Tag: england

  • ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

    ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

    ಮೆಲ್ಬರ್ನ್: ಜಿಂಬಾಬ್ವೆ (Zimbabwe) ವಿರುದ್ಧ ಗೆದ್ದು ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿರುವ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಬಲಗೈಗೆ ಬಲವಾದ ಪೆಟ್ಟುಮಾಡಿಕೊಂಡಿದ್ದಾರೆ.

    ಇಂಗ್ಲೆಂಡ್ (England) ವಿರುದ್ಧ ಗುರುವಾರ ನಡೆಯಲಿರುವ ಟಿ20 ವಿಶ್ವಕಪ್ (T20 WorldCup) ಸೆಮಿಫೈನಲ್‌ಗೆ ನೆಟ್ ಪ್ರಾಕ್ಟೀಸ್ ಮಾಡುತ್ತಿದ್ದ ವೇಳೆ ಪೆಟ್ಟು ಮಾಡಿಕೊಂಡಿದ್ದಾರೆ. ನೆಟ್ ಸೆಷನ್‌ನಲ್ಲಿ ಎಸ್. ರಘು ಅವರಿಂದ ಥ್ರೋಡೌನ್ ತೆಗೆದುಕೊಳ್ಳುತ್ತಿದ್ದಾಗ ಶಾರ್ಟ್‌ಬಾಲ್‌ ಅವರ ಬಲಗೈಗೆ ಬಡಿದಿದೆ. 150 ಪ್ಲಸ್ ವೇಗದಲ್ಲಿ 18 ಯಾರ್ಡ್‌ಗಳಿಂದ ಎಸೆಯಲ್ಪಟ್ಟ ಥ್ರೋಡೌನ್ ಅನ್ನು ರೋಹಿತ್ ಶಾರ್ಟ್ ಆರ್ಮ್ ಮಾಡಲು ಯತ್ನಿಸಿದರು. ಈ ವೇಳೆ ಕೈಗೆ ಪೆಟ್ಟಾಗಿದೆ, ಇದರಿಂದ ತೀವ್ರ ನೋವುಂಟಾಗಿ ತಕ್ಷಣವೇ ಅವರು ನೆಟ್ ತೊರೆದಿದ್ದಾರೆ. ಇದನ್ನೂ ಓದಿ: ರೋಹಿತ್‍ರನ್ನು ನೋಡಲೆಂದು ಮೈದಾನಕ್ಕಿಳಿದ ಅಭಿಮಾನಿಗೆ 6.5 ಲಕ್ಷ ರೂ. ಫೈನ್

    ವೈದ್ಯಕೀಯ ತಂಡ (Medical Team) ಪರಿಶೀಲಿಸಿದ್ದು, ಯಾವುದೇ ಮುರಿತ ಕಂಡುಬಂದಿಲ್ಲ ಎಂದು ಹೇಳಿದೆ. ಸೆಮಿಸ್ ಹತ್ತಿರದ ಸಂದರ್ಭದಲ್ಲಿ ರೋಹಿತ್ ನಾಯಕತ್ವ ಬಹಳ ಮುಖ್ಯವಾಗಿದ್ದು, ಸದ್ಯ ಅವರ ಕೈಗೆ ಪೆಟ್ಟಾಗಿರುವುದರಿಂದ ಟೀಂ ಇಂಡಿಯಾ ತೀವ್ರ ಆಘಾತಕ್ಕೆ ಒಳಗಾಗಿದೆ. ಇದನ್ನೂ ಓದಿ: 2024ರ T20 ವಿಶ್ವಕಪ್‍ಗೆ 20 ತಂಡ – ಯಾವೆಲ್ಲ ತಂಡಗಳಿಗೆ ನೇರ ಪ್ರವೇಶ?

    ಭಾನುವಾರ ಭಾರತ ಹಾಗೂ ಜಿಂಬಾಬ್ವೆ (Zimbabwe) ನಡುವಿನ ಕಾದಾಟದಲ್ಲಿ ಟೀಂ ಇಂಡಿಯಾ 71 ರನ್‌ಗಳ ಭರ್ಜರಿ ಜಯದೊಂದಿಗೆ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು. ಭಾರತ ನೀಡಿದ 187 ರನ್‌ಗಳ ಗುರಿ ಬೆನ್ನಟ್ಟಿದ ಜಿಂಬಾಬ್ವೆ 17.2 ಓವರ್‌ಗಳಲ್ಲೇ 115 ರನ್‌ಗಳಿಗೆ ಆಲೌಟ್ ಆಯಿತು.

    Live Tv
    [brid partner=56869869 player=32851 video=960834 autoplay=true]

  • ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಸೆಮಿಫೈನಲ್‍ಗೇರಿದ ನಾಲ್ಕು ತಂಡಗಳು – ಯಾರಿಗೆ ಯಾರು ಎದುರಾಳಿ, ಯಾವಾಗ ಪಂದ್ಯ?

    ಸಿಡ್ನಿ: ಟಿ20 ವಿಶ್ವಕಪ್ (T20 World Cup) ಪಂದ್ಯದ ಕೊನೆಯ 3 ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಈಗಾಗಲೇ 4 ತಂಡಗಳು ಸೆಮಿಫೈನಲ್‍ಗೆ (Semi Final) ಲಗ್ಗೆ ಇಟ್ಟಿವೆ.

    ಗ್ರೂಪ್ 1ರಲ್ಲಿ ನ್ಯೂಜಿಲೆಂಡ್ (New Zealand) ಮತ್ತು ಇಂಗ್ಲೆಂಡ್ (England) ಪ್ರವೇಶ ಪಡೆದರೆ, ಗ್ರೂಪ್ 2ರಲ್ಲಿ ಭಾರತ (India) ಹಾಗೂ ಪಾಕಿಸ್ತಾನ (Pakistan) ತಂಡಗಳು ಪ್ರವೇಶ ಪಡೆದಿದೆ. ಸಿಡ್ನಿ, ಆಡಿಲೇಡ್ ಮತ್ತು ಮೆಲ್ಬರ್ನ್‍ನಲ್ಲಿ ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಚೋಕರ್ಸ್ ಹಣೆಪಟ್ಟಿಯೊಂದಿಗೆ ಆಫ್ರಿಕಾ ಮನೆಗೆ – ಪಾಕ್‌ಗೆ ಖುಲಾಯಿಸಿದ ಅದೃಷ್ಟ

    ಮೊದಲ ಸೆಮಿಫೈನಲ್‍ನಲ್ಲಿ ಗ್ರೂಪ್ 1ರ ಮೊದಲ ಸ್ಥಾನ ಪಡೆದ ನ್ಯೂಜಿಲೆಂಡ್, ಗ್ರೂಪ್ 2ರ ಎರಡನೇ ಸ್ಥಾನ ಪಡೆದ ಪಾಕಿಸ್ತಾನವನ್ನು ಸಿಡ್ನಿಯಲ್ಲಿ ನ.9 ರಂದು ಎದುರಿಸಲಿದೆ. ಎರಡನೇ ಸೆಮಿಫೈನಲ್‍ನಲ್ಲಿ ಗ್ರೂಪ್ 2ರ ಮೊದಲ ಸ್ಥಾನ ಪಡೆದ ಭಾರತ, ಗ್ರೂಪ್ 1ರ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ತಂಡವನ್ನು ಆಡಿಲೇಡ್‍ನಲ್ಲಿ ನ.10 ರಂದು ಎದುರಿಸಲಿದೆ. ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್ ಪಂದ್ಯವಾಡಲಿದೆ. ಇದನ್ನೂ ಓದಿ: ಭಾರತಕ್ಕೆ 71 ರನ್‍ಗಳ ಭರ್ಜರಿ ಜಯ – ಸೆಮಿಯಲ್ಲಿ ಇಂಗ್ಲೆಂಡ್ ಎದುರಾಳಿ

    ಸೆಮಿಫೈನಲ್ ಪಂದ್ಯ ಮಳೆಯಿಂದಾಗಿ ರದ್ದಾದರೆ, ಮೀಸಲು ದಿನವನ್ನು ನಿಗದಿಪಡಿಸಲಾಗಿದೆ. ಫೈನಲ್ ಪಂದ್ಯ ಮೆಲ್ಬರ್ನ್‍ನಲ್ಲಿ ನ.13 ರಂದು ನಡೆಯಲಿದೆ. ಮಳೆಯಿಂದ ರದ್ದಾದರೆ ಫೈನಲ್ ಪಂದ್ಯಕ್ಕೂ ಮೀಸಲು ದಿನವನ್ನು ಕಲ್ಪಿಸಲಾಗಿದೆ. ಇದನ್ನೂ ಓದಿ: ಒಂದೇ ವರ್ಷದಲ್ಲಿ ಟಿ20ಯಲ್ಲಿ ಗರಿಷ್ಠ ರನ್‌ – ಭಾರತದ ಪರ ದಾಖಲೆ ಬರೆದ ಸೂರ್ಯ

    Live Tv
    [brid partner=56869869 player=32851 video=960834 autoplay=true]

  • ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ಸಿಡ್ನಿ: ಶ್ರೀಲಂಕಾ (Sri Lanka) ವಿರುದ್ಧ ಇಂಗ್ಲೆಂಡ್ (England) 4 ವಿಕೆಟ್‍ಗಳ ಜಯದೊಂದಿಗೆ ಟಿ20 ವಿಶ್ವಕಪ್‌ನಲ್ಲಿ (T20 World Cup) ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಶ್ರೀಲಂಕಾ ನೀಡಿದ 142 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 19.4 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 144 ರನ್ ಬಾರಿಸಿ ಇನ್ನೆರಡು ಎಸೆತ ಬಾಕಿ ಇರುವಂತೆ ಜಯಭೇರಿ ಬಾರಿಸಿತು. ಈ ಜಯದೊಂದಿಗೆ ಇಂಗ್ಲೆಂಡ್ ಗ್ರೂಪ್-1ರಲ್ಲಿ 2ನೇ ತಂಡವಾಗಿ ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ. ಇತ್ತ ಇಂಗ್ಲೆಂಡ್ ಗೆಲುವು ದಾಖಲಿಸುತ್ತಿದ್ದಂತೆ ಆಸ್ಟ್ರೇಲಿಯಾ (Australia) ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಮೂಲಕ ಹಾಲಿ ಚಾಂಪಿಯನ್ನರಿಗೆ ತವರಿನಲ್ಲಿ ನಿರಾಸೆಯಾಗಿದೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    142 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಉತ್ತಮ ಆರಂಭದ ನಡುವೆಯೂ ಕೊನೆಯಲ್ಲಿ ಪರದಾಡಿತು. ಜೋಸ್ ಬಟ್ಲರ್ 28 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಮತ್ತು ಅಲೆಕ್ಸ್ ಹೇಲ್ಸ್ 47 ರನ್ (30 ಎಸೆತ, 7 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದ ಬಳಿಕ ಇಂಗ್ಲೆಂಡ್ ಕುಸಿತ ಕಂಡಿತು. ಆದರೆ ಇಂಗ್ಲೆಂಡ್ ಗೆಲುವಿಗಾಗಿ ಕೊನೆಯ ಓವರ್‌ ವರೆಗೆ ಹೋರಾಡಿದ ಬೆನ್‍ಸ್ಟೋಕ್ಸ್ ಅಜೇಯ 42 ರನ್ (36 ಎಸೆತ, 2 ಬೌಂಡರಿ) ಸಿಡಿಸಿ ಸುರಕ್ಷಿತವಾಗಿ ಗೆಲುವಿನ ದಡ ಸೇರಿಸಿದರು. ಇದನ್ನೂ ಓದಿ: ಖೇಲ್ ರತ್ನ ಪ್ರಶಸ್ತಿಗೆ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಹೆಸರು ಶಿಫಾರಸು

    ಈ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಆರಂಭಿಕ ಆಟಗಾರ ಪಾತುಂ ನಿಸ್ಸಾಂಕ 67 ರನ್ (45 ಎಸೆತ, 2 ಬೌಂಡರಿ, 5 ಸಿಕ್ಸ್) ಚಚ್ಚಿದ ಪರಿಣಾಮ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 141 ರನ್ ಬಾರಿಸಿತು. ಇಂಗ್ಲೆಂಡ್ ಬೌಲರ್‌ ಮಾರ್ಕ್‍ವುಡ್ 3 ವಿಕೆಟ್ ಕಿತ್ತು ಶ್ರೀಲಂಕಾಗೆ ಬ್ಯಾಟ್ಸ್‌ಮ್ಯಾನ್‌ಗಳಿಗೆ ಲಗಾಮು ಹಾಕಿದರು.

    Live Tv
    [brid partner=56869869 player=32851 video=960834 autoplay=true]

  • ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

    ಆಸೀಸ್‌ಗೆ 4 ರನ್‌ಗಳ ರೋಚಕ ಜಯ – ಸೆಮಿಸ್ ಕನಸು ಜೀವಂತ

    ಕ್ಯಾನ್ಬೆರಾ: ಸಿಕ್ಸರ್ ವೀರ ಖ್ಯಾತಿಯ ಗ್ಲೇನ್ ಮ್ಯಾಕ್ಸ್‌ವೆಲ್‌ (Glenn Maxwell) ಅರ್ಧಶತಕ ಹಾಗೂ ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ (Afghanistan) ವಿರುದ್ಧ 4 ರನ್‌ಗಳ ರೋಚಕ ಜಯ ಸಾಧಿಸಿದೆ.

    5 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿರುವ ಆತಿಥೇಯ ತಂಡ 7 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನಕ್ಕೆ ಜಿಗಿದಿದೆ. ಇದರೊಂದಿಗೆ ಹಾಲಿ ಚಾಂಪಿಯನ್‌ಗಳು ತಮ್ಮ ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಂಡಿದ್ದಾರೆ. ಆದರೆ 5 ಅಂಕಗಳಿಸಿರುವ ಇಂಗ್ಲೆಂಡ್‌ಗೆ ಇನ್ನೂ ಒಂದು ಪಂದ್ಯದ ಅವಕಾಶವಿದೆ. ಶ್ರೀಲಂಕಾ (SriLanka) ವಿರುದ್ಧ ಇಂಗ್ಲೆಂಡ್ (England) ಸೋತರಷ್ಟೇ ಕಾಂಗರೂಗಳು ಸುಗಮವಾಗಿ ಸೇಮಿಸ್‌ಗೆ ಎಂಟ್ರಿಕೊಡಲಿದ್ದಾರೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಇಂಗ್ಲೆಂಡ್ ಸೆಮಿಫೈನಲ್‌ಗೆ ತಲುಪಲಿದ್ದು, ಆಸ್ಟ್ರೇಲಿಯಾ (Australia) ಮನೆಗೆ ತೆರಳಲಿದೆ.

    ಸಿಕ್ಸರ್ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 28 ಬೌಂಡರಿಗಳು ಹಾಗೂ 14 ಸಿಕ್ಸರ್‌ಗಳು ದಾಖಲಾಯಿತು. ಆಸ್ಟ್ರೇಲಿಯಾ (Australia )ತಂಡದ ಪರ 15 ಬೌಂಡರಿ, 6 ಸಿಕ್ಸರ್ ದಾಖಲಾದರೆ ಅಫ್ಘಾನಿಸ್ತಾನದ ಪರ 11 ಬೌಂಡರಿ, 8 ಸಿಕ್ಸರ್‌ಗಳು ದಾಖಲಾಯಿತು.

    ಅಡಿಲೇಡ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು. ಈ ಮೊತ್ತದ ಗುರಿ ಬೆನ್ನತ್ತಿದ್ದ ಅಫ್ಘಾನಿಸ್ತಾನ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 164 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಮೊದಲ ವಿಕೆಟ್ ಪತನದ ಹೊರತಾಗಿಯೂ ಅಫ್ಘಾನಿಸ್ತಾನ ಉತ್ತಮ ಶುಭಾರಂಭ ನೀಡಿತ್ತು. ಆರಂಭಿಕ ಉಸ್ಮಾನ್ ಘನಿ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ಮತ್ತೊಬ್ಬ ಆರಂಭಿಕನಾದ ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗುರ್ಬಾದ್ 17 ಎಸೆತಗಳಲ್ಲಿ 30 ರನ್ ಕಲೆಹಾಕಿದರೆ, 33 ಎಸೆತಗಳನ್ನು ಎದುರಿಸಿದ ಘನಿ 26 ರನ್‌ಗಳಿಸಿ ಔಟಾದರು. ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಬಂದ ಗುಲ್ಬದಿನ್ ನಾಯಬ್ 23 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ಗಳಿಸಿ ತಂಡಕ್ಕೆ ನೆರವಾದರು.

    ರಶೀದ್ ಸ್ಫೋಟಕ ಬ್ಯಾಟಿಂಗ್ ವ್ಯರ್ಥ: ಆಸ್ಟ್ರೇಲಿಯಾ ವಿರುದ್ಧ ಕೊನೆಯವರೆಗೂ ಹೋರಾಡಿದ ರಶೀದ್ ಖಾನ್ (Rashid Khan) ಅಫ್ಘಾನಿಸ್ತಾನದ ಪರವಾಗಿ 23 ಎಸೆತಗಳಲ್ಲಿ ಸ್ಫೋಟಕ 48 ರನ್ ಸಿಡಿಸಿ ಮಿಂಚಿದರು. 3 ಬೌಂಡರಿ 4 ಸಿಕ್ಸರ್ ಸಿಡಿಸುವ ಮೂಲಕ 48 ರನ್ ಗಳಿಸಿದ್ದರು. ಕೊನೆಯ ಓವರ್‌ಗೆ 20 ರನ್ ಬೇಕಿದ್ದಾಗ ರಶೀದ್ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು. 2ನೇ ಎಸೆತ ಎದುರಿಸುವಲ್ಲಿ ವಿಫಲರಾದರು. 3ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿ, ನಾಲ್ಕನೇ ಎಸೆತದಲ್ಲಿ 2 ರನ್ ಕದ್ದರು. ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟಿದರು. ರಶೀದ್‌ಖಾನ್ ಹೋರಾಟದ ಹೊರತಾಗಿಯೂ ಆಫ್ಘನ್ ತಂಡ ಸೋಲನ್ನು ಅನುಭವಿಸಿತು.

    ನಾಯಕ ಮೊಹಮ್ಮದ್ ನಬಿ ಕೇವಲ 1 ರನ್ ಹಾಗೂ ದರ್ವಿಶ್ ರಸೂಲಿ 15 ರನ್‌ಗಳಿಸಿ ಔಟಾದರು.

    ಆಸ್ಟ್ರೇಲಿಯಾ ತಂಡದ ಪರ ಜೋಶ್ ಹ್ಯಾಜಲ್‌ವುಡ್ ಹಾಗೂ ಆಡಮ್ ಝಂಪಾ ತಲಾ 2 ವಿಕೆಟ್ ಪಡೆದರು, ಕೇನ್ ರಿಚರ್ಡ್ಸನ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡ ಆಸ್ಟ್ರೇಲಿಯಾ ಆರಂಭಿಕ ಆಘಾತ ಎದುರಿಸಿತು. ಸ್ಫೋಟಕ ಬ್ಯಾಟ್ಸ್ಮನ್ ಕೆಮರೋನ್ ಗ್ರೀನ್ 3 ರನ್‌ಗಳಿಸಿದರೆ, ಡೇವಿಡ್ ವಾರ್ನರ್ 18 ಎಸೆತಗಳಲ್ಲಿ 25 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ 3ನೇ ಕ್ರಮಾಂಕದಲ್ಲಿ ಬಂದ ಮಿಚ್ಚೆಲ್ ಮಾರ್ಶ್ 30 ಎಸೆತಗಳಲ್ಲಿ 40 ರನ್ (3 ಬೌಂಡರಿ, 2 ಸಿಕ್ಸರ್) ಸಿಡಿಸಿ ನಿರ್ಗಮಿಸಿದರು.

    ಆಸ್ಟ್ರೇಲಿಯಾ 10 ಓವರ್ ಕಳೆಯುವುದರೊಳಗೆ 4 ವಿಕೆಟ್ ಕಳೆದುಕೊಡು ಆಘಾತ ಎದುರಿಸಿತ್ತು. ಈ ವೇಳೆ ಸಿಕ್ಸರ್ ವೀರ ಗ್ಲೇನ್ ಗ್ಲೇನ್ ಮ್ಯಾಕ್ಸ್‌ವೆಲ್‌ ಅಮೋಘ ಅರ್ಧ ಶತಕ ಸಿಡಿಸಿದ್ರು. ಇದಕ್ಕೆ ಮಾರ್ಕಸ್ ಸ್ಟೋನಿಸ್ ಸಹ ಸಾಥ್ ನೀಡಿದರು. ಸ್ಟೋನಿಸ್ 21 ಎಸೆತಗಳಲ್ಲಿ 25 ರನ್ ಸಿಡಿಸಿದ್ರೆ, ಮ್ಯಾಕ್ಸ್ವೆಲ್ 32 ಎಸೆತಗಳಲ್ಲಿ 54 ರನ್ (6 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗುಳಿದರು. ಇವರಿಬ್ಬರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿತು.

    ನಾಯಕ ಮ್ಯಾಥಿವ್ ವೇಡ್ 6 ರನ್, ಕೇನ್ ರಿಚ್ಚರ್ಡ್ಸನ್ ಹಾಗೂ ಆಡಮ್ ಝಂಪಾ ತಲಾ 1 ರನ್‌ಗಳಿಸಿದರು.

    ಅಫ್ಘಾನಿಸ್ತಾನ ಪರ ನವೀನ್-ಉಲ್-ಹಕ್ 3 ವಿಕೆಟ್ ಪಡೆದರೆ, ಫಜಲ್ಹಕ್ ಫಾರೂಕಿ 2 ವಿಕೆಟ್, ಮುಜೀಬ್ ಉರ್ ರೆಹಮಾನ್ ಹಾಗೂ ರಶೀದ್ ಖಾನ್ ತಲಾ ಒಂದೊಂದು ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ

    ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ

    ಮುಂಬೈ: ಟಿ20 ವಿಶ್ವಕಪ್‍ಗಾಗಿ (T20 World Cup) ಇದೀಗ ಆಸ್ಟ್ರೇಲಿಯಾದಲ್ಲಿರುವ (Australia) ತಂಡಗಳ ಪೈಕಿ ಭಾರತ (India) ತಂಡದಲ್ಲಿ 150ಕ್ಕೂ ಹೆಚ್ಚಿನ ವೇಗದಲ್ಲಿ ಬಾಲ್ ಎಸೆಯುವ ಬೌಲರ್ ಇಲ್ಲ. ಅತ್ತ ಇಂಗ್ಲೆಂಡ್‍ನಲ್ಲಿ (England) ಪ್ರಧಾನಿಯೇ ಇಲ್ಲ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವಾಸಿಮ್ ಜಾಫರ್ (Wasim Jaffer) ವ್ಯಂಗ್ಯವಾಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಭಾರತ, ಶ್ರೀಲಂಕಾ, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡದ ಕುರಿತಾಗಿ ವ್ಯಂಗ್ಯವಾಡಿರುವ ಜಾಫರ್, ಭಾರತ ತಂಡದಲ್ಲಿ ಗಂಟೆಗೆ 150ಕ್ಕೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್ ಇಲ್ಲ. ಪಾಕಿಸ್ತಾನ ತಂಡದಲ್ಲಿ ಮ್ಯಾಚ್ ಫಿನಿಶರ್ ಕೊರತೆ ಕಾಡುತ್ತಿದೆ. ಇದನ್ನೂ ಓದಿ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್

    ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮ ಸಾಧನೆ ಮಾಡಿಲ್ಲ. ಶ್ರೀಲಂಕಾ ತಂಡಕ್ಕೆ ಅನುಭವವಿಲ್ಲ. ಅತ್ತ ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್

    ಇದೀಗ ಜಾಫರ್ ಮಾಡಿರುವ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅತ್ತ ಇಂಗ್ಲೆಂಡ್‍ನ ಬ್ರಿಟನ್‍ನಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಪ್ರಧಾನಿ ಲಿಜ್ ಟ್ರಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್

    ಏನ್ ಫೀಲ್ಡಿಂಗ್ ಗುರು! – ಬೆನ್ ಸ್ಟೋಕ್ಸ್ ಫ್ಲೈಯಿಂಗ್ ಎಫರ್ಟ್

    ಸಿಡ್ನಿ: ಇಂಗ್ಲೆಂಡ್ (England) ತಂಡದ ಸ್ಟಾರ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಫೀಲ್ಡಿಂಗ್ (Fielding) ಕಂಡು ಕ್ರಿಕೆಟ್ (Cricket) ಅಭಿಮಾನಿ ಬೆರಗಾಗಿದ್ದಾರೆ.

    ಆಸ್ಟ್ರೇಲಿಯಾ (Australia) ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಫೀಲ್ಡಿಂಗ್ ಮೂಲಕ ಸಿಕ್ಸರ್ ಹೋಗುತ್ತಿದ್ದ ಬಾಲ್ ತಡೆದು 4 ರನ್ ಉಳಿಸಿ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಇದನ್ನೂ ಓದಿ: ಬುಮ್ರಾ ಬದಲು ಶಮಿ, ಚಹರ್ ಔಟ್ – ಆಸ್ಟ್ರೇಲಿಯಾಗೆ ಹಾರಲಿದ್ದಾರೆ ಶಾರ್ದೂಲ್, ಸಿರಾಜ್

    ಆಸ್ಟ್ರೇಲಿಯಾ ಇಂಗ್ಲೆಂಡ್ ನೀಡಿದ್ದ 179 ರನ್‍ಗಳನ್ನು ಚೇಸಿಂಗ್ ಮಾಡುತ್ತಿತ್ತು. 12 ಓವರ್‌ನಲ್ಲಿ ಮಿಚೆಲ್ ಮಾರ್ಷ್, ಸ್ಯಾಮ್ ಕರನ್ ಎಸೆತವನ್ನು ಸಿಕ್ಸರ್‌ಗಟ್ಟಲು ಬಿಗಿಯಾಗಿ ಬಾರಿಸಿದರು. ಈ ವೇಳೆ ಲಾಂಗ್‍ಆಫ್‍ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸ್ಟೋಕ್ಸ್ ಸಿಕ್ಸ್ ಹೋಗುತ್ತಿದ್ದ ಬಾಲನ್ನು ಹಾರಿ ಹಿಡಿದು ಬೌಂಡರಿ ರೋಪ್‍ನಿಂದ ಹೊರ ಎಸೆದರು. ಈ ಮೂಲಕ 4 ರನ್ ಸೇವ್ ಮಾಡಿದರು. ಇದೀಗ ಸ್ಟೋಕ್ಸ್ ಮಿಂಚಿನ ಫೀಲ್ಡಿಂಗ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ. ಇದನ್ನೂ ಓದಿ: ಗಂಗೂಲಿ ಬಿಜೆಪಿ ಸೇರಲು ನಿರಾಕರಿಸಿದ್ದರಿಂದ್ಲೇ 2ನೇ ಬಾರಿಗೆ BCCI ಸ್ಥಾನ ಕೈತಪ್ಪಿದೆ – TMC

    ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸ್ಟೋಕ್ಸ್ ಬ್ಯಾಟಿಂಗ್‍ನಲ್ಲಿ ಕಮಾಲ್ ಮಾಡದಿದ್ದರೂ, ಭರ್ಜರಿ ಫೀಲ್ಡಿಂಗ್ ಮೂಲಕ ಮಿಂಚುತ್ತಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್ (T20 World Cup) ಆರಂಭಕ್ಕೂ ಮುನ್ನ ಮತ್ತೊಮ್ಮೆ ತಮ್ಮ ಫೀಲ್ಡಿಂಗ್ ಸಾಮರ್ಥ್ಯ ಸಾಭೀತು ಪಡಿಸಿದ್ದಾರೆ.

    ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತು. 179 ರನ್‍ಗಳ ಗುರಿ ಪಡೆದ ಆಸ್ಟ್ರೇಲಿಯಾ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 170 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇತ್ತ ಇಂಗ್ಲೆಂಡ್‌ 8 ರನ್‍ಗಳ ಜಯದೊಂದಿಗೆ ಆಸ್ಟ್ರೇಲಿಯಾಗೆ ತವರಿನ ನೆಲದಲ್ಲೇ  ಟಕ್ಕರ್ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ನಿದ್ದೆಗೆ ಜಾರಿದ್ದ ವೇಳೆ ಮುಖದ ಮೇಲೆ ಮಲ ವಿಸರ್ಜಿಸಿದ ಶ್ವಾನ- ಮಹಿಳೆ ಆಸ್ಪತ್ರೆಗೆ ದಾಖಲು

    ನಿದ್ದೆಗೆ ಜಾರಿದ್ದ ವೇಳೆ ಮುಖದ ಮೇಲೆ ಮಲ ವಿಸರ್ಜಿಸಿದ ಶ್ವಾನ- ಮಹಿಳೆ ಆಸ್ಪತ್ರೆಗೆ ದಾಖಲು

    ಲಂಡನ್: ಸಾಕು ಪ್ರಾಣಿಗಳನ್ನು ಎಷ್ಟೇ ಪ್ರೀತಿಸಿದರೂ ಅವುಗಳು ಕೆಟ್ಟ ಕೆಲಸ ಮಾಡಿದಾಗ ಸಿಟ್ಟು ಬರದೇ ಇರಲ್ಲ. ಅಂತೆಯೇ ಇಲ್ಲೊಂದು ಶ್ವಾನ ಮಾಡಿದ ಕಿತಾಪತಿಯಿಂದ ಮಹಿಳೆಯೊಬ್ಬಳು ಆಸ್ಪತ್ರೆ ಸೇರುವಂತಾಗಿದೆ.

    ಇತ್ತೀಚಿಗೆ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ನಿದ್ದೆಗೆ ಜಾರಿದ್ದ ಸಂದರ್ಭದಲ್ಲಿ ಆಕೆಯ ಮುಖದ ಮೇಲೆ ಮುದ್ದಿನ ಶ್ವಾನ (Dog) ಮಲವಿಸರ್ಜನೆ ಮಾಡಿದೆ. ಪರಿಣಾಮ ಆಕೆ 3 ದಿನಗಳ ಕಾಲ ಆಸ್ಪತ್ರೆಯಲ್ಲಿ ಕಳೆಯಬೇಕಾಯಿತು. ಶ್ವಾನದಿಂದಾಗಿ ಆಸ್ಪತ್ರೆ ಪಾಲಾದ ಮಹಿಳೆಯನ್ನು ಅಮಂಡಾ ಗೊಮ್ಮೊ (51) ಎಂದು ಗುರುತಿಸಲಾಗಿದೆ. ಈ ಘಟನೆ ಇಂಗ್ಲೆಂಡ್‍ (England) ನ ಬ್ರಿಸ್ಟೋಲ್ (Bristol) ನಲ್ಲಿ ನಡೆದಿದೆ.

    ಅಮಂಡಾ ಮಧ್ಯಾಹ್ನದ ಊಟದ ಬಳಿಕ ಕಿರುನಿದ್ದೆಗೆ ಜಾರಿದ್ದಳು. ಹೀಗೆ ನಿದ್ದೆಯಲ್ಲಿ ಸ್ವಲ್ಪ ಬಾಯಿ ತೆರೆದು ಮಲಗಿದ್ದಳು. ಈ ವೇಳೆ ಆಕೆಯ ಮುದ್ದಿನ ಶ್ವಾನ ಚಿಹೋವಾ ಬೆಲ್ಲೆ (chihuahua Belle) ಆಕೆಯೊಂದಿಗೆ ಆಟವಾಡಲು ಪ್ರಯತ್ನಿಸುತ್ತದೆ. ಆದರೆ ಆಕೆ ನಿದ್ದೆಗೆ ಜಾರಿದ್ದರಿಂದ ಆಕೆಯ ಮುಖದ ಬಳಿ ಬಂದು ಕುಳಿತುಕೊಳ್ಳುತ್ತೆ. ನಂತರ ಆಕೆಯ ಬಾಯಿಯ ಬಳಿ ಮಲವಿಸರ್ಜನೆ (Dog Pooped) ಮಾಡಿದೆ. ಈ ವೇಳೆ ಮಹಿಳೆಗೆ ಎಚ್ಚರವಾಗಿದೆ. ಇದನ್ನೂ ಓದಿ: ಹಿಜಬ್‌ ವಿರುದ್ಧ ಪ್ರತಿಭಟನೆ – ವೇದಿಕೆಯಲ್ಲೇ ಕೂದಲು ಕತ್ತರಿಸಿದ ಟರ್ಕಿ ಗಾಯಕಿ

    ಈ ಸಂಬಂಧ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಆಕೆ, ನಾನು ಎಂದಿನಂತೆ ಬೆಲ್ಲೆ ಜೊತೆ ಮಧ್ಯಾಹ್ನದ ಹೊತ್ತಿನಲ್ಲಿ ಮಲಗಿದ್ದೆ. ನಿದ್ದೆಯಲ್ಲಿದ್ದ ವೇಳೆ ನನ್ನ ಬಾಯಿ ಮೇಲೆ ತಣ್ಣಗಾದ ವಸ್ತುವೊಂದು ಬಿದ್ದಂತೆ ಭಾಸವಾಯಿತು. ಕೂಡಲೇ ಎಚ್ಚರಗೊಂಡು ಮುಖ ತೊಳೆಯಲೆಂದು ಬಾತ್ ರೂಂಗೆ ಓಡಿದೆ. ಆದರೆ ಈ ವೇಳೆ ನನ್ನ ಮಗ ಸ್ನಾನ ಮಾಡುತ್ತಿದ್ದ. ಹೀಗಾಗಿ ನಾನು ಮುಖ ತೊಳೆಯುವ ಮೊದಲು ಏನೆಂದು ತಿಳಿದುಕೊಳ್ಳಲು ಮೊಬೈಲ್ ನಲ್ಲಿ ಒಂದು ಫೋಟೋ ಕ್ಲಿಕ್ಕಿಸಿಕೊಂಡೆ.

    ಫೋಟೋ ನೋಡಿ ಗಾಬರಿಯಾದೆ, ಅಸಹ್ಯವಾಯಿತು. ಅಲ್ಲದೆ ಊಟ- ತಿಂಡಿ ಹೀಗೆ ಏನೂ ತಿನ್ನಲಾಗದೆ ಕೆಲ ಗಂಟೆಗಳ ಕಾಲ ಹಿಂಸೆ ಅನಿಸಿತು. ಈ ಮಧ್ಯೆ ಅಮಂಡಾ ಆರೋಗ್ಯದಲ್ಲಿಯೂ ಏರುಪೇರು ಉಂಟಾಯಿತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಹೀಗೆ ಈಕೆ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದ ಪ್ರಸಂಗ ಎದುರಾಯಿತು.

    ಇತ್ತ ಶ್ವಾನ ಈ ರೀತಿ ಮಾಡಿದ ಬಳಿಕ ಅಮಂಡಾ ಮಗಳು ಶ್ವಾನವನ್ನು ಪಶುವೈದ್ಯರ ಬಳಿ ತೋರಿಸಿದರು. ಈ ವೇಳೆ ಅವರು, ಅದು ಹೊಟ್ಟೆನೋವಿನಿಂದ ಬಳಲುತ್ತಿದೆ ಎಂದು ಹೇಳಿ ರ್ಶವಾನಕ್ಕೂ ಔಷಧಿಯನ್ನು ಕೊಟ್ಟರು.

    Live Tv
    [brid partner=56869869 player=32851 video=960834 autoplay=true]

  • ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

    ತನ್ನದೇ ದೇಶದ ಧ್ವಜವನ್ನು ಕಾಲಿನಿಂದ ಎತ್ತಿದ ಪಾಕ್ ಕ್ರಿಕೆಟಿಗ – ಅಭಿಮಾನಿಗಳಿಂದಲೂ ಆಕ್ರೋಶ

    ಇಸ್ಲಾಮಾಬಾದ್: ತಮ್ಮ ಆಕರ್ಷಕ ಬ್ಯಾಟಿಂಗ್‌ನಿಂದ ಪಾಕಿಸ್ತಾನದಲ್ಲಿ (Pakistan) ಅಪಾರ ಅಭಿಮಾನಿಗಳ ಮನಗೆದ್ದಿದ್ದ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮೊಹಮದ್ ರಿಜ್ವಾನ್ (Mohammad Rizwan) ಇದೀಗ ಭಾರೀ ಟೀಕೆಗಳಿಗೆ ಗುರಿಯಾಗಿದ್ದಾರೆ.

    ಮೊಹಮದ್ ರಿಜ್ವಾನ್ ತನ್ನದೇ ದೇಶದ ಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಪಂದ್ಯ ಮುಗಿದ ಬಳಿಕ ಪಾಕಿಸ್ತಾನದ ಅಭಿಮಾನಿಗಳಿಗೆ ರಿಜ್ವಾನ್ ಹಸ್ತಾಕ್ಷರ ನೀಡುತ್ತಿದ್ದರು. ಈ ವೇಳೆ ನೆಲಕ್ಕೆ ಬಿದ್ದ ಪಾಕಿಸ್ತಾನದ ಧ್ವಜವನ್ನು (Pakistan Flag) ಕಾಲಿನಿಂದ ಎತ್ತಿದ್ದಾರೆ. ಇದನ್ನೂ ಓದಿ: ಆಫ್ರಿಕಾಗೆ ಆಘಾತ ನೀಡಿದ ಅರ್ಶ್‌ದೀಪ್, ಚಹಾರ್, ಶೈನ್‌ ಆದ ಸೂರ್ಯ, ರಾಹುಲ್- ಭಾರತಕ್ಕೆ 8 ವಿಕೆಟ್‌ಗಳ ಜಯ

    ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಿಜ್ವಾನ್ ಅವರ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಜ್ವಾನ್ ಅವರ ವರ್ತನೆಗೆ ಪಾಕಿಸ್ತಾನದ ಜನ ಸೋಶಿಯಲ್ ಮೀಡಿಯಾ (Social Media)ದಲ್ಲಿ ಕಿಡಿಕಾರಿದ್ದು, ದೇಶದ ಧ್ವಜಕ್ಕೆ ಮರ್ಯಾದೆ ಕೊಡಿ. ಇಂಥ ಅಹಂಕಾರದ ವರ್ತನೆಯನ್ನು ಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI

    ಇತ್ತೀಚೆಗೆ ಏಷ್ಯಾಕಪ್ (AisaCup) ಟೂರ್ನಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಆಡಿದ್ದ ರಿಜ್ವಾನ್ ಟೀಂ ಇಂಡಿಯಾ ವಿರುದ್ಧ ನಡೆದಿದ್ದ 2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸುವ ಮೂಲಕ ತಮ್ಮ ಪಾಕಿಸ್ತಾನ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಅಲ್ಲದೇ ಇಂದು ನಡೆದ ಇಂಗ್ಲೆಂಡ್ ವಿರುದ್ಧದ ಟಿ20 (T20) ಪಂದ್ಯದಲ್ಲೂ 46 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 2 ಬೌಂಡರಿ) ಸಿಡಿಸಿದ್ದಾರೆ. ಇದೀಗ ತನ್ನದೇ ದೇಶದ ಧ್ವಜವನ್ನು ಕಾಲಿನಲ್ಲಿ ಎತ್ತುವ ಮೂಲಕ ಅಪಮಾನ ಮಾಡಿದ್ದು, ಟೀಕೆಗಳಿಗೆ ಗುರಿಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI

    ಭಾರತ-ಪಾಕ್ ಟೆಸ್ಟ್ ಸರಣಿ ನಮ್ಮಲ್ಲಿ ಆಡಿಸಿ ಎಂದ ಇಂಗ್ಲೆಂಡ್ – ಅವಶ್ಯಕತೆ ಇಲ್ಲ ಎಂದ BCCI

    ಮುಂಬೈ: ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವೆ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್‍ನಲ್ಲಿ ಆಯೋಜಿಸಿ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಒಂದು ಪ್ರಸ್ತಾಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿಟ್ಟಿದೆ. ಆದರೆ ಈ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿದೆ ಎಂದು ವರದಿಯಾಗಿದೆ.

    ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ (ECB) ಅಧ್ಯಕ್ಷರಾಗಿರುವ ಮಾರ್ಟಿನ್ ಡಾರ್ಲೋ ಬಿಸಿಸಿಐ ಜೊತೆ ಭಾರತ ಹಾಗೂ ಪಾಕಿಸ್ತಾನ ನಡುವೆ ಟಿ20 ಮತ್ತು ಟೆಸ್ಟ್ ಸರಣಿಯನ್ನು ನಮ್ಮಲ್ಲಿ ಆಯೋಜಿಸಿ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಸ್ತಾಪ ಇಟ್ಟಿತ್ತು. ಆದರೆ ನಮಗೆ ಇಂತಹ ಸರಣಿ ಅಗತ್ಯವಿಲ್ಲ. ಮುಂದಿನ ಕೆಲ ವರ್ಷಗಳ ಬಳಿಕ ಈ ಬಗ್ಗೆ ತೀರ್ಮಾನಿಸುತ್ತೇವೆ. ನಮ್ಮ ಸರ್ಕಾರ ಒಪ್ಪಿದರೆ ಮಾತ್ರ ನಮ್ಮ ತಂಡ ಆಡುತ್ತದೆ ಎಂದು ಖಡಕ್ ಆಗಿ ತಿಳಿಸಿದೆ ಎಂದು ಬಿಸಿಸಿಐ ಆಪ್ತ ಮೂಲದಿಂದ ವರದಿಯಾಗಿದೆ. ಇದನ್ನೂ ಓದಿ: ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ಭಾರತ ಹಾಗೂ ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ 2012ರಿಂದ ನಡೆಯುತ್ತಿಲ್ಲ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ (ICC) ಆಯೋಜಿಸುವ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಎದುರುಬದುರಾಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು 2007ರಲ್ಲಿ ಕೊನೆಯದಾಗಿ ಟೆಸ್ಟ್ ಸರಣಿ ಆಡಿದ್ದವು. ಇದನ್ನೂ ಓದಿ: ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

    ಐಸಿಸಿ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪಾಲ್ಗೊಳ್ಳುತ್ತಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‍ನಲ್ಲಿ ಈ ಎರಡು ತಂಡಗಳು ಕಾದಾಟ ನಡೆಸಲಿದೆ.

    Live Tv
    [brid partner=56869869 player=32851 video=960834 autoplay=true]

  • 70 ವರ್ಷ ಒಂದೇ ಹೇರ್‌ಸ್ಟೈಲ್‌ ಮೆಂಟೇನ್‌ ಮಾಡಿದ್ದರು ಬ್ರಿಟನ್‌ ರಾಣಿ

    70 ವರ್ಷ ಒಂದೇ ಹೇರ್‌ಸ್ಟೈಲ್‌ ಮೆಂಟೇನ್‌ ಮಾಡಿದ್ದರು ಬ್ರಿಟನ್‌ ರಾಣಿ

    ಬ್ರಿಟನ್‌ (Britain) ಇತಿಹಾಸದಲ್ಲೇ ಸುದೀರ್ಘ ಕಾಲದವರೆಗೆ ರಾಣಿಯಾಗಿದ್ದ 2ನೇ ಎಲಿಜಬೆತ್‌ ಈಚೆಗೆ ನಿಧನರಾದರು. ರಾಣಿಯ ಗೌರವಾರ್ಥ ಬ್ರಿಟನ್‌ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಶೋಕಾಚರಣೆ ನಡೆಸಿದವು. ಇಡೀ ಜಗತ್ತು ರಾಣಿ ಎಲಿಜಬೆತ್‌ (Queen Elizabeth 2) ಅವರನ್ನು ಒಂದಲ್ಲ ಒಂದು ರೀತಿಯಲ್ಲಿ ಸ್ಮರಿಸುತ್ತಿದೆ.

    ರಾಣಿ 2ನೇ ಎಲಿಜಬೆತ್‌ ಅವರು ರಾಜಮನೆತನದ ಕರ್ತವ್ಯಗಳಿಗೆ ಬದ್ಧರಾಗಿದ್ದವರು. ಅಷ್ಟೇ ಅಲ್ಲ ತಮ್ಮ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜಗತ್ತಿನ ಗಮನ ಸೆಳೆದವರು. ಉಡುಗೆ, ಆಭರಣ ಮತ್ತು ಸೌಮ್ಯ ಸ್ವಭಾವದ ನಡವಳಿಕೆ ಮೂಲಕ ಜನತೆಗೆ ಮಾದರಿಯಾಗಿದ್ದವರು. ರಾಣಿಯ ವರ್ಚಸ್ಸಿನ ಜೊತೆಗೆ ತಮ್ಮ ಸೌಂದರ್ಯಕ್ಕೂ ಮಹತ್ವ ನೀಡುತ್ತಿದ್ದರು. ರಾಣಿಯ ಕೇಶವಿನ್ಯಾಸದ (ಹೇರ್‌ಸ್ಟೈಲ್‌) ಗುಟ್ಟು ನಿಜಕ್ಕೂ ಎಂತಹವರನ್ನೂ ಬೆರಗಾಗಿಸುವಂತಿದೆ. ಇದನ್ನೂ ಓದಿ: ಬ್ರಿಟನ್ ರಾಣಿ ಎಲಿಜಬೆತ್ ಶಕೆ ಅಂತ್ಯ – ಲಕ್ಷಾಂತರ ಮಂದಿ ಸಮಕ್ಷಮದಲ್ಲಿ ಅಂತಿಮ ಯಾತ್ರೆ

    70 ವರ್ಷ ಒಂದೇ ಹೇರ್‌ಸ್ಟೈಲ್‌
    ರಾಣಿ 2ನೇ ಎಲಿಜಬೆತ್‌ ತಮ್ಮ ವ್ಯಕ್ತಿತ್ವ ಅಷ್ಟೇ ಅಲ್ಲ, ವಿಶೇಷ ಹೇರ್‌ಸ್ಟೈಲ್‌ ಮೂಲಕವೂ ಗಮನ ಸೆಳೆಯುತ್ತಿದ್ದರು. ಅವರು ತಮ್ಮ ಜೀವಿತಾವಧಿಯಲ್ಲಿ ಸತತ 70 ವರ್ಷಗಳ ಕಾಲ ಒಂದೇ ರೀತಿಯಲ್ಲಿ ಹೇರ್‌ಸ್ಟೈಲ್‌ ನಿರ್ವಹಿಸಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಆದರೆ ಅದು ಸತ್ಯ.

    ಹೇರ್‌ಸ್ಟೈಲ್‌ ಹಿಂದಿನ ಕಥೆಯೇನು?
    ರಾಣಿ ತನ್ನ ಕೇಶವಿನ್ಯಾಸಕ್ಕೆ ನಿಷ್ಠರಾಗಿದ್ದರು. ಅದರ ಹಿಂದಿನ ಕಥೆ ಕುತೂಹಲಭರಿತವಾಗಿದೆ. ಬ್ರಿಟಿಷ್‌ ಬ್ಯಾಂಕ್‌ ನೋಟುಗಳು, ಅಂಚೆ ಚೀಟಿಗಳಲ್ಲಿ ರಾಣಿ 2ನೇ ಎಲಿಜಬೆತ್‌ (Queen Elizabeth 2 Hairstyle) ಅವರ ಭಾವಚಿತ್ರ ಮುದ್ರಿಸುವುದು ಎಲ್ಲರಿಗೂ ತಿಳಿದಿರುವ ವಿಚಾರ. ನೋಟು, ಅಂಚೆಚೀಟಿಗಳಲ್ಲಿರುವ ಚಿತ್ರ ನೋಡುತ್ತಿದ್ದ ಜನರಿಗೆ ರಾಣಿ ಎಂದೇ ಚಿರಪರಿಚಿತರಂತಿದ್ದರು. ತಾವು ಹೀಗೆಯೇ ಜನರಿಗೆ ಚಿರಪರಿಚಿತರಾಗಿಯೇ ಇರಬೇಕು ಎಂಬ ದೃಷ್ಟಿಯಿಂದ ಅವರು ಒಂದೇ ರೀತಿಯ ಹೇರ್‌ಸ್ಟೈಲ್‌ ಹೊಂದಲು ನಿರ್ಧರಿಸಿದರು. ಸತತ 70 ವರ್ಷ ಅವರು ಅದೇ ಹೇರ್‌ಸ್ಟೈಲ್‌ ಕಾಪಾಡಿಕೊಂಡು ಬಂದರು. ಇದನ್ನೂ ಓದಿ: ಜನರಿಗೆ ಸಿಕ್ರೇಟ್ ಲೆಟರ್- 2085 ರವರೆಗೂ ತೆರೆಯದಿರಲು ರಾಣಿ ಸೂಚನೆ

    ರಾಣಿ ಕೇಶವಿನ್ಯಾಸಕಿ ಯಾರು ಗೊತ್ತಾ?
    ರಾಣಿ 2ನೇ ಎಲಿಜಬೆತ್‌ ಅವರ ವಿಶಿಷ್ಟ ಹೇರ್‌ಸ್ಟೈಲ್‌ ಬಗ್ಗೆ ತಿಳಿದವರಿಗೆ, ಸಾಮಾನ್ಯವಾಗಿ ರಾಣಿಯವರ ಕೇಶವಿನ್ಯಾಸಕಿ ಬಗ್ಗೆಯೂ ತಿಳಿದುಕೊಳ್ಳುವ ಕುತೂಹಲವಿರುತ್ತದೆ. ಲ್ಯಾನ್ ಕಾರ್ಮೈಕಲ್ ಎಂಬಾಕೆಯೇ ರಾಣಿ ಎಲಿಜಬೆತ್‌ ಅವರ ಕೇಶವಿನ್ಯಾಸಕಿ. ಈಕೆ ಲಂಡನ್‌ನ ಕೋವೆಂಟ್‌ ಗಾರ್ಡನ್‌ನಲ್ಲಿರುವ ಟ್ರೆವರ್ ಸೋರ್ಬಿ ಸಲೂನ್‌ನಲ್ಲಿ ಕೇಶವಿನ್ಯಾಸಕಿಯಾಗಿದ್ದಾರೆ.

    ಸಾಂಪ್ರದಾಯಿಕ ಶಾಂಪೂ ಹಾಕ್ತಿದ್ದ ರಾಣಿ
    ರಾಣಿ ಅವರು ತಮ್ಮ ತಲೆ ಕೂದಲಿಗೆ ಸಾಂಪ್ರದಾಯಿಕ ಶಾಂಪೂ ಬಳಸುತ್ತಿದ್ದರು ಎಂದು ಕೇಶವಿನ್ಯಾಸಕಿ ಬೆನ್ ಕುಕ್‌‌ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ʼಇಟಾಲಿಯನ್‌ ಬಾಯ್‌ʼ ವಿನ್ಯಾಸ
    ತಲೆಗೂದಲು ವಾಶ್‌ ಮಾಡಿದ ನಂತರ, ಚಿಕ್ಕದಾಗಿ ರೋಲ್‌ನಂತೆ ಮಾಡಿ ವಿನ್ಯಾಸಗೊಳಿಸುವುದು. ಇದಕ್ಕೆ ʼಇಟಾಲಿಯನ್‌ ಬಾಯ್‌ʼ (Italian Boy Technique) ಮಾದರಿ ವಿನ್ಯಾಸ ಎನ್ನಲಾಗುತ್ತದೆ. ತಲೆಗೂದಲು ಒಣಗದಂತೆ ನೋಡಿಕೊಂಡು ಮತ್ತೆ ಮತ್ತೆ ಒಂದೇ ಮಾದರಿಯಲ್ಲಿ ರಚಿಸಬೇಕು.

    ಕೂದಲು ಬಣ್ಣದಲ್ಲಿ ಮಾತ್ರ ಬದಲಾವಣೆ
    ರಾಣಿ ಅವರ ತಲೆಗೂದಲಿನಲ್ಲಿ ಸ್ವಲ್ಪವೂ ಬದಲಾವಣೆ ಮಾಡಲಾಗುತ್ತಿರಲಿಲ್ಲ. ಅವರ ತಲೆಗೂದಲ ಬಣ್ಣದಲ್ಲಿ ಮಾತ್ರ ಬದಲಾವಣೆಯನ್ನು ಗುರುತಿಸಬಹುದು. ಆರಂಭದಲ್ಲಿ ಕಂದು ಬಣ್ಣ, ನಂತರ ಬೂದು ಬಣ್ಣ. ಕೊನೆಗೆ ಬಿಳಿ ಬಣ್ಣಕ್ಕೆ ಬದಲಾಯಿತು.

    Live Tv
    [brid partner=56869869 player=32851 video=960834 autoplay=true]