Tag: england

  • ವಿಶ್ವದಲ್ಲಿಯೇ ಅತೀ ಉದ್ದದ ಮೂಗಿನ ವ್ಯಕ್ತಿ – ಫೋಟೋ ವೈರಲ್

    ವಿಶ್ವದಲ್ಲಿಯೇ ಅತೀ ಉದ್ದದ ಮೂಗಿನ ವ್ಯಕ್ತಿ – ಫೋಟೋ ವೈರಲ್

    ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರವಾದ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಅತಿ ಉದ್ದದ ಮೂಗನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದು, ಜನ ಫೋಟೋ ನೋಡಿ ಶಾಕ್ ಆಗಿದ್ದಾರೆ.

    ಹೌದು, ಹಿಸ್ಟಾರಿಕ್ ವಿಡ್ಸ್ (Historic Vids) ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ (Believe It Or Not Museum) ಇರಿಸಲಾಗಿರುವ ವ್ಯಕ್ತಿಯ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು ಉದ್ದವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಈ ವ್ಯಕ್ತಿಯ ಹೆಸರಿದೆ. ಅಲ್ಲದೇ ಈತನೊಬ್ಬ “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಬಾವಿಗೆ ಬಿದ್ದ ಒಂಟಿ ಸಲಗ – ಮೇಲಕ್ಕೆತ್ತಲು ಅರಣ್ಯಾಧಿಕಾರಿಗಳಿಂದ ಬಿಗ್ ಸರ್ಕಸ್

    18 ನೇ ಶತಮಾನದಲ್ಲಿದ್ದ ಥಾಮಸ್ ವಾಡ್‍ಹೌಸ್ ಒಬ್ಬರು ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು. 7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. ಸದ್ಯ ಈ ಫೋಟೋಗೆ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7,200ಕ್ಕೂ ಹೆಚ್ಚು ರೀಟ್ವೀಟ್ ಬಂದಿದೆ.

    1770ರ ದಶಕದಲ್ಲಿ ಥಾಮಸ್ ವಾಡ್‍ಹೌಸ್ ಅವರು, ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿದ್ದರು ಮತ್ತು ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯರಾಗಿದ್ದರು. ಥಾಮಸ್ ವಾಡ್‍ಹೌಸ್ 19 ಸೆಂ (7.5 ಇಂಚುಗಳಷ್ಟು) ಮೂಗು ಹೊಂದುವ ಮೂಲಕ ಗೆನ್ನಿಸ್ ರೆಕಾರ್ಡ್ ಮಾಡಿದ್ದರು. ಇದನ್ನೂ ಓದಿ: ಬಿಜೆಪಿ ಮುಖಂಡನ ಮರ್ಮಾಂಗಕ್ಕೆ ಚಾಕು ಇರಿದು, ಕತ್ತಿಗೆ ಹಗ್ಗ ಬಿಗಿದು ಕೊಲೆ

    Live Tv
    [brid partner=56869869 player=32851 video=960834 autoplay=true]

  • ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಮೆಲ್ಬರ್ನ್‌: ಪಾಕಿಸ್ತಾನವನ್ನು (Pakistan) ಬಗ್ಗುಬಡಿದು 2022ರ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿರುವ ಇಂಗ್ಲೆಂಡ್ (England) ತಂಡ ಸಂಭ್ರಮಾಚರಣೆ ವೇಳೆ ಆಲ್‍ರೌಂಡರ್‌ಗಳಾದ ಮೊಯಿನ್ ಅಲಿ (Moeen Ali) ಮತ್ತು ಆದಿಲ್‌ ರಶೀದ್ (Adil Rashid) ಅವರನ್ನು ನಾಯಕ ಜೋಸ್ ಬಟ್ಲರ್ (Jos Buttler) ಹೊರ ಹೋಗುವಂತೆ ಹೇಳಿದ ಪ್ರಸಂಗವೊಂದು ನಡೆದಿದೆ.

    ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿತು. ಅಲ್ಲದೇ 12 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡ ಬಹಳಷ್ಟು ಶ್ರಮಪಟ್ಟಿದೆ. ಆ ಶ್ರಮದ ಫಲವಾಗಿ ಗೆಲುವು ಇಂಗ್ಲೆಂಡ್ ತಂಡದ ಪಾಲಾಗಿದೆ. ಪ್ರತಿಯೊಬ್ಬ ಆಟಗಾರರು ಕೂಡ ಇಂಗ್ಲೆಂಡ್ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಇದು ಅವರ ಸಂಭ್ರಮಾಚರಣೆ ವೇಳೆ ಕಾಣಸಿಕ್ಕಿತು. ಇದನ್ನೂ ಓದಿ: Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

    ಸೀಮಿತ ಓವರ್‌ಗಳ ನಾಯಕನಾಗಿದ್ದ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಇಂಗ್ಲೆಂಡ್ ಬಟ್ಲರ್‌ಗೆ ನಾಯಕತ್ವದ ಪಟ್ಟ ಕಟ್ಟಿತು. ನೂತನ ನಾಯಕನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್‍ಗೆ ಆಗಮಿಸಿತ್ತು. ಬಳಿಕ ಅದ್ಭುತವಾಗಿ ಆಡಿ ವಿಶ್ವಕಪ್‍ನೊಂದಿಗೆ ತೆರಳುವಂತಾಯಿತು. ಪಾಕ್ ವಿರುದ್ಧ ಗೆದ್ದ ಬಳಿಕ ಪ್ರಶಸ್ತಿ ಹಿಡಿದು ಸಂಭ್ರಮಿಸುತ್ತಿದ್ದ ವೇಳೆ ಅಲಿ ಮತ್ತು ರಶೀದ್‍ರನ್ನು ಬಟ್ಲರ್ ಹೊರ ಹೋಗುವಂತೆ ಕಳುಹಿಸಿ ಸಂಭ್ರಮಿಸಿದರು.

    ಅವರಿಬ್ಬರು ಹೊರ ಹೋಗುತ್ತಾರೆ. ಬಳಿಕ ಇಂಗ್ಲೆಂಡ್ ತಂಡ ಶಾಂಪೇನ್ ಸಂಭ್ರಮಾಚರಣೆ ಮಾಡಿತು. ಇದನ್ನು ಕಂಡ ಅಭಿಮಾನಿಗಳು ಬಟ್ಲರ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಹೊರ ಹೋದ ಕಾರಣ:
    ಅಲಿ ಮತ್ತು ರಶೀದ್ ತಮ್ಮ ಧರ್ಮದ ಪ್ರಕಾರ ಶಾಂಪೇನ್ ಸಹಿತ ಇತರ ಮದ್ಯಗಳನ್ನು ಮುಟ್ಟುವುದಿಲ್ಲ. ಸಂಭ್ರಮಾಚರಣೆ ವೇಳೆ ಶಾಂಪೇನ್ ಚೆಲ್ಲುವ ಕಾರಣ ಬಟ್ಲರ್ ಅವರಿಬ್ಬರೊಂದಿಗೆ ಹೊರ ಹೋಗುವಂತೆ ಮನವಿಮಾಡಿಕೊಂಡಿದ್ದರು. ಬಳಿಕ ಅವರು ತಂಡದೊಂದಿಗೆ ಸೇರಿಕೊಂಡರು.

    2019ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಇಂಗ್ಲೆಂಡ್ ನಾಯಕರಾಗಿದ್ದ ಇಯಾನ್ ಮಾರ್ಗನ್ ಕೂಡ ಇದೇ ರೀತಿ ನಡೆದುಕೊಂಡಿದ್ದರು. ಇದೀಗ ಬಟ್ಲರ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

    Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

    ಮುಂಬೈ: ಪಾಕಿಸ್ತಾನ (Pakistan)  ತಂಡ ಟಿ20 ವಿಶ್ವಕಪ್ (T20 World Cup) ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ (England) ವಿರುದ್ಧ ಸೋತ ಬೆನ್ನಲ್ಲೇ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ (Mohammed Shami) ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಕಾಲೆಳೆದಿದ್ದಾರೆ.

    ಭಾರತ ಸೆಮಿಫೈನಲ್ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆಯದೇ ಸೋತಾಗ ಶೋಯೆಬ್ ಅಖ್ತರ್ ಭಾರತ (India) ಕುರಿತಾಗಿ ಗೇಲಿ ಮಾಡಿದ್ದರು. ಇದೀಗ ಪಾಕಿಸ್ತಾನ ಸೋತ ಬೆನ್ನಲ್ಲೇ ಸ್ವಾರಿ ಬ್ರದರ್ ಇದನ್ನೇ ಕರ್ಮ ಎನ್ನುವುದು ಎಂದು ಬರೆದುಕೊಂಡು ಟ್ವೀಟ್ ಮಾಡಿ ಶೋಯೆಬ್ ಅಖ್ತರ್‌ಗೆ ಠಕ್ಕರ್ ನೀಡಿದ್ದಾರೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

    ಪಾಕ್ ಸೋತ ಬೆನ್ನಲ್ಲೇ ಶೋಯೆಬ್ ಅಕ್ತರ್ ಛಿದ್ರವಾದ ಹೃದಯದ ಇಮೋಜಿ ಹಾಕಿಕೊಂಡು ಬೇಸರ ವ್ಯಕ್ತಪಡಿಸಿದ್ದರು. ಇದನ್ನು ಕಂಡು ಶಮಿ, ಅಖ್ತರ್‌ಗೆ ಕಿಚಾಯಿಸಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಚರ್ಚೆಯಾಗುತ್ತಿದೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 137 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರ್ರನ್‌ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್ (Ben Stokes) ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದಿಂದ ಇಂಗ್ಲೆಂಡ್ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು.

    Live Tv
    [brid partner=56869869 player=32851 video=960834 autoplay=true]

  • 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022) ಪಂದ್ಯದಲ್ಲಿ ಪಾಕಿಸ್ತಾನ (Pakistan) ವಿರುದ್ಧ ಇಂಗ್ಲೆಂಡ್ (England) ತಂಡ ಗೆಲ್ಲಬೇಕಾದರೆ ಮಹತ್ವದ ಪಾತ್ರ ವಹಿಸಿದ ಆಲ್‍ರೌಂಡರ್ ಬೆನ್‍ಸ್ಟೋಕ್ಸ್ (Ben Stokes)  ಆಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಪಾಕಿಸ್ತಾನ ನೀಡಿದ 138 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ ಒಂದು ಹಂತದಲ್ಲಿ 45 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅಗ್ರಕ್ರಮಾಂಕದ ಮೂವರು ಬ್ಯಾಟ್ಸ್‌ಮ್ಯಾನ್‌ಗಳು ಪೆವಿಲಿಯನ್ ಸೇರಿಕೊಂಡಿದ್ದರು. ಈ ವೇಳೆ ಇಂಗ್ಲೆಂಡ್‍ಗೆ ಬೆನ್ನೆಲುಬಾಗಿ ನಿಂತಿದ್ದು ಬೆನ್‍ಸ್ಟೋಕ್ಸ್ ತಾನು ಬಿಗ್ ಮ್ಯಾಚ್‍ಗಳಲ್ಲಿ ಅಬ್ಬರಿಸುವ ಆಟಗಾರ. ನಾನೇ ಮ್ಯಾಚ್ ವಿನ್ನರ್ ಎಂಬಂತೆ ಹೋರಾಟ ನಡೆಸಿದ ಸ್ಟೋಕ್ಸ್ ತಾಳ್ಮೆಯುತ ಬ್ಯಾಟಿಂಗ್ ಮೂಲಕ ಕೊನೆಯ ವರೆಗೆ ನಿಂತು ಇಂಗ್ಲಂಡ್‍ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!

    ಈ ಪ್ರದರ್ಶನ ಕಂಡ ಪ್ರೇಕ್ಷಕರು ಬೆನ್‍ಸ್ಟೋಕ್ಸ್ ನಿಜವಾದ ಮ್ಯಾಚ್ ವಿನ್ನರ್. ಆತ ಆಡಿದ ಆಟ 2019 ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿತ್ತು ಎಂದು ಹಾಡಿ ಹೊಗಳಿದ್ದಾರೆ.

    ಬೆನ್‍ಸ್ಟೋಕ್ಸ್ 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇದೇ ರೀತಿ ಆಡಿ ಕೈಜಾರಿದ್ದ ಪಂದ್ಯವನ್ನು ಗೆದ್ದು ಇಂಗ್ಲೆಂಡ್‌ಗೆ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಆ ಬಳಿಕ ಇದೀಗ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಮತ್ತೊಮ್ಮೆ ಘರ್ಜಿಸಿ ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.

    2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅಜೇಯ 84 ರನ್ (98 ಎಸೆತ) ಸಿಡಿಸಿದ್ದರು. ಇಂದು ಪಾಕ್ ವಿರುದ್ಧ ಫೈನಲ್‍ನಲ್ಲಿ ಅಜೇಯ 52 ರನ್ (49 ಎಸೆತ) ಚಚ್ಚಿ, ಬೌಲಿಂಗ್‌ನಲ್ಲಿ 1 ವಿಕೆಟ್‌ ಕಿತ್ತು ಇಂಗ್ಲೆಂಡ್‍ಗೆ ಕಪ್ ತಂದುಕೊಟ್ಟಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ಟೋಕ್ಸ್ ಆಟಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

    ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 137 ರನ್‍ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರನ್ ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್ ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್ ಬಾಕಿ ಇರುವಂತೆ 5 ವಿಕೆಟ್‍ಗಳ ಅಂತರದಿಂದ ಇಂಗ್ಲೆಂಡ್ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು.

    Live Tv
    [brid partner=56869869 player=32851 video=960834 autoplay=true]

  • ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

    ಫೈನಲ್‍ನಲ್ಲಿ ಪಾಕ್‍ಗೆ ಸೋಲು – 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್

    ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022 Final) ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ (England) ತಂಡ ಅಧಿಕಾರಯುತವಾಗಿ ಪಾಕಿಸ್ತಾನ (Pakistan) ವಿರುದ್ಧ 5 ವಿಕೆಟ್‍ಗಳ ಜಯದೊಂದಿಗೆ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿದೆ.

    ಪಾಕಿಸ್ತಾನ ನೀಡಿದ 137 ರನ್‌ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಬೌಲಿಂಗ್‍ನಲ್ಲಿ ಸ್ಯಾಮ್ ಕರನ್ (Sam Curran) ಮಿಂಚಿದರೆ, ಬ್ಯಾಟಿಂಗ್‍ನಲ್ಲಿ ಬೆನ್‍ಸ್ಟೋಕ್ಸ್‌ (Ben Stokes)  ಆಧಾರವಾದರು. ಪರಿಣಾಮ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 138 ರನ್ ಬಾರಿಸಿ ಇನ್ನೂ 1 ಓವರ್‌ ಬಾಕಿ ಇರುವಂತೆ ಇಂಗ್ಲೆಂಡ್‌ ಗೆದ್ದು ವಿಶ್ವಕಪ್ ಎತ್ತಿ ಹಿಡಿಯಿತು. ಈ ಮೂಲಕ ಇಂಗ್ಲೆಂಡ್ 12 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದಿದೆ. ಈ ಹಿಂದೆ 2010ರಲ್ಲಿ ಟಿ20 ವಿಶ್ವಕಪ್ ಗೆದ್ದಿತ್ತು. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!

    ಅಲ್ಪಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಕಳೆದ ಪಂದ್ಯದ ಹೀರೋ ಅಲೆಕ್ಸ್ ಹೇಲ್ಸ್ ಆಟ ಕೇವಲ 1 ರನ್‍ಗೆ ಕೊನೆಗೊಂಡಿತು. ಶಾಹೀನ್ ಅಫ್ರಿದಿ ಆರಂಭದಲ್ಲೇ ಪಾಕಿಸ್ತಾನಕ್ಕೆ ಮೇಲುಗೈ ತಂದುಕೊಟ್ಟರು. ಬಳಿಕ ಬಂದ ಫಿಲ್ ಸಾಲ್ಟ್ 10 ರನ್ (9 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು. ಆ ಬಳಿಕ ಬಟ್ಲರ್ ಕೂಡ 26 ರನ್ (17 ಎಸೆತ, 3 ಬೌಂಡರಿ, 1 ಸಿಕ್ಸ್) ಬಾರಿಸಿ ಔಟ್ ಆದರು.

    ಇಂಗ್ಲೆಂಡ್ 84 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಲುಕಿತು. ಆಗ ಬೆನ್‍ಸ್ಟೋಕ್ಸ್ ಬ್ಯಾಟಿಂಗ್‍ನಲ್ಲಿ ಮಿಂಚಲಾರಂಭಿಸಿದರು. ಪಾಕಿಸ್ತಾನ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಸ್ಟೋಕ್ಸ್ ಅಜೇಯ 52 ರನ್‌ (49 ಎಸೆತ, 5 ಬೌಂಡರಿ, 1 ಸಿಕ್ಸ್‌) ಚಚ್ಚಿ ಕೊನೆಯವರೆಗೆ ಹೋರಾಡಿ ಜಯ ತಂದುಕೊಟ್ಟರು. ಇವರಿಗೆ ಮೊಯಿನ್ ಅಲಿ 19 ರನ್‌ (12 ಎಸೆತ, 2 ಬೌಂಡರಿ) ಉತ್ತಮ ಸಾಥ್ ನೀಡಿ ಜಯದ ಹೊಸ್ತಿಲಲ್ಲಿ ವಿಕೆಟ್‌ ಕಳೆದುಕೊಂಡರು. ಅಂತಿಮವಾಗಿ 19 ಓವರ್‌ಗಳಲ್ಲಿ 138 ರನ್‌ ಬಾರಿಸಿ ಜಯ ಸಾಧಿಸಿ ಸಂಭ್ರಮಿಸಿತು. ಇದನ್ನೂ ಓದಿ: ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

    ಫೈನಲ್ ಪಂದ್ಯದ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಇತ್ತ ಬ್ಯಾಟಿಂಗ್ ಮಾಡಲು ಬಂದ ಪಾಕಿಸ್ತಾನ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಸ್ಯಾಮ್ ಕರನ್ ಆರಂಭದಲ್ಲೇ ತಡೆಯೊಡ್ಡಿದರು. ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ 15 ರನ್ (14 ಎಸೆತ, 1 ಸಿಕ್ಸ್) ಸಿಡಿಸಿ ಕರನ್‍ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಬಳಿಕ ಬಂದ ಹ್ಯಾರಿಸ್ ಆಟ 8 ರನ್ (12 ಎಸೆತ, 1 ಬೌಂಡರಿ) ಅಂತ್ಯ ಕಂಡಿತು.

    ಒಂದು ಕಡೆ ವಿಕೆಟ್ ಉರುಳುತ್ತಿದ್ದರೆ ಪಾಕ್ ನಾಯಕ ಬಾಬರ್ ಅಜಮ್ ಮಾತ್ರ ರನ್ ಪೇರಿಸುವ ಇರಾದೆಯಲ್ಲಿ ನಿಧಾನವಾಗಿ ರನ್ ಹೆಚ್ಚಿಸಲು ಮುಂದಾದರು. ಇನ್ನೊಂದೆಡೆ ಇವರಿಗೆ ಶಾನ್ ಮಸೂದ್ ಉತ್ತಮ ಸಾಥ್ ನೀಡಿದರು. ಮಸೂದ್ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರೆ, ಬಾಬರ್ 32 ರನ್ (28 ಎಸೆತ, 2 ಬೌಂಡರಿ) ಸಿಡಿಸಿ ರಶೀದ್ ಮಾಡಿದ ಸ್ಪಿನ್ ಮ್ಯಾಜಿಕ್ ಅರಿಯದೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿಕೊಂಡರು. ಈ ಮೊದಲು ಮಸೂದ್ ಜೊತೆ 3ನೇ ವಿಕೆಟ್‍ಗೆ 39 ರನ್ (24 ಎಸೆತ) ಜೊತೆಯಾಟವಾಡಿದರು. ಈ ಜೊತೆಯಾಟ ಪಾಕಿಸ್ತಾನ ಪಾಳಯದಲ್ಲಿ ಒಟ್ಟುಗೂಡಿಸಿದ ಹೆಚ್ಚಿನ ಜೊತೆಯಾಟವಾಗಿ ಕಂಡುಬಂತು. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಸ್ಯಾಮ್ ಕರನ್ ಕರಾಮತ್ತು:
    ಬಾಬರ್ ಔಟ್ ಆದ ಬಳಿಕ ಬಂದ ಇಫ್ತಿಕರ್ ಶೂನ್ಯ ಸುತ್ತಿದರು. ಇನ್ನೊಂದೆಡೆ ಮಸೂದ್ 38 ರನ್ (28 ಎಸೆತ, 2 ಬೌಂಡರಿ, 1 ಸಿಕ್ಸ್) ಚಚ್ಚಿ ಅಬ್ಬರಿಸುತ್ತಿದ್ದ ಅಬ್ಬರಕ್ಕೆ ಸ್ಯಾಮ್ ಕರನ್ ಬ್ರೇಕ್ ಹಾಕಿದರು. ಬಳಿಕ ಮತ್ತೆ ಪಾಕಿಸ್ತಾನದ ಕುಸಿತ ಆರಂಭವಾಯಿತು. ಇಂಗ್ಲೆಂಡ್ ಬೌಲರ್‌ಗಳ ಶಿಸ್ತುಬದ್ಧ ದಾಳಿಯನ್ನು ಎದುರಿಸಲು ಪಾಕ್ ಆಟಗಾರರು ಪರದಾಡಿದರು.

    ಶಾಬಾಝ್ ಖಾನ್ 20 ರನ್ (14 ಎಸೆತ, 2 ಬೌಂಡರಿ) ಸಿಡಿಸಿ ಔಟ್ ಆದ ಬಳಿಕ ಬಂದ ಬಿಗ್ ಹಿಟ್ಟರ್ ನವಾಝ್ 5 ಮತ್ತು ವಾಸೀಂ 4 ರನ್ ಬಾರಿಸಿ ಪೆವಿಲಿಯನ್ ದಾರಿ ಹಿಡಿದರು. ಸ್ಲಾಗ್ ಓವರ್‌ಗಳಲ್ಲಿ ಇಂಗ್ಲೆಂಡ್ ಬೌಲರ್‌ಗಳು ವಿಕೆಟ್ ಜೊತೆ ರನ್‍ಗೆ ಕಡಿವಾಣ ಹಾಕಿದರು.

    ಪರಿಣಾಮ 20 ಓವರ್‌ಗಳ ಅಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಸಿಡಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್ ಪರ ಕರನ್ 4 ಓವರ್ ಎಸೆದು 12 ರನ್ ನೀಡಿ 3 ವಿಕೆಟ್ ಕಿತ್ತು ಮಿಂಚಿದರು. ರಶೀದ್ ಮತ್ತು ಜೋರ್ಡನ್ ತಲಾ 2 ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಬೆನ್‍ಸ್ಟೋಕ್ಸ್ ಪಾಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!

    ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಪ್ಪು ಪಟ್ಟಿ ಧರಿಸಿ ಕಣಕ್ಕಿಳಿದ ಇಂಗ್ಲೆಂಡ್!

    ಮೆಲ್ಬರ್ನ್: ಟಿ20 ವಿಶ್ವಕಪ್ ಫೈನಲ್ (T20 World Cup 2022 Final) ಪಂದ್ಯದಲ್ಲಿ ಇಂಗ್ಲೆಂಡ್ (England) ತಂಡದ ಆಟಗಾರರು ಕೈಗೆ ಕಪ್ಟು ಪಟ್ಟಿ ಧರಿಸಿ (Black Armband) ಕಣಕ್ಕಿಳಿದಿದ್ದಾರೆ.

    ಪಾಕಿಸ್ತಾನ (Pakistan) ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಡೇವಿಡ್ ಇಂಗ್ಲೀಷ್‌ (David English) ಸಾವನ್ನಪ್ಪಿದ್ದಾರೆ. ಅವರಿಗೆ ಸಂತಾಪ ಸೂಚಿಸುವ ಸಲುವಾಗಿ ಇಂಗ್ಲೆಂಡ್ ತಂಡ ಕಪ್ಪು ಪಟ್ಟಿಯೊಂದಿಗೆ ಮೈದಾನಕ್ಕಿಳಿದಿದೆ. ಇದನ್ನೂ ಓದಿ: ಲಿವರ್‌ಪೂಲ್‌ ತಂಡವನ್ನು ಖರೀದಿಸಲು ಮುಂದಾದ ಅಂಬಾನಿ

    ಇಂಗ್ಲೆಂಡ್ ತಂಡದ ಮಾಜಿ ಆಟಗಾರರಾಗಿದ್ದ ಡೇವಿಡ್ ಇಂಗ್ಲೀಷ್‌ ಅವರನ್ನು ಇಂಗ್ಲೆಂಡ್ ಕ್ರಿಕೆಟ್‍ನ ಗಾಡ್‍ಫಾದರ್ ಎಂದು ಕರೆಯಲಾಗುತ್ತಿತ್ತು. 76 ವರ್ಷದ ಡೇವಿಡ್ ಅವರು ಇಂದು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಇಂದು ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಫೈನಲ್ ಪಂದ್ಯವಾಡುತ್ತಿರುವ ಕಾರಣ ಕಪ್ಪುಪಟ್ಟಿ ಧರಿಸಿ ಆಡಲು ನಿರ್ಧರಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ಹೀನಾಯ ಸೋಲಿಗೆ ಇದೇ ಕಾರಣ – ಪಾಕ್ ತಜ್ಞರ ವಿಶ್ಲೇಷಣೆ

    ಡೇವಿಡ್ 1,500ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯ ಮತ್ತು 125 ಅಂತಾರಾಷ್ಟ್ರೀಯ ಪಂದ್ಯವಾಡಿದ್ದರು. ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ ಬಳಿಕ ಚಾರಿಟೇಬಲ್ ಟ್ರಸ್ಟ್‌ಗಳನ್ನು ನಡೆಸಿ ಯುವ ಕ್ರಿಕೆಟಿಗರಿಗೆ ಸಲಹೆ ನೀಡುತ್ತಿದ್ದರು. ಇದೀಗ ವಿಶ್ವಕಪ್ ಆಡುತ್ತಿರುವ ಜೋಸ್ ಬಟ್ಲರ್, ಬೆನ್‍ಸ್ಟೋಕ್ಸ್ ಸಹಿತ ಹಲವು ಆಟಗಾರರು ಇವರು ಮುನ್ನಡೆಸುತ್ತಿದ್ದ ಬೌಂಡರಿ ಕ್ರಿಕೆಟ್ ಕ್ಲಬ್‍ನಿಂದ ಸಹಾಯ ಪಡೆದಿದ್ದರು. ಹಾಗಾಗಿ ಬಟ್ಲರ್ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಹೀನಾಯ ಸೋಲಿನ ಬಳಿಕ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ರೋಹಿತ್‌ ಶರ್ಮಾ

    ಆಡಿಲೇಡ್‌: ಟಿ20 ವಿಶ್ವಕಪ್‌(T20 World Cup) ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌(England) ವಿರುದ್ಧ ಹೀನಾಯ ಸೋತ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ(Rohit Sharma) ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.

    ಪಂದ್ಯ ಮುಗಿದ ಬಳಿಕ ರೋಹಿತ್‌ ಶರ್ಮಾ ಡಗೌಟ್‌ನಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ತಲೆಯನ್ನು ಕೆಳಗೆ ಹಾಕಿ ಬೇಸರ ವ್ಯಕ್ತಪಡಿಸುತ್ತಿದ್ದಾಗ ಕೋಚ್‌ ದ್ರಾವಿಡ್‌ ಸಮಾಧಾನ ಮಾಡಿದ್ದಾರೆ.

    https://twitter.com/SportyVishal/status/1590670773437763584

    ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಭಾರತ ಆರಂಭದಲ್ಲೇ ರಾಹುಲ್‌ ವಿಕೆಟ್‌ ಕಳೆದುಕೊಂಡರೂ ನಂತರ ರೋಹಿತ್‌ ಮತ್ತು ಕೊಹ್ಲಿ ನಿಧಾನವಾಗಿ ಆಡಿ ಇನ್ನಿಂಗ್ಸ್‌ ಕಟ್ಟಿದರು. ಕೊನೆಯಲ್ಲಿ ಹಾರ್ದಿಕ್‌ ಪಾಂಡ್ಯ(Hardik Pandya) ಬಿರುಸಿನ ಆಟವಾಡಿದ್ದರಿಂದ ತಂಡದ ಮೊತ್ತ 160ರ ಗಡಿ ದಾಟಿತ್ತು. ಅಂತಿಮವಾಗಿ ಭಾರತ 6 ವಿಕೆಟ್‌ ನಷ್ಟಕ್ಕೆ 168 ರನ್‌ ಗಳಿಸಿತ್ತು.

    ಸವಾಲಿನ ಮೊತ್ತವೇ ಆಗಿದ್ದರೂ ಭಾರತದ ಬೌಲರ್‌ಗಳಿಂದ ಉತ್ತಮ ಪ್ರದರ್ಶನ ಕಂಡು ಬರಲಿಲ್ಲ. ಜೋಸ್‌ ಬಟ್ಲರ್‌ ಮತ್ತು ಅಲೆಕ್ಸ್‌ ಹೇಲ್ಸ್‌ ಬೌಂಡರಿ, ಸಿಕ್ಸರ್‌ ಸಿಡಿಸಿ ತಂಡವನ್ನು ಫೈನಲಿಗೆ ಕೊಂಡೊಯ್ದರು. ಬಟ್ಲರ್‌ 80 ರನ್‌(49 ಎಸೆತ, 9 ಬೌಂಡರಿ, 3 ಸಿಕ್ಸರ್‌) ಅಲೆಕ್ಸ್‌ ಹೇಲ್ಸ್‌ 86 ರನ್‌(47 ಎಸೆತ, 4 ಬೌಂಡರಿ, 7 ಸಿಕ್ಸರ್‌) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟರು. ಇದನ್ನೂ ಓದಿ: ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

    ಭಾರತದ ಮೊದಲ 10 ಓವರ್‌ಗಳಲ್ಲಿ ಜಾಸ್ತಿ ರನ್‌ ಬಂದಿರಲಿಲ್ಲ. ಮೊದಲ ಪವರ್‌ ಪ್ಲೇ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 38 ರನ್‌ ಗಳಿಸಿತ್ತು. 10 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 62 ರನ್‌ ಗಳಿಸಿತ್ತು. 15 ಓವರ್‌ಗಳಲ್ಲಿ 100 ರನ್‌ ಬಂದಿದ್ದರೆ ಕೊನೆಯ 30 ಎಸೆತಗಳಲ್ಲಿ 68 ರನ್‌ ಬಂದಿತ್ತು.

    ಇತ್ತ ಇಂಗ್ಲೆಂಡ್‌ ಮೊದಲ ಓವರಿನಿಂದಲೇ ದಂಡಿಸಲು ಆರಂಭಿಸಿತ್ತು ಮತ್ತು ಓವರ್‌ ಒಂದಕ್ಕೆ ಸರಾಸರಿ 10 ರನ್‌ಗಳು ಬರುತ್ತಿದ್ದವು. ಮೊದಲ ಪವರ್‌ ಪ್ಲೇನಲ್ಲಿ 63 ರನ್‌ ಬಂದರೆ 10.1 ಓವರ್‌ನಲ್ಲಿ 100 ರನ್‌ ಬಂದಿತ್ತು. ಕೇವಲ 83 ಎಸೆತಗಳಲ್ಲಿ 150 ರನ್‌ ದಾಖಲಾಗಿತ್ತು. ಅಂತಿಮವಾಗಿ 16 ಓವರ್‌ಗಳಲ್ಲಿ 170 ರನ್‌ ಹೊಡೆಯುವ ಮೂಲಕ ಇಂಗ್ಲೆಂಡ್‌ ಫೈನಲ್‌ ಪ್ರವೇಶಿಸಿತು.

    Live Tv
    [brid partner=56869869 player=32851 video=960834 autoplay=true]

  • ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

    ಪಾಂಡ್ಯ ವ್ಯರ್ಥ ಹೋರಾಟ – ಭಾರತಕ್ಕೆ ಹೀನಾಯ ಸೋಲು, ಇಂಗ್ಲೆಂಡ್ ಫೈನಲ್‍ಗೆ

    ಆಡಿಲೇಡ್: ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ (England) ಓಪನರ್‌ಗಳ ಸಿಡಿಲಬ್ಬರದ ಬ್ಯಾಟಿಂಗ್‍ಗೆ ಭಾರತ (India) ಮಂಕಾಗಿ ಸೋಲುಂಡಿದೆ. ಇಂಗ್ಲೆಂಡ್ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ 3ನೇ ಬಾರಿ ಫೈನಲ್ ಪ್ರವೇಶಿಸಿದೆ.

    ಭಾರತ ನೀಡಿದ 169 ರನ್‍ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್‌ ನಷ್ಟವಿಲ್ಲದೇ 16 ಓವರ್‌ಗಲ್ಲಿ 170 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಫೈನಲ್‍ಗೆ ಲಗ್ಗೆ ಇಟ್ಟಿದೆ. ಈ ಜಯದೊಂದಿಗೆ ನ.13 ರಂದು ಫೈನಲ್‍ನಲ್ಲಿ ಪಾಕಿಸ್ತಾನವನ್ನು (Pakistan) ಇಂಗ್ಲೆಂಡ್ ಎದುರಿಸಲಿದೆ. ಇತ್ತ ಈ ಸೋಲಿನೊಂದಿಗೆ ಭಾರತ ತಂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.

    ಇಂಗ್ಲೆಂಡ್ ಆರಂಭಿಕರಾದ ಜೋಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಭಾರತ ಬೌಲರ್‌ಗಳನ್ನು ಮೊದಲ ಓವರ್‌ನಿಂದಲೇ ದಂಡಿಸಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸ್‌ಗಳ ಮೂಲಕ ಮನಮೋಹಕವಾಗಿ ಆಡಿದ ಈ ಜೋಡಿ ಅಜೇಯ 170 ರನ್‌ (96 ಎಸೆತ) ಜೊತೆಯಾಟದ ಮೂಲಕ ಅಬ್ಬರಿಸಿ ಬೊಬ್ಬಿರಿಯಿತು. ಬಟ್ಲರ್ 80 ರನ್ (49 ಎಸೆತ, 9 ಬೌಂಡರಿ, 3 ಸಿಕ್ಸ್‌) ಮತ್ತು ಹೇಲ್ಸ್ 86 ರನ್‌ (47 ಎಸೆತ, 4 ಬೌಂಡರಿ, 7 ಸಿಕ್ಸ್‌) ಸಿಡಿಸಿ ಸಿಡಿಲಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದ ಪರಿಣಾಮ ಇನ್ನೂ 24 ಎಸೆತ ಬಾಕಿ ಇರುವಂತೆ ಇಂಗ್ಲೆಂಡ್‍ ಜಯ ಗಳಿಸಿ ಸಂಭ್ರಮಿಸಿತು.

    ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಭಾರತವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಇತ್ತ ಭಾರತ ಮಹತ್ವದ ಪಂದ್ಯದಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಕೆ.ಎಲ್ ರಾಹುಲ್ 5 ರನ್ (5 ಎಸೆತ, 1 ಬೌಂಡರಿ) ಸಿಡಿಸಿ ಸೈಲೆಂಟ್ ಆಗಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ: ಜಡೇಜಾ ಪತ್ನಿಗೆ ಗುಜರಾತ್‍ನ ಜಾಮ್‌ನಗರ ಉತ್ತರದಿಂದ ಬಿಜೆಪಿ ಟಿಕೆಟ್

    ಆ ಬಳಿಕ ರೋಹಿತ್ ಜೊತೆ ಸೇರಿಕೊಂಡ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರತಕ್ಕೆ ಆಸರೆಯಾದರು. ರೋಹಿತ್ ಶರ್ಮಾ ನಿಧಾನವಾಗಿ ಬ್ಯಾಟ್‍ಬೀಸುತ್ತಿದ್ದರೆ, ಕೊಹ್ಲಿ ಇತ್ತ ಸೂಪರ್ ಡೂಪರ್ ಹೊಡೆತಗಳ ಮೂಲಕ ರನ್ ಏರಿಸುವ ಹೊಣೆ ಹೊತ್ತರು. ಈ ಜೋಡಿ ಎರಡನೇ ವಿಕೆಟ್‍ಗೆ 47 ರನ್ (43 ಎಸೆತ) ಒಟ್ಟುಗೂಡಿಸಿ ಬೇರ್ಪಟ್ಟಿತು. ರೋಹಿತ್ ಆಟ 27 ರನ್ (28 ಎಸೆತ, 4 ಬೌಂಡರಿಗೆ) ಅಂತ್ಯವಾಯಿತು.

    ಬಳಿಕ ಬಂದ ಸೂರ್ಯಕುಮಾರ್ ಯಾದವ್ ಒಂದು ಫೋರ್, ಒಂದು ಸಿಕ್ಸ್ ಸಿಡಿಸಿ ಅಬ್ಬರಿಸುವ ಸೂಚನೆ ನೀಡಿದರೂ ಅವರನ್ನು 14 ರನ್ (10 ಎಸೆತ, 1 ಬೌಂಡರಿ, 1 ಸಿಕ್ಸ್) ಕಟ್ಟಿ ಹಾಕುವಲ್ಲಿ ರಶೀದ್ ಯಶಸ್ವಿಯಾದರು. ಇದನ್ನೂ ಓದಿ: ಶೋಯೆಬ್ ಮಲಿಕ್, ಸಾನಿಯಾ ಮಿರ್ಜಾ ವಿಚ್ಛೇದನ? – ಒಂದು ಪೋಸ್ಟ್‌ನಿಂದ ಬಿಸಿ ಬಿಸಿ ಚರ್ಚೆ

    ಕೊಹ್ಲಿ, ಪಾಂಡ್ಯ ಪಾಟ್ನರ್‌ಶಿಪ್:
    ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ, ಇನ್ನೊಂದೆಡೆ ರನ್ ವೇಗ ಹೆಚ್ಚಿಸಲಾಗದೆ ಭಾರತ ಅಲ್ಪ ಮೊತ್ತದತ್ತ ಮುನ್ನುಗ್ಗುತ್ತಿತ್ತು. ಈ ವೇಳೆ ಅಸಲಿ ಅಟ ಆರಂಭಿಸಿದ ಈ ಜೋಡಿ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು.

    ಬೌಂಡರಿ, ಸಿಕ್ಸರ್‌ಗಳೊಂದಿಗೆ ಕೊಹ್ಲಿ, ಪಾಂಡ್ಯ ಅಬ್ಬರಿಸಿದ ಪರಿಣಾಮ ಭಾರತ ಪೈಪೋಟಿಯ ಮೊತ್ತ ಪೇರಿಸುವ ಭರವಸೆ ಮೂಡಿತು. ಇತ್ತ ಕೊಹ್ಲಿ 50 ರನ್ (40 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಕ್ಯಾಚ್ ನೀಡಿ ಔಟ್ ಆದರು. ಈ ಮೊದಲು ಪಾಂಡ್ಯ ಜೊತೆ 4 ವಿಕೆಟ್‍ಗೆ 61 ರನ್ (40 ಎಸೆತ) ಜೊತೆಯಾಟವಾಡಿ ತಂಡಕ್ಕೆ ಆಧಾರವಾದರು. ಆದರೆ ಇತ್ತ ಪಾಂಡ್ಯ ಮಾತ್ರ ತಮ್ಮ ಅಬ್ಬರದಾಟ ಮುಂದುವರಿಸಿದರು. ಸಿಕ್ಸರ್‌ಗಳ ಮಳೆ ಸುರಿಸಿದ ಪಾಂಡ್ಯ ಬ್ಯಾಟ್ ಬೌಲರ್‌ಗಳಿಗೆ ಅಷ್ಟದಿಕ್ಕುಗಳನ್ನು ಪರಿಚಯಿಸಿದಂತಿತ್ತು.

    ಕೊನೆಯ 5 ಓವರ್‌ಗಳಲ್ಲಿ 68 ರನ್:
    ಪಾಂಡ್ಯ ಹೋರಾಟದ ಫಲವಾಗಿ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿದ್ದ ಭಾರತ ಮುಂದಿನ ಹತ್ತು ಓವರ್‌ಗಳಲ್ಲಿ 106 ಚಚ್ಚಿ ತಂಡದ ಮೊತ್ತ 160ರ ಗಡಿ ದಾಟುವಂತೆ ನೊಡಿಕೊಂಡರು. ಅಲ್ಲದೇ ಕೊನೆಯ 5 ಓವರ್‌ಗಳಲ್ಲಿ 68 ರನ್ ಹರಿದುಬಂತು. ಪಾಂಡ್ಯ 63 ರನ್ (33 ಎಸೆತ, 4 ಬೌಂಡರಿ, 5 ಸಿಕ್ಸ್) ಚಚ್ಚಿ ಕೊನೆಯ ಎಸೆತದಲ್ಲಿ ಹಿಟ್‍ವಿಕೆಟ್ ಆಗಿ ಔಟ್ ಆದರು. ಇದರೊಂದಿಗೆ ಭಾರತ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಿತು. ಇಂಗ್ಲೆಂಡ್ ಪರ ಜೋರ್ಡನ್ 3 ವಿಕೆಟ್ ಪಡೆದು ಮಿಂಚಿದರು.

    ರನ್ ಏರಿದ್ದು ಹೇಗೆ:
    50 ರನ್ 47 ಎಸೆತ
    100 ರನ್ 90 ಎಸೆತ
    150 ರನ್ 113 ಎಸೆತ
    168 ರನ್ 120 ಎಸೆತ

    Live Tv
    [brid partner=56869869 player=32851 video=960834 autoplay=true]

  • ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಭಾರತ-ಇಂಗ್ಲೆಂಡ್ ಸೆಮಿ ಸಮರ – ಗೆದ್ದವರು ಫೈನಲ್‍ಗೆ ಸೋತವರು ಮನೆಗೆ

    ಆಡಿಲೇಡ್: ಟಿ20 ವಿಶ್ವಕಪ್‍ನ (T20 World Cup)  ಎರಡನೇ ಸೆಮಿಫೈನಲ್ (Semi-Final) ಕಾದಾಟದಲ್ಲಿ ಇಂದು ಭಾರತ (India) ಹಾಗೂ ಇಂಗ್ಲೆಂಡ್ (Englan) ಕಾದಾಡುತ್ತಿದೆ. ವಿಶ್ವಕ್ರಿಕೆಟ್ ಪ್ರೇಮಿಗಳ ಚಿತ್ತ ಆಡಿಲೇಡ್‍ನತ್ತ (Adelaide) ನೆಟ್ಟಿದೆ.

    ಇಂದು ಗೆದ್ದ ತಂಡ ಫೈನಲ್‍ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ತಂಡಗಳು ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನು ಹೊಂದಿದೆ. ಭಾರತಕ್ಕೆ ಬ್ಯಾಟಿಂಗ್ ಬಲವಾದರೆ, ಅತ್ತ ಇಂಗ್ಲೆಂಡ್‍ಗೆ ಆಲ್‍ರೌಂಡರ್‌ಗಳ ಬಲವಿದೆ. ಹಾಗಾಗಿ ಈ ಪಂದ್ಯ ಬಹಳ ರೋಚಕತೆಯನ್ನು ಮೂಡಿಸಿದೆ. ಇದನ್ನೂ ಓದಿ: ಕಿವೀಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ – 3ನೇ ಬಾರಿ ಫೈನಲ್‍ಗೇರಿದ ಪಾಕ್

    ಭಾರತಕ್ಕೆ ರೋಹಿತ್, ರಾಹುಲ್, ಕೊಹ್ಲಿ, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಶಕ್ತಿಯಾದರೆ, ಅತ್ತ ಅಲೆಕ್ಸ್ ಹೇಲ್ಸ್, ಬಟ್ಲರ್, ಅಲಿ, ಬೆನ್‍ಸ್ಟೋಕ್ಸ್ ಬ್ಯಾಟಿಂಗ್ ಬಿರುಗಾಳಿಗಳು ಹಾಗಾಗಿ ಆಡಿಲೇಡ್‍ನಲ್ಲಿ ರನ್ ಮಳೆ ಸುರಿಯುವ ಸಾಧ್ಯತೆ ಇದೆ. ಇಂದು ಗೆದ್ದ ತಂಡ ನ.13 ರಂದು ಈಗಾಗಲೇ ಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಸೋತ ತಂಡ ಮನೆ ದಾರಿ ಹಿಡಿಯಲಿದೆ. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?

    ಭಾರತ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಅತ್ಯಂತ ಮಹತ್ವ ಪಡೆದುಕೊಂಡಿದ್ದು, 2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಇದೀಗ ಇಂಗ್ಲೆಂಡ್ ಮಣಿಸಿ, ಫೈನಲ್ ಪ್ರವೇಶಿಸಿ ಟ್ರೋಫಿ ಗೆಲ್ಲುವ ಇರಾದೆಯಲ್ಲಿ ಭಾರತವಿದ್ದರೆ, ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮಣಿಸಬೇಕಾದ ಸವಾಲು ಟೀಂ ಇಂಡಿಯಾ ಮುಂದಿದೆ. ಇತ್ತ ಅಭಿಮಾನಿಗಳೂ ಕೂಡ ಇದೆ ಆಸೆಯಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಗೆದ್ದು ಫೈನಲ್‍ನಲ್ಲಿ ಪಾಕಿಸ್ತಾನವನ್ನು ಎದುರಿಸಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಮಾವಿನ ಗೊರಟೆ ಗಂಟಲಿಗೆ ಚುಚ್ಚಿ ಮಹಿಳೆ ಆಸ್ಪತ್ರೆಗೆ ದಾಖಲು

    ಲಂಡನ್: ಮಾವಿನ ಉಪ್ಪಿನಕಾಯಿಯನ್ನು (Mango Pickle) ಸೇವಿಸಿದ ನಂತರ ಗೊರಟೆ ಗಂಟಲಿಗೆ ಸಿಕ್ಕಿಕೊಂಡು 57 ವರ್ಷದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಹಣ್ಣು ತಿಂದ ಬಳಿಕ ನುಂಗಲು ತೊಂದರೆಯಾಗುತ್ತಿದೆ ಎಂದ ಮಹಿಳೆಯನ್ನು ಸ್ಥಳೀಯ ಎಪ್ಸಮ್ ಆಸ್ಪತ್ರೆಯ (Epsom Hospital) ತುರ್ತು ವಿಭಾಗಕ್ಕೆ ದಾಖಲಿಸಲಾಗಿದೆ. ಮಾವಿನಹಣ್ಣಿನಂತಹ ಮೃದುವಾದ ಹಣ್ಣು ಇಂತಹ ಹಾನಿಯನ್ನುಂಟುಮಾಡುತ್ತದೆ ಅಂತ ನಂಬಲು ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಬೆರಗಾಗಿದ್ದಾರೆ. ಇದನ್ನೂ ಓದಿ: ರಾಜ್ಯಪಾಲರನ್ನು ಕೂಡಲೇ ವಜಾಗೊಳಿಸಿ – ರಾಷ್ಟ್ರಪತಿಗಳಿಗೆ ಡಿಎಂಕೆ ಪತ್ರ

    ವೈದ್ಯಕೀಯ ಪರೀಕ್ಷೆ ವೇಳೆ ಮಹಿಳೆ ಜೊಲ್ಲು ಸುರಿಸುತ್ತಿದ್ದಳು ಮತ್ತು ನುಂಗಲು ಸಮರ್ಥಳಾಗಿದ್ದಳು. ವೈದ್ಯರು ಕೂಡ ಪರೀಕ್ಷೆಯಲ್ಲಿ ದೇಹದ ಒಳಗಡೆ ಯಾವುದೇ ಪದಾರ್ಥ ಕಂಡು ಬಂದಿಲ್ಲ. ಜಠರದ ಉರಿತದಿಂದ ಸಮಸ್ಯೆ ಉಂಟಾಗಿರಬಹುದು ಎಂದು ಮಹಿಳೆಗೆ ತಿಳಿಸಲಾಗಿದೆ. ಒಂದು ವೇಳೆ ಆರೋಗ್ಯ ಹೆಚ್ಚು ಹದಗೆಟ್ಟರೆ ಮತ್ತೆ ಹಿಂತಿರುಗುವಂತೆ ತಿಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ- ಅನ್ಯ ಕೋಮಿನ ಯುವಕನ ಪ್ರೀತಿ ಮಾಡಿದ್ದಕ್ಕೆ ತಂದೆಯಿಂದ್ಲೇ ಮಗಳ ಕೊಲೆ

    ನಾಲ್ಕು ದಿನಗಳ ನಂತರ ಸೆಪ್ಸಿಸ್‍ನ ಲಕ್ಷಣಗಳಿದ್ದರಿಂದ ಮತ್ತೆ ಆಸ್ಪತ್ರೆಗೆ ಮಹಿಳೆ ಹಿಂದಿರುಗಿ, ನುಂಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಸಿಟಿ ಸ್ಕ್ಯಾನ್ ನಡೆಸಿದಾಗ ಅನ್ನನಾಳದಲ್ಲಿ ಹುಣ್ಣಾಗಿ ಎದೆ ಉರಿ ಉಂಟಾಗಿರುವುದು ತಿಳಿದುಬಂದಿದೆ. ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಗೊರಟೆಯನ್ನು ತೆಗೆಸಿಕೊಳ್ಳಲು ಮಹಿಳೆ ನಂತರ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರು ಮತ್ತು ಒಂದು ವಾರ ಆಸ್ಪತ್ರೆಯಲ್ಲಿದ್ದರು ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]