Tag: england

  • ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿರುದ್ಧ ಬಿಸಿಸಿಐ ಗರಂ ಆಗಿದೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವಾಡಲು ಪ್ರಯಾಣ ಬೆಳೆಸಿರುವ ಟೀಂ ಇಂಡಿಯಾಗೆ ಕೊರೊನಾ ಆತಂಕ ಎದುರಾಗಿದೆ. ಅಶ್ವಿನ್‍ಗೆ ಕೊರೊನಾ ಪಾಸಿಟಿವ್ ವರದಿಯಾದರೆ, ಕೊಹ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ ಎಂಬ ಸುದ್ದಿಯಾಗಿತ್ತು. ಈ ನಡುವೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಂಗ್ಲೆಂಡ್‍ನಲ್ಲಿ ಸುತ್ತಾಡುತ್ತಿದ್ದರೆ ಜೊತೆಗೆ ಸಾರ್ವಜನಿಕರೊಂದಿಗೆ ನಿಂತು ಫೋಟೋಗೆ ಫೋಸ್ ನೀಡಿದ್ದರು. ಆ ಬಳಿಕ ಎಚ್ಚೆತ್ತುಕೊಂಡಿರುವ ಬಿಸಿಸಿಐ ಬಯೋ ಬಬಲ್ ಇಲ್ಲವೆಂದು ಬೇಕಾಬಿಟ್ಟಿ ತಿರುಗಾಡಬೇಡಿ ಕೊರೊನಾ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಎಂದು ಕರೆಮಾಡಿ ವಾರ್ನಿಂಗ್ ನೀಡಿದೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ವಿರಾಟ್ ಕೊಹ್ಲಿಗೆ ಕೊರೊನಾ ಪಾಸಿಟಿವ್?

    ಇಂಗ್ಲೆಂಡ್‍ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿದ್ದು, ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗುತ್ತಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

    Live Tv

  • ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಏಕದಿನ ಕ್ರಿಕೆಟ್‍ನಲ್ಲಿ ದಾಖಲೆಯ 498 ರನ್ ಸಿಡಿಸಿದ ಇಂಗ್ಲೆಂಡ್ – ಮೈದಾನದೆಲ್ಲೆಡೆ ಸಿಕ್ಸರ್, ಬೌಂಡರಿಗಳ ಅಬ್ಬರ

    ಆಂಸ್ಟರ್‌ಡ್ಯಾಮ್‌: ನೆದರ್‌ಲ್ಯಾಂಡ್‌ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ ತಂಡ ಏಕದಿನ ಕ್ರಿಕೆಟ್‍ನಲ್ಲಿ 498 ರನ್ ಬಾರಿಸಿ ವಿಶ್ವ ದಾಖಲೆ ಬರೆದಿದೆ.

    ಟಾಸ್ ಗೆದ್ದ ನೆದರ್‌ಲ್ಯಾಂಡ್‌ ತಂಡ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿತು. ಇತ್ತ ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ತಂಡದ ಬೌಲರ್‌ಗಳ ಚೆಂಡನ್ನು ಮೈದಾನದ ಅಷ್ಟ ದಿಕ್ಕುಗಳಿಗೆ ಅಟ್ಟುತ್ತ 50 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 498 ರನ್‍ಗಳ ದಾಖಲೆಯ ಮೊತ್ತ ಪೇರಿಸಿತು. ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

    ಈ ಮೂಲಕ ಇಂಗ್ಲೆಂಡ್ ತಂಡ ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ ಕಳೆದುಕೊಂಡು 481 ರನ್‍ಗಳನ್ನು ಸಿಡಿಸಿ ಬರೆದಿದ್ದ ದಾಖಲೆಯನ್ನು ಮುರಿದು ಮರು ದಾಖಲೆಯನ್ನು ಬರೆದಿದೆ. ಇದನ್ನೂ ಓದಿ: ಐರ್ಲೆಂಡ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ – ಹಾರ್ದಿಕ್ ಪಾಂಡ್ಯ ನಾಯಕ, ತ್ರಿಪಾಠಿಗೆ ಕರೆ

    https://twitter.com/NaveenG77168184/status/1537799779987558401

    ಇಂಗ್ಲೆಂಡ್‍ನ ಈ ಬೃಹತ್ ಮೊತ್ತಕ್ಕೆ ಕಾರಣವಾದವರು ಫಿಲ್ ಸಾಲ್ಟ್, ಡೇವಿಡ್ ಮಲನ್, ಜೋಸ್ ಬಟ್ಲರ್ ಮತ್ತು ಲಿಯಾಮ್ ಲಿವಿಂಗ್‍ಸ್ಟೋನ್ ಈ ನಾಲ್ವರು ಬ್ಯಾಟ್ಸ್‌ಮ್ಯಾನ್‌ಗಳು ನೆದರ್‌ಲ್ಯಾಂಡ್‌ ಬೌಲರ್‌ಗಳು ಕನಸಿನಲ್ಲೂ ನೆನಪಿಸಿಕೊಳ್ಳುವಂತೆ ಬ್ಯಾಟ್‍ಬೀಸಿದರು. ಅದರಲ್ಲೂ ಬಟ್ಲರ್ ಮತ್ತು ಲಿವಿಂಗ್‍ಸ್ಟೋನ್ ಸಿಡಿಸಿದ ಸಿಕ್ಸರ್‌ಗಳಂತೂ ಮೈದಾನದ ಹೊರಗಡೆ ಬೀಳತೊಡಗಿತು. ಫಿಲ್ ಸಾಲ್ಟ್ 122 ರನ್ (93 ಎಸೆತ, 14 ಬೌಂಡರಿ, 3 ಸಿಕ್ಸ್), ಡೇವಿಡ್ ಮಲನ್ 125 ರನ್ (109 ಎಸೆತ, 9 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟ್ ಆದರೆ, ಬಟ್ಲರ್ ಅಜೇಯ 162 ರನ್ (70 ಎಸೆತ, 7 ಬೌಂಡರಿ, 14 ಸಿಕ್ಸ್) ಮತ್ತು ಲಿವಿಂಗ್‍ಸ್ಟೋನ್ 66 ರನ್ (22 ಎಸೆತ, 6 ಬೌಂಡರಿ, 6 ಸಿಕ್ಸ್) ಚಚ್ಚಿ ಅಬ್ಬರಿಸಿ ಬೊಬ್ಬಿರಿದರು.

    ಇಂಗ್ಲೆಂಡ್‌ ತಂಡದ ದಾಖಲೆಯ ರನ್‌ ಜೊತೆ ಬಟ್ಲರ್‌ ವೇಗದ ಶತಕ ಬಾರಿಸಿ ತಮ್ಮ ಭರ್ಜರಿ ಬ್ಯಾಟಿಂಗ್‌ ಫಾರ್ಮ್‌ ಮುಂದುವರಿಸಿದ್ದಾರೆ.

    Live Tv

  • ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

    ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್‌ಗಿಲ್ಲ ಅವಕಾಶ?

    ಮುಂಬೈ: ದಕ್ಷಿಣ ಆಫ್ರಿಕಾ ಟಿ20 ಸರಣಿಗೂ ಮುನ್ನವೇ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಕೆ.ಎಲ್.ರಾಹುಲ್‌ಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ.

    ಈಗಾಗಲೇ 3 ಪಂದ್ಯಗಳು ಮುಕ್ತಾಯಗೊಂಡಿರುವ ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಕೆ.ಎಲ್.ರಾಹುಲ್ ನಾಯಕತ್ವ ವಹಿಸಬೇಕಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಅವರು ತೊಡೆ ಸ್ನಾಯುವಿನ ಗಾಯದಿಂದ ಬಳಲುತ್ತಿದ್ದರು. ಆದ್ದರಿಂದ ಅವರ ಬದಲಿಗೆ ರಿಷಭ್ ಪಂತ್ ಅವರಿಗೆ ನಾಯಕನ ಪಟ್ಟ ನೀಡಲಾಯಿತು. ಪಂತ್ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ತಂಡ ಇದೀಗ 3 ಪಂದ್ಯಗಳಲ್ಲಿ 2ರಲ್ಲಿ ಸೋಲು ಕಂಡಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಒಂದು ಪಂದ್ಯ ಸೋತರೂ ಟಿ20 ಸರಣಿ ದಕ್ಷಿಣ ಆಫ್ರಿಕಾ ಕೈವಶವಾಗಲಿದೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    ಆದರೆ ರಾಹುಲ್ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇಂಗ್ಲೆಂಡ್‌ನಲ್ಲಿ ಜುಲೈ 1 ರಿಂದ 5ರ ವರೆಗೆ ನಡೆಯುವ ಟೆಸ್ಟ್ ಸರಣಿಯಲ್ಲಿ ಆಡುವ ತಂಡವು ಮುಂಬೈನಿಂದ ಗುರುವಾರ ಬೆಳಗಿನ ಜಾವ ಲಂಡನ್‌ಗೆ ಪ್ರಯಾಣಿಸಲಿದೆ. ಈ ತಂಡದಲ್ಲಿ ರಿಷಭ್ ಪಂತ್ ಹೊರತುಪಡಿಸಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಜಸ್ಪ್ರಿತ್‌ ಬೂಮ್ರಾ, ಮೊಹಮ್ಮದ್ ಶಮಿ ಸೇರಿ ಪ್ರಮುಖರಿದ್ದಾರೆ. ಈ ಬಳಗದೊಂದಿಗೆ ರಾಹುಲ್ ತೆರಳುತ್ತಿಲ್ಲ. ಅವರು ಇನ್ನಷ್ಟು ಕಾಲ ಇಲ್ಲಿ ಆರೈಕೆ ಪಡೆಯಬೇಕಿದೆ. ವಾರಾಂತ್ಯದಲ್ಲಿ ಫಿಟ್‌ನೆಸ್ ಪರೀಕ್ಷೆಗೊಳಪಟ್ಟ ನಂತರವಷ್ಟೇ ಅವರು ತೆರಳುವ ಕುರಿತು ನಿರ್ಧಾರವಾಗಲಿದೆ ಎಂದು ಬಿಸಿಸಿಐ ತಿಳಿಸಿದೆ.

    Live Tv

  • ಸರಣಿ ಗೆದ್ದ ಇಂಗ್ಲೆಂಡ್‍ಗೆ ಶಾಕ್ – ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತ

    ಸರಣಿ ಗೆದ್ದ ಇಂಗ್ಲೆಂಡ್‍ಗೆ ಶಾಕ್ – ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತ

    ಲಂಡನ್: ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದಿದೆ. ಈ ನಡುವೆ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಳೆದುಕೊಂಡಿದೆ.

    ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್ ಪಾಯಿಂಟ್ ಏರಿಕೆ ಆಗಬೇಕಿತ್ತು. ಆದರೆ ಎರಡನೇ ಟೆಸ್ಟ್ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‍ನಿಂದಾಗಿ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಮತ್ತು ಪಂದ್ಯದ ಶುಲ್ಕ ಶೇ.40 ರಷ್ಟು ದಂಡ ಕಟ್ಟಿದೆ. ಇದನ್ನೂ ಓದಿ: IPL ಈಗ ವಿಶ್ವದ ದುಬಾರಿ ಲೀಗ್ – ಆದರೂ ಒಲಿಂಪಿಕ್ಸ್‌ನಲ್ಲಿ ಯಾಕಿಲ್ಲ?

    ಐಸಿಸಿ ನಿಯಮದ ಪ್ರಕಾರ ಪಂದ್ಯವನ್ನು ನಿಗದಿತ ವೇಳೆಯಲ್ಲಿ ಮುಗಿಸಲು ವಿಫಲವಾಗುವ ತಂಡಕ್ಕೆ ಪಂದ್ಯದ ಶುಲ್ಕ ಶೇ.20 ದಂಡ ಮತ್ತು ಟೆಸ್ಟ್ ಚಾಂಪಿಯನ್‍ಶಿಪ್ ಪಾಯಿಂಟ್ ಕಡಿತಗೊಳಿಸುವ ನಿರ್ಣಯ ಕೈಗೊಂಡಿತ್ತು. ಈ ನಿಯಮದ ಪ್ರಕಾರ ಇಂಗ್ಲೆಂಡ್ ತಂಡ ತವರಿನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ ಮುಗಿಸಲು ವಿಫಲವಾಗಿತ್ತು. ಹಾಗಾಗಿ ಮ್ಯಾಚ್‍ ರೇಫ್ರಿ ರೀಚಿ ರಿಚರ್ಡ್ಸನ್‌ ಇಂಗ್ಲೆಂಡ್ ತಂಡಕ್ಕೆ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನಗೆದ್ದಿದ್ದ ಭಾರತದ ನೀರಜ್ ಚೋಪ್ರಾರಿಂದ ಮತ್ತೊಂದು ದಾಖಲೆ

    ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಬೈರ್‌ಸ್ಟೋವ್ ಮತ್ತು ಬೆನ್ ಸ್ಟೋಕ್ಸ್‌ ಅವರ ಭರ್ಜರಿ ಚೇಸಿಂಗ್ ಮೂಲಕ ಇಂಗ್ಲೆಂಡ್ ತಂಡ 5 ವಿಕೆಟ್‍ಗಳ ಜಯ ದಾಖಲಿಸಿತ್ತು. ಅಲ್ಲದೇ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತ್ತು.

    Live Tv

  • ಪ್ರೇಕ್ಷಕಿ ಹಿಡಿದಿದ್ದ ಬಿಯರ್ ಗ್ಲಾಸ್‍ಗೆ ಬಿದ್ದ ಬಾಲ್ – ಕೀವಿಸ್ ಆಟಗಾರರಿಂದ ಪಿಂಟ್ ಟ್ರೀಟ್

    ಪ್ರೇಕ್ಷಕಿ ಹಿಡಿದಿದ್ದ ಬಿಯರ್ ಗ್ಲಾಸ್‍ಗೆ ಬಿದ್ದ ಬಾಲ್ – ಕೀವಿಸ್ ಆಟಗಾರರಿಂದ ಪಿಂಟ್ ಟ್ರೀಟ್

    ಲಂಡನ್: ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಆಟಗಾರ ಡೇರಿಲ್ ಮಿಚೆಲ್ ಬಾರಿಸಿದ ಚೆಂಡು ಪ್ರೇಕ್ಷಕಿಯ ಬಿಯರ್ ಗ್ಲಾಸ್‍ಗೆ ಬಿದ್ದ ಪ್ರಸಂಗ ನಡೆದಿದೆ.

    2ನೇ ದಿನದಾಟದ ಪಂದ್ಯ ನಡೆಯುತ್ತಿತ್ತು. ಒಂದು ಕಡೆ ನ್ಯೂಜಿಲೆಂಡ್ ಬ್ಯಾಟ್ಸ್‌ಮ್ಯಾನ್‌ ಡೇರಿಲ್ ಮಿಚೆಲ್ ಭರ್ಜರಿ ಹೊಡೆತಗಳ ಮೂಲಕ ಬ್ಯಾಟಿಂಗ್‍ನಲ್ಲಿ ಮಿಂಚುಹರಿಸುತ್ತಿದ್ದರು. 56ನೇ ಓವರ್‌ನಲ್ಲಿ ಡೇರಿಲ್ ಮಿಚೆಲ್ ಲಾಂಗ್‍ಆನ್‌ ಅತ್ತ ಬಾರಿಸಿದ ಚೆಂಡು ಸ್ಟೇಡಿಯಂನಲ್ಲಿ ಕೂತು ಪಂದ್ಯ ವೀಕ್ಷಿಸುತ್ತಿದ್ದ ಪ್ರೇಕ್ಷಕಿಯ ಬಿಯರ್ ಗ್ಲಾಸ್ ಒಳಗೆ ಬಿತ್ತು. ಈ ವೇಳೆ ಗ್ಲಾಸ್‍ನಲ್ಲಿದ್ದ ಬಿಯರ್ ಕೆಳಗೆ ಚೆಲ್ಲಿದೆ. ಇದನ್ನು ಗಮನಿಸಿದ ಲಾಂಗ್‍ಆನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಇಂಗ್ಲೆಂಡ್ ವೇಗಿ ಮ್ಯಾಥ್ಯೂ ಪಾಟ್ಸ್ ಬಿಯರ್ ಗ್ಲಾಸ್‍ಗೆ ಬಾಲ್ ಬಿದ್ದರುವುದನ್ನು ಕೈ ಸನ್ನೆಯ ಮೂಲಕ ಸಹ ಆಟಗಾರರಿಗೆ ತಿಳಿಸಿದರು. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಐಪಿಎಲ್ ಮಾಧ್ಯಮ ಪ್ರಸಾರ ಹಕ್ಕು ಹರಾಜಿನಿಂದ ಹಿಂದೆ ಸರಿದ ಅಮೆಜಾನ್

    ಬಳಿಕ ಬಿಯರ್ ಗ್ಲಾಸ್ ಹಿಡಿದು ಕೂತಿದ್ದ ಸುಸಾನ್ ಹೆಸರಿನ ಪ್ರೇಕ್ಷಕಿಗೆ ನ್ಯೂಜಿಲೆಂಡ್ ತಂಡ ಒಂದು ಪಿಂಟ್ ನೀಡಿದೆ. ಅಲ್ಲದೇ ಸಿಕ್ಸ್ ಬಾರಿಸಿ ಸುಸಾನ್ ಗ್ಲಾಸ್‍ಗೆ ಚೆಂಡು ಬೀಳಿಸಿದ ಡೇರಿಲ್ ಮಿಚೆಲ್ ಸ್ವತಃ ಸುಸಾನ್ ಬಳಿ ಬಂದು ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಬಳಿಕ ಈ ವೀಡಿಯೋವನ್ನು ನ್ಯೂಜಿಲೆಂಡ್ ತಂಡ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

  • ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್

    ಮೈದಾನದಲ್ಲೇ ಬ್ಯಾಟ್‍ನಲ್ಲಿ ಮ್ಯಾಜಿಕ್ ಮಾಡಿದ ರೂಟ್

    ಲಂಡನ್: ಇಂಗ್ಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಜೋ ರೂಟ್ ಬ್ಯಾಟಿಂಗ್‍ನಲ್ಲಿ ಮಾತ್ರವಲ್ಲದೇ ಮ್ಯಾಜಿಕ್ ಮಾಡುವ ಮೂಲಕವು ಇದೀಗ ಗಮನಸೆಳೆದಿದ್ದಾರೆ.


    ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಶತಕ ಸಿಡಿಸಿ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರೂಟ್ ಈ ಮೊದಲು ತಮ್ಮ ಬ್ಯಾಟ್‍ನಲ್ಲಿ ಮ್ಯಾಜಿಕ್ ತೋರಿಸಿದ್ದಾರೆ. ಪಂದ್ಯದ ನಡುವೆ ನಾನ್‍ಸ್ಟ್ರೈಕ್‍ನಲ್ಲಿದ್ದ ರೂಟ್ ತಮ್ಮ ಬ್ಯಾಟ್‍ನ್ನು ಹಿಡಿಯದೆ ನೇರವಾಗಿ ನಿಲ್ಲಿಸಿ ಬಿಟ್ಟಿದ್ದರು. ಕೆಲ ನಿಮಿಷಗಳ ಕಾಲ ಬ್ಯಾಟ್ ಬಿಟ್ಟು ರೂಟ್ ನಿಂತಿದ್ದ ಫೋಟೋ ಇದೀಗ ವೈರಲ್ ಆಗುತ್ತಿದೆ. ಈ ಫೋಟೋ ಗಮನಿಸಿದ ಬಳಿಕ ಕ್ರಿಕೆಟ್ ಅಭಿಮಾನಿಗಳು ರೂಟ್ ಬ್ಯಾಟಿಂಗ್‍ನಲ್ಲಿ ಪ್ರತಿಭಾವಂತ ಎಂಬುದನ್ನು ನೋಡಿದ್ದೇವೆ ಇದೀಗ ಇದೇನಿದು ಮ್ಯಾಜಿಕ್ ಮಾಡುತ್ತಿರುವುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: 22ನೇ ಗ್ರ್ಯಾನ್ ಸ್ಲಾಂನ ಕಿರೀಟ ಮುಡಿಗೇರಿಸಿಕೊಂಡ ನಡಾಲ್ – ನಾರ್ವೆಯ ಕಾಸ್ಪರ್ ರೂಡ್‍ಗೆ ನಿರಾಸೆ

    ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 5 ವಿಕೆಟ್‍ಗಳ ಜಯ ಸಾಧಿಸಿ 3 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲಿ ಶತಕ ಸಿಡಿಸಿ ಮಿಂಚಿದ ರೂಟ್ ಟೆಸ್ಟ್ ಕ್ರಿಕೆಟ್‍ನಲ್ಲಿ 10,000 ರನ್ ಪೂರ್ತಿಗೊಳಿಸಿದ ಅತಿ ಕಿರಿಯ ಆಟಗಾರರ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: 37 ವರ್ಷದ ಹಳೆಯ ಕಾರನ್ನು ರಾಷ್ಟ್ರೀಯ ಆಸ್ತಿಯೆಂದು ಘೋಷಿಸಿದ ರವಿಶಾಸ್ತ್ರಿ

    https://twitter.com/WebboOne/status/1533429605813698560

    ನ್ಯೂಜಿಲೆಂಡ್ ವಿರುದ್ಧ ಶತಕ ಸಿಡಿಸಿ 10 ಸಾವಿರ ರನ್ ಮೈಲಿಗಲ್ಲು ತಲುಪುವಾಗ ರೂಟ್ ವಯಸ್ಸು 31 ವರ್ಷ 157 ದಿನಗಳು. ಇದಕ್ಕೂ ಮೊದಲು ಇಂಗ್ಲೆಂಡ್ ಮಾಜಿ ನಾಯಕ ಅಲೇಸ್ಟರ್ ಕುಕ್ ಕೂಡಾ ಇಷ್ಟೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು. ರೂಟ್ ಈ ಮೈಲಿಗಲ್ಲು ತಲುಪಲು 218 ಇನ್ನಿಂಗ್ಸ್ ಬಳಸಿಕೊಂಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ 14ನೇ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

  • 23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    23ನೇ ಓವರ್‌ನಲ್ಲಿ ಪಂದ್ಯ ಸ್ಥಗಿತ – ಲಾರ್ಡ್ಸ್ ಟೆಸ್ಟ್‌ನಲ್ಲಿ ವಾರ್ನ್‍ಗೆ ವಿಶೇಷ ಗೌರವ

    ಲಾರ್ಡ್ಸ್: ಆಸ್ಟ್ರೇಲಿಯಾದ ದಿವಂಗತ ಲೆಗ್ ಸ್ಪಿನ್ನರ್ ಶೇನ್ ವಾರ್ನ್ ಅವರಿಗೆ ಗೌರವ ಸಲ್ಲಿಸಲು ಪ್ರಸ್ತುತ ಲಾರ್ಡ್ಸ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅನ್ನು ಮೊದಲ ಇನ್ನಿಂಗ್ಸ್‌ನ 23ನೇ ಓವರ್‌ನ ನಂತರ ನಿಲ್ಲಿಸಲಾಯಿತು.

    23ನೇ ಓವರ್‌ನ ನಂತರದಲ್ಲಿ ಮೈದಾನದ ಸ್ಕ್ರೀನ್‍ವೊಂದರ ಮೇಲೆ ಶೇನ್ ವಾರ್ನ್ ಅವರ ಫೋಟೋವನ್ನು ಹಾಕಲಾಯಿತು. ಫೋಟೋದಲ್ಲಿ ಅವರು ರೌಂಡ್ ಕ್ಯಾಪ್‍ವೊಂದನ್ನು ಎಡಗೈನಲ್ಲಿ ಹಿಡಿದು ನಿಂತಿದ್ದು, ಶೇನ್ ವಾರ್ನ್ ಅವರೇ ನಿಮ್ಮನ್ನು ಇಲ್ಲಿ ನೇರದಿರುವ ಪ್ರತಿಯೊಬ್ಬರು ನೆನಪಿಕೊಳ್ಳುತ್ತಿದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.

    ಶೇನ್ ವಾರ್ನ್ ಅವರು ತಮ್ಮ ಆಟದ ದಿನಗಳಲ್ಲಿ 23 ಸಂಖ್ಯೆಯ ಜೆರ್ಸಿಯೊಂದನ್ನು ಧರಿಸುತ್ತಿದ್ದ ಹಿನ್ನೆಲೆ ಆಟಗಾರರು 23ನೇ ಓವರ್ ವೇಳೆ ಆಟ ನಿಲ್ಲಿಸಿ ಗೌರವ ಸೂಚಿಸಿದರು. ಪ್ರೇಕ್ಷಕರು ಕೂಡ ದಂತಕಥೆಗೆ 23 ಸೆಕೆಂಡುಗಳ ಕಾಲ ಎದ್ದು ನಿಂತು ಚಪ್ಪಾಳೆಯೊಂದಿಗೆ ಗೌರವ ಸಲ್ಲಿಸಿದರು.

    ಈ ಕುರಿತು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರರೆಲ್ಲರೂ ಅವರೊಂದಿಗೆ ಕಳೆದ ಹಳೆಯ ನೆನಪುಗಳನ್ನೆಲ್ಲಾ ನೆನಪಿಸಿಕೊಂಡು ಭಾವನಾತ್ಮಕವಾಗಿ ಟ್ವೀಟ್ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

    ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಶೇನ್ ವಾರ್ನ್ ಮಾರ್ಚ್ 4 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. 52 ವರ್ಷದ ಶೇನ್ ವಾರ್ನ್‍ಗೆ ಥಾಯ್ಲೆಂಡ್‍ನ ವಿಲ್ಲಾದಲ್ಲಿ ಹೃದಯಾಘಾತವಾಗುತ್ತಿದ್ದಂತೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ, ವಾರ್ನ್ ಕೊನೆಯುಸಿರೆಳೆದಿದ್ದರು.

    ಆಸ್ಟ್ರೇಲಿಯಾದ ತಂಡದಲ್ಲಿ ಗೂಗ್ಲಿ ಎಸೆತದ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ವಾರ್ನ್ ಕ್ರಿಕೆಟ್‍ಗೆ ನಿವೃತ್ತಿ ನೀಡಿದ ಬಳಿಕ ಹಲವು ತಂಡಗಳಿಗೆ ಕೋಚ್ ಮತ್ತು ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. ಐಪಿಎಲ್‍ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.

  • ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಅಂದುಕೊಂಡಂತೆ ಆಗಿದ್ದರೆ ನಿನ್ನೆ ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಭಾಷಣ ಮಾಡಬೇಕಿತ್ತು. ಅದಕ್ಕಾಗಿ ವಿಶ್ವವಿದ್ಯಾಲಯವು ಅವರನ್ನು ಆಹ್ವಾನಿಸಿತ್ತು. ಕೊನೆ ಕ್ಷಣದಲ್ಲಿ ಅಗ್ನಿಹೋತ್ರಿ ಭಾಷಣವನ್ನು ರದ್ದು ಮಾಡುವ ಮೂಲಕ ಅವಮಾನಿಸಲಾಗಿದೆ ಎಂದು ಸ್ವತಃ ವಿವೇಕ್ ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿವೇಕ್ ಅಗ್ನಿಹೋತ್ರಿ, ‘ಹಿಂದೂ ಧ್ವನಿಯನ್ನು ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಹತ್ತಿಕ್ಕುವಂತಹ ಕೆಲಸವಾಗಿದೆ. ಅವರು ಕೊನೆ ಕ್ಷಣದಲ್ಲಿ ನನ್ನ ಕಾರ್ಯಕ್ರಮವನ್ನೇ ರದ್ದುಗೊಳಿಸಿದ್ದಾರೆ. ಈ ಮೂಲಕ ಅವರು ಅಲ್ಪಸಂಖ್ಯಾತರಾಗಿರುವ ಹಿಂದೂ ಜನಾಂಗೀಯ ಹತ್ಯೆ ಮತ್ತು ಹಿಂದೂ ವಿದ್ಯಾರ್ಥಿಗಳ ಹಕ್ಕುಗಳನ್ನು ಮೊಟಕುಗೊಳಿಸಿದ್ದಾರೆ. ನನ್ನ ಭಾಷಣ ರದ್ದಾಗುವುದಕ್ಕೆ ಕಾರಣ, ಅಲ್ಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದವರು ಪಾಕಿಸ್ತಾನಿ ಮೂಲದವರು. ಈ ಕಷ್ಟದ ಹೋರಾಟದಲ್ಲಿ ನೀವು ನನ್ನನ್ನು ಬೆಂಬಲಿಸಿ’ ಎಂದು ಬರೆದುಕೊಂಡಿದ್ದಾರೆ ಮತ್ತು ವಿಡಿಯೋ ಸಂದೇಶ ರವಾನಿಸಿದ್ದಾರೆ. ಅಲ್ಲದೇ ವಿಶ್ವ ವಿದ್ಯಾಲಯದ ವಿರುದ್ಧ ಕಾನೂನು ಮೊಕದ್ದಮೆ ಹೂಡವುದಾಗಿಯೂ ಅವರು ತಿಳಿಸಿದ್ದಾರೆ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ನನ್ನ ನಿಲುವನ್ನು ಮಾತಿನ ಮೂಲಕ ಹೇಳುವುದಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದೆ. ಆದರೆ, ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಹಿಂದೂಗಳು ಅಲ್ಪಸಂಖ್ಯಾತರು. ನನ್ನಿಂದಾಗಿ ಅವರ ಧ್ವನಿ ದೊಡ್ಡದಾಗುತ್ತದೆ ಎನ್ನುವ ಭಯವೂ ಅದರಲ್ಲಿ ಇರಬೇಕು ಎಂದೂ ಅಗ್ನಿಹೋತ್ರಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿಣಾವ ಎಂದೂ ಅವರು ಆರೋಪಿಸಿದ್ದಾರೆ.

  • ಸಲಿಂಗ ವಿವಾಹವಾದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿಯರು

    ಸಲಿಂಗ ವಿವಾಹವಾದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ಆಟಗಾರ್ತಿಯರು

    ಲಂಡನ್: 2017ರ ಮಹಿಳಾ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯರಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸೀವರ್ ಸಲಿಂಗ ವಿವಾಹ ಮಾಡಿಕೊಂಡಿದ್ದಾರೆ.

    ವಿವಾಹವಾದ ಕ್ಯಾಥರೀನ್ ಬ್ರಂಟ್ ಮತ್ತು ನ್ಯಾಟ್ ಸೀವರ್ ಅವರಿಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ನಮ್ಮ ಆತ್ಮೀಯ ಅಭಿನಂದನೆಗಳು ಎಂದು ಶುಭ ಹಾರೈಸಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ಆಡಿದ್ದು ಡೆಲ್ಲಿ ಪರ – ಫೈನಲ್‍ನಲ್ಲಿ ಆ ಒಂದು ಕಾರಣಕ್ಕಾಗಿ ರಾಜಸ್ಥಾನ ತಂಡಕ್ಕೆ ಚಿಯರ್ ಅಪ್ ಮಾಡಿದ್ರು ಚೇತನ್ ಸಕಾರಿಯಾ

    ತಂಡದ ನಾಯಕಿ ಹೀದರ್ ನೈಟ್, ಡ್ಯಾನಿ ವ್ಯಾಟ್, ಇಸಾ ಗುಹಾ, ಜೆನ್ನಿ ಗನ್ ಸೇರಿದಂತೆ ಇಂಗ್ಲೆಂಡ್ ತಂಡದ ಪ್ರಸ್ತುತ ಮತ್ತು ಹಿಂದಿನ ಆಟಗಾರರೆಲ್ಲರೂ ಸಮಾರಂಭದಲ್ಲಿ ಭಾಗವಹಿಸಿದ್ದರು. ಬ್ರಂಟ್ ಮತ್ತು ಸೀವರ್ 2017ರ ವಿಶ್ವಕಪ್ ವಿಜೇತ ತಂಡದ ಆಟಗಾರ್ತಿಯಾರಾಗಿದ್ದಾರೆ. ಇವರಿಬ್ಬರು 2022ರ ಮಹಿಳಾ ವಿಶ್ವಕಪ್‍ನಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಇಂಗ್ಲೆಂಡ್ ರನ್ನರ್-ಅಪ್ ಆಗಿ ಹೊರಹೊಮ್ಮಿತ್ತು. ಇದನ್ನೂ ಓದಿ: ಗುಜರಾತ್‌ಗೆ ಐಪಿಎಲ್‌ ಟ್ರೋಫಿ – ಯಾವ ಆಟಗಾರರಿಗೆ ಏನು ಪ್ರಶಸ್ತಿ?

    corona

    ನ್ಯೂಜಿಲೆಂಡ್‍ನಲ್ಲಿ ಇತ್ತೀಚೆಗೆ ನಡೆದ ಏಕದಿನ ಗ್ಲೋಬಲ್ ಇವೆಂಟ್‍ನಲ್ಲಿ, ಸೀವರ್ 121 ಎಸೆತಗಳಲ್ಲಿ ಅಜೇಯ 148 ರನ್ ಗಳಿಸಿದ್ದರು. ಆದರೆ ಅಂತಿಮವಾಗಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದರು. ಅಕ್ಟೋಬರ್ 2019 ರಲ್ಲಿ ಬ್ರಂಟ್ ಜೊತೆಗಿನ ನಿಶ್ಚಿತಾರ್ಥವನ್ನು ಸೀವರ್ ಘೋಷಿಸಿದ್ದರು. ಸಲಿಂಗ ದಂಪತಿ ಸೆಪ್ಟೆಂಬರ್ 2020ರಲ್ಲಿ ಮದುವೆಯಾಗಬೇಕಿತ್ತು. ಆದರೆ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಅವರ ಮದುವೆಯನ್ನು ಮುಂದೂಡಲಾಗಿತ್ತು.

  • ತನ್ನದೇ ಮೂತ್ರ ಕುಡಿದು ಮಾನಸಿಕ ಸಮಸ್ಯೆಯಿಂದ ಹೊರಬಂದಿದ್ದಾನೆ ಈ ವ್ಯಕ್ತಿ!

    ತನ್ನದೇ ಮೂತ್ರ ಕುಡಿದು ಮಾನಸಿಕ ಸಮಸ್ಯೆಯಿಂದ ಹೊರಬಂದಿದ್ದಾನೆ ಈ ವ್ಯಕ್ತಿ!

    ಲಂಡನ್: ಆರೋಗ್ಯ ಕಾಳಜಿಗಾಗಿ ಜನ ದಿನಕ್ಕೊಂದು ವಿಧಾನ ಅನುಸರಿಸುತ್ತಾರೆ. ಕೆಲವರಂತೂ ತಮ್ಮ ಸೌಂದರ್ಯ ಹೆಚ್ಚುತ್ತದೆ ಅಂದ್ರೆ ಸಾಕು ಯಾರು ಸಲಹೆ ನೀಡಿದರೂ ಬೇಡ ಅನ್ನೋದೇ ಇಲ್ಲ. ಆದರೆ ಇಲ್ಲೊಬ್ಬ ಭೂಪ ವಿಲಕ್ಷಣ ವಿಧಾನವನ್ನು ಅನುಸರಿಸಿದ್ದಾನೆ. ಅವನ ಈ ನಡೆಯನ್ನು ಕಂಡು ನೆಟ್ಟಿಗರೇ ದಂಗಾಗಿದ್ದಾರೆ.

    UK MAN DRINK 03

    ಹೌದು. ಇಂಗ್ಲೆಂಡ್‌ನಲ್ಲಿರುವ 34 ವರ್ಷದ ವ್ಯಕ್ತಿಯೊಬ್ಬ ತನ್ನ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಮೂತ್ರ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾನೆ. ಇದರಿಂದಾಗಿ ತಾನು ಮಾನಸಿಕ ಸಮಸ್ಯೆಯಿಂದ ಹೊರಬಂದಿರುವುದು ಮಾತ್ರವಲ್ಲದೇ ಎಂದಿಗಿಂತ 10 ವರ್ಷ ಚಿಕ್ಕವನಾಗಿ ಯೌವ್ವನದ ಯುವಕನ ಹಾಗೆ ಕಾಣುವಂತೆ ಮಾಡಿದೆ ಎನ್ನಲಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ತನ್ನ ಮನೆಯ ಜೊತೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಳು!

    UK MAN DRINK 04

    ವರದಿಗಳ ಪ್ರಕಾರ, ಹ್ಯಾಂಪ್‌ಶೈರ್‌ನ ಹ್ಯಾರಿ ಮೆಟಾಡೀನ್ ಎಂಬ ವ್ಯಕ್ತಿಯೊಬ್ಬರು 2016ರಿಂದ ತನ್ನ ಮೂತ್ರವನ್ನು ತಾನೇ ಸೇವಿಸಲು ಪ್ರಾರಂಭಿಸಿದ್ದಾನೆ. ಈತನಿಗೆ ಮಾನಸಿಕ ಸಮಸ್ಯೆಗಳಿದ್ದು, ಇದರಿಂದ ಹೊರಬರಲಾಗದೇ ಹತಾಶೆಗೆ ಒಳಗಾಗಿದ್ದಾನೆ. ಅವನು ಮೂತ್ರ ಚಿಕಿತ್ಸೆ ಪ್ರಾರಂಭಿಸಿದ ನಂತರ ಮನಸ್ಸಿಗೆ ಶಾಂತಿ ಸಿಕ್ಕಂತಾಗಿದೆ. ಅಲ್ಲದೆ ಶಾಂತ ರೀತಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವಂತೆ ಮಾಡಿದೆ. ಹಾಗಾಗಿ ಪ್ರತಿದಿನ ಇದೇ ವಿಧಾನವನ್ನು ಮುಂದುವರಿಸಿದ್ದಾರೆ.

    UK MAN DRINK

    ವರದಿಗಳ ಪ್ರಕಾರ ಮೆಟಾಡೀನ್‌, ಪ್ರತಿದಿನ 200 ಮಿಲಿಯಷ್ಟು ತನ್ನದೇ ಮೂತ್ರವನ್ನು ಕುಡಿಯುತ್ತಾನೆ. ತಾಜಾ ಮೂತ್ರದೊಂದಿಗೆ ತಿಂಗಳ ಹಳೆಯ ಮೂತ್ರವನ್ನೂ ಮಿಶ್ರಣ ಮಾಡಿ ಕುಡಿಯುವ ಈತ ತನ್ನ ಮೂತ್ರವನ್ನು ಸೂಪರ್ ಕ್ಲೀನ್ ಮೂತ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ ಹೆಚ್ಚುಕಾಲ ಸಂಗ್ರಹಿಸಿದ ಮೂತ್ರವು ದುರ್ವಾಸನೆಯಿಂದ ಕೂಡಿರುತ್ತದೆ. ಆದರೆ ಅದು ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಆತ ಸಂತೋಷದಿಂದಲೇ ಸ್ವೀಕರಿಸುತ್ತಾನೆ ಎನ್ನಲಾಗಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ

    ಕೆಲ ವರದಿಗಳು ಹೇಳುವಂತೆ ಮೆಟಾಡೀನ್, ಮೂತ್ರವನ್ನು ಸೇವಿಸುವುದಿಲ್ಲ. ಬದಲಾಗಿ ಅದನ್ನು ಮಾಯಿಶ್ಚರೈಸರ್ ಆಗಿ ಮುಖಕ್ಕೆ ಮಸಾಜ್ ಮಾಡುತ್ತಾರೆ. ಇದರಿಂದ ಅದು ತನ್ನನ್ನು 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆ. ಜೊತೆಗೆ ಹೆಚ್ಚುಕಾಲ ಉಳಿಸಿದ ಮೂತ್ರವನ್ನು ಕುಡಿಯುವುದರಿಂದ ಅದು ತನ್ನ ಯೌವನವನ್ನು ಹಲವು ವರ್ಷಗಳಿಗೆ ಪುನರುಜ್ಜೀವನಗೊಳಿಸಿದೆ ಎಂದು ಬೀಗಿದ್ದಾನೆ. ಮತ್ತೊಂದು ಕಡೆ ಮೂತ್ರ ಚಿಕಿತ್ಸೆಯ ಎಲ್ಲ ಪರಿಣಾಮಗಳೂ ಸಕಾರಾತ್ಮಕವಲ್ಲ ಎಂಬುದನ್ನೂ ಉಲ್ಲೇಖಿಸಿದ್ದಾನೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ

    UK MAN DRINK 5

    ಈ ಕುರಿತು ಮಾತನಾಡಿರುವ ಮೆಟಾಡೀನ್‌, ನಾನು ಅದನ್ನು ಸೇವಿಸುವಾಗ ಅಷ್ಟು ಶಕ್ತಿಯುತ ಎಂಬುದು ನನ್ನ ಕಲ್ಪನೆಗೂ ಮೀರಿದ್ದಾಗಿತು. ಮೂತ್ರ ಸೇವನೆ ಆರಂಭಿಸಿದಾಗಿನಿಂದ ಅದು ನನ್ನ ಮೆದುಳನ್ನು ಚುರುಕುಗೊಳಿಸಿತು. ಖಿನ್ನತೆಯನ್ನು ತೆಗೆದುಹಾಕಿತು. ಇದರಿಂದಾಗಿ ಶಾಂತ ರೀತಿಯಲ್ಲಿ ವರ್ತಿಸುವ ಹಾಗೂ ನಿರ್ಣಯಗಳನ್ನು ಕೈಗೊಳ್ಳುವಂತವನಾದೆ ಎಂದು ಇದೀಗ ನಾನು ಸಂತೋಷದಿಂದ್ದೇನೆ ಎಂದು ಹೇಳಿಕೊಂಡಿದ್ದಾರೆ.