ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಯುವ ಆಟಗಾರ ಪೃಥ್ವಿ ಶಾ ವಿಶೇಷ ಅತಿಥಿಯೊಂದಿಗೆ ಇಂಗ್ಲೆಂಡ್‍ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಹೌದು ಆದರೆ ಪೃಥ್ವಿ ಶಾ ಜೊತೆಗಿರುವುದು ಅವರ ಗರ್ಲ್‍ಫ್ರೆಂಡ್ ಅಲ್ಲ ಬದಲಾಗಿ ಗೊಂಬೆಯಯನ್ನು ಹಿಡಿದುಕೊಂಡು ಪ್ರಯಾಣಿಸುತ್ತಿದ್ದಾರೆ. ಪೃಥ್ವಿ ತನ್ನ ಪ್ರಯಾಣದ ಜೊತೆಗಿರುವ ಗೊಂಬೆಯೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ ಕನ್ನಡಿಗ ಸ್ಟುವರ್ಟ್ ಬಿನ್ನಿ
ಪೃಥ್ವಿ ಶಾ ಗೊಂಬೆಯೊಂದಿಗಿನ ಫೋಟೋ ನೋಡಿ ವಿವಿಧ ರೀತಿಯ ಕಮೆಂಟ್ ಕೇಳಿ ಬರುತ್ತಿದ್ದು, ಪೃಥ್ವಿ ಜೊತೆ ಗೊಂಬೆಗೂ ಕೂಡ ಬಯೋ ಬಬಲ್ ಶಿಕ್ಷೆ ಎಂಬುದಾಗಿ ಅಭಿಮಾನಿಗಳು ವ್ಯಂಗ್ಯವಾಡಿದ್ದಾರೆ. ಪೃಥ್ವಿ ಶಾ, ಶುಭಮನ್ ಗಿಲ್ ಮತ್ತು ವಾಷಿಂಗ್ಟನ್ ಸುಂದರ್ ಅವರು ಇಂಗ್ಲೆಂಡ್ ಪ್ರವಾಸದಲ್ಲಿ ಗಾಯಗೊಂಡು ಹೊರ ನಡೆದಾಗ ಬದಲಿ ಆಟಗಾರರಾಗಿ ಟೀ ಇಂಡಿಯಾ ಸೇರಿಕೊಂಡ ಆಟಗಾರರಾಗಿದ್ದಾರೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!
ಇಂಗ್ಲೆಂಡ್ ಟೆಸ್ಟ್ ನಲ್ಲಿ ಈಗಾಗಲೇ ಮೂರು ಪಂದ್ಯಗಳು ಮುಗಿದಿದ್ದು, ಸರಣಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು 1-1 ಸಮಬಲ ಸಾಧಿಸಿದೆ. ಇನ್ನೆರಡು ಪಂದ್ಯಗಳು ಭಾಕಿ ಉಳಿದಿದ್ದು, ಈ ಪಂದ್ಯಗಳಲ್ಲಿ ಪೃಥ್ವಿ ಶಾ ಅವರಿಗೆ ಆಡುವ ಅವಕಾಶ ಸಿಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ತಿರುವನಂತಪುರಂ: ಮದುವೆಗೆ ವಧು ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದನಿಗೆ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಆಫರ್ ಬಂದಿರುವುದು ಕೇರಳದಲ್ಲಿ ಸುದ್ದಿಯಾಗಿದೆ.
ಕೇರಳದ ವಲ್ಲಾಚಿರ ಎಂಬ ಊರಿನವರಾದ 33 ವರ್ಷದ ಎನ್.ಎನ್. ಉನ್ನಿಕೃಷ್ಣನ್ ಮದುವೆಯಾಗಲು ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಆದರೆ ಯಾವ ಹುಡುಗಿಯೂ ಹೊಂದಿಕೆಯಾಗಿರಲಿಲ್ಲ. ವಲ್ಲಾಚಿರದಲ್ಲಿ ತನ್ನದೇ ಆದ ಅಂಗಡಿಯನ್ನು ಇಟ್ಟುಕೊಂಡಿರುವ ಉನ್ನಿಕೃಷ್ಣನ್ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ತಾನೇ ಹುಡುಗಿಯನ್ನು ಹುಡುಕಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಅಂಗಡಿಯ ಮುಂದೆ ವಧು ಬೇಕಾಗಿದ್ದಾಳೆ ಎಂದು ಬೋರ್ಡ್ ಒಂದನ್ನು ಹಾಕಿ ಅದರ ಕೆಳಗೆ ತಮ್ಮ ನಂಬರನ್ನು ನಮೂದಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ
ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಜಾತಿ, ಧರ್ಮ ಯಾವುದಾದರೂ ತೊಂದರೆಯಿಲ್ಲ ಎಂದು ಉನ್ನಿಕೃಷ್ಣನ್ ಫಲಕದಲ್ಲಿ ಬರೆದು, ಅಂಗಡಿ ಎದುರು ನೇತು ಹಾಕಿದ್ದಾರೆ. ಇತ್ತೀಚೆಗೆ ಈ ಅಂಗಡಿಗೆ ಬಂದಿದ್ದ ಅವರ ಗೆಳೆಯರೊಬ್ಬರು ಈ ಫಲಕವನ್ನು ನೋಡಿ ಅದರ ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದರು. ಅದುವರೆಗೂ ಸುತ್ತಮುತ್ತಲಿನ ಊರುಗಳಲ್ಲಿ ಹುಡುಗಿಗಾಗಿ ಹುಡುಕಾಡುತ್ತಿದ್ದ ಉನ್ನಿಕೃಷ್ಣನ್‍ಗೆ ಈ ಒಂದು ಪೋಸ್ಟ್ನಿಂದ ಈಗ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದಲೂ ಫೋನ್ ಕಾಲ್‍ಗಳು ಬಂದಿವೆಯಂತೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ – ಬಿಡುಗಡೆಯಾಗಲಿದೆ ಆಡಿಯೋ ಬುಕ್
ನನ್ನ ತಲೆಬುರುಡೆಯಲ್ಲಿ ಗೆಡ್ಡೆ ಬೆಳೆದಿದ್ದರಿಂದ ಈಗಾಗಲೇ ಆಪರೇಷನ್ ಆಗಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಇನ್ನಾದರೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಮದುವೆಯಾಗಲು ನಿರ್ಧರಿಸಿದೆ. ಆದರೆ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರಲಿಲ್ಲ. ನನಗೆ ನನ್ನದೇ ಸ್ವಂತದ್ದೊಂದು ಅಂಗಡಿಯಿದೆ. ನಮ್ಮ ಮನೆ ಬಳಿಯೇ ಲಾಟರಿ ಅಂಗಡಿಯೊಂದನ್ನು ತೆರೆದಿದ್ದೇನೆ. ಅಲ್ಲಿಯೇ ಟೀಯನ್ನು ಕೂಡ ಮಾರುತ್ತೇನೆ. ಬ್ರೋಕರ್ ಮೂಲಕ ಹುಡುಗಿಯನ್ನು ಹುಡುಕುವುದು ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಅಂಗಡಿಯೆದುರು ನನಗೆ ನಾನೇ ಜಾಹೀರಾತು ಕೊಟ್ಟುಕೊಂಡಿದ್ದೇನೆ. ನಮ್ಮ ಮನೆಯವರು ಕೂಡ ಹುಡುಗಿಯನ್ನು ಹುಡುಕುತ್ತಿದ್ದಾರೆ. ಆದರೆ ಇನ್ನೂ ನನಗೆ ಸರಿಯೆನಿಸುವ ಹುಡುಗಿ ಸಿಕ್ಕಿಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನೀರಜ್ ಚೋಪ್ರಾ
ಈ ಬೋರ್ಡ್‍ನ ಫೋಟೋ ತೆಗೆದು ಉನ್ನಿಕೃಷ್ಣನ್ ಅವರ ಸ್ನೇಹಿತ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದರು. ಮಲಯಾಳಂನಲ್ಲಿ ಬರೆದಿದ್ದ ಆ ಬೋರ್ಡ್‍ನ ಅರ್ಥವನ್ನು ಇಂಗ್ಲಿಷ್‍ನಲ್ಲಿ ಅನುವಾದಿಸಿ ಫೋಸ್ಟ್ ಮಾಡಿದ್ದರು. ನನ್ನನ್ನು ಮದುವೆಯಾಗಲು ಇಚ್ಛಿಸುವ ಯಾವುದೇ ಧರ್ಮ, ಜಾತಿಯ ಹುಡುಗಿ ಈ ನಂಬರ್‍ಗೆ ಸಂಪರ್ಕಿಸಿ ಎಂದು ಬರೆದಿದ್ದ ಆ ಬೋರ್ಡ್ ಅನ್ನು ನೋಡಿ ಅನೇಕರು ಇಂಪ್ರೆಸ್ ಆಗಿದ್ದಾರೆ. ಇದೀಗ ಆ ಫೋಸ್ಟ್ ನೋಡಿದ ಆಸ್ಟ್ರೇಲಿಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ಫೋನ್ ಮಾಡಿ ತಮ್ಮ ಕುಟುಂಬದಲ್ಲಿ ಹುಡುಗಿ ಇರುವುದಾಗಿ ತಿಳಿಸುತ್ತಿದ್ದಾರೆ. ಹಲವರು ಫೋನ್ ಮಾಡಿ ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆಯಾಗಲು ಬಯಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮದುವೆಗೆ ಹುಡುಗಿಯನ್ನು ಹುಡುಕಲು ಬ್ರೋಕರ್ ಬಳಿ ಹೋಗಬೇಕು, ನೆಂಟರಿಷ್ಟರ ಬಳಿ ವಿಚಾರಣೆ ಮಾಡಬೇಕೆಂಬ ಕಾಲವೆಲ್ಲ ಹಳೆಯದಾಯ್ತು. ಈಗೇನಿದ್ದರೂ ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಬೇಕಾದಷ್ಟು ಹೊಸ ಹೊಸ ಆಯ್ಕೆಗಳಿವೆ.
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿದೆ. ಈ ಸರಣಿಯ ಮೂರು ಪಂದ್ಯಗಳಲ್ಲಿ ಎರಡು ತಂಡದ ಬೌಲರ್ಗಳು ಬರೋಬ್ಬರಿ 58 ನೋ ಬಾಲ್ ಹಾಕಿದ್ದಾರೆ.
ಕ್ರಿಕೆಟ್‍ನಲ್ಲಿ ಒಂದೇ ಒಂದು ನೋ ಬಾಲ್‍ನಿಂದ ಹಲವು ಪಂದ್ಯಗಳ ಚಿತ್ರಣವೇ ಬದಲಾಗಿರುವ ನಿದರ್ಶನಗಳಿವೆ. ಹಾಗಾಗಿ ಬೌಲರ್ಗಳು ಗೆರೆ ದಾಟಿ ಬೌಲ್ ಮಾಡುವುದನ್ನು ಆದಷ್ಟು ನಿಯಂತ್ರಿಸುತ್ತಾರೆ. ಈ ನಡುವೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ನೋ ಬಾಲ್‍ಗಳ ಸಂಖ್ಯೆ ಅರ್ಧಶತಕ ದಾಟಿದೆ.
ಭಾರತ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಮೂರು ಪಂದ್ಯಗಳಿಂದ ಎರಡು ತಂಡದ ಬೌಲರ್ಗಳು ಒಟ್ಟು 58 ನೋ ಬಾಲ್ ಮಾಡಿದ್ದು, ಅದರಲ್ಲಿ ಭಾರತೀಯ ಬೌಲರ್ಗಳು 41 ನೋ ಬಾಲ್ ಮತ್ತು ಇಂಗ್ಲೆಂಡ್ ಬೌಲರ್ಗಳು 17 ನೋ ಬಾಲ್ ಹಾಕಿದ್ದಾರೆ. ಇದನ್ನೂ ಓದಿ: 515 ಓವರ್ ಎಸೆದ ಬಳಿಕ ಸಣ್ಣ ತಪ್ಪು ಮಾಡಿದ ಭುವಿ
ವೈಯಕ್ತಿಕವಾಗಿ ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬರೋಬ್ಬರಿ 25 ನೋ ಬಾಲ್ ಹಾಕಿದರೆ, ಇಂಗ್ಲೆಂಡ್ ತಂಡದ ಸ್ಪಿನ್ನರ್ ರಾಬಿನ್ಸನ್ 9 ನೋ ಬಾಲ್ ಮತ್ತು ರವೀಂದ್ರ ಜಡೇಜಾ 6 ನೋ ಬಾಲ್ ಹಾಕಿ ಮೊದಲ ಮೂರು ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಇಂಗ್ಲೆಂಡ್ ಟಾಪ್ ಬೌಲರ್ ಜೀವನಕ್ಕೆ ಮುಳುವಾಯ್ತು 9 ವರ್ಷ ಹಿಂದಿನ ಟ್ವೀಟ್
ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರನೇ ದಿನದಾಟದಲ್ಲಿ ಭಾರತದ ಆಟಗಾರ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ 4ನೇ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿ ಜಾರ್ವೋ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದು ಸುದ್ದಿಯಾಗಿದ್ದಾರೆ.
ಮೂರನೇ ದಿನದಾಟದ ಚಹಾ ವಿರಾಮದ ಬಳಿಕ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ಎಲ್ಲರೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗಾಗಿ ಕಾಯುತ್ತಿದ್ದರು ಈ ಸಂದರ್ಭ ಇಂಗ್ಲೆಂಡ್ ಪ್ರೇಕ್ಷಕ ಜಾರ್ವೋ 69 ಎಂಬ ಜೆರ್ಸಿ ಧರಿಸಿದಾತ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಿದ್ದಾರೆ. ಬಳಿಕ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಹೊರಹಾಕಿದ್ದಾರೆ. ನಂತರ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರು.
ಈ ಮೊದಲು 2ನೇ ಟೆಸ್ಟ್ ಪಂದ್ಯದಲ್ಲೂ ಕೂಡ ಜಾರ್ವೋ ಭಾರತದ ಪರ ಫೀಲ್ಡಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಹಿಡಿದು ಹೊರ ಹಾಕಲು ಪ್ರಯತ್ನಿಸಿದಾಗ ಬಿಸಿಸಿಐ ಲಾಂಛನವನ್ನು ತನ್ನ ಜೆರ್ಸಿಯಲ್ಲಿ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದರು.
ಲೀಡ್ಸ್ ಟೆಸ್ಟ್ ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ 215ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು 139ರನ್‍ಗಳ ಹಿನ್ನಡೆಯಲ್ಲಿದೆ. ವಿರಾಟ್ ಕೊಹ್ಲಿ ಅಜೇಯ 45ರನ್(94 ಬಾಲ್, 6 ಬೌಂಡರಿ), ಚೇತೇಶ್ವರ ಪೂಜಾರ ಅಜೇಯ 91ರನ್(180 ಎಸೆತ, 15 ಬೌಂಡರಿ) ಸಿಡಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಲಂಡನ್: ಇಂಗ್ಲೆಂಡ್‍ನ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ಆರ್ಡರ್ ಮಾಡಿದ್ದ ಡೊಮಿನೊಸ್‍ನಿಂದ ಪಿಜ್ಜಾದಲ್ಲಿ ಕಬ್ಬಿಣದ ಬೋಲ್ಡ್ ಹಾಗೂ ನಟ್ಟನ್ನು ಕಂಡು ಶಾಕ್ ಆಗಿದ್ದಾರೆ.
ಇದರಿಂದ ಕೋಪಗೊಂಡ ಮಹಿಳೆ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದ ಫೋಟೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಡೊಮಿನೊಸ್ ಪಿಜ್ಜಾ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುತ್ತಿಲ್ಲ. ಪಿಜ್ಜಾವನು ಸೇವಿಸುವುದಕ್ಕೂ ಮುನ್ನ ಪರೀಕ್ಷಿಸಿ ತಿನ್ನುವಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ವೆಜ್ ಬದಲು ನಾನ್‍ವೆಜ್ ಪಿಜ್ಜಾ ಬಂತು- 1 ಕೋಟಿ ಪರಿಹಾರ ಕೇಳಿದ ಮಹಿಳೆ
ಈ ಕುರಿತಂತೆ ಫೇಸ್‍ಬುಕ್‍ನಲ್ಲಿ ಫೋಟೋ ಜೊತೆಗೆ, ಅಂದು ರಾತ್ರಿ ಆರ್ಡರ್ ಮಾಡಿದ್ದ ಡೊಮಿನೊಸ್ ಪಿಜ್ಜಾದಲ್ಲಿ ಬೋಲ್ಟ್ ಹಾಗೂ ನಟ್ ಕಂಡು ಗಾಬರಿಗೊಂಡೆ. ಅದರ ಅರ್ಧವನ್ನು ನಾನು ತಿಂದಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ. ಡೊಮಿನೊಸ್ ಪಿಜ್ಜಾದ ಗುಣಮಟ್ಟವನು ಪರಿಶೀಲಿಸುತ್ತಾರೋ ಇಲ್ವೋ? ಪಿಜ್ಜಾದಲ್ಲಿ ಬೋಲ್ಟ್, ನಟ್ ಸಿಕ್ಕಿದೆ. ದಯವಿಟ್ಟು ಪಿಜ್ಜಾ ತಿನ್ನುವ ಮೊದಲು ಎರಡು ಬಾರಿ ಪರೀಕ್ಷಿಸಿ, ನಾನಗಲಿ, ಯಾರಾದರೂ ಈ ಪಿಜ್ಜಾವನ್ನು ಸೇವಿಸಿದನ್ನು ದ್ವೇಷಿಸುತ್ತೇನೆ. ಫ್ಲೀಟ್ವುಡ್ ಆರ್ಡಿ ನಾರ್ತ್‍ನಲ್ಲಿರುವ ಥಾನ್ರ್ಟನ್-ಕ್ಲೆವೆಲೀಸ್ ಶಾಖೆಯಲ್ಲಿರುವ ಡೊಮಿನೋಸ್‍ನಿಂದ ಪಿಜ್ಜಾ ಆರ್ಡರ್ ಮಾಡುವಾಗ ಜಾಗರೂಕರಾಗಿರಿ ಎಂದು ಕ್ಯಾಪ್ಷನ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ:ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್
ನಂತರ ಮಹಿಳೆ ರೆಸ್ಟೋರೆಂಟ್‍ಗೆ ಕರೆ ಮಾಡಿ ದೂರು ನೀಡಿ, ಪಿಜ್ಜಾವನ್ನು ಹಿಂದಿರುಗಿಸಿದ್ದಾರೆ. ನಂತರ ಈ ಕುರಿತಂತೆ ಡೊಮಿನೊಸ್ ಮಹಿಳೆಗೆ ಕ್ಷಮೆಯಾಚಿಸಿ, ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ:ಆರ್ಡರ್ ಮಾಡದಿದ್ರೂ 9 ವರ್ಷದಿಂದ ಮನೆಗೆ ಬರ್ತಿದೆ ಪಿಜ್ಜಾ
ಲಂಡನ್: ಟೀಂ ಇಂಡಿಯಾದ ಆಟಗಾರರಾದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಮೇಲೆ ನಾಯಕ ವಿರಾಟ್ ಕೊಹ್ಲಿ ಕೋಪಗೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದ ಅಂತ್ಯದಲ್ಲಿ ಲಾರ್ಡ್ಸ್ ಅಂಗಳ ವಿಚಿತ್ರ ಘಟನೆಗೆ ಸಾಕ್ಷಿಯಾಯ್ತು. ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಬಾಲ್ಕನಿಯಲ್ಲಿ ನಿಂತು ಮೈದಾನದಲ್ಲಿದ್ದ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾಗೆ ಕೋಪದಿಂದ ಸಂದೇಶ ನೀಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ.
ಇಬ್ಬರ ಮೇಲೆ ಕೋಪಗೊಂಡಿದ್ಯಾಕೆ?:
ಪಂದ್ಯದ ಅಂತಿಮದಲ್ಲಿ ಬೆಳಕಿನ ಪ್ರಖರತೆ ಕಡಿಮೆಯಾದ ಪರಿಣಾಮ ಚೆಂಡು ಕಾಣಿಸುತ್ತಿರಲಿಲ್ಲ. ಆದ್ರೂ ರಿಷಬ್ ಪಂತ್ ಮತ್ತು ಇಶಾಂತ್ ಶರ್ಮಾ ಅಂಪೈರ್ ಗೆ ದೂರು ನೀಡದೇ ಆಟ ಮುಂದುವರಿಸಿದ್ದರು. ಇತ್ತ ಇದೇ ವೇಳೆ ಬೌಲರ್ ಹೊಸ ಬಾಲ್ ಕೇಳಿ ಪಡೆದುಕೊಳ್ಳುತ್ತಿದ್ದರು. ಹಾಗಾಗಿ ಲಾರ್ಡ್ಸ್ ಮೈದಾನದ ಬಾಲ್ಕನಿಯಲ್ಲಿ ನಿಂತಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೋಪಗೊಂಡು ಇಬ್ಬರು ಆಟಗಾರರಿಗೆ ಇಷ್ಟು ಮಂದ ಬೆಳಕಿನಲ್ಲಿಯೇ ಹೇಗೆ ಅಡುತ್ತೀದೀರಾ? ಎಂದು ಸನ್ನೆ ಮೂಲಕ ಸಂದೇಶ ರವಾನಿಸಿದರು. ಇದಾದ ಬಳಿಕ ನಾಲ್ಕನೇ ದಿನದ ಆಟ ಅಂತ್ಯವಾಯ್ತು. ಇದನ್ನೂ ಓದಿ: ಸಿರಾಜ್ ವಿಕೆಟ್ ಪಡೆದ ಬಳಿಕ ವಿಶೇಷ ಸಂಭ್ರಮಾಚರಣೆಯ ಕಹಾನಿ ರಿವೀಲ್
ಬಾಲ್ ಟ್ಯಾಂಪರಿಂಗ್ ಆರೋಪ:
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ. ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?
ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಶೂನಿಂದ ಚೆಂಡನ್ನು ತುಳಿದು ವಿರೂಪಗೊಳಿದ್ದಾರೆ ಎಂಬ ಕುರಿತು ಆರೋಪ ಕೇಳಿಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ಹರಿದಾಡುತ್ತಿದೆ.
ಇಂಗ್ಲೆಂಡ್‍ನ ಇಬ್ಬರು ಆಟಗಾರರು ಶೂನಲ್ಲಿ ಚೆಂಡನ್ನು ತುಳಿದಿರುವ ಫೋಟೋಗಳನ್ನು ಹಾಕಿ ಆಂಗ್ಲ ಆಟಗಾರರು ಕಳ್ಳಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಆಟಗಾರರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದ ಆಸೀಸ್ ಆಟಗಾರ – ಸ್ಮಿತ್ ನಾಯಕತ್ವ ತಲೆದಂಡ?
Yeh kya ho raha hai. Is it ball tampering by Eng ya covid preventive measures 😀 pic.twitter.com/RcL4I2VJsC
ವಿರೇಂದ್ರ ಸೆಹ್ವಾಗ್ ಇದು ಇಂಗ್ಲೆಂಡ್ ಆಟಗಾರರು ನಡೆಸುತ್ತಿರುವ ಚೆಂಡು ವಿರೂಪವೇ ಅಥವಾ ಕೊರೊನಾ ಮುನ್ನಚ್ಚೆರಿಕಾ ಕ್ರಮವೇ ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದರೆ. ಸ್ಟುವರ್ಟ್ ಬ್ರಾಡ್, ಈ ಘಟನೆಯ ಪೂರ್ಣ ವೀಡಿಯೋ ನೋಡದೆ ವಿಶ್ಲೇಷಿಸುವುದು ಸರಿಯಲ್ಲ. ಇದು ಆಕಸ್ಮಿಕವಾಗಿರಬಹುದು ಎಂದಿದ್ದಾರೆ.
My comments are- Woody tried to nut meg Burnsy by tapping the ball through his legs (a very common occurrence) & he missed and kicked the ball there by accident. Instead of screenshotting the pic, watch the video- quite plain & easy to see
ಲಂಡನ್: ದುಬೈನಲ್ಲಿ ನಡೆಯಲಿರುವ 14ನೇ ಆವೃತ್ತಿಯ ಸೆಕೆಂಡ್ ಇನ್ನಿಂಗ್ಸ್ ಐಪಿಎಲ್‍ನಲ್ಲಿ ಇಂಗ್ಲೆಂಡ್ ಆಟಗಾರರು ಆಡುವುದು ಖಚಿತಗೊಂಡಿದೆ.
ಕೊರೊನಾದಿಂದಾಗಿ ಮುಂದೂಡಲ್ಪಟ್ಟ 2021ರ ಐಪಿಎಲ್‍ನ್ನು ದುಬೈನಲ್ಲಿ ನಡೆಸಲು ಬಿಸಿಸಿಐ ಡೇಟ್ ಫಿಕ್ಸ್ ಮಾಡಿದೆ. ಈ ನಡುವೆ ಕೆಲ ವಿದೇಶಿ ಆಟಗಾರರು ಭಾಗವಹಿಸುವುದು ಅನುಮಾನವಾಗಿತ್ತು. ಆದರೆ ಇದೀಗ ಇಂಗ್ಲೆಂಡ್‍ನ ಆಟಗಾರರು ಭಾಗವಹಿಸುವುದು ಖಚಿತಗೊಂಡಿದೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಕೆಪಿಎಲ್‍ನಲ್ಲಿ ಆಡದಂತೆ ಬಿಸಿಸಿಐ ನನಗೆ ಬೆದರಿಕೆ ಹಾಕುತ್ತಿದೆ: ಹರ್ಷಲ್ ಗಿಬ್ಸ್ ಆರೋಪ
ಐಪಿಎಲ್‍ನ ಮುಂದಿನ ಪಂದ್ಯಾಟಗಳು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಯುಎಇನಲ್ಲಿ ನಡೆಯಲಿದೆ. ಈ ಹಿಂದೆ ಇತರ ದೇಶಗಳ ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುವ ಕಾರಣ ಟೂರ್ನಿಯಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿತ್ತು. ಆದರೆ ಇದೀಗ ನ್ಯೂಜಿಲೆಂಡ್, ಇಂಗ್ಲೆಂಡ್ ತಂಡದ ಆಟಗಾರರು ಬರುವುದು ಕನ್ಫರ್ಮ್ ಆಗಿದೆ. ಉಳಿದಂತೆ ಆಸ್ಟ್ರೇಲಿಯಾ ಮತ್ತು ಬಾಂಗ್ಲಾದೇಶದ ಆಟಗಾರರು ಭಾಗವಹಿಸುವ ಬಗ್ಗೆ ಅನುಮಾನಗಳಿದೆ.
ಸೆಪ್ಟೆಂಬರ್ 19ರಂದು ಟೂರ್ನಿ ಆರಂಭವಾಗಲಿದ್ದು, ಅಕ್ಟೋಬರ್ 15ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಸಿಎಸ್‍ಕೆ ಮತ್ತು ಮುಂಬೈ ತಂಡಗಳು ಕಾದಾಡಳಿದೆ.
IPL 2021: BCCI confirms England players' availability for league in UAE
ಲಂಡನ್: ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ತಲೆಗೆ ಚೆಂಡು ಬಡಿದ ಕಾರಣ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಿಂದ ಕನ್ನಡಿಗ ಮಯಾಂಕ್ ಅಗರ್ವಾಲ್ ಹೊರ ನಡೆದಿದ್ದಾರೆ.
ಈ ಕುರಿತು ಸ್ಪಷ್ಟಪಡಿಸಿರುವ ಬಿಸಿಸಿಐ, ತಂಡದ ಆರೋಗ್ಯ ಸಿಬ್ಬಂದಿ ಅಗರ್ವಾಲ್ ಅವರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದು, ಮೊದಲ ಟೆಸ್ಟ್‌ನಿಂದ ಅವರು ಹೊರಗುಳಿಯಲಿದ್ದಾರೆ ಎಂದು ಟ್ವೀಟ್ ಮಾಡಿದೆ.
NEWS 🚨- Mayank Agarwal ruled out of first Test due to concussion.
The 30-year-old is stable and will remain under close medical observation.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಆರಂಭವಾಗಲಿದ್ದು, ಈಗಾಗಲೇ ಗಾಯದಿಂದಾಗಿ ಶುಭಮನ್ ಗಿಲ್, ವಾಷಿಂಗ್ಟನ್ ಸುಂದರ್ ಮತ್ತು ಅವೇಶ್ ಖಾನ್ ಹೊರ ನಡೆದಿದ್ದಾರೆ. ಇದೀಗ ತಂಡದ ಆರಂಭಿಕ ಆಟಗಾರ ಅಗರ್ವಾಲ್ ಕೂಡ ಒಂದು ಪಂದ್ಯದಿಂದ ಹೊರಗುಳಿಯುವಂತಾಗಿದೆ.
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ನಂಬರ್ ಒನ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಭಾರತ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರ ನಡೆದಿದ್ದಾರೆ. ಮಾನಸಿಕ ಆರೋಗ್ಯದ ಸುಧಾರಣೆಗಾಗಿ ನಾನು ಸರಣಿಯಿಂದ ಹೊರನಡೆದಿರುವುದಾಗಿ ತಿಳಿಸಿದ್ದು ಈಗ ಚರ್ಚೆಗೆ ಕಾರಣವಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭಕ್ಕೆ ಕೆಲದಿನಗಳಷ್ಟೆ ಬಾಕಿ ಉಳಿದುಕೊಂಡಿದೆ. ಈ ನಡುವೆ ಅಂತಿಮ ಕ್ಷಣದಲ್ಲಿ ಮಾನಸಿಕ ಆರೋಗ್ಯದ ಸುಧಾರಣೆಗಾಗಿ ಮತ್ತು ಬೆರಳಿನ ಗಾಯಕ್ಕೆ ಚಿಕಿತ್ಸೆ ಪಡೆಯಲು ನಾನು ಹೊರಗುಳಿಯುದಾಗಿ ಸ್ಟೋಕ್ಸ್ ಹೇಳಿದ್ದಾರೆ. ಇದನ್ನು ಗಮನಿಸುತ್ತಿದ್ದಂತೆ ಸ್ಟೋಕ್ಸ್ ಮಾನಸಿಕ ಖಿನ್ನತೆಗೆ ಒಳಗಾಗಿರುವುದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಸ್ಟೋಕ್ಸ್ ಅವರ ಈ ನಿರ್ಧಾರದಿಂದಾಗಿ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶಾಕ್ ಆಗಿದ್ದರು ಕೂಡ, ಅವರಿಗೆ ವಿಶ್ರಾಂತಿ ನೀಡಲು ಒಪ್ಪಿಕೊಂಡಿದೆ. ಈ ನಡುವೆ ತಂಡದ ಸಹ ಆಟಗಾರರು ಕೂಡ ಸ್ಟೋಕ್ಸ್ ಅವರ ನಡೆಗೆ ಬೆಂಬಲ ಸೂಚಿಸಿದ್ದಾರೆ.
ಸ್ಟೋಕ್ಸ್ ಅವರು ಈ ವರ್ಷದ ಆರಂಭದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಬಳಿಕ ಐಪಿಎಲ್‍ಗಾಗಿ ಭಾರತಕ್ಕೆ ಆಗಮಿಸಿದ್ದರು. ರಾಜಸ್ಥಾನ್ ತಂಡದ ಪರ ಆಡುತ್ತಿದ್ದ ಸ್ಟೋಕ್ಸ್ ಬೆರಳಿನ ಗಾಯಕ್ಕೆ ತುತ್ತಾಗಿ 14ನೇ ಆವೃತ್ತಿಯ ಐಪಿಎಲ್‍ನಿಂದ ಹೊರಗುಳಿದಿದ್ದರು. ಇದೆಲ್ಲದರ ನಡುವೆ ಕೊರೊನಾದಿಂದಾಗಿ ತಂಡದಲ್ಲಿರುವ ಬಯೋ ಬಬಲ್‍ನಿಂದಾಗಿ ಸ್ಟೋಕ್ಸ್ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ: ಹಾಕಿಯಲ್ಲಿ ಭಾರತದ ಸಾಧನೆ – 41 ವರ್ಷದ ಬಳಿಕ ಸೆಮಿ ಪ್ರವೇಶ
ಕ್ರಿಕೆಟ್‍ನಲ್ಲಿ ಈ ಹಿಂದೆ ಆಸ್ಟ್ರೇಲಿಯಾದ ಆಟಗಾರ ಗ್ಲೇನ್ ಮ್ಯಾಕ್ಸ್ವೆಲ್ ಮಾನಸಿಕ ಖಿನ್ನತೆಗೆ ಒಳಗಾಗಿ ಕ್ರಿಕೆಟ್‍ನಿಂದ ದೂರ ಉಳಿದಿದ್ದರು. ಬಳಿಕ ಇದೀಗ ಮತ್ತೆ ಕ್ರಿಕೆಟ್ ಆಡುತ್ತಿದ್ದಾರೆ. ಇದೀಗ ಸ್ಟೋಕ್ಸ್ ಮಾನಸಿಕ ಖಿನ್ನತೆ ಕುರಿತು ಹೇಳಿಕೊಂಡಿದ್ದು ಅದಷ್ಟು ಬೇಗ ಇದರಿಂದ ಹೊರಬರಲಿ ಎಂಬುದು ಕ್ರಿಕೆಟ್ ಅಭಿಮಾನಿಗಳ ಆಶಯವಾಗಿದೆ.