Tag: Engineers

  • NOC ನೀಡಲು 10 ಲಕ್ಷಕ್ಕೆ ಬೇಡಿಕೆ – ಬೆಂಗಳೂರಲ್ಲಿ ‘ಲೋಕಾ’ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

    NOC ನೀಡಲು 10 ಲಕ್ಷಕ್ಕೆ ಬೇಡಿಕೆ – ಬೆಂಗಳೂರಲ್ಲಿ ‘ಲೋಕಾ’ ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು

    ಬೆಂಗಳೂರು: NOC ನೀಡಲು 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದ ಇಬ್ಬರು ಭ್ರಷ್ಟ ಎಂಜಿನಿಯರ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತರನ್ನು ಹೆಬ್ಬಾಳ ಸಬ್ ಡಿವಿಷನ್‌ನ AEE ಮಹದೇವ್ ಹಾಗೂ ಆರ್‌ಎಮ್‌ವಿ ಬಿಬಿಎಂಪಿಯ AE ಆಗಿರುವ ಸುರೇಂದ್ರ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:ಯಡಿಯೂರಪ್ಪ, ವಿಜಯೇಂದ್ರ, ಕುಮಾರಸ್ವಾಮಿ ಪ್ರಾಮಾಣಿಕರಾ: ಸಿದ್ದರಾಮಯ್ಯ ಪ್ರಶ್ನೆ

    ಇಬ್ಬರು ಎಂಜಿನಿಯರ್‌ಗಳು ಎನ್‌ಒಸಿ ನೀಡಲು 10 ಲಕ್ಷ ರೂ.ಗೆ ಬೇಟಿಕೆಯಿಟ್ಟಿದ್ದರು. ಈ ಕುರಿತು ಸಂಜಯ್ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಲೆ ಬೀಸಿದ್ದ ಲೋಕಾಯುಕ್ತ ಅಧಿಕಾರಿಗಳು ಎಇ ಸುರೇಂದ್ರನನ್ನು 5 ಲಕ್ಷ ರೂ. ಪಡೆಯುವುದಾಗ ಬಂಧಿಸಿದ್ದಾರೆ.

    ಸದ್ಯ ಇಬ್ಬರು ಬಂಧಿಸಿದ್ದು, ಲಂಚದ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಐಎಎಸ್ ಹುದ್ದೆಗೆ ನಕಲಿ ಪ್ರಮಾಣಪತ್ರ: ಪೂಜಾ ಖೇಡ್ಕರ್‌ಗೆ ನಿರೀಕ್ಷಣಾ ಜಾಮೀನು

  • ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು| ಕಚೇರಿಯಲ್ಲಿರುವಾಗಲೇ ಅಧಿಕಾರಿಗಳನ್ನು ಕೂಡಿ ಹಾಕಿದ ಅಟೆಂಡರ್

    ತುಮಕೂರು: ಸಣ್ಣ ನೀರಾವರಿ ಇಲಾಖೆಯ (Minor Irrigation Department) ಅಧಿಕಾರಿಗಳು ಮತ್ತು ನೌಕರರ ಮಧ್ಯದ ಜಗಳ ಬೀದಿಗೆ ಬಂದಿದ್ದು, ಅಧಿಕಾರಿಗಳು ಕಚೇರಿ ಒಳಗಡೆ ಇರುವಾಗಲೇ ಅಟೆಂಡರ್ (Attendent) ಕಚೇರಿಗೆ ಬೀಗ ಹಾಕಿ ಪರಾರಿಯಾದ ಪ್ರಸಂಗ ತುಮಕೂರಿನಲ್ಲಿ (Tumakuru) ನಡೆದಿದೆ.

    ತುಮಕೂರು ನಗರದ ವಿದ್ಯಾನಗರದಲ್ಲಿರುವ ಇಲಾಖೆಯ ಕಚೇರಿಗೆ ಮಂಗಳವಾರ ಸಂಜೆ 4:50ರ ವೇಳೆಗೆ ಅಟೆಂಡರ್ ಕೆ.ಎಂ.ಅಜಾಜ್ ಪಾಷ ಬೀಗ ಹಾಕಿದರು. ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಪ್ಪೇಸ್ವಾಮಿ, ಇಬ್ಬರು ಎಂಜಿನಿಯರ್ ಸೇರಿ 7 ಜನ ಸಿಬ್ಬಂದಿ ಕಚೇರಿ ಒಳಗೆ ಇದ್ದರು. ಇದನ್ನೂ ಓದಿ: 7 ವಾರಗಳ ಬಳಿಕ ಸರ್ಜರಿ ಮಾಡಿಸದೇ ದರ್ಶನ್‌ ಆಸ್ಪತ್ರೆಯಿಂದ ಡಿಸ್ಚಾರ್ಜ್

    ಎಂಜಿನಿಯರ್ ತಿಪ್ಪೇಸ್ವಾಮಿ 112ಕ್ಕೆ ಕರೆ ಮಾಡಿದ ತಕ್ಷಣ ಪೊಲೀಸರು ಕಚೇರಿ ಬಳಿಗೆ ಬಂದರು. ಅಜಾಜ್ ಪಾಷಗೆ ಪೊಲೀಸರು ಕರೆ ಮಾಡಿ ಕಚೇರಿಗೆ ಕರೆಸಿಕೊಂಡು, 5:30ಕ್ಕೆ ಬೀಗ ತೆಗೆಸಿದ್ದಾರೆ. ಅಧಿಕಾರಿಗಳು ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇಲ್ಲ ಸಲ್ಲದ ಆರೋಪ ಮಾಡುತ್ತಾರೆ. ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಬದಲಾವಣೆಯಾಗಿಲ್ಲ. ಪದೇ ಪದೇ ಅವಮಾನ ಮಾಡುತ್ತಾರೆ’ ಎಂದು ಬೇಸತ್ತು ಹೀಗೆ ಮಾಡಿದ್ದೇನೆ ಎಂದು ಪಾಷಾ ದೂರಿದ್ದಾರೆ. ಇದನ್ನೂ ಓದಿ: ಅವರು ತೆರಿಗೆ ವಿಧಿಸಿದ್ರೆ ನಾವು ಅವರ ಮೇಲೆ ಅಷ್ಟೇ ತೆರಿಗೆ ಹಾಕ್ತೀವಿ: ಭಾರತಕ್ಕೆ ಟ್ರಂಪ್‌ ಸಂದೇಶ

  • 15‌ ದಿನಗಳಲ್ಲಿ 10 ಸೇತುವೆ ಕುಸಿತ – ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್‌ ಅಮಾನತು

    15‌ ದಿನಗಳಲ್ಲಿ 10 ಸೇತುವೆ ಕುಸಿತ – ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್‌ ಅಮಾನತು

    ಪಾಟ್ನಾ: ಬಿಹಾರದಲ್ಲಿ (Bihar) ಕಳೆದ 15 ದಿನಗಳಲ್ಲಿ 10 ಸೇತುವೆಗಳು ಕುಸಿದು ಬಿದ್ದ (Bridges Fall) ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಇಲಾಖೆಯ 16 ಎಂಜಿನಿಯರ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ಕುರಿತು ಜಲಸಂಪನ್ಮೂಲ ಇಲಾಖೆ (Resources Department) ಪ್ರಕಟಣೆಯಲ್ಲಿ ತಿಳಿಸಿದೆ.

    ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಚೈತನ್ಯ ಪ್ರಸಾದ್, ರಾಜ್ಯ ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿ 16 ಎಂಜಿನಿಯರುಗಳನ್ನ (Engineers) ಅಮಾನತುಗೊಳಿಸಲಾಗಿದೆ. ಸೇತುವೆ ನಿರ್ಮಾಣದ ಹೊಣೆ ಹೊತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಯ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆ – ತಯಾರಿ ಆರಂಭಿಸಿದ ಬಿಜೆಪಿ

    ಗುರುವಾರ (ಜು.4) ಸರನ್‌ ಜಿಲ್ಲೆಯಲ್ಲಿ ನಿರ್ಮಿಸಲಾಗಿದ್ದ ಸೇತುವೆಯೊಂದು ಕುಸಿದು ಬಿದ್ದಿದೆ. ಇದು 24 ಗಂಟೆಯಲ್ಲಿ ಜಿಲ್ಲೆಯೊಂದರಲ್ಲಿ ಕುಸಿದು ಬಿದ್ದ 3ನೇ ಸೇತುವೆ ಆಗಿದೆ. ಅಲ್ಲದೇ ಬಿಹಾರ ರಾಜ್ಯದಲ್ಲಿ ಕುಸಿದ 10ನೇ ಸೇತುವೆಯೂ ಆಗಿದೆ. ಈವರೆಗೆ ಸಿವಾನ್, ಸರನ್, ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್ ಜಿಲ್ಲೆಗಳಲ್ಲಿ ಒಟ್ಟು 10 ಸೇತುವೆಗಳು ಕುಸಿದಿವೆ. ಇದನ್ನೂ ಓದಿ: ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ- ಸಿಬಿಐಗೆ ನೋಟಿಸ್ ನೀಡಿದ ದೆಹಲಿ ಹೈಕೋರ್ಟ್

    ಹಳೇ ಸೇತುವೆಗಳ ಸಮೀಕ್ಷೆಗೆ ಸೂಚನೆ: 
    ಬುಧವಾರ (ಜು.3) ನಡೆದಿದ್ದ ಪರಿಶೀಲನಾ ಸಭೆಯ ನಂತರ ಮುಖ್ಯಮಂತ್ರಿ ನಿತೀಶ್ ಕುಮಾರ್, ಎಲ್ಲಾ ಹಳೆಯ ಸೇತುವೆಗಳ ಸಮೀಕ್ಷೆ ನಡೆಸುವಂತೆ ಮತ್ತು ತಕ್ಷಣದ ದುರಸ್ತಿ ಅಗತ್ಯವಿರುವ ಸೇತುವೆಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದ್ದಾರೆ. ಇದನ್ನೂ ಓದಿ: ಇಷ್ಟಪಟ್ಟವನನ್ನು ಮದುವೆಯಾಗಿದ್ದಕ್ಕೆ ಕುಟುಂಬಸ್ಥರಿಂದ್ಲೇ ಯುವತಿಯ ಬರ್ಬರ ಹತ್ಯೆ 

  • ಚುನಾವಣೆ ಹೊತ್ತಲ್ಲೇ ಬಿಬಿಎಂಪಿ ಖಡಕ್ ಆದೇಶ..!

    ಚುನಾವಣೆ ಹೊತ್ತಲ್ಲೇ ಬಿಬಿಎಂಪಿ ಖಡಕ್ ಆದೇಶ..!

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ದುರಂತ- ನಿರ್ಲಕ್ಷ್ಯ ವಹಿಸಿದ ಇಂಜಿನಿಯರ್‌ಗಳ ಅಮಾನತು

    ಮೆಟ್ರೋ ದುರಂತ- ನಿರ್ಲಕ್ಷ್ಯ ವಹಿಸಿದ ಇಂಜಿನಿಯರ್‌ಗಳ ಅಮಾನತು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಎಂಜಿನಿಯರ್‌ ಅಮಾನತು

    ಮೆಟ್ರೋ ಪಿಲ್ಲರ್‌ ಕುಸಿದು ತಾಯಿ, ಮಗು ಸಾವು ಪ್ರಕರಣ – ಮೂವರು ಎಂಜಿನಿಯರ್‌ ಅಮಾನತು

    ಬೆಂಗಳೂರು: ಮೆಟ್ರೋ ಪಿಲ್ಲರ್‌ ಕುಸಿದು (Metro Pilllar Collapse) ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಬಿಎಂಆರ್‌ಸಿಎಲ್‌ (BMRCL) ಆದೇಶ ಹೊರಡಿಸಿದೆ.

    ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಮೆಟ್ರೋ ಡೆಪ್ಯುಟಿ ಚೀಫ್ ಎಂಜಿನಿಯರ್‌, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ ಅಮಾನತುಗೊಳಿಸಿ  ಆದೇಶಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಎಂಡಿ ಅಂಜುಂ ಫರ್ವೇಜ್‌ ತಿಳಿಸಿದ್ದಾರೆ. ಇದನ್ನೂ ಓದಿ: ದಾವಣಗೆರೆಗೆ ಬಂದ ಮೃತ ತೇಜಸ್ವಿನಿ, ಪುತ್ರನ ಶವ- ತಾಯಿ, ಮಗುವಿನ ಪ್ರತ್ಯೇಕ ಅಂತ್ಯಸಂಸ್ಕಾರ

    ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ನಿಗಮ, ಎನ್‌ಸಿಸಿ ಕಂಪನಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಮಂಗಳವಾರ ದುರಂತದ ಬಳಿಕ ಮೆಟ್ರೋ ಚೀಫ್ ಎಂಜಿನಿಯರ್‌ರಿಂದ ಎನ್‌ಸಿಸಿ ಕಂಪನಿಗೆ ನೋಟಿಸ್ ನೀಡಲಾಗಿದೆ. ಬುಧವಾರ ಮೆಟ್ರೋ ನಿರ್ದೇಶಕರಿಂದ ಎನ್‌ಸಿಸಿ ಆಡಳಿತ ವಿಭಾಗಕ್ಕೆ ಮತ್ತೊಂದು ನೋಟಿಸ್ ಬಂದಿದೆ. ಮೂರು ದಿನಗಳ ಒಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.

    ಎನ್‌ಸಿಸಿ ಕಂಪನಿಯ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಪೋಲಿಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅಂಜುಂ ಫರ್ವೇಜ್‌ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ, ಮಗನ ಸಾವಿಗೆ ಕಾರಣರಾದವ್ರ ವಿರುದ್ಧ ಕ್ರಮಕ್ಕೆ ಲೋಹಿತ್ ದೂರು- ಎಫ್‍ಐಆರ್

    ಬೆಂಗಳೂರು ಮೆಟ್ರೋ ಕಾಮಗಾರಿ ದುರಂತ ಪ್ರಕರಣವು ಕೇಂದ್ರದ ಅಂಗಳ ತಲುಪಿದೆ. ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಕೇಳಿದೆ. ಅಂಜುಂ ಫರ್ವೇಜ್‌ಗೆ ಕರೆ ಮಾಡಿ ವರದಿ ಕೇಳಿದೆ. ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಮೆಟ್ರೋ ನಿಗಮ ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಚಂಡೀಗಢ: ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಸ್ತೆಯಲ್ಲಿ ಮರು ಡಾಂಬರೀಕರಣ ನಡೆದಿದೆ. ಕಾರ್ಮಿಕರು ರಸ್ತೆಯಲ್ಲಿ ಡಾಂಬರ್‌ಅನ್ನು ಸುರಿಯುತ್ತಲೇ ಅದು ಮಳೆ ನೀರಿನೊಂದಿಗೆ ಕಳಚಿಕೊಂಡಿದೆ. ಇಂತಹ ಎಡವಟ್ಟಿನ ಕಾಮಗಾರಿಯನ್ನು ನಡೆಸಿರುವ ಎಂಜಿನಿಯರುಗಳನ್ನು ಪಂಜಾಬ್ ಸರ್ಕಾರ ಅಮಾನತು ಮಾಡಿದೆ.

    ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭವೇ ರಸ್ತೆಗೆ ತೇಪೆ ಹಾಕಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಜಾಬ್‌ನ ಲೋಕೋಪಯೋಗಿ ಕಟ್ಟಡ ಹಾಗೂ ರಸ್ತೆಗಳ ಇಲಾಖೆ ನಾಲ್ವರು ಎಂಜಿನಿಯರುಗಳನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

    ಹೋಶಿಯಾರ್‌ಪುರದ ಚಬ್ಬೇವಾಲ್ ಕ್ಷೇತ್ರದ ಮಹಿಲ್‌ಪುರ ಬ್ಲಾಕ್‌ನ ನಂಗಲ್ ಖಿಲಾಡಿಯನ್ ಹಾಗೂ ಶೆರ್ಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯ ನಡುವೆ ಕಾರ್ಮಿಕರು ರಸ್ತೆಗೆ ಡಾಂಬರು ಎರಚುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಉಪವಿಭಾಗದ ಎಂಜಿನಿಯರ್ ತಾರ್ಸೆಮ್ ಸಿಂಗ್, ಜೂನಿಯರ್ ಎಂಜಿನಿಯರ್ ವಿಪನ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಜಸ್ಬೀರ್ ಸಿಂಗ್ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

    ಈ ಕಾಮಗಾರಿಯ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಕಾರ್ಮಿಕನೊಬ್ಬನಲ್ಲಿ ರಸ್ತೆ ಬಾಳಿಕೆ ಬರುತ್ತಾ ಎಂದು ಪ್ರಶ್ನಿಸಿದ್ದಾನೆ. ಆದರೂ ಆತ ಹೌದು ಎಂದು ಉತ್ತರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಗಮನಿಸಿದ ಎಎಪಿ ಕಾರ್ಯಕರ್ತ ಗುರ್ವಿಂದರ್ ಸಿಂಗ್ ಸಿಎಂ ಭಗವಂತ್ ಮಾನ್ ಅವರ ಗಮನಕ್ಕೂ ತಂದಿದ್ದಾರೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ 4 ಎಂಜಿನಿಯರುಗಳನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಮುರುಡೇಶ್ವರದಲ್ಲಿ ಸಮುದ್ರ ಪಾಲಾಗುತ್ತಿದ್ದ ಬೆಂಗ್ಳೂರು ಟೆಕ್ಕಿಗಳ ರಕ್ಷಣೆ

    ಕಾರವಾರ: ಸಮುದ್ರ ಪಾಲಾಗುತಿದ್ದ ಬೆಂಗಳೂರು ಮೂಲದ ಮೂವರು ಎಂಜಿನಿಯರ್‍ ಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

    ಬೆಂಗಳೂರು ಜಿಲ್ಲೆಯ ದೊಡ್ಡ ಬಳ್ಳಾಪುರ ತಾಲೂಕಿನ ಹರೀಶ್ (24), ಆನಂದ್ (24) ಮತ್ತು ಸುರೇಶ್ (24) ರಕ್ಷಣೆಗೊಳಗಾದವರಾಗಿದ್ದು, ಶಶಿಧರ್ ನಾಯ್ಕ, ಚಂದ್ರಶೇಖರ್ ಹರಿಕಾಂತ್ ರಕ್ಷಿಸಿದ್ದಾರೆ.

    ಬೆಂಗಳೂರಿನಿಂದ ಐದು ಜನ ಗೆಳೆಯರೊಂದಿಗೆ ಮುರುಡೇಶ್ವರಕ್ಕೆ ಆಗಮಿಸಿದ್ದ ಇವರು ಸಮುದ್ರದಲ್ಲಿ ಅಲೆಗಳ ಅಬ್ಬರವಿದ್ದರೂ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಗೆ ಮೂರು ಜನರು ಕೊಚ್ಚಿಹೋಗಿದ್ದಾರೆ. ಇದನ್ನು ಗಮನಿಸಿದ ಲೈಫ್ ಗಾರ್ಡ್ ತಮ್ಮ ಜೀವದ ಹಂಗು ತೊರೆದು ರಭಸದ ಅಲೆಯಲ್ಲಿಯೂ ಮೂರು ಜನರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಮುರುಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಮಲ್ಯ ಮನೆ ಇಂಟೀರಿಯರ್ ಡಿಸೈನ್‍ಗೆ ಸಿಗ್ತಿಲ್ಲ ಎಂಜಿನಿಯರ್ಸ್..!

    ಮಲ್ಯ ಮನೆ ಇಂಟೀರಿಯರ್ ಡಿಸೈನ್‍ಗೆ ಸಿಗ್ತಿಲ್ಲ ಎಂಜಿನಿಯರ್ಸ್..!

    ಬೆಂಗಳೂರು: ಸಾವಿರಾರು ಕೋಟಿ ಸಾಲ ಮಾಡಿ ಬ್ಯಾಂಕ್‍ಗಳಿಗೆ ನಾಮ ಹಾಕಿ ವಿದೇಶಕ್ಕೆ ಓಡಿಹೋಗಿರುವ ವಿಜಯ್ ಮಲ್ಯಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮಲ್ಯ ಅವರ ಬೆಂಗಳೂರಿನಲ್ಲಿರುವ ಮನೆಯ ಇಂಟೀರಿಯರ್ ಡಿಸೈನ್ ಮಾಡೋಕೆ ಎಂಜಿನಿಯರ್ ಸಿಗುತ್ತಿಲ್ಲ.

    ಹೌದು. ಮಲ್ಯ ಕನಸಿನ ಅರಮನೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಬೆಂಗಳೂರಿನ ಯುಬಿಸಿಟಿ ಪಕ್ಕದಲ್ಲಿ ಅಮೆರಿಕಾದ ವೈಟ್ ಹೌಸ್ ಮಾದರಿಯಲ್ಲಿ ಅರಮನೆ ನಿರ್ಮಾಣ ಕಾರ್ಯ ನಡೀತಿತ್ತು. 8 ವರ್ಷಗಳ ಹಿಂದೆಯೇ ಮನೆ ನಿರ್ಮಾಣ ಕಾರ್ಯ ಶುರುವಾಗಿದ್ದು, ಈಗಾಗಲೇ ಔಟ್‍ಲುಕ್ ಪೂರ್ಣಗೊಂಡಿದೆ.

    ಆದ್ರೆ ಇದೀಗ ಇಂಟೀರಿಯರ್ ಡಿಸೈನ್ ಮಾಡಲು ಎಂಜಿನಿಯರ್‍ಗಳೇ ಸಿಗುತ್ತಿಲ್ಲ. ಮಲ್ಯ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರೋದ್ರಿಂದ ಯಾವ ಎಂಜಿನಿಯರ್‍ಗಳೂ ಅರಮನೆ ನಿರ್ಮಾಣಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿರುವ ಪ್ರೆಸ್ಟೀಜ್ ಗ್ರೂಪ್ ಎಂಜಿನಿಯರ್‍ಗಳ ಹುಡುಕಾಟದಲ್ಲಿದೆ. ಈ ಬಗ್ಗೆ ಕಿಂಗ್‍ಫಿಶರ್ ಸಿಬ್ಬಂದಿಯೇ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    100 ಕೋಟಿ ವೆಚ್ಚದಲ್ಲಿ ಮನೆ:
    ಬೆಂಗಳೂರಿನ ಟಾಪ್ ಅಪಾರ್ಟ್ ಮೆಂಟ್ ಇದಾಗಿದ್ದು, ಅತ್ಯಂತ ದುಬಾರಿ ವೆಚ್ಚದ್ದಾಗಿದೆ. ಈ ಅಪಾರ್ಟ್ ಮೆಂಟ್ ಅನ್ನು ಮಲ್ಯ ಒಡೆತನದ ಯುಬಿ ಗ್ರೂಫ್ ಹಾಗೂ ಪ್ರೆಸ್ಟೀಜ್ ಪಾಲುದಾರರಾಗಿ ಕಟ್ಟಿದೆ. 82 ಪ್ಲ್ಯಾಟ್ ಇದೆ. ಪ್ಲೋರ್ ರೂಪ್ ಟಾಫ್‍ನಲ್ಲಿ ಪೆಂಟ್ ಹೌಸ್‍ನಲ್ಲಿ ಮಲ್ಯನ ರಾಜ ದರ್ಬಾರ್ ನಡೆಯಲಿದೆ. ಅಮೆರಿಕದ ವೈಟ್ ಹೌಸ್ ಮಾದರಿಯಲ್ಲಿ ನಿರ್ಮಾಣವಾಗುತ್ತಿದೆ.

    ಮಲ್ಯನ ಭವ್ಯ ಅರಮನೆ 400 ಅಡಿ ಎತ್ತರದಲ್ಲಿದ್ದು, 34 ಹಾಗೂ 35ನೇ ಲೆವಲ್‍ನಲ್ಲಿ ಮಲ್ಯ ಮನೆಯಿದೆ. ಮನೆಯ ಟಾಪ್‍ನಲ್ಲಿ ಹೆಲಿಪ್ಯಾಡ್, ಜೊತೆಗೆ ದೊಡ್ಡ ಸ್ವಿಮ್ಮಿಂಗ್ ಪೂಲ್ ಮತ್ತು ದೊಡ್ಡದಾದ ಬಾರ್ ಹೌಸ್ ಕೂಡ ಇದೆ. ಜಗತ್ತಿನ ದುಬಾರಿ ಎಣ್ಣೆಗಳು ಇಲ್ಲಿ ಸಿಗಲಿದೆ. ಬರೋಬ್ಬರಿ ನೂರು ಕೋಟಿಯಷ್ಟು ವೆಚ್ಚದಲ್ಲಿ ಈ ವೈಟ್ ಹೌಸ್ ನಿರ್ಮಾಣವಾಗುತ್ತಿದೆ. ಆದರೆ ಮಾರ್ಕೆಟ್ ನ ಮೌಲ್ಯ 500 ಕೋಟಿ ಎಂದು ಹೇಳಲಾಗುತ್ತಿದೆ.

    ಈ ಅಪಾರ್ಟ್ ಮೆಂಟ್ ಎರಡು ಸಾವಿರ ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣಗಲಿದ್ದು, ಪ್ರತಿ ರೂಂಗೂ ಅದ್ಭುತ ಇಂಟಿರಿಯರ್ ವರ್ಕ್, ಜಗತ್ತಿನ ದುಬಾರಿ ಸೋಫಾಸೆಟ್, ಬಂಗಾರದ ಬಣ್ಣದಂತೆ ಹೊಳೆಯುವ ಬೆಡ್‍ಗಳು. ಇಟಲಿಯನ್ ಮಾರ್ಬಲ್ ಸ್ಟೋನ್, ಕೇನ್ಯನ್ ಹಾರ್ಡ್ ವುಡ್ ಮಾರ್ಬಲ್, ಗೋಲ್ಡನ್ ಬಾತ್ ರೂಂ ಟೈಲ್ಸ್, ಅಲ್ಲದೇ ಕಣ್ಣು ಕೋರೈಸುವ ಮಂದ ಬೆಳಕಲ್ಲಿ ಪಬ್ ಕೂಡ ಇದ್ದು, ಇದು ಮಲ್ಯ ಅರಮನೆಯ ಸ್ಪೆಷಾಲಿಟಿಯಾಗಿದೆ.

    ಈ ಮನೆಯಲ್ಲಿ ಎರಡು ಲಿಫ್ಟ್ ಇದ್ದು, ಒಂದು ವಿಜಯಮಲ್ಯಗಷ್ಟೇ ಮೀಸಲು. ಇನ್ನೊಂದು ಗೆಸ್ಟ್ ಗಳಿಗೆ ಮೀಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಇರುವ ಈ ಲಿಫ್ಟ್ ಮಲ್ಯ ಪಿಂಗರ್ ಫ್ರಿಂಟ್ ಇಲ್ಲದೇ ತೆರೆಯಲ್ಲ. ಅಷ್ಟೊಂದು ಭದ್ರತೆಯಿಂದ ಕೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಪುಟ್ಟರಾಜು

    ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ಸಚಿವ ಪುಟ್ಟರಾಜು

    ಮಂಡ್ಯ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸಣ್ಣ ನೀರಾವರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದ್ದಾರೆ.

    ಪಾಂಡವಪುರ ತಾಲೂಕಿನ ಸುಂಕಾತಣ್ಣೂರು ಗ್ರಾಮದಲ್ಲಿ ಮಾತನಾಡಿದ ಸಚಿವರು, ಇಂತಹ ಪ್ರತಿಭಟನೆಯಿಂದಾಗಿಯೇ ಜಿಲ್ಲೆಗೆ ಯಾವುದೇ ಐಟಿ ಕಂಪನಿ, ದೊಡ್ಡ ಕೈಗಾರಿಕೆಗಳು ಬರುತ್ತಿಲ್ಲ. ಇದು ನಮ್ಮ ಜಿಲ್ಲೆಗೆ ತಟ್ಟಿರುವ ಶಾಪವಾಗಿದೆ ಎಂದು ಕಿಡಿಕಾರಿದರು. ಇದನ್ನು ಓದಿ: ಕಾವೇರಿ ಪ್ರತಿಮೆ ನಿರ್ಮಾಣದಿಂದ ಕೆಆರ್‌ಎಸ್ ಗೆ ಕಂಟಕ – ಸರ್ಕಾರದ ನಿರ್ಧಾರಕ್ಕೆ ಎಂಜಿನಿಯರ್ಸ್ ವಿರೋಧ

    ಆಣೆಕಟ್ಟು ನಿರ್ಮಾಣವಾದ ಬಳಿಕವೂ ಡ್ಯಾಂ ಸಮೀಪದ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಿ ಕಾಲುವೆ, ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ದೊಡ್ಡ ಸುರಂಗವನ್ನೇ ನಿರ್ಮಾಣ ಮಾಡಿರುವಾಗ 30 ಅಡಿ ಗುಂಡಿ ತೋಡಿ ಪ್ರತಿಮೆ ನಿಲ್ಲಿಸುವುದು ದೊಡ್ಡ ವಿಷಯವೇ? ಪರಿಣಿತ ಎಂಜಿನಿಯರ್ ಗಳನ್ನು ಕರೆಸಿಕೊಂಡು, ಚರ್ಚೆ ಮಾಡಿಯೇ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದರು.

    ಪ್ರತಿಭಟನಾಕಾರರು ಹೇಳುವ ರಾಜ್ಯ, ದೇಶ ಯಾವುದಾದರೂ ಸರಿ ಅಲ್ಲಿಂದ ತಜ್ಞರ ತಂಡವನ್ನು ಕರೆಸುತ್ತೇವೆ. ಅವರಿಂದಲೇ ಕಾವೇರಿ ಪ್ರತಿಮೆ ನಿರ್ಮಾಣ ಮಾಡಿಸಲಾಗುತ್ತದೆ. ಇಂದು ಜಗತ್ತಿನಲ್ಲಿ ಅನೇಕ ತಜ್ಞರ ತಂಡಗಳಿವೆ ಎಂದ ಸಚಿವರು, ಕಾವೇರಿ ಪ್ರತಿಮೆ ನಿರ್ಮಾಣದಲ್ಲಿ ರೈತರ ಜಮೀನು ವಶಪಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಸರ್ಕಾರದ ಜಾಗವೇ 400 ಎಕರೆಯಿದೆ. ಡ್ಯಾಂ ಸಮೀಪದಲ್ಲಿ ನನ್ನದೂ 10 ಎಕರೆ ಜಾಗವಿದೆ. ಒಂದು ವೇಳೆ ಸರ್ಕಾರ ಕೇಳಿದರೆ ನಾನೂ ಕೂಡ ಕೊಡಬೇಕಾಗುತ್ತದೆ. ನಾವು ಪುಕ್ಸಟ್ಟೆ ಕೊಡುತ್ತೇವಾ ಎಂದು ಸಚಿವರು ಪ್ರಶ್ನಿಸಿದರು.

    ರಾಜ್ಯ ಸರ್ಕಾರ ರೈತ ಪರವಾದ ಸರ್ಕಾರ. ರೈತರ ಮನಸ್ಸಿಗೆ ಎಳ್ಳಷ್ಟೂ ನೋವಾಗದ ರೀತಿ ಕೆಲಸ ಮಾಡುತ್ತಿದೆ. ಕೆಆರ್‌ಎಸ್ ನಿರ್ಮಾಣಕ್ಕೆ ವಿರೋಧವಿತ್ತು. ಅದರಂತೆ ಈಗಲೂ ವಿರೋಧ ಇರುವುದು ಸಾಮಾನ್ಯ ಎಂದು ಹೇಳುವ ಮೂಲಕ ಸಚಿವರು, ಹೋರಾಟಗಾರಿಗೆ ಟಾಂಗ್ ಕೊಟ್ಟರು.

    ಏನಿದು ಯೋಜನೆ?:
    ಏಕತಾ ಪ್ರತಿಮೆ ಮಾದರಿಯಲ್ಲಿ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಕೈ ಹಾಕಿದೆ. ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮಂಡ್ಯ ಜಿಲ್ಲೆಯ ಕೆಆರ್‍ಎಸ್ ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದೆ.

    ಕೆಆರ್‌ಎಸ್ ಉದ್ಯಾನ `ಬೃಂದಾವನ’ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಥೇಮ್ಸ್ ನದಿಯ ತಟದಲ್ಲಿ ಇರುವಂತೆ ರೀತಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ 400 ಎಕರೆ ಪ್ರದೇಶ ಬಳಕೆಯಾಗಲಿದೆ. 1200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ 300 ಕೋಟಿ ರೂ. ಆದಾಯ, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರುವ ನಿರೀಕ್ಷೆಯಿದೆ.

    ಹೇಗಿರಲಿದೆ ಪ್ರತಿಮೆ?:
    ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಾಣವಾಗಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದ್ದು, ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv