Tag: england

  • ಇಂಗ್ಲೆಂಡ್ ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾದಿಂದ  ಶುಭಮನ್ ಗಿಲ್ ಔಟ್

    ಇಂಗ್ಲೆಂಡ್ ಸರಣಿ ಆರಂಭಕ್ಕೂ ಮೊದಲೇ ಟೀಂ ಇಂಡಿಯಾದಿಂದ ಶುಭಮನ್ ಗಿಲ್ ಔಟ್

    ಲಂಡನ್: ಭಾರತ ಟೆಸ್ಟ್ ವಿಶ್ವಚಾಂಪಿಯನ್‍ಶಿಪ್ ಫೈನಲ್ ಸೋತ ಬಳಿಕ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿಮಾಡಿಕೊಳ್ಳುತ್ತಿದೆ. ಈ ನಡುವೆ ಇದೀಗ ಭಾರತ ತಂಡದ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಗಾಯದಿಂದಾಗಿ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ.

    ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ತಂಡ ಆಡಲಿದೆ. ಆದರೆ ಇದೀಗ ಸರಣಿ ಆರಂಭಕ್ಕೂ ಮೊದಲೇ ತಂಡದ ಅರಂಭಿಕ ಆಟಗಾರ ಶುಭಮನ್ ಗಿಲ್ ಗಾಯಗೊಂಡು ಮಹತ್ವದ ಪಂದ್ಯದಿಂದ ಹೊರಬಿದ್ದಿದ್ದಾರೆ. ಇವರಿಗೆ ಬದಲಿ ಆಟಗಾರನಾಗಿ ಅಭಿಮನ್ಯು ಈಶ್ವರನ್ ಈಗಾಗಲೇ ತಂಡದಲ್ಲಿದ್ದಾರೆ ಎಂದು ಬಿಸಿಸಿಐ ಮೂಲಗಳಿಂದ ವರದಿಯಾಗಿದೆ.

    ಗಿಲ್ ಗಾಯಗೊಂಡರೂ ಕೂಡ ಆಸ್ಟ್ರೇಲಿಯಾದಲ್ಲೇ ಉಳಿದುಕೊಳ್ಳಲಿದ್ದಾರೆ. ಇದೀಗ ಗಿಲ್ ಅವರ ಸ್ಥಾನವನ್ನು ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರಲ್ಲಿ ಒಬ್ಬರು ತುಂಬುವ ಭರವಸೆ ಇದೆ, ಈ ಇಬ್ಬರಲ್ಲಿ ಒಬ್ಬರು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಇದನ್ನೂ ಓದಿ: ಬಾಲಕಿಯ ಚಿಕಿತ್ಸೆಗಾಗಿ ಡಬ್ಲ್ಯುಟಿಸಿ ಫೈನಲ್‍ನಲ್ಲಿ ಆಡಿದ ಜೆರ್ಸಿಯನ್ನು ಹರಾಜಿಗಿಟ್ಟ ಆಟಗಾರ

    ಗಿಲ್ ಈಗಾಗಲೇ ಭಾರತ ತಂಡದ ಪರವಾಗಿ ಒಟ್ಟು 8 ಟೆಸ್ಟ್ ಪಂದ್ಯಗಳನ್ನು ಆಡಿ 31.84ರ ಸರಾಸರಿಯಲ್ಲಿ 3 ಅರ್ಧಶತಕ ಸಹಿತ 414 ರನ್ ಸಿಡಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್‍ನಲ್ಲಿ ಕೂಡ ಆರಂಭಿಕರಾಗಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಎರಡು ಇನ್ನಿಂಗ್ಸ್ ಸೇರಿ ಒಟ್ಟು 36 ರನ್ ಗಳಿಸುವ ಮೂಲಕ ವಿಫಲತೆ ಅನುಭವಿಸಿದ್ದರು.

    ಗಿಲ್ ಅವರ ಬದಲಿಗೆ ಇದೀಗ ತಂಡದಲ್ಲಿ ಸ್ಥಾನ ಪಡೆದಿರುವ ಅಭಿಮನ್ಯು ಈಶ್ವರನ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 54 ಪಂದ್ಯಗಳಿಂದ 13 ಶತಕ ಮತ್ತು 18 ಅರ್ಧಶತಕ ಸಹಿತ 4401ರನ್ ಗಳಿಸಿದ್ದಾರೆ.

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಆಗಸ್ಟ್ 4 ರಂದು ನಾಟಿಂಗ್ ಹ್ಯಾಮ್ ನ ಟ್ರೆಂಟ್ ಬ್ರಿಡ್ಜ್ ನಲ್ಲಿ ಆರಂಭಗೊಳ್ಳಲಿದೆ.

  • 7 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಸಜ್ಜಾದ ಭಾರತ ಮಹಿಳಾ ತಂಡ

    7 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲು ಸಜ್ಜಾದ ಭಾರತ ಮಹಿಳಾ ತಂಡ

    ಲಂಡನ್: ಭಾರತದ ಪುರುಷರ ತಂಡ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಆಡಲು ಸಿದ್ಧತೆ ಮಾಡಿಕೊಂಡರೆ ಇತ್ತ ಭಾರತ ಮಹಿಳಾ ತಂಡ 7 ವರ್ಷಗಳ ಬಳಿಕ ನಡೆಯುತ್ತಿರುವ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸಿದೆ.

    ಭಾರತ ಮಹಿಳಾ ತಂಡ 2014ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯವನ್ನು ಆಡಿತ್ತು. ಬಳಿಕ ಇದೀಗ 7 ವರ್ಷಗಳ ನಂತರ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೆ ಸಿದ್ಧತೆ ಮಾಡಿಕೊಂಡಿದೆ. ಇಂದಿನಿಂದ ಅತಿಥೇಯ ಇಂಗ್ಲೆಂಡ್ ವಿರುದ್ಧ ಬ್ರಿಸ್ಟಲ್‍ನಲ್ಲಿ ಏಕೈಕ ಟೆಸ್ಟ್ ಪಂದ್ಯಾಟ ನಡೆಯಲಿದೆ. ಇದನ್ನೂ ಓದಿ: ಏಕದಿನ ಕ್ರಿಕೆಟ್‌ನಲ್ಲಿ ಮಿಥಾಲಿ ರಾಜ್‌ ವಿಶ್ವದಾಖಲೆ

    ಭಾರತ ತಂಡ 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಬಳಿಕ ಇಲ್ಲಿವರೆಗೆ ಟೆಸ್ಟ್ ಪಂದ್ಯ ಆಡಿಲ್ಲ. ಇದೀಗ 7 ವರ್ಷಗಳ ಬಳಿಕ ಮತ್ತೆ ಮಹಿಳಾ ತಂಡ ಟೆಸ್ಟ್ ಪಂದ್ಯವಾಡುತ್ತಿದೆ. ಅಂದು ತವರಿನಲ್ಲಿ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಭಾರತ ತಂಡದ ನಾಯಕಿಯಾಗಿದ್ದರು. ಇದೀಗ ಕೂಡ ಮಿಥಾಲಿ ರಾಜ್ ಅವರೆ ಭಾರತ ತಂಡದ ನಾಯಕಿಯಾಗಿದ್ದಾರೆ. ಅದಲ್ಲದೆ ಅಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಜಯಗಳಿಸಿತ್ತು. ಆ ತಂಡದಲ್ಲಿದ್ದ ಭಾರತದ ಏಳು ಆಟಗಾರ್ತಿಯರು ಈಗ ಭಾರತ ತಂಡದಲ್ಲಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾಗಿರುವ ಭಾರತ ಮಹಿಳಾ ತಂಡದಲ್ಲಿ ಹಿರಿಯ ಮತ್ತು ಕಿರಿಯ ಆಟಗಾರ್ತಿಯರು ಇದ್ದಾರೆ. ಅನುಭವಿ ಆಟಗಾರ್ತಿಯಾರಾದ ಹರ್ಮನ್ ಪ್ರೀತ್ ಕೌರ್, ಸ್ಮತಿ ಮಂಧನಾ, ವೇಗಿ ಜೂಲನ್ ಗೋಸ್ವಾಮಿ ಇದ್ದರೆ ಕಿರಿಯ ಆಟಗಾರ್ತಿಯಾಗಿ ತಂಡದಲ್ಲಿ 17 ವರ್ಷದ ಶಫಾಲಿ ವರ್ಮ ಕೂಡ ಸ್ಥಾನ ಪಡೆದಿದ್ದಾರೆ. ಹಾಗಾಗಿ ಈ ಟೆಸ್ಟ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ.  ಇದನ್ನೂ ಓದಿ: ರೋಹಿತ್ ಶರ್ಮಾ, ಕೊಹ್ಲಿ ಹಿಂದಿಕ್ಕಿದ ಮಿಥಾಲಿ ರಾಜ್

    ಭಾರತ ತಂಡದಂತೆ ಇಂಗ್ಲೆಂಡ್ ತಂಡ ಕೂಡ ಬಲಿಷ್ಠವಾಗಿ ಗೋಚರಿಸುತ್ತಿದ್ದು, ಭಾರತ ತಂಡದ ಮೇಲೆ ಒಂದು ಕಣ್ಣಿಟ್ಟಿದೆ. ಈಗಾಗಲೇ ಇಂಗ್ಲೆಂಡ್ ಆಟಗಾರ್ತಿಯರು ಭಾರತ ತಂಡದ ಆಟಗಾರ್ತಿಯರ ಬಗ್ಗೆ ಎಚ್ಚರಿಕೆಯ ಮಾತನಾಡಿದ್ದಾರೆ.

  • ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍

    ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್‍

    ಲಂಡನ್: 9 ವರ್ಷದ ಹಿಂದೆ ಮಾಡಲಾಗಿದ್ದ ಟ್ವೀಟ್‍ಗಳೇ ಈಗ ಇಂಗ್ಲೆಂಡ್ ತಂಡದ ಪ್ರತಿಭಾನ್ವಿತ ಬೌಲರ್ ಒಲಿ ರಾಬಿನ್ಸನ್ ಕ್ರಿಕೆಟ್ ಜೀವನಕ್ಕೆ ಮುಳುವಾಗಿದೆ.

    2012 ರಲ್ಲಿ ಜನಾಂಗೀಯ ನಿಂದನೆ ಮತ್ತು ಸೆಕ್ಸಿಸ್ಟ್ ಟ್ವೀಟ್ ಒಲಿ ರಾಬಿನ್ಸನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ಅಮಾನತು ಮಾಡಿದೆ.

    ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ರಾಬಿನ್ಸನ್ ಬ್ಯಾಟಿಂಗ್ ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ಸ್‍ನಲ್ಲಿ 4 ವಿಕೆಟ್ ಎರಡನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲದೇ ಮೊದಲ ಇನ್ನಿಂಗ್ಸ್ ನಲ್ಲಿ 42 ರನ್ ಹೊಡೆದಿದ್ದರು. ಇದನ್ನೂ ಓದಿ : ಧೋನಿ ಬಗ್ಗೆ ಅಚ್ಚರಿ ಮಾತು – ಕೊಹ್ಲಿಗೆ ಅಭಿಮಾನಿಗಳಿಂದ ಚಪ್ಪಾಳೆ

    ಈ ಪಂದ್ಯದ ಸಮಯದಲ್ಲೇ 2013ರಲ್ಲಿ ರಾಬಿನ್ಸನ್ ಮಾಡಿದ ಟ್ವೀಟ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಿಂದ ಅವರನ್ನು ಕೈಬಿಡಲಾಗಿದೆ.

    “ಇಂಗ್ಲೆಂಡ್ ಮತ್ತು ಸಸೆಕ್ಸ್ ಬೌಲರ್ ಆಲ್ಲಿ ರಾಬಿನ್ಸನ್ ಅವರನ್ನು 2012 ಮತ್ತು 2013 ರಲ್ಲಿ ಟ್ವೀಟ್ ಹಿನ್ನೆಲೆಯಲ್ಲಿ  ಅಂತರಾಷ್ಟ್ರೀಯ ಮಾದರಿ ಪಂದ್ಯಗಳಿಂದ ಅಮಾನತು ಮಾಡಲಾಗಿದೆ” ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ತನ್ನ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಬಿನ್ಸನ್, ನಾನು ವರ್ಣಭೇದ ನೀತಿ ಪರ ಇಲ್ಲ ಮತ್ತು ಸೆಕ್ಸಿಸ್ಟ್ ಅಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಈ ಟ್ವೀಟ್ ಗಳಿಗೆ ತೀವ್ರವಾಗಿ ವಿಷಾದಿಸುತ್ತೇನೆ ಮತ್ತು ಆ ರೀತಿಯ ಟೀಕೆ ಮಾಡಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಆ ಸಮಯದಲ್ಲಿ ನಾನು ಚಿಂತನೆ ಮಾಡದೇ ಬೇಜವಾಬ್ದಾರಿ ನಡೆದುಕೊಂಡಿದ್ದು ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಈಗ ನಾನು ವ್ಯಕ್ತಿಯಾಗಿ ಪ್ರಬುದ್ಧನಾಗಿದ್ದು ಆ ಟ್ವೀಟ್‍ಗಳಿಗೆ ನಾನು ಸಂಪೂರ್ಣವಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದ್ದರು.

    https://twitter.com/sawerapasha/status/1401636139656695809

    27 ವರ್ಷದ ರಾಬಿನ್ಸನ್ ಬಲಗೈ ವೇಗದ ಬೌಲರ್ ಜೊತೆಗೆ ಬಲಗೈ ಬ್ಯಾಟ್ಸ್ ಮನ್ ಆಗಿದ್ದರು. 2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ್ದರು.

  • ಕಪಿಲ್ ದೇವ್ ದಾಖಲೆ ಮುರಿಯುವ ತವಕದಲ್ಲಿ ಜಸ್ಪ್ರೀತ್ ಬುಮ್ರಾ

    ಕಪಿಲ್ ದೇವ್ ದಾಖಲೆ ಮುರಿಯುವ ತವಕದಲ್ಲಿ ಜಸ್ಪ್ರೀತ್ ಬುಮ್ರಾ

    ಲಂಡನ್: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಮಾಜಿ ವೇಗದ ಬೌಲರ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.
    ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಪರವಾಗಿ ಅತೀ ವೇಗವಾಗಿ 100 ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆ ಮಾಡಿದ್ದಾರೆ. ಈ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶ ಬುಮ್ರಾ ಪಾಲಿಗೆ ಒಲಿದುಬಂದಿದೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ

    ಕಪಿಲ್ ದೇವ್ 100 ವಿಕೆಟ್ ಪಡೆಯಲು 25 ಪಂದ್ಯಗಳನ್ನು ಆಡಿದ್ದರು. ಆದರೆ ಇದೀಗ ಬುಮ್ರಾ ಈಗಾಗಲೇ 19 ಟೆಸ್ಟ್ ಪಂದ್ಯಗಳಿಂದ 83 ವಿಕೆಟ್ ಪಡೆದಿದ್ದಾರೆ. ಇನ್ನೂ ಕೇವಲ 17 ವಿಕೆಟ್ ಪಡೆದರೆ ಕಪಿಲ್ ದೇವ್ ಅವರ ದಾಖಲೆ ಮುರಿಯಬಹುದಾಗಿದೆ. ಕಪಿಲ್ ದೇವ್ ಬಳಿಕ ವೇಗವಾಗಿ 100 ವಿಕೆಟ್ ಕಿತ್ತ ಸಾಧನೆ ಇರ್ಫಾನ್ ಪಠಾಣ್ ಪಾಲಾಗಿದೆ. ಪಠಾಣ್ 100 ವಿಕೆಟ್ ಕಬಳಿಸಲು 28 ಪಂದ್ಯಗಳನ್ನು ಆಡಿದ್ದರು. ನಂತರ 29 ಪಂದ್ಯಗಳಿಂದ ಮೊಹಮ್ಮದ್ ಶಮಿ 100 ವಿಕೆಟ್ ಸಾಧನೆ ಮಾಡಿದ್ದಾರೆ.

    ಬುಮ್ರಾ, ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪಿಚ್‍ಗಳು ವೇಗಿಗಳಿಗೆ ನೆರವು ನೀಡುವುದರಿಂದಾಗಿ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ವಿಕೆಟ್ ಟೇಕಿಂಗ್ ಬೌಲರ್ ಆಗುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಹಾಗಾಗಿ ಬುಮ್ರಾ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಬಹುದೆಂದು ನಿರೀಕ್ಷೆ ಇಡಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ 

    ಭಾರತ ತಂಡದ ಪರವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 100 ವಿಕೆಟ್ ಕಿತ್ತ ದಾಖಲೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿದೆ. ಅಶ್ವಿನ್ ಕೇವಲ 19 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದಾರೆ. ನಂತರ ಎರಪಳ್ಳಿ ಪ್ರಸನ್ನ 20 ಪಂದ್ಯಗಳಿಂದ, ಅನಿಲ್ ಕುಂಬ್ಳೆ 21 ಪಂದ್ಯಗಳಿಂದ 100 ವಿಕೆಟ್ ಸಾಧನೆ ಮಾಡಿದ್ದಾರೆ.

  • ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ಗೆ ಭಾರತ ತಂಡ ಪ್ರಕಟ -ಮೂವರು ಕನ್ನಡಿಗರಿಗೆ ಸ್ಥಾನ

    ಮುಂಬೈ: ಇಂಗ್ಲೆಂಡ್‍ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ತಂಡವನ್ನು ಆಯ್ಕೆ ಮಾಡಿದೆ. ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ.

    ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (ಡಬ್ಲ್ಯುಟಿಸಿ) ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಬಿಸಿಸಿಐ 20 ಸದಸ್ಯರ ತಂಡವನ್ನು ಪ್ರಕಟಿಸಿದೆ. ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಬ್ಲ್ಯುಟಿಸಿ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಭಾರತ ಟೆಸ್ಟ್ ತಂಡದಲ್ಲಿ ಕರ್ನಾಟಕದ ಕೆ.ಎಲ್ ರಾಹುಲ್, ಮಯಾಂಕ್ ಅಗರ್‍ವಾಲ್ ಮತ್ತು ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದುಕೊಂಡಿದ್ದಾರೆ.

    ಇಂಗ್ಲೆಂಡ್‍ನ ಸೌತಾಂಪ್ಟನ್‍ನಲ್ಲಿ ನಡೆಯಲಿರುವ ಪಂದ್ಯಾಟಕ್ಕಾಗಿ ಬಿಸಿಸಿಐ ಒಟ್ಟು 20 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. 4 ಆಟಗಾರರನ್ನು ಮೀಸಲು ಆಟಗಾರರನ್ನಾಗಿ ಇರಿಸಲಾಗಿದೆ. ಯಾವುದೇ ಹೊಸ ಮುಖಗಳು ತಂಡದಲ್ಲಿ ಕಾಣಿಸಿಕೊಂಡಿಲ್ಲ. ಹಿರಿಯ ಅಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ಅವರಿಗೆ ತಂಡದಿಂದ ಕೊಕ್ ನೀಡಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್‍ನ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 5ಪಂದ್ಯಗಳ ಟೆಸ್ಟ್ ಸರಣಿಗೆ ಇದೇ ತಂಡವನ್ನು ಅಂತಿಮಗೊಳಿಸಲಾಗಿದ್ದು, ಜೂನ್ 18 ರಿಂದ 22 ರವರೆಗೆ ನಡೆಯಲಿರುವ ಟೆಸ್ಟ್ ಚಾಂಪಿಯನ್‍ಶಿಪ್ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ ಆಡಳಿದೆ.

    ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್.ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್ಪ್ರಿತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮಹಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್.ರಾಹುಲ್ (ಫಿಟ್‍ನೆಸ್ ಕ್ಲಿಯರೆನ್ಸ್ ಬಳಿಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್- ಫಿಟ್‍ನೆಸ್ ಕ್ಲಿಯರೆನ್ಸ್ ಬಳಿಕ).

    ಮೀಸಲು ಆಟಗಾರರು: ಅಭಿಮಾನ್ಯ ಈಶ್ವರನ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಅರ್‍ಝನ್ ನಾಗಸ್‍ವಾಲ

  • ಕೊರೊನಾ ತಲ್ಲಣ – ಭಾರತದ ಪ್ರವಾಸ ರದ್ದುಗೊಳಿಸಿದ ಯುಕೆ ಪಿಎಂ ಬೋರಿಸ್ ಜಾನ್ಸನ್

    ಕೊರೊನಾ ತಲ್ಲಣ – ಭಾರತದ ಪ್ರವಾಸ ರದ್ದುಗೊಳಿಸಿದ ಯುಕೆ ಪಿಎಂ ಬೋರಿಸ್ ಜಾನ್ಸನ್

    ನವದೆಹಲಿ: ದೇಶದಲ್ಲಿ ಕೊರೊನಾ ಸ್ಫೋಟ ಹಿನ್ನೆಲೆ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಭಾರತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ. ಏಪ್ರಿಲ್ 25ರಂದು ಬೋರಿಸ್ ಜಾನ್ಸನ್ ಭಾರತಕ್ಕೆ ಬರುವ ಸಮಯ ನಿಗದಿಯಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ಸಮಯ ನಿಗದಿಗೊಳಿಸೋದಾಗಿ ಇಂಗ್ಲೆಂಡ್ ಪ್ರಧಾನಿಗಳ ಕಚೇರಿ ಸ್ಪಷ್ಟನೆ ನೀಡಿದೆ.

    ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಎರಡು ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗುತ್ತಿದ್ದು, ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಭಾರತದ ಪ್ರವಾಸ ರದ್ದುಗೊಳಿಸಬೇಕೆಂದು ಇಂಗ್ಲೆಂಡ್ ವಿಪಕ್ಷಗಳು ಆಗ್ರಹಿಸಿದ್ದವು.

    ಜಾನ್ಸನ್ ಅವರು ಆನ್‍ಲೈನ್ ಮೂಲಕ ಭಾರತದ ಪಿಎಂ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ ಎಂದು ಲೇಬರ್ ಪಾರ್ಟಿ ಪ್ರಧಾನಿಗಳಿಗೆ ಸಲಹೆ ನೀಡಿತ್ತು.

    ಇಂತಹ ಸಂದರ್ಭದಲ್ಲಿ ಪಿಎಂ ಜಾನ್ಸನ್ ಮಾದರಿಯಾಗಿರಬೇಕು. ಭಾರತ ಪ್ರವಾಸದಿಂದ ದೇಶದ ಜನತೆಗೆ ತಪ್ಪು ಸಂದೇಶ ರವಾನೆ ಆಗುವ ಸಾಧ್ಯತೆಗಳಿವೆ. ಈ ಪ್ರವಾಸವನ್ನ ಸದ್ಯದ ಮಟ್ಟಿಗೆ ಮುಂದೂಡುವುದು ಉತ್ತಮ. ಭಾರತಕ್ಕೆ ಹೋಗುವ ಬದಲು ಝೂಮ್ ನಲ್ಲಿ ಸಭೆ ನಡೆಸಿ ಎಂದು ಲೇಬರ್ ಪಾರ್ಟಿಯ ಶೈಡೋ ಕಮ್ಯೂನಿಟಿ ಸೆಕ್ರಟರಿ ಸ್ವೀವ್ ರೀಡ್ ಆಗ್ರಹಿಸಿದ್ದರು.

    ಇದಕ್ಕೂ ಮೊದಲು ಜನವರಿ 26ಕ್ಕೆ ಜಾನ್ಸನ್ ಅವರ ಭಾರತದ ಪ್ರವಾಸ ನಿಗದಿಯಾಗಿತ್ತು. ಅದು ಸಹ ಕಾರಣಾಂತರಗಳಿಂದ ರದ್ದುಗೊಂಡಿತ್ತು. ಇದೀಗ ಎರಡನೇ ಬಾರಿ ಪ್ರವಾಸ ರದ್ದಾಗಿದೆ. 2019ರ ಬ್ರಿಟನ್ ಚುನಾವಣೆ ಬಳಿಕ ಜಾನ್ಸನ್ ಅವರ ಮೊದಲ ಅತಿ ಸುದೀರ್ಘ ವಿದೇಶ ಪ್ರವಾಸ ಇದಾಗಿತ್ತು.

  • ಇಂಗ್ಲೆಂಡ್‍ನ ವಿಶ್ವ ಒಕ್ಕಲಿಗರ ಪರಿಷತ್‍ಗೆ ಡಿಸಿಎಂ ಚಾಲನೆ

    ಇಂಗ್ಲೆಂಡ್‍ನ ವಿಶ್ವ ಒಕ್ಕಲಿಗರ ಪರಿಷತ್‍ಗೆ ಡಿಸಿಎಂ ಚಾಲನೆ

    ಬೆಂಗಳೂರು/ಲಂಡನ್: ಇಂಗ್ಲೆಂಡ್‍ನಲ್ಲಿ ನೆಲೆಸಿರುವ ಒಕ್ಕಲಿಗ ಸಮುದಾಯದವರು ಸ್ಥಾಪನೆ ಮಾಡಿರುವ ವಿಶ್ವ ಒಕ್ಕಲಿಗರ ಪರಿಷತ್ತನ್ನು ಶನಿವಾರ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಉದ್ಘಾಟಿಸಿದರು.

    ವರ್ಚುಯಲ್ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದಲೇ ಪಾಲ್ಗೊಂಡ ಅವರು, ಉದ್ಘಾಟನಾ ಸಮಾರಂಭದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಯುಗಾದಿ ಉತ್ಸವಕ್ಕೂ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಇಂಗ್ಲೆಂಡ್ ಸೇರಿದಂತೆ ಜಗತ್ತಿನ ನಾನಾ ದೇಶಗಳಲ್ಲಿ ನೆಲೆಸಿರುವ ಒಕ್ಕಲಿಗ ಬಂಧುಗಳ ಸಾಧನೆಯಿಂದ ಸ್ವದೇಶದಲ್ಲಿರುವ ನಮಗೆಲ್ಲರಿಗೂ ಹೆಮ್ಮೆಯಾಗಿದೆ. ಹುಟ್ಟಿದ ನೆಲದಲ್ಲಿ ಉದ್ಯಮ ಸ್ಥಾಪಿಸುವುದೋ ಅಥವಾ ಯಾವುದಾದರೂ ಉಪಯುಕ್ತ ಯೋಜನೆ ಹಾಕಿಕೊಂಡರೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

    ಕೃಷಿ ಮೂಲಕ ಅನ್ನ ನೀಡುವ ಒಕ್ಕಲಿಗರು ಎಲ್ಲರಿಗೂ ಆದರ್ಶವಾಗಿದ್ದಾರೆ. ಇಂಥ ಸಮುದಾಯದಲ್ಲೂ ಕಷ್ಟದಲ್ಲಿರುವವರು ಇದ್ದಾರೆ. ಅಂಥವರ ನೆರೆವಿಗೆ ತಾವು ಧಾವಿಸಬೇಕು. ಸಮುದಾಯವನ್ನು ಎಲ್ಲ ರೀತಿಯಲ್ಲೂ ಸಬಲೀಕರಣ ಮಾಡಬೇಕಿದೆ. ಅದಕ್ಕಾಗಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ ಎಂದು ಅನಿವಾಸಿ ಒಕ್ಕಲಿಗರಿಗೆ ಕರೆ ನೀಡಿದರು.

    ಲಂಡನ್‍ನಲ್ಲಿ ವಿಶ್ವ ಒಕ್ಕಲಿಗರ ಪರಿಷತ್ತು ಸ್ಥಾಪನೆ ಅತ್ಯಂತ ಅರ್ಥಪೂರ್ಣ ಕೆಲಸವಾಗಿದೆ. ಈ ಮೂಲಕ ಭವಿಷ್ಯ ಅರಸಿಕೊಂಡು ಇಂಗ್ಲೆಂಡ್‍ಗೆ ಬರುವ ತಾಯ್ನಾಡಿನ ಪ್ರತಿಭೆಗಳಿಗೆ ಪರಿಷತ್ತು ನೆರವಾಗಲಿ ಎಂಬ ಆಶಯ ನನ್ನದು ಎಂದರು. ಬಿಜೆಪಿ ಮುಖಂಡರಾದ ಅಶ್ವತ್ಥ ನಾರಾಯಣ ಹಾಜರಿದ್ದರು.

  • ಆರ್‌ಸಿಬಿಗೆ ಕನ್ನಡದಲ್ಲಿ ಟ್ವೀಟ್ ಮಾಡಿ ಹುರಿದುಂಬಿಸಿದ ಇಂಗ್ಲೆಂಡ್ ಆಟಗಾರ್ತಿ

    ಆರ್‌ಸಿಬಿಗೆ ಕನ್ನಡದಲ್ಲಿ ಟ್ವೀಟ್ ಮಾಡಿ ಹುರಿದುಂಬಿಸಿದ ಇಂಗ್ಲೆಂಡ್ ಆಟಗಾರ್ತಿ

    ಬೆಂಗಳೂರು: ಐಪಿಎಲ್‍ನಲ್ಲಿ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿರುವ ತಂಡ ಆರ್‌ಸಿಬಿ. ಪ್ರತಿ ಬಾರಿ ಕಪ್ ಗೆಲ್ಲಲು ವಿಫಲವಾದರು ಕೂಡ ಅಭಿಮಾನಿಗಳ ಹೃದಯ ಮಾತ್ರ ಗೆಲ್ಲುತ್ತದೆ. ಇದೀಗ ಆರ್‌ಸಿಬಿಯ ಕಟ್ಟ ಅಭಿಮಾನಿ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ಆರ್‌ಸಿಬಿ ತಂಡಕ್ಕೆ ಹುರಿದುಂಬಿಸಿದ್ದಾರೆ.

    ಐಪಿಎಲ್‍ನ 13 ಆವೃತ್ತಿಗಳಲ್ಲಿಯೂ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ವಿಫಲವಾಗಿರುವ ಕೊಹ್ಲಿ ನಾಯಕತ್ವದ ಆರ್‌ಸಿಬಿ ತಂಡ. 14ನೇ ಆವೃತ್ತಿಯ ಮೊದಲ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಹೊಸ ಹುರುಪಿನೊಂದಿಗಿದೆ. ಆರ್‌ಸಿಬಿ ಇಂದು ಹೈದರಾಬಾದ್ ತಂಡದ ವಿರುದ್ಧ ಎರಡನೇ ಪಂದ್ಯವಾಡುತ್ತಿದ್ದು, ಈ ಪಂದ್ಯಕ್ಕೂ ಮೊದಲು ಇಂಗ್ಲೆಂಡ್ ಆಟಗಾರ್ತಿ  ತಂಡಕ್ಕೆ ‘ಈ ಸಲ ಕಪ್ ನಮ್ದೇ’ ಎಂದು ಬರೆದು ರೆಡ್ ಹಾರ್ಟ್ ಎಮೋಜಿಯನ್ನು ಹಾಕಿಕೊಂಡಿದ್ದಾರೆ.

    ಅದರಲ್ಲೂ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡದಲ್ಲೇ ಟ್ವೀಟ್ ಮಾಡಿರುವುದು ಆರ್‌ಸಿಬಿ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದು, ಅವರ ಟ್ವೀಟ್ ಅನ್ನು ಸಾವಿರಾರು ಜನ ಲೈಕ್ ಮತ್ತು ರೀಟ್ವೀಟ್ ಮಾಡಿದ್ದಾರೆ. ಇದಕ್ಕೂ ಮಿಗಿಲಾಗಿ ಈ ಒಂದು ಟ್ವೀಟ್‍ನಿಂದಾಗಿ ಅಲೆಕ್ಸಾಂಡ್ರಾ ಹಾರ್ಟ್ಲಿ ಕನ್ನಡಿಗರ ಮನಗೆದ್ದಿದ್ದಾರೆ.

  • ಈರುಳ್ಳಿ ಗ್ರೇವಿಗಾಗಿ ಹೆಲಿಕಾಪ್ಟರ್‌ನಲ್ಲಿ  130  ಕಿ.ಮೀ ಪ್ರಯಾಣಿಸಿದ ಭೂಪ

    ಈರುಳ್ಳಿ ಗ್ರೇವಿಗಾಗಿ ಹೆಲಿಕಾಪ್ಟರ್‌ನಲ್ಲಿ 130 ಕಿ.ಮೀ ಪ್ರಯಾಣಿಸಿದ ಭೂಪ

    ಲಂಡನ್: ಕೊರೊನಾ ಲಾಕ್‍ಡೌನ್ ವೇಳೆ ತನಗಿಷ್ಟವಾದ ಸ್ಯಾಂಡ್‍ವಿಚ್ ತಿನ್ನಲು ಹೆಲಿಕಾಪ್ಟರ್‌ನಲ್ಲಿ 130 ಕಿಲೋಮೀಟರ್ ಬಂದಿರುವ ವ್ಯಕ್ತಿಯ ವೀಡಿಯೋ ಇದೀಗ ವೈರಲ್ ಆಗಿದೆ.

    ವ್ಯಕ್ತಿಯೊಬ್ಬರು ಲಾಕ್‍ಡೌನ್ ವೇಳೆ ಈರುಳ್ಳಿ ಗ್ರೇವಿಗಾಗಿ ಹೆಲಿಕಾಪ್ಟರ್‍ನಲ್ಲಿ ಹೋಗಿದ್ದರು. ಅಲ್ಲದೇ ಇದನ್ನು ಪಡೆಯುತ್ತಿರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ನಮ್ಮ ಗ್ರಾಹಕರು ಈರುಳ್ಳಿ ಗ್ರೇವಿ, ರೋಸ್ಟ್ ಬೀಫ್ ಸಂಗ್ರಹಿಸಲು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರು ಎಂದು ಯುಕೆ ಪಾರ್ಮ್‍ಶಾಪ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡು ವೀಡಿಯೋವನ್ನು ಹಂಚಿಕೊಂಡಿದೆ.

    ಕಳೆದ ಕೆಲವು ದಿನಗಳ ಹಿಂದೆ ಮಹಿಳೆಯೊಬ್ಬರು ಬರ್ಗರ್ ತಿನ್ನಲು ಬರೊಬ್ಬರಿ 160 ಕಿ.ಮೀ ಹೋಗಿದ್ದರು. ಕೋವಿಡ್ ಸಮಯದಲ್ಲಿ ಅನಾವಶ್ಯಕವಾಗಿ ಓಡಾಟ ಮಾಡಿದ್ದಕ್ಕಾಗಿ ಪೊಲೀಸರಿಗೆ ದಂಡವನ್ನು ಕಟ್ಟುವ ಮೂಲಕವಾಗಿ ಸುದ್ದಿಯಾಗಿದ್ದರು.

  • ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಶಿಖರ್‌ ಧವನ್‌ಗೆ ನಮಸ್ಕರಿಸಿ ಅಡ್ಡ ಬಿದ್ದ ಹಾರ್ದಿಕ್‌ ಪಾಂಡ್ಯ

    ಪುಣೆ: ಇಂಗ್ಲೆಂಡ್‌ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಶಿಖರ್‌ ಧವನ್‌ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದ್ದಾರೆ.

    ಹಾರ್ದಿಕ್‌ ಪಾಂಡ್ಯ ಸಂತೋಷಗೊಂಡು ಸಂಭ್ರಮಿಸಿ ನಮಸ್ಕರಿಸಲು ಕಾರಣ ಶಿಖರ್‌ ಧವನ್‌ ಹಿಡಿದ ಕ್ಯಾಚ್‌. ಅಪಾಯಕಾರಿ ಆಟಗಾರ ಬೆನ್‌ಸ್ಟೋಕ್ಸ್‌ ಅವರ ಕ್ಯಾಚ್‌ ಹಿಡಿದಿದ್ದಕ್ಕೆ ಸಂಭ್ರಮಿಸಿ ಪಾಂಡ್ಯ ನಮಸ್ಕರಿಸಿದ್ದಾರೆ.

    https://twitter.com/viratian18183/status/1376163494203023367

    ಕ್ಯಾಚ್‌ ಡ್ರಾಪ್‌:
    ಭುವನೇಶ್ವರ್‌ ಕುಮಾರ್‌ ಎಸೆದ 5ನೇ ಓವರಿನಲ್ಲಿ 14 ರನ್‌ ಗಳಿಸಿದ್ದ ಬೆನ್‌ ಸ್ಟೋಕ್ಸ್‌ ಬಲವಾಗಿ ಬೀಸಿದ್ದರು. ಈ ವೇಳೆ ಮಿಡ್‌ ಆಫ್‌ನಲ್ಲಿದ್ದ ಪಾಂಡ್ಯ ಕ್ಯಾಚ್‌ ಹಿಡಿಯುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪಾಂಡ್ಯ ಸುಲಭವಾಗಿ ಹಿಡಿಯಬೇಕಿದ್ದ ಕ್ಯಾಚ್‌ ಕೈ ಚೆಲ್ಲಿದರು. ಇದನ್ನು ನೋಡಿ ಆಟಗಾರರ ಜೊತೆ ಡಗೌಟ್‌ನಲ್ಲಿ ಕುಳಿತ್ತಿದ್ದ ಟೀಂ ಇಂಡಿಯಾ ಸದಸ್ಯರು ಶಾಕ್‌ ಆದರು.

    https://twitter.com/j_dhillon7/status/1376155566045757440

    ಕಷ್ಟದ ಕ್ಯಾಚ್‌ ಕೈ ಚೆಲ್ಲಿದರೆ ಯಾರೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಆದರೆ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್‌ ಬಿಟ್ಟದ್ದಕ್ಕೆ ಆಟಗಾರ ಕೈ ತಲೆ ಮೇಲೆ ಹೋಗಿತ್ತು.

    ಕ್ರೀಸಿನಲ್ಲಿ ತಳವುರಲು ಆರಂಭಿಸಿದ್ದ ಬೆನ್‌ಸ್ಟೋಕ್ಸ್‌ ನಟರಾಜ್‌ ಎಸೆದ ಇನ್ನಿಂಗ್ಸ್‌ನ 11ನೇ ಓವರಿನ ಮೂರನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಪ್ರಯತ್ನ ಮಾಡಿದರು. ಆದರೆ ಬಾಲ್‌ ನೇರವಾಗಿ ಸ್ಕ್ವಾರ್‌ ಲೆಗ್‌ನಲ್ಲಿದ್ದ ಶಿಖರ್‌ ಧವನ್‌ ಕೈ ಸೇರಿತು. ಈ ಮೂಲಕ 35 ರನ್‌(39 ಎಸೆತ, 4 ಬೌಂಡರಿ, 1 ಸಿಕ್ಸರ್‌) ಹೊಡೆದಿದ್ದ ಸ್ಟೋಕ್ಸ್‌ ಔಟಾದರು. ಸ್ಟೋಕ್ಸ್‌ ಔಟಾಗುತ್ತಿದ್ದಂತೆ ಪಾಂಡ್ಯ ಕೈ ಮುಗಿದು, ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು.