ್ಸ್‌ ಆಂಡರ್‌ಸನ್‌ ಬೌಲಿಂಗ್‌ಗೆ ತತ್ತರಿಸಿತು. ಕೊಹ್ಲಿ ಮತ್ತು ಅಶ್ವಿನ್‌ ನಡುವೆ 7ನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಜೊತೆಯಾಟ ಸಿಗದ ಕಾರಣ ಪಂದ್ಯವನ್ನು ಭಾರತ ಸೋತಿದೆ.

  • ಭಾರತಕ್ಕೆ ಹೀನಾಯ ಸೋಲು – ಇಂಗ್ಲೆಂಡಿಗೆ 227 ರನ್‌ಗಳ ಭರ್ಜರಿ ಜಯ

    ಭಾರತಕ್ಕೆ ಹೀನಾಯ ಸೋಲು – ಇಂಗ್ಲೆಂಡಿಗೆ 227 ರನ್‌ಗಳ ಭರ್ಜರಿ ಜಯ

    ಚೆನ್ನೈ: ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಜಯ ಸಾಧಿಸಿ ತವರಿಗೆ ಮರಳಿದ್ದ ಟೀಂ ಇಂಡಿಯಾ ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಹೀನಾಯವಾಗಿ ಸೋತಿದೆ.

    ಗೆಲ್ಲಲು 420 ರನ್‌ಗಳ ವಿಶ್ವ ದಾಖಲೆಯ ಗುರಿಯನ್ನು ಪಡೆದಿದ್ದ ಭಾರತ 58.1 ಓವರ್‌ಗಳಲ್ಲಿ192 ರನ್‌ಗಳಿಗೆ ಆಲೌಟ್‌ ಆಗಿದೆ. ಈ ಮೂಲಕ 4 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್‌ 1-0 ಮುನ್ನಡೆ ಸಾಧಿಸಿದೆ.

    39 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದ್ದ ಭಾರತ ಇಂದು ಜ್ಯಾಕ್‌ ಲೀಚ್‌ ಮತ್ತು ಜೇಮ್ಸ್‌ ಆಂಡರ್‌ಸನ್‌ ಬೌಲಿಂಗ್‌ಗೆ ತತ್ತರಿಸಿತು. ಕೊಹ್ಲಿ ಮತ್ತು ಅಶ್ವಿನ್‌ ನಡುವೆ 7ನೇ ವಿಕೆಟ್‌ಗೆ 54 ರನ್‌ಗಳ ಜೊತೆಯಾಟ ಬಂದಿದ್ದು ಬಿಟ್ಟರೆ ಉಳಿದ ಆಟಗಾರರಿಂದ ಉತ್ತಮ ಜೊತೆಯಾಟ ಸಿಗದ ಕಾರಣ ಪಂದ್ಯವನ್ನು ಭಾರತ ಸೋತಿದೆ.

    ಭಾರತದ ಪರ ಶುಭಮನ್‌ ಗಿಲ್‌ 50 ರನ್‌( 83 ಎಸೆತ, 7 ಬೌಂಡರಿ, 1 ಸಿಕ್ಸರ್‌), ನಾಯಕ ವಿರಾಟ್‌ ಕೊಹ್ಲಿ 72 ರನ್‌(104 ಎಸೆತ, 9 ಬೌಂಡರಿ) ಹೊಡೆದು ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ.

    ರೋಹಿತ್‌ ಶರ್ಮಾ 12, ಚೇತೇಶ್ವರ ಪೂಜಾರ 15, ಅಜಿಂಕ್ಯಾ ರಹಾನೆ 0, ರಿಷಭ್‌ ಪಂತ್‌ 11, ವಾಷಿಂಗ್ಟನ್‌ ಸುಂದರ್‌ 0, ಅಶ್ವಿನ್‌ 9, ಶಾಬ್ದಾಜ್‌ ನದೀಂ 0, ಇಶಾಂತ್‌ ಶರ್ಮಾ 5 ರನ್‌ ಹೊಡೆದು ಔಟಾದರು.

    ಜ್ಯಾಕ್‌ ಲೀಚ್‌ 4 ವಿಕೆಟ್‌ ಪಡೆದರೆ ಜೇಮ್ಸ್‌ ಆಂಡರ್‌ಸನ್‌ 3 ವಿಕೆಟ್‌ ಪಡೆದರು. ಜೋಫ್ರಾ ಆರ್ಚರ್‌, ಡಾಮ್‌ ಬೆಸ್, ಬೆನ್‌ ಸ್ಟೋಕ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

  • 6 ವಿಕೆಟ್ ಕಿತ್ತು ಮಿಂಚಿದ ಅಶ್ವಿನ್ – ಭಾರತಕ್ಕೆ 420 ರನ್ ಗೆಲುವಿನ ಗುರಿ

    6 ವಿಕೆಟ್ ಕಿತ್ತು ಮಿಂಚಿದ ಅಶ್ವಿನ್ – ಭಾರತಕ್ಕೆ 420 ರನ್ ಗೆಲುವಿನ ಗುರಿ

    ಚೆನ್ನೈ: ತವರಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಶ್ವಿನ್ ಆರು ವಿಕೆಟ್ ಕಿತ್ತು ಮಿಂಚಿದ್ದಾರೆ. ಆದರೆ ಈ ಪಂದ್ಯ ಗೆಲ್ಲಬೇಕಾದರೆ ಭಾರತ 420 ರನ್‍ಗಳ ಕಠಿಣ ಗುರಿಯನ್ನು ಪಡೆದಿದೆ.

    ಮೂರನೇ ದಿನದಾಟ ಮುಕ್ತಾಯದ ವೇಳೆಗೆ 6 ವಿಕೆಟ್ ಕಳೆದುಕೊಂಡು 257 ರನ್‍ಗಳಿಸಿದ್ದ ಭಾರತ ನಾಲ್ಕನೇ ದಿನ 337 ರನ್‍ಗಳಿಸಿ ಸರ್ವಪತನ ಕಂಡಿತು. ಭಾರತದ ಪರವಾಗಿ ವಾಷಿಂಗ್ಟನ್ ಸುಂದರ್ 85 ರನ್ (138 ಬಾಲ್, 12 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತಕ್ಕೆ ಮತ್ತೊಮ್ಮೆ ಆಸರೆಯಾದರು.

    241 ರನ್‍ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಅಶ್ವಿನ್ ಅವರ ಬಿಗುವಿನ ದಾಳಿಗೆ ತತ್ತರಿಸಿ ಕೇವಲ 178 ರನ್‍ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡಕ್ಕೆ 420 ರನ್‍ಗಳ ಗುರಿ ನೀಡಿದೆ.

    ಭಾರತದ ಪರವಾಗಿ ಮಾರಕ ದಾಳಿ ನಡೆಸಿದ ಅಶ್ವಿನ್ 17.3 ಓವರ್ ಎಸೆದು 61 ರನ್ ನೀಡಿ 6 ವಿಕೆಟ್ ಪಡೆದರೆ, ಶಜಾದ್ ನದೀಂ 2 ವಿಕೆಟ್ ಕಿತ್ತು ಮಿಂಚಿದರು. ಬುಮ್ರಾ ಮತ್ತು ಇಶಾಂತ್ ಶರ್ಮಾ ತಲಾ 1 ವಿಕೆಟ್ ಕಿತ್ತರು.

    ಇಂಗ್ಲೆಂಡ್‍ನ ಬೃಹತ್ ಟಾರ್ಗೆಟ್‍ನ್ನು ಚೇಸ್ ಮಾಡಲು ಹೊರಟ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ಕೇವಲ 12ರನ್ (20 ಬಾಲ್, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ರೋಹಿತ್ ಶರ್ಮಾ ನಿರಾಸೆ ಮೂಡಿಸಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 39 ರನ್‍ಗೆ 1 ವಿಕೆಟ್ ಕಳೆದುಕೊಂಡಿದೆ. ಶುಭ್‍ಮನ್ ಗಿಲ್ 15 ರನ್ (35 ಬಾಲ್,3 ಬೌಂಡರಿ) ಮತ್ತು ಚೇತೇಶ್ವರ ಪೂಜಾರಾ 12 ರನ್ (23 ಬಾಲ್, 1 ಬೌಂಡರಿ) ಸಿಡಿಸಿ 5ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಗೆಲ್ಲಲು ಇನ್ನೂ 381 ರನ್‍ಗಳು ಬೇಕಾಗಿದೆ.

  • 2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    2.61 ಕೋಟಿ ರೂಪಾಯಿಗೆ ಮಾರಾಟವಾದ ಹಸು

    -ಹಸು ಮಾರಾಟ ಬೆಲೆಯಲ್ಲಿ ವಿಶ್ವ ದಾಖಲೆ

    ಲಂಡನ್: ಹರಾಜಿನಲ್ಲಿ ಹಸು ಬರೋಬ್ಬರಿ 2.61 ಕೋಟಿ ರೂಪಾಯಿಗೆ ಮಾರಾಟವಾಗುವ ಮೂಲಕವಾಗಿ ಅತೀ ಹೆಚ್ಚು ಬೆಲೆಗೆ ಮಾರಾಟವಾಗಿರುವ ಹಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಮಧ್ಯ ಇಂಗ್ಲೇಂಡ್‍ನಲ್ಲಿ ಹಸು ಹರಾಜು ಪ್ರಕ್ರಿಯೆ ನಡೆದಿತ್ತು. ಈ ವೇಳೆ ಹಸು 2,62,000 ಪೌಂಡ್ಸ್‍ಗೆ ಹರಾಜಾಗಿದೆ. ಭಾರತದಲ್ಲಿ ಸುಮಾರು 2.61 ಕೋಟಿ ಆಗುತ್ತದೆ. ನಾಲ್ಕು ತಿಂಗಳ ಫೋಶ್ ಸ್ಪೈಸ್ ತಳಿಯ ಈ ಹಸು ಮಾರಾಟ ಬೆಲೆಯಲ್ಲಿ ವಿಶ್ವದಾಖಲೆಯನ್ನು ಮುರಿದಿದೆ ಎಂದು ಹೇಳಿದರೆ ತಪ್ಪಾಗಲಾರದು. 2014 ರಲ್ಲಿ ಇದೇ ತಳಿಯ ಹಸು ಮಾರಾಟವಾಗಿತ್ತು. ಆದರೆ ಈ ಬಾರಿ ದುಪ್ಪಟ್ಟು ಬೆಲೆಗೆ ಹಸು ಮಾರಾಟವಾಗಿದೆ.

    ನಾನು ಕ್ರಿಸ್ಟೀನ್ ವಿಲಿಯಮ್ಸ್ ಹೈನುಗಾರಿಕೆ ನನ್ನ ಕಸುಬು. ನಮ್ಮ ತಂದೆ ಈ ತಳಿಯ ಹಸುವನ್ನು ಸಾಕಿದ್ದರು. ತಂದೆ ನಿಧನರಾದ ಬಳಿಕ ಕ್ರೀಸ್ಟೀನ್ ಹಸು ಸಾಕಾಣಿಕೆಯನ್ನು ಮುಂದುವರಿಸಿದ್ದೇನೆ. ಆದರೆ ನಮ್ಮ ಹಸು ಇಷ್ಟೊಂದು ದುಬಾರಿ ಬೆಲೆಗೆ ಮಾರಾಟವಾಗುತ್ತದೆ ಎಂದು ನಾವು ಊಹಿಸಿರಲಿಲ್ಲ. ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

  • ಕುಸಿತ ಕಂಡರೂ ಪೂಜಾರಾ, ಪಂತ್ ಆಸರೆ – ಫಾಲೋ ಆನ್ ಭೀತಿಯಲ್ಲಿ ಭಾರತ

    ಕುಸಿತ ಕಂಡರೂ ಪೂಜಾರಾ, ಪಂತ್ ಆಸರೆ – ಫಾಲೋ ಆನ್ ಭೀತಿಯಲ್ಲಿ ಭಾರತ

    – ಏಕದಿನದಂತೆ ಬ್ಯಾಟ್ ಬೀಸಿದ ರಿಷಭ್ ಪಂತ್
    – ಫಾಲೋ ಆನ್ ಭೀತಿಯಿಂದ ಪಾರಾಗಲು ಬೇಕಿದೆ 122 ರನ್

    ಚೆನ್ನೈ: ಆರಂಭದಲ್ಲಿ ಕುಸಿತ ಕಂಡರೂ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರಾ ಅವರ ಶತಕದ ಜೊತೆಯಾಟದಿಂದ ಭಾರತ ಇಂಗ್ಲೆಂಡಿಗೆ ಪ್ರತಿರೋಧ ತೋರಿದ್ದರೂ ಫಾಲೋ ಆನ್ ಭೀತಿಗೆ ಸಿಲುಕಿದೆ.

    ಎರಡನೇ ದಿನದಾಟದ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿದ್ದ ಇಂಗ್ಲೆಂಡ್ ಮೂರನೇ ದಿನ ಆ ಮೊತ್ತಕ್ಕೆ 23ರನ್ ಸೇರಿಸಿ 578 ರನ್‍ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

    ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್‍ಗಿಳಿದ ಭಾರತ ತಂಡ ಆರಂಭದಿಂದಲೇ ಕುಸಿತಕ್ಕೆ ಒಳಗಾಯಿತು. ಟಾಪ್ ಆಡರ್ ಬ್ಯಾಟ್ಸ್‌ಮ್ಯಾನ್ ಗಳಾದ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ನಿರಾಸೆ ಮೂಡಿಸಿದರು. ಒಂದು ಹಂತದಲ್ಲಿ 73 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

    ರೋಹಿತ್ ಶರ್ಮಾ 4 ರನ್, ಶುಭಮ್ ಗಿಲ್ 29 ರನ್, ವಿರಾಟ್ ಕೊಹ್ಲಿ 11 ರನ್, ಅಜಿಂಕ್ಯಾ ರಹಾನೆ 1 ರನ್ ಗಳಿಸಿ ಔಟಾದಾಗ ಭಾರತ ಸುಲಭವಾಗಿ ಆಲೌಟ್ ಆಗಿ ಫಾಲೋ ಆನ್ ಭೀತಿಗೆ ತುತ್ತಾಗುತ್ತಾ ಎಂಬ ಪ್ರಶ್ನೆ ಎದ್ದಿತ್ತು.

    ಈ ಸಂದರ್ಭದಲ್ಲಿ ರಿಷಭ್ ಪಂತ್ ಮತ್ತು ಚೇತೇಶ್ವರ ಪೂಜಾರಾ ಶತಕದ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ಈ ಜೋಡಿ 5ನೇ ವಿಕೆಟ್‍ಗೆ 145 ಎಸೆತಗಳಲ್ಲಿ 119ರನ್ ಸೇರಿಸಿತು.

    73ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಪೂಜಾರಾ ಔಟ್ ಆಗುತ್ತಿದ್ದಂತೆ, ಅವರ ಹಿಂದೆಯೆ ಪಂತ್ ಕೂಡ ಔಟ್ ಆಗಿ ಪೆವಿಲಿಯನ್ ಸೇರಿಕೊಂಡರು. ಏಕದಿನದಂತೆ ಬ್ಯಾಟ್ ಬೀಸಿದ ರಿಷಭ್ ಪಂತ್ 91ರನ್ (88 ಎಸೆತ, 9 ಬೌಂಡರಿ, 5 ಸಿಕ್ಸರ್) ಮತ್ತು ಚೇತೇಶ್ವರ ಪೂಜಾರಾ 73ರನ್ (143 ಎಸೆತ, 11 ಬೌಂಡರಿ) ಸಿಡಿಸಿ ಔಟಾದರು.

    ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿದೆ. ವಾಷಿಂಗ್ಟನ್ ಸುಂದರ್ 33ರನ್ (88 ಎಸೆತ, 5 ಬೌಂಡರಿ) ಮತ್ತು ರವಿಚಂದ್ರನ್ ಅಶ್ವಿನ್ 8ರನ್(54 ಎಸೆತ) ಮಾಡಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಇಂಗ್ಲೆಂಡ್ ಪರ ಡೋಮ್ ಬೆಸ್ 23 ಓವರ್ ಬೌಲಿಂಗ್ ಮಾಡಿ 55ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಇನ್ನೆರಡು ವಿಕೆಟ್ ಜೋಫ್ರಾ ಆರ್ಚರ್ ಪಾಲಾಗಿದೆ. ಭಾರತ ಫಾಲೋ -ಆನ್ ಭೀತಿಯಿಂದ ಪಾರಾಗಬೇಕಾದರೆ 379 ರನ್ ಹೊಡೆಯಬೇಕು.

  • ಡ್ರೆಸ್ಸಿಂಗ್ ರೂಮ್‍ನಲ್ಲಿ ಕುಲ್ದೀಪ್ ಕುತ್ತಿಗೆ ಹಿಡಿದ ಸಿರಾಜ್ – ವಿಡಿಯೋ ವೈರಲ್

    ಡ್ರೆಸ್ಸಿಂಗ್ ರೂಮ್‍ನಲ್ಲಿ ಕುಲ್ದೀಪ್ ಕುತ್ತಿಗೆ ಹಿಡಿದ ಸಿರಾಜ್ – ವಿಡಿಯೋ ವೈರಲ್

    ಚೆನ್ನೈ: ಭಾರತ – ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಬೌಲರ್ ಸಿರಾಜ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಕುತ್ತಿಗೆಯನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೊದಲ ಪಂದ್ಯದ ವೇಳೆ ವೇಗಿ ಸಿರಾಜ್ ಮತ್ತು ಸ್ಪಿನ್ನರ್ ಕುಲದೀಪ್ ಒಬ್ಬರೊನ್ನಬ್ಬರು ಗುರಾಸಿಕೊಂಡು ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲಿ ಸಿರಾಜ್ ಅವರು ಕುಲದೀಪ್ ಅವರ ಕುತ್ತಿಗೆಯನ್ನು ಹಿಡಿದು ಹುಬ್ಬನ್ನು ಮೇಲೆ ಮಾಡಿ ಏನನ್ನೊ ಕೇಳುತ್ತಿರುವ ದೃಶ್ಯವು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಗಿದೆ.

    ಈ ಪುಟ್ಟ ವಿಡಿಯೋ ತುಣುಕಿನಲ್ಲಿ ಕೋಚ್ ರವಿಶಾಸ್ತ್ರಿ ಮುಂಭಾಗದಲ್ಲಿ ನಿಂತಿರುವುದು ಕಂಡುಬಂದಿದೆ. ಭಾರತದ ಡ್ರೆಸ್ಸಿಂಗ್ ರೂಮ್‍ನಲ್ಲಿ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಕಾಡುತ್ತಿದೆ. ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಇಬ್ಬರು ಒಬ್ಬರೊನ್ನಬ್ಬರೂ ಗುರಾಯಿಸುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

    ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಕೊಹ್ಲಿ ಕುಲದೀಪ್ ಮತ್ತು ಸಿರಾಜ್ ಆತ್ಮೀಯ ಸ್ನೇಹಿತರು ತಮಾಷೆಗಾಗಿ ಈ ರೀತಿ ನಡೆದುಕೊಂಡಿರಬಹುದೆಂದು ಉತ್ತರಿಸಿದ್ದಾರೆ.

    ಕುಲದೀಪ್ ಯಾದವ್ ಮತ್ತು ಸಿರಾಜ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.

  • ವಿಕೆಟ್‍ಗಾಗಿ ಭಾರತದ ಬೌಲರ್‌ಗಳ ಪರದಾಟ – ವಿಶ್ವದಾಖಲೆ ನಿರ್ಮಿಸಿ ರೂಟ್ ಮೆರೆದಾಟ

    ವಿಕೆಟ್‍ಗಾಗಿ ಭಾರತದ ಬೌಲರ್‌ಗಳ ಪರದಾಟ – ವಿಶ್ವದಾಖಲೆ ನಿರ್ಮಿಸಿ ರೂಟ್ ಮೆರೆದಾಟ

    – 8 ವಿಕೆಟ್ ನಷ್ಟಕ್ಕೆ 555 ರನ್
    – ದ್ವಿಶತಕ ಸಿಡಿಸಿದ ನಾಯಕ ರೂಟ್
    – ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್

    ಚೆನ್ನೈ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್​ನ ಎರಡನೇ ದಿನ ಭಾರತದ ಬೌಲರ್‌ಗಳು ಇಂಗ್ಲೆಂಡ್  ಬ್ಯಾಟ್ಸ್‌ಮ್ಯಾನ್‌ಗಳ ವಿಕೆಟ್‍ಗಾಗಿ ಪರದಾಟ ನಡೆಸಿದರೆ. ಇತ್ತ ರೂಟ್ ವಿಶ್ವದಾಖಲೆಯ ದ್ವಿಶತಕ ಬಾರಿಸಿ ಮೆರೆದಾಡಿದ್ದಾರೆ.

    ಮೊದಲ ದಿನದ ಅಂತ್ಯಕ್ಕೆ 263 ರನ್‍ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿ 555 ರನ್‍ಗಳಿಗೆ 8 ವಿಕೆಟ್ ಕಳೆದುಕೊಂಡು ಬೃಹತ್ ಮೊತ್ತ ಪೇರಿಸಿದೆ.

    ಇಂಗ್ಲೆಂಡ್ ಸರದಿಯಲ್ಲಿ 128 ರನ್ ಮಾಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜೋ ರೂಟ್ 377 ಎಸೆತ ಎದುರಿಸಿ(19 ಬೌಂಡರಿ ಮತ್ತು ಎರಡು ಸಿಕ್ಸರ್)ಸಿಡಿಸಿ 218 ರನ್‍ಗಳಿಗೆ ನದೀಂಗೆ ವಿಕೆಟ್ ಒಪ್ಪಿಸಿದರು. ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ರೂಟ್, ಈ ದಾಖಲೆ ಬರೆದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು.

    ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಇನ್ನೊಬ್ಬ ಬ್ಯಾಟ್ಸ್‌ಮ್ಯಾನ್‌ ಬೆನ್ ಸ್ಟೋಕ್ಸ್ 82 ರನ್( 118 ಎಸೆತ 10 ಬೌಂಡರಿ, 3 ಸಿಕ್ಸರ್) ಸಿಡಿಸಿ ರೂಟ್ ಅವರೊಂದಿಗೆ 4ನೇ ವಿಕೆಟ್‍ಗೆ 124ರನ್(221 ಎಸೆತ) ಗಳ ಜೊತೆಯಾಟ ಆಡಿದರು.

    ಇತ್ತ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ಮೆರೆದಾಡುತ್ತಿದ್ದರೆ. ಅತ್ತ ಭಾರತದ 6 ಬೌಲರ್‌ಗಳು ದಾಳಿ ಮಾಡಿದರೂ ರನ್ ಕಡಿವಾಣ ಹಾಕಲು ಸಾಧ್ಯವಾಗದೇ ಹೆಣಗಾಡಿದದರು. ದಿನದ ಅಂತ್ಯದ ವೇಳೆಗೆ ವಿಕೆಟ್ ಬೇಟೆಯಾಡಲು ಪ್ರಾರಂಭಿಸಿದ ಭಾರತೀಯ ಬೌಲರ್‌ಗ ಳಾದ ಇಶಾಂತ್ ಶರ್ಮಾ, ಜಸ್ಟ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಶಜಾದ್ ನದೀಂ ತಲಾ 2 ವಿಕೆಟ್ ಪಡೆದು ಮಿಂಚಿದರು.

  • 100ನೇ ಪಂದ್ಯದಲ್ಲೇ ಜೋ ರೂಟ್ ಶತಕ – ಮೊದಲ ದಿನದ ಗೌರವ ಪಡೆದ ಇಂಗ್ಲೆಂಡ್

    100ನೇ ಪಂದ್ಯದಲ್ಲೇ ಜೋ ರೂಟ್ ಶತಕ – ಮೊದಲ ದಿನದ ಗೌರವ ಪಡೆದ ಇಂಗ್ಲೆಂಡ್

    ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸುವ ಮೂಲಕ ಇಂಗ್ಲೆಂಡ್ ತಂಡದ ನಾಯಕ ತಮ್ಮ ನೂರನೇ ಪಂದ್ಯವನ್ನು ಸ್ಮರಣೀಯವಾಸುವುದರ ಮೂಲಕ ಮೊದಲ ದಿನದ ಗೌರವವನ್ನು ತಮ್ಮ ತಂಡಕ್ಕೆ ಒದಗಿಸಿದ್ದಾರೆ.

    100 ನೇ ಪಂದ್ಯ ಆಡುತ್ತಿರುವ ಜೋ ರೂಟ್ 128 ರನ್ (197 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿ ಇಂಗ್ಲೆಂಡ್ ತಂಡಕ್ಕೆ ಆಸರೆಯಾದರೂ. ಈ ಶತಕದೊಂದಿಗೆ ಜೋ ರೂಟ್ ನಾಯಕನಾಗಿ 100ನೇ ಪಂದ್ಯದಲ್ಲಿ ಶತಕ ಸಿಡಿಸಿದ 5 ನೇ ಆಟಗಾರರಾಗಿ ಕಾಣಿಸಿಕೊಂಡರು. ಈ ಮೊದಲು ಕಾಲಿನ್ ಕೌಡ್ರೆ, ಇಂಜಮಾಮ್ ಉಲ್ ಹಕ್, ರಿಕಿ ಪಾಟಿಂಗ್ ಮತ್ತು ಗ್ರೇಮ್ ಸ್ಮಿತ್ ತಮ್ಮ ತಮ್ಮ 100ನೇ ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು.

    ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ಇಂಗ್ಲೆಂಡ್ ಆರಂಭಿಕ ಆಟಗಾರರಾದ ರೋರಿ ಬನ್ರ್ಸ್ ಮತ್ತು ಡೊಮ್ ಸಿಬ್ಲಿ ಜೋಡಿ ಮೊದಲ ವಿಕೆಟ್‍ಗೆ 23.5 ಓವರ್‍ಗಳಲ್ಲಿ 63 ರನ್‍ಗಳ ಕೊಡುಗೆ ನೀಡಿತು. ಉತ್ತಮ ಆಟವಾಡುತ್ತಿದ್ದ ರೋರಿ ಬನ್ರ್ಸ್ 33ರನ್ (60 ಎಸೆತ, 4 ಬೌಂಡರಿ) ಸಿಡಿಸಿ ಔಟ್ ಆದ ನಂತರ 3ನೇ ವಿಕೆಟ್‍ಗೆ ಒಂದಾದ ನಾಯಕ ಜೋ ರೂಟ್ ಮತ್ತು ಡೊಮ್ ಸಿಬ್ಲಿ 3ನೇ ವಿಕೆಟ್‍ಗೆ 338 ಎಸೆತಗಳಲ್ಲಿ 200ರನ್‍ಗಳ ಜೊತೆಯಾಟವಾಡಿದರು. ಮೊದಲ ದಿನ ಅಂತ್ಯಕ್ಕೆ ಇಂಗ್ಲೆಂಡ್ 263 ರನ್‍ಗಳಿಸಿ ಮೂರು ವಿಕೆಟ್ ಕಳೆದುಕೊಂಡಿದೆ. 128ರನ್ (197 ಎಸೆತ, 14 ಬೌಂಡರಿ, 1 ಸಿಕ್ಸರ್) ಸಿಡಿಸಿರುವ ಜೋ ರೂಟ್ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಭಾರತದ ಸರದಿಯಲ್ಲಿ ಪ್ರಮುಖ ಬೌಲರ್‍ ಗಳಾದ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಗಾಯದಿಂದ ಚೇತರಿಸಿಕೊಂಡು ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡರು. ಭಾರತದ ಪರ ಜಸ್ಪ್ರೀತ್ ಬುಮ್ರಾ 28.3 ಬೌಲ್ ಮಾಡಿ 2 ವಿಕೆಟ್ ಕಿತ್ತರೆ ಆಶ್ವಿನ್ 24 ಓವರ್ ಎಸೆದು 1 ವಿಕೆಟ್ ಪಡೆದರು.

  • 1 ಶತಕ ಹೊಡೆದರೆ ವಿಶ್ವದಾಖಲೆ – ಕೊಹ್ಲಿ ಆಟದತ್ತ ಎಲ್ಲರ ಚಿತ್ತ

    1 ಶತಕ ಹೊಡೆದರೆ ವಿಶ್ವದಾಖಲೆ – ಕೊಹ್ಲಿ ಆಟದತ್ತ ಎಲ್ಲರ ಚಿತ್ತ

    ಚೆನ್ನೈ: ಭಾರತ ತಂಡದ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ನೂತನ ದಾಖಲೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ನಾಳೆಯಿಂದ ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದ್ದು ಈ ಸರಣಿಯಲ್ಲಿ ಒಂದು ಶತಕ ಹೊಡೆದರೆ ವಿಶ್ವದಾಖಲೆಯನ್ನು ಬರೆಯುವ ಮೂಲಕ ಮತ್ತೆ ಕಿಂಗ್ ಕೊಹ್ಲಿ ಮಿಂಚಲಿದ್ದಾರೆ.

    ಈಗಾಗಲೇ 41 ಶತಕ ಹೊಡೆಯುವ ಮೂಲಕ ನಾಯಕನಾಗಿ ಅತೀ ಹೆಚ್ಚು ಶತಕ ಗಳಿಸುವ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿರುವ ಕೊಹ್ಲಿ ಇನ್ನು ಒಂದು ಶತಕ ಬಾರಿಸಿದರೆ ನಾಯಕನಾಗಿ 42 ಶತಕ ಗಳಿಸುವ ಮೂಲಕ ವಿಶ್ವದಾಖಲೆ ಬರೆಯಲಿದ್ದಾರೆ. ಪ್ರಸ್ತುತ 41 ಶತಕ ಗಳಿಸಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಜೊತೆಗೆ ಜಂಟಿ ಅಗ್ರಸ್ಥಾನ ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ನಾಯಕನಾಗಿ 33 ಶತಕ ಬಾರಿಸಿರುವ ದ.ಆಫ್ರಿಕಾದ ಮಾಜಿ ನಾಯಕ ಗ್ರೇಮ್ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ.

    ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಕೊಹ್ಲಿ ಒಟ್ಟು 70 ಶತಕ ಬಾರಿಸಿ ಶತಕ ಹೊಡೆದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 100 ಶತಕ ಬಾರಿಸಿರುವ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನ ರಿಕಿ ಪಾಟಿಂಗ್ ಹೆಸರಿನಲ್ಲಿದೆ.

    ಅಂಕಿ ಅಂಶಗಳ ಪ್ರಕಾರ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಶತಕ ಬಾರಿಸಿ 14 ತಿಂಗಳು ಕಳೆದಿದೆ. ಇವೆಲ್ಲವುಗಳನ್ನು ಗಮನಿಸಿರುವ ಕಿಂಗ್ ಕೊಹ್ಲಿ ನಾಳೆಯಿಂದ ಆರಂಭವಾಗಲಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್‍ನಲ್ಲಿ ತಮ್ಮ ಲಯವನ್ನು ಕಂಡುಕೊಂಡು ನೂತನ ಕ್ರಿಕೆಟ್ ಋತುವನ್ನು ಅವಿಸ್ಮರಣೀಯವಾಗಿಸಲು ತುದಿಗಾಲಲ್ಲಿ ನಿಂತಿದ್ದಾರೆ.

  • ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಜೈಲಿನಲ್ಲಿ ಸಮೋಸಾ ಕದ್ದು ಗುದನಾಳದಲ್ಲಿಟ್ಕೊಂಡ- ವ್ಯಕ್ತಿಯ ಉತ್ತರಕ್ಕೆ ದಂಗಾದ ಪೊಲೀಸರು!

    ಲಂಡನ್: ದೇಹದ ವಿವಿಧ ಭಾಗಗಳಲ್ಲಿ ಖದೀಮರು ಚಿನ್ನ ಸಾಗಾಟ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ, ಜೈಲಿನಲ್ಲಿ ತನಗೆ ನೀಡುವ ಆಹಾರ ಸಾಲುತ್ತಿಲ್ಲವೆಂದು ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟುಕೊಂಡು ಸಿಕ್ಕಿಬಿದ್ದ ಅಚ್ಚರಿಯ ಘಟನೆ ನಡೆದಿದೆ.

    ಹೌದು. ಇಂಗ್ಲೆಂಡ್‍ನ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು 2020ರಲ್ಲಿ ಬಂಧಿಸಿದ್ದವರ ಪಟ್ಟಿಯನ್ನು ತರಿಸಿ ಪರಿಶೀಲನೆ ನಡೆಸಿದರು. ವಿಚಿತ್ರ ಎಂದರೆ ಅದರಲ್ಲಿ ವ್ಯಕ್ತಿ ಒಬ್ಬ ಸಮೋಸಾವನ್ನು ಗುದನಾಳದಲ್ಲಿ ಅಡಗಿಸಿಟ್ಟು ಸಿಕ್ಕಿಬಿದ್ದವನಾಗಿದ್ದಾನೆ.

    ಬರ್ಮಿಂಗ್‍ಹ್ಯಾಮ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದವರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಶಂಕಿತನೊಬ್ಬ ತನ್ನ ಒಳ ಉಡುಪಿನಲ್ಲಿ ಸಮೋಸಾ ಇರಿಸಿಕೊಂಡಿದ್ದಾನೆ. ಈ ವೇಳೆ ಆತನನ್ನು ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು ಪ್ರಶ್ನೆ ಮಾಡಿದಾಗ, ಜೈಲಿನಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಆ ಆಹಾರದಿಂದ ನನಗೆ ತೃಪ್ತಿಲ್ಲ. ಅಲ್ಲದೇ ಅವರು ನೀಡುತ್ತಿರುವ ಆಹಾರ ನನಗೆ ಸಾಲುತ್ತಿಲ್ಲ ಎಂದು ಸಮೋಸಾವನ್ನು ಕಳ್ಳತನ ಮಾಡಿರುವುದಾಗಿ ಹೇಳಿದ್ದಾನೆ. ವ್ಯಕ್ತಿಯ ಉತ್ತರ ಕೇಳಿ ಪೊಲೀಸರೇ ಒಂದು ಬಾರಿ ದಂಗಾಗಿ ಹೋಗಿದ್ದಾರೆ.

    ಈ ಕುರಿತಂತೆ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸ್ ಕ್ರಿಮಿನಲ್ ಜಸ್ಟೀಸ್ ವಿಭಾಗದ ಇನ್ಸ್‍ಪೆಕ್ಟರ್ ಮಂಜ್ ಅಹಿರ್ ಮಾತನಾಡಿ, ನಾವು ಎಷ್ಟೋ ರೀತಿಯ ಘಟನೆಗಳನ್ನು ನೋಡಿದ್ದೇವೆ. ಆದ್ರೆ ನನ್ನ ಮನಸ್ಸಿಗೆ ನಾಟಿರುವ ಘಟನೆ ಅಂದ್ರೆ ಒಬ್ಬ ವ್ಯಕ್ತಿಯನ್ನು ಪರಿಶೀಲನೆ ಮಾಡಿದಾಗ ಆತ ತನ್ನ ಪೃಷ್ಠದ ನಡುವೆ ಸಮೋಸವನ್ನು ಅಡಗಿಸಿಟ್ಟುಕೊಂಡ ಘಟನೆ. ಆಹಾರವು ಪ್ರತಿಯೊಬ್ಬರಿಗೂ ಮುಖ್ಯ. ತನ್ನ ಹೊಟ್ಟೆಗಾಗಿ ಆತ ಸಮೋಸವನ್ನು ಕದಿಯಲು ಬಯಸಿದ್ದಾನೆ ಎಂದು ಹೇಳಿದರು.

    ಹೀಗೆ ಈ ವ್ಯಕ್ತಿ ಸಮೋಸಾವನ್ನು ಕದ್ದರೆ ಮತ್ತೊಬ್ಬ ವ್ಯಕ್ತಿ ವೆಸ್ಟ್ ಮಿಡ್ಲ್ಯಾಂಡ್ಸ್ ನ ಓಲ್ಡ್‍ಬರಿಯ ಕಸ್ಟಡಿಯಲ್ಲಿದ್ದಾಗ ಸಿಬ್ಬಂದಿಯಿಂದ ತಾನು ಪಡೆದ ಸೌಲಭ್ಯ ಹಾಗೂ ಆರೈಕೆಗಾಗಿ ಧನ್ಯವಾದ ಹೇಳಲು ಒಂದು ಚಾಕ್ಲೆಟ್ ಡಬ್ಬವನ್ನು ಅಧಿಕಾರಿಗಳಿಗೆ ಖರೀದಿಸಿ ನೀಡಿದ್ದಾನೆ.