Tag: england

  • World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    World Cup 2023: ಚೊಚ್ಚಲ ಪಂದ್ಯದಲ್ಲೇ ಸೇಡು ತೀರಿಸಿಕೊಂಡ ಕಿವೀಸ್‌; ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ

    ಅಹಮದಾಬಾದ್:‌ ಏಕದಿನ ವಿಶ್ವಕಪ್‌ (ODI World Cup) ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ (England) ತಂಡದ ವಿರುದ್ಧ ಕಿವೀಸ್‌ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2019ರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ವಿರೋಚಿತ ಸೋಲನುಭವಿಸಿ, ಟ್ರೋಫಿ ಕಳೆದುಕೊಂಡಿದ್ದ ಕಿವೀಸ್‌ ಪಡೆ ಮೊದಲ ಪಂದ್ಯದಲ್ಲೇ ಆಂಗ್ಲರಿಗೆ ತಿರುಗೇಟು ನೀಡಿದೆ.

    ಗುರುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ‌ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ತಂಡವು ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ವಿರುದ್ಧ 9 ವಿಕೆಟ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಇಂಗ್ಲೆಂಡ್‌ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 282 ರನ್‌ ಗಳಿಸಿತ್ತು. 283 ರನ್‌ ಗುರಿ ಪಡೆದ ಕಿವೀಸ್‌ ಕೇವಲ 36.2 ಓವರ್‌ಗಳಲ್ಲೇ 1 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

    ಚೇಸಿಂಗ್‌ ಆರಂಭಿಸಿದ ನ್ಯೂಜಿಲೆಂಡ್‌ ಪರ ಆರಂಭಿಕ ಆಟಗಾರ ವಿಲ್‌ ಯಂಗ್‌ ಮೊದಲ ಎಸೆತದಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು. ಇದರಿಂದ ಇಂಗ್ಲೆಂಡ್‌ ತಂಡ ಗೆಲುವಿನ ಕನಸು ಕಂಡಿತ್ತು. ಆದ್ರೆ 2ನೇ ವಿಕೆಟ್‌ಗೆ ಜೊತೆಯಾದ ಡಿವೋನ್‌ ಕಾನ್ವೆ (Devon Conway) ಹಾಗೂ ಆಲ್‌ರೌಂಡರ್‌ ರಚಿನ್ ರವೀಂದ್ರ (Rachin Ravindra) ಜೋಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಹಿಗ್ಗಾಮುಗ್ಗ ಚೆಂಡಾಡಿದರು.

    ಮೊದಲ 10 ಓವರ್‌ಗಳಲ್ಲಿ 81 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡಿದ್ದ ಕಿವೀಸ್‌ 20 ಓವರ್‌ಗಳಲ್ಲಿ 154 ರನ್‌ ಹಾಗೂ 35‌ ಓವರ್‌ಗಳಲ್ಲಿ 265 ರನ್‌ ಚಚ್ಚಿತ್ತು. ಮುರಿಯದ 2ನೇ ವಿಕೆಟ್‌ಗೆ ಕಾನ್ವೆ ಹಾಗೂ ರವೀಂದ್ರ ಜೋಡಿ ಭರ್ಜರಿ ಶತಕಗಳೊಂದಿಗೆ 211 ಎಸೆತಗಳಲ್ಲಿ 273 ರನ್‌ ಸಿಡಿತ್ತು. ಡಿವೋನ್‌ ಕಾನ್ವೇ 121 ಎಸೆತಗಳಲ್ಲಿ 152 ರನ್‌ ಚಚ್ಚಿದರೆ (19 ಬೌಂಡರಿ, 3 ಸಿಕ್ಸರ್‌), ರಚಿನ್‌ ರವೀಂದ್ರ 96 ಎಸೆತಗಳಲ್ಲಿ 123 ರನ್‌ (11 ಬೌಂಡರಿ, 5 ಸಿಕ್ಸರ್‌) ಸಿಡಿಸಿ ಮಿಂಚಿದರು.

    ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌, 50 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿತ್ತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣ್ಕಿಳಿದ ಜಾನಿ ಬೈರ್‌ಸ್ಟೋವ್‌ 33 ರನ್‌, ಡೇವಿಡ್‌ ಮಲಾನ್‌ 14 ರನ್‌ ಗಳಿಸಿ ಔಟಾಗುತ್ತಿದ್ದಂತೆ ಕಣಕ್ಕಿಳಿದ ಜೋ ರೂಟ್‌ 86 ಎಸೆತಗಳಲ್ಲಿ 77 ರನ್‌ ಸಿಡಿಸಿದರು.

    ಇದರೊಂದಿಗೆ ಹ್ಯಾರಿ ಬ್ರೂಕ್‌ 25 ರನ್‌, ಮೋಯಿನ್‌ ಅಲಿ 11 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 42 ಎಸೆತಗಳಲ್ಲಿ 43 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 22 ಎಸೆತಗಳಲ್ಲಿ 20 ರನ್‌, ಸ್ಯಾಮ್‌ ಕರ್ರನ್‌ 14 ರನ್‌, ಕ್ರಿಸ್ ವೋಕ್ಸ್ 11 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಆದಿಲ್ ರಶೀದ್ 15 ರನ್‌ ಹಾಗೂ ಮಾರ್ಕ್ ವುಡ್ 13 ರನ್‌ ಗಳಿಸಿ ಅಜೇಯರಾಗುಳಿದರು.

    ನ್ಯೂಜಿಲೆಂಡ್‌ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮ್ಯಾಟ್‌ ಹೆನ್ರಿ 3 ವಿಕೆಟ್‌ ಪಡೆದರೆ, ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡೆರಡು ಹಾಗೂ ಟ್ರೆಂಟ್‌ ಬೌಲ್ಟ್‌ ಮತ್ತು ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    2019ರಲ್ಲಿ ಏನಾಗಿತ್ತು?
    ಇಂಗ್ಲೆಂಡಿನ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಜುಲೈ 14 ರಂದು ನಡೆದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಿತು. ನಿಗದಿತ 50 ಓವರ್‌ಗಳಲ್ಲಿ ಇಂಗ್ಲೆಂಡ್‍ಗೆ 241 ರನ್‍ಗಳ ಗುರಿ ನೀಡಿತು. ಆದರೆ ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಕೊನೆಯ ಓವರಿನ ಮೂರನೇ ಎಸೆತದಲ್ಲಿ ಬೆನ್‌ ಸ್ಟೋಕ್ಸ್‌ ಸಿಕ್ಸ್‌ ಹೊಡೆದರೆ 4ನೇ ಎಸೆತದಲ್ಲೂ 6ರನ್‌ ಬಂದಿತ್ತು. ಎರಡನೇ ರನ್‌ ಓಡುವ ವೇಳೆ ಚೆಂಡು ಬೆನ್‌ ಸ್ಟೋಕ್ಸ್‌ ಬ್ಯಾಟ್‌ಗೆ ತಾಗಿ ಬೌಂಡರಿಗೆ ಹೋಗಿತ್ತು. ಇದು ಬಹಳ ವಿವಾದಕ್ಕೆ ಕಾರಣವಾಗಿತ್ತು. ಕೊನೆಯ ಎರಡು ಎಸೆತದಲ್ಲಿ ಸಿಂಗಲ್‌ ರನ್‌ ಬಂದ ಕಾರಣ ಪಂದ್ಯ ಟೈ ಆಗಿತ್ತು.

    ಟೈ ಆದ ಕಾರಣ ಐಸಿಸಿ ನಿಯಮದಂತೆ ಸೂಪರ್ ಓವರ್ ಆಡಿಸಲು ತೀರ್ಮಾನ ಮಾಡಲಾಯಿತು. ಸೂಪರ್ ಓವರ್‌ನಲ್ಲಿ ಮೊದಲ ಬ್ಯಾಟ್ ಮಾಡಿದ ಇಂಗ್ಲೆಂಡ್ ಬಟ್ಲರ್ ಮತ್ತು ಸ್ಟೋಕ್ಸ್ ಅವರು ತಲಾ ಒಂದೊಂದು ಬೌಡರಿ ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ 15 ರನ್‍ಗಳ ಗುರಿ ನೀಡಿದರು. ಇದನ್ನು ಬೆನ್ನಟ್ಟಿದ ಕೀವೀಸ್ ಆಟಗಾರರಾದ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಅವರ ಬೌಲಿಂಗ್‌ ಭರ್ಜರಿ ಬ್ಯಾಟ್ ಬೀಸಿದರು. ನೀಶಮ್ ಅವರು ಒಂದು ಸಿಕ್ಸರ್ ಸಿಡಿಸಿ ಗೆಲ್ಲುವ ಭರವಸೆ ಮೂಡಿಸಿದರು. ಕೊನೆಯ ಎಸೆತದಲ್ಲಿ ಗೆಲ್ಲಲು ನ್ಯೂಜಿಲೆಂಡ್‍ಗೆ 2 ರನ್ ಬೇಕಿತ್ತು. ಆಗ ಸ್ಟ್ರೈಕ್‍ನಲ್ಲಿ ಇದ್ದ ಅನುಭವಿ ಆಟಗಾರ ಮಾರ್ಟಿನ್ ಗುಪ್ಟಿಲ್ ಜೋಫ್ರಾ ಆರ್ಚರ್ ಎಸೆದ ಎಸೆತದಲ್ಲಿ 2 ರನ್ ಕದಿಯಲು ವಿಫಲರಾದರು. ಜೋಫ್ರಾ ಅವರ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ತಳ್ಳಿದ ಗುಪ್ಟಿಲ್ ಎರಡು ರನ್ ಕದಿಯುವಲ್ಲಿ ಯಶಸ್ವಿಯಾಗಲಿಲ್ಲ. ರಾಯ್ ಅವರು ಎಸೆದ ಉತ್ತಮ ಥ್ರೋವನ್ನು ಬಟ್ಲರ್ ಹಿಡಿದು ರನೌಟ್‌ ಮಾಡಿದರು. ಈ ಮೂಲಕ ಸೂಪರ್ ಓವರ್ ಕೂಡ ಟೈ ಆಯ್ತು.

    ಫೈನಲ್‍ನಲ್ಲಿ ಸೂಪರ್ ಓವರ್ ಕೂಡ ಟೈ ಆದ ಕಾರಣ ಐಸಿಸಿ ನಿಯಮದಂತೆ ಹೆಚ್ಚು ಬೌಂಡರಿ ಸಿಡಿಸಿದ ತಂಡಕ್ಕೆ ಗೆಲುವು ಎಂದು ಘೋಷಣೆ ಮಾಡಲಾಯಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಹೊಡೆದಿದ್ದ ಇಂಗ್ಲೆಂಡ್ ಗೆಲುವು ಸಾಧಿಸಿತು. ಈ ಮೂಲಕ ಮೊದಲ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಮುತ್ತಿಕ್ಕಿತು. ಸತತ ಎರಡನೇ ಬಾರಿ ಫೈನಲ್‍ನಲ್ಲಿ ಸೋತ ನ್ಯೂಜಿಲೆಂಡ್ ದ್ವಿತೀಯಸ್ಥಾನಿಯಾಗಿ ನಿರ್ಗಮಿಸಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ 26 ಬೌಂಡರಿ ಹೊಡೆದಿದ್ದರೆ ನ್ಯೂಜಿಲೆಂಡ್‌ 17 ಬೌಂಡರಿ ಹೊಡೆದಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    World Cup 2023: ಚೊಚ್ಚಲ ಪಂದ್ಯದಲ್ಲೇ ಮೋದಿ ಕ್ರಿಕೆಟ್‌ ಅಂಗಳದಲ್ಲಿ ಇತಿಹಾಸ ಬರೆದ ಇಂಗ್ಲೆಂಡ್‌

    ಅಹಮದಾಬಾದ್:‌ 2023ನೇ ಸಾಲಿನ ಐಸಿಸಿ ಏಕದಿನ ವಿಶ್ವಕಪ್‌ (World Cup 2023) ಟೂರ್ನಿಯು ಗುರುವಾರದಿಂದ (ಅ.5) ಆರಂಭಗೊಂಡಿದ್ದು, ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ಸ್‌ ಇಂಗ್ಲೆಂಡ್‌ ತಂಡವು (England Team) ಹೊಸ ಇತಿಹಾಸ ಸೃಷ್ಟಿಸಿದೆ.

    ಆರಂಭಿಕ ಆಟಗಾರನಿಂದ ಹಿಡಿದು ಕೊನೆಯ ಬ್ಯಾಟ್ಸ್‌ಮ್ಯಾನ್‌ ವರೆಗೂ ಪ್ರತಿಯೊಬ್ಬರು ಎರಡಂಕಿಯ ರನ್‌ಗಳನ್ನು ದಾಖಲಿಸುವ ಮೂಲಕ ಇಂಗ್ಲೆಂಡ್‌ ತಂಡವು ವಿಶೇಷ ಸಾಧನೆ ಮಾಡಿದೆ. ಇದನ್ನೂ ಓದಿ: ICC World Cup 2023: ಇಂದಿನಿಂದ ವಿಶ್ವಕಪ್‌ ಮಹಾಸಮರ – ಇಂದು ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್ ಸೆಣಸಾಟ

    ಈ ಪಂದ್ಯದಲ್ಲಿ ಟಾಸ್‌ ಸೋತ ಇಂಗ್ಲೆಂಡ್‌ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆಯಿತು. 50 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 282 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 283 ರನ್‌ಗಳ ಗುರಿ ನೀಡಿತು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣ್ಕಿಳಿದ ಜಾನಿ ಬೈರ್‌ಸ್ಟೋವ್‌ 33 ರನ್‌, ಡೇವಿಡ್‌ ಮಲಾನ್‌ 14 ರನ್‌ ಗಳಿಸಿ ಔಟಾಗುತ್ತಿದ್ದಂತೆ ಕಣಕ್ಕಿಳಿದ ಜೋ ರೂಟ್‌ 86 ಎಸೆತಗಳಲ್ಲಿ 77 ರನ್‌ ಸಿಡಿಸಿದರು.

    ಇದರೊಂದಿಗೆ ಹ್ಯಾರಿ ಬ್ರೂಕ್‌ 25 ರನ್‌, ಮೋಯಿನ್‌ ಅಲಿ 11 ರನ್‌ ಗಳಿಸಿದ್ರೆ, ಜೋಸ್‌ ಬಟ್ಲರ್‌ 42 ಎಸೆತಗಳಲ್ಲಿ 43 ರನ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌ 22 ಎಸೆತಗಳಲ್ಲಿ 20 ರನ್‌, ಸ್ಯಾಮ್‌ ಕರ್ರನ್‌ 14 ರನ್‌, ಕ್ರಿಸ್ ವೋಕ್ಸ್ 11 ರನ್‌ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಆದಿಲ್ ರಶೀದ್ 15 ರನ್‌ ಹಾಗೂ ಮಾರ್ಕ್ ವುಡ್ 13 ರನ್‌ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಇಂಗ್ಲೆಂಡ್‌ ತಂಡವು 50 ಓವರ್‌ಗಳಲ್ಲಿ 282 ರನ್‌ ಗಳಿಸಿತು. ಇದನ್ನೂ ಓದಿ: Asian Games 2023- ಗ್ರೀಕೊ ರೋಮನ್ ಕುಸ್ತಿಯಲ್ಲಿ ಭಾರತಕ್ಕೆ 13 ವರ್ಷಗಳ ಬಳಿಕ ಪದಕ

    ನ್ಯೂಜಿಲೆಂಡ್‌ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮ್ಯಾಟ್‌ ಹೆನ್ರಿ 3 ವಿಕೆಟ್‌ ಪಡೆದರೆ, ಗ್ಲೆನ್‌ ಫಿಲಿಪ್ಸ್‌ ಮತ್ತು ಮಿಚೆಲ್‌ ಸ್ಯಾಂಟ್ನರ್‌ ತಲಾ ಎರಡೆರಡು ಹಾಗೂ ಟ್ರೆಂಟ್‌ ಬೌಲ್ಟ್‌ ಮತ್ತು ರಚಿನ್ ರವೀಂದ್ರ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

    ಇಂಗ್ಲೆಂಡ್‌ ಪ್ಲೇಯಿಂಗ್‌ 11: ಜಾನಿ ಬೈರ್‌ಸ್ಟೋವ್, ಡಾವಿಡ್ ಮಲಾನ್, ಜೋ ರೂಟ್, ಹ್ಯಾರಿ ಬ್ರೂಕ್, ಜೋಸ್ ಬಟ್ಲರ್(ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯೀನ್ ಅಲಿ, ಸ್ಯಾಮ್ ಕರನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್ ಇದನ್ನೂ ಓದಿ: ಹೈದರಾಬಾದ್ ಬಿರಿಯಾನಿಯಿಂದಾಗಿ ಸ್ವಲ್ಪ ಸ್ಲೋ – ಅಭ್ಯಾಸ ಪಂದ್ಯದ ಸೋಲಿಗೆ ಪಾಕ್ ಆಟಗಾರನ ಪ್ರತಿಕ್ರಿಯೆ

    ನ್ಯೂಜಿಲೆಂಡ್‌ ಪ್ಲೇಯಿಂಗ್‌ 11: ಡಿವೋನ್‌ ಕಾನ್ವೇ, ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಲಾಂಥಮ್‌ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮ್ಯಾಟ್ ಹೆನ್ರಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್, ಟ್ರೆಂಟ್ ಬೌಲ್ಟ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್‌ನಲ್ಲಿ ಚಿನ್ನಗೆದ್ದ ಕರ್ನಾಟಕದ ಯುವತಿಗೆ ವಿಶೇಷ ಸನ್ಮಾನ

    ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್‌ನಲ್ಲಿ ಚಿನ್ನಗೆದ್ದ ಕರ್ನಾಟಕದ ಯುವತಿಗೆ ವಿಶೇಷ ಸನ್ಮಾನ

    ಹಾವೇರಿ: ಇಂಗ್ಲೆಂಡ್‌ನ (England) ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಅಂಧರ ಕ್ರಿಕೆಟ್ (International Women’s Blind Cricket) ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಶಿಗ್ಗಾಂವಿ ತಾಲೂಕಿನ ಶಿಶುನಾಳ ಗ್ರಾಮದ ಕುಮಾರಿ ಗಂಗವ್ವ ನೀಲಪ್ಪ ಹರಿಜನ ಅವರನ್ನ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಲಾಯಿತು.

    ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ ಸನ್ಮಾನಿಸಿದರು. ಇದೇ ವೇಳೆ ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಲ್ಯಾಪ್‌ಟಾಪ್ ವಿತರಣೆ ಮಾಡಲಾಯಿತು.

    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಸ್.ಬಿ ಮುಳ್ಳಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ ಆಲದರ್ತಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಕೆಂಪಳ್ಳೇರ ಉಪಸ್ಥಿತರಿದ್ದರು. ಇದನ್ನೂ ಓದಿ: ಕರ್ನಾಟಕಕ್ಕೆ ಕುಡಿಯುವ ನೀರಿನ ಚಿಂತೆ; ತಮಿಳುನಾಡಿಗೆ ಬೆಳೆ ಬಾಡುವ ಚಿಂತೆ – 15 ದಿನ 5,000 ಕ್ಯೂಸೆಕ್ ಹರಿಸಲು CWRC ಸೂಚನೆ

    ಇತ್ತೀಚೆಗೆ ಬರ್ಮಿಂಗ್‌ ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಲೀಗ್ ಪಂದ್ಯದಲ್ಲಿ ಗಂಗವ್ವ ಟೀಂ ಇಂಡಿಯಾ ಪರ 60 ಎಸೆತಗಳಲ್ಲಿ 117 ರನ್‌ ಗಳಿಸಿ ಮಿಂಚಿದ್ದರು. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆ, ಕಣ್ಣು ಕಿತ್ತುಹಾಕಬೇಕು: ಗಜೇಂದ್ರ ಸಿಂಗ್‌ ಶೇಖಾವತ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 5 ವರ್ಷದ ಹಿಂದಿನ ಬಾಲ್ ಬಳಸಿ ಇಂಗ್ಲೆಂಡ್ ಗೆದ್ದ ಆರೋಪ – ಆಂತರಿಕ ತನಿಖೆ ಮಾಡ್ತೀನಿ ಎಂದ ಬಾಲ್ ತಯಾರಕ

    5 ವರ್ಷದ ಹಿಂದಿನ ಬಾಲ್ ಬಳಸಿ ಇಂಗ್ಲೆಂಡ್ ಗೆದ್ದ ಆರೋಪ – ಆಂತರಿಕ ತನಿಖೆ ಮಾಡ್ತೀನಿ ಎಂದ ಬಾಲ್ ತಯಾರಕ

    ಲಂಡನ್: ಇಂಗ್ಲೆಂಡ್-ಆಸ್ಟ್ರೇಲಿಯಾ (England-Australia) ನಡುವಿನ ಆಶಸ್ ಟೂರ್ನಿಯ (Ashes Test) ಕೊನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿತು. ಈ ಪಂದ್ಯದ ಕೊನೆಯಲ್ಲಿ ಚೆಂಡನ್ನು ಬದಲಾವಣೆ ಮಾಡಿದ್ದು ದೊಡ್ಡಮಟ್ಟದಲ್ಲಿ ಚರ್ಚೆಗೆ (Ball Change Controversy) ಗ್ರಾಸವಾಗಿದೆ. 2018-19ರಲ್ಲಿ ತಯಾರಿಸಲಾದ ಬಾಲ್ ಬಳಕೆ ಮಾಡಲಾಗಿದೆ. ಇದರಿಂದ ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಆಸ್ಟ್ರೇಲಿಯಾ ಮಾಧ್ಯಮಗಳು ಆರೋಪಿಸಿವೆ.

    ಈ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಡ್ಯೂಕ್ ಬಾಲ್ (Duke Ball) ತಯಾರಿಕ ಮಾಲೀಕ ದಿಲೀಪ್ ಜಜೋಡಿಯಾ, ಪಂದ್ಯದಲ್ಲಿ ಬದಲಿಸಿದ ಚೆಂಡು ಐದು ವರ್ಷದಲ್ಲ. ಅದರ ಸಾಧ್ಯತೆ ತುಂಬಾ ಕಡಿಮೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ಅಂಪೈರ್‌ಗಳು ಬದಲಿಸುವ ಚೆಂಡಿನ ಮೇಲೆ ದಿನಾಂಕದ ಮುದ್ರೆ ಇರುತ್ತದೆ. ಯಾರೂ ಕೂಡ ಅಷ್ಟು ವರ್ಷಗಳ ಹಳೆಯ ಚೆಂಡನ್ನು ಬಳಸುವುದಿಲ್ಲ ಎಂದಿದ್ದಾರೆ. ಅಲ್ಲದೇ ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಈ ವಿವಾದದ ಬಗ್ಗೆ ನಾನೇ ತನಿಖೆ ಮಾಡುತ್ತೇನೆ. ಇಲ್ಲವಾದರೆ ನನ್ನ ಹೆಸರಿಗೆ ಧಕ್ಕೆಯುಂಟಾಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ನಮ್ಮ ದೇಶದ ಸೈನಿಕರನ್ನು ಹತ್ಯೆ ಮಾಡಿದ್ದಾರೆ: ಓವೈಸಿ ಕಿಡಿ

    ನಿರ್ದಿಷ್ಟ ಋತುವಿನಲ್ಲಿ ನಾವು ತಯಾರಿಸುವ ಚೆಂಡಿನ ಮೇಲೆ ದಿನಾಂಕದ ಮುದ್ರೆ ಹಾಕಿರುತ್ತೇವೆ. ಆಶಸ್ ಟೂರ್ನಿಯಲ್ಲಿ ಬಳಸಲಾದ ಚೆಂಡಿನ ಮೇಲೂ 2023 ರಂದು ಗುರುತಿಸಲಾಗಿದೆ. ನಾವು ಚೆಂಡುಗಳನ್ನ ಗ್ರೌಂಡ್‌ಗಳಿಗೆ ಪೂರೈಕೆ ಮಾಡುತ್ತೇವೆ. ಆದ್ರೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಗಲಿ, ಐಸಿಸಿ ಆಗಲಿ ಬಾಲ್‌ಗಳನ್ನ ಕಂಟ್ರೋಲ್ ಮಾಡೋದಿಲ್ಲ. ಕ್ರೀಡಾ ಪ್ರಾಧಿಕಾರ ಇದನ್ನ ನೋಡಿಕೊಳ್ಳುತ್ತೆ. ಗ್ರೌಂಡ್‌ಗೆ ಪೂರೈಕೆ ಮಾಡಿದ ಬಳಿಕ ಪರಿಶೀಲಿಸುವಾಗ ಅನುಮಾನ ಬಂದರೆ ಮೇಲ್ಪದರವನ್ನ ಪರಿಶೀಲಿಸುವ ಅಧಿಕಾರ ಕ್ರೀಡಾಪ್ರಾಧಿಕಾರಕ್ಕಿದೆ. ಆದ್ರೆ ಆ ಕೆಲಸವನ್ನ ಸರಿಯಾಗಿ ಮಾಡಿದ್ದಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಇದು ನಮ್ಮಿಂದಾಗಿರುವ ತಪ್ಪಲ್ಲ. ಆದ್ರೂ ಈ ಬಗ್ಗೆ ಸ್ವತಃ ತನಿಖೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    5 ವರ್ಷಗಳ ಹಳೆಯ ಬಾಲ್ ಬಳಕೆ ಆರೋಪ:
    ಚೆಂಡು ಬದಲಾದ ನಂತರ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ಈ ಕುರಿತು ವರದಿ ಪ್ರಕಟಿಸಿದ್ದವು. ಅಂಪೈರ್?ಗಳು ಬಳಸಿದ ಚೆಂಡು ತುಂಬಾ ಹಳೆಯದ್ದು. ಆನ್‌ಫೀಲ್ಡ್‌ ಅಂಪೈರ್‌ಗಳು ಬಲಿಸಿದ ಚೆಂಡು, 5 ವರ್ಷಗಳ ಹಿಂದಿನ ಹಳೆಯ ಡ್ಯೂಕ್ಸ್ ಬಾಲ್. 2018 ಅಥವಾ 2019ರಲ್ಲಿ ತಯಾರಿಸಿದ ಈ ಚೆಂಡು ಇದಾಗಿದೆ. ಕಾರಣ ಹೆಚ್ಚಿನ ಪ್ರಮಾಣದಲ್ಲಿ ಚೆಂಡು ಸ್ವಿಂಗ್ ಆಗುತ್ತಿತ್ತು ಎಂದು ವರದಿಯಾಗಿತ್ತು. ಇದನ್ನೂ ಓದಿ: Chandrayaan-3: ಭೂಮಿಯಿಂದ ಹಾರಿದ 22 ದಿನಗಳ ಬಳಿಕ ಚಂದ್ರನ ಕಕ್ಷೆ ಸೇರಿದ ಚಂದ್ರಯಾನ-3 ನೌಕೆ

    ಐಸಿಸಿ ಸ್ಪಷ್ಟನೆ ಏನು?
    ಈ ವಿವಾದದಿಂದ ಅಂಪೈರ್‌ಗಳ ಮೇಲೆ ಪ್ರಶ್ನೆ ಎದ್ದಿದೆ. ಅಂಪೈರ್?ಗಳದ್ದೇ ತಪ್ಪು ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಹಾಗಾಗಿ ಇದಕ್ಕೆ ಐಸಿಸಿ ಸ್ಪಷ್ಟನೆ ನೀಡಿದೆ. ಪಂದ್ಯದ ಮೊದಲೇ ಚೆಂಡನ್ನು ಆಯ್ಕೆ ಮಾಡಲಾಗುತ್ತದೆ. ಚೆಂಡು ಆಯ್ಕೆಯ ವಿಚಾರದಲ್ಲಿ ಅಂಪೈರ್?ಗಳದ್ದೇ ನಿರ್ಧಾರ. ಒಂದು ವೇಳೆ ಬದಲಿಸುವಾಗ ಈ ಹಿಂದಿನ ಚೆಂಡಿನಂತೆಯೇ ಇರುವ ಚೆಂಡನ್ನು ಆಯ್ಕೆ ಮಾಡಿದರೆ ಅದು ಸಹ ಅಂಪೈರ್‌ಗಳ ತೀರ್ಮಾನಕ್ಕೆ ಬಿಟ್ಟಿರುತ್ತದೆ. ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಐಸಿಸಿ ಸ್ಪಷ್ಟನೆ ನೀಡಿದೆ.

    37ನೇ ಓವರ್‌ನಲ್ಲಿ ನಡೆದಿದ್ದೇನು?
    ಆಶಸ್ ಟೂರ್ನಿ 5ನೇ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಇನ್ನಿಂಗ್ಸ್‌ನ 37ನೇ ಓವರ್‌ನಲ್ಲಿ ಚೆಂಡನ್ನು ಬದಲಾವಣೆ ಮಾಡಲಾಗಿತ್ತು. ಇಂಗ್ಲೆಂಡ್ ವೇಗಿ ಮಾರ್ಕ್ವುಡ್ ಬೌಲಿಂಗ್‌ನಲ್ಲಿ ಚೆಂಡು ಎಡಗೈ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಹೆಲ್ಮೆಟ್‌ಗೆ ಬಡಿದಿತ್ತು. ಈ ಹೊಡೆತಕ್ಕೆ ಚೆಂಡಿನ ಆಕಾರವೇ ಬದಲಾಗಿತ್ತು. ಹಾಗಾಗಿ ಫೀಲ್ಡ್ ಅಂಪೈರ್‌ಗಳು ಚೆಂಡು ಬದಲಿಸಲು ತೀರ್ಮಾನಿಸಿದರು. ಚೆಂಡು ಬದಲಾದ ನಂತರ ಆಸಿಸ್ ಬ್ಯಾಟರ್‌ಗಳು ಒಬ್ಬೊಬ್ಬರಾಗಿ ವಿಕೆಟ್ ಒಪ್ಪಿಸಿದರು. ಕೊನೆಯದಾಗಿ ಇಂಗ್ಲೆಂಡ್ 49 ರನ್ ಗಳಿಂದ ಆಸಿಸ್ ತಂಡವನ್ನ ಮಣಿಸಿ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟೆಸ್ಟ್ ಸರಣಿಯನ್ನ 2-2 ಅಂತರದಲ್ಲಿ ಸಮಬಲ ಸಾಧಿಸಿತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ಬ್ಯಾಟರ್‌ ನಿವೃತ್ತಿ ಘೋಷಣೆ

    T20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ಬ್ಯಾಟರ್‌ ನಿವೃತ್ತಿ ಘೋಷಣೆ

    ಲಂಡನ್‌: ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ (T20 WorldCup) ಟೂರ್ನಿಯ ಪ್ಲೇ ಆಫ್‌ ಸುತ್ತಿನಲ್ಲಿ ಟೀಂ ಇಂಡಿಯಾ ಹೀನಾಯ ಸೋಲಿಗೆ ಕಾರಣವಾಗಿದ್ದ ಇಂಗ್ಲೆಂಡ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಅಲೆಕ್ಸ್‌ ಹೇಲ್ಸ್‌ (Alex Hales)ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.


    34 ವರ್ಷದ ಕ್ರಿಕೆಟಿಗ ಅಲೆಕ್ಸ್‌ ಹೇಲ್ಸ್‌ 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇಂಗ್ಲೆಂಡ್‌ (England) ತಂಡದಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ ಆಗಿ ಗುರುತಿಸಿಕೊಂಡಿದ್ದರು. ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ 156 ಪಂದ್ಯಗಳನ್ನಾಡಿರುವ ಹೇಲ್ಸ್‌ 5,066 ರನ್‌ಗಳನ್ನ ಪೂರೈಸಿದ್ದಾರೆ. ಇದರಲ್ಲಿ 7 ಶತಕಗಳು, 578 ಬೌಂಡರಿ ಹಾಗೂ 123 ಸಿಕ್ಸರ್‌ ಒಳಗೊಂಡಿದೆ. ಏಕದಿನ ಕ್ರಿಕೆಟ್‌ನಲ್ಲಿ 37.79 ಸರಾಸರಿಯಲ್ಲಿ 2,419 ರನ್‌, ಟಿ20 ಕ್ರಿಕೆಟ್‌ನಲ್ಲಿ 2,000 ರನ್‌ ಪೂರೈಸಿದ್ದಾರೆ. ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    2014ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ಮೊದಲ ಇಂಗ್ಲೆಂಡ್‌ ಬ್ಯಾಟ್ಸ್‌ಮ್ಯಾನ್‌ ಎನಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನವೇ ನಿವೃತ್ತಿ ಘೋಷಣೆ ಮಾಡಿರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

    2015-16ರ ಅವಧಿಯಲ್ಲಿ 11 ಟೆಸ್ಟ್‌ ಪಂದ್ಯಗಳನ್ನಾಡಿರುವ ಹೇಲ್ಸ್‌ 27.28 ಸರಾಸರಿಯಲ್ಲಿ ಬ್ಯಾಟಿಂಗ್‌ ಮಾಡಿ 5 ಅರ್ಧಶತಕ ಗಳಿಸಿದ್ದರು. 2016-17ರಿಂದ ರೆಡ್‌ಬಾಲ್‌ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು.

    ಕಳೆದ ವರ್ಷ ಟಿ20 ವಿಶ್ವಕಪ್‌ ಪ್ಲೇ ಆಫ್‌ ಸುತ್ತಿನಲ್ಲಿ ಟೀಂ ಇಂಡಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು. ಜೋಸ್‌ ಬಟ್ಲರ್‌ ಜೊತೆಗೂಡಿದ ಅಲೆಕ್ಸ್‌ ಹೇಲ್ಸ್‌ 86 ರನ್‌ (47 ಎಸೆತ, 4 ಬೌಂಡರಿ, 7 ಸಿಕ್ಸರ್‌) ಚಚ್ಚಿ ಇಂಗ್ಲೆಂಡ್‌ಗೆ 10 ವಿಕೆಟ್‌ಗಳ ಜಯವನ್ನು ತಂದುಕೊಟ್ಟಿದ್ದರು. ಇದನ್ನೂ ಓದಿ: IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್‌ ಪಡೆ – ವಿಂಡೀಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ವಿಶ್ವದ ಅತಿಸಣ್ಣ ದೇಶ ಯಾವ್ದು..? ಎಲ್ಲಿದೆ ಗೊತ್ತಾ..? – ಅಚ್ಚರಿಯಾದ್ರೂ ಇದು ನಿಜ!

    ನಸಂಖ್ಯೆಯಲ್ಲೀಗ ಭಾರತ ನಂ.1 ರಾಷ್ಟ್ರ. ಈಗ್ಲೂ ದೇಶದ ಹಲವೆಡೆ ಅವಿಭಕ್ತ ಕುಟುಂಬಗಳು ನೆಲೆ ನಿಂತಿರೋದು ವಿಶೇಷ. ಇಂತಹ ಕುಟುಂಬಗಳಲ್ಲಿ ಕನಿಷ್ಠ ಅಂದ್ರೂ 15 ರಿಂದ 30 ಸದಸ್ಯರನ್ನ ನಾವು ಕಾಣ್ತೇವೆ. ಆದ್ರೆ ಇಲ್ಲೊಂದು ಒಂದು ದೇಶವಿದೆ, ಅಲ್ಲಿನ ಒಟ್ಟು ಜನಸಂಖ್ಯೆ, ವಿಸ್ತೀರ್ಣವನ್ನ ಕೇಳಿದ್ರೆ ಒಂದು ಅವಿಭಕ್ತ ಕುಟುಂಬದ ಜನಸಂಖ್ಯೆಗಿಂತಲೂ ಹೆಚ್ಚೇನು ಇಲ್ಲ ಅನ್ನೋದು ಅಚ್ಚರಿ. ಯಾವ್ದು ಆ ದೇಶ? ಎಲ್ಲಿದೆ ಆ ದೇಶ? ಅಲ್ಲಿನ ವಿಶೇಷತೆಯಾದ್ರೂ ಏನೂ? ನೋಡೋಣ ಬನ್ನಿ…..

    ವಿಶ್ವದ ಅತಿಸಣ್ಣ ದೇಶ (Smallest Country) ಯಾವ್ದು ಅಂದ್ರೆ ವ್ಯಾಟಿಕನ್ ಸಿಟಿ ಅಂತಾರೆ. ಆದ್ರೆ ಅದಕ್ಕಿಂತಲೂ ಚಿಕ್ಕ ದೇಶವೊಂದಿದೆ. ಅದುವೇ ಸೀ ಲ್ಯಾಂಡ್ (ಪ್ರಿನ್ಸಿಪಾಲಿಟಿ ಆಫ್ ಸೀ ಲ್ಯಾಂಡ್ (Principality of Sealand) ಅಂತಲೂ ಕರೆಯುತ್ತೇವೆ). ತನ್ನದೇ ಕರೆನ್ಸಿ, ನ್ಯಾಷನಲ್ ಫ್ಲ್ಯಾಗ್, ಪಾಸ್‌ಪೋರ್ಟ್ ಒಳಗೊಂಡಿರೋ ಈ ದೇಶ ನಿರ್ಮಾಣ ಆಗಿರೋದು ಪಾಳುಬಿದ್ದಿರುವ ಎರಡು ಟವರ್‌ಗಳ ಮೇಲೆ. ಇಂಗ್ಲೆಂಡ್‌ನ (England) ಸೊಫೋಕ್ಲೆಸ್ ಕರಾವಳಿಯಿಂದ ಸುಮಾರು 10 ಕಿ.ಮೀ ದೂರದಲ್ಲಿರೋ ದೇಶದಲ್ಲಿ ವಾಸಿಸುತ್ತಿರೋದು ಕೇಲವ 27 ಜನ ಮಾತ್ರ. 2ನೇ ವಿಶ್ವಯುದ್ಧದ (2nd World War) ಸಂದರ್ಭದಲ್ಲಿ ಬ್ರೀಟಿಷರಿಂದ ಸ್ಥಾಪಿಸಲ್ಪಟ್ಟ ಈ ದೇಶ ಇಂದಿಗೂ ಅಸ್ತಿತ್ವದಲ್ಲಿದ್ದು, ಮೈಕ್ರೋ ನೇಷನ್ ಅಂತಾನೇ ಫೇಮಸ್ ಆಗಿದೆ. ಆದ್ರೆ ಇದಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ ಸಿಕ್ಕಿಲ್ಲ.

    ಮೈಕ್ರೋ ನೇಷನ್ ನಿರ್ಮಾಣವಾಗಿದ್ದು ಹೇಗೆ..?
    2ನೇ ವಿಶ್ವ ಮಹಾಯುದ್ಧದ ವೇಳೆಗೆ ಹತ್ತಿರವಿರುವಾಗ ಅಂದ್ರೆ 1943ರ ಅವಧಿಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರ ನಿರ್ಮಾಣ ಈ ಸೀ ಲ್ಯಾಂಡ್ ಅನ್ನ ನಿರ್ಮಾಣ ಮಾಡಿತು. ಆಗ ಸೈನ್ಯ ಮತ್ತು ನೌಕಾಪಡೆಯ ಭದ್ರ ಕೋಟೆಯನ್ನಾಗಿ ಬಳಸಲು ಈ ಸೀ ಲ್ಯಾಂಡ್ ಅನ್ನ ಸಮುದ್ರದ ಮಧ್ಯೆ ಸ್ಥಾಪಿಸಲಾಯಿತು. ಈ ಪಾಳುಬಿದ್ದ ಗೋಪುರಗಳ ಮೇಲಿರುವ ಭೂಮಿಯನ್ನ ರಫ್ ಟವರ್ ಅಂತಾ ಕರೀತಾರೆ. ಮಹಯುದ್ಧದ ಸಂದರ್ಭದಲ್ಲಿ ಬ್ರಿಟನ್ ಹಿಡಿತ ಸಾಧಿಸುವಲ್ಲಿ ಈ ಸೀ ಲ್ಯಾಂಡ್ ಮಾರ್ಗ ಯಶಸ್ವಿ ಪ್ರಯೋಗವಾಯ್ತು. ವಿಶ್ವ ಮಹಾಯುದ್ಧ ಮುಗಿದ ಬಳಿಕ ಈ ಕೋಟೆಯನ್ನ ಕೆಡೆವಲು ನಿರ್ಧರಿಸಲಾಯಿತು. ನಂತರ ಇದು ಸ್ವತಂತ್ರವಗಿ ದೇಶವೆಂದು ಘೋಷಿಸಿಕೊಂಡಿತು. ಇದನ್ನೂ ಓದಿ: ಕ್ರೀಡೆಗೆ ಸೌದಿ ಕೋಟಿ ಕೋಟಿ ಹೂಡಿಕೆ ಮಾಡುತ್ತಿರುವುದು ಯಾಕೆ?

    ರಫ್ ಟವರ್ ಅನ್ನ 1965 ರಲ್ಲಿ ಜ್ಯಾಕ್ ಮೂರ್ ಮತ್ತು ಮಗಳು ಜೇನ್ ವಶಪಡಿಸಿಕೊಂಡಿದ್ದರು. 1967 ರಲ್ಲಿ ಈ ಸ್ಥಳವನ್ನ ಬ್ರಿಟಿಷ್ ಮೇಜರ್ ಪ್ಯಾಡಿ ರಾಯ್ ಬೇಟ್ಸ್ ತಮ್ಮ ತೆಕ್ಕೆಗೆ ತೆಗೆದುಕೊಂಡ್ರು. ಪ್ಯಾಡಿ ರಾಯ್ ಬೇಟ್ಸ್ ದರೋಡೆಕೋರರ ಗುಂಪಿನೊಂದಿಗೆ ಗುರುತಿಸಿಕೊಂಡಿದ್ರು. ಈ ಟವರ್ ಅನ್ನು ವಶಪಡಿಸಿಕೊಂಡು ಕಡಲುಗಳ್ಳರಿಗಾಗಿ ರೇಡಿಯೊ ಕೇಂದ್ರವೊಂದನ್ನ ತೆರೆದಿದ್ರು. ರೇಡಿಯೋ ಎಸ್ಸೆಕ್ಸ್ ಎಂಬ ಹೆಸರಿನಲ್ಲಿ ಇದನ್ನು ಆರಂಭಿಸಿದ್ರೂ, ಅಲ್ಲಿ ಯಾವ್ದೇ ಕಾರ್ಯಕ್ರಮ ಪ್ರಸಾರ ಪ್ರಾರಂಭಿಸಲಾಗಿರಲಿಲ್ಲ. ಸೀ ಲ್ಯಾಂಡ್ ಇಂಟರ್ ನ್ಯಾಷನಲ್ ಗಡಿ ನೀರಿನಲ್ಲಿ ನಿರ್ಮಾಣಗೊಂಡಿದ್ದರಿಂದ ಬಿಬಿಸಿಯೊಂದೇ ಅಧಿಕೃತವಾಗಿತ್ತು.

    ಕೆಲ ವರ್ಷಗಳ ನಂತರ ಬೇಟ್ಸ್ ರಫ್ ಟವರ್ ಅನ್ನು ಸ್ವತಂತ್ರ ಪ್ರದೇಶವೆಂದು ಘೋಷಿಸಿಕೊಂಡ ಬಳಿಕ ಸೀ ಲ್ಯಾಂಡ್ ದೇಶ ಎಂದು ಪರಿಗಣಿಸಲಾಯಿತು. 2ನೇ ಮಹಾಯುದ್ಧದ ವೇಳೆ ಬ್ರಿಟಿಷ್ ಸೈನ್ಯದಲ್ಲಿ ಪ್ಯಾಡಿ ರಾಯ್ ಬೇಟ್ಸ್ 1975 ರಲ್ಲಿ ಸೀ ಲ್ಯಾಂಡ್‌ಗಾಗಿ ಸಂವಿಧಾನ ಹಾಗೂ ರಾಷ್ಟ್ರ ಗೀತೆಯೊಂದನ್ನ ಪರಿಚಯಿಸಿದ್ರು. ಅಷ್ಟೇ ಅಲ್ಲ ರಾಷ್ಟ್ರ ಧ್ವಜ, ರಾಷ್ಟ್ರಗೀತೆ, ಕರೆನ್ಸಿ ಹಾಗೂ ಪಾಸ್‌ಪೋರ್ಟ್ ಸಹ ರೂಪಿಸಿದರು. ಇಂದಿಗೂ ಅದು ಅನ್ವಯವಾಗಿದೆ. ಬೇಟ್ಸ್ 2012ರ ಅಕ್ಟೋಬರ್ 9 ರಂದು ತಾನು ಸೀ ಲ್ಯಾಂಡಿನ ರಾಜ ಅಂತ ಘೋಷಿಸಿಕೊಂಡರು. ರಾಯ್ ಬೇಟ್ಸ್ ಮರಣದ ನಂತರ ಅವರ ಮಗ ಮೈಕೆಲ್ ಬೇಟ್ಸ್ ತಮ್ಮ ತಂದೆಯ ಸ್ಥಾನವನ್ನ ಅಲಂಕರಿಸಿಕೊಂಡರು. ಸದ್ಯ ಪ್ರಿನ್ಸ್ ಲಿಯಾಮ್ ಹಾಗೂ ಪ್ರಿನ್ಸ್ ಜೇಮ್ಸ್ ಅವಳಿ ಬ್ರದರ್ಸ್ ಇದನ್ನ ನೋಡಿಕೊಳ್ತಿದ್ದಾರೆ.

    ಅಕ್ರಮ ಪ್ರವೇಶ ಮಾಡಿದ್ರೆ 3 ತಿಂಗಳು ಜೈಲು ಗ್ಯಾರಂಟಿ!
    ಇಂಗ್ಲೆಂಡ್‌ನ ಉತ್ತರ ಸಮುದ್ರದಲ್ಲಿ ಕೇವಲ 550 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಮೈಕ್ರೋ ನೇಷನ್‌ನಲ್ಲಿ ಸಾಕಷ್ಟು ವಿಶೇಷತೆಗಳನ್ನ ಕಾಣ್ಬೋದು. 27 ಜನಸಂಖ್ಯೆಯನ್ನ ಹೊಂದಿರೋ ಈ ದೇಶ ಭದ್ರತೆಗೋಸ್ಕರ ತನ್ನದೇ ಪುಟ್ಟ ಸೇನೆಯನ್ನ ಒಳಗೊಂಡಿದೆ. ನೀರಿನ ಮಧ್ಯೆಯಿದ್ದರೂ ಸಮುದ್ರದ ಅಲೆಗಳ ಹೊಡೆತವನ್ನ ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆ. ಈ ದೇಶಕ್ಕೆ ಹೋಗ್ಬೇಕು ಅಂದ್ರೆ ಸ್ಪೆಷಲ್ ಪರ್ಮಿಷನ್ ಬೇಕಂತೆ. ಲಂಡನ್‌ನಿಂದ ಸುಮಾರು 2 ಗಂಟೆ ಪ್ರಯಾಣ ಬೆಳೆಸಿದ್ರೆ ಮೈಕ್ರೋ ನೇಷನ್‌ನ ಈಸಿಯಾಗಿ ಸೇರ್ಬೋದು. ಇದನ್ನೂ ಓದಿ: ಭೂಮಿಗೆ ಅಪ್ಪಳಿಸಿದ ‘ಫೈರ್‌ಬಾಲ್‌’; ಇದು ಅನ್ಯಗ್ರಹ ತಂತ್ರಜ್ಞಾನವೇ? – ಅಮೆರಿಕ ವಿಜ್ಞಾನಿ ಹೇಳಿದ್ದೇನು?

    ಇಲ್ಲಿನ ವಿಶೇಷತೆ ನೋಡೊದಾದ್ರೆ ಪಾಳುಬಿದ್ದಂತೆ ಕಾಣುವ ಈ ಎರಡು ಟವರ್‌ಗಳ ಒಳಗೆಯೇ 7 ಬೆಡ್‌ರೂಮ್ ಇವೆ. ಜೊತೆಗೆ ಅಡುಗೆ ಮನೆ, ಲಿವಿಂಗ್ ರೂಂ, ಮಿನಿ ಸ್ಟಡಿ ಹಾಲ್, ಜಿಮ್ ಕೊಠಡಿ, ಸ್ಫೋರ್ಟ್ಸ್ ರೂಮ್, ಜೈಲನ್ನೂ ಒಳಗೊಂಡಿದೆ. ಸೋಲಾರ್ ಶಕ್ತಿಯಿಂದಲೇ ಇಲ್ಲಿಗೆ ವಿದ್ಯುತ್ ಸೌಲಭ್ಯ ಸಿಗುತ್ತೆ. 24*7 ಭದ್ರತಾ ಸಿಬ್ಬಂದಿಯೂ ಇರ್ತಾರೆ. ಇಲ್ಲಿಗೆ ಬರುವವರಿಗೆ ಪಾಸ್‌ಪೋರ್ಟ್ ಕಡ್ಡಾಯಗೊಳಿಸಿರುವ ದೇಶ ಕೋವಿಡ್ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನೂ ಕಡ್ಡಾಯಗೊಳಿಸಿದೆ. ಅನುಮತಿ ಇಲ್ಲದೇ ಎಂಟ್ರಿ ಕೊಟ್ರೆ 3 ತಿಂಗಳು ಜೈಲು ಶಿಕ್ಷೆಗೆ ಗುರಿಯಾಗೋದಂತೂ ಗ್ಯಾರಂಟಿ.

    ಸೀ ಲ್ಯಾಂಡ್‌ನ ಜನಸಂಖ್ಯೆ ಹೆಚ್ಚಿಸೋದಕ್ಕಾಗಿ ಅವಳಿ ಬ್ರದರ್ಸ್ ಸದ್ಯದಲ್ಲೇ ಆನ್‌ಲೈನ್‌ನಲ್ಲಿ ಪೌರತ್ವ ನೀಡುವ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದ್ದಾರೆ. ಜೊತೆಗೆ ಡಿಜಿಟಲ್ ಕರೆನ್ಸಿಯನ್ನೂ ಜಾರಿಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಆದ್ರೆ ಇಂದಿಗೂ ಇದನ್ನ ಯುಕೆ ಸರ್ಕಾರವಾಗ್ಲಿ, ವಿಶ್ವ ಸಂಸ್ಥೆಯಾಗ್ಲಿ ಅಧಿಕೃತ ದೇಶವೆಂದು ಪರಿಗಣಿಸಿಲ್ಲ, ಅದಕ್ಕೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಅಂತಾ ಅವಳಿ ಬ್ರದರ್ಸ್ ಹೇಳಿದ್ದಾರೆ.

    ಕಳೆದ 54 ವರ್ಷಗಳಿಂದ, ಇದು ಯುನೈಟೆಡ್ ಕಿಂಗ್‌ಡಮ್ ಸರ್ಕಾರದ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಸೀ ಲ್ಯಾಂಡ್ ಅಂತಾರಾಷ್ಟ್ರೀಯವಾಗಿ ದೇಶವೆಂದು ಗುರುತಿಸಲ್ಪಟ್ಟಿಲ್ಲ. ಆದ್ರೆ ಪ್ರಪಂಚದ ಉಳಿದ ದೇಶಗಳಂತೆ ಸ್ವಂತ ಕರೆನ್ಸಿ ಮತ್ತು ಅಂಚೆ ಚೀಟಿಗಳನ್ನ ಹೊಂದಿರುವುದು ವಿಶೇಷ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ICC ODI WorldCup: ಈ ನಾಲ್ಕು ತಂಡಗಳು ಸೆಮಿಫೈನಲ್‌ ಪ್ರವೇಶಿಲಿವೆ – ಸೆಹ್ವಾಗ್‌ ಭವಿಷ್ಯ

    ICC ODI WorldCup: ಈ ನಾಲ್ಕು ತಂಡಗಳು ಸೆಮಿಫೈನಲ್‌ ಪ್ರವೇಶಿಲಿವೆ – ಸೆಹ್ವಾಗ್‌ ಭವಿಷ್ಯ

    – ಕೊಹ್ಲಿಗಾಗಿ ಟೀಂ ಇಂಡಿಯಾ ಹೋರಾಡಲಿದೆ
    – ಭಾರತ – ಪಾಕ್‌ ಪಂದ್ಯಕ್ಕಾಗಿ ಕಾಯುತ್ತಿದ್ದೇನೆ ಎಂದ ಸೆಹ್ವಾಗ್‌

    ಮುಂಬೈ: ಐಸಿಸಿ ಏಕದಿನ ವಿಶ್ವಕಪ್‌ (ICC WorldCup 2023) ವೇಳಾಪಟ್ಟಿ ಪ್ರಕಟವಾದ ಬೆನ್ನಲ್ಲೇ ಈ ಬಾರಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ (Virender Sehwag) ಭವಿಷ್ಯ ನುಡಿದಿದ್ದಾರೆ.

    1987 ಮತ್ತು 1996ರಲ್ಲಿ ಭಾರತ-ಪಾಕಿಸ್ತಾನ (India – Pakistan) ಮತ್ತು 2011ರಲ್ಲಿ ಭಾರತ-ಬಾಂಗ್ಲಾದೇಶ ಜಂಟಿಯಾಗಿ ಆತಿಥ್ಯ ವಹಿಸಿದೆ. ಆದ್ರೆ ಇಂಗ್ಲೆಂಡ್‌ 4 ಬಾರಿ ಸ್ವತಃ ಆತಿಥ್ಯ ವಹಿಸಿದ್ದು, 2019ರಲ್ಲಿ ವೇಲ್ಸ್‌ನೊಂದಿಗೆ ಜಂಟಿ ಆತಿಥ್ಯ ವಹಿಸಿತ್ತು. ಟೀಂ ಇಂಡಿಯಾ (Team India) ಇದೇ ಮೊದಲಬಾರಿಗೆ ಏಕಾಂಗಿಯಾಗಿ ಆತಿಥ್ಯ ವಹಿಸಿಕೊಂಡಿದ್ದು, ತವರಿನಲ್ಲೇ ಟ್ರೋಫಿಗೆಲ್ಲುವ ತವಕದಲ್ಲಿದೆ. ಇದನ್ನೂ ಓದಿ: ICC ODI World Cup: ಪಾಕ್ ಪಂದ್ಯಗಳಿಗೆ ಬಿಗಿ ಭದ್ರತೆ ನೀಡ್ತೇವೆ – ಬಂಗಾಳ ಕ್ರಿಕೆಟ್‌

    ಆ ದಿನಕ್ಕಾಗಿ ಕಾದಿರುವೆ:
    ಮುಂದುವರಿದು ಮಾತನಾಡಿ, ಆದಿನ ಏನಾಗುತ್ತೆ ಅನ್ನೋದು ನಿಜಕ್ಕೂ ನನಗೆ ಗೊತ್ತಿಲ್ಲ. ಆದ್ರೆ ಒತ್ತಡ ನಿಭಾಯಿಸುವ ತಂಡಕ್ಕೆ ಯಶಸ್ಸು ಒಲಿಯುವುದು ನಿಶ್ಚಿತ. ಭಾರತ ತಂಡ ಖಂಡಿತವಾಗಿಯೂ ಅಂತಹ ಒತ್ತಡ ನಿಭಾಯಿಸಿ ಗೆಲುವು ದಾಖಲಿಸಲಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡ ಈವರೆಗೆ ವಿಶ್ವಕಪ್‌ನಲ್ಲಿ ಭಾರತದ ಎದುರು ಗೆದ್ದಿಲ್ಲ. 1990ರ ಸಮಯದಲ್ಲಿ ಪಾಕಿಸ್ತಾನ ತಂಡ ಒತ್ತಡ ನಿಭಾಯಿಸಿ ಪಂದ್ಯಗಳನ್ನ ಗೆಲ್ಲುವುದರಲ್ಲಿ ನಿಸ್ಸೀಮವಾಗಿತ್ತು. 2000 ಇಸವಿಯ ನಂತರ ಭಾರತ ಆ ಸ್ಥಿತಿಗೆ ತಲುಪಿದೆ ಆದ್ದರಿಂದ ಆ ದಿನವನ್ನು ಕಾದು ನೋಡಬೇಕು ಎಂದು ಸೆಹ್ವಾಗ್‌ ತಿಳಿಸಿದ್ದಾರೆ.

    ಕೊಹ್ಲಿಗಾಗಿ ಹೋರಾಡಲಿದ್ದಾರೆ:
    ಭಾರತ ತಂಡ 2011ರಲ್ಲಿ ಕೊನೇ ಬಾರಿಗೆ ಏಕದಿನ ವಿಶ್ವಕಪ್‌ ಟ್ರೋಫಿ ಗೆದ್ದು ಬೀಗಿತ್ತು. ಅಂದು ಟೀಂ ಇಂಡಿಯಾ ಆಟಗಾರರು ಸಚಿನ್‌ ತೆಂಡೂಲ್ಕರ್‌ ಸಲುವಾಗಿ ವಿಶ್ವಕಪ್‌ ಗೆಲ್ಲುವ ಪಣತೊಟ್ಟು ಆಡಿದ್ದರು. ಈ ಬಾರಿ ಭಾರತ ತಂಡದ ಆಟಗಾರರು ವಿರಾಟ್‌ ಕೊಹ್ಲಿಗಾಗಿ ಕಪ್‌ ಗೆದ್ದು ಕೊಡಲು ಹೋರಾಟಲಿದ್ದಾರೆ. ಆಟಗಾರರ ಮನದಲ್ಲಿ ಅದೇ ಭಾವನೆ ಕಾಣಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ Vs ಐರ್ಲೆಂಡ್‌ T20 ಸರಣಿಗೆ ವೇಳಾಪಟ್ಟಿ ಪ್ರಕಟ – ಇಲ್ಲಿದೆ ಡಿಟೇಲ್ಸ್‌

    ಕೊಹ್ಲಿ ಅಬ್ಬರಿಸೋದು ಖಚಿತ:
    ವಿರಾಟ್‌ ಕೊಹ್ಲಿ ವಿಶ್ವಕಪ್‌ ಟೂರ್ನಿಯಲ್ಲಿ ಅಬ್ಬರಿಸಲು ಕಾಯ್ತಿದ್ದಾರೆ. ಅಹಮದಾಬಾದ್‌ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಆಟ ವೀಕ್ಷಣೆ ಮಾಡಬಹುದಾಗಿದೆ. ಅಲ್ಲಿನ ಪಿಚ್‌ ಹೇಗಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಖಂಡಿತಾ ಅವರು ಹೆಚ್ಚು ರನ್‌ ಗಳಿಸುತ್ತಾರೆ ಅನ್ನೋ ವಿಶ್ವಾಸ ನನಗಿದೆ. ಇನ್ನೂ ಎಲ್ಲರ ಕಣ್ಣು ಭಾರತ-ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯದ ಮೇಲಿದೆ. ನಾನು ಕೂಡ ಆ ಪಂದ್ಯವನ್ನೇ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    T20 ಕ್ರಿಕೆಟ್‌ನಲ್ಲಿ ಸಿಕ್ಸರ್‌ ಬ್ಲಾಸ್ಟ್‌ – ಒಂದೇ ಓವರ್‌ನಲ್ಲಿ 6,6,6,6,6 ಚಚ್ಚಿದ RCB ಸ್ಟಾರ್‌

    ಲಂಡನ್‌: RCB ತಂಡದ ಸ್ಟಾರ್‌ ಆಟಗಾರ ಹಾಗೂ ಇಂಗ್ಲೆಂಡ್‌ (England) ತಂಡದ ಆಲ್‌ರೌಂಡರ್‌ ಆಗಿರುವ ವಿಲ್ ಜ್ಯಾಕ್ಸ್ (Will Jacks) ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಒಂದೇ ಓವರ್‌ನಲ್ಲಿ 5 ಭರ್ಜರಿ ಸಿಕ್ಸರ್‌ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.

    2023ರ 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ (IPL 2023) ಆರ್‌ಸಿಬಿ ತಂಡದಲ್ಲಿ ಕಣಕ್ಕಿಳಿಯಬೇಕಿದ್ದ ವೀಲ್‌ ಜ್ಯಾಕ್ಸ್‌ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯಿಂದಲೇ ಹೊರಗುಳಿದರು. ಬಳಿಕ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟಿ20 ಬ್ಲಾಸ್ಟ್‌ ಟೂರ್ನಿಯಲ್ಲಿ ಸರ್ರೆ (Surrey) ತಂಡ ಪ್ರತಿನಿಧಿಸಿರುವ ಜ್ಯಾಕ್ಸ್‌ ಎದುರಾಳಿ ಮಿಡ್ಲ್‌ಎಸೆಕ್ಸ್‌ (Middlesex) ತಂಡದ ವಿರುದ್ಧ ಒಂದೇ ಓವರ್‌ನಲ್ಲಿ ಭರ್ಜರಿ 5 ಸಿಕ್ಸರ್‌ ಚಚ್ಚಿದರು.

    ಮಿಡ್ಲ್‌ಎಸೆಕ್ಸ್‌ ವಿರುದ್ಧದ ಪಂದ್ಯದಲ್ಲಿ 11ನೇ ಓವರ್‌ನಲ್ಲಿ ಲೂಕ್ ಹೋಲ್‌ಮನ್ ಬೌಲಿಂಗ್‌ಗೆ ಜ್ಯಾಕ್ಸ್ ಸತತ 5 ಸಿಕ್ಸರ್ ಸಿಡಿಸಿದರು. 6ನೇ ಎಸೆತವನ್ನ ಹೈ ಫುಲ್‌ ಟಾಸ್ ಹಾಕಿದ್ದರಿಂದ ಆ ಎಸೆತವನ್ನು ಎದುರಿಸುವಲ್ಲಿ ಜ್ಯಾಕ್ಸ್‌ ವಿಫಲರಾಗಿ, 6 ಎಸೆತಗಳಲ್ಲಿ 6 ಸಿಕ್ಸರ್‌ ಚಚ್ಚುವ ಅವಕಾಶದಿಂದ ವಂಚಿತರಾದರು. ಈ ಪಂದ್ಯದಲ್ಲಿ ಒಟ್ಟು 45 ಎಸೆತಗಳನ್ನ ಎದುರಿಸಿದ ಜ್ಯಾಕ್ಸ್‌ ಸ್ಫೋಟಕ 96 ರನ್‌ ಚಚ್ಚಿದರು. ಈಗಾಗಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹರ್ಷಲ್ ಗಿಬ್ಸ್, ವೆಸ್ಟ್‌ ಇಂಡೀಸ್ ತಂಡದ ಮಾಜಿ ನಾಯಕ ಕೀರನ್ ಪೊಲ್ಲಾರ್ಡ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. 2023ರ ಐಪಿಎಲ್‌ ಆವೃತ್ತಿಯಲ್ಲಿ ಕೆಕೆಆರ್‌ ತಂಡದ ಆಟಗಾರ ರಿಂಕು ಸಿಂಗ್‌ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಸಿಡಿಸಿ ಮಿಂಚಿದ್ದರು.

    16ನೇ ಆವೃತ್ತಿಯ ಐಪಿಎಲ್‌ನಲ್ಲಿ ಆಟಗಾರರ ಹರಾಜಿನ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು 3.2 ಕೋಟಿ ರೂ.ಗೆ ವಿಲ್‌ ಜ್ಯಾಕ್ಸ್‌ನನ್ನ ಖರೀದಿಸಿತ್ತು. ಆದ್ರೆ ಟೂರ್ನಿ ಆರಂಭಕ್ಕೂ ಮುನ್ನವೇ ವಿಲ್‌ ಜ್ಯಾಕ್ಸ್‌ ಸ್ನಾಯು ಸೆಳೆತ ಸಮಸ್ಯೆಗೆ ಒಳಗಾಗಿದ್ದರಿಂದ ಐಪಿಎಲ್ ಟೂರ್ನಿಯಿಂದಲೇ ಹೊರಗುಳಿದರು.

    ಚೇಸಿಂಗ್‌ ದಾಖಲೆ ಬರೆದ ಮಿಡ್ಲ್‌ಎಸೆಕ್ಸ್‌:
    ಟಿ20 ಬ್ಲಾಸ್ಟ್‌ ಕ್ರಿಕೆಟ್‌ನಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸರ್ರೆ ತಂಡ 20 ಓವರ್‌ಗಳಲ್ಲಿ 252 ರನ್‌ ಪೇರಿಸಿತ್ತು. ಈ ಗುರಿ ಬೆನ್ನತ್ತಿದ ಮಿಡ್ಲ್‌ಎಸೆಕ್ಸ್‌ ತಂಡ 19.2 ಓವರ್‌ಗಳಲ್ಲೇ 254 ರನ್‌ ಪೇರಿಸಿ ಗೆಲುವು ದಾಖಲಿಸಿತು. ಸಿಕ್ಸರ್‌, ಬೌಂಡರಿಗಳ ಆಟದಲ್ಲಿ 236 ಎಸೆತಗಳಲ್ಲಿ ಬರೋಬ್ಬರಿ 506 ರನ್‌ ಗಳು ದಾಖಲಾಯಿತು. ಅಲ್ಲದೇ ಟಿ20 ಕ್ರಿಕೆಟ್‌ ನಲ್ಲಿ ಚೇಸಿಂಗ್‌ನಲ್ಲಿ ಅತಿಹೆಚ್ಚು ರನ್‌ ಸಿಡಿಸಿದ ದಾಖಲೆಯನ್ನೂ ಮಿಡ್ಲ್‌ಎಸೆಕ್ಸ್‌ ತಂಡ ಬರೆಯಿತು.

  • ಓವರ್‌ಕಾನ್ಫಿಡೆನ್ಸ್‌ಗೆ ಇಂಗ್ಲೆಂಡ್‌ ಬಲಿ – ಕ್ರಿಕೆಟ್‌ ಅಭಿಮಾನಿಗಳಿಂದ ಫುಲ್‌ ಕ್ಲಾಸ್‌

    ಓವರ್‌ಕಾನ್ಫಿಡೆನ್ಸ್‌ಗೆ ಇಂಗ್ಲೆಂಡ್‌ ಬಲಿ – ಕ್ರಿಕೆಟ್‌ ಅಭಿಮಾನಿಗಳಿಂದ ಫುಲ್‌ ಕ್ಲಾಸ್‌

    ಬರ್ಮಿಂಗ್‌ಹ್ಯಾಮ್‌: ಆ್ಯಶಸ್ ಟೆಸ್ಟ್‌ ಸರಣಿಯ (Ashes Test Series) ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Australia) 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದ ಬೆನ್ನಲ್ಲೇ ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ (England) ತಂಡವನ್ನು ಟೀಕಿಸಲು ಆರಂಭಿಸಿದ್ದಾರೆ. ಅತಿಯಾದ ಆತ್ಮವಿಶ್ವಾಸಕ್ಕೆ (Overconfidence) ಇಂಗ್ಲೆಂಡ್‌ ತಂಡ ಬಲಿಯಾಗಿದೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಕ್ರಿಕೆಟ್‌ ಅಭಿಮಾನಿಗಳು ಇಂಗ್ಲೆಂಡ್‌ ತಂಡವನ್ನು ತರಾಟೆಗೆ ತೆಗೆದುಕೊಳ್ಳಲು ಕಾರಣವಿದೆ. ಗೆಲುವಿಗೆ 281 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 4ನೇ ದಿನದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 174 ರನ್‌ಗಳಿಸಿತ್ತು. ಕೊನೆಯ ದಿನ ಇನ್ನೂ 4.3 ಓವರ್‌ ಬಾಕಿ ಇರುವಂತೆ 8 ವಿಕೆಟ್‌ ಕಳೆದುಕೊಂಡು 282 ರನ್‌ ಹೊಡೆದು ರೋಚಕ ಜಯಗಳಿಸಿತು.

    ಕೊನೆಯಲ್ಲಿ ಅಲೆಕ್ಸ್‌ ಕ್ಯಾರಿ 20 ರನ್‌, ನಾಯಕ ಪ್ಯಾಟ್‌ ಕಮ್ಮಿನ್ಸ್‌ 44 ರನ್‌, ನಥನ್‌ ಲಿಯಾನ್‌ 16 ರನ್‌ ಸಾಹಸದಿಂದ ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿತು.

    ಮುಳುವಾಯಿತು ಅತಿಯಾದ ಆತ್ಮವಿಶ್ವಾಸ:
    ಇಂಗ್ಲೆಡ್‌ ತಂಡ 8 ವಿಕೆಟ್‌ ನಷ್ಟಕ್ಕೆ 393 ರನ್‌ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತ್ತು. ಡಿಕ್ಲೇರ್‌ ಮಾಡಿಕೊಳ್ಳುವ ವೇಳೆ ಜೋ ರೂಟ್‌ 118 ರನ್‌, ಒಲಿ ರಾಬಿನ್‌ಸನ್‌ 17 ರನ್‌ ಗಳಿಸಿ ಕ್ರೀಸ್‌ನಲ್ಲಿ ಇದ್ದರು.

    https://twitter.com/PrGo1976/status/1671403572104183808

    ಸಾಧಾರಣವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 500ಕ್ಕಿಂತಲೂ ಹೆಚ್ಚು ರನ್‌ ಗಳಿಸಿ ತಂಡಗಳು ಡಿಕ್ಲೇರ್‌ ಮಾಡಿಕೊಳ್ಳುತ್ತವೆ. ಆದರೆ ಇಂಗ್ಲೆಂಡ್‌ 393 ರನ್‌ಗಳಿಸಿದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಯಾಕೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  ಇದನ್ನೂ ಓದಿ: ಭಾರತ ತಂಡ ಪಾಕಿಸ್ತಾನಕ್ಕೆ ಬರದಿದ್ರೆ ನಾವೂ ಹೋಗಲ್ಲ – ಜಾವೆದ್‌ ಮಿಯಾಂದದ್‌

    ಜೋ ರೂಟ್‌ ಶತಕ ಬಾರಿಸಿ ಉತ್ತಮ ಆಟ ಆಡುತ್ತಿದ್ದರು. ರೂಟ್‌ ಮತ್ತು ಒಲಿ ರಾಬಿನ್‌ಸನ್‌ ಮುರಿಯದ 9ನೇ ವಿಕೆಟಿಗೆ 43 ರನ್‌ ಜೊತೆಯಾಟವಾಡಿದ್ದರು. ಉತ್ತಮ ಜೊತೆಯಾಟ ನಡೆಯುತ್ತಿದ್ದಾಗ ಮತ್ತು ಕಡಿಮೆ ಸ್ಕೋರ್‌ ಇದ್ದಾಗ ಡಿಕ್ಲೇರ್‌ ಮಾಡಿಕೊಂಡಿದ್ದು ಸರಿಯಲ್ಲ. ತವರು ನೆಲದಲ್ಲಿ ಕಡಿಮೆ ರನ್‌ಗಳಿಸಿದರೂ ಜಯಗಳಿಸುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸವೇ ಇಂಗ್ಲೆಂಡ್‌ ತಂಡವನ್ನು ಮುಳುಗಿಸಿದೆ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

    ಸಂಕ್ಷಿಪ್ತ ಸ್ಕೋರ್‌
    ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ 393/8 ಡಿಕ್ಲೇರ್‌
    ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 386
    ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ 273
    ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ 282/8

  • ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಲಂಡನ್: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ನಿತ್ಯ ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ. ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುವುದು ಕಾಮನ್.‌ ಹೀಗಿದ್ದೂ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಕಾರಣಕ್ಕೆ ಎಷ್ಟೋ ಮಂದಿ ಸರಿಯಾಗಿ ನಿದ್ರೆ ಮಾಡುವುದು. ಆದ್ರೆ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಯುಕೆನಲ್ಲಿ ಮಹಿಳೆಯೊಬ್ಬರು ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

    ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಮಹಿಳೆಯೊಬ್ಬರು ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾರೆ. ಮಹಿಳೆಗಿರುವ ವಿಶೇಷ ಕಾಯಿಲೆಯೇ ಈಕೆ ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ. ಇದನ್ನೂ ಓದಿ: ಸುಂದರಿಯ ದೇಹವನ್ನು ತುಂಡಾಗಿ ಕತ್ತರಿಸಿ, ತಲೆಯನ್ನು ಸೂಪ್ ಮಾಡಲು ಇಟ್ಟಿದ್ರು..!

    ಅಂದಹಾಗೆ, ಈಕೆ ಹೆಸರು ಜೊವಾನ್ನಾ ಕಾಕ್ಸ್. ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನಲ್ಲಿ ವಾಸವಾಗಿದ್ದಾರೆ. ಹಾಗಾದ್ರೆ ಈಕೆಗಿರುವ ವಿಶೇಷ ಕಾಯಿಲೆಯಾದರೂ ಏನು ಅಂತಾ ಕೇಳ್ತೀರಾ? ಈ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ ಅಂತಾ. 2021 ರಲ್ಲಿ ಅವರಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ.

    “ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಕಾಕ್ಸ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼಲೇಡಿ ಅಲ್‌ ಖೈದಾʼ ಕರೆತರಲು ಪಾಕ್‌ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್‌ ಸುಂದರಿ

    ಈಕೆ ಪ್ರೊಟೀನ್ ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು.