Tag: England vs India

  • ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ

    ಟೀಂ ಇಂಡಿಯಾ ಬೌಲರ್‌ಗಳ ಅಬ್ಬರಕ್ಕೆ ಆಂಗ್ಲರ ಪಡೆ ತತ್ತರ; ಭಾರತದ ಗೆಲುವಿಗೆ 193 ರನ್‌ ಗುರಿ

    ಲೀಡ್ಸ್‌: ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ 3ನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಟೀಂ ಇಂಡಿಯಾ ಬೌಲರ್‌ಗಳು ಅಬ್ಬರಿಸಿದ್ದಾರೆ. 192 ರನ್‌ಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡ ಆಂಗ್ಲರ ಪಡೆ ಭಾರತದ ಗೆಲುವಿಗೆ 193 ರನ್‌ ಗುರಿ ನೀಡಿದೆ.

    2ನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಬೌಲರ್‌ಗಳ ಆರ್ಭಟಕ್ಕೆ ಆಂಗ್ಲರು ಲಯ ಕಳೆದುಕೊಂಡರು. ವಿಕೆಟ್‌ಗಳು ತರಗೆಲೆಯಂತೆ ಉರುಳಿದವು. ಜೋ ರೂಟ್‌ 40, ಬೆನ್‌ ಸ್ಟೋಕ್ಸ್‌ 33, ಹ್ಯಾರಿ ಬ್ರೂಕ್‌ 23, ಜ್ಯಾಕ್ ಕ್ರಾಲಿ 22 ರನ್‌ ಗಳಿಸಿದರು.

    181 ರನ್‌ಗಳಿಗೆ ಅದಾಗಲೇ 7 ವಿಕೆಟ್‌ ಕಳೆದುಕೊಂಡು ಇಂಗ್ಲೆಂಡ್‌ ತತ್ತರಿಸಿಹೋಗಿತ್ತು. ಇನ್ನು 11 ರನ್‌ಗಳ ಅಂತರದಲ್ಲಿ ಒಂದರ ಹಿಂದೆ ಒಂದರಂತೆ 3 ವಿಕೆಟ್‌ ಒಪ್ಪಿಸಿತು. ಅಂತಿಮವಾಗಿ 192 ರನ್‌ ಗಳಿಸಿ ಇಂಗ್ಲೆಂಡ್‌ ಆಲೌಟ್‌ ಆಯಿತು.

    ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌ 4 ವಿಕೆಟ್‌ ಪಡೆದು ಅಬ್ಬರಿಸಿದರು. ಜಸ್ಪ್ರಿತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌ ತಲಾ 2, ನಿತಿಶ್‌ ಕುಮಾರ್‌ ರೆಡ್ಡಿ, ಆಕಾಶ್‌ ದೀಪ್‌ ತಲಾ 1 ವಿಕೆಟ್‌ ಪಡೆದರು.

    ಟೀಂ ಇಂಡಿಯಾ ಬ್ಯಾಟಿಂಗ್‌ ಆರಂಭಿಸಿದ್ದು, ಯಶಸ್ವಿ ಜೈಸ್ವಾಲ್‌ ಶೂನ್ಯ ಸುತ್ತಿ ಪೆವಿಲಿಯನ್‌ ಕಡೆ ನಡೆದರು. ಇನ್ನು ಕೆ.ಎಲ್‌.ರಾಹುಲ್‌ ಮತ್ತು ಕರುಣ್‌ ನಾಯರ್‌ ಜೋಡಿ ಬ್ಯಾಟಿಂಗ್‌ ಮಾಡುತ್ತಿದ್ದು, ಟೀಂ ಇಂಡಿಯಾ 1 ವಿಕೆಟ್‌ ನಷ್ಟಕ್ಕೆ 40 ರನ್‌ ಗಳಿಸಿದೆ.

  • ಕನ್ನಡಿಗ ರಾಹುಲ್‌ ಆಕರ್ಷಕ ಶತಕ; ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ

    ಕನ್ನಡಿಗ ರಾಹುಲ್‌ ಆಕರ್ಷಕ ಶತಕ; ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದ ಟೀಂ ಇಂಡಿಯಾ

    ಲಾರ್ಡ್ಸ್‌: ಕನ್ನಡಿಗ ಕೆ.ಎಲ್.ರಾಹುಲ್‌ ಆಕರ್ಷಕ ಶತಕ, ಪಂತ್‌, ಜಡೇಜಾ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ ಲೆಕ್ಕ ಚುಕ್ತಾ ಮಾಡಿದೆ.

    ಲಾರ್ಡ್ಸ್‌ನಲ್ಲಿ ಶುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ ಗಳಿಸಿ ಆಲೌಟ್‌ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ಕೂಡ ಅಷ್ಟೇ ರನ್‌ ಗಳಿಸಿ ಆಲೌಟ್‌ ಆಯಿತು.

    2ನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್‌ಗೆ 145 ರನ್‌ ಗಳಿಸಿತ್ತು. ಶನಿವಾರ ತಂಡಕ್ಕೆ ರಾಹುಲ್‌ ಮತ್ತು ಪಂತ್‌ ನೆರವಾದರು. 117 ಬಾಲ್‌ಗಳಿಗೆ ರಾಹುಲ್‌ 100 ರನ್‌ ಗಳಿಸಿ ಜವಾಬ್ದಾರಿಯುತ ಆಟವಾಡಿದರು. ಪಂತ್‌ 112 ಎಸೆತಗಳಲ್ಲಿ 74 ರನ್‌ ಗಳಿಸಿದರು.

    ರವೀಂದ್ರ ಜಡೇ 72, ನಿತೀಶ್‌ ಕುಮಾರ್‌ ರೆಡ್ಡಿ 30, ವಾಷಿಂಗ್ಟನ್‌ ಸುಂದರ್‌ 23 ರನ್‌ ಗಳಿಸಿ ಸಮಬಲ ಸಾಧಿಸಲು ನೆರವಾದರು. ಇಂಗ್ಲೆಂಡ್‌ ಪರ ಕ್ರಿಸ್ ವೋಕ್ಸ್ 3, ಜೋಫ್ರಾ ಆರ್ಚರ್ ಮತ್ತು ಬೆನ್‌ ಸ್ಟೋಕ್ಸ್‌ ತಲಾ 2, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್ ತಲಾ 1 ವಿಕೆಟ್‌ ಪಡೆದರು.

  • ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

    ಮಳೆಗೆ 3ನೇ ದಿನದಾಟ ಅಂತ್ಯ; 2ನೇ ಇನ್ನಿಂಗ್ಸ್‌ನಲ್ಲಿ ಭಾರತಕ್ಕೆ 96 ರನ್‌ ಮುನ್ನಡೆ – ಕನ್ನಡಿಗ ಕೆ.ಎಲ್.ರಾಹುಲ್‌ ಆಸರೆ

    – ಆಂಗ್ಲರ ಪಡೆಯ 5 ವಿಕೆಟ್‌ ಕಬಳಿಸಿ ಮಿಂಚಿದ ಬುಮ್ರಾ

    ಲೀಡ್ಸ್‌: ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲ ಪಂದ್ಯದ 3ನೇ ದಿನದಾಟ ಅಂತ್ಯವಾಗಿದ್ದು, ಭಾರತ ತಂಡ 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.

    ಲೀಡ್ಸ್‌ನ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಟೀಂ ಇಂಡಿಯಾ 471 ರನ್‌ ಗಳಿಸಿತ್ತು. ನಂತರ ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 465ಕ್ಕೆ ಆಲೌಟ್‌ ಆಯಿತು.

    2ನೇ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನದಿಂದಾಗಿ ಭಾರತವು 96 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. 47 ರನ್‌ ಗಳಿಸಿರುವ ರಾಹುಲ್‌ ಅಜೇಯರಾಗಿ ಉಳಿದಿದ್ದಾರೆ. ಅವರಿಗೆ ಶುಭಮನ್‌ ಗಿಲ್‌ ಸಾಥ್‌ ನೀಡಲಿದ್ದಾರೆ.

    ಒಲಿ ಪೋಪ್‌ ಶತಕ
    ಇಂಗ್ಲೆಂಡ್‌ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್‌ ನಷ್ಟಕ್ಕೆ 209 ರನ್‌ ಗಳಿಸಿತ್ತು. ಒಲಿ ಪೋಪ್‌ ಶತಕ ಗಳಿಸಿ ಮಿಂಚಿದ್ದರು. ಭಾನುವಾರ 3ನೇ ದಿನದಾಟದಲ್ಲಿ ಶತಕಕ್ಕೆ ಕೇವಲ 6 ರನ್‌ ಗಳಿಸಿ ಬೇಗನೆ ಔಟಾದರು. ಬಳಿಕ ಬ್ರೂಕ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ 99 ರನ್‌ ಗಳಿಸಿದರು. ಶತಕದ ಹೊಸ್ತಿಲಲ್ಲಿದ್ದ ಅವರನ್ನು ಕನ್ನಡಿಗ ಪ್ರಸಿದ್ಧ ಕೃಷ್ಣ ಔಟ್‌ ಮಾಡಿದರು. ಅಂತಿಮವಾಗಿ ಇಂಗ್ಲೆಂಡ್‌ 465 ಕ್ಕೆ ಆಲೌಟ್‌ ಆಯಿತು.

    ಬೌಲಿಂಗ್‌ನಲ್ಲಿ ಬುಮ್ರಾ ಪರಾಕ್ರಮ
    ಭಾರತ ಪರ ಜಸ್ಪ್ರಿತ್‌ ಬುಮ್ರಾ ಬೌಲಿಂಗ್‌ನಲ್ಲಿ ಪರಾಕ್ರಮ ಮೆರೆದರು. 83 ರನ್‌ ನೀಡಿ ಪ್ರಮುಖ 5 ವಿಕೆಟ್‌ ಕಿತ್ತು ಮಿಂಚಿದರು. ಪ್ರಸಿದ್ಧ ಕೃಷ್ಣ 3, ಮೊಹಮ್ಮದ್‌ ಸಿರಾಜ್‌ 2 ವಿಕೆಟ್‌ ಪಡೆದರು.

  • ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ಪಲ್ಟಿ ಹೊಡೆದು ಪಂತ್‌ ಶತಕ ಸಂಭ್ರಮ – ಧೋನಿ ರೆಕಾರ್ಡ್‌ ಬ್ರೇಕ್‌

    ಲೀಡ್ಸ್‌: ಹೆಡಿಂಗ್ಲಿಯಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯದ 2ನೇ ದಿನದಾಟದಂದು ರಿಷಭ್‌ ಪಂತ್‌, ಎಂ.ಎಸ್.ಧೋನಿ ದಾಖಲೆಯನ್ನು ಬ್ರೇಕ್‌ ಮಾಡಿದ್ದಾರೆ.

    ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಪಂತ್‌ ಪಲ್ಟಿ ಹೊಡೆದು ಸಂಭ್ರಮಿಸಿದರು. ಪಂದ್ಯದಲ್ಲಿ 178 ಬಾಲ್‌ಗೆ 134 ರನ್‌ ಬಾರಿಸಿದ್ದಾರೆ. ಟೆಸ್ಟ್‌ ಪಂದ್ಯದ 2 ದಿನದ ಅವಧಿಯಲ್ಲಿ ಭಾರತದ ಪರ ಒಟ್ಟು 3 ಶತಕ ದಾಖಲಾಗಿವೆ.

    ರಿಷಭ್ ಪಂತ್, ಸೆನಾ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ) ದೇಶಗಳಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಕೆಟ್‌ ಕೀಪರ್‌ ಎಂಬ ದಾಖಲೆಯನ್ನು ಧೋನಿ ಮಾಡಿದ್ದರು.

    ಭಾರತದ ವಿಕೆಟ್‌ ಕೀಪರ್ ತಮ್ಮ ಏಳನೇ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಪಂತ್ 31.47 ರ ಸರಾಸರಿಯಲ್ಲಿ 1,731 ರನ್ ಗಳಿಸಿದ್ದ ಮಾಜಿ ನಾಯಕ ಧೋನಿ ದಾಖಲೆಯನ್ನು ಮುರಿದಿದ್ದಾರೆ. ಪಂತ್ ಆರು ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಮತ್ತು 40.25 ರ ಉತ್ತಮ ಸರಾಸರಿಯೊಂದಿಗೆ ಈ ಮೈಲಿಗಲ್ಲು ದಾಟಿದ್ದಾರೆ.

    ತಮ್ಮ ಏಳು ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಪಂತ್, ಸೆನಾದಲ್ಲಿ ನಾಲ್ಕು ಟೆಸ್ಟ್ ಶತಕಗಳನ್ನು ಗಳಿಸಿದ್ದಾರೆ. 2019 ರಲ್ಲಿ ಸಿಡ್ನಿಯಲ್ಲಿ ಅಜೇಯ 159 ರನ್ ಗಳಿಸಿ ಸಾಧನೆ ಮಾಡಿದ್ದರು.

    ಸೆನಾದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟೆಸ್ಟ್ ವಿಕೆಟ್‌ ಕೀಪರ್ಸ್‌
    ರಿಷಭ್ ಪಂತ್ (IND) – 1732*
    ಎಂಎಸ್ ಧೋನಿ (IND) – 1731
    ಆಡಮ್ ಗಿಲ್‌ಕ್ರಿಸ್ಟ್ (AUS) – 1531
    ಜೆಫ್ ಡುಜಾನ್ (WI) – 1335
    ಜಾನ್ ವೈಟ್ (RSA)- 1328