Tag: england

  • ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ಪ್ಯಾನ್ ಕಾರ್ಡ್ ಕಳೆದುಕೊಂಡ ಪೀಟರ್ಸನ್‌ಗೆ ಸಹಾಯ ಮಾಡಿದ ಭಾರತೀಯ ತೆರಿಗೆ ಇಲಾಖೆ

    ನವದೆಹಲಿ: ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಭಾರತಕ್ಕೆ ಭೇಟಿ ನೀಡಲು ಬೇಕಾದ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಯಾರದರೂ ಸಹಾಯ ಮಾಡುವ ಬಗ್ಗೆ ಟ್ವೀಟ್ ಮಾಡಿ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿದ್ದರು. ಇದಕ್ಕೆ ಈಗ ಭಾರತೀಯ ಆದಾಯ ತೆರಿಗೆ ಇಲಾಖೆ ಸಹಾಯ ಮಾಡಿದೆ.

    ಪೀಟರ್ಸನ್ ಅವರು ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತಿ ಪಡೆದ ನಂತರ ಐಪಿಎಲ್ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ಯಾನ್ ಕಾರ್ಡ್‌ನ್ನು ಕಳೆದುಕೊಂಡಿರುವ ಬಗ್ಗೆ ದುಃಖವನ್ನು ಹಂಚಿಕೊಂಡಿದ್ದಾರೆ.

    ಟ್ವೀಟ್‌ನಲ್ಲಿ ಏನಿದೆ?: ಭಾರತ ದಯವಿಟ್ಟು ಸಹಾಯ ಮಾಡಿ, ನಾನು ನನ್ನ ಪ್ಯಾನ್ ಕಾರ್ಡ್ ಅನ್ನು ಕಳೆದುಕೊಂಡಿದ್ದೇನೆ ಮತ್ತು ಸೋಮವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಆದರೆ ಕೆಲಸಕ್ಕಾಗಿ ನನಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ದಯವಿಟ್ಟು ನನಗೆ ಸಹಾಯ ಮಾಡಲು ನಾನು ಆದಷ್ಟು ಬೇಗ ಸಂಪರ್ಕಿಸಬಹುದಾದ ಯಾರಿಗಾದರೂ ದಯವಿಟ್ಟು ನನ್ನನ್ನು ನಿರ್ದೇಶಿಸಬಹುದೇ? ಎಂದು ತಿಳಿಸಿದ್ದಾರೆ. ಪೀಟರ್ಸನ್ ನಂತರ ತಮ್ಮ ಟ್ವೀಟ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿದ್ದಾರೆ. ದನ್ನೂ ಓದಿ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಯತ್ನ: ಸಂಜಯ್ ರಾವತ್

    ಈ ಬಗ್ಗೆ ಭಾರತೀಯ ಆದಾಯ ತೆರಿಗೆ ಇಲಾಖೆಯೆ ಅಧಿಕೃತ ಖಾತೆ ಪ್ರತಿಕ್ರಿಯಿಸಿದ್ದು ಸಹಾಯ ಮಾಡುವುದಾಗಿ ತಿಳಿಸಿದ್ದಾರೆ. ನಿಮ್ಮ ಪ್ಯಾನ್ ವಿವರಗಳಿದ್ದರೆ, ಪ್ಯಾನ್ ಕಾರ್ಡ್‌ನ್ನು ನಕಲು ಇದ್ದರೆ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ದಯವಿಟ್ಟು ಈ ಲಿಂಕ್‌ಗಳಿಗೆ ಭೇಟಿ ನೀಡಿ ಎಂದು ತಿಳಿಸಿದೆ. ಇದಕ್ಕೆ ಧನ್ಯವಾದ ತಿಳಿಸಿರುವ ಪೀಟರ್ಸನ್ ಅವರು ಮಾಹಿತಿಗಳನ್ನು ಇಮೇಲ್ ಮಾಡಿರುವುದಾಗಿ ತಿಳಿಸಿದ್ದಾರೆ. ದನ್ನೂ ಓದಿ: ಬಿಜೆಪಿ ಬೆಂಗಾವಲು ಪಡೆ ಮೇಲೆ ಎಸ್‍ಪಿ ಗೂಂಡಾಗಳಿಂದ ದಾಳಿ: ಕೇಶವ್ ಪ್ರಸಾದ್ ಮೌರ್ಯ

    ಮಾಜಿ ಇಂಗ್ಲೆಂಡ್ ನಾಯಕ ಪೀಟರ್ಸನ್‌ಗೆ ಟ್ವಿಟರ್‌ನಲ್ಲಿ ಸುಮಾರು 3.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಕಳೆದ ತಿಂಗಳ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ಕೊನೆಯ ಬಾರಿಗೆ ಪೀಟರ್ಸನ್ ಕಾಣಿಸಿಕೊಂಡಿದ್ದರು. ಇವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಕ್ಕನ್ ಚಾರ್ಜರ್ಸ್, ಸನ್‌ರೈಸರ್ಸ್ ಹೈದರಾಬಾದ್, ರೈಸಿಂಗ್ ಪುಣೆ ಸೂಪರ್‌ಜೈಂಟ್, ಡೆಲ್ಲಿ ಕ್ಯಾಪಿಟಲ್ಸ್ ಪರ ಆಟವಾಡಿದ್ದಾರೆ.

  • ಡಿಎಲ್‌ ಇಲ್ಲದೇ 70 ವರ್ಷ ಕಾರು ಚಾಲನೆ – ಫಸ್ಟ್‌ ಟೈಂ ಪೊಲೀಸರಿಗೆ ಸಿಕ್ಕಿಬಿದ್ದ ವೃದ್ಧ!

    ಡಿಎಲ್‌ ಇಲ್ಲದೇ 70 ವರ್ಷ ಕಾರು ಚಾಲನೆ – ಫಸ್ಟ್‌ ಟೈಂ ಪೊಲೀಸರಿಗೆ ಸಿಕ್ಕಿಬಿದ್ದ ವೃದ್ಧ!

    ಲಂಡನ್:‌ ಚಾಲನ ಪರವಾನಗಿ (ಡಿಎಲ್‌) ಇಲ್ಲದೆಯೇ 70 ವರ್ಷಗಳ ಕಾಲ ಕಾನೂನು ಬಾಹಿರವಾಗಿ ವಾಹನ ಚಲಾಯಿಸಿಕೊಂಡಿದ್ದ ವ್ಯಕ್ತಿ ಮೊದಲ ಬಾರಿಗೆ ಪೊಲೀಸರಿಗೆ ಸಿಕ್ಕಿಬಿದ್ದಿರುವ ಪ್ರಸಂಗ ಇಂಗ್ಲೆಂಡ್‌ನ ಬುಲ್ವೆಲ್‌ನಲ್ಲಿ ನಡೆದಿದೆ.

    83 ವಯಸ್ಸಿನ ವೃದ್ಧ 70 ವರ್ಷಗಳ ಕಾಲ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದೇ ಬ್ಲ್ಯೂ ಮಿನಿ ವಾಹನ ಚಲಾಯಿಸಿಕೊಂಡು ಇದ್ದರು. ಇವರನ್ನು ಮೊದಲ ಬಾರಿಗೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ, ತಾನು 12 ವಯಸ್ಸಿನ ಹುಡುಗನಾಗಿದ್ದಾಗಿನಿಂದಲೂ ವಾಹನ ಚಲಾಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಲಸಿಕೆ ಕಡ್ಡಾಯ ನಿಯಮ ವಿರೋಧಿಸಿ ತೀವ್ರ ಪ್ರತಿಭಟನೆ – ರಹಸ್ಯ ಸ್ಥಳಕ್ಕೆ ಕೆನಡಾ ಪಿಎಂ ಸ್ಥಳಾಂತರ

    70 ವರ್ಷಗಳ ಕಾಲ ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಲಾಯಿಸಿರುವ ಇವರು ಇದುವರೆಗೆ ಯಾವುದೇ ಅಪಘಾತಕ್ಕೆ ಒಳಗಾಗಿಲ್ಲ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ. ವೃದ್ಧನನ್ನು ಇದುವರೆಗೂ ಪೊಲೀಸರು ತಪಾಸಣೆಗೆ ಒಳಪಡಿಸದಿರುವುದು ವಿಲಕ್ಷಣವಾಗಿದೆ.

    ನಾಟಿಂಗ್‌ಹ್ಯಾಮ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಎಎನ್‌ಪಿಆರ್‌ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಸ್ವಲ್ಪ ದೂರದ ಪ್ರಯಾಣಗಳಿದ್ದರೂ ಕ್ಯಾಮರಾ ಕಣ್ಣಿಗೆ ಬೀಳುವುದು ಗ್ಯಾರಂಟಿ. ಆದ್ದರಿಂದ ಚಾಲಕರು ದಾಖಲೆಗಳನ್ನು ಕ್ರಮಬದ್ಧವಾಗಿ ಹೊಂದಿರುವುದು ಮುಖ್ಯ ಎಂದು ಸಂಚಾರ ಪೊಲೀಸರು ಈಗಾಗಲೇ ಸಾಕಷ್ಟು ಬಾರಿ ಜನರಿಗೆ ಮನವರಿಕೆ ಮಾಡಿದ್ದಾರೆ. ಆದರೂ ಎಷ್ಟೋ ಜನ ನಿಯಮ ಉಲ್ಲಂಘಿಸುತ್ತಿದ್ದಾರೆ. ಇದನ್ನೂ ಓದಿ: ಇರಾಕ್ ಏರ್‌ಸ್ಟ್ರೈಕ್ – 6 ಐಸಿಸ್‌ ಉಗ್ರರ ಹತ್ಯೆ

    83 ವರ್ಷದ ವೃದ್ಧ ಚಾಲಕನಿಗೆ ಯಾವ ಶಿಕ್ಷೆ ನೀಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

  • ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಿಲ್ಲ: ಬ್ರಿಟನ್‌ ಪ್ರಧಾನಿ

    ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಿಲ್ಲ: ಬ್ರಿಟನ್‌ ಪ್ರಧಾನಿ

    ಲಂಡನ್‌: ಹೊರ ದೇಶಗಳಿಂದ ಇಂಗ್ಲೆಂಡ್‌ಗೆ ಬರುವವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯಗೊಳಿಸುವ ನಿಯಮವನ್ನು ತೆಗೆದು ಹಾಕಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ತಿಳಿಸಿದ್ದಾರೆ.

    ಸೋಂಕು ಪ್ರಕರಣಗಳ ಸಂಖ್ಯೆ ಇಳಿಯುತ್ತಿದೆ. ಹೀಗಾಗಿ ಬೇರೆ ದೇಶಗಳಿಂದ ಬರುವವರಿಗೆ ಇರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು. ಈ ವಿನಾಯಿತಿ ಸಂಪೂರ್ಣವಾಗಿ ಕೋವಿಡ್‌ ಲಸಿಕೆ ಪಡೆದವರಿಗೆ ಮಾತ್ರ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಂಬರುವ ವಾರಗಳಲ್ಲಿ ಓಮಿಕ್ರಾನ್ ಅಲೆ ತೀವ್ರಗೊಳ್ಳಬಹುದು ಎಂದ ತಜ್ಞರು!

    ಇಂಗ್ಲೆಂಡ್‌ ವ್ಯಾಪಾರ ಹಾಗೂ ಪ್ರಯಾಣಿಕರಿಗೆ ಮುಕ್ತವಾಗಿದೆ. ಆದ್ದರಿಂದ ಕೋವಿಡ್‌ ನಿರ್ಬಂಧಗಳನ್ನು ಸಡಿಲಗೊಳಿಸಲು ಸರ್ಕಾರ ನಿರ್ಧರಿಸಿದೆ. ಲಸಿಕೆ ಎರಡೂ ಡೋಸ್ ಪಡೆದವರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ ಎಂದು ಹೇಳಿದ್ದಾರೆ. ‌

    ನಿರ್ಬಂಧ ಸಡಿಲಿಕೆ ದಿನಾಂಕವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಆದರೆ ಕೋವಿಡ್‌ ಲಸಿಕೆಯನ್ನು ಸಂಪೂರ್ಣವಾಗಿ ಪಡೆದವರಿಗೆ ಯಾವುದೇ ನಿರ್ಬಂಧವಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

    ಯೂರೋಪ್‌ನಲ್ಲಿ ಕೋವಿಡ್‌ ಹೊಡೆತಕ್ಕೆ ಹೆಚ್ಚು ತುತ್ತಾದ ದೇಶ ಇಂಗ್ಲೆಂಡ್‌. ಇಲ್ಲಿ ಈವರೆಗೆ ಸೋಂಕಿನಿಂದ 1,54,000 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಈಚೆಗೆ ಇಂಗ್ಲೆಂಡ್‌ನಲ್ಲಿ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಆದ್ದರಿಂದ ನಿರ್ಬಂಧಗಳ ಸಡಿಲಿಕೆಗೆ ಸರ್ಕಾರ ಮುಂದಾಗಿದೆ.

    ನಿರ್ಬಂಧ ಸಡಿಲಿಕೆ ಬಗೆಗಿನ ಸರ್ಕಾರದ ನಿಲುವಿಗೆ ವಿರೋಧ ವ್ಯಕ್ತವಾಗಿದೆ. ನಿರ್ಬಂಧಗಳನ್ನು ಸಡಿಲಗೊಳಿಸಿದರೆ ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಾಣಬಹುದು. ಇದರಿಂದ ಮತ್ತಷ್ಟು ಸಮಸ್ಯೆಯಾಗಬಹುದು ಅಭಿಪ್ರಾಯ ವ್ಯಕ್ತವಾಗಿದೆ.

  • ಸಂಕ್ರಾಂತಿಗೆ ಇಂಗ್ಲೆಂಡಿನಿಂದ ತಾಯ್ನಾಡಿಗೆ ಮರಳಿ ಬಂತು 10ನೇ ಶತಮಾನದ ಯೋಗಿನಿ ವಿಗ್ರಹ

    ನವದೆಹಲಿ: ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಇಂಗ್ಲೆಂಡ್‍ಗೆ ಹೊತ್ತೊಯ್ಯಲಾದ 10ನೇ ಶತಮಾನದ ವಿಗ್ರಹ ಈ ವರ್ಷದ ಸಂಕ್ರಾಂತಿಯಲ್ಲಿ ತಾಯ್ನಾಡಿಗೆ ಮರಳಿ ಬಂದಿದೆ.

    ವಿಗ್ರಹವನ್ನು 40 ವರ್ಷಗಳ ಹಿಂದೆ ಭಾರತದಿಂದ ಇಂಗ್ಲೆಂಡ್‍ಗೆ ಕದ್ದೊಯ್ಯಲಾಗಿತ್ತು. ಇಂಗ್ಲೆಂಡ್‍ನ ಖಾಸಗಿ ನಿವಾಸದ ಉದ್ಯಾನದಲ್ಲಿ 10ನೇ ಶತಮಾನದ ಪ್ರಾಚೀನ ವಿಗ್ರಹವನ್ನು ಇತ್ತೀಚೆಗೆ ಪತ್ತೆ ಮಾಡಲಾಗಿತ್ತು. ಈ ವಿಗ್ರಹವನ್ನು ಶುಕ್ರವಾರ ಭಾರತಕ್ಕೆ ತಂದು ಮರು ಸ್ಥಾಪಿಸಲಾಗಿದೆ. ಇದನ್ನೂ ಓದಿ: ರಿಯಲ್ ಸ್ಟಾರ್  ಉಪ್ಪಿ ಮನೆಯಲ್ಲಿ ಸಂಕ್ರಾತಿ ಸಡಗರ

    ವಿಗ್ರಹವನ್ನು ಸ್ವದೇಶಕ್ಕೆ ತರುವ ಜಾವಾಬ್ದಾರಿಯನ್ನು ಭಾರತೀಯ ಹೈ ಕಮಿಷನರ್ ಗಾಯತ್ರಿ ಇಸ್ಸಾರ್ ಕುಮಾರ್ ವಹಿಸಿಕೊಂಡಿದ್ದು, ಇವರಿಗೆ ಆರ್ಟ್ ರಿಕವರಿ ಇಂಟರ್‍ನ್ಯಾಶನಲ್ ಕ್ರಿಸ್ ಮರಿನೆಲ್ಲೋ ಸಹಾಯ ಮಾಡಿದ್ದಾರೆ.

    ಮರಳುಗಲ್ಲಿನಲ್ಲಿ ಸುಂದರವಾಗಿ ಕೆತ್ತಲಾಗಿರುವ ಮೇಕೆ ತಲೆಯ ಯೋಗಿನಿ ವಿಗ್ರಹ ಉತ್ತರ ಪ್ರದೇಶದ ಬಂದಾ ಜಿಲ್ಲೆ ಲೋಖಾರಿ ದೇವಸ್ಥಾನದ್ದಾಗಿತ್ತು. ಇದೀಗ ವಿಗ್ರಹವನ್ನು ನವದೆಹಲಿಯ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ರವಾನಿಸಲಾಗುತ್ತಿದೆ. ಇದನ್ನೂ ಓದಿ: ಇನ್ಫಿ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?

    ಮೇಕೆ ತಲೆಯ ಯೋಗಿನಿ ವಿಗ್ರಹ 1980ರಲ್ಲಿ ಲೋಖಾರಿ ದೇವಸ್ಥಾನದಿಂದ ನಾಪತ್ತೆಯಾಗಿತ್ತು. ನಂತರ 1988ರಲ್ಲಿ ಇಂಗ್ಲೆಂಡ್‍ನ ಕಲಾ ಮಾರುಕಟ್ಟೆಯಲ್ಲಿ ಪತ್ತೆಯಾಗಿತ್ತು.

  • ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಬೊಕ್ಕ ತಲೆಗೆ ಆಟೋಗ್ರಾಫ್ ಹಾಕಿದ ಸ್ಪಿನ್ನರ್ ಜ್ಯಾಕ್ ಲೀಚ್ ವೀಡಿಯೋ ವೈರಲ್

    ಸಿಡ್ನಿ: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಆಶಸ್ ಟೆಸ್ಟ್‌ನ ಮೊದಲ ದಿನ ಇಂಗ್ಲೆಂಡ್ ಸ್ಪಿನ್ನರ್ ಜ್ಯಾಕ್ ಲೀಜ್ ಬೊಕ್ಕ ತಲೆಯ ಪ್ರೇಕ್ಷಕನೊಬ್ಬನಿಗೆ ಆಟೋಗ್ರಾಫ್ ಹಾಕಿದ ವೀಡಿಯೋ ಒಂದು ವೈರಲ್ ಆಗುತ್ತಿದೆ.

    ಈಗಾಗಲೇ ಆಶಸ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್‌ನಲ್ಲೂ ತನ್ನ ಹಿಡಿತವನ್ನು ಸಾಧಿಸಿದೆ. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಚಿಯರ್ ಅಪ್ ಮಾಡಿಕೊಂಡಿದ್ದು ಅಭಿಮಾನಿಯೋರ್ವ ತನ್ನ ಬೊಕ್ಕ ತಲೆಗೆ ಆಟೋಗ್ರಾಫ್ ನೀಡುವಂತೆ ಕೇಳಿಕೊಂಡಿದ್ದಾನೆ. ಲೀಚ್ ಕೂಡ ಆತನ ಆಸೆಯಂತೆ ಆತನ ತಲೆಗೆ ಸೈನ್ ಮಾಡಿ ಮನಗೆದ್ದಿದ್ದಾರೆ. ಇದನ್ನೂ ಓದಿ: ರೋಚಕ ಘಟ್ಟದಲ್ಲಿ ಟೆಸ್ಟ್‌ – ಭಾರತದ ಗೆಲುವಿಗೆ ಬೇಕಿದೆ 8 ವಿಕೆಟ್‌

    ಬೌಂಡರಿ ಲೈನ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ ಅಭಿಮಾನಿಗಳು ಜ್ಯಾಕ್ ಲೀಚ್ ಹೆಸರನ್ನು ಕೂಗಿ ಕರೆಯುತ್ತಿದ್ದರು. ಈ ವೇಳೆ 46.5 ನೇ ಓವರ್ ಆಗುತ್ತಿದ್ದಂತೆ ಅಭಿಮಾನಿ ತನ್ನ ಬೋಳು ತಲೆಗೆ ಆಟೋಗ್ರಾಫ್ ಹಾಕುವಂತೆ ಲೀಚ್ ಜೊತೆ ಮನವಿ ಮಾಡಿದ್ದಾನೆ. ಲೀಚ್ ಒಪ್ಪಿಗೆ ಸೂಚಿಸಿ ಸೈನ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಚಪ್ಪಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಪಂತ್ ನೂತನ ಮೈಲಿಗಲ್ಲು – ಧೋನಿ ಜೊತೆ Elite ಪಟ್ಟಿಗೆ ಸೇರ್ಪಡೆ

  • ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ – ಮೈಲಿಗಲ್ಲು ಬರೆದ ಲಿಯಾನ್

    ಆಸ್ಟ್ರೇಲಿಯಾಗೆ 9 ವಿಕೆಟ್‌ಗಳ ಭರ್ಜರಿ ಜಯ – ಮೈಲಿಗಲ್ಲು ಬರೆದ ಲಿಯಾನ್

    ಬ್ರಿಸ್ಬೇನ್: ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ 5 ಪಂದ್ಯಗಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

    ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 297 ರನ್‌ಗಳಿಗೆ ಆಲೌಟ್ ಆಯ್ತು. 20 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 5.1 ಓವರ್‌ನಲ್ಲಿ 1 ವಿಕೆಟ್ ಕಳೆದುಕೊಂಡು ಜಯ ಸಾಧಿಸಿತು.

    ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಥನ್ ಲಿಯಾನ್ ಇಂಗ್ಲೆಡ್ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದು ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 17ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧದ 73ನೇ ಓವರ್‌ನಲ್ಲಿ 400ನೇ ವಿಕೆಟ್‌ನ್ನು ಪಡೆದರು. ಲಿಯಾನ್ 91 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ: ಮುಂಬೈನಲ್ಲಿ 144 ಸೆಕ್ಷನ್ ಜಾರಿ- ರ‍್ಯಾಲಿ, ಮೆರವಣಿಗೆಗೆ ನಿಷೇಧ

    ಲಿಯಾನ್ ತನ್ನ 101ನೇ ಟೆಸ್ಟ್‌ನಲ್ಲಿ, ಈ ಸಾಧನೆ ಮಾಡಿದ್ದಾರೆ. ಇಂಗ್ಲೆಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ಲಿಯಾನ್ ಅವರು ಡೇವಿಡ್ ಮಲಾನ್ ಅವರ ವಿಕೆಟ್ ಪಡೆಯುವ ಮೂಲಕ 400 ವಿಕೆಟ್‌ಗಳನ್ನು ಪಡೆದ 17ನೇ ಆಟಗಾರರಾಗಿ ಹೊಮ್ಮಿದ್ದಾರೆ. ಶೇನ್ ವಾರ್ನ್ ಮತ್ತು ಗ್ಲೇನ್ ಮೆಕ್‌ಗ್ರಾತ್ ನಂತರ ಆಸ್ಟ್ರೇಲಿಯಾ ಬೌಲರ್‌ಗಳಲ್ಲಿ ಮೂರನೇ ಆಟಗಾರರಾಗಿ ಲಿಯಾನ್ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಮತದಾನ ಮಾಡಿದ ಸದಸ್ಯರಿಂದ ಮತ ಪತ್ರ ಬಹಿರಂಗ- ಚುನಾವಣಾಧಿಕಾರಿಗೆ ದೂರು

    ಶೇನ್ ವಾರ್ನ್(708) ಅಗ್ರಸ್ಥಾನದಲ್ಲಿದ್ದರೆ, ಮಾಜಿ ಬೌಲಿಂಗ್ ದಿಗ್ಗಜ ಮೆಕ್‌ಗ್ರಾತ್(563) ಎರಡನೇ ಸ್ಥಾನದಲ್ಲಿದ್ದಾರೆ. ಡೆನ್ನಿಸ್ ಲಿಲ್ಲಿ (355) ಮತ್ತು ಮಿಚೆಲ್ ಜಾನ್ಸನ್ (313) ಕ್ರಮವಾಗಿ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.

  • ಇನ್ನು ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದ ಸುಪ್ರೀಂ

    ಇನ್ನು ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದ ಸುಪ್ರೀಂ

    ನವದೆಹಲಿ: ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ಇನ್ನು ಮುಂದೆ ನಾವು ಕಾಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಖಡಕ್ ಆಗಿ ಹೇಳಿದೆ.

    ಸುಪ್ರೀಂಕೋರ್ಟ್‍ನಲ್ಲಿ ಮಂಗಳವಾರ ವಿಜಯ್ ಮಲ್ಯ ನ್ಯಾಯಾಂಗ ನಿಂದನ ಅರ್ಜಿಯ ವಿಚಾರಣೆ ನಡೆಯಿತು. ಈ ವೇಳೆ ಮಲ್ಯ ಅವರಿಗಿದ್ದ ಎಲ್ಲ ಮೇಲ್ಮನವಿ ಸಲ್ಲಿಸುವ ಎಲ್ಲ ಮಾರ್ಗಗಳು ಈಗಾಗಲೇ ಮುಗಿದಿದೆ. ಆದರೂ ಕೆಲವು ‘ಗೌಪ್ಯ ಪ್ರಕ್ರಿಯೆಗಳು’ ಬಾಕಿ ಉಳಿದಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತು. ಇದನ್ನೂ ಓದಿ: ಇಂದು 745 ಜನರು ಡಿಸ್ಚಾರ್ಜ್- 8 ಸಾವು

    SUPREME COURT

    ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವವರೆಗೆ ನಾವು ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ, ಎಂದು ಹೇಳಿದ ನ್ಯಾಯಾಲಯ ಮುಂದಿನ ಕೊನೆಯ ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗುವುದು. ಶಿಕ್ಷೆ ವಿಧಿಸಲು ನಾವು ಸಿದ್ಧ ಎಂದು ತಿಳಿಸಿತು. ಈ ವೇಳೆ ಮಲ್ಯ ಹಾಜರಾಗದೇ ಇದ್ದರೂ ವಿಚಾರಣೆ ನಡೆಯುತ್ತದೆ ಎಂದು ಹೇಳಿದೆ.

    ಡಿಯಾಗೋ ಒಪ್ಪಂದದ 40 ದಶಲಕ್ಷ ಡಾಲರ್‍ಗಳನ್ನು ತನ್ನ ಮಕ್ಕಳ ವಿದೇಶಿ ಖಾತೆಗಳಿಗೆ ವರ್ಗಾಯಿಸಿದ್ದಕ್ಕಾಗಿ ಮತ್ತು ನಿಖರವಾದ ಆಸ್ತಿ ವಿವರಗಳನ್ನು ನೀಡಲು ವಿಫಲವಾಗಿದ್ದಕ್ಕೆ ಮಲ್ಯ ಅವರನ್ನು ನ್ಯಾಯಾಂಗ ನಿಂದನೆಯ ದೋಷಿ ಎಂದು ಕೋರ್ಟ್ ಘೋಷಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಮಲ್ಯ ಅವರ ಮರುಪರಿಶೀಲನಾ ಅರ್ಜಿಯನ್ನೂ ಸಹ ವಜಾಗೊಳಿಸಲಾಗಿದೆ. ಇದನ್ನೂ ಓದಿ: 2 ಡೋಸ್ ಪಡೆದವರಿಗೆ ಚಿಕಿತ್ಸೆ – ಸರ್ಕಾರಿ ಸೌಲಭ್ಯ ಕಡಿತಗೊಳಿಸಿ

    2017ರಲ್ಲಿ ಸುಪ್ರೀಂ ಕೋರ್ಟ್ ಮಲ್ಯ ಅವರನ್ನು ಅಪರಾಧಿ ಎಂದು ಘೋಷಿಸಿತ್ತು. ಬ್ಯಾಂಕ್‍ಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ವಂಚಿಸಿದ ನಂತರ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಹಸ್ತಾಂತರ ಕಾನೂನು ಹೋರಾಟದಲ್ಲಿ ಸೋತ ಬಳಿಕವೂ ಇನ್ನೂ ವಿಜಯ್ ಮಲ್ಯ ಹೇಗೆ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ ಎಂದು ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ.

  • ಇಂಗ್ಲೆಂಡ್ ವಿರುದ್ಧ ಮಿಂಚಿದ ಡೇರಿಲ್ ಮಿಚೆಲ್ – ಕಿವೀಸ್ ಫೈನಲ್‍ಗೆ

    ಇಂಗ್ಲೆಂಡ್ ವಿರುದ್ಧ ಮಿಂಚಿದ ಡೇರಿಲ್ ಮಿಚೆಲ್ – ಕಿವೀಸ್ ಫೈನಲ್‍ಗೆ

    ದುಬೈ: ನ್ಯೂಜಿಲೆಂಡ್ ತಂಡದ ಆರಂಭಿಕ ಆಟಗಾರ ಡೇರಿಲ್ ಮಿಚೆಲ್ ಶತಾಯಗತಾಯ ಹೋರಾಟದ ಫಲವಾಗಿ ಇಂಗ್ಲೆಂಡ್ ವಿರುದ್ಧ ಮೊದಲ ಸೆಮಿಫೈನಲ್‍ನಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ನ್ಯೂಜಿಲೆಂಡ್ ತಂಡ T20 ವಿಶ್ವಕಪ್ ಫೈನಲ್ ಪ್ರವೇಶಿಸಿದೆ.

    DARIL MICHEL

    ಗೆಲುವಿಗೆ 167 ರನ್‍ಗಳ ಗುರಿ ಪಡೆದ ನ್ಯೂಜಿಲೆಂಡ್ ತಂಡ ಇನ್ನೂ 1 ಓವರ್ ಬಾಕಿ ಉಳಿದಿರುವಂತೆ 5 ವಿಕೆಟ್‍ಗಳ ಜಯ ದಾಖಲಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು.

    NEWZELAND

    ನ್ಯೂಜಿಲೆಂಡ್ ಗೆಲುವಿಗಾಗಿ ಆರಂಭಿಕನಾಗಿ ಬಂದು ಕಡೆಯವರೆಗೆ ಹೋರಾಡಿದ ಡೇರಿಲ್ ಮಿಚೆಲ್ 73 ರನ್ (48 ಎಸೆತ, 4 ಬೌಂಡರಿ, 4 ಸಿಕ್ಸ್) ಸಿಡಿಸಿ ಅಜೇಯರಾಗಿ ಉಳಿದು ನ್ಯೂಜಿಲೆಂಡ್ ತಂಡವನ್ನು ಫೈನಲ್‍ಗೆ ಏರಿಸಿದರು.

    ವ್ಯರ್ಥವಾಯಿತು ಮೋಯಿನ್ ಅಲಿ ಅಬ್ಬರ

    ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಸಾಧಾರಣ ಮೊತ್ತ ಪೇರಿಸುವ ಹಂತದಲ್ಲಿತ್ತು. 15 ಓವರ್‍ ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 116ರನ್ ಗಳಿಸಿದ್ದ ಇಂಗ್ಲೆಂಡ್ ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಮೋಯಿನ್ ಅಲಿ ಮಿಂಚಿದರು. ಅಲಿ 51 ರನ್ (37 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗದೆ ತಂಡದ ಮೊತ್ತ 160ರ ಗಡಿದಾಟಿಸಿದರು.

    ಈ ಮೊದಲು ಡೇವಿಡ್ ಮಲನ್ 41 ರನ್ (30 ಎಸೆತ, 4 ಬೌಂಡರಿ, 1 ಸಿಕ್ಸ್) ತಂಡಕ್ಕೆ ಆಸರೆಯಾದರು. ಅಂತಿಮವಾಗಿ 20 ಓವರ್‍ ಗಳ ಅಂತ್ಯಕ್ಕೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 166 ರನ್ ಪೇರಿಸಿತು.

    ನ್ಯೂಜಿಲೆಂಡ್ ಪರ ಟಿಮ್ ಸೌಥಿ, ಆಡಮ್ ಮಿಲ್ನೆ, ಇಶ್ ಸೋಧಿ, ಜೇಮ್ಸ್ ನೀಶಮ್ ತಲಾ 1 ವಿಕೆಟ್ ಪಡೆದರು.

  • ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

    ಬೆಕ್ಕು, ಶ್ವಾನಗಳಲ್ಲೂ ಕೊರೊನಾ ರೂಪಾಂತರ ಆಲ್ಫಾ ಸೋಂಕು ಪತ್ತೆ- ಅಧ್ಯಯನ

    ವಾಷಿಂಗ್ಟನ್‌: ಸಾಕುಪ್ರಾಣಿಗಳು ಸಹ ಕೊರೊನಾ ವೈರಸ್‌ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗಬಹುದು ಎಂಬ ಮಾಹಿತಿಯನ್ನು ವೆಟರ್ನರಿ ರೆಕಾರ್ಡ್‌ನಲ್ಲಿನ ಹೊಸ ಅಧ್ಯಯನವು ಬಹಿರಂಗಪಡಿಸಿದೆ.

    ಆಲ್ಫಾ ಸೋಂಕು ಮೊದಲ ಬಾರಿಗೆ ಆಗ್ನೇಯ ಇಂಗ್ಲೆಂಡ್‌ನಲ್ಲಿ ಪತ್ತೆಯಾಯಿತು. ಹೀಗಾಗಿ ಇದನ್ನು ಯುಕೆ ರೂಪಾಂತರ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಪತಿ, ಪತ್ನಿ ನಡುವೆ ಒಡವೆ ವಿಚಾರಕ್ಕೆ ಕಿರಿಕ್ – ಕೊಲೆಯಲ್ಲಿ ಅಂತ್ಯ

    ಇಂಗ್ಲೆಂಡ್‌ನಲ್ಲಿ ಎರಡು ಬೆಕ್ಕು ಹಾಗೂ ಒಂದು ಶ್ವಾನಕ್ಕೆ ಆಲ್ಫಾ ಸೋಂಕು ತಗುಲಿರುವುದು ಪಿಸಿಆರ್‌ ಪರೀಕ್ಷೆಯಿಂದ ದೃಢಪಟ್ಟಿದೆ.

    COVID

    ಮಾಲೀಕರು ತಮ್ಮ ಸಾಕುಪ್ರಾಣಿಗಳು ಉಸಿರಾಟ ಸಮಸ್ಯೆ ಸೇರಿದಂತೆ ಕೆಲವು ರೋಗಲಕ್ಷಣಗಳಿಂದ ಬಳಲುತ್ತಿದ್ದುದನ್ನು ಗುರುತಿಸಿ ಅವುಗಳಿಗೆ ಕೋವಿಡ್‌-19 ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಅವುಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳಿರುವುದೂ ಬೆಳಕಿಗೆ ಬಂತು.

    ಬೆಕ್ಕು ಹಾಗೂ ಶ್ವಾನದಂತಹ ಸಾಕುಪ್ರಾಣಿಗಳು ಕೊರೊನಾ ರೂಪಾಂತರ ಆಲ್ಫಾ ಸೋಂಕಿಗೆ ಒಳಗಾಗುವುದು ನಮ್ಮ ಅಧ್ಯಯನದಿಂದ ತಿಳಿದುಬಂದಿದೆ. ಸಾಕುಪ್ರಾಣಿಗಳಿಗೂ ಸಾರ್ಸ್‌-ಕೋವ್‌-2 ವ್ಯಾಪಕವಾಗಿ ಹರಡಬಹುದು ಎಂಬ ಆತಂಕ ಈಗ ದಟ್ಟೈಸಿದೆ ಎಂದು ರಾಲ್ಫ್‌ ವೆಟರ್ನರಿ ರೆಫೆರಲ್‌ ಸೆಂಟರ್‌ನ ಲೀಡ್‌ ಆಥರ್‌ ಲುಖ ಫೆರಸಿನ್‌ ತಿಳಿಸಿದ್ದಾರೆ. ಇದನ್ನೂ ಓದಿ: ‘ಅಪ್ಪು’ ನೆನಪು – ನ.9 ರಂದು ಅಭಿಮಾನಿಗಳಿಗೆ ಅನ್ನಸಂತರ್ಪಣೆ

    ಕೋವಿಡ್‌ ಪೀಡಿತರಲ್ಲಿ ಹೆಚ್ಚು ಕಂಡುಬರುವ ಹೃದಯ ಸಂಬಂಧಿ ಸಮಸ್ಯೆಗಳನ್ನು ನಾವು ವರದಿ ಮಾಡಿದ್ದೇವೆ. ಜೊತೆಗೆ ಕೋವಿಡ್‌ ಪಾಸಿಟಿವ್‌ ಮನುಷ್ಯರಿಂದ ಸಾಕುಪ್ರಾಣಿಗಳಿಗೂ ಹರಡಬಹುದು ಎಂಬುದು ಸಹ ನಮ್ಮ ಅಧ್ಯಯನದಿಂದ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದ್ದಾರೆ.

  • ಈ ಬಾರಿಯ T20 ವಿಶ್ವಕಪ್‍ನಲ್ಲಿ ಕಂಡು ಬಂದ ವಿಶೇಷತೆಗಳಿವು

    ಈ ಬಾರಿಯ T20 ವಿಶ್ವಕಪ್‍ನಲ್ಲಿ ಕಂಡು ಬಂದ ವಿಶೇಷತೆಗಳಿವು

    ದುಬೈ: ಅರಬ್ಬರ ನಾಡಲ್ಲಿ ಘಟಾನುಘಟಿ ತಂಡಗಳ ನಡುವೆ ಟಿ20 ವಿಶ್ವಕಪ್ ನಡೆಯುತ್ತಿದೆ. ಈ ನಡುವೆ ಈ ಬಾರಿ ವಿಶ್ವಕಪ್‍ನಲ್ಲಿ ಹಲವು ಅಚ್ಚರಿಯ ಬೆಳವಣಿಗಳು ನಡೆದಿದೆ.

     

    ಹೌದು ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡ ಭಾರತವನ್ನು ಮಣಿಸಿದರೆ, ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಮೊದಲ ಬಾರಿಗೆ ಬಗ್ಗು ಬಡಿಯುವ ಮೂಲಕ ಹಿಂದೆಂದೂ ಆಗದೇ ಇರುವಂತಹ ಗೆಲುವು ಸಾಧಿಸಿದೆ. ಇದನ್ನೂ ಓದಿ: ಮಂಡಿಯೂರಲು ಒಪ್ಪದ ಡಿ ಕಾಕ್ ಆಫ್ರಿಕಾ ತಂಡದಿಂದ ಔಟ್?

    ಈ ವಿಶೇಷತೆಗಳು ತಂಡಗಳ ಸೋಲು ಗೆಲುವಿನ ಲೆಕ್ಕಾಚಾರವಾದರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪರಸ್ಪರ ಮುಖಾಮುಖಿಯಾಗದ ಎರಡು ತಂಡಗಳು ಟಿ20 ವಿಶ್ವಕಪ್‍ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದೆ. ಹೌದು ಇದು ಅಚ್ಚರಿಯಾದರು ಸತ್ಯ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ತಂಡ ಈವರೆಗೆ ಪರಸ್ಪರ ಎದುರು ಬದುರಾಗಿ ಆಡಿರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ ಚುಟುಕು ಸಮರದಲ್ಲಿ ಮುಖಾಮುಖಿಯಾದವು. ಈ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಇಂಗ್ಲೆಂಡ್ ತಂಡ ಸೋಲಿಸಿ ಮೇಲುಗೈ ಸಾಧಿಸಿದೆ.  ಇದನ್ನೂ ಓದಿ: ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್

    ಇಂಗ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಟಿ20 ಕ್ರಿಕೆಟ್‍ನಲ್ಲಿ ಒಂದು ಬಾರಿಯೂ ಮುಖಾಮುಖಿಯಾಗದಿದ್ದರು ಏಕದಿನ ಕ್ರಿಕೆಟ್‍ನಲ್ಲಿ 31 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಇಂಗ್ಲೆಂಡ್ ತಂಡ 26 ಪಂದ್ಯಗಳನ್ನು ಗೆದ್ದರೆ, ಬಾಂಗ್ಲಾದೇಶ ತಂಡ 5 ಪಂದ್ಯಗಳನ್ನು ಗೆದ್ದಿದೆ. ಇದೀಗ ಮೊದಲ ಟಿ20 ಕ್ರಿಕೆಟ್ ಮುಖಾಮುಖಿಯಲ್ಲೂ ಇಂಗ್ಲೆಂಡ್ ಗೆಲುವಿನ ಸಂಭ್ರಮ ಆಚರಿಸಿದೆ. ಇದನ್ನೂ ಓದಿ: ಹಿಂದೂಗಳ ನಡುವೆ ನಮಾಜ್ – ಟೀಕೆಯ ಬಳಿಕ ಕ್ಷಮೆಯಾಚಿಸಿದ ವಕಾರ್ ಯೂನಿಸ್