Tag: england

  • ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ನವದೆಹಲಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಐತಿಹಾಸಿಕಾ ಸಾಧನೆ ಮಾಡಿದ್ದು ಒಟ್ಟು 100 ಕೋಟಿ ಲಸಿಕೆಯನ್ನು ವಿತರಿಸಿದೆ.

    ಈ ಪೈಕಿ ಶೇ.22.55 ರಷ್ಟು ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಅಂದರೆ ಎರಡು ಡೋಸ್ ಪಡೆದುಕೊಂಡಿದ್ದಾರೆ. 138 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆರಂಭದಲ್ಲಿ ಲಸಿಕೆ ಅಭಾವ ಆದರೂ ಕೇಂದ್ರ ಸರ್ಕಾರದ ಬೇಡಿಕೆಗೆ ತಕ್ಕಂತೆ ಪುಣೆ ಸೀರಂ ಮತ್ತು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ವಿತರಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ.

    ಕೇಂದ್ರ ಸರ್ಕಾರ ಈ ವರ್ಷದ ಅಂತ್ಯದ ಒಳಗಡೆ ದೇಶದ 94 ಕೋಟಿ ವಯಸ್ಕರಿಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಅಭಿನಂದನೆಗಳು ಇಂಡಿಯಾ – 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು

    ಯಾವ ದೇಶದಲ್ಲಿ ಎಷ್ಟು?
    ವಿಶ್ವದಲ್ಲಿ ಅತೀ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ದೇಶ ಚೀನಾ. ಒಟ್ಟು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಈ ವರೆಗೆ 223.2 ಕೋಟಿ ಡೋಸ್ ಲಸಿಕೆ ನೀಡಿದ್ದು ಈ ಮೂಲಕ ಶೇ.74.97 ಜನರಿಗೆ ಎರಡೂ ಲಸಿಕೆಯನ್ನು ವಿತರಣೆ ಮಾಡಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇಂದು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ.

    ಅಮೆರಿಕದಲ್ಲಿ ಒಟ್ಟು 32.95 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 40.8 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು ಈವರೆಗೆ ಶೇ.57.62 ಜನ ಎರಡು ಡೋಸ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‍ನಲ್ಲಿ 6.7 ಕೋಟಿ ಜನಸಂಖ್ಯೆ ಇದೆ. ಒಟ್ಟು 9.5 ಕೋಟಿ ಲಸಿಕೆ ವಿತರಣೆಯಾಗಿದ್ದು, ಶೇ.67.08 ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೋರಾಟದಲ್ಲಿ ಭಾರತದ ಮೈಲಿಗಲ್ಲು – 100 ಕೋಟಿ ಲಸಿಕೆ ವಿತರಣೆ

    ಜರ್ಮನಿಯಲ್ಲಿ 8.3 ಕೋಟಿ ಜನಸಂಖ್ಯೆ ಇದ್ದು, 10.9 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿ ಶೇ.65.75 ಜನರಿಗೆ ಲಸಿಕೆ ಕೊಟ್ಟಿದೆ. 6.74 ಕೋಟಿ ಜನಸಂಖ್ಯೆ ಹೊಂದಿರುವ ಫ್ರಾನ್ಸ್‍ನಲ್ಲಿ 10.1 ಕೋಟಿ ಡೋಸ್ ವಿತರಣೆ ಮಾಡಿ ಶೇ.67.56 ಜನ ಲಸಿಕೆ ಸ್ವೀಕರಿಸಿದ್ದಾರೆ.

    ಇಸ್ರೇಲ್‍ನಲ್ಲಿ ಒಟ್ಟು 94 ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ 1.5 ಕೋಟಿ ಡೋಸ್ ಲಸಿಕೆ ಪಡೆದರೆ ಶೇ. 62.97 ಜನರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಇಟಲಿಯಲ್ಲಿ 5.96 ಕೋಟಿ ಜನಸಂಖ್ಯೆಗೆ 8.7 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು, ಶೇ. 70.08 ಜನ ಎರಡು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    8.43 ಕೋಟಿ ಜನಸಂಖ್ಯೆ ಇರುವ ಟರ್ಕಿಯಲ್ಲಿ ಈಗಾಗಲೇ 11.3 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದರೊಂದಿಗೆ ಇಲ್ಲಿ ಶೇ. 56.70 ಜನ ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.

  • ಭಾರತದ ಎಚ್ಚರಿಕೆ ಬೆನ್ನಲ್ಲೇ ಇಂಗ್ಲೆಂಡ್‍ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ

    ಭಾರತದ ಎಚ್ಚರಿಕೆ ಬೆನ್ನಲ್ಲೇ ಇಂಗ್ಲೆಂಡ್‍ನ ಅನುಮೋದಿತ ಲಸಿಕೆಗಳ ಪಟ್ಟಿಗೆ ಕೋವಿಶೀಲ್ಡ್ ಸೇರ್ಪಡೆ

    – ಎಚ್ಚರಿಕೆ ಬೆನ್ನಲ್ಲೇ ಪ್ರಯಾಣ ನಿಯಮ ಸಡಿಲಿಸಿದ ಬ್ರಿಟನ್

    ಲಂಡನ್: ಭಾರತದ ಕೋವಿಶೀಲ್ಡ್ ಲಸಿಕೆಗೆ ಮಾನ್ಯತೆ ನೀಡುವುದಿಲ್ಲ, ಎರಡು ಡೋಸ್‍ಗಳನ್ನು ಪಡೆದವರಿಗೂ ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್ ಕಡ್ಡಾಯ ಎಂದಿದ್ದ ಇಂಗ್ಲೆಂಡ್ ಇದೀಗ ಕೋವಿಶೀಲ್ಡ್ ಕೂಡ ಅನುಮೋದಿತ ಲಸಿಕೆ ಎಂದು ಹೊಸ ನಿಯಮವನ್ನು ಜಾರಿಗೊಳಿಸಿದೆ.

    ಭಾರತೀಯರು 2 ಡೋಸ್ ಕೋವಿಶೀಲ್ಡ್ ಲಸಿಕೆ (Covishield vaccine) ಪಡೆದುಕೊಂಡಿದ್ದರೂ 10 ದಿನಗಳ ಕ್ವಾರಂಟೈನ್(Quarantine) ಆಗಬೇಕು ಎಂಬ ನಿಯಮ ಜಾರಿಗೊಳಿಸಿದ್ದ ಬ್ರಿಟನ್, ಭಾರತ ಸರ್ಕಾರದ ಆಕ್ಷೇಪದ ಬೆನ್ನಲ್ಲೇ ಪ್ರಯಾಣಿಕರ ನಿಯಮವನ್ನು(Travel Rules) ಸಡಿಲಗೊಳಿಸಿದೆ. AstraZeneca Covishield ಲಸಿಕೆಗೆ ಮಾನ್ಯತೆ ನೀಡಿದೆ.

    ಇಂಗ್ಲೆಂಡ್‍ನ ಹೊಸ ನಿಯಮ: ಆಕ್ಸ್‌ಫರ್ಡ್- ಆಸ್ಟ್ರಾಜೆನಿಕಾ, ಫೈಜರ್- ಬಯೋಎನ್‍ಟೆಕ್ ಅಥವಾ ಮಾಡರ್ನಾದ ಡಬಲ್ ಡೋಸ್ ಲಸಿಕೆಯ ಎರಡೂ ಡೋಸ್ ಪಡೆದವರು ಅಥವಾ ಸಿಂಗಲ್ ಡೋಸ್‍ನ ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ ಪಡೆದವರನ್ನು ಮಾತ್ರ ಸಂಪೂರ್ಣವಾಗಿ ಲಸಿಕೆ ಪಡೆದವರು ಎಂದು ಸೂಚಿಸಲಾಗಿತ್ತು. ಇದೀಗ ಆ ಪಟ್ಟಿಗೆ ಕೋವಿಶೀಲ್ಡ್ ಅನ್ನು ಕೂಡ ಸೇರಿಸಲಾಗಿದೆ. ಆದರೆ ಕೋವಿಶೀಲ್ಡ್ ಲಸಿಕೆ ಪಡೆದ ಭಾರತೀಯರು ಇಂಗ್ಲೆಂಡ್‍ನಲ್ಲಿ ಕ್ವಾರಂಟೈನ್ ಆಗಬೇಕಾದುದು ಮಾತ್ರ ಕಡ್ಡಾಯವಾಗಿದೆ.

    ಕಡ್ಡಾಯ ಯಾಕೆ?
    ಲಸಿಕೆಗೆ ಅನುಮತಿ ನೀಡಿದರೂ ಲಸಿಕೆಯ ಪ್ರಮಾಣ ಪತ್ರದ ಬಗ್ಗೆ ಗೊಂದಲವಿದೆ. ಈ ಕಾರಣಕ್ಕೆ 10 ದಿನ ಕ್ವಾರಂಟೈನ್ ನಿಯಮವನ್ನು ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.

    ಇಂಗ್ಲೆಂಡ್ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಘಾಲ್, ಈ ಬಗ್ಗೆ ಇಂಗ್ಲೆಂಡ್ ವಿದೇಶಾಂಗ ಇಲಾಖೆ ಸಚಿವರ ಜೊತೆ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಮಾತನಾಡಿದ್ದಾರೆ. ಅವರು ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವ ಕೆಲ ಭರವಸೆ ನೀಡಿದ್ದಾರೆ. ನಾವು ನಮ್ಮ ಸ್ನೇಹಿ ರಾಷ್ಟ್ರಗಳ ಲಸಿಕೆಗೆ ಮಾನ್ಯತೆ ನೀಡಿದ್ದೇವೆ. ಇವೆಲ್ಲವೂ ಪರಸ್ಪರ ಮಾನ್ಯತೆ ನೀಡುವ ಕ್ರಮಗಳು. ಒಂದು ವೇಳೆ ನಮಗೆ ತೃಪ್ತಿ ಆಗದಿದ್ದರೆ ಕ್ರಮಕ್ಕೆ ಅವಕಾಶ ಇದೆ. ನಾವು ಕೂಡ ಇಂಗ್ಲೆಂಡ್‍ನ ಲಸಿಕೆಗೆ ಮಾನ್ಯತೆ ನೀಡದಿರಲು ಸಾಧ್ಯವಿದೆ ಎನ್ನುವ ಮೂಲಕ ಇಂಗ್ಲೆಂಡ್‍ಗೆ ಪರೋಕ್ಷ ಎಚ್ಚರಿಕೆ ರವಾನಿಸಿದ್ದರು.

    ಈ ಹಿಂದೆ ಭಾರತದಿಂದ ಲಸಿಕೆ ಪಡೆದು ಹೋದವರು ಬ್ರಿಟನ್‍ನಲ್ಲಿ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗಿತ್ತು. ಬ್ರಿಟನ್ (Oxford AstraZeneca) ಆಕ್ಸ್‌ಫರ್ಡ್- ಆಸ್ಟ್ರಾಜೆನೆಕಾ  ಕಂಪನಿ ಅಭಿವೃದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆ (Covishield vaccine)ಯನ್ನು ತೆಗೆದುಕೊಂಡಿದ್ದರೂ ಭಾರತೀಯರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ಬ್ರಿಟಿಷ್ ಸರ್ಕಾರದ ನಿಮಯ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

    ಹಳದಿ ಹಸಿರು ಹಾಗೂ ಕೆಂಪು ದೇಶಗಳು ಎಂದು ವಿದೇಶಗಳನ್ನು ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಪಟ್ಟಿಯನ್ನು ಮಾಡಲಾಗಿದೆ. ಅದರಲ್ಲಿ ಹಳದಿ ಪಟ್ಟಿಯಲ್ಲಿ ಭಾರತವಿದೆ. ಈಗ ಅ.4ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಳದಿ, ಹಸಿರು ಪಟ್ಟಿ ರದ್ದುಪಡಿಸಿ, ಎಲ್ಲಾ ದೇಶಗಳನ್ನೂ ಕೆಂಪು ಪಟ್ಟಿಗೆ ಸೇರಿಸಲಾಗಿ ಭಾರತ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಇದರಲ್ಲಿ ಈ ದೇಶದ ಜನ 2 ಡೋಸ್ ಲಸಿಕೆ ಪಡೆದು ಬ್ರಿಟನ್ನಿಗೆ ತೆರಳಿದರೂ 10 ದಿನ ಕ್ವಾಂಟೈನ್ ಕಡ್ಡಾಯ ಮಾಡಲಾಗಿತ್ತು. ಆದರೆ ಎಲ್ಲಡೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ತನ್ನ ನಿಯಮವನ್ನು ಸಡಿಲ ಗೊಳಿಸಿದೆ.

  • ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

    ಲಸಿಕೆ ಪಡೆದ್ರೂ ಭಾರತೀಯರು ಕ್ವಾರಂಟೈನ್- ಬ್ರಿಟನ್ ಸರ್ಕಾರದ ಹೊಸ ನಿಯಮ

    ಲಂಡನ್: ಭಾರತೀಯರು 2 ಡೋಸ್ ಕೊರೊನಾ (vaccine)ಲಸಿಕೆ ಪಡೆದು ಬ್ರಿಟನ್ ಪ್ರಯಾಣಿಸಿದರೂ ಅವರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ನಿಯಮವನ್ನು ಬ್ರಿಟನ್ ಜಾರಿಗೊಳಿಸಿದೆ.

    ಭಾರತದಿಂದ ಲಸಿಕೆ ಪಡೆದು ಹೋದವರು ಟ್ರಿಟನ್‍ನಲ್ಲಿ 10 ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಾಗಿದೆ. ಬ್ರಿಟನ್ (Oxford AstraZeneca) ಆಕ್ಸ್‌ಫರ್ಡ್- ಆಸ್ಟ್ರಾಜೆನೆಕಾ ಕಂಪನಿ ಅಭಿವೃದ್ಧಪಡಿಸಿರುವ ಕೋವಿಶೀಲ್ಡ್ ಲಸಿಕೆ (Covishield vaccine)ಯನ್ನು ತೆಗೆದುಕೊಂಡಿದ್ದರೂ ಭಾರತೀಯರನ್ನು ಲಸಿಕೆ ಪಡೆದಿಲ್ಲದವರು ಎಂದು ಪರಿಗಣಿಸುವ ಬ್ರಿಟಿಷ್ ಸರ್ಕಾರದ ನಿಮಯ ವ್ಯಾಪಕ ಟೀಕೆಗೆ ಗುರಿಯಾಗಿದೆ.

    ಕಾಂಗ್ರೆಸ್‍ನ ಮಾಜಿ ಕೇಂದ್ರ ಸಚಿವರಾದ ಜೈರಾಂ ರಮೇಶ್ ಹಾಗೂ ಶಶಿ ತರೂರ್ ಅವರು ಅಪ್ಪಟ ಜನಾಗೀಯ ತಾರತಮ್ಯ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ದಲಿತರು ಎಚ್ಚರಿಕೆಯಿಂದ ಇರಬೇಕು: ಮಾಯಾವತಿ


    ಸದ್ಯ ಬ್ರಿಟನ್‍ನಲ್ಲಿ ಹಳದಿ ಹಸಿರು ಹಾಗೂ ಕೆಂಪು ದೇಶಗಳು ಎಂದು ವಿದೇಶಗಳನ್ನು ಕೋವಿಡ್ ಸುರಕ್ಷತೆ ದೃಷ್ಟಿಯಿಂದ ಪಟ್ಟಿಯನ್ನು ಮಾಡಲಾಗಿದೆ. ಅದರಲ್ಲಿ ಹಳದಿ ಪಟ್ಟಿಯಲ್ಲಿ ಭಾರತವಿದೆ. ಈಗ ಅ.4ರಿಂದ ಅನ್ವಯವಾಗುವಂತೆ ಹೊಸ ನಿಯಮ ಜಾರಿಗೊಳಿಸಲಾಗಿದ್ದು, ಅದರಲ್ಲಿ ಹಳದಿ, ಹಸಿರು ಪಟ್ಟಿ ರದ್ದುಪಡಿಸಿ, ಎಲ್ಲಾ ದೇಶಗಳನ್ನೂ ಕೆಂಪು ಪಟ್ಟಿಗೆ ಸೇರಿಸಲಾಗಿದೆ.  ಇದನ್ನೂ ಓದಿ: ಅಧಿಕಾರಿಗಳು ಇರುವುದೇ ನಮ್ಮ ಚಪ್ಪಲಿ ಎತ್ತಿಕೊಳ್ಳಲು: ಉಮಾಭಾರತಿ

    ಭಾರತ, ಆಫ್ರಿಕಾ, ದಕ್ಷಿಣ ಆಫ್ರಿಕಾ, ಯುಎಇ, ಟರ್ಕಿ, ಜೋರ್ಡನ್, ಥಾಯ್ಲೆಂಡ್, ರಷ್ಯಾ ಇದರಲ್ಲಿ ಈ ದೇಶದ ಜನ 2 ಡೋಸ್ ಲಸಿಕೆ ಪಡೆದು ಬ್ರಿಟನ್ನಿಗೆ ತೆರಳಿದರೂ 10 ದಿನ ಕ್ವಾಂಟೈನ್ ಕಡ್ಡಾಯ ಮಾಡಲಾಗಿದೆ.

  • ಪಾಕ್ ಪ್ರವಾಸ ರದ್ದುಗೊಳಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    ಪಾಕ್ ಪ್ರವಾಸ ರದ್ದುಗೊಳಿಸಿದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್

    ಲಂಡನ್: ಅಕ್ಟೋಬರ್​ನಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಮುಂದಾಗಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕ್ ಪ್ರವಾಸವನ್ನು ದಿಢೀರ್ ಆಗಿ ರದ್ದುಗೊಳಿಸಿದೆ.


    16 ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕ್ ಪ್ರವಾಸ ಕೈಗೊಳ್ಳಲು ವೇಳಾಪಟ್ಟಿ ಬಿಡುಗಡೆಗೊಳಿಸಿತ್ತು. ಅಕ್ಟೋಬರ್ ನಲ್ಲಿ ಪಾಕ್ ವಿರುದ್ಧ ಪುರುಷರ ತಂಡ ಎರಡು ಟಿ20 ಪಂದ್ಯ, ಮತ್ತು ಮಹಿಳೆಯರ ತಂಡ 3 ಏಕದಿನ ಪಂದ್ಯವಾಡುವ ಬಗ್ಗೆ ಎರಡು ದೇಶದ ಕ್ರಿಕೆಟ್ ಬೋರ್ಡ್‍ಗಳು ನಿರ್ಧರಿಸಿದ್ದವು. ಆದರೆ ಇದೀಗ ಭದ್ರತಾ ಎಚ್ಚರಿಕೆ ಹಿನ್ನೆಲೆ ನ್ಯೂಜಿಲೆಂಡ್ ಪ್ರವಾಸ ರದ್ದುಗೊಳಿಸಿದೆ. ಇದನ್ನೂ ಓದಿ: ಆರ್​ಸಿಬಿ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ಗುಡ್‍ ಬೈ!

    ಕೆಲದಿನಗಳ ಹಿಂದೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಯನ್ನು ಭದ್ರತಾ ಎಚ್ಚರಿಕೆ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ರದ್ದುಗೊಳಿಸಿತ್ತು. ಈ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನದ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಬೇಕಿತ್ತು. ಆದರೆ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‍ನ ಆದೇಶದ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಆಟಗಾರರು ತಮ್ಮ ಹೋಟೆಲ್‍ನಿಂದ ಹೊರಬರದೆ ನೇರವಾಗಿ ವಿಮಾನವೇರಿ ತಮ್ಮ ದೇಶಕ್ಕೆ ಹಿಂದಿರುಗಿದ್ದರು. ಇದನ್ನೂ ಓದಿ:ಕ್ಯಾಪ್ಟನ್ ಪಟ್ಟದಿಂದ ಇಳಿಯಲಿದ್ದಾರೆ ಕೊಹ್ಲಿ, ರೋಹಿತ್‍ಗೆ ನಾಯಕತ್ವ

  • ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ಟಿ20 ವಿಶ್ವಕಪ್ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಸ್ಟಾರ್ ಆಟಗಾರರಿಗಿಲ್ಲ ಸ್ಥಾನ

    ದುಬೈ: ಅಕ್ಟೋಬರ್, ನವೆಂಬರ್​ನಲ್ಲಿ ದುಬೈನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ಗೆ ಈಗಾಗಲೇ ಹಲವು ದೇಶಗಳು ತಮ್ಮ ತಂಡವನ್ನು ಪ್ರಕಟಿಸಿದೆ. ಈ ನಡುವೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ತಂಡದಲ್ಲಿ ಟಿ20 ಸ್ಪೇಷಲಿಸ್ಟ್ ಎನಿಸಿಕೊಂಡಿರುವ ಸ್ಟಾರ್ ಆಟಗಾರರು ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

    ಪ್ರತಿ ದೇಶಗಳು ಕೂಡ ಮಹತ್ವದ ಕ್ರಿಕೆಟ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಿ ದುಬೈಗೆ ಕಳುಹಿಸಿಕೊಡಲು ಪ್ಲ್ಯಾನ್ ಹಾಕಿಕೊಂಡಿದೆ. ಅದರಲ್ಲೂ ಕೂಡ ಟಿ20 ಕ್ರಿಕೆಟ್‍ನಲ್ಲಿ ತಮ್ಮ ಬ್ಯಾಟಿಂಗ್, ಬೌಲಿಂಗ್ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರು ಕೆಲ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗದೆ ನಿರಾಸೆ ಅನುಭವಿಸಿದ್ದಾರೆ. ಇದನ್ನೂ ಓದಿ: ಇದೇ ಧೋನಿಯ ಕೊನೆಯ ಐಪಿಎಲ್?

    ದಕ್ಷಿಣ ಆಫ್ರಿಕಾದ ಟಿ20 ಸ್ಪೇಷಲಿಸ್ಟ್ ಆಟಗಾರರಾದ ಫಾಫ್ ಡು ಪ್ಲೆಸಿಸ್, ಕ್ರೀಸ್ ಮೋರಿಸ್, ಇಮ್ರಾನ್ ತಾಹೀರ್ ಟಿ20 ವಿಶ್ವಕಪ್‍ಗಾಗಿ ಆಯ್ಕೆ ಮಾಡಿರುವ ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಿಲ್ಲ. ಇವರೊಂದಿಗೆ ಇಂಗ್ಲೆಂಡ್ ತಂಡದ ಆಲ್‍ರೌಂಡರ್‍ ಗಳಾದ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಈ ಎಲ್ಲ ಆಟಗಾರರು ಕೂಡ ಟಿ20 ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತಿರುವ ಆಟಗಾರರು. ಇವರು ವಿದೇಶಗಳಲ್ಲಿ ನಡೆಯುವ ಪ್ರಮುಖ ಟಿ20 ಲೀಗ್‍ಗಳಲ್ಲಿನ ತಾರಾ ಆಟಗಾರರು. ಹೀಗಿರುವಾಗ ರಾಷ್ಟ್ರೀಯ ತಂಡದಲ್ಲಿ ಇವರಿಗೆ ಸ್ಥಾನ ಸಿಕ್ಕಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

  • ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ

    ಐದನೇ ಟೆಸ್ಟ್ ಪಂದ್ಯ ರದ್ದು- ಕಾಟಕೊಟ್ಟ ಕೊರೊನಾ

    ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ಕೊರೊನಾದಿಂದಾಗಿ ರದ್ದುಗೊಂಡಿದೆ. ಈ ಮೂಲಕ ಸರಣಿಯಲ್ಲಿ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದ ಭಾರತಕ್ಕೆ ಕೊರೊನಾ ಕಾಟಕೊಟ್ಟಿದೆ.

    4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್‍ಗೆ ಟೀಂ ಇಂಡಿಯಾಗೆ ಧೋನಿ ಮೆಂಟರ್

    ನಿನ್ನೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಭಾರತದ ಅಭ್ಯಾಸವನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಇಂದಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತದ ಆಟಗಾರರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಎಲ್ಲಾ ಆಟಗಾರರ ರಿಪೋರ್ಟ್ ಕೂಡ ನೆಗೆಟಿವ್ ಬಂದಿತ್ತು. ಆದರೂ ಕೂಡ ಅಂತಿಮ ಕ್ಷಣದಲ್ಲಿ ಪಂದ್ಯ ರದ್ದು ಗೊಳಿಸಲು ಉಭಯ ತಂಡಗಳು ಒಪ್ಪಿಗೆ ಸೂಚಿಸಿ ಕೋವಿಡ್-19 ಹಿನ್ನೆಲೆ ಪಂದ್ಯ ರದ್ದುಗೊಂಡಿದೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ

    ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಡ್ರಾ ಆಗಿದ್ದರೆ, ಎರಡನೇ ಪಂದ್ಯ ಭಾರತ ತಂಡ ಜಯಗಳಿಸಿತ್ತು. ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಜಯಗಳಿಸಿ 1-1 ಸಮಬಲ ಸಾಧಿಸಿತ್ತು. ಬಳಿಕ ಓವೆಲ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿತ್ತು. ಇದೀಗ ಐದನೇ ಟೆಸ್ಟ್ ಪಂದ್ಯ ರದ್ದುಕೊಂಡಿರುವುದರಿಂದ ಸರಣಿ ಗೆಲುವಿನ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

  • ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

    ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

    ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಬಿಗ್ ರಿಲೀಫ್ ಸಿಕ್ಕಿದೆ. ಎಲ್ಲಾ ಆಟಗಾರರ ಕೊರೊನಾ ವರದಿ ನೆಗೆಟಿವ್ ಬಂದಿದೆ.

    4ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಭಾರತ ತಂಡದ ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಬಳಿಕ ಅವರ ಸಂಪರ್ಕದಲ್ಲಿದ್ದ ಮೂವರು ಸಹಾಯಕ ಸಿಬ್ಬಂದಿಗಳಾದ ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಮತ್ತು ಫಿಸಿಯೋ ನಿತೀನ್ ಪಟೇಲ್ ಅವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: ಜಾರ್ಖಂಡ್ ತಂಡದ ಯಶಸ್ಸು- ಬಿಸಿಸಿಐ ಪ್ಲ್ಯಾನ್ ಧೋನಿ ಟೀಂ ಇಂಡಿಯಾ ಮೆಂಟರ್

    ನಿನ್ನೆ ಮತ್ತೋರ್ವ ಸಹಾಯಕ ಸಿಬ್ಬಂದಿಗೆ ಕೊರೊನಾ ದೃಢವಾದ ಬೆನ್ನಲ್ಲೇ ಭಾರತದ ಅಭ್ಯಾಸವನ್ನು ಮೊಟಕುಗೊಳಿಸಲಾಗಿತ್ತು. ಹಾಗಾಗಿ ಇಂದಿನ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆತಂಕ ಆವರಿಸಿತ್ತು. ಆದರೆ ಆ ಬಳಿಕ ನಡೆದ ಕೊರೊನಾ ಟೆಸ್ಟ್ ನಲ್ಲಿ ಎಲ್ಲಾ ಆಟಗಾರರ ರಿಪೋರ್ಟ್ ಕೂಡ ನೆಗೆಟಿವ್ ಬಂದಿದೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೋಚ್ ರವಿಶಾಸ್ತ್ರಿಗೆ ಕೊರೊನಾ ಪಾಸಿಟಿವ್- ಕ್ವಾರಂಟೈನ್‍ನಲ್ಲಿ ಮೂವರು ಸಹಾಯಕ ಸಿಬ್ಬಂದಿ

    ಓವೆಲ್‍ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭರ್ಜರಿಯಾಗಿ ಗೆದ್ದಿರುವ ಭಾರತ ತಂಡ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ. ಇದೀಗ ಐದನೇ ಹಾಗೂ ಅಂತಿಮ ಪಂದ್ಯಕ್ಕೆ ತಂಡ ಸಿದ್ಧಗೊಂಡಿದ್ದು, ಪಂದ್ಯದಲ್ಲಿ ಗೆಲುವಿನ ಮೂಲಕ ಸರಣಿ ಗೆಲ್ಲುವ ತವಕದಲ್ಲಿದೆ. ಅತ್ತ ಇಂಗ್ಲೆಂಡ್ ಈ ಪಂದ್ಯವನ್ನು ಗೆದ್ದು ಸರಣಿ ಡ್ರಾ ಮಾಡಿಕೊಳ್ಳುವ ಇರಾದೆಯಲ್ಲಿದೆ.

  • ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು

    ಬೌಲರ್‌ಗಳ ಭರ್ಜರಿ ಆಟ – ಭಾರತಕ್ಕೆ 157 ರನ್‍ಗಳ ಗೆಲುವು

    ಓವೆಲ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ನಲ್ಲಿ ಭಾರತ ತಂಡ 157 ರನ್‍ಗಳಿಂದ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.

    ಭಾರತ ತಂಡ ನೀಡಿದ್ದ 368ರನ್‍ಗಳ ಟಾರ್ಗೆಟ್‍ನ್ನು ಚೇಸ್ ಮಾಡಲು ಹೊರಟ, ಇಂಗ್ಲೆಂಡ್ ತಂಡ 210ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಅನುಭವಿಸಿತು.  ಇದನ್ನೂ ಓದಿ: ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

    ಇಂಗ್ಲೆಂಡ್ ಪರ ರೋರಿ ಬರ್ನ್ಸ್ ಮತ್ತು ಹಸೀದ್ ಹಮೀದ್ ಮೊದಲ ವಿಕೆಟಿಗೆ 246 ಎಸೆತಗಳಲ್ಲಿ 100 ರನ್ ಜೊತೆಯಾಟವಾಡಿ ಉತ್ತಮ ಆರಂಭ ನೀಡಿದರು. ರೋರಿ ಬರ್ನ್ಸ್ 50ರನ್(125 ಎಸೆತ, 4 ಬೌಂಡರಿ) ಮತ್ತು ಹಸೀದ್ ಹಮೀದ್ 63ರನ್(193 ಎಸೆತ, 6 ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಬೇರೆ ಯಾವುದೇ ಬ್ಯಾಟ್ಸ್‌ಮ್ಯಾನ್ ಗಳು ಇಂಗ್ಲೆಂಡ್ ಗೆಲುವಿಗೆ ಹೋರಾಡಲಿಲ್ಲ. ಇದನ್ನೂ ಓದಿ: ಟೋಕಿಯೋ ಪ್ಯಾರಾಲಂಪಿಕ್ಸ್ ಭಾರತೀಯ ಕ್ರೀಡಾ ಇತಿಹಾಸದಲ್ಲಿ ವಿಶೇಷ: ಮೋದಿ

    ನಾಯಕ ಜೋ ರೂಟ್ ತಂಡಕ್ಕೆ ಆಸರೆಯಾಗುವ ಸೂಚನೆ ನೀಡಿದರು ಕೂಡ 36ರನ್(78 ಎಸೆತ, 3 ಬೌಂಡರಿ) ವೇಳೆ ಶಾರ್ದೂಲ್ ಠಾಕೂರ್ ಪೆವಿಲಿಯನ್ ದಾರಿ ತೋರಿಸಿದರು. ಬಳಿಕ ಬಂದ ಬ್ಯಾಟ್ಸ್‌ಮ್ಯಾನ್ ಗಳು ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ ಓವರ್ ಗಳಲ್ಲಿ ಸರ್ವಪತನ ಕಂಡಿತು. ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಭಾರತ ಬೌಲಿಂಗ್ ಪಡೆ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಪಡೆದರೆ, ಬುಮ್ರಾ, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಕಿತ್ತರು.

    ಭಾರತ ಮೊದಲ ಇನ್ನಿಂಗ್ಸ್ – 191/10
    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ – 290/10
    ಭಾರತ ಎರಡನೇ ಇನ್ನಿಂಗ್ಸ್ – 466/10
    ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ -210/10

  •  ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

     ಸಿಕ್ಸರ್‌ನೊಂದಿಗೆ ಅರ್ಧಶತಕ – ಭಾರತದ ಪರ ವಿಶೇಷ ಸಾಧನೆಗೈದ ಶಾರ್ದೂಲ್

    ಓವಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಭಾರತದ ಪರ ವಿಶೇಷ ಸಾಧನೆ ನಿರ್ಮಿಸಿದ್ದಾರೆ.

    31 ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅರ್ಧಶತಕ ಹೊಡೆದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಎರಡನೇ ವೇಗದ ಅರ್ಧಶತಕ ಹೊಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಶಾರ್ದೂಲ್ ಠಾಕೂರ್ ಪಾತ್ರವಾದರು. ಭಾರತದ ಪರ ವೇಗದ ಅರ್ಧಶತಕ ಹೊಡೆದ ದಾಖಲೆ ಕಪಿಲ್ ದೇವ್ ಹೆಸರಿನಲ್ಲಿದೆ. ಕಪಿಲ್ ದೇವ್ 30 ಎಸೆತದಲ್ಲಿ ಈ ಸಾಧನೆ ಮಾಡಿದ್ದಾರೆ.

    ಟಿ20 ಪಂದ್ಯದಂತೆ ಬ್ಯಾಟ್ ಬೀಸಿದ ಶಾರ್ದೂಲ್ ಠಾಕೂರ್ 57 ರನ್(36 ಎಸೆತ, 7 ಬೌಂಡರಿ, 3 ಸಿಕ್ಸರ್) ಹೊಡೆದು ಔಟಾದರು. ಭಾರತ ಮೊದಲ ನ್ನಿಂಗ್ಸ್ ನಲ್ಲಿ 191 ರನ್‍ಗಳಿಗೆ ಆಲೌಟ್ ಆಗಿದ್ದರೆ ಇಂಗ್ಲೆಂಡ್ 53 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಇದನ್ನೂ ಓದಿ : ವಿರಾಟ್ ಕೊಹ್ಲಿ ನೂತನ ದಾಖಲೆ

    ಭಾರತದ ಪರ ನಾಯಕ ವಿರಾಟ್ ಕೊಹ್ಲಿ 50 ರನ್(96 ಎಸೆತ, 8 ಬೌಂಡರಿ) ಹೊಡೆದು ಔಟಾದರು. ಇಂಗ್ಲೆಂಡ್ ಪರ ಜೋ ರೂಟ್ 21 ರನ್ ಹೊಡೆದು ಔಟಾದರೆ ಡೇವಿಡ್ ಮಲಾನ್ ಔಟಾಗದೇ 26 ರನ್ ಗಳಿಸಿದ್ದಾರೆ.  ಇದನ್ನೂ ಓದಿ : ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಕ್ರೀಸ್ ವೋಕ್ಸ್ 4, ಒಲಿ ರಾಬಿನ್ಸನ್ 3, ಜೇಮ್ಸ್ ಅಂಡರ್ ಸನ್, ಕ್ರೇಗ್ ಓವರ್ಟನ್ ತಲಾ ಒಂದು ವಿಕೆಟ್ ಪಡೆದರೆ, ಟೀಂ ಇಂಡಿಯಾ ಪರ ಬುಮ್ರಾ 2, ಉಮೇಶ್ ಯಾದವ್ 1 ವಿಕೆಟ್ ಪಡೆದ್ದಾರೆ. ಮೊದಲ ದಿನವೇ 13 ವಿಕೆಟ್ ಪತನಗೊಂಡಿದ್ದು ಈ ಪಂದ್ಯ ಕುತೂಹಲ ಮೂಡಿಸಿದೆ.

  • ವಿರಾಟ್ ಕೊಹ್ಲಿ ನೂತನ ದಾಖಲೆ, ಠಾಕೂರ್ ಅರ್ಧಶತಕ- ಭಾರತ 191 ರನ್‍ಗೆ ಆಲೌಟ್

    ವಿರಾಟ್ ಕೊಹ್ಲಿ ನೂತನ ದಾಖಲೆ, ಠಾಕೂರ್ ಅರ್ಧಶತಕ- ಭಾರತ 191 ರನ್‍ಗೆ ಆಲೌಟ್

    ಓವೆಲ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ 191 ರನ್‍ಗಳ ಸಾಧಾರಣ ಮೊತ್ತಕ್ಕೆ ಆಲ್‍ಔಟ್ ಆಗಿದೆ.

    ಟಾಸ್ ಗೆದ್ದ ಇಂಗ್ಲೆಂಡ್ ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ 11 ರನ್(27 ಎಸೆತ, 1 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಇವರ ಹಿಂದೆಯೇ ಜೊತೆಗಾರ ಕೆಎಲ್. ರಾಹುಲ್ 17 ರನ್(44 ಎಸೆತ, 3 ಬೌಂಡರಿ) ಬಾರಿಸಿ ಔಟ್ ಆದರು. ಬಳಿಕ ಬಂದ ಚೇತೇಶ್ವರ ಪೂಜಾರ 4 ರನ್(31 ಎಸೆತ, 1 ಬೌಂಡರಿ) ಮಾಡಿ ನಿರಾಸೆ ಮೂಡಿಸಿದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರು ತಾಳ್ಮೆಯುತ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ 50 ರನ್ (96 ಎಸೆತ, 8 ಬೌಂಡರಿ) ಅರ್ಧಶತಕ ಸಿಡಿಸಿ ರಾಬಿನ್ಸನ್‍ಗೆ ವಿಕೆಟ್ ಒಪ್ಪಿಸಿದರು. ಈ ಮೊದಲು ಕೊಹ್ಲಿ 1 ರನ್ ಸಿಡಿಸುತ್ತಿದ್ದಂತೆ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ 23 ಸಾವಿರ ರನ್ ಸಿಡಿಸಿದ ನೂತನ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟ ಸ್ಮಾರ್ಟ್ ಬಾಲ್

    ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗಳಾದ ರವೀಂದ್ರ ಜಡೇಜಾ 10 ರನ್(34 ಎಸೆತ, 2 ಬೌಂಡರಿ), ಅಜಿಂಕ್ಯಾ ರಹಾನೆ 14 ರನ್ (47 ಎಸೆತ, 1 ಬೌಂಡರಿ) ರಿಷಬ್ ಪಂತ್ 9 ರನ್(33 ಎಸೆತ, 1 ಬೌಂಡರಿ)ಗಳಿಗೆ ಪೆವಿಲಿಯನ್ ಸೇರಿಕೊಂಡರು. ಬಳಿಕ ಬಂದ ಶಾರ್ದೂಲ್ ಠಾಕೂರ್ ಭಾರತಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟ್ ಬೀಸಿದ ಠಾಕೂರ್ 57ರನ್(36 ಎಸೆತ, 7 ಬೌಂಡರಿ, 3 ಸಿಕ್ಸ್) ವೇಗವಾಗಿ ರನ್ ಗಳಿಸಿ ಅರ್ಧಶತಕ ಹೊಡೆದು ಮಿಂಚಿದರು. ಅಂತಿಮವಾಗಿ ಭಾರತ ತಂಡ 61.3 ಓವರ್‍ ಗಳಲ್ಲಿ 191 ರನ್‍ಗೆ ಸರ್ವಪತನ ಕಂಡಿತು. ಇದನ್ನೂ ಓದಿ: ವಿಶೇಷ ಅತಿಥಿಯನ್ನು ಹಿಡಿದುಕೊಂಡು ಪೃಥ್ವಿ ಶಾ ಪ್ರಯಾಣ

    ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್ ಮತ್ತು ಒಲಿ ರಾಬಿನ್ಸನ್ 3 ವಿಕೆಟ್ ಕಿತ್ತು ಮಿಂಚಿದರು. ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ 1 ವಿಕೆಟ್ ಪಡೆದರು.