Tag: england

  • ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

    ಫಾಲೋ ಆನ್‌ಗೆ ತುತ್ತಾದ್ರೂ 1 ರನ್ ರೋಚಕ ಜಯ – 22 ವರ್ಷದ ಬಳಿಕ ನ್ಯೂಜಿಲೆಂಡ್ ಸಾಧನೆ

    ವೆಲ್ಲಿಂಗ್ಟನ್: ನೀಲ್ ವಾಗ್ನರ್ (Neil Wagner) ಬೆಂಕಿ ಬೌಲಿಂಗ್ ಹಾಗೂ ಕೇನ್ ವಿಲಿಯಮ್ಸನ್ (Kane Williamson) ಶತಕದ ಬ್ಯಾಟಿಂಗ್ ನೆರವಿನಿಂದ ಕಿವೀಸ್ ಪಡೆ ಇಂಗ್ಲೆಂಡ್ (England) ವಿರುದ್ಧ 1 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ಅಂತರದಲ್ಲಿ ಸಮಬಲಗೊಳಿಸಿದೆ.

    2ನೇ ಟೆಸ್ಟ್ ಪಂದ್ಯದ 5ನೇ ದಿನದಂದು ಕಿವೀಸ್ ಪಡೆ 1 ರನ್‌ಗಳಿಂದ ಇಂಗ್ಲೆಂಡ್ ತಂಡವನ್ನು ಮಣಿಸಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 1 ರನ್‌ನಿಂದ ಟೆಸ್ಟ್ ಪಂದ್ಯವನ್ನು ಗೆದ್ದ ವಿಶ್ವದ 2ನೇ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1993ರ ಜನವರಿ 26ರಂದು ವೆಸ್ಟ್ ಇಂಡೀಸ್ ಅಡಿಲೇಡ್‌ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) ತಂಡವನ್ನು 1 ರನ್ ಅಂತರದಿಂದ ಮಣಿಸಿ ಈ ಸಾಧನೆ ಮಾಡಿತ್ತು. ಇದನ್ನೂ ಓದಿ: ಮ್ಯಾಜಿಕ್ ಮೆಸ್ಸಿಗೆ `ಅತ್ಯುತ್ತಮ ಪುರುಷರ ಆಟಗಾರ-2022′ ಪ್ರಶಸ್ತಿ

    ಫಾಲೋ ಆನ್‌ಗೆ ಸಿಲುಕಿದ್ದ ನ್ಯೂಜಿಲೆಂಡ್ (New Zealand) ತಂಡ ಕೆನ್ ವಿಲಿಯಮ್ಸನ್ ಅವರ ಶತಕದ ನೆರವಿನಿಂದ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್ ಕಲೆ ಹಾಕಿತ್ತು. ಆರಂಭಿಕರಾದ ಟಾಮ್ ಲಾಂಥಮ್ ಹಾಗೂ ಡಿವೋನ್ ಕಾನ್ವೆ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 149 ರನ್ ಕಲೆಹಾಕಿದ್ದರು. ಕಾನ್ವೆ 61 ರನ್ ಗಳಿಸಿ ಔಟಾದರೆ, ಲಾಂಥಮ್ 83 ರನ್ ಚಚ್ಚಿ ಪೆವಿಲಿಯನ್ ಸೇರಿದರು. 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಳಿದ ಕೇನ್ ವಿಲೀಯಮ್ಸನ್ 282 ಎಸೆತಗಳಲ್ಲಿ 12 ಬೌಂಡರಿಗಳೊಂದಿಗೆ 132 ರನ್ ಬಾರಿಸಿದರು. ಇದರೊಂದಿಗೆ ಡ್ಯಾರಿಯಲ್ ಮಿಚೆಲ್ 54 (54 ಎಸೆತ, 5 ಬೌಂಡರಿ, 1 ಸಿಕ್ಸರ್), ಟಾಮ್ ಬ್ಲಂಡೆಲ್ 90 ರನ್ (166 ಎಸೆತ, 9 ಬೌಂಡರಿ) ಗಳಿಸಿ ತಂಡಕ್ಕೆ ನೆರವಾದರು.

    ಅಂತಿಮವಾಗಿ 2ನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 162.3 ಓವರ್‌ಗಳಲ್ಲಿ 483 ರನ್ ಗಳಿಸಿತ್ತು. ಈ ಮೂಲಕ ಇಂಗ್ಲೆಂಡ್ ತಂಡದ ಗೆಲುವಿಗೆ 258 ರನ್‌ಗಳ ಗುರಿ ನೀಡಿತ್ತು.

    ತನ್ನ ಸರದಿ ಆರಂಭಿಸಿದ್ದ ಇಂಗ್ಲೆಂಡ್ 4ನೇ ದಿನದಾಟದ ಅಂತ್ಯಕ್ಕೆ 48 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ 153 ರನ್ ಗಳಿಸಿದ್ದ ಮಾಜಿ ನಾಯಕ ಜೋ ರೂಟ್, 2ನೇ ಇನ್ನಿಂಗ್ಸ್‌ನಲ್ಲಿಯೂ 113 ಎಸೆತಗಳಲ್ಲಿ 95 ರನ್ ಬಾರಿಸಿ ಗೆಲುವಿನ ಭರವಸೆ ಮೂಡಿಸಿದ್ದರು. ಆದರೆ ನೀಲ್ ವ್ಯಾಗ್ನರ್ ಅವರು ಜೋ ರೂಟ್ (Joe Root) ಮತ್ತು ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (32 ರನ್) ನಿರ್ಣಾಯಕ ವಿಕೆಟ್ ಪಡೆಯುವ ಮೂಲಕ ಗೆಲುವಿನ ಕನಸನ್ನು ಕಸಿದುಕೊಂಡರು. ಈ ನಡುವೆ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಹ್ಯಾರಿ ಬ್ರೂಕ್ ಒಂದು ಎಸೆತವನ್ನೂ ಎದುರಿಸದೇ ರನೌಟ್‌ಗೆ ತುತ್ತಾಗಿದ್ದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪೆಟ್ಟು ನೀಡಿತ್ತು. ಅಂತಿಮವಾಗಿ ಇಂಗ್ಲೆಂಡ್ 74.2 ಓವರ್‌ಗಳಲ್ಲಿ 256 ರನ್ ಗಳಿಸುವ ಮೂಲಕ ವಿರೋಚಿತ ಸೋಲು ಕಂಡಿತು.

    ನೀಲ್ ವ್ಯಾಗ್ನರ್ 2ನೇ ಇನ್ನಿಂಗ್ಸ್‌ನಲ್ಲಿ 62 ರನ್ ನೀಡಿ ಪ್ರಮುಖ 4 ವಿಕೆಟ್‌ಗಳನ್ನು ಪಡೆದರು. ನಾಯಕ ಟಿಮ್ ಸೌಥಿ 45 ರನ್ ನೀಡಿ 3 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 75 ರನ್ ನೀಡಿ 2 ವಿಕೆಟ್ ಕಿತ್ತರು. ಇದನ್ನೂ ಓದಿ: RCB, MI, Delhi ಅಭಿಮಾನಿಗಳಿಗೆ ನಿರಾಸೆ – 2023ರ ಐಪಿಎಲ್‌ನಿಂದ ಈ ಸ್ಟಾರ್ ಆಟಗಾರರು ಔಟ್

    ಸಂಕ್ಷಿಪ್ತ ಸ್ಕೋರ್
    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 435/8 ಡಿಕ್ಲೇರ್
    ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ 209/10
    ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ 483/10
    ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 256/10

    22 ವರ್ಷದ ಬಳಿಕ ಸಾಧನೆ:
    ಆಸ್ಟ್ರೇಲಿಯಾ ವಿರುದ್ಧ 2001ರಲ್ಲಿ ಫಾಲೋ ಆನ್‌ಗೆ ತುತ್ತಾಗಿದ್ದರೂ ಭಾರತ ಲಕ್ಷ್ಮಣ್‌ ಮತ್ತು ದ್ರಾವಿಡ್ ಸಾಹಸದಿಂದ ಜಯಗಳಿಸಿತ್ತು. ಆದಾದ ಬಳಿಕ ಇಲ್ಲಿಯವರೆಗೆ ಈ ಸಾಧನೆಯನ್ನು ಯಾವ ತಂಡ ಮಾಡಿರಲಿಲ್ಲ. ಈಗ 22 ವರ್ಷದ ಬಳಿಕ ನ್ಯೂಜಿಲೆಂಡ್ ಫಾಲೋ ಆನ್‌ಗೆ ಸಿಲುಕಿದ್ದರೂ ಪಂದ್ಯವನ್ನು ಗೆದ್ದುಕೊಂಡ ಸಾಧನೆ ಮಾಡಿದೆ. ಅಷ್ಟೇ ಅಲ್ಲದೇ ಫಾಲೋ ಆನ್ ಹೇರಿದ ಬಳಿಕ ಜಯಗಳಿಸಿದ ನಾಲ್ಕನೇ ಟೆಸ್ಟ್ ಪಂದ್ಯ ಇದಾಗಿದೆ.

  • ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

    ಬಸ್ ನಿಲ್ದಾಣಕ್ಕೆ ಕಾರು ಡಿಕ್ಕಿ – ಭಾರತೀಯ ಮೂಲದ ವಿದ್ಯಾರ್ಥಿನಿ ಸಾವು

    ಲಂಡನ್: ಕಾರೊಂದು (Car) ಬಸ್ ನಿಲ್ದಾಣಕ್ಕೆ (Bus Stand) ಡಿಕ್ಕಿ ಹೊಡೆದ ಪರಿಣಾಮ ಅಲ್ಲಿದ್ದ ಭಾರತೀಯ (Indian) ಮೂಲದ 28 ವರ್ಷದ ವಿದ್ಯಾರ್ಥಿನಿಯೊಬ್ಬಳು (Student) ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಇಂಗ್ಲೆಂಡ್‌ನಲ್ಲಿ (England) ನಡೆದಿದೆ.

    ಅತಿರಾ ಅನಿಲ್ ಕುಮಾರ್ ಲಾಲಿ ಕುಮಾರಿ ಮೃತಪಟ್ಟ ವಿದ್ಯಾರ್ಥಿನಿ. ಅತಿರಾ ಕೇರಳದ (Kerala) ತಿರುವನಂತಪುರದವರಾಗಿದ್ದು, ಕಳೆದ ತಿಂಗಳು ಲೀಡ್ಸ್ ಬೆಕೆಟ್ ವಿಶ್ವವಿದ್ಯಾಲಯದಲ್ಲಿ ತಮ್ಮ ಅಧ್ಯಯನವನ್ನು ಪ್ರಾರಂಭಿಸಿದ್ದರು ಎಂದು ತಿಳಿದು ಬಂದಿದೆ.

    ಕಪ್ಪು ಬಣ್ಣದ ವೋಕ್ಸ್‌ವ್ಯಾಗನ್ ಗಾಲ್ಫ್ ಕಾರು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಹಾನಿಯುಂಟುಮಾಡಿತ್ತು. ಈ ಘಟನೆಯಿಂದ ಗಂಭೀರ ಗಾಯಗೊಂಡ ಇಬ್ಬರು ಪಾದಾಚಾರಿಗಳಲ್ಲಿ ಅತಿರಾ ಕೂಡ ಒಬ್ಬರು ಎಂದು ಪಶ್ಚಿಮ ಯಾರ್ಕ್‌ಷೈರ್‌ನ ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾನ್‌ಕಾರ್ಡ್ ಅಪ್ಡೇಟ್ ಮಾಡ್ಬೇಕು ಅಂತಾ ಕರೆ – ಲಿಂಕ್ ಒತ್ತಿದ ಪೊಲೀಸಪ್ಪನ 73 ಸಾವಿರ ಗುಳುಂ!

    ಈ ಅಪಘಾತದಲ್ಲಿ ಗಾಯಗೊಂಡ 40ರ ಹರೆಯದ ಇನ್ನೊಬ್ಬ ಪಾದಾಚಾರಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ವೋಕ್ಸ್‌ವ್ಯಾಗನ್ ಗಾಲ್ಫ್ ಕಾರನ್ನು ಚಲಾಯಿಸುತ್ತಿದ್ದ ಮಹಿಳೆಯನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

    ಸಂತ್ರಸ್ತೆ ಕುಟುಂಬಕ್ಕೆ ನೆರವನ್ನು ನೀಡುವ ಸಲುವಾಗಿ ಈ ಪ್ರಕರಣವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹೆಚ್ಚುತ್ತಿರುವ ತಾಪಮಾನ, ಮಾರ್ಚ್‌ನಿಂದ ಮೇವರೆಗೂ ಹೈ ಅಲರ್ಟ್ 

  • ಧೋನಿ ಸಿಕ್ಸರ್ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್

    ಧೋನಿ ಸಿಕ್ಸರ್ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್

    ವೆಲ್ಲಿಂಗ್ಟನ್: ಇಂಗ್ಲೆಂಡ್ (England) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್ ಟಿಮ್ ಸೌಥಿ (Tim Southee) ಭರ್ಜರಿ ಸಿಕ್ಸ್ ಬಾರಿಸುವ ಮೂಲಕ ಟೀಂ ಇಂಡಿಯಾ (Team India) ಮಾಜಿ ನಾಯಕ ಎಂ.ಎಸ್ ಧೋನಿ (MS Dhoni) ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ, ಮೂರು ಭರ್ಜರಿ ಸಿಕ್ಸರ್ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಅವರ ಸಿಕ್ಸರ್ ದಾಖಲೆಗಳನ್ನು ಮುರಿದಿದ್ದರು. ಇದೀಗ ನ್ಯೂಜಿಲೆಂಡ್ (New Zealand) ವೇಗಿ ಧೋನಿಯ ಸಿಕ್ಸ್ ದಾಖಲೆಯನ್ನ ಸರಿಗಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದನ್ನೂ ಓದಿ: WPL 2023: `ಕಮಲ’ ಮುಂಬೈ ಇಂಡಿಯನ್ಸ್ ಜೆರ್ಸಿ ಅನಾವರಣ

    ಇಂಗ್ಲೆಂಡ್ ತಂಡ 2ನೇ ದಿನದಾಟದಲ್ಲಿ 87.1 ಓವರ್‌ಗಳಿಗೆ 435 ರನ್ ಗಳಿಸಿ ಡಿಕ್ಲೆರ್ ಘೋಷಿಸಿತು. ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 103 ರನ್‌ಗಳಿಗೆ ಪ್ರಮುಖ 3 ವಿಕೆಟ್‌ಗಳನ್ನ ಕಳೆದುಕೊಂಡಿತು. ಈ ವೇಳೆ ಕ್ರೀಸ್‌ಗೆ ಬಂದ ಟಿಮ್ ಸೌಥಿ 2ನೇ ದಿನದಾಟದ ಅಂತ್ಯಕ್ಕೆ 18 ಎಸೆತಗಳಲ್ಲಿ 2 ಭರ್ಜರಿ ಸಿಕ್ಸ್ಗಳೊಂದಿಗೆ 23 ರನ್ ಬಾರಿಸಿ ಮೂರನೇ ದಿನಕ್ಕೆ ಸ್ಟ್ರೈಕ್‌  ಕಾಯ್ದುಕೊಂಡಿದ್ದಾರೆ. ಇದನ್ನೂ ಓದಿ: ನಾನೊಬ್ಬ ವಿಫಲ ನಾಯಕ – ಕಿಂಗ್ ಕೊಹ್ಲಿ ಭಾವುಕ

    ಹೌದು, ಈ ಎರಡು ಸಿಕ್ಸರ್‌ಗಳೊಂದಿಗೆ ಸೌಥಿ ಟೆಸ್ಟ್ ಕ್ರಿಕೆಟ್‌ನಲ್ಲಿ 78 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮ್ಯಾನ್‌ ಗಳ ಪಟ್ಟಿಯಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ದಾಖಲೆಯನ್ನ ಸರಿಗಟ್ಟಿದ್ದಾರೆ. ಆದರೆ ಧೋನಿ 144 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 78 ಸಿಕ್ಸ್‌ಗಳನ್ನ ಸಿಡಿಸಿದ್ದರೆ, ಟಿಮ್ ಸೌಥಿ 131 ಟೆಸ್ಟ್ ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿರುವುದು ವಿಶೇಷ.

    ಅತ್ಯಧಿಕ ಸಿಕ್ಸರ್ ಸಿಡಿಸಿದ ವೀರರು: ಬೆನ್ ಸ್ಟೋಕ್ಸ್ 109, ಬ್ರೆಂಡನ್ ಮೆಕಲಮ್ 107, ಆಡಮ್ ಗಿಲ್‌ಕ್ರಿಸ್ಟ್ 100, ಕ್ರಿಸ್ ಗೇಲ್ 98, ಜಾಕ್ ಕಾಲಿಸ್ 97, ವೀರೇಂದ್ರ ಸೆಹ್ವಾಗ್ 91, ಬ್ರಿಯಾನ್ ಲಾರಾ 88, ಕ್ರಿಸ್ ಕೈರ್ನ್ಸ್ 87, ವಿವಿಯನ್ ರಿಚರ್ಡ್ಸ್ 84, ಆಂಡ್ರ‍್ಯೂ ಫ್ಲಿಂಟಾಫ್ 82, ಮ್ಯಾಥ್ಯೂ ಹೇಡನ್ 82, ಮಿಸ್ಬಾ-ಉಲ್-ಹಕ್ 81, ಕೆವಿನ್ ಪೀಟರ್ಸನ್ 81, ಟಿಮ್ ಸೌಥಿ 78, ಎಂಎಸ್ ಧೋನಿ 78 ಹಾಗೂ ಏಂಜೆಲೊ ಮ್ಯಾಥ್ಯೂಸ್ 75 ಸಿಕ್ಸ್‌ಗಳನ್ನ ಸಿಡಿಸಿದ್ದಾರೆ. ಭಾನುವಾರ ಸ್ಟ್ರೈಕ್‌ ಕಾಯ್ದುಕೊಂಡಿರುವ ಸೌಥಿ ಇನ್ನೂ ಹಲವು ದಿಗ್ಗಜರ ದಾಖಲೆಗಳನ್ನ ಮುರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

  • ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    ಭಾರತದ ಮಹಿಳೆಯರಿಗೆ ಚೊಚ್ಚಲ ಅಂಡರ್‌ 19 ವಿಶ್ವಕಪ್‌

    ಪಾಚೆಫ್‌ಸ್ಟ್ರೂಮ್‌: ಅಜೇಯ ಇಂಗ್ಲೆಂಡ್‌ (England) ತಂಡದ ವಿರುದ್ಧ 7 ವಿಕೆಟ್‌ಗಳ ಸಾಧಿಸಿದ ಭಾರತದ ಮಹಿಳೆಯರು (India Womens) ಚೊಚ್ಚಲ ಅಂಡರ್-19‌ ಟಿ 20 ವಿಶ್ವಕಪ್‌ (U19 T20) ಜಯಿಸಿ ಇತಿಹಾಸ ಸೃಷ್ಟಿಸಿದ್ದಾರೆ.

    ಗೆಲ್ಲಲು 69 ರನ್‌ಗಳ ಗುರಿಯನ್ನು ಪಡೆದ ಭಾರತ 14 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 69 ರನ್‌ ಹೊಡೆಯುವ ಮೂಲಕ ವಿಶ್ವಕಪ್‌ ಗೆದ್ದುಕೊಂಡಿತು.

    ಭಾರತದ ಪರ ಶಫಾಲಿ ವರ್ಮಾ 15 ರನ್‌, ಸೌಮ್ಯ ತಿವಾರಿ ಔಟಗದೇ 24 ರನ್, ಗೊಂಗಡಿ ತಿಷಾ 24 ರನ್‌ ಹೊಡೆದರು.

    ಅತ್ಯುತ್ತಮ ಬೌಲಿಂಗ್‌ ಮಾಡಿದ ಭಾರತ 17.1 ಓವರ್‌ಗಳಲ್ಲಿ 68 ರನ್‌ಗಳಿಗೆ ಇಂಗ್ಲೆಂಡ್‌  ತಂಡವನ್ನು ಆಲೌಟ್‌ ಮಾಡಿತು. ಭಾರತದ ಪರ ಸಾಧು, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ ತಲಾ ಎರಡು ವಿಕೆಟ್‌ ಪಡೆದರು.

    ಗುಂಪು ಹಂತದ ಮೂರು ಪಂದ್ಯಗಳಲ್ಲಿ ಭಾರತ ಗೆದ್ದಿದ್ದರೆ ಕೇವಲ ಆಸ್ಟ್ರೇಲಿಯಾ ವಿರುದ್ಧ ಮಾತ್ರ ಸೋತಿತ್ತು. ಇಂಗ್ಲೆಂಡ್‌ ಎಲ್ಲಾ ಪಂದ್ಯಗಳನ್ನು ಗೆದ್ದು ಫೈನಲ್‌ ಪ್ರವೇಶಿಸಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಾಕಿ ವಿಶ್ವಕಪ್‌ – ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ಹಾಕಿ ವಿಶ್ವಕಪ್‌ – ಭಾರತ, ಇಂಗ್ಲೆಂಡ್‌ ಪಂದ್ಯ ಡ್ರಾನಲ್ಲಿ ಅಂತ್ಯ

    ರೂರ್ಕೆಲಾ: ವಿಶ್ವಕಪ್‌ ಹಾಕಿಯ (Hockey World Cup) ಭಾರತ (India)  ಮತ್ತು ಇಂಗ್ಲೆಂಡ್‌ (England) ನಡುವಿನ ಎರಡನೇ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗದ ಕಾರಣ ಡ್ರಾನಲ್ಲಿ (Draw) ಅಂತ್ಯಗೊಂಡಿದೆ.

    ಎರಡು ತಂಡಗಳಿಗೆ ಹಲವು ಅವಕಾಶಗಳು ಸಿಕ್ಕಿದ್ದವು. ಆದರೆ ಪ್ರಯತ್ನಗಳು ವಿಫಲವಾದ್ದರಿಂದ ಇತ್ತಂಡಗಳ ಪರ ಗೋಲು ದಾಖಲಾಗಲಿಲ್ಲ. ಇದನ್ನೂ ಓದಿ: ಭಾರತಕ್ಕೆ 317 ರನ್‌ಗಳ ಭರ್ಜರಿ ಗೆಲುವು – ವಿಶ್ವದಾಖಲೆಯೊಂದಿಗೆ ಸರಣಿ ಕ್ಲೀನ್‌ ಸ್ವೀಪ್‌

    ಇಂದಿನ ಪಂದ್ಯದಲ್ಲಿ ಯಾವುದೇ ಗೋಲು ದಾಖಲಾಗದೇ ಇದ್ದರೂ ಭಾರತದ ಜೊತೆ 4 ಅಂಕ ಗಳಿಸಿರುವ ಇಂಗ್ಲೆಂಡ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. ಇದನ್ನೂ ಓದಿ: ವಿಶ್ವಕಪ್‌ ಹಾಕಿಯಲ್ಲಿ ಭಾರತ ಶುಭಾರಂಭ – ಸ್ಪೇನ್‌ ವಿರುದ್ಧ ಗೆಲುವು

    ಇಂಗ್ಲೆಂಡ್‌ ಪರವಾಗಿ 5 ಗೋಲು ದಾಖಲಾಗಿದ್ದರೆ ಭಾರತದ ಪರವಾಗಿ 2 ಗೋಲು ದಾಖಲಾಗಿದೆ. ಸ್ಪೇನ್‌ 2 ಪಂದ್ಯವಾಡಿ 1 ಜಯಗಳಿಸಿದ್ದರಿಂದ 3 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ವೇಲ್ಸ್‌ 2 ಪಂದ್ಯಗಳನ್ನು ಸೋತಿದ್ದರಿಂದ ಟೂರ್ನಿಯಿಂದಲೇ ಹೊರಬಿದ್ದಿದೆ. ಜ.19 ರಂದು ಭಾರತ  ವೇಲ್ಸ್‌  ಜೊತೆ ಕೊನೆಯ ಪಂದ್ಯವನ್ನು ಆಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಝ್‌ ಬಾಲ್‌ ತಂತ್ರ

    ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಝ್‌ ಬಾಲ್‌ ತಂತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಇಸ್ಲಾಮಾಬಾದ್: ಟಿ20 ವಿಶ್ವಕಪ್‌ನಲ್ಲಿ (T20 World) ಇಂಗ್ಲೆಂಡ್ ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ (England) ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ (Test Cricket) 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಯಿತು.

    ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯಿಂದ ಬೆನ್‌ಸ್ಟೋಕ್ಸ್ (Ben Stokes) ಪಡೆ ಪಾಕಿಸ್ತಾನ ತಂಡವನ್ನು ತವರಿನಲ್ಲೇ ವೈಟ್‌ವಾಶ್ ಮಾಡಿತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಪಾಕ್ ತಂಡ, ಭಾರೀ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ (Danish Kaneria) ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪಾಕಿಸ್ತಾನ ತಂಡದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ದೊಡ್ಡ ಸೊನ್ನೆ. ಅವರನ್ನು ವಾಸ್ತವವಾಗಿ ವಿರಾಟ್ ಕೊಹ್ಲಿಗೆ (Virat Kohli) ಹೋಲಿಸೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ಜನರು ಬಾಬರ್ ಅಜಮ್‌ನನ್ನ ವಿರಾಟ್ ಕೊಹ್ಲಿ ಅವರಿಗೆ ಹೋಲಿಸೋದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹವರು ಬಹಳ ದೊಡ್ಡ ಆಟಗಾರರು. ಅವರಿಗೆ ಹೋಲಿಸುವಂತಹವರು ಪಾಕ್ ತಂಡದಲ್ಲಿ ಯಾರೂ ಇಲ್ಲ. ನೀವು ಅವರನ್ನ ಮಾತನಾಡಲು ಕೇಳಿದ್ರೆ ಹಾಜರಾಗುತ್ತಾರೆ. ಅದೇ ಫಲಿತಾಂಶ ನೀಡಲು ಕೇಳಿದ್ರೆ ಶೂನ್ಯವಾಗಿರುತ್ತದೆ ಎಂದು ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಬರ್ ನಾಯಕನಾಗಿ ದೊಡ್ಡ ಶೂನ್ಯ, ತಂಡವನ್ನು ಮುನ್ನಡೆಸಲು ಅರ್ಹರಲ್ಲ. ಮುನ್ನಡೆಸುವ ಸಾಮರ್ಥ್ಯವನ್ನೂ ಅವರು ಹೊಂದಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ಬಂದಾಗ ಬೆನ್‌ಸ್ಟೋಕ್ಸ್ ನೋಡಿ ಕಲಿಯಬೇಕಿದೆ. ಇನ್ನು ಮುಂದೆ ಬಾಬರ್ ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಆಡುವುದು ಸೂಕ್ತವಲ್ಲ ಎಂದು ಕನೇರಿಯಾ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    Live Tv
    [brid partner=56869869 player=32851 video=960834 autoplay=true]

    Live Tv
    [brid partner=56869869 player=32851 video=960834 autoplay=true]

  • 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ರಾವಲ್ಪಿಂಡಿ: ಪಾಕಿಸ್ತಾನದ(Pakistan) ವಿರುದ್ಧ ರಾವಲ್ಪಿಂಡಿಯಲ್ಲಿ ಇಂದಿನಿಂದ ಶುರುವಾದ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್(England) ಬ್ಯಾಟರ್‌ಗಳು ವಿಶ್ವದಾಖಲೆ(World Record) ನಿರ್ಮಿಸಿದ್ದಾರೆ. ಮೊದಲ ದಿನವೇ ರನ್ ಸುನಾಮಿ ಎದ್ದಿದ್ದು ಟಾಸ್ ಗೆದ್ದು ಬ್ಯಾಟ್ ಮಾಡಲು ಇಳಿದ ಇಂಗ್ಲೆಂಡ್, ಟಿ-20 ಮಾದರಿಯಲ್ಲಿ ರನ್ ಹೊಳೆ ಹರಿಸಿದೆ.

    ನಾಲ್ವರು ಟಾಪ್ ಆರ್ಡರ್ ಬ್ಯಾಟರ್‌ಗಳು ಶತಕ(Century) ಗಳಿಸಿದ ಕಾರಣ ಮೊದಲ ದಿನದ ಅಂತ್ಯಕ್ಕೆ 75 ಓವರ್‌ಗೆ (450 ಎಸೆತ) ನಾಲ್ಕು ವಿಕೆಟ್ ಕಳೆದುಕೊಂಡು ಬರೋಬ್ಬರಿ 506 ರನ್ ಗಳಿಸಿದೆ. ಓವರಿಗೆ 6.75 ರನ್‍ರೇಟ್‌ನಲ್ಲಿ  ಬ್ಯಾಟ್‌ ಬೀಸಿದ್ದಾರೆ.

    ಝಾಕ್ ಕ್ರಾಲಿ 122 ರನ್‌(111 ಎಸೆತ, 21 ಬೌಂಡರಿ), ಬೆನ್ ಡಕೆಟ್ 107 ರನ್‌(110 ಎಸೆತ, 15 ಬೌಂಡರಿ), ಆಲಿ ಪೋಪ್ 108 ರನ್‌(104 ಎಸೆತ, 14 ಬೌಂಡರಿ), ಹ್ಯಾರಿ ಬ್ರೂಕ್ ಔಟಾಗದೇ 101 ರನ್‌(81 ಎಸೆತ, 14 ಬೌಂಡರಿ, 2 ಸಿಕ್ಸರ್) ಹೊಡೆದಿದ್ದಾರೆ.

    ಕೊನೆಯಲ್ಲಿ ನಾಯಕ ಬೆನ್‌ಸ್ಟೋಕ್ಸ್‌ 226.6 ಸ್ಟ್ರೈಕ್‌ ರೇಟ್‌ನಲ್ಲಿ ಔಟಾಗದೇ 34 ರನ್‌(15 ಎಸೆತ, 6 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದರಿಂದ 506 ರನ್‌ ಗಳಿಸಿದೆ. ಇತರೇ ರೂಪದಲ್ಲಿ 11 ರನ್‌(2 ಬೈ, 6 ಲೆಗ್‌ಬೈ, 2 ನೋಬಾಲ್‌, 1 ವೈಡ್‌) ಬಂದಿದೆ. ಜಾಹಿದ್ ಮಹಮೂದ್ 23 ಓವರ್‌ ಎಸೆದು 160 ರನ್‌ ನೀಡಿ 2 ವಿಕೆಟ್‌ ಪಡೆದಿದ್ದಾರೆ.  ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಮೊದಲ ದಿನ ಅತಿ ಹೆಚ್ಚು ರನ್‌
    ಮೊದಲ ದಿನವೇ  506 ರನ್‌ಗಳಿಸಿದ್ದು ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲೆ. ಈ ಹಿಂದೆ ಸಿಡ್ನಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 1910 ರಲ್ಲಿ ಆಸ್ಟ್ರೇಲಿಯಾದ 494 ರನ್‌ ಹೊಡೆದಿತ್ತು.

    2012ರ ಟೆಸ್ಟ್‌ನಲ್ಲಿ ಮತ್ತೆ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಅಡಿಲೇಡ್‌ನಲ್ಲಿ 5 ವಿಕೆಟ್‌ ನಷ್ಟಕ್ಕೆ 482 ರನ್‌ ಹೊಡೆದಿತ್ತು. ಈ ಮೊತ್ತ 86.5 ಓವರ್‌ನಲ್ಲಿ ದಾಖಲಾಗಿತ್ತು. ಟೆಸ್ಟ್‌ ಪಂದ್ಯದಲ್ಲಿ ದಿನ ಒಂದಕ್ಕೆ 90 ಓವರ್‌ ಎಸೆಯಲಾಗುತ್ತದೆ. ಆದರೆ ಇಂಗ್ಲೆಂಡ್‌ ಕೇವಲ 75 ಓವರ್‌ನಲ್ಲಿ 506 ರನ್‌ ಗಳಿಸಿರುವುದು ವಿಶೇಷ.

    4 ಶತಕ:
    ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಮೊದಲ ದಿನ 4 ಆಟಗಾರರು ಶತಕ ಸಿಡಿಸಿದ್ದು ಇದೇ ಮೊದಲು. ಅದರಲ್ಲೂ ಮೂವರು ಬ್ಯಾಟರ್‌ಗಳ ಸ್ಟ್ರೈಕ್‌ ರೇಟ್‌ 100ಕ್ಕಿಂತಲೂ ಅಧಿಕ ಇರುವುದು ಮತ್ತೊಂದು ದಾಖಲೆ. ಝಾಕ್ ಕ್ರಾಲಿ(109.90) ಆಲಿ ಪೋಪ್(103.84), ಹ್ಯಾರಿ ಬ್ರೂಕ್(124.69) ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.

    ದಾಖಲೆಯ ಆರಂಭಿಕ ಜೊತೆಯಾಟ:
    ಝಾಕ್ ಕ್ರಾಲಿ ಮತ್ತು ಬೆನ್ ಡಕೆಟ್ 35.4 ಓವರ್‌ನಲ್ಲಿ(214 ಎಸೆತ) 6.53 ಸ್ಕೋರಿಂಗ್‌ ರೇಟಿಂಗ್‌ನಲ್ಲಿ ಮೊದಲ ವಿಕೆಟಿಗೆ 233 ರನ್‌ ಚಚ್ಚಿದ್ದಾರೆ.‌ ಇದು 200 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳ ಆರಂಭಿಕ ಜೊತೆಯಾಟದಲ್ಲಿ ದಾಖಲಾದ  ಅತ್ಯಧಿಕ ಸ್ಕೋರಿಂಗ್‌ ರೇಟ್.

    ಈ ಹಿಂದೆ ಜೋ ಬರ್ನ್ಸ್ ಮತ್ತು ಡೇವಿಡ್ ವಾರ್ನರ್ (2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪ್ರತಿ ಓವರ್‌ಗೆ 6.29 ರನ್) ಮತ್ತು ಗ್ರೇಮ್ ಸ್ಮಿತ್ ಮತ್ತು ಎಬಿ ಡಿವಿಲಿಯರ್ಸ್ (2005 ರಲ್ಲಿ ಜಿಂಬಾಬ್ವೆ ವಿರುದ್ಧ ಪ್ರತಿ ಓವರ್‌ಗೆ 6.22 ರನ್) ದ್ವಿಶತಕದ ಜೊತೆಯಾಟವಾಡಿದ್ದರು.

    ಒಂದು ಓವರ್‌ನಲ್ಲಿ ಸತತ ಆರು ಬೌಂಡರಿ
    ಹ್ಯಾರಿ ಬ್ರೂಕ್ ಅವರು ಇಂದು ಟೆಸ್ಟ್‌ ಕ್ಯಾಪ್‌ ಧರಿಸಿದ್ದ ಸೌದ್ ಶಕೀಲ್‌ ಅವರ ಎರಡನೇ ಓವರ್‌ನಲ್ಲಿ ಆರು ಬೌಂಡರಿ ಚಚ್ಚಿದ್ದಾರೆ. ಈ ಮೂಲಕ ಟೆಸ್ಟ್ ಪಂದ್ಯದ ಓವರ್‌ ಒಂದರಲ್ಲಿ ಸತತ ಆರು ಬೌಂಡರಿಗಳನ್ನು ಹೊಡೆದ ಐದನೇ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಬ್ರೂಕ್‌ ಪಾತ್ರರಾಗಿದ್ದಾರೆ.

    1982ರಲ್ಲಿ ಬಾಬ್ ವಿಲ್ಲಿಸ್ ವಿರುದ್ಧ ಸಂದೀಪ್ ಪಾಟೀಲ್, 2004ರಲ್ಲಿ ಮ್ಯಾಥ್ಯೂ ಹೊಗಾರ್ಡ್ ವಿರುದ್ಧ ಕ್ರಿಸ್‌ ಗೇಲ್‌, 2006ರಲ್ಲಿ ಮುನಾಫ್ ಪಟೇಲ್ ವಿರುದ್ಧ ರಾಮ್‌ನರೇಶ್ ಸರ್ವನ್‌, 2007ರಲ್ಲಿ ಜೇಮ್ಸ್ ಆಂಡರ್ಸನ್ ಬೌಲಿಂಗ್‌ಗೆ ಸನತ್‌ ಜಯಸೂರ್ಯ 6 ಬೌಂಡರಿ ಹೊಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಇಸ್ಲಾಮಾಬಾದ್: ಟಿ20 ವಿಶ್ವಕಪ್‌ನಲ್ಲಿ (T20 WorldCup) ಇಂಗ್ಲೆಂಡ್ (England) ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಿದೆ.

    ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನದಲ್ಲಿ ಪಾಕ್ ತಂಡದ ನಾಯಕ ಬಾಬರ್ ಆಜಂ (Babar Azam) ಮಾತನಾಡಿದ್ದು, ನನ್ನ ರೋಲ್ ಮಾಡೆಲ್ ವಿರಾಟ್ ಕೊಹ್ಲಿ (Virat Kohli) ಅಲ್ಲ, ಎಬಿಡಿ ವಿಲಿಯರ್ಸ್ (AB de Villiers) ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಫ್ಲಾಪ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಪಾಕ್ ತಂಡದ ನಾಯಕ ಬಾಬರ್ ಆಜಂ ಸೆಮಿಸ್ ಹಾಗೂ ಫೈನಲ್ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ್ದರು. ಇದೀಗ ಇಂಗ್ಲೆಂಡ್‌ನೊಂದಿಗೆ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿರುವ ಬಾಬರ್ ಅಜಂ ತನ್ನ ನೆಚ್ಚಿನ ಕ್ರಿಕೆಟಿಗ ಯಾರು ಎಂಬುದನ್ನ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಒಂದೇ ಓವರ್‌ನಲ್ಲಿ 7 ಸಿಕ್ಸ್ ಸಿಡಿಸಿ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್

    ಈ ವೇಳೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ ಎಬಿಡಿ ವಿಲಿಯರ್ಸ್ (AB de Villiers) ನನ್ನ ರೋಲ್ ಮಾಡೆಲ್. ನನಗೆ ಅವರೆಂದರೆ ಇಷ್ಟ. ವಿಶೇಷವಾಗಿ ಅವರು ಆಡುವ ಶೈಲಿ ಹಾಗೂ ಶಾಟ್‌ಗಳು ಬಹಳ ಇಷ್ಟ. ಅವರು ಆಡುವುದನ್ನು ಟಿವಿಯಲ್ಲಿ ನೋಡಿದ ಬಳಿಕ ಮರುದಿನ ನಾನು ನೆಟ್ಸ್‌ನಲ್ಲಿ ಅದೇ ರೀತಿಯಾಗಿ ಅಭ್ಯಾಸ ನಡೆಸುತ್ತಿದ್ದೆ. ನನಗೆ ಅವರು ಆದರ್ಶ ಕ್ರಿಕೆಟಿಗನಾಗಿದ್ದ ಕಾರಣದಿಂದಾಗಿ ಅವರಂತೆ ಆಡಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿಕೋಂಡಿದ್ದಾರೆ.

    ಟೀಂ ಇಂಗ್ಲೆಂಡ್‌ಗೆ ವೆಲ್‌ಕಮ್: ಮುಂದುವರಿದು ಮಾತನಾಡುತ್ತಾ, ಪಾಕಿಸ್ತಾನಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ ಎಂದಿದ್ದಾರೆ. ನಾವು ಈ ಸರಣಿಗಾಗಿ ಎದುರುನೋಡುತ್ತಿದ್ದೇವೆ. ಮೊದಲನೆಯದಾಗಿ ನಾನು ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ. ಟಿ20 ಸರಣಿಗಾಗಿ ಕೆಲ ಆಟಗಾರರು ಆಗಮಿಸಿದ್ದರು. ಅವರು ಇಲ್ಲಿನ ಸಮಯವನ್ನು ಆನಂದಿಸಿದ್ದಾರೆ. ಇಲ್ಲಿನ ವಾತಾವರಣ, ಪಾಕಿಸ್ತಾನದ ಆತಿಥ್ಯವನ್ನು ಆನಂದಿಸಲಿದ್ದಾರೆ. ಈಗ ನಾವು ಸರಣಿಗಾಗಿ ಎದುರುನೋಡುತ್ತಿದ್ದೇವೆ. ಎಲ್ಲರೂ ಉತ್ತಮವಾಗಿ ಆಡಲಿ ಎಂದು ಶುಭ ಕೋರಿದ್ದಾರೆ.

    ಡಿಸೆಂಬರ್ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆರಂಭವಾಗಲಿದ್ದು, ಡಿ.1 ರಿಂದ 5ರ ವರೆಗೆ ಮೊದಲ ಟೆಸ್ಟ್, ಡಿ.9 ರಿಂದ 13ರ ವರೆಗೆ 2ನೇ ಟೆಸ್ಟ್ ಹಾಗೂ ಡಿ.17 ರಿಂದ 21ರ ವರೆಗೆ 3ನೇ ಟೆಸ್ಟ್ ಪಂದ್ಯಗಳು ನಡೆಯಲಿವೆ.

    Live Tv
    [brid partner=56869869 player=32851 video=960834 autoplay=true]

  • ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    ಲಂಡನ್: ಪಾಕ್ (Pakistan) ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನವೇ ಇಂಗ್ಲೆಂಡ್ (England) ತಂಡಕ್ಕೆ ಆಘಾತ ಎದುರಾಗಿದೆ.

    ಇಂಗ್ಲೆಂಡ್ ತಂಡದ ಕ್ಯಾಪ್ಟನ್ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಪಾಕ್ ಪ್ರವಾಸದಲ್ಲಿದ್ದ ಅರ್ಧದಷ್ಟು ಆಟಗಾರರು ಹೆಸರಿಲ್ಲದ ವೈರಸ್‌ಗೆ (Virus) ತುತ್ತಾಗಿದ್ದಾರೆ. ಆದ್ದರಿಂದ ಟೆಸ್ಟ್ ಸರಣಿ ಮುಂದೂಡುವ ಸಾಧ್ಯತೆಯಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮುಂದಿನ ಕ್ರಮಗಳ ಕುರಿತು ಚರ್ಚಿಸುತ್ತಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಬುಧವಾರ ತಿಳಿಸಿದೆ.

    ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಇಂಗ್ಲೆಂಡ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಮೇಲ್ವಿಚಾರಣೆ ನಡೆಸುತ್ತಿದೆ. ಸ್ಟೋಕ್ಸ್ಗೆ ಚೇತರಿಕೊಳ್ಳಲು ಸಮಾಯವಾಕಾಶ ನೀಡಲು ನಿರ್ಧರಿಸಿದ್ದು, ನಾಯಕತ್ವ ಬದಲಾವಣೆ ಕುರಿತು ಚರ್ಚಿಸಲಾಗುತ್ತಿದೆ ಎಂದು ಹೇಳಿದೆ.

    ಇಂಗ್ಲೆಂಡ್ ತಂಡದ ನಾಯಕ ಬೆನ್‌ಸ್ಟೋಕ್ಸ್ (Ben Stokes) ಸೇರಿದಂತೆ ಹಲವು ಆಟಗಾರರು, ಸಹ ಸಿಬ್ಬಂದಿ ಅಸ್ವಸ್ಥರಾಗಿದ್ದಾರೆ. ಅವರ ವಿಶ್ರಾಂತಿಗಾಗಿ ಹೋಟೆಲ್‌ನಲ್ಲಿ (Hotel) ಉಳಿಯಲು ಸಲಹೆ ನೀಡಲಾಗಿದೆ. ಅವರಿಗೆ ಫುಡ್‌ಪಾಯಿಸನ್ ಆಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ICC ಮಾಸ್ಟರ್ ಪ್ಲ್ಯಾನ್‌ – ಹೊಸ ಮಾದರಿಯಲ್ಲಿ 2024ರ T20 ವಿಶ್ವಕಪ್

    ಇತ್ತೀಚೆಗೆ ನಡೆದ ಟಿ20 ಸರಣಿಯಲ್ಲಿ ಇಂಗ್ಲೆಂಡ್-ಪಾಕ್ (Pakistan) ವಿರುದ್ಧ 4-3 ಅಂತರದಲ್ಲಿ ಸರಣಿ ಗೆದ್ದುಕೊಂಡಿತು. ಇದೀಗ 17 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಟೆಸ್ಟ್ ಪ್ರವಾಸ ಕೈಗೊಂಡಿದೆ. ಇದನ್ನೂ ಓದಿ: 25 ಬೌಂಡರಿ, 15 ಸಿಕ್ಸರ್ – 277 ರನ್ ಸಿಡಿಸಿ ವಿಶ್ವದಾಖಲೆ ಬರೆದ ಜಗದೀಶನ್ – ಹಿಟ್‌ಮ್ಯಾನ್ ದಾಖಲೆಯೂ ಉಡೀಸ್

    ಡಿಸೆಂಬರ್ 1 ರಿಂದ 5ರ ವರೆಗೆ ಮೊದಲ ಟೆಸ್ಟ್, ಡಿ.9 ರಿಂದ 13ರ ವರೆಗೆ 2ನೇ ಟೆಸ್ಟ್ ಹಾಗೂ ಡಿ.17 ರಿಂದ 21ರ ವರೆಗೆ 3ನೇ ಟೆಸ್ಟ್ ಪಂದ್ಯಗಳು ನಿಗದಿಯಾಗಿದ್ದವು.

    Live Tv
    [brid partner=56869869 player=32851 video=960834 autoplay=true]