Tag: england

  • 51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

    51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

    ಲಂಡನ್: ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್‌ ಆಟಕ್ಕೆ ಮಂಕಾದ ಆಂಗ್ಲರು ಮೊದಲ ಟಿ20 ಪಂದ್ಯದಲ್ಲಿ ತವರಿನಲ್ಲಿ ಸೋಲು ಕಂಡಿದ್ದಾರೆ. ಇತ್ತ ಟೀಂ ಇಂಡಿಯಾ 50 ರನ್‍ಗಳ ಅಂತರದ ಭರ್ಜರಿ ಜಯದೊಂದಿಗೆ ಸರಣಿಯಲ್ಲಿ ಶುಭಾರಂಭ ಕಂಡಿದೆ.

    ಟೀಂ ಇಂಡಿಯಾ ಪರ ಪಾಂಡ್ಯ ಬ್ಯಾಟಿಂಗ್‍ನಲ್ಲಿ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಮತ್ತು ಬೌಲಿಂಗ್‍ನಲ್ಲಿ 4 ಓವರ್ ಎಸೆದು 33 ರನ್ ನೀಡಿ 4 ವಿಕೆಟ್ ಕಿತ್ತು ಆಂಗ್ಲರ ಹೆಡೆಮುರಿ ಕಟ್ಟಿದರು. ಭಾರತ ನೀಡಿದ 199 ರನ್‍ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿ 148 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿತು. ಇತ್ತ ನಂಬರ್ ಗೇಮ್‍ನಲ್ಲಿ ಮಿಂಚಿದ ಪಾಂಡ್ಯ 51 ರನ್ ಸಿಡಿಸಿದರೆ, ಭಾರತಕ್ಕೆ 50 ರನ್‍ಗಳ ಜಯ ತಂದುಕೊಟ್ಟರು. ಇದನ್ನೂ ಓದಿ: ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದು ಧೋನಿಗೆ ಮನವಿ ಮಾಡಿಕೊಂಡ ಪಾಕ್ ಕ್ರಿಕೆಟರ್

    ಈ ಮೂಲಕ ಪಾಂಡ್ಯ ಟಿ20 ಕ್ರಿಕೆಟ್‍ನಲ್ಲಿ 50+ ರನ್ ಮತ್ತು 4 ವಿಕೆಟ್ ಪಡೆದ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಗ್ಲೆಂಡ್ ವಿರುದ್ಧ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆ ಪಡೆದುಕೊಂಡಿದೆ.

    199 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್‍ಗೆ ಪಾಂಡ್ಯ ಆರಂಭದಿಂದಲೇ ಕಾಡತೊಡಗಿದರು. ಆರಂಭಿಕ ಆಟಗಾರ ಜೇಸನ್ ರಾಯ್ 4 ರನ್ (16 ಎಸೆತ) ಗಳಿಸಿ ಪಾಂಡ್ಯಗೆ ಮೊದಲ ವಿಕೆಟ್ ರೂಪದಲ್ಲಿ ಹೊರ ನಡೆದರೆ, ನಾಯಕ ಜೋಸ್ ಬಟ್ಲರ್ ಶೂನ್ಯ ಸುತ್ತಿ ಹೊರನಡೆದರು. ಡೇವಿಡ್ ಮಲಾನ್ 21 ರನ್ (14 ಎಸೆತ, 4 ಬೌಂಡರಿ) ಸಿಡಿಸಿ ಸಿಡಿಯುವ ಸೂಚನೆ ನೀಡಿದಾಗ ಮತ್ತೆ ದಾಳಿಗಿಳಿದ ಪಾಂಡ್ಯ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಬ್ರೂಕ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್), ಮೊಯಿನ್ ಅಲಿ 36 ರನ್ (4 ಬೌಂಡರಿ, 2 ಸಿಕ್ಸ್) ಸಿಡಿಸಿ ಔಟ್ ಆಗುವುದರೊಂದಿಗೆ ಇಂಗ್ಲೆಂಡ್ ಸೋಲು ಖಚಿತಗೊಂಡಿತು. ಅಂತಿಮವಾಗಿ ಕ್ರಿಸ್ ಜೋರ್ಡಾನ್ ಅಜೇಯ 26 ರನ್ (17 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ತಂಡದ ಸೋಲಿನ ಅಂತರವನ್ನು ಕುಗ್ಗಿಸಿದರು. ಅಂತಿಮವಾಗಿ 19. 3 ಓವರ್‌ಗಳಲ್ಲಿ ಇಂಗ್ಲೆಂಡ್ 148 ರನ್‍ಗಳಿಗೆ ಆಲೌಟ್ ಆಯಿತು. ಭಾರತ ಪರ ಪಾಂಡ್ಯ 4 ವಿಕೆಟ್, ಚಹಲ್ ಮತ್ತು ಹರ್ಷದೀಪ್ ಸಿಂಗ್ ತಲಾ 2 ವಿಕೆಟ್ ಹಂಚಿಕೊಂಡರೆ, ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು. ಇದನ್ನೂ ಓದಿ: ಓಂ ಹೆಲಿಕಾಪ್ಟರಾಯ ನಮಃ ಎಂದು ಧೋನಿಗೆ ವಿಶ್ ಮಾಡಿದ ಸೆಹ್ವಾಗ್

    ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಪರ ರೋಹಿತ್ ಶರ್ಮಾ 24 ರನ್ (14 ಎಸೆತ, 5 ಬೌಂಡರಿ) ಸಿಡಿಸಿ ಉತ್ತಮ ಆರಂಭ ನೀಡಿದರು. ಬಳಿಕ ದೀಪಕ್ ಹೂಡಾ 33 ರನ್ (17 ಎಸೆತ, 3 ಬೌಂಡರಿ, 2 ಸಿಕ್ಸ್) ಮತ್ತು ಸೂರ್ಯಕುಮಾರ್ ಯಾದವ್ 39 ರನ್ (19 ಎಸೆತ, 4 ಬೌಂಡರಿ, 2 ಸಿಕ್ಸ್) ಚಚ್ಚಿ ಮಧ್ಯಮಕ್ರಮಾಂಕದಲ್ಲಿ ರನ್ ಹೆಚ್ಚಿಸಿದರು. ಈ ಜೋಡಿ 43 ರನ್ (23 ಎಸೆತ) ಗಳ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಇಂಗ್ಲೆಂಡ್ ಬೌಲರ್‌ಗಳಿಗೆ ಬೌಂಡರಿ ರುಚಿ ತೋರಿಸುತ್ತ ಸಾಗಿದ ಪಾಂಡ್ಯ 51 ರನ್ (33 ಎಸೆತ, 6 ಬೌಂಡರಿ, 1 ಸಿಕ್ಸ್) ಚಚ್ಚಿ ತಂಡದ ಮೊತ್ತವನ್ನು 180ರ ಗಡಿದಾಟಿಸಿ ಔಟ್ ಆದರು. ಅಂತಿಮವಾಗಿ ಟೀಂ ಇಂಡಿಯಾ ನಿಗದಿತ ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 198 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    Live Tv
    [brid partner=56869869 player=32851 video=960834 autoplay=true]

  • ICC ಟೆಸ್ಟ್ ರ‍್ಯಾಂಕಿಂಗ್: ಕಳಪೆ ಬ್ಯಾಟಿಂಗ್‌ನಿಂದ ಟಾಪ್-10 ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಕೊಹ್ಲಿ

    ICC ಟೆಸ್ಟ್ ರ‍್ಯಾಂಕಿಂಗ್: ಕಳಪೆ ಬ್ಯಾಟಿಂಗ್‌ನಿಂದ ಟಾಪ್-10 ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡ ಕೊಹ್ಲಿ

    ದುಬೈ: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ನಿರಂತರ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಒಂದಿಲ್ಲೊಂದು ಆಘಾತ ಎದುರಿಸುತ್ತಿದ್ದಾರೆ. 15ನೇ ಆವೃತ್ತಿಯ ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್ ಮಾಡಿ ಸಾಕಷ್ಟು ಟ್ರೋಲ್ ಹಾಗೂ ಟೀಕೆಗಳಿಗೆ ಗುರಿಯಾಗಿದ್ದರು. ಐಪಿಎಲ್ ಬಳಿಕ ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್ ಕ್ರಿಕೆಟ್‌ನಲ್ಲೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಟೆಸ್ಟ್ ರ‍್ಯಾಂಕಿಗ್‌ನ ಟಾಪ್-10 ಪಟ್ಟಿಯಿಂದ ಹೊರಗುಳಿದಿದ್ದಾರೆ.

    ಜುಲೈ 1 ರಿಂದ 5ರ ವರೆಗೆ ಎಡ್ಜ್‌ಬಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 8 ರಿಂದ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನೂ ಓದಿ: ಭಾರತ – ವೆಸ್ಟ್ಇಂಡೀಸ್ ಏಕದಿನ ಕ್ರಿಕೆಟ್‌ ಸರಣಿಗೆ ಆಯ್ಕೆ ಪಟ್ಟಿ ಪ್ರಕಟ – ಶಿಖರ್ ಧವನ್ ಕ್ಯಾಪ್ಟನ್

    ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿನ ಪ್ರದರ್ಶನಗಳು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಸಾಕಷ್ಟು ಬದಲಾವಣೆಯನ್ನುಂಟು ಮಾಡಿವೆ. ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿತು. ಈ ಪಂದ್ಯದಲ್ಲಿ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ತಮ್ಮ ಆಕರ್ಷತಕ ಶತಕಗಳಿಂದ ಇಂಗ್ಲೆಂಡ್ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದ್ದಲ್ಲದೇ ಟೆಸ್ಟ್ ರ‍್ಯಾಂಕಿಂಗ್‌ನಲ್ಲೂ ಸ್ಥಾನ ಪಡೆದುಕೊಳ್ಳುವಂತೆ ಮಾಡಿದೆ.

    ಟಾಪ್-10 ಆಟಗಾರರಲ್ಲಿ ಅಗ್ರಸ್ಥಾನದಲ್ಲಿರುವ ಜೋ ರೂಟ್ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಆದರೆ 11ನೇ ಸ್ಥಾನದಲ್ಲಿದ್ದ ಬೈರ್‌ಸ್ಟೋವ್ 10ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಟೆಸ್ಟ್ನಲ್ಲಿ ಶತಕ ಹಾಗೂ ಅರ್ಧಶತಕ ಸಿಡಿಸುವ ಮೂಲಕ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಷಭ್ ಪಂತ್ ತಮ್ಮ ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಕೋವಿಡ್ ಪಾಸಿಟಿವ್ ಪ್ರಕರಣದಿಂದಾಗಿ ಇಂಗ್ಲೆಂಡ್ ಟೆಸ್ಟ್‌ನಿಂದ ಹೊರಗುಳಿದ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 8 ರಿಂದ 9ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ ಜಿಗಿತ ಕಂಡ ಪಾಕ್

    4ನೇ ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿ ತಮ್ಮ ನಿರಂತರ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದಾಗಿ 13ನೇ ಸ್ಥಾನಕ್ಕೆ ಇಳಿದಿದ್ದಾರೆ. ಇದು ವಿರಾಟ್ ಅಭಿಮಾನಿಗಳಲ್ಲೂ ಬೇಸರ ಮೂಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ  ಜಿಗಿತ ಕಂಡ ಪಾಕ್

    ಭಾರತ ತಂಡದ ಒಂದು ಎಡವಟ್ಟಿನಿಂದಾಗಿ ರ್‍ಯಾಂಕಿಂಗ್‌ನಲ್ಲಿ ಜಿಗಿತ ಕಂಡ ಪಾಕ್

    ಮುಂಬೈ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ 7 ವಿಕೆಟ್‍ಗಳ ಹೀನಾಯ ಸೋಲುಂಡ ಟೀಮ್ ಇಂಡಿಯಾಗೆ ಸೋಲಿನ ಮೇಲೆ ಸೋಲಾಗಿದೆ. ಜೊತೆಗೆ ಪಂದ್ಯದಲ್ಲಿ ಮಾಡಿದ ಒಂದು ಎಡವಟ್ಟಿನಿಂದಾಗಿ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳನ್ನು ಕಳೆದುಕೊಂಡು 4 ಸ್ಥಾನಕ್ಕೆ ಕುಸಿತ ಕಂಡಿದೆ.

    ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಲೋ ಓವರ್‌ರೇಟ್ ಕಾರಣ ದಂಡಕ್ಕೆ ಗುರಿಯಾಗಿದೆ. ಪಂದ್ಯದಲ್ಲಿ ಆಟಗಾರರ ಸಂಭಾವನೆಯಲ್ಲಿನ ಶೇ.40ರಷ್ಟು ತಂಡದೊಂದಿಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್ ಅಂಕಪಟ್ಟಿಯಲ್ಲಿ 2 ಅಂಕಗಳ ನಷ್ಟ ಅನುಭವಿಸಿದೆ. ಪಂದ್ಯದಲ್ಲಿ ಭಾರತ ತಂಡ ನಿಗದಿತ ಸಮಯಕ್ಕೆ ಸರಿಯಾಗಿ 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಈ ಕಾರಣ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಕ್ರಮ ಕೈಗೊಂಡಿದ್ದಾರೆ. ಪರಿಣಾಮ ಅಂಕಪಟ್ಟಿಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಟೀಂ ಇಂಡಿಯಾ 4ನೇ ಸ್ಥಾನಕ್ಕೆ ಕುಸಿತ ಕಂಡು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‍ಗೇರುವ ಅವಕಾಶ ವಂಚಿತವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಧೋನಿ ಹುಟ್ಟುಹಬ್ಬಕ್ಕಾಗಿ 41 ಅಡಿ ಎತ್ತರದ ಕಟೌಟ್‌ ಹಾಕಿದ ಫ್ಯಾನ್ಸ್

    5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‍ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‍ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇಂಗ್ಲೆಂಡ್ ತಂಡ ಐದು ಟೆಸ್ಟ್‌ಗಳ ಸರಣಿಯಲ್ಲಿ 2-2 ಅಂತರದ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.  ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಐಸಿಸಿ ನೀತಿ ಸಂಹಿತೆ 2.22 ನಿಯಮದನ್ವಯ ಸ್ಲೋ ಓವರ್‌ರೇಟ್ ಪ್ರಮಾದ ಎಸಗಿರುವ ಕಾರಣ ಕನಿಷ್ಠ ಕ್ರಮವಾಗಿ ಭಾರತ ತಂಡ ಆಟಗಾರರಿಗೆ ಪಂದ್ಯದ ಸಂಭಾವನೆಯಲ್ಲಿನ ಶೇ. 40ರಷ್ಟನ್ನು ದಂಡ ವಿಧಿಸಲಾಗಿದೆ. ಭಾರತ ತಂಡ ನಿಗದಿತ ಸಮಯದ ಅಂತ್ಯಕ್ಕೆ ಇನ್ನು 2 ಓವರ್‌ಗಳನ್ನು ಎಸೆಯುವುದು ಬಾಕಿಯಿತ್ತು. ಜೊತೆಗೆ 16.11.2 ನಿಯಮದ ಪ್ರಕಾರ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‍ಶಿಪ್‍ನ 2 ಅಂಕಗಳನ್ನು ಭಾರತ ತಂಡ ಕಳೆದುಕೊಂಡಿತು.

    ಈ ಮೂಲಕ ಆಸ್ಟ್ರೇಲಿಯಾ ತಂಡ ಪಾಯಿಂಟ್ ಪಟ್ಟಿಯಲ್ಲಿ 77.78 ಪಿಸಿಟಿ ಪಡೆದು ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 71.43 ಅಂಕದೊಂದಿಗೆ 2ನೇ ಸ್ಥಾನದಲ್ಲಿದೆ. ಪಾಕಿಸ್ತಾನ 52.38 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿಕೆ ಕಂಡರೆ, ಭಾರತ 52.08 ಪಿಸಿಟಿಯೊಂದಿಗೆ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ.

    Live Tv
    [brid partner=56869869 player=32851 video=960834 autoplay=true]

  • IND Vs ENG T20 ಸರಣಿ: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ

    IND Vs ENG T20 ಸರಣಿ: ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾದ ಭಾರತ

    ಬರ್ಮಿಂಗ್‌ಹ್ಯಾಂ: ಅಂತಿಮ ಪಂದ್ಯ ಗೆದ್ದು ಟೆಸ್ಟ್ ಸರಣಿ ಕೈವಶ ಮಾಡಿಕೊಳ್ಳುವ ಆಸೆಗೆ ತಣ್ಣೀರು ಎರಚಿದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಭಾರತ ಸಜ್ಜಾಗಿದೆ.

    ಇದೇ ಜುಲೈ 7ರಿಂದ ಭಾರತ ಹಾಗೂ ಇಂಗ್ಲೆಂಡ್ ನಡುವಿನ T20 ಸರಣಿ ಆರಂಭವಾಗಲಿದೆ. ನಂತರ ಜುಲೈ 15ರಿಂದ ಏಕದಿನ ಕ್ರಿಕೆಟ್ ಸರಣಿ ನಡೆಯಲಿದೆ. ಟೀಂ ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 7, 9 ಮತ್ತು 10 ರಂದು ಟಿ20 ಸರಣಿ ನಡೆಯಲಿದ್ದು, ಜುಲೈ 12, 14 ಹಾಗೂ 17ರಂದು ಏಕದಿನ ಸರಣಿ ನಡೆಯಲಿದೆ. ಇದನ್ನೂ ಓದಿ: ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್‌ನ ಎಡ್ಜಾಬಸ್ಟನ್ ಸ್ಟೇಡಿಯಂನಲ್ಲಿ ನಡೆದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್‌ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಟಿ20 ಸರಣಿ – ಯಾವಾಗ ಎಲ್ಲಿ?

    • 1ನೇ ಪಂದ್ಯ – ಜುಲೈ 07- ಸೌಥಂಪ್ಟನ್‌ನ ದಿ ರೋಸ್‌ಬೌಲ್ ಸ್ಟೇಡಿಯಂ
    • 2ನೇ ಪಂದ್ಯ – ಜುಲೈ 09- ಬರ್ಮಿಂಗ್‌ಹ್ಯಾಂನ ಎಡ್ಜಾಬಸ್ಟನ್ ಸ್ಟೇಡಿಯಂ
    • 3ನೇ ಪಂದ್ಯ – ಜುಲೈ 10- ನಾಟಿಂಗ್‌ಹ್ಯಾಂನ ಟ್ರೆಂಟ್‌ಬ್ರಿಡ್ಜ್ ಸ್ಟೇಡಿಯಂ

    ಏಕದಿನ ಸರಣಿ – ಯಾವಾಗ ಎಲ್ಲಿ?

    • ಮೊದಲ ಏಕದಿನ – ಜುಲೈ 12- ಲಂಡನ್‌ನ ದಿ ಓವಲ್ ಸ್ಟೇಡಿಯಂ
    • 2ನೇ ಏಕದಿನ – ಜುಲೈ 14- ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂ
    • 3ನೇ ಏಕದಿನ – ಜುಲೈ 17- ಮ್ಯಾಂಚೆಸ್ಟರ್‌ನ ಎಮಿರೇಟ್ಸ್ ಒಲ್ಡ್ ಟ್ರಾನ್ಸ್‌ಫರ್ಡ್‌ ಸ್ಟೇಡಿಯಂ

    Live Tv
    [brid partner=56869869 player=32851 video=960834 autoplay=true]

  • ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಭಾರತದ ಕನಸು ಭಗ್ನ – ಇಂಗ್ಲೆಂಡ್‌ಗೆ 7 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್: ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ ಅವರ ಶತಕಗಳ ನೆರವಿನಿಂದ ಭಾರತದ ವಿರುದ್ಧದ 5ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 7 ವಿಕೆಟ್‌ಗಳಿಂದ ಜಯಗಳಿಸಿದೆ. ಈ ಮೂಲಕ ಟೆಸ್ಟ್ ಸರಣಿ 2-2ರಲ್ಲಿ ಸಮಬಲ ಸಾಧಿಸಿದೆ.

    ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ನೀಡಿದ್ದ 378 ರನ್‌ಗಳ ಗುರಿ ಪಡೆದಿದ್ದ ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 76.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 378 ರನ್‌ಗಳಿಸುವ ಮೂಲಕ ಜಯ ಸಾಧಿಸಿತು. ಇದರಿಂದ ಅಂತಿಮ ಟೆಸ್ಟ್ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಟೀಂ ಇಂಡಿಯಾ ಕನಸು ಭಗ್ನಗೊಂಡಿತು. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಇಂಗ್ಲೆಂಡ್ ತಂಡವು 2ನೇ ಇನ್ನಿಂಗ್ಸ್‌ನ 4ನೇ ದಿನದ ಆಟದಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 259 ರನ್ ಪೇರಿಸಿತ್ತು. ಜಾನಿ ಬೈರ್‌ಸ್ಟೋವ್ ಹಾಗೂ ಜೋ ರೂಟ್ ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಕ್ರಮವಾಗಿ 114 ಹಾಗೂ 142 ರನ್‌ಗಳನ್ನು ಗಳಿಸಿದ್ದರು. ಇದನ್ನೂ ಓದಿ: ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    5ನೇ ದಿನದ ಆಟಕ್ಕೆ ಗೆಲ್ಲಲು 119 ರನ್‌ಗಳು ಮಾತ್ರವೇ ಬೇಕಿತ್ತು. ಆದರೆ ಟೀಂ ಇಂಡಿಯಾವು ರೂಟ್ ಹಾಗೂ ಬೈರ್‌ಸ್ಟೋವ್ ಅವರ ಜೋಡಿಯು ಭಾರತದ ಸರಣಿ ಗೆಲ್ಲುವ ಆಸೆಗೆ ತಣ್ಣೀರು ಎರಚಿತು.

    ಮೊದಲ 4 ಪಂದ್ಯಗಳಲ್ಲಿ ಟೀಂ ಇಂಡಿಯಾ 2 ಪಂದ್ಯಗಳಲ್ಲಿ ಗೆದ್ದು ಮುನ್ನಡೆ ಸಾಧಿಸಿತ್ತು. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನ್ಯಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೊದಲ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 151 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿತ್ತು. ಹೆಡಿಂಗ್ಲೆಯಲ್ಲಿ ನಡೆದ 3ನೇ ಪಂದ್ಯದಲ್ಲಿ ಅಬ್ಬರಿಸಿದ್ದ ಇಂಗ್ಲೆಂಡ್ ತಂಡವು 76 ರನ್ ಹಾಗೂ 7 ವಿಕೆಟ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿತ್ತು.

    ಓವಲ್ ಮೈದಾನದಲ್ಲಿ ನಡೆದ 4ನೇ ಪಂದ್ಯದಲ್ಲಿ ಭಾರತವು 157 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸರಣಿ ಕೈವಶ ಮಾಡಿಕೊಳ್ಳುವ ಕನಸುಕಂಡಿತ್ತು. ಆದರೆ ಅಂತಿಮ ಟೆಸ್ಟ್‌ನಲ್ಲಿ ರೂಟ್ ಹಾಗೂ ಬೈರ್‌ಸ್ಟೋವ್ ಜೋಡಿಯ ಬಿರುಸಿನ ಆಟವು ಇಂಡಿಯಾದ ಸರಣಿ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದೆ.

    ರೂಟ್, ಬೈರ್‌ಸ್ಟೋವ್ ಶತಕಗಳ ಅಬ್ಬರ: ಅಂತಿಮ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ 4ನೇ ವಿಕೆಟ್ ಆಟಕ್ಕೆ ಜೊತೆಯಾದ ಜೋ ರೂಟ್ ಹಾಗೂ ಜಾನಿ ಬೈರ್‌ಸ್ಟೋವ್ 315 ಎಸೆತಗಳಲ್ಲಿ 268 ರನ್‌ಗಳ ಜೊತೆಯಾಟವಾಡಿದರು. ಇಬ್ಬರ ಆಕರ್ಷಕ ಶತಕಗಳ ನೆರವಿನಿಂದ ತವರಿನಲ್ಲಿ ಮುಖಭಂಗ ಆಗುವುದನ್ನು ತಪ್ಪಿಸಿಕೊಂಡಿತು. ಜೋ ರೂಟ್ 173 ಎಸೆತಗಳಲ್ಲಿ 142 ರನ್ (19 ಫೋರ್, 1 ಸಿಕ್ಸರ್) ಗಳಿಸಿದರೆ 145 ಎಸೆತಗಳನ್ನು ಎದುರಿಸಿದ ಬೈರ್‌ಸ್ಟೋವ್ 114 ರನ್ (15 ಫೋರ್ ಹಾಗೂ 1 ಸಿಕ್ಸರ್) ಗಳಿಸುವ ಮೂಲಕ ತವರಿನಲ್ಲಿ ಗೆದ್ದು ಬೀಗಿದರು.

    ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಬೆನ್‌ಸ್ಟೋಕ್ಸ್ 4, ಬ್ರಾಡ್ ಮತ್ತು ಪೋಟ್ಸ್ ತಲಾ 2 ವಿಕೆಟ್ ಹಾಗೂ ಲೀಚ್, ಆಂಡ್ರ‍್ಯೂಸನ್ ತಲಾ 1 ವಿಕೆಟ್ ಪಡೆದಿದ್ದರು. ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಆತಿಥೇಯ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 245 ರನ್ ಗಳಿಗೆ ಆಲೌಟ್ ಆಗಿ ಇಂಗ್ಲೆಂಡ್‌ಗೆ ಗೆಲ್ಲಲು 378 ರನ್‌ಗಳ ಗುರಿ ನೀಡಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 245 ರನ್ ಗಳಿಗೆ ಸರ್ವಪತನ ಕಂಡಿತ್ತು. ಟೀಂ ಇಂಡಿಯಾ ಪರ ಚೇತೇಶ್ವರ ಪೂಜಾರ 66, ವಿರಾಟ್ ಕೊಹ್ಲಿ 20, ರಿಷಬ್ ಪಂತ್ 57, ಶ್ರೇಯಸ್ ಅಯ್ಯರ್ 19, ರವೀಂದ್ರ ಜಡೇಜಾ 23 ರನ್ ಗಳಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ವಿವಿಎಸ್ ಲಕ್ಷ್ಮಣ್ ಟೀಂ ಇಂಡಿಯಾ ಕೋಚ್?

    ಲಂಡನ್: ಇಂಗ್ಲೆಂಡ್ ಮತ್ತು ಭಾರತ ನಡುವೆ ಜುಲೈ 7 ರಿಂದ ಟಿ20 ಸರಣಿ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಕೋಚ್ ಆಗಿ ಎನ್‍ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ.

    ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಅಂತ್ಯಗೊಂಡ ಬಳಿಕ 3 ಪಂದ್ಯಗಳ ಟಿ20 ಸರಣಿ ಜುಲೈ 7 ರಿಂದ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಖಾಯಂ ಕೋಚ್ ರಾಹುಲ್ ದ್ರಾವಿಡ್ ಸಹಿತ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್ ಸಹಿತ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ. ಹಾಗಾಗಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ತಂಡದಲ್ಲಿರುವ ಸಾಧ್ಯತೆ ಇದೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಲಕ್ಷ್ಮಣ್ ಈಗಾಗಲೇ ಟೀಂ ಇಂಡಿಯಾದೊಂದಿಗೆ ಇಂಗ್ಲೆಂಡ್‍ನಲ್ಲಿದ್ದಾರೆ. ಅಲ್ಲದೇ ಲಕ್ಷ್ಮಣ್ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಸರಣಿಯಲ್ಲಿ ಭಾರತ ತಂಡ 2-0 ಅಂತರದಲ್ಲಿ ಗೆದ್ದಿತ್ತು. ಆ ಬಳಿಕ ಇಂಗ್ಲೆಂಡ್‍ನಲ್ಲಿ ಭಾರತ ತಂಡ ಟೆಸ್ಟ್ ಸರಣಿ ಆಡುತ್ತಿದ್ದಂತೆ ಇನ್ನೊಂದು ತಂಡ ಟಿ20 ಸರಣಿಗಾಗಿ ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ಈ ತಂಡಕ್ಕೆ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    ಜುಲೈ 7, 9 ಮತ್ತು 10 ರಂದು ಮೂರು ಟಿ20 ಪಂದ್ಯಗಳು ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಕೊರೊನಾದಿಂದ ಚೇತರಿಕೆ ಕಂಡು ತಂಡವನ್ನು ಮುನ್ನಡೆಸಲು ಸಿದ್ಧತೆಯಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದು, ಅವರು ಜುಲೈ 7 ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟಿ20 ಪಂದ್ಯಗಳಿಗೆ ಲಭ್ಯವಾಗಲಿದ್ದಾರೆ.

    ನಿನ್ನೆಯಷ್ಟೇ ಅವರ ಕೊರೊನಾ ಫಲಿತಾಂಶ ನೆಗೆಟಿವ್ ವರದಿ ಬಂದಿದ್ದು, ಕ್ವಾರಂಟೈನ್ ಮುಗಿಸಿ ಹೊರಬಂದಿದ್ದಾರೆ. ಅವರು ಇದೇ ಜುಲೈ 7ರಂದು ನಡೆಯಲಿರುವ ಟಿ20 ಸರಣಿಗೆ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದನ್ನೂ ಓದಿ: ಮತ್ತೆ ನಿರ್ದೇಶನದತ್ತ ಮುಖ ಮಾಡಿದ ಅಜಯ್ ದೇವಗನ್

    ಇಂಗ್ಲೆಂಡ್ ಟೆಸ್ಟ್ ಆರಂಭಕ್ಕೂ ಮುನ್ನ ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ 2ನೇ ದಿನ ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಯಿತು. ಇದನ್ನೂ ಓದಿ: ಕಾಳಿ ಕೈಲಿ ಸಿಗರೇಟು ವಿವಾದ : ಲೀನಾ ಮೇಲೆ ಹಲವು ದೂರು ದಾಖಲು

    ಜುಲೈ 5ಕ್ಕೆ ಅಂತಿಮ ಟೆಸ್ಟ್ ಮುಕ್ತಾಯಗೊಳ್ಳಲಿದ್ದು, ಜುಲೈ 7ರಿಂದ T20 ಸರಣಿ ಆರಂಭವಾಗಲಿದೆ. ಮೊದಲ T20 ಪಂದ್ಯವು ಇಂಗ್ಲೆಂಡ್‌ನ ರೋಸ್‌ ಬೌಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

  • ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    ಸುಮ್ನೆ ಬ್ಯಾಟಿಂಗ್ ಮಾಡ್ ಗುರು – ಬೈರ್‌ಸ್ಟೋವ್ ಜೊತೆ ವಾಗ್ವಾದಕ್ಕಿಳಿದ ಕೊಹ್ಲಿ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಮೂರನೇ ದಿನ ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ಬ್ಯಾಟ್ಸ್‌ಮ್ಯಾನ್‌ ಜಾನಿ ಬೈರ್‌ಸ್ಟೋವ್ ನಡುವೆ ಮಾತಿನ ಚಕಮಕಿ ನಡೆಯಿತು.

    ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 416 ರನ್ ಗಳಿಸಿ ಆಲೌಟ್ ಆದ ಬಳಿಕ ಎರಡನೇ ದಿನ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 84 ರನ್ ಗಳಿಸಿದ್ದ ವೇಳೆ ಮಳೆ ಬಂದ ಕಾರಣ ಪಂದ್ಯ ಸ್ಥಗಿತಗೊಳಿಸಲಾಯಿತು. ಇಂದು ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್‌ಸ್ಟೋವ್ ಮತ್ತು  ಬೆನ್ ಸ್ಟೋಕ್ಸ್ ಚೇತರಿಕೆ ನೀಡಿದರು. ಈ ನಡುವೆ ವಿರಾಟ್ ಕೊಹ್ಲಿ ಕ್ರಿಸ್‍ನಲ್ಲಿದ್ದ ಬೈರ್‌ಸ್ಟೋವ್ ಬಳಿ ಬಂದು ಮಾತು ಆರಂಭಿಸಿದರು. ಈ ವೇಳೆ ಬೈರ್‌ಸ್ಟೋವ್ ಹೋಗಿ ಫೀಲ್ಡಿಂಗ್ ಮಾಡು ಎಂದು ಕೊಹ್ಲಿಗೆ ಸಲಹೆ ನೀಡದರು. ಈ ಮಾತು ಕೇಳಿಸಿಕೊಳ್ಳುತ್ತಿದ್ದಂತೆ ಕೊಹ್ಲಿ ಕೈ ಸನ್ನೆ ಮಾಡಿ ಸುಮ್ನೆ ಬ್ಯಾಟಿಂಗ್ ಮಾಡು ಎನ್ನುತ್ತ ಗರಂ ಆದರು. ಇದನ್ನೂ ಓದಿ: ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

    ಈ ವಾಗ್ವಾದದ ಬಳಿಕ ಇಂಗ್ಲೆಂಡ್ ಪರ ಅಬ್ಬರಿಸಲು ಆರಂಭಿಸಿದ ಬೈರ್‌ಸ್ಟೋವ್ ಬೌಂಡರಿ, ಸಿಕ್ಸರ್‌ಗಳೊಂದಿಗೆ ಅಜೇಯ 91 ರನ್ (113 ಎಸೆತ, 12 ಬೌಂಡರಿ, 2 ಸಿಕ್ಸ್) ಬಾರಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ. 45.3 ಓವರ್‌ಗಳಲ್ಲಿ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 200 ಗಳಿಸಿದ್ದ ವೇಳೆ ಮಳೆ ಆರಂಭವಾಗಿದೆ. ಇದನ್ನೂ ಓದಿ: 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    ಇಂಗ್ಲೆಂಡ್ ತಂಡ 216 ರನ್‍ಗಳ ಹಿನ್ನಡೆಯಲ್ಲಿದ್ದು, ಮೂರನೇ ದಿನದಾಟದಲ್ಲಿ ಮಳೆಯಾಟ ಆರಂಭವಾಗಿದೆ. ಇನ್ನೆರಡು ದಿನ ಬಾಕಿ ಇದ್ದು ಮಳೆ ಬರದಿದ್ದರೆ ಫಲಿತಾಂಶ ಹೊರಬರುವ ಸಾಧ್ಯತೆ ಇದೆ.

    Live Tv

  • ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

    ಅಂದು ಯುವಿ ಇಂದು ಬುಮ್ರಾ – ಬ್ರಾಡ್ ಕಕ್ಕಾಬಿಕ್ಕಿ ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ವಿಶ್ವ ದಾಖಲೆ

    ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದ ಎರಡನೇ ದಿನ ಟೀಂ ಇಂಡಿಯಾ ನಾಯಕ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್‍ನಲ್ಲಿ ಧೂಳೆಬ್ಬಿಸಿದ್ದಾರೆ. ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್‌ನಲ್ಲಿ 35 ರನ್ ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

    ಬುಮ್ರಾ ತಮ್ಮ ಬೆಂಕಿ ಬೌಲಿಂಗ್ ಮೂಲಕ ಎದುರಾಳಿಗಳನ್ನು ನಡುಗಿಸುತ್ತಿದ್ದರೆ, ಇದೀಗ ಬ್ಯಾಟಿಂಗ್‍ನಲ್ಲೂ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಇನ್ನಿಂಗ್ಸ್‌ನ 83ನೇ ಓವರ್ ಎಸೆಯಲು ಬಂದ ಇಂಗ್ಲೆಂಡ್ ತಂಡದ ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಎದುರು ಬಿರುಸಿನ ಬ್ಯಾಟಿಂಗ್ ಮೂಲಕ ಬುಮ್ರಾ ಒಂದೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಚೆಚ್ಚಿದರು. ಬುಮ್ರಾ ಬೌಂಡರಿ, ಸಿಕ್ಸರ್ ಸಿಡಿಸುತ್ತಿದ್ದಂತೆ ಕಕ್ಕಾಬಿಕ್ಕಿಯಾದ ಬ್ರಾಡ್ ವೈಡ್-ನೋ ಬಾಲ್ ಎಲ್ಲಾ ಸೇರಿ ಒಟ್ಟಾರೆ 35 ರನ್ ಬಿಟ್ಟು ಕೊಟ್ಟು ಕಂಗಾಲಾದರು. ಈ ಓವರ್‌ನಲ್ಲಿ ಬುಮ್ರಾ, 2 ಸಿಕ್ಸ್ ಮತ್ತು 4 ಬೌಂಡರಿ ಸಹಿತ ಒಟ್ಟು 29 ಬಾರಿಸಿ ಟೆಸ್ಟ್ ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದರು. ಇದನ್ನೂ ಓದಿ: 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    2007ರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಎದುರು 6 ಎಸೆತಗಳಲ್ಲಿ 6 ಸಿಕ್ಸರ್ ಹೊಡೆಸಿಕೊಂಡಿದ್ದ ಸ್ಟುವರ್ಟ್ ಬ್ರಾಡ್ ಇದೀಗ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಓವರ್ ಎಸೆದು ಅನಗತ್ಯ ದಾಖಲೆ ಪುಟ ಸೇರಿದರು. ಇದನ್ನೂ ಓದಿ: ಕ್ಯಾಚ್ ಹಿಡಿಯಲು ಹೋದಾಗ ಪ್ಯಾಂಟಿಗೆ ಬಡಿದ ಬೇಲ್ಸ್ – ನೋವಿನಿಂದ ನರಳಾಡಿದ ವಾರ್ನರ್

    ಲಾರಾ ದಾಖಲೆ ಮುರಿದ ಬುಮ್ರಾ
    ಈ ಹಿಂದೆ ಟೆಸ್ಟ್ ಕ್ರಿಕೆಟ್‍ನಲ್ಲಿ ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಓವರ್ ಒಂದಕ್ಕೆ 28 ರನ್ ಬಾರಿಸಿ ದಾಖಲೆ ಬರೆದಿದ್ದರು. 2003ರಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ರಾಬಿನ್ ಪೀಟರ್ಸನ್ ಎದುರು 28 ರನ್ ಚಚ್ಚಿ ಲಾರಾ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಈ ವಿಶ್ವ ದಾಖಲೆಯನ್ನು ಬುಮ್ರಾ ಮುರಿದಿದ್ದು ಓವರ್ ಒಂದಕ್ಕೆ 35 ರನ್ ಚಚ್ಚಿ ನೂತನ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.

    ಟೆಸ್ಟ್ ಪಂದ್ಯದ ಎರಡನೇ ದಿನ ಭಾರತದ ರವೀಂದ್ರ ಜಡೇಜಾ 104 ರನ್ (194 ಎಸೆತ, 13 ಬೌಂಡರಿ) ಮತ್ತು ಬುಮ್ರಾ ಅಜೇಯ 31 ರನ್ (16 ಎಸೆತ, 4 ಬೌಂಡರಿ, 2 ಸಿಕ್ಸ್) ಬಾರಿಸಿ ತಂಡದ ಮೊತ್ತವನ್ನು 400 ರನ್‍ಗಳ ಗಡಿದಾಟಿಸಿದರು. ಅಂತಿಮವಾಗಿ ಭಾರತ ತಂಡ 84.5 ಓವರ್‌ಗಳಲ್ಲಿ 416 ರನ್‍ಗಳಿಗೆ ಆಲೌಟ್ ಆಯಿತು.

    Live Tv

  • 17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    17 ವರ್ಷಗಳ ಬಳಿಕ ಧೋನಿ ದಾಖಲೆ ಸರಿಗಟ್ಟಿದ ಪಂತ್- ಅಂತಿಮ ಟೆಸ್ಟ್‌ನಲ್ಲಿ ಅಮೋಘ ಶತಕದಾಟ

    ಬರ್ಮಿಂಗ್‌ಹ್ಯಾಮ್‌: ಎಡ್ಜಾಬಸ್ಟನ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ದಿನವೇ ಅಮೋಘ ಶತಕ ಸಿಡಿಸಿದ ವಿಕೆಟ್ ಕೀಪರ್ ರಿಷಭ್ ಪಂತ್ 17 ವರ್ಷಗಳ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಟೆಸ್ಟ್ ಕ್ರಿಕೆಟ್‌ನಲ್ಲಿ 89 ಎಸೆತಗಳಲ್ಲಿ 5ನೇ ಬಾರಿಗೆ ಶತಕ ಸಿಡಿಸಿದ ಪಂತ್ ಅತಿ ವೇಗದ ಶತಕ ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು 2005ರಲ್ಲಿ ಫೈಸಲಾಬಾದ್‌ನಲ್ಲಿ ಪಾಕಿಸ್ತಾನದ ವಿರುದ್ಧ 93 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ದಾಖಲೆ ಮಾಡಿದ್ದರು. ಪಂತ್ ಕೇವಲ 111 ಎಸೆತಗಳಲ್ಲಿ 146 ರನ್ ಗಳಿಸಿದರು. ಇದರಲ್ಲಿ 4 ಸಿಕ್ಸರ್ ಹಾಗೂ 19 ಬೌಂಡರಿಗಳೂ ಒಳಗೊಂಡಿವೆ.

    89 ಎಸೆತಗಳಲ್ಲಿ ದಾಖಲಾದ ಪಂತ್ ಶತಕವು ಅತ್ಯಂತ ವೇಗದ ಶತಕ ಎನಿಸಿಕೊಳ್ಳುವ ಜೊತೆಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನೂ ಸೋಲಿಸಿದ್ದಾರೆ. ಇದನ್ನೂ ಓದಿ: ಕಪಿಲ್ ದೇವ್ ನಂತರ 35 ವರ್ಷಗಳ ಬಳಿಕ ಭಾರತದ ನಾಯಕತ್ವ ಪಡೆದ ವೇಗಿ – ಬುಮ್ರಾ ಕ್ಯಾಪ್ಟನ್, ಪಂತ್ ವೈಸ್ ಕ್ಯಾಪ್ಟನ್

    ಪಂಥ್ ಅಮೋಘ ಶತಕ: ಇಂಗ್ಲೆಂಡ್ ವಿರುದ್ಧದ ಎಡ್ಜಾಬಸ್ಟನ್‌ ಕ್ರೀಡಾಂಗಣದಲ್ಲಿ ಅಂತಿಮ ಟೆಸ್ಟ್ನ ಮೊದಲ ದಿನವಾದ ಶುಕ್ರವಾರ ವಿಕೆಟ್ ಕೀಪರ್-ಬ್ಯಾಟರ್ ರಿಷಬ್ ಪಂತ್ ಅವರ ಅದ್ಭುತ ಶತಕ ಮತ್ತು ರವೀಂದ್ರ ಜಡೇಜಾ ಅವರ 222 ರನ್‌ಗಳ ಅಮೋಘ ಜೊತೆಯಾಟದ ನೆರವಿನಿಂದ ಭಾರತ 7 ವಿಕೆಟ್ ಕಳೆದುಕೊಂಡು 338 ರನ್ ಗಳಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 100 ರನ್‌ಗಳ ಗಡಿ ದಾಟುವ ಮೊದಲೇ ಅಗ್ರ ಕ್ರಮಾಂಕದ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಂಗ್ಲೆಂಡ್‌ನ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಪ್ರಮುಖ 3 ವಿಕೆಟ್ ಕಿತ್ತು ಭಾರತಕ್ಕೆ ಆಘಾತ ನೀಡಿದ್ದರು. ಇದನ್ನೂ ಓದಿ: ಒಂದು ದಿನ ಮುಂಚಿತವಾಗಿ ಪ್ಲೇಯಿಂಗ್ 11 ಪ್ರಕಟಿಸಿದ ಇಂಗ್ಲೆಂಡ್ – ತಂಡದಲ್ಲಿ ಯಾರೆಲ್ಲಾ ಇದ್ದಾರೆ?

    ನಂತರ 6ನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ಪ್ರತಿ ಹೋರಾಟ ನಡೆಸಿ ಅರ್ಧಶತಕದ ಜೊತೆಯಾಟ ಕಟ್ಟಿದರು. ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ತಂಡಕ್ಕೆ ನೆರವಾದರು. ಸದ್ಯ ಎಚ್ಚರಿಕೆಯಿಂದ ಬ್ಯಾಟ್ ಮಾಡುತ್ತಿರುವ ರವೀಂದ್ರ ಜಡೇಜಾ 163 ಎಸೆತಗಳನ್ನು ಎದುರಿಸಿ 10 ಬೌಂಡರಿಗಳೊಂದಿಗೆ 83 ರನ್‌ಗಳನ್ನು ಕಲೆಹಾಕಿದ್ದಾರೆ. ಇವರಿಗೆ ಜೊತೆಯಾಗಿ ಮೊಹಮ್ಮದ್ ಶಮಿ ಕ್ರೀಸ್‌ನಲ್ಲಿ ಇದ್ದಾರೆ.

    5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1ರ ಅಂತರದಲ್ಲಿ ಮೇಲುಗೈ ಸಾಧಿಸಿದ್ದು, ಈ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳಲು ಬುಮ್ರಾ ಪಡೆ ಸಜ್ಜಾಗಿದೆ.

    Live Tv