Tag: england

  • ಭಾರತ Vs ಇಂಗ್ಲೆಂಡ್ ಟೆಸ್ಟ್ – ಮತ್ತೆ ಸುದ್ದಿಯಾದ ಜಾರ್ವೋ 69

    ಭಾರತ Vs ಇಂಗ್ಲೆಂಡ್ ಟೆಸ್ಟ್ – ಮತ್ತೆ ಸುದ್ದಿಯಾದ ಜಾರ್ವೋ 69

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಜೊತೆಗೆ ಜಾರ್ವೋ 69 ಎಂಬಾತನ ಬಗ್ಗೆ ಭಾರೀ ಚರ್ಚೆ ಆರಂಭವಾಗಿದೆ.

    ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗ ಇಂಗ್ಲೆಂಡ್ ಪ್ರೇಕ್ಷಕ ಭಾರತದ ಅಭಿಮಾನಿ ಜಾರ್ವೋ 69 ನಂಬರ್‌ನ ಜೆರ್ಸಿ ಧರಿಸಿ ಮೈದಾನಕ್ಕೆ ಆಗಮಿಸಿ ತರ್ಲೆ ಮಾಡಿದ್ದ. ಆ ಬಳಿಕ ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಇಂದು 5ನೇ ಟೆಸ್ಟ್ ಪಂದ್ಯ ಆರಂಭವಾಗಿದೆ. ಪಂದ್ಯ ಆರಂಭವಾಗುತ್ತಿದ್ದಂತೆ ಜಾರ್ವೋ ಹೆಸರು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

    ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪ್ರೇಕ್ಷಕ ಜಾರ್ವೋ 69 ಜೆರ್ಸಿ ಧರಿಸಿದಾತ ಭಾರತದ ಪರ ಫೀಲ್ಡಿಂಗ್ ಮಾಡಲು ಮುಂದಾಗಿದ್ದ. ಈ ವೇಳೆ ಭದ್ರತಾ ಸಿಬ್ಬಂದಿ ಹಿಡಿದು ಹೊರ ಹಾಕಲು ಪ್ರಯತ್ನಿಸಿದಾಗ ಬಿಸಿಸಿಐ ಲಾಂಛನವನ್ನು ತನ್ನ ಜೆರ್ಸಿಯಲ್ಲಿ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದ. ಇದನ್ನೂ ಓದಿ: ಕೇವಲ 40ರೂ.ನಲ್ಲಿ ಧೋನಿ ಮಂಡಿ ನೋವು ಗುಣಪಡಿಸಿದ ಹಳ್ಳಿ ವೈದ್ಯ!

    https://twitter.com/Abdullah__Neaz/status/1542787820095344641

    ನಂತರ 3ನೇ ಟೆಸ್ಟ್ ಪಂದ್ಯದಲ್ಲಿ ಜಾರ್ವೋ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಿದ್ದ. ಬಳಿಕ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಹೊರಹಾಕಿದ್ದರು.

    ಇದೀಗ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಡಬ್ಲ್ಯೂಟಿಸಿ ಫೈನಲ್‍ಗೇರಲು ಈ ಪಂದ್ಯ ಭಾರತ ಹಾಗೂ ಇಂಗ್ಲೆಂಡ್ ಎರಡೂ ತಂಡಗಳಿಗೂ ಮಹತ್ವದ್ದಾಗಿದೆ.

    Live Tv

  • ಕಪಿಲ್ ದೇವ್ ನಂತರ 35 ವರ್ಷಗಳ ಬಳಿಕ ಭಾರತದ ನಾಯಕತ್ವ ಪಡೆದ ವೇಗಿ – ಬುಮ್ರಾ ಕ್ಯಾಪ್ಟನ್, ಪಂತ್ ವೈಸ್ ಕ್ಯಾಪ್ಟನ್

    ಕಪಿಲ್ ದೇವ್ ನಂತರ 35 ವರ್ಷಗಳ ಬಳಿಕ ಭಾರತದ ನಾಯಕತ್ವ ಪಡೆದ ವೇಗಿ – ಬುಮ್ರಾ ಕ್ಯಾಪ್ಟನ್, ಪಂತ್ ವೈಸ್ ಕ್ಯಾಪ್ಟನ್

    ಲಂಡನ್: ಇಂಗ್ಲೆಂಡ್ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ವೇಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ.

    ಖಾಯಂ ನಾಯಕ ರೋಹಿತ್ ಶರ್ಮಾ ಕೊರೊನಾದಿಂದಾಗಿ ಟೆಸ್ಟ್ ಪಂದ್ಯದಿಂದ ಹೊರ ಬಿದ್ದಿದ್ದು, ಅವರ ಬದಲಿಗೆ ಬುಮ್ರಾಗೆ ನಾಯಕತ್ವದ ಹೊಣೆ ಹೊರಿಸಲಾಗಿದೆ. ಜೊತೆಗೆ ರಿಷಭ್ ಪಂತ್‍ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ಇದನ್ನೂ ಓದಿ: ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – ತಂಡದಲ್ಲಿ ಯಾರೆಲ್ಲಾ ಇದ್ದಾರೆ?

    ಈ ಬಗ್ಗೆ ಬಿಸಿಸಿ ಟ್ವಿಟ್ಟರ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಕೋಚ್ ರಾಹುಲ್ ದ್ರಾವಿಡ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ರೋಹಿತ್ ಸೋಂಕಿನಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದೆ ಇರುವುದರಿಂದ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಜಸ್ಪ್ರೀತ್ ಬುಮ್ರಾಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ ಎಂದರು. ಇದನ್ನೂ ಓದಿ: ನಾಳೆಯಿಂದ ಭಾರತ – ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕ್ರಿಕೆಟ್: ಬುಮ್ರಾಗೆ ನಾಯಕನ ಪಟ್ಟ

    ಈ ಮೂಲಕ ಕಪಿಲ್ ದೇವ್ ಬಳಿಕ ಮತ್ತೊಮ್ಮೆ ವೇಗದ ಬೌಲರ್‌ಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ಇದರೊಂದಿಗೆ ಬುಮ್ರಾ 35 ವರ್ಷಗಳ ಬಳಿಕ ಬೌಲರ್ ಒಬ್ಬ ಮತ್ತೊಮ್ಮೆ ಟೀಂ ಇಂಡಿಯಾದ ಚುಕ್ಕಾಣಿ ಹಿಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    Live Tv

  • ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – ತಂಡದಲ್ಲಿ ಯಾರೆಲ್ಲಾ ಇದ್ದಾರೆ?

    ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – ತಂಡದಲ್ಲಿ ಯಾರೆಲ್ಲಾ ಇದ್ದಾರೆ?

    ಲಂಡನ್: ಭಾರತದ ವಿರುದ್ಧ ನಾಳೆಯಿಂದ ಆರಂಭವಾಗಲಿರುವ ಏಕೈಕ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡ ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದೆ.

    ಎಡ್ಜ್‌ಬಾಸ್ಟನ್‌ನಲ್ಲಿ ನಾಳೆಯಿಂದ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇಂಗ್ಲೆಂಡ್ ತಂಡದ ಪಂದ್ಯ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದೆ. ನ್ಯೂಜಿಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ ಫೋಕ್ಸ್ ಕೊರೊನಾದಿಂದಾಗಿ ತಂಡದಿಂದ ಹೊರಗುಳಿದಿದ್ದು ಅವರ ಬದಲಿಗೆ ಸ್ಯಾಮ್ ಬಿಲ್ಲಿಂಗ್ಸ್ ವಿಕೆಟ್ ಕೀಪರ್ ಆಗಿ ಆಯ್ಕೆ ಗೊಂಡಿದ್ದಾರೆ.


    ತಂಡ ಹೀಗಿದೆ:
    ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (C), ಸ್ಯಾಮ್ ಬಿಲ್ಲಿಂಗ್ಸ್ (WK), ಮ್ಯಾಥ್ಯೂ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್. ಇದನ್ನೂ ಓದಿ: ನಾಳೆಯಿಂದ ಭಾರತ – ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕ್ರಿಕೆಟ್: ಬುಮ್ರಾಗೆ ನಾಯಕನ ಪಟ್ಟ

    ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿತ್ತು. ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಏಕೈಕ ಟೆಸ್ಟ್ ಪಂದ್ಯ ನಾಳೆಯಿಂದ ಆರಂಭವಾಗುತ್ತಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಪಡೆದುಕೊಂಡಿದೆ. ನಾಳೆ ಮಧ್ಯಾಹ್ನ 3:00 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಇದನ್ನೂ ಓದಿ: ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್

    ಈ ನಡುವೆ ಭಾರತ ತಂಡಕ್ಕೆ ಕೊರೊನಾ ಅಡ್ಡಿಯಾಗುತ್ತಿದೆ. ಕೊರೊನಾ ಕಾಣಿಸಿಕೊಂಡ ಪರಿಣಾಮ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಂಡದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಅನುಪಸ್ಥಿತಿಯಲ್ಲಿ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡವನ್ನು ನಾಯಕನಾಗಿ ಮುನ್ನಡೆಸುವ ಸಾಧ್ಯತೆ ಇದೆ. ಆದರೆ ರೋಹಿತ್ ಶರ್ಮಾ ಕೊರೊನಾ ವರದಿ ಇಂದು ಸಂಜೆ ನೆಗೆಟಿವ್ ಬಂದರೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುಳಿವು ಕೋಚ್ ರಾಹುಲ್ ದ್ರಾವಿಡ್ ನೀಡಿದ್ದಾರೆ.

    Live Tv

  • ನಾಳೆಯಿಂದ ಭಾರತ – ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕ್ರಿಕೆಟ್: ಬುಮ್ರಾಗೆ ನಾಯಕನ ಪಟ್ಟ

    ನಾಳೆಯಿಂದ ಭಾರತ – ಇಂಗ್ಲೆಂಡ್ ಹೈವೋಲ್ಟೇಜ್ ಟೆಸ್ಟ್ ಕ್ರಿಕೆಟ್: ಬುಮ್ರಾಗೆ ನಾಯಕನ ಪಟ್ಟ

    ಲಂಡನ್: ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಜುಲೈ 1ರಿಂದ ಆರಂಭವಾಗಲಿದೆ.

    15 ವರ್ಷಗಳ ಬಳಿಕ ಇಂಗ್ಲೆಂಡ್ ತವರಿನಲ್ಲೇ ಟೆಸ್ಟ್ ಸರಣಿ ಗೆಲ್ಲುವ ಕಾತರದಲ್ಲಿ ಟೀಂ ಇಂಡಿಯಾ ಸಜ್ಜಾಗಿದೆ. ಹೈವೋಲ್ವೇಜ್ ಪಂದ್ಯಕ್ಕೆ ಈಗಾಗಲೇ ದೀರ್ಘ ಅಭ್ಯಾಸದಲ್ಲಿ ನಿರತರಾಗಿರುವ ಭಾರತೀಯ ಆಟಗಾರರು ಇಂಗ್ಲೆಂಡ್ ತವರಲ್ಲೇ ಬಗ್ಗುಬಡಿದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

    ಇಂಗ್ಲೆಂಡ್‌ನಲ್ಲಿ 1971ರಲ್ಲಿ ಮೊದಲ ಬಾರಿ ಟೆಸ್ಟ್ ಸರಣಿ ಗೆದ್ದಿದ್ದ ಭಾರತಕ್ಕೆ 2ನೇ ಟೆಸ್ಟ್ ಸರಣಿ ಜಯ ಒಲಿದಿದ್ದು 1986ರಲ್ಲಿ. ಬಳಿಕ 2007ರಲ್ಲಿ ಪಟೌಡಿ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್‌ನಲ್ಲಿ ಕೊನೆ ಬಾರಿ ಭಾರತ ಸರಣಿ ಗೆದ್ದಿತ್ತು. 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಗೆದ್ದಿದ್ದ ಟೀಂ ಇಂಡಿಯಾ, ಬಳಿಕ 3 ಬಾರಿ (2011, 2014 ಹಾಗೂ 2018) ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡಿದ್ದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ರ್‍ಯಾಂಕಿಂಗ್‌ನಲ್ಲಿ ಕೊಹ್ಲಿಯ ಅಪರೂಪದ ವಿಶ್ವ ದಾಖಲೆ ಮುರಿದ ಬಾಬರ್ ಅಜಮ್

    ಆ ಬಳಿಕ ಕಳೆದ ವರ್ಷ ಆಗಸ್ಟ್ನಲ್ಲಿ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತ್ತು. ಸರಣಿಯಲ್ಲಿ ನಡೆದಿದ್ದ 4 ಪಂದ್ಯಗಳಲ್ಲಿ ಪ್ರವಾಸಿ ಭಾರತ 2-1 ರಿಂದ ಮುಂದಿದ್ದರೂ ಕೊನೆ ಟೆಸ್ಟ್ ಪಂದ್ಯ ನಡೆಯದಿದ್ದರಿಂದ ಸರಣಿ ಭಾರತಕ್ಕೆ ಒಲಿಯುವುದು ಕೈತಪ್ಪಿತು. ಇದೀಗ ಮತ್ತೆ ಮರು ನಿಗದಿಯಾಗಿರುವ ಟೆಸ್ಟ್ ಸರಣಿ ಜುಲೈ 1ರಿಂದ ಆರಂಭವಾಗಲಿದೆ.

    ಬುಮ್ರಾಗೆ ನಾಯಕನ ಪಟ್ಟ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದು, ಯುವ ವೇಗಿ ಜಸ್ಪ್ರಿತ್‌ ಬುಮ್ರಾ ತಂಡವನ್ನು ಮುನ್ನಡೆಸಲಿದ್ದಾರೆ.

    35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬೌಲರ್ ಒಬ್ಬರು ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ 5ನೇ ಟೆಸ್ಟ್‌ನಲ್ಲಿ ಭಾರತೀಯ ಟೆಸ್ಟ್ ತಂಡವನ್ನು ಮುನ್ನಡೆಸಲು ಬುಮ್ರಾ ಸಿದ್ಧರಾಗಿದ್ದಾರೆ. ಇದನ್ನೂ ಓದಿ: ಚೊಚ್ಚಲ ಶತಕದೊಂದಿಗೆ ಮಿಂಚಿದ ದೀಪಕ್‌ ಹೂಡಾ – ಐರ್ಲೆಂಡ್‌ ವಿರುದ್ಧ ಭಾರತಕ್ಕೆ 4 ರನ್‌ಗಳ ರೋಚಕ‌ ಜಯ

    1987ರಲ್ಲಿ ಕಪಿಲ್ ದೇವ್ ಅವರು ಟೀಂ ಇಂಡಿಯಾವನ್ನು ಕೊನೆಯ ಬಾರಿಗೆ ಮುನ್ನಡೆಸಿದ್ದ ಬೌಲರ್ ಆಗಿದ್ದರು. ಜುಲೈ 1ರಿಂದ ಪ್ರಾರಂಭವಾಗುವ ಈ ಟೆಸ್ಟ್ ಪಂದ್ಯದಿಂದ ರೋಹಿತ್ ಹೊರಗುಳಿದಿದ್ದಾರೆ. ಕಾರಣ ಅವರ RTPCR ಪರೀಕ್ಷೆಯು ಮತ್ತೊಮ್ಮೆ ಪಾಸಿಟಿವ್ ಬಂದಿದ್ದು, ಅವರನ್ನು ಐಸೋಲೇಟ್ ಮಾಡಲಾಗಿದೆ. ಕೆ.ಎಲ್‌.ರಾಹುಲ್ ಅನುಪಸ್ಥಿತಿಯಲ್ಲಿ ಉಪನಾಯಕರಲ್ಲಿ ಒಬ್ಬರಾಗಿರುವ ಜಸ್ಪ್ರಿತ್‌ ಬುಮ್ರಾ ತಮ್ಮ ನಾಯಕತ್ವದಲ್ಲಿ ಮುನ್ನಡೆಸಲಿದ್ದಾರೆ.

    Live Tv

  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಯಾನ್ ಮಾರ್ಗನ್ ವಿದಾಯ

    ಲಂಡನ್: ಇಂಗ್ಲೆಂಡ್ ತಂಡದ ಮಾಜಿ ನಾಯಕ ಇಯಾನ್ ಮಾರ್ಗನ್ ಇಂದು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

    2021ರ ಐಪಿಎಲ್ ನಂತರ ಸತತ ಬ್ಯಾಟಿಂಗ್ ವೈಫಲ್ಯದಿಂದ ಹಿನ್ನಡೆ ಕಂಡಿದ್ದ ಇಯಾನ್ ಮಾರ್ಗನ್ ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಪಯಣಕ್ಕೆ ಪೂರ್ಣ ವಿರಾಮ ಹಾಕಿದ್ದಾರೆ.

    13 ವರ್ಷಗಳ ಇಂಗ್ಲೆಂಡ್ ತಂಡದ ಪಯಣದಲ್ಲಿ ಐಯಾನ್ ಮಾರ್ಗನ್ ಅಮೋಘ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ 2019ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಯನ್ನು ಮೊಟ್ಟ ಮೊದಲ ಬಾರಿಗೆ ಗೆದ್ದು ಸಂಭ್ರಮಿಸಿತ್ತು. 2010ರಲ್ಲಿ ಐಸಿಸಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದಲ್ಲಿ ಮಾರ್ಗನ್ ಆಡಿದ್ದರು. 2021ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ನೊಂದಿಗೆ ಸೆಣಸಾಡಿ ಕೆಕೆಆರ್ ತಂಡಕ್ಕೆ ರನ್ನರ್‌ಅಪ್ ಪ್ರಶಸ್ತಿ ತಂದುಕೊಡುವಲ್ಲಿ ಮಾರ್ಗನ್ ಅವರ ಪಾತ್ರ ಅಪಾರವಾಗಿತ್ತು.

    2006ರಲ್ಲಿ ಐರ್ಲೆಂಡ್ ಪರ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. 3 ವರ್ಷಗಳ ಬಳಿಕ ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಯಾದರು. ಹಲವು ವರ್ಷಗಳ ಕಾಲ ಮಾರ್ಗನ್ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಐಸಿಇ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನೂ ಕಾಯ್ದುಕೊಂಡಿತ್ತು.

    ಇಯಾನ್ ಮಾರ್ಗನ್ ಈವರೆಗೆ 225 ಏಕದಿನ, 73 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ 13 ಶತಕಗಳೊಂದಿಗೆ 39.75ರ ಸರಾಸರಿಯಲ್ಲಿ 6,957 ರನ್ ದಾಖಲಿಸಿದ್ದಾರೆ. ಅದರಲ್ಲೂ ಅವರು 126 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 76 ರಲ್ಲಿ ಗೆಲುವು ತಂದುಕೊಟ್ಟಿದ್ದಾರೆ.

    Live Tv

  • ಬಿಎಸ್‌ ಯಡಿಯೂರಪ್ಪ ಇಂಗ್ಲೆಂಡ್‌ ಪ್ರವಾಸ 8 ದಿನ ವಿಸ್ತರಣೆ

    ಬಿಎಸ್‌ ಯಡಿಯೂರಪ್ಪ ಇಂಗ್ಲೆಂಡ್‌ ಪ್ರವಾಸ 8 ದಿನ ವಿಸ್ತರಣೆ

    ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಇಂಗ್ಲೆಂಡ್ ಪ್ರವಾಸ ವಿಸ್ತರಣೆಯಾಗಿದೆ. ಜುಲೈ 8 ರವರೆಗೂ ಇಂಗ್ಲೆಂಡ್ ಪ್ರವಾಸವನ್ನು ಯಡಿಯೂರಪ್ಪ ಮುಂದುವರಿಸಲಿದ್ದಾರೆ.

    ಈ ಮೊದಲು ಹತ್ತು ದಿನಗಳವರೆಗೆ ಪ್ರವಾಸ ನಿಗದಿಯಾಗಿತ್ತು. ಈಗ 10 ದಿನಗಳಿಂದ 18 ದಿನಗಳವರೆಗೆ ಪ್ರವಾಸದ ಅವಧಿ ವಿಸ್ತರಣೆ ಮಾಡಲಾಗಿದೆ.

    ಕುಟುಂಬ ಸಮೇತ ಜೂನ್ 21 ರಂದು ಯಡಿಯೂರಪ್ಪ ಇಂಗ್ಲೆಂಡ್ ಗೆ ತೆರಳಿದ್ದರು. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ

    Live Tv

  • ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ – ಕ್ಯಾನ್ಸಲ್ ಆಗುತ್ತಾ ಟೆಸ್ಟ್ ಪಂದ್ಯ?

    ಲಂಡನ್: ಇಂಗ್ಲೆಂಡ್ ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಶಾಕ್ ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

    ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಿಸಿಸಿಐ, ನಿನ್ನೆ ಕೊರೊನಾ ಟೆಸ್ಟ್ ಮಾಡುವ ವೇಳೆ ರೋಹಿತ್ ಶರ್ಮಾಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ರೋಹಿತ್ ತಂಡದ ಹೋಟೆಲ್‍ನಲ್ಲಿ ಐಸೋಲೇಷನ್‍ನಲ್ಲಿದ್ದು, ಬಿಸಿಸಿಐ ವೈದ್ಯಕೀಯ ತಂಡ ಅವರ ಅರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬೀದಿ ಬೀದಿ ಸುತ್ತಾಡಬೇಡಿ ಕೊಹ್ಲಿ, ರೋಹಿತ್ ವಿರುದ್ಧ ಬಿಸಿಸಿಐ ಗರಂ

    ಇಂಗ್ಲೆಂಡ್‍ನಲ್ಲಿ ಬೀಡುಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ಈಗಾಗಲೇ ಅಭ್ಯಾಸ ಪಂದ್ಯವನ್ನು ಆಡುತ್ತಿದ್ದಾರೆ. ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾ ತಂಡದ ನಾಯಕನಾಗಿ ತಂಡದೊಂದಿಗಿದ್ದರು. ಹಾಗಾಗಿ ಇನ್ನಷ್ಟು ಆತಂಕ ಎದುರಾಗಿದ್ದು, ಟೆಸ್ಟ್ ಪಂದ್ಯ ಕ್ಯಾನ್ಸಲ್ ಆಗುವ ಭೀತಿ ಎದುರಾಗಿದೆ. ಟೀಂ ಇಂಡಿಯಾ ಇಂಗ್ಲೆಂಡ್‍ಗೆ ತೆರಳಿದ ಬಳಿಕ ಆರ್.ಅಶ್ವಿನ್‍ಗೆ ಕೊರೊನಾ ಕಾಣಿಸಿಕೊಂಡಿತ್ತು. ಬಳಿಕ ಇದೀಗ ಅಶ್ವಿನ್ ಚೇತರಿಸಿಕೊಂಡಿದ್ದಾರೆ. ಇದನ್ನೂ ಓದಿ: ಜಾನಿ ಬೈರ್‌ಸ್ಟೋವ್ ಶತಕ ಸಿಡಿಸುತ್ತಿದ್ದಂತೆ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದ ಅಭಿಮಾನಿಗಳು!

    ಕಳೆದ ವರ್ಷ 5 ಪಂದ್ಯಗಳ ಟೆಸ್ಟ್ ಸರಣಿಯ ವೇಳೆ ತಂಡದಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಿತ್ತು. ಕೋವಿಡ್ ಹೆಚ್ಚಾದ ಬಳಿಕ 5ನೇ ಪಂದ್ಯ ನಡೆಸದೆ ಸರಣಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಇದೀಗ ಈ ಪಂದ್ಯವನ್ನು ಮುಂದುವರಿಸುತ್ತಿದ್ದು, ಏಕೈಕ ಟೆಸ್ಟ್ ಪಂದ್ಯ ಜುಲೈ 1 ರಿಂದ ಆರಂಭವಾಗುತ್ತಿದೆ. ಈಗಾಗಲೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-1 ಅಂತರದ ಮುನ್ನಡೆ ಪಡೆದುಕೊಂಡಿದೆ.

    Live Tv

  • ಜಾನಿ ಬೈರ್‌ಸ್ಟೋವ್ ಶತಕ ಸಿಡಿಸುತ್ತಿದ್ದಂತೆ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದ ಅಭಿಮಾನಿಗಳು!

    ಜಾನಿ ಬೈರ್‌ಸ್ಟೋವ್ ಶತಕ ಸಿಡಿಸುತ್ತಿದ್ದಂತೆ ಚಪ್ಪಲಿ ತೆಗೆದು ಕೈಯಲ್ಲಿ ಹಿಡಿದ ಅಭಿಮಾನಿಗಳು!

    ಲಂಡನ್: ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದ ಆಟಗಾರ ಜಾನಿ ಬೈರ್‌ಸ್ಟೋವ್  ಭರ್ಜರಿ ಶತಕ ಸಿಡಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಬರ್ಮಾ ಆರ್ಮಿ ಸದಸ್ಯರು ಕಾಲಿನಲ್ಲಿದ್ದ ಚಪ್ಪಲಿ, ಶೂಗಳನ್ನು ತೆಗೆದು ಕೈಯಲ್ಲಿ ಹಿಡಿದು ಸಂಭ್ರಮಿಸಿದರು.

    ಮೂರನೇ ಟೆಸ್ಟ್ ಪಂದ್ಯದಲ್ಲಿ ಎರಡೂ ತಂಡಗಳ ಮಧ್ಯೆ ಜಿದ್ದಾಜಿದ್ದಿನ ಕಾದಾಟ ಕಂಡು ಬರುತ್ತಿದೆ. ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ 329 ರನ್‍ಗಳಿಗೆ ಆಲೌಟ್ ಆಯಿತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ 55 ರನ್‍ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಬ್ಯಾಟಿಂಗ್‍ಗೆ ಆಗಮಿಸಿದ ಬೈರ್‌ಸ್ಟೋವ್ ತಾಳ್ಮೆಯುತ ಇನ್ನಿಂಗ್ಸ್ ಕಟ್ಟಿದರು. ಜೇಮೀ ಓವರ್ಟನ್ ಜೊತೆ ಕೂಡಿಕೊಂಡು ಭರ್ಜರಿ ಬ್ಯಾಟ್ ಬೀಸಿದ ಬೈರ್‌ಸ್ಟೋವ್ ಶತಕ ಸಿಡಿಸುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಜಾನಿ ಬೈರ್‌ಸ್ಟೋವ್ ಬರ್ಮಾ ಆರ್ಮಿ ಸದಸ್ಯರು ತಾವು ಧರಿಸಿದ್ದ ಚಪ್ಪಲಿ, ಶೂಗಳನ್ನು ತೆಗೆದು ಕೈಯಲ್ಲಿ ಹಿಡಿದು ಬೈರ್‌ಸ್ಟೋವ್‌ಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಔಟ್ ಮಾಡಿದ ಬೌಲರ್‌ಗೆ ಮಧ್ಯದ ಬೆರಳು ತೋರಿಸಿದ CSK ಆಟಗಾರ – ಟಿಎನ್‍ಪಿಎಲ್‍ನಲ್ಲಿ ಕಿರಿಕ್

    ಈ ರೀತಿ ಅಭಿನಂದನೆ ಸಲ್ಲಿಸಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ ಬರ್ಮಾ ಆರ್ಮಿ ಚಪ್ಪಲಿಯನ್ನು ತೆಗೆದು ಬೈರ್‌ಸ್ಟೋವ್‌ಗೆ ಅಭಿನಂದಿಸಿದ್ದೇವೆ ಎಂದು ಬರೆದುಕೊಂಡಿದೆ. ಪಂದ್ಯದಲ್ಲಿ ಬೈರ್‌ಸ್ಟೋವ್‌ ಶತಕದ ನೆರವಿನಿಂದ ಕುಸಿತ ಕಂಡಿದ್ದ ಇಂಗ್ಲೆಂಡ್ ತಿರುಗೇಟು ನೀಡುತ್ತಿದ್ದು, ಅಲ್ಪ ಹಿನ್ನಡೆಯಲ್ಲಿದೆ. ಇದನ್ನೂ ಓದಿ: ಫಿಫಾ ವಿಶ್ವಕಪ್ ವೇಳೆ ಸೆಕ್ಸ್‌ ಮಾಡಿದ್ರೆ 7 ವರ್ಷ ಜೈಲು!

    ಈಗಾಗಲೇ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ ತಂಡ 2-0 ಅಂತರದಲ್ಲಿ ವಶಪಡಿಸಿಕೊಂಡರೂ, ಮೂರನೇ ಟೆಸ್ಟ್‌ನಲ್ಲಿ ಗೆಲುವಿಗಾಗಿ ಹೋರಾಡುತ್ತಿದೆ. ಇತ್ತ ಕೊನೆಯ ಪಂದ್ಯವನ್ನು ಗೆದ್ದು ಸರಣಿಗೆ ಅಂತ್ಯವಾಡಲು ನ್ಯೂಜಿಲೆಂಡ್ ಪ್ಲಾನ್ ಮಾಡಿದೆ. ಹಾಗಾಗಿ ಎರಡೂ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

    Live Tv

  • ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಶಮಿ ಮಿಂಚಿನ ಬೌಲಿಂಗ್‌ಗೆ ಪೂಜಾರ ಡಕ್‌ಔಟ್ – ತಬ್ಬಿ ಸಂಭ್ರಮಿಸಿದ ಟೀಂ ಇಂಡಿಯಾ ವೇಗಿ

    ಮುಂಬೈ: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯನ್ನಾಡಲು ಸಮರಾಭ್ಯಾಸದಲ್ಲಿ ತೊಡಗಿದೆ.

    ಅದಕ್ಕಾಗಿ ಕೌಂಟಿ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಲೈಸ್ಟರ್‌ಶೈರ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಲೈಸ್ಟರ್‌ಶೈರ್ ತಂಡದ ಪರ ಆಡಿದ್ದ ಭಾರತ ತಂಡದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ಅವರನ್ನು ವೇಗಿಯ ಬೌಲರ್ ಮೊಹಮ್ಮದ್ ಶಮಿ ಶೂನ್ಯಕ್ಕೆ ಡಕ್‌ಔಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಔಟಾದ ಬಳಿಕ ಪೂಜಾರಾ ಅವರನ್ನು ತಬ್ಬಿ ಕುಣಿದಾಡುವ ಮೂಲಕ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ರಣಜಿ ಟ್ರೋಫಿಯಲ್ಲಿ DRS ಬಳಸಲು ಹಣವಿಲ್ಲ!

    ಅಭ್ಯಾಸ ಪಂದ್ಯದ 2ನೇ ದಿನವಾದ ಶುಕ್ರವಾರ ಭಾರತ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 246/8 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಶ್ರೀಕರ್ ಭರತ್ 111 ಎಸೆತಗಳಲ್ಲಿ ಅಜೇಯ 70 ರನ್ ಗಳಿಸಿ ತಂಡವನ್ನು 250ರ ಗಡಿ ತಲುಪುವಂತೆ ಮಾಡಿದರು. ಬಳಿಕ ಬ್ಯಾಟಿಂಗ್ ಆರಂಭಿಸಿದ ಲೈಸ್ಟರ್‌ಶೈರ್ ತಂಡ ಚಹಾ ವಿರಾಮಕ್ಕೆ 7 ವಿಕೆಟ್‌ಗಳ ನಷ್ಟದಲ್ಲಿ 213 ರನ್ ಗಳಿಸಿತ್ತು. ಲೈಸ್ಟರ್‌ಶೈರ್ ಪರ ಆಡಿದ್ದ ರಿಷಭ್ ಪಂತ್ 87 ಎಸೆತಗಳಲ್ಲಿ 76 ರನ್ ಗಳಿಸಿ ಔಟಾದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಇದಕ್ಕೂ ಮುನ್ನ ಕ್ರೀಸ್‌ನಲ್ಲಿದ್ದ ಪೂಜಾರಾ ಎಚ್ಚರಿಕೆ ಆಟವಾಡುವ ಸೂಚನೆ ನೀಡಿದ್ದರು. ಈ ವೇಳೆ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಪೂಜಾರಾ ಅವರನ್ನು ಪೆವಿಲಿಯನ್ ಸೇರುವಂತೆ ಮಾಡಿದರು. 6 ಎಸೆತಗಳನ್ನು ಎದುರಿಸಿದ ಚೇತೇಶ್ವರ್ ಖಾತೆ ಕೂಡ ತೆರೆಯಲಾಗದೆ ಪೆವಿಲಿಯನ್ ಸೇರಿದರು.

    Live Tv

  • ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 15 ವರ್ಷ ಪೂರೈಸಿದ ಹಿಟ್‌ಮ್ಯಾನ್ – ಭಾವುಕ ಪತ್ರ ಬರೆದ ರೋಹಿತ್ ಶರ್ಮಾ

    ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಿ 15 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸಂತಸವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

    2007ರಲ್ಲಿ ಇದೇ ದಿನ (ಜೂನ್ 23), ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಏಕದಿನ ಚೊಚ್ಚಲ ಪಂದ್ಯವನ್ನು ಆಡಿರುವುದಾಗಿ ನೆನಪಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಭಾರತ ಒಂಬತ್ತು ವಿಕೆಟ್‌ಗಳಿಂದ ಗೆದ್ದಿತ್ತು ಎಂಬುದನ್ನೂ ಅವರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಕ್ರಿಸ್ಟಿಯಾನೊ ರೊನಾಲ್ಡೊ ಮಾಲೀಕತ್ವದ 13 ಕೋಟಿ ಮೌಲ್ಯದ ಕಾರು ಅಪಘಾತ 

    ROHITH SHARMA

    ಈ ಕುರಿತಾಗಿ ಟ್ವೀಟ್ ಮಾಡಿರುವ ರೋಹಿತ್, ಎಲ್ಲರಿಗೂ ನಮಸ್ಕಾರ. ನನ್ನ ನೆಚ್ಚಿನ ಜೆರ್ಸಿಯಲ್ಲಿ 15 ವರ್ಷಗಳು ಕಳೆದಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್ ಜಗತ್ತಿನಲ್ಲಿ ನಾನು ಭಾರತಕ್ಕೆ ಪ್ರವೇಶಿಸಿ ಇಂದಿಗೆ 15 ವರ್ಷಗಳನ್ನು ಪೂರೈಸಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿದೆ. ಖಂಡಿತವಾಗಿ ನಾನು ನನ್ನ ಜೀವನದುದ್ದಕ್ಕೂ ಕಾಪಾಡಿಕೊಳ್ಳುತ್ತೇನೆ ಎಂದು ರೋಹಿತ್ ಭಾವುಕರಾಗಿದ್ದಾರೆ.

    ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಮತ್ತು ನಾನು ಉತ್ತಮ ಆಟಗಾರನಾಗಿ ಇಲ್ಲಿಯವರೆಗೆ ಪ್ರಯಾಣಿಸಲು ನನಗೆ ಸಹಾಯ ಮಾಡಿದ ಜನರಿಗೆ ವಿಶೇಷ ಧನ್ಯವಾದಗಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿನ್ನದ ಹುಡುಗ ನೀರಜ್ ಚೋಪ್ರಾ ಕೊರಳಿಗೆ ಮತ್ತೊಂದು ಚಿನ್ನ 

    ಮುಂದಿನ ತಿಂಗಳ ಜುಲೈ 1 ರಿಂದ 5ರ ವರೆಗೆ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನಾಡಲಿದೆ. ಅದಕ್ಕೂ ಮುನ್ನ ಲಿಸೆಸ್ಟರ್‌ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ.

    Live Tv