Tag: england

  • ಮಕ್ಕಳ ಸೈಕಲಿನಲ್ಲಿ ಸವಾರಿ ಹೊರಟ ಧವನ್, ಕುಲದೀಪ್

    ಮಕ್ಕಳ ಸೈಕಲಿನಲ್ಲಿ ಸವಾರಿ ಹೊರಟ ಧವನ್, ಕುಲದೀಪ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಜಯಿಸಿದ ಭಾರತೀಯ ತಂಡ ಇದೀಗ ರಿಲ್ಯಾಕ್ಸ್ ಮೂಡ್‍ನಲ್ಲಿದೆ. ಟೀ ಇಂಡಿಯಾದ ನಾಲ್ವರು ಕ್ರಿಕೆಟರ್ಸ್ ಮಕ್ಕಳ ಆಟಿಕೆಯಲ್ಲಿ ಮಕ್ಕಳಂತೆ ಆಟವಾಡಿ ಗಮನಸೆಳೆದಿದ್ದಾರೆ.

    ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಆರಂಭಿಕ ಆಟಗಾರ ಶಿಖರ್ ಧವನ್, ನಿಗದಿತ ಓವರ್‌ಗಳ ಸರಣಿಗಾಗಿ ಭಾರತ ತಂಡಕ್ಕೆ ಕೂಡಿಕೊಂಡಂತೆ, ವೀಡಿಯೋ ಒಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ರೋಹಿತ್ ಶರ್ಮಾ, ರಿಷಬ್ ಪಂತ್, ಕುಲದೀಪ್ ಯಾದವ್ ಮತ್ತು ಧವನ್ ಮಕ್ಕಳ ಆಟದ ವಲಯಕ್ಕೆ ಹೋಗಿ ಮಕ್ಕಳ ಆಟಿಕೆಯಲ್ಲಿ ಮಕ್ಕಳಂತೆ ಆಡಿ ಎಂಜಾಯ್ ಮಾಡಿದ್ದಾರೆ.

    ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಸಣ್ಣ ಮಕ್ಕಳ ಸೈಕಲ್‍ನಲ್ಲಿ ಕೂತು ಸವಾರಿ ಹೊರಟರೆ, ಪಂತ್ ಹಾಗೂ ರೋಹಿತ್ ಆಟಿಕೆ ಬಾಲ್ ನಲ್ಲಿ ಪರಸ್ಪರ ಎಸೆದುಕೊಂಡು ಖುಷಿ ಪಟ್ಟಿದ್ದಾರೆ.

     

    View this post on Instagram

     

    A post shared by Shikhar Dhawan (@shikhardofficial)

    ಈ ನಾಲ್ವರು ಕ್ರಿಕೆಟಿಗರು ಮಕ್ಕಳ ಆಟಿಕೆಯಲ್ಲಿ ಆಡುತ್ತಿರುವ ವೀಡಿಯೋವನ್ನು ಶಿಖರ್ ಧವನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ನಮ್ಮ ಜೀವನದ ಬಾಲ್ಯದ ದಿನಗಳು ಎಂದೂ ಮತ್ತೆ ಬರಲಾರದು ಎಂದು ಬರೆದುಕೊಂಡಿದ್ದಾರೆ. ಧವನ್ ವೀಡಿಯೋ ಹಾಕುತ್ತಿದ್ದಂತೆ ಯಜುವೇಂದ್ರ ಚಹಲ್, ಸೂರ್ಯಕುಮಾರ್ ಯಾದವ್ ಸೇರಿ ಹಲವರು ಕಮೆಂಟ್ ಮಾಡಿದ್ದಾರೆ.

    ಭಾರತ ನಿಗದಿತ ಓವರ್‌ಗಳ ಕ್ರಿಕೆಟ್ ಗಾಗಿ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ಧವನ್, ಚಹಲ್ ಮತ್ತು ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯವು ಅಹಮದಾಬಾದ್‍ನಲ್ಲಿ ಮತ್ತು ಏಕದಿನ ಪಂದ್ಯಗಳು ಪುಣೆಯಲ್ಲಿ ನಡೆಯಲಿದೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಮುಗಿದ ತಕ್ಷಣ ಏಪ್ರಿಲ್ 9 ರಿಂದ ಐಪಿಎಲ್ ಪ್ರಾರಂಭವಾಗಲಿದ್ದು, ನಂತರ ಬಿಡುವಿಲ್ಲದ ಕ್ರಿಕೆಟ್‍ನಲ್ಲಿ ಭಾರತೀಯ ಆಟಗಾರರು ಬ್ಯುಸಿಯಾಗಲಿದ್ದರೆ ಹಾಗಾಗಿ ಇದೀಗ ಸಿಕ್ಕ ಬಿಡುವಿನಲ್ಲಿ ಮಕ್ಕಳಂತೆ ಆಟವಾಡುವ ಮೂಲಕ ಸಂಭ್ರಮಿಸುತ್ತಿದ್ದಾರೆ.

  • ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 3-1 ರಿಂದ ಸರಣಿ ಗೆದ್ದ ಭಾರತ

    ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ದಾಖಲಿಸಿ 3-1 ರಿಂದ ಸರಣಿ ಗೆದ್ದ ಭಾರತ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಮೂರನೇ ದಿನ ಸ್ಪಿನ್ ದ್ವಯರಾದ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ದಾಳಿಗೆ ನಲುಗಿದ ಇಂಗ್ಲೆಂಡ್ ತಂಡ 135 ರನ್ ಗಳಿಗೆ ಗಂಟುಮೂಟೆ ಕಟ್ಟಿದೆ. ಈ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 25 ರನ್‍ಗಳಿಂದ 4ನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಜಯಗಳಿಸುವ ಮೂಲಕ ಸರಣಿಯನ್ನು 3-1ರ ಅಂತರದಲ್ಲಿ ವಶಪಡಿಕೊಂಡಿದೆ.

    3ನೇ ದಿನ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತ ಸ್ಪಿನ್ ದ್ವಯರಾದ ಅಕ್ಷರ್ ಪಟೇಲ್ ಮತ್ತು ಅಶ್ವಿನ್ ಘಾತಕವಾಗಿ ಮೇಲೆರಗಿ ಇಂಗ್ಲೆಂಡ್ ಬ್ಯಾಟ್ಸ್‍ಮ್ಯಾನ್‍ಗಳನ್ನು ಕ್ರೀಸ್ ಪರದಾಡುವಂತೆ ಮಾಡಿದರು. ಅಕ್ಷರ್ ಪಟೇಲ್ 5 ವಿಕೆಟ್ (24 ಓವರ್, 6 ಮೇಡನ್ ಓವರ್) ಕಿತ್ತು ಮಿಂಚು ಹರಿಸಿದರೆ, ರವಿಚಂದ್ರನ್ ಅಶ್ವಿನ್ 5 ವಿಕೆಟ್( 22.5 ಓವರ್, 4 ಮೇಡನ್ ಓವರ್) ಪಡೆದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಗೆಲುವು ತಂದು ಕೊಟ್ಟರು.

    ಈ ಮೊದಲು ಎರಡನೇ ದಿನ 294 ರನ್‍ಗಳಿಗೆ 7 ವಿಕೆಟ್ ಕಳೆದುಕೊಂಡಿದ್ದ ಭಾರತ ಬ್ಯಾಟಿಂಗ್ ಮುಂದುವರಿಸಿ 365 ರನ್‍ಗಳಿಗೆ ಸರ್ವಪತನ ಕಂಡಿತು. ಭಾರತದ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ವಾಷಿಂಗ್ಟನ್ ಸುಂದರ್ 96 ರನ್ (174 ಎಸೆತ, 10 ಬೌಡಂರಿ, 1 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದು ಶತಕ ವಂಚಿತರಾದರು.

    ಭಾರತ ಇಂಗ್ಲೆಂಡ್ ವಿರುದ್ಧದ ಸರಣಿಯನ್ನು 3-1ರಲ್ಲಿ ಜಯಗಳಿಸುವ ಮೂಲಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ನ ಫೈನಲ್‍ಗೆ ಪ್ರವೇಶಿಸಿದೆ.

  • ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಪಂತ್, ಸುಂದರ್ – ಭಾರತಕ್ಕೆ ಅಲ್ಪ ಮುನ್ನಡೆ

    ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದ ಪಂತ್, ಸುಂದರ್ – ಭಾರತಕ್ಕೆ ಅಲ್ಪ ಮುನ್ನಡೆ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ 2ನೇ ದಿನ ಭಾರತ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್ ಆಕರ್ಷಕ ಶತಕ ಸಿಡಿಸುವ ಮೂಲಕ ಮಿಂಚಿದ್ದಾರೆ. ಇದರೊಂದಿಗೆ ಭಾರತ ತಂಡ ಇಂಗ್ಲೆಂಡ್ ವಿರುದ್ಧ 89 ರನ್ ಗಳ ಮುನ್ನಡೆ ಪಡೆದುಕೊಂಡಿದೆ.

    ಮೊದಲ ದಿನದಾಟದ ಅಂತ್ಯಕ್ಕೆ 24 ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನ ರೋಹಿತ್ ಶರ್ಮಾ 49 ರನ್(144 ಎಸೆತ, 7 ಬೌಂಡರಿ), ವಾಷಿಂಗ್ಟನ್  ಸುಂದರ್ 60 ರನ್ ( 117 ಎಸೆತ 8ಬೌಂಡರಿ) ಮತ್ತು ರಿಷಬ್ ಪಂತ್ 101 ರನ್( 118 ಎಸೆತ, 13 ಬೌಂಡರಿ, 2 ಸಿಕ್ಸರ್ ) ಸಿಡಿಸುವ ಭಾರತಕ್ಕೆ ಚೇತರಿಕೆ ನೀಡಿದರು.

    ಒಂದು ಹಂತದಲ್ಲಿ 146 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ರಿಷಬ್ ಪಂತ್ ಮತ್ತು ಸುಂದರ್ 7ನೇ ವಿಕೆಟ್ 113 ರನ್ ಒಟ್ಟುಗೂಡಿಸಿ ಭಾರತದ ಬ್ಯಾಟಿಂಗ್ ಸರದಿಗೆ ಶಕ್ತಿ ತುಂಬಿದರು. ದಿನದಾಟದ ಅಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 294 ಗಳಿಸಿದೆ. ಭಾರತ ಪರ ವಾಷಿಂಗ್ಟನ್ ಸುಂದರ್ 60 (117 ಎಸೆತ, 8 ಬೌಂಡರಿ) ಮತ್ತು ಅಕ್ಷರ್ ಪಟೇಲ್ 11 ರನ್ (34 ಎಸೆತ, 2 ಬೌಂಡರಿ) ಸಿಡಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ.

    ಇಂಗ್ಲೆಂಡ್ ಪರ ವೇಗಿ ಜೇಮ್ಸ್ ಆ್ಯಂಡರ್ಸನ್ 3 ವಿಕೆಟ್ ಪಡೆದರೆ, ಬೆನ್ ಸ್ಟೋಕ್ ಮತ್ತು ಜ್ಯಾಕ್ ಲೀಚ್ ತಲಾ 2 ವಿಕೆಟ್ ಕಿತ್ತರು.

  • ಒಂದೇ ದಿನ 11 ವಿಕೆಟ್ ಪತನ – ಮತ್ತೆ ಸಿನ್ನರ್‌ಗಳ ಅಬ್ಬರ

    ಒಂದೇ ದಿನ 11 ವಿಕೆಟ್ ಪತನ – ಮತ್ತೆ ಸಿನ್ನರ್‌ಗಳ ಅಬ್ಬರ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದ ಮೊದಲ ದಿನವೇ 11 ವಿಕೆಟ್ ಪತನಗೊಂಡಿದೆ. ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ ಅವರ ದಾಳಿಗೆ ಕುಸಿದ ಇಂಗ್ಲೆಂಡ್ 205 ರನ್ ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಮೊದಲ ದಿನದ ಗೌರವನ್ನು ಭಾರತ ಪಡೆದುಕೊಂಡಿದೆ.

    ಭಾರತ ಇಂಗ್ಲೆಂಡ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡರು. ಆದರೆ ಭಾರತ ತಂಡದ ಯುವ ಸ್ಪಿನ್ನರ್ ಅಕ್ಷರ್ ಪಟೇಲ್ 4 ವಿಕೆಟ್ (26 ಓವರ್, 7 ಮೇಡನ್) ಪಡೆದು ಇಂಗ್ಲೆಂಡ್ ತಂಡ ಅಲ್ಪ ಮೊತ್ತಕ್ಕೆ ಕುಸಿಯಲು ಕಾರಣರಾದರು.

    ಅಕ್ಷರ್‍ ಗೆ ಉತ್ತಮ ಸಾತ್ ನೀಡಿದ ಅಶ್ವಿನ್ 3 ವಿಕೆಟ್ ಕಿತ್ತರೆ, ಸಿರಾಜ್ 2 ವಿಕೆಟ್ ಕಬಳಿಸಿ ಮಿಂಚಿದರು, ಇನ್ನೊಂದು ವಿಕೆಟ್ ಸುಂದರ್ ಪಾಲಾಯಿತು. ಇಂಗ್ಲೆಂಡ್ ಬ್ಯಾಟಿಂಗ್ ಸರದಿಯಲ್ಲಿ ಬೆನ್‍ಸ್ಟ್ರೋಕ್ 55 ರನ್ (121 ಎಸೆತ, 6 ಬೌಂಡರಿ, 2 ಸಿಕ್ಸರ್) ಮತ್ತು ಡೆನ್ ಲಾರೇನ್ಸ್ 46 ರನ್ (74 ಎಸೆತ, 8 ಬೌಂಡರಿ) ಸಿಡಿಸಿ ಭಾರತದ ಬೌಲರ್ ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು ಅಂತಿಮವಾಗಿ ಇಂಗ್ಲೆಂಡ್ 205 ರನ್ ಗಳಿಗೆ ಸರ್ವಪತನ ಕಂಡಿತು.

    ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಇಳಿದ ಭಾರತ ದಿನದಾಟದ ಅಂತ್ಯಕ್ಕೆ ಶುಭಮನ್ ಗಿಲ್ ವಿಕೆಟ್ ಕಳೆದುಕೊಂಡು 24 ರನ್ ಗಳಿಸಿದೆ. ರೋಹಿತ್ ಶರ್ಮಾ 8(34 ಎಸೆತ, 1 ಬೌಂಡರಿ,) ಮತ್ತು ಚೇತೇಶ್ವರ ಪೂಜಾರ 15 (36 ಎಸೆತ, 1 ಬೌಂಡರಿ) ಸಿಡಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

  • ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ರಸ್ತೆ ಸುರಕ್ಷೆ ಕ್ರಿಕೆಟ್ ಸರಣಿಗೆ ಸಜ್ಜಾದ ಲೆಜೆಂಡ್ ಕ್ರಿಕೆಟರ್ಸ್

    ಭೋಪಾಲ್: ರಸ್ತೆ ಸುರಕ್ಷೆಗಾಗಿ ನಡೆಯುತ್ತಿರುವ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಕ್ರಿಕೆಟ್ ಸರಣಿಗಾಗಿ ಇದೀಗ ವಿಶ್ವದ ಲೆಜೆಂಡ್ ಕ್ರಿಕೆಟರ್ಸ್ ಸಜ್ಜಾಗುತ್ತಿದ್ದಾರೆ.

    ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ಘಟಾನುಘಟಿ ಕ್ರಿಕೆಟ್ ತಂಡಗಳಲ್ಲಿ ದಶಕಗಳ ಕಾಲ ಆಡಿ ನಿವೃತ್ತಿ ಹೊಂದಿರುವ ಮಾಜಿ ಆಟಗಾರರು ಮತ್ತೊಮ್ಮೆ ಇದೀಗ ಬ್ಯಾಟ್, ಬಾಲ್ ಹಿಡಿದು ತಮ್ಮ ತಮ್ಮ ದೇಶದ ಪರವಾಗಿ ಕ್ರಿಕೆಟ್ ಆಡಲು ಅಂಗಳಕ್ಕೆ ಇಳಿಯುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯವು ವಿಶ್ವಾದ್ಯಂತ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಸಂಚಾರದ ಕುರಿತು ಜಾಗರೂಕತೆ ಮತ್ತು ಅವರು ರಸ್ತೆಗಳಲ್ಲಿ ನಡೆಸುವ ವರ್ತನೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಕ್ರಿಕೆಟಿಗರು ಸೇರಿ ಆಡುವ ಮೂಲಕ ಜನರಿಗೆ ಸುರಕ್ಷತೆಯ ಪಾಠ ಮಾಡಲು ಹೊರಡುತ್ತಿದ್ದಾರೆ.

    ಕಳೆದ ವರ್ಷ ಈ ಸರಣಿಯಲ್ಲಿ ಭಾಗವಹಿಸಲು ಹಲವು ದೇಶದ ಲೆಜೆಂಡ್ ಕ್ರಿಕೆಟರ್ಸ್ ಸಿದ್ಧವಾಗಿದ್ದರು. ಆದರೆ ಕೊರೊನಾದಿಂದಾಗಿ ಸರಣಿ ನಡೆಯಲಿಲ್ಲ. ಇದೀಗ 2021ರ ಮಾರ್ಚ್ 5 ರಿಂದ ಮಾರ್ಚ್ 21ರವರೆಗೆ ಭಾರತದ ಶಾಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್ ನ್ಯಾಷನಲ್ ಸ್ಟೇಡಿಯಂ ರಾಯ್‍ಪುರ್ ನಲ್ಲಿ ನಡೆಯಲಿದೆ.

    ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಹಲವು ವರ್ಷಗಳಿಂದ ಕ್ರಿಕೆಟ್ ನಿಂದ ದೂರ ಉಳಿದಿರುವ ಹಿರಿಯ ಆಟಗಾರರು ಮತ್ತೆ ಪ್ಯಾಡ್ ಕಟ್ಟಿ ಬ್ಯಾಟ್ ಬೀಸಲು ಮುಂದಾದರೆ, ವೇಗಿಗಳು ತಮ್ಮ ಉರಿ ಚೆಂಡಿನ ದಾಳಿಗೆ ಸಿದ್ಧವಾಗುತ್ತಿದ್ದಾರೆ.

    ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 ಪಂದ್ಯದಲ್ಲಿ ಭಾರತ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್, ಬಾಂಗ್ಲಾದೇಶ ಲೆಂಜೆಡ್ಸ್, ಶ್ರೀಲಂಕಾ ಲೆಜೆಂಡ್ಸ್, ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ಸೇರಿ ಒಟ್ಟು 6 ತಂಡಗಳು ಭಾಗವಹಿಸಲಿದೆ.

    ನಿವೃತ್ತಿ ಹೊಂದಿರುವ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಾಂಟಿ ರೋಡ್ಸ್, ಕೆವಿನ್ ಪೀಟರ್ಸನ್, ಜೋನಾಥನ್ ಟ್ರಾಟ್, ಬ್ರಿಯಾನ್ ಲಾರಾ, ಸನತ್ ಜಯಸೂರ್ಯ, ತಿಲಕರತ್ನೆ ದಿಲ್ಶನ್ ಸೇರಿದಂತೆ ಖ್ಯಾತ ನಾಮ ಆಟಗಾರರು ಮತ್ತೆ ಕ್ರಿಕೆಟ್ ಅಂಕಣದಲ್ಲಿ ಎದುರು ಬದುರಾಗಲಿದ್ದಾರೆ.

    ಈ ಮೂಲಕ ನಿವೃತ್ತಿಯಾದ ಬಳಿಕ ತಮ್ಮ ನೆಚ್ಚಿನ ಆಟಗಾರನ ಆಟವನ್ನು ಮಿಸ್ ಮಾಡಿಕೊಂಡಿರುವ ಅಭಿಮಾನಿಗಳಿಗೆ ಮತ್ತೆ ರಂಜಿಸಲು ಈ ಹಿರಿಯ ಆಟಗಾರರು ತಯಾರಾಗಿದ್ದಾರೆ.

  • ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಟೆಸ್ಟ್‌ ಚಾಂಪಿಯನ್‌ ಶಿಪ್‌ ಭಾರತ Vs ಆಸ್ಟ್ರೇಲಿಯಾ – ಫೈನಲ್‌ಗೆ ಯಾರು ಹೋಗ್ತಾರೆ?

    ಅಹಮದಾಬಾದ್: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ರೇಸ್‍ನಿಂದ ಇಂಗ್ಲೆಂಡ್ ಔಟ್ ಆಗಿದ್ದರೂ ಭಾರತ ಮತ್ತು ಆಸ್ಟ್ರೇಲಿಯಾದ ಪೈಕಿ ಯಾರು ಅರ್ಹತೆ ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಮೂರನೇ ಪಂದ್ಯವನ್ನು 10 ವಿಕೆಟ್‌ಗಳಿಂದ ಭಾರತ ಜಯಸಿ 490 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ. 442 ಅಂಕ ಪಡೆದಿರುವ ಇಂಗ್ಲೆಂಡ್‌ 4ನೇ ಸ್ಥಾನದಲ್ಲಿದೆ. 420 ಅಂಕ ಪಡೆದಿರುವ ನ್ಯೂಜಿಲೆಂಡ್‌ 2ನೇ ಸ್ಥಾನ, 332 ಅಂಕ ಹೊಂದಿರುವ ಆಸ್ಟ್ರೇಲಿಯಾ ಮೂರನೇ ಸ್ಥಾನದಲ್ಲಿದೆ.

    ಇಂದಿನ ಪಂದ್ಯವನ್ನು ಭಾರತ ಗೆದ್ದಿದ್ದರೂ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ಅರ್ಹತೆ ಪಡೆಯುತ್ತಾ ಇಲ್ಲವೋ ಇನ್ನುವುದು 4ನೇ ಟೆಸ್ಟ್‌ ಫಲಿತಾಂಶದ ಮೇಲೆ ನಿಂತಿದೆ. ಇದನ್ನೂ ಓದಿ: ಟೆಸ್ಟ್‌ ಚಾಂಪಿಯನ್‌ ಶಿಪ್‌ – ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಕಿಡಿ ಕಾರಿದ್ದು ಯಾಕೆ?

    ನರೇಂದ್ರಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ 4ನೇ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದರೆ ಸುಲಭವಾಗಿ ಅರ್ಹತೆ ಪಡೆಯಲಿದೆ. ಒಂದು ವೇಳೆ ಗೆಲ್ಲದೇ ಇದ್ದರೂ ಕನಿಷ್ಠ ಡ್ರಾ ಮಾಡಿಕೊಂಡರೂ ಭಾರತಕ್ಕೆ ಅವಕಾಶವಿದೆ.

    ಕೊನೆಯ ಪಂದ್ಯವನ್ನು ಭಾರತ ಸೋತರೆ ಇಂಗ್ಲೆಂಡ್‌ ಅರ್ಹತೆ ಪಡೆಯುವುದಿಲ್ಲ ಬದಲಾಗಿ ಆಸ್ಟ್ರೇಲಿಯಾ ಅರ್ಹತೆ ಪಡೆಯಲಿದೆ. ಆಸ್ಟ್ರೇಲಿಯಾ 332 ಅಂಕ ಪಡೆದರೂ ಅರ್ಹತೆ ಪಡೆಯಲು ಕಾರಣವಾಗಿರುವುದು ಪರ್ಸಟೇಜ್‌ ಆಫ್‌ ಪಾಯಿಂಟ್‌.

    ಎರಡನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ 70 ಪಿಸಿಟಿಯೊಂದಿಗೆ ಈಗಾಗಲೇ ಫೈನಲ್‌ ಪ್ರವೇಶಿಸಿದೆ. ಭಾರತ 490 ಅಂಕ ಪಡೆದರೂ 71.0 ಪಿಸಿಟಿ ಹೊಂದಿದೆ. ಅದೇ ಆಸ್ಟ್ರೇಲಿಯಾ 332 ಅಂಕದೊಂದಿಗೆ 69.2 ಪಿಸಿಟಿ ಹೊಂದಿದೆ. ಕೊನೆಯ ಟೆಸ್ಟ್‌ ಪಂದ್ಯವನ್ನು ಭಾರತ ಸೋತರೆ ಪಿಸಿಟಿ ಆಧಾರದ ಮೇಲೆ ಆಸ್ಟ್ರೇಲಿಯಾ ನೇರವಾಗಿ ಫೈನಲ್‌ ಪ್ರವೇಶಿಸಲಿದೆ. ಈ ಕಾರಣಕ್ಕೆ ಭಾರತಕ್ಕೆ ಕೊನೆಯ ಟೆಸ್ಟ್‌ ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು ಗೆಲ್ಲದೇ ಇದ್ದರೂ ಡ್ರಾ ಮಾಡಿಕೊಂಡರೂ ಕಪ್‌ ಜಯಿಸುವುದರ ಜೊತೆಗೆ ಐಸಿಸಿ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ಗೆ ಅವಕಾಶ ಪಡೆಯಲಿದೆ.

  • ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ – ಟೆಸ್ಟ್‌ ಚಾಂಪಿಯನ್‌ ಶಿಪ್‌ನಿಂದ ಇಂಗ್ಲೆಂಡ್‌ ಔಟ್‌

    ಭಾರತಕ್ಕೆ 10 ವಿಕೆಟ್‌ಗಳ ಭರ್ಜರಿ ಜಯ – ಟೆಸ್ಟ್‌ ಚಾಂಪಿಯನ್‌ ಶಿಪ್‌ನಿಂದ ಇಂಗ್ಲೆಂಡ್‌ ಔಟ್‌

    ಅಹಮದಾಬಾದ್‌: ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ನಿಂದ ಇಂಗ್ಲೆಂಡ್‌ ಹೊರಬಿದ್ದಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 49 ರನ್‌ಗಳ ಗುರಿಯನ್ನು ಪಡೆದ ಭಾರತ 7.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಗುರಿಮುಟ್ಟಿತು. ಈ ಗೆಲುವಿನೊಂದಿಗೆ 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ವಿಶ್ವದ ಅತಿ ದೊಡ್ಡದಾದ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯವನ್ನು ಭಾರತ ಜಯಗಳಿಸುವ ಮೂಲಕ ಸ್ಮರಣೀಯವನ್ನಾಗಿಸಿದೆ.

    ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವನ್ನು 145 ರನ್‌ಗಳಿಗೆ ಕಟ್ಟಿ ಹಾಕಿದ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ ಮೊದಲ ಎಸೆತದಲ್ಲಿ ತನ್ನ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಸಾಗಿ 30.4 ಓವರ್‌ಗಳಲ್ಲಿ 81 ರನ್‌ಗಳಿಗೆ ಆಲೌಟ್‌ ಆಯ್ತು. ಇದು ಇಂಗ್ಲೆಂಡ್‌ ಭಾರತದ ವಿರುದ್ಧ ದಾಖಲಿಸಿದ ಕಡಿಮೆ ಮೊತ್ತವಾಗಿದೆ.

     

    ಇಂಗ್ಲೆಂಡ್‌ ಪರ ಬೆನ್‌ ಸ್ಟೋಕ್ಸ್‌ 25 ರನ್‌(34 ಎಸೆತ, 3 ಬೌಂಡರಿ), ನಾಯಕ ಜೋ ರೂಟ್‌ 19 ರನ್‌ ಹೊಡೆದು ಔಟಾದರು. ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್‌ ಕಿತ್ತಿದ್ದ ಅಕ್ಷರ್‌ ಪಟೇಲ್‌ ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್‌ ಕಿತ್ತರು. ಅಶ್ವಿನ್‌ 4, ವಾಷಿಂಗ್ಟನ್‌ ಸುಂದರ್‌ 1 ವಿಕೆಟ್‌ ಪಡೆದರು.

    ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಭಾರತದ ಪರ ರೋಹಿತ್‌ ಶರ್ಮಾ 25 ರನ್(25 ಎಸೆತ, 4 ಬೌಂಡರಿ, 1 ಸಿಕ್ಸರ್‌), ಶುಭಮನ್‌ ಗಿಲ್‌ 15 ರನ್‌( 21 ಎಸೆತ, 1 ಬೌಂಡರಿ, 1 ಸಿಕ್ಸರ್‌) ಹೊಡೆದು ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದಾರೆ. 4ನೇ ಟೆಸ್ಟ್‌ ಪಂದ್ಯ ಇದೇ ಅಂಗಳದಲ್ಲಿ ಮಾರ್ಚ್‌ 4 ರಿಂದ ನಡೆಯಲಿದೆ.

  • ಭಾರತದ ಪರ ದಾಖಲೆ ಬರೆದ ಅಶ್ವಿನ್‌

    ಭಾರತದ ಪರ ದಾಖಲೆ ಬರೆದ ಅಶ್ವಿನ್‌

    ಅಹಮದಾಬಾದ್‌: ಟೀಂ ಇಂಡಿಯಾದ ಸ್ಪಿನ್ನರ್‌ ಆರ್‌ ಅಶ್ವಿನ್‌ ಭಾರತದ ಪರ ದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 400 ವಿಕೆಟ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್‌ ಪಾತ್ರವಾಗಿದ್ದಾರೆ. 77ನೇ ಪಂದ್ಯವನ್ನು ಆಡುತ್ತಿರುವ ಅಶ್ವಿನ್‌ ಇಂಗ್ಲೆಂಡಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ವಿಕೆಟ್‌ ಪಡೆಯುವ ಈ ಸಾಧನೆ ಮಾಡಿದ್ದಾರೆ.

    ವಿಶ್ವದಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌(72) ಮೊದಲ ಸ್ಥಾನದಲ್ಲಿದ್ದಾರೆ.

    400 ವಿಕೆಟ್‌ ಗಡಿ ದಾಟಿದ ಭಾರತದ 4ನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ 619, ಕಪಿಲ್‌ ದೆವ್‌ 434, ಹರ್ಭಜನ್‌ ಸಿಂಗ್‌ 417 ವಿಕೆಟ್‌ ಪಡೆದಿದ್ದಾರೆ.

    ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 4 ವಿಕೆಟ್‌ ಪಡೆದಿದ್ದಾರೆ. ಈ ಪಂದ್ಯಕ್ಕೂ ಮೊದಲು 76 ಪಂದ್ಯಗಳ 142 ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿ 394 ವಿಕೆಟ್‌ ಪಡೆದಿದ್ದರು.

  • ನೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸ್ – ವಿಶೇಷ ಸಾಧನೆಗೈದ ಇಶಾಂತ್ ಶರ್ಮಾ

    ನೂರನೇ ಟೆಸ್ಟ್ ಪಂದ್ಯದಲ್ಲಿ ಸಿಕ್ಸ್ – ವಿಶೇಷ ಸಾಧನೆಗೈದ ಇಶಾಂತ್ ಶರ್ಮಾ

    ಅಹಮದಾಬಾದ್: ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ತಮ್ಮ ಟೆಸ್ಟ್ ವೃತ್ತಿಬದುಕಿನ ಮೊದಲ ಸಿಕ್ಸರ್ ಚಚ್ಚುವ ಮೂಲಕ ಇಶಾಂತ್ ಶರ್ಮಾ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಅವಿಸ್ಮರಣೀಯ ವಾಗಿಸಿಕೊಂಡಿದ್ದಾರೆ.

    ಭಾರತದ ಪರ 194 ವಿವಿಧ ಮಾದರಿಯ ಪಂದ್ಯಗಳನ್ನು ಆಡಿರುವ ಇಶಾಂತ್ ಶರ್ಮಾ 100 ಟೆಸ್ಟ್, 80 ಏಕದಿನ ಮ್ಯಾಚ್ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಾನು ಎದುರಿಸಿದ 2678ನೇ ಎಸೆತದಲ್ಲಿ ಸಿಕ್ಸ್ ಹೊಡೆದಿರುವುದು ವಿಶೇಷ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನ ಮೊಟೆರಾದಲ್ಲಿ ನಡೆಯುತ್ತಿದೆ. ಇದೇ ಮೈದಾನದಲ್ಲಿ ಇಶಾಂತ್ ಶರ್ಮಾ ಭಾರತದ ಪರ 100ನೇ ಟೆಸ್ಟ್ ಪಂದ್ಯವಾಡುತ್ತಿದ್ದು, ಈ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‍ನ ಚೊಚ್ಚಲ ಸಿಕ್ಸರ್ ಸಿಡಿಸಿ ಮಿಂಚಿದ್ದಾರೆ.

    https://twitter.com/VSabarish_22/status/1364887700923289606

    2012ರಲ್ಲಿ ಮೊಟೆರಾದಲ್ಲಿ ವೀರೇಂದ್ರ ಸೆಹ್ವಾಗ್ ಸಿಕ್ಸರ್ ಸಿಡಿಸಿದ ಬಳಿಕ ನವೀಕರಣಗೊಂಡ ವಿಶ್ವದ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಇಶಾಂತ್ ಪಾತ್ರರಾಗಿದ್ದಾರೆ.

    ಭಾರತದ ಪರ 100 ಟೆಸ್ಟ್ ಪಂದ್ಯವಾಡಿದ 11ನೇ ಆಟಗಾರರಾಗಿರುವ ಇಶಾಂತ್, ಕಪಿಲ್ ದೇವ್ ಬಳಿಕ 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಟೀ ಇಂಡಿಯಾದ ವೇಗಿ ಎನ್ನುವ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಹಾಗೆ ಇತ್ತೀಚೆಗೆ ಭಾರತದ ಪರ 300 ವಿಕೆಟ್ ಕಿತ್ತು ಸಾಧನೆ ಮಾಡಿದ್ದರು. ಅವರ ಸಾಧನೆಯ ಹಾದಿಗೆ ಇದೀಗ ಚೊಚ್ಚಳ ಟೆಸ್ಟ್ ಸಿಕ್ಸ್ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಮೈದಾನದಲ್ಲಿ ಮೂಡಿಬಂದಿರುವುದು ವಿಶೇಷವಾಗಿದೆ.

  • 6.3 ಓವರ್ 3 ಮೇಡನ್ 5 ವಿಕೆಟ್ – ಜೋ ರೂಟ್ ಬೌಲಿಂಗ್‍ಗೆ ಭಾರತ ಕ್ಲೀನ್ ಬೌಲ್ಡ್

    6.3 ಓವರ್ 3 ಮೇಡನ್ 5 ವಿಕೆಟ್ – ಜೋ ರೂಟ್ ಬೌಲಿಂಗ್‍ಗೆ ಭಾರತ ಕ್ಲೀನ್ ಬೌಲ್ಡ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಿಂಕ್ ಬಾಲ್ ಟೆಸ್ಟ್ ನ ಎರಡನೇ ದಿನ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೌಲಿಂಗ್ ದಾಳಿಗೆ ಭಾರತ ಬೌಲ್ಡ್ ಆಗಿದೆ.

    ಮೊದಲ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್ ಕಳೆದುಕೊಂಡು 99 ರನ್‍ಗಳಿಸಿತ್ತು. ಎರಡನೇ ದಿನ ಬ್ಯಾಟಿಂಗ್ ಮುಂದುವರಿಸಿದ ಭಾರತದ ಪಾಲಿಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ವಿಲನ್ ಆದರು. 6.2 ಓವರ್ ಎಸೆದ ರೂಟ್ 3 ಮೇಡನ್ ಓವರ್ ಸಹಿತ 5 ವಿಕೆಟ್ ಕಿತ್ತು ಭಾರತದ ಬೃಹತ್ ಮುನ್ನಡೆಯ ಕನಸಿಗೆ ತಣ್ಣಿರೆರಚಿದರು.

    ಭಾರತ ಪರ ರೋಹಿತ್ ಶರ್ಮಾ 66 ರನ್(96 ಎಸೆತ, 11 ಬೌಂಡರಿ) ಹೊಡೆದದನ್ನು ಹೊರತು ಪಡಿಸಿ, ಬೇರೆ ಯಾವುದೇ ಬ್ಯಾಟ್ಸ್‍ಮ್ಯಾನ್ ಇಂಗ್ಲೆಂಡ್ ಬೌಲರ್ ಗಳ  ದಾಳಿಗೆ ತಡೆಯೊಡ್ಡುವ ಪ್ರಯತ್ನಕ್ಕೆ ಮುಂದಾಗಲಿಲ್ಲ. ಅಂತಿಮವಾಗಿ ಭಾರತ ನಿನ್ನೆಯ ಮೊತ್ತಕ್ಕೆ 46 ರನ್ ಸೇರಿಸಿ 145 ರನ್‍ಗೆ ಸರ್ವಪತನ ಕಂಡಿತು.

    ಇಂಗ್ಲೆಂಡ್ ಪರ ಜೋ ರೂಟ್ 5 ವಿಕೆಟ್ ಕಬಳಿಸಿ ಮಿಂಚಿದರು. ಸ್ಪಿನ್ನರ್ ಜೇಕ್ ಲಿಚ್ 4 ವಿಕೆಟ್ ಪಡೆದರೆ, ಇನ್ನೂಳಿದ ಒಂದು ವಿಕೆಟ್ ಜೊಫ್ರಾ ಆರ್ಚರ್ ಪಾಲಾಯಿತು.