Tag: Engineering College

  • ಕೊಡಗು | ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

    ಕೊಡಗು | ಪೊನ್ನಂಪೇಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

    – 2 ದಿನಗಳ ಅಂತರದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಎರಡೇ ದಿನಗಳ ಅಂತರದಲ್ಲಿ ಪೊನ್ನಂಪೇಟೆಯ ಇಂಜಿನಿಯರಿಂಗ್ ಕಾಲೇಜು (Engineering College) ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಇತ್ತೀಚೆಗೆ ರಾಯಚೂರು (Raichur) ಮೂಲದ ತೇಜಸ್ವಿನಿ ಎಂಬ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಪಿರಿಯಾಪಟ್ಟಣ ಮೂಲದ ಮತ್ತೋರ್ವ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    Kodagu Student Suicide copy

    ಹಳ್ಳಿಗಟ್ಟುವಿನ CET ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇಎಐ ಅಂಡ್‌ ಡಿಎಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪಿರಿಯಾಪಟ್ಟಣ ಮೂಲದ ಯಶ್ವಂತ್ (20) ಎಂಬಾತ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿ. ಶುಕ್ರವಾರ ರಾತ್ರಿ 8:30ರ ಸುಮಾರಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: Kodagu | ಕಾಲೇಜು ಹಾಸ್ಟೆಲ್‌ನಲ್ಲಿ ರಾಯಚೂರು ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: Madikeri | ಓಂಕಾರೇಶ್ವರ ದೇವಾಲಯದ ಕಲ್ಯಾಣಿ ಭರ್ತಿಗೆ ಒಂದೇ ಮೆಟ್ಟಿಲು ಬಾಕಿ

  • ಬೀದರ್‌ ಎಂಜಿನಿಯರಿಂಗ್ ಕಾಲೇಜಿನಿಂದ 19 ವಿದ್ಯಾರ್ಥಿಗಳು ಅಮಾನತು

    ಬೀದರ್‌ ಎಂಜಿನಿಯರಿಂಗ್ ಕಾಲೇಜಿನಿಂದ 19 ವಿದ್ಯಾರ್ಥಿಗಳು ಅಮಾನತು

    ಬೀದರ್‌: ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (GND Engineering College Bidar) ನಡೆದ ಗುಂಪು ಸಂಘರ್ಷದಲ್ಲಿ ಭಾಗಿಯಾಗಿದ್ದ 19 ವಿದ್ಯಾರ್ಥಿಗಳನ್ನು  ಕಾಲೇಜಿನಿಂದ ಅಮಾನತು ಮಾಡಲಾಗಿದೆ.

    ಆಂತರಿಕ ವಿಚಾರಣೆ ಮುಗಿಯುವವರೆಗೆ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದ್ದು ಈಗಾಗಲೇ ಕಾಲೇಜಿನಲ್ಲಿ ಐದು ಜನರ ಉಪನ್ಯಾಸಕರ ವಿಚಾರಣೆ ಸಮಿತಿಯನ್ನು ರಚನೆ ಮಾಡಲಾಗಿದೆ. ಇದನ್ನೂ ಓದಿ: ಭವಾನಿ ರೇವಣ್ಣಗೆ ಕೊನೆಗೂ ಮಧ್ಯಂತರ ಜಾಮೀನು ಮಂಜೂರು

     

    ಈ ಪ್ರಕರಣದಿಂದ ಕಾಲೇಜು ಆಡಳಿತ ಮಂಡಳಿಗೆ ಬಾರಿ ಮುಜುಗರವಾಗಿತ್ತು. ಈಗ ಕಾಲೇಜಿನ ನಿಯಮದ ಅಡಿಯಲ್ಲಿ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಆಂತರಿಕ ವಿಚಾರಣೆ ಮಾಡುವ ಉದ್ದೇಶದಿಂದ ಅಮಾನತು ಮಾಡಲಾಗಿದೆ. ಕಾಲೇಜಿನ ಈ ವಿಚಾರಣೆ ಪೊಲೀಸರ ಮುಂದಿನ ವಿಚಾರಣೆಗೆ ಸಹಾಯವಾಗಲಿದೆ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು – ಡಿಕೆಸು ಪ್ರಾಪರ್ಟಿ ಶ್ಯೂರಿಟಿ

    ಮೇ 29 ರಂದು ಕಾಲೇಜಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಜೈಶ್ರೀರಾಮ್ ಹಾಡು ಹಾಕಿದ್ದಕ್ಕೆ ಮುಸ್ಲಿಂ ಯುವಕರು ಹಿಂದೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದು ರಾಜ್ಯಾದ್ಯಂತ ಬಾರಿ ಸುದ್ದಿಯಾಗಿತ್ತು. ಈಗಾಗಲೇ ಗಾಂಧಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದ್ದಾರೆ.

  • ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ – ಲಾಠಿ ಬೀಸಿ ನಿಯಂತ್ರಿಸಿದ ಪೊಲೀಸರು

    ಎಂಜಿನಿಯರ್ ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ – ಲಾಠಿ ಬೀಸಿ ನಿಯಂತ್ರಿಸಿದ ಪೊಲೀಸರು

    ಹಾಸನ: ನಗರದ ಪ್ರತಿಷ್ಠಿತ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನ (Engineering College) ವಿದ್ಯಾರ್ಥಿಗಳ (Students) ನಡುವೆ ಮಾರಾಮಾರಿ ನಡೆದಿದ್ದು, ವಿದ್ಯಾರ್ಥಿಗಳ ಗಲಾಟೆಗೆ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಬೀಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

    ಹಾಸನದ (Hassan) ಸಾಲಗಾಮೆ ರಸ್ತೆಯಲ್ಲಿರುವ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಘಟನೆ ನಡೆದಿದ್ದು, ವಿದ್ಯಾರ್ಥಿ ಪ್ರತಿನಿಧಿಯ ಚುನಾವಣೆ (Student Representative Election) ನಡೆದಿತ್ತು. ನಿನ್ನೆ ಸಂಜೆ ಚುನಾವಣಾ ಫಲಿತಾಂಶ ಬಂದಿದ್ದು, ಗೆದ್ದವರು ಹಾಗೂ ಸೋತವರ ಬೆಂಗಲಿಗ ಗುಂಪುಗಳ ನಡುವೆ ಗಲಾಟೆ ನಡೆದಿದೆ.

    ವರದಿಗಳ ಪ್ರಕಾರ ಚುನಾವಣೆಯಲ್ಲಿ ಗೆದ್ದಿದ್ದ ಗುಂಪಿನ ವಿದ್ಯಾರ್ಥಿಗಳು ಪೊಲೀಸರ ಅನುಮತಿ ಪಡೆದು ನಗರದಲ್ಲಿ ಮೆರವಣಿಗೆ ಮಾಡಿದ್ದರು. ಈ ವೇಳೆ ಸೋತವರ ಮೇಲೆ ಯುವಕರು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ವಿದ್ಯಾರ್ಥಿಗಳ ಗಲಾಟೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಲಾಠಿ ಬೀಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್‌ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ

    ಘಟನೆ ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚುನಾವಣೆ ಹೆಸರಿನಲ್ಲಿ ವಿದ್ಯಾರ್ಥಿಗಳು ಪುಂಡಾಟ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗಡಿ ವಿವಾದ- ಅಮಿತ್ ಶಾ ಸೂಚನೆಗೂ ಕ್ಯಾರೇ ಎನ್ನದ ಮಹಾರಾಷ್ಟ್ರದ NCP ಶಾಸಕರು

    Live Tv
    [brid partner=56869869 player=32851 video=960834 autoplay=true]

  • ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೊಫೆಸರ್ ಕ್ಷಮೆಯಾಚನೆ

    ವೀರ ಮದಕರಿ ನಾಯಕ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ – ಪ್ರೊಫೆಸರ್ ಕ್ಷಮೆಯಾಚನೆ

    ಬೆಳಗಾವಿ: ಸೋಶಿಯಲ್ ಮೀಡಿಯಾದಲ್ಲಿ ವೀರ ಮದಕರಿ ನಾಯಕನ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಪ್ರೊಫೆಸರ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚನೆ ಮಾಡಿದ್ದಾರೆ.

    ಬೆಳಗಾವಿ ನಗರದ ಖಾಸಗಿ ಎಂಜಿನಿಯರಿಂಗ್ ಕಾಲೇಜು ಪ್ರೊಫೆಸರ್ ಅಭಿಜಿತ್ ಬೈಕೇರಿಕರ್ ಕ್ಷಮಾಪಣೆ ಕೇಳಿದ್ದಾರೆ. ಪ್ರಕರಣದ ಹಿನ್ನೆಲೆ ನೋಡೋದಾದ್ರೆ ಬೆಳಗಾವಿ ನಗರದ ಆರ್‌ಪಿಡಿ ವೃತ್ತಕ್ಕೆ ವೀರ ಮದಕರಿ ನಾಯಕರ ಹೆಸರಿಡುವಂತೆ ಕೆಲ ಸಂಘಟನೆಗಳು ಸರ್ಕಾರಕ್ಕೆ ಆಗ್ರಹಿಸಿದ್ದವು.

    ನಡೆದಿದ್ದೇನು?
    ಈ ಸಂದರ್ಭದಲ್ಲಿ ಪ್ರೊಫೆಸರ್ ಅಭಿಜಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬೆಳಗಾವಿಗೂ ವೀರಮದಕರಿ ನಾಯಕರಿಗೂ ಸಂಬಂಧ ಏನು? ಅಂತಾ ಪ್ರಶ್ನೆ ಮಾಡಿದ್ದರು. ಪ್ರೊಫೆಸರ್ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಗುರಿಯಾಗಿತ್ತು. ‘Remove_Abhijeet’ ಹ್ಯಾಷ್‍ಟ್ಯಾಗ್‍ನಲ್ಲಿ ನೆಟ್ಟಿಗರು ಅಭಿಯಾನ ಆರಂಭಿಸಿದ್ದರು. ಇದನ್ನೂ ಓದಿ: ಎರಡು ಸರ್ಕಾರಿ ಬಸ್‍ಗಳ ಮಧ್ಯೆ ಮುಖಾಮುಖಿ ಡಿಕ್ಕಿ – ಹತ್ತಕ್ಕೂ ಹೆಚ್ಚು ಜನರಿಗೆ ಗಾಯ 

    ಅಭಿಜಿತ್ ಅವರ ವಿರುದ್ಧ ಕ್ರಮಕ್ಕೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ ಆಗ್ರಹ ಮಾಡಿತ್ತು. ಈ ಸಂಬಂಧ ಕಾಲೇಜು ಪ್ರಾಂಶುಪಾಲರನ್ನು ಭೇಟಿಯಾಗಿ ಸಂಘಟನೆ ಸದಸ್ಯರು ಮನವಿ ಮಾಡಿಕೊಂಡಿದ್ದರು. ಇತ್ತ ಸಂಘಟನೆ ಒತ್ತಾಯದ ಬೆನ್ನಲ್ಲೇ ಅಭಿಜಿತ್ ಬೈಕೇರಿಕರ್ ಕ್ಷಮೆಯಾಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್ – ಈ ವರ್ಷದಿಂದ ಶೇ.10ರಷ್ಟು ಶುಲ್ಕ ಏರಿಕೆ

    ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕ್ – ಈ ವರ್ಷದಿಂದ ಶೇ.10ರಷ್ಟು ಶುಲ್ಕ ಏರಿಕೆ

    ಬೆಂಗಳೂರು: ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶುಲ್ಕ 10% ಹೆಚ್ಚಳ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ.

    ವಿಕಾಸಸೌಧದಲ್ಲಿ ಇಂದು ಸಚಿವ ಅಶ್ವಥ್ ನಾರಾಯಣ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಈ ವರ್ಷ ಸೇರುವ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಫೀಸ್ ಹೆಚ್ಚಿಸಲು ನಿರ್ಧಾರ ಮಾಡಲಾಗಿದೆ. 45% ಲೋವರ್ ಫೀಸ್, 30% ಹೈಯರ್ ಫೀಸ್  25% ಮ್ಯಾನೇಜ್ಮೆಂಟ್ ಸೀಟ್ ಗೆ ಹೋಗಲಿದೆ ಎಂದು ಹೇಳಿದರು.

    MONEY

    ಎಂಜಿನಿಯರಿಂಗ್ ಕಾಲೇಜುಗಳ ಜೊತೆ ಚರ್ಚೆಯಾಗಿದೆ. ಹಲವು ವಿಚಾರ ಚರ್ಚೆಯಾಗಿದೆ. ವಿದ್ಯಾರ್ಥಿಗಳಿಗೆ ಹೆಚ್ಚು ಫೀಸ್ ಸಂಗ್ರಹ ಮಾಡಬಾರದು. ನಿರ್ದಿಷ್ಟ ಶುಲ್ಕ ಮಾತ್ರ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಕೋರ್ಡಿನೇಷನ್ ಸಿಂಪಲ್ ಮಾಡುವ ಬಗ್ಗೆ ಚರ್ಚೆ ಆಗಿದೆ ಎಂದರು. ಇದನ್ನೂ ಓದಿ: ಆಷಾಢ ಮಾಸದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ನ್ಯೂ ರೂಲ್ಸ್

    ಈವರೆಗೂ ಸರ್ಕಾರಿ ಸೀಟುಗಳಿಗೆ ಮಾತ್ರ ಸಿಇಟಿ ನಡೆಯುತ್ತಿತ್ತು. ಖಾಸಗಿ ಸೀಟುಗಳಿಗೆ ಕಾಮಿಡ್ ಕೆ ಸೀಟು ಮಾಡಲಾಗುತ್ತಿತ್ತು. ಇದೀಗ ಸಿಇಟಿ ಮತ್ತು ಕಾಮೆಡ್ ಕೆ ಎರಡನ್ನೂ ಒಟ್ಟಿಗೆ ನಡೆಸಲು ಸಮ್ಮತಿ ನೀಡಿದ್ದಾರೆ. ಹಾಗಾಗಿ ಹೇಗೆ ಪರೀಕ್ಷೆ ನಡೆಸಬೇಕು ಅಂತ ಚರ್ಚೆ ಮಾಡಿದ್ದೇವೆ. ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪ್ರತ್ಯೇಕ ಪರೀಕ್ಷೆ ಇರಲಿದೆ. ಮುಂದಿನ ವರ್ಷದಿಂದ ಸಿಇಟಿ ಮಾತ್ರ. ಕಾಮೆಡ್-ಕೆ, ಸಿಇಟಿ ಒಟ್ಟಿಗೆ ಏಕರೂಪದ ಸಿಇಟಿ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಒಡಂಬಡಿಕೆ ಆಗಲಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

    ಕೊರೊನಾ ಹಿನ್ನಲೆ ಎರಡು ವರ್ಷಗಳ ಕಾಲ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಹೀಗಾಗಿ ಶುಲ್ಕ ಹೆಚ್ಚಳಕ್ಕೆ ಖಾಸಗಿ ಕಾಲೇಜುಗಳು ಬೇಡಿಕೆ ಇಟ್ಟಿದ್ದರು. 20-25% ಶುಲ್ಕ ಹೆಚ್ಚಳಕ್ಕೆ ಮನವಿ ಮಾಡಿದ್ರು. ನಾವು 10% ಶುಲ್ಕ ಹೆಚ್ವಳಕ್ಕೆ ಅನುಮತಿ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಕೂಲಿ ಕೆಲಸ ಮಾಡಿ ಕೋಟಿ-ಕೋಟಿ ಸಂಪಾದನೆ ಮಾಡ್ತಿದ್ದ ಕೋಟ್ಯಧಿಪತಿ ಜೈಲುಪಾಲು

    Live Tv

  • ದೇಶದಲ್ಲೆ ಉತ್ತಮ ಗಾಳಿ ದೊರೆಯುವಲ್ಲಿ 2ನೇ ಸ್ಥಾನ ಪಡೆದುಕೊಂಡ ಮುದ್ರಣ ಕಾಶಿ

    ದೇಶದಲ್ಲೆ ಉತ್ತಮ ಗಾಳಿ ದೊರೆಯುವಲ್ಲಿ 2ನೇ ಸ್ಥಾನ ಪಡೆದುಕೊಂಡ ಮುದ್ರಣ ಕಾಶಿ

    ಗದಗ: ಸಂಗೀತದ ನಾಡು, ಹಸಿರು ಗಿರಿಗಳ ಸಾಲಿನ ಮುದ್ರಣ ಕಾಶಿಗೆ ಇದೀಗ ಪರಿಸರ ಮಾಲಿನ್ಯದಿಂದ ಮತ್ತೊಂದು ಕಿರೀಟ ಲಭಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸಮೀಕ್ಷೆ ಪ್ರಕಾರ, ದೇಶದಲ್ಲೇ ಉತ್ತಮ ಗಾಳಿ ದೊರೆಯುವ ಸ್ಥಳದಲ್ಲಿ ಗದಗ 2ನೇ ಸ್ಥಾನ ಪಡೆದಿದೆ. ಈ ಮೂಲಕ ಹಸಿರು ಸಹ್ಯಾದ್ರಿ ತನ್ನ ಉಸಿರನ್ನೂ ದೇಶದಲ್ಲಿ ಉತ್ತುಂಗಕ್ಕೇರಿಸಿದೆ.

    ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿ 131 ನಗರಗಳ ಸಮೀಕ್ಷೆ ನಡೆಸಿದ್ದು, ವಾಯುಗುಣ ಮಟ್ಟದ ಸೂಚ್ಯಂಕದ ಬುಲೆಟಿನ್ ಪ್ರಕಾರ ಮುದ್ರಣಕಾಶಿ ಗದಗ ನಗರ ದೇಶದಲ್ಲೇ 2ನೇ ಸ್ಥಾನ ಪಡೆದಿದೆ. ಜೂನ್ 15 ರಂದು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಪ್ರಕಟನೆ ಬಿಡುಗಡೆ ಮಾಡಿದೆ. ದೇಶದ 45 ನಗರಗಳು ಸಮಾಧಾನಕರ ಹಾಗೂ 21 ನಗರಗಳು ಗಾಳಿ ಸ್ಥಿತಿ ಮಧ್ಯಮವಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ತಿಳಿಸಿದೆ.

    ಗದಗದಲ್ಲಿ ಉತ್ತಮ ಗುಣಮಟ್ಟದ ಗಾಳಿ ದೊರೆಯಲು ಹಲವಾರು ಕಾರಣಗಳಿವೆ. ನಗರದಲ್ಲಿ ಇಂಗಾಲ ಕಾರ್ಬನ್ ಡೈಯಾಕ್ಸೈಡ್ ಕಡಿಮೆ ಇದೆ. ವಿಷಕಾರಿ ಹೊಗೆ ಬಿಡುವಂಥಹ ಯಾವುದೇ ಫ್ಯಾಕ್ಟರಿಗಳಿಲ್ಲ. ಸಾವಯುವ ಕೃಷಿ ಮೂಲಕ ಕೃಷಿ ಕೇತ್ರದಲ್ಲೂ ಹೆಚ್ಚು ಸಾಧನೆ ಮಾಡುತ್ತಿದೆ. ಅನೇಕ ಗಿಡಮರಗಳು, ಕೆರೆಗಳ ಅಭಿವೃದ್ಧಿ, ಮಳೆ ನೀರು ಹಿಡಿದಿಡಲು ಬಾಂದಾರ್, ಚೆಕ್ ಡ್ಯಾಮ್, ಕೃಷಿ ಹೊಂಡ, ಹೀಗೆ ನೀರಿನ ಗುಂಡಿಗಳು ಹೆಚ್ಚು ನಿರ್ಮಾಣವಾಗುತ್ತಿವೆ. ಹಸರಿಕರಣ, ಸೋಲಾರ್ ಪವರ್, ವಿಂಡ್ ಪವರ್, ಎಲೆಕ್ಟ್ರಿಕಲ್ ವಾಹನಗಳ ಬಳಕೆಗಳಿಂದ ಇಂತಹ ಗುಣಮಟ್ಟದ ಗಾಳಿ ದೊರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ:ಮಲೆನಾಡಲ್ಲಿ ಭಾರೀ ಮಳೆ, ಮುಳುಗುವ ಭೀತಿಯಲ್ಲಿ ಹೆಬ್ಬಾಳೆ ಸೇತುವೆ, ಭೂ ಕುಸಿತ

    ನಗರದ ತೋಂಟದಾರ್ಯ ಇಂಜನೀಯರಿಂಗ್ ಕಾಲೇಜಿನಲ್ಲಿ ನಿರಂತರ ವಾಯುಗುಣಮಟ್ಟದ ಮಾಪನ ಕೇಂದ್ರ ಅಳವಡಿಸಲಾಗಿದೆ. ಪ್ರತಿದಿನ ಇದು ಬಾರಿ ವಾಯುಗುಣಮಟ್ಟವನ್ನು ತಿಳಿಸುತ್ತದೆ. ಜೂ.15 ರಂದು ಶೇ.10 ರಷ್ಟು ಸೂಚ್ಯಂಕವನ್ನು ಮಾಪನ ಪ್ರದರ್ಶಿಸಿದೆ. ಇದೇ ಡಾಟಾವನ್ನ ಸ್ಥಳೀಯ ಪರಿಸರ ಇಲಾಖೆ ಕೇಂದ್ರ ಇಲಾಖೆಗೆ ರವಾನಿಸಿದೆ. ಕೇಂದ್ರ ಇಲಾಖೆ ಇದನ್ನು ತನ್ನ ವೆಬ್‍ಸೈಟ್‍ನಲ್ಲಿ ಹಂಚಿಕೊಂಡಿದೆ. ಇನ್ನು ಈ ಭಾಗದಲ್ಲಿ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರೋ ಕಪ್ಪತ್ತಗುಡ್ಡ ಏಷ್ಯಾದಲ್ಲಿಯೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶ ಎಂಬ ಕೀರ್ತಿಗೆ ಪಾತ್ರವಾಗಿದೆ. ಇತ್ತೀಚಿಗೆ ಸಾಕಷ್ಟು ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಸೋಲಾರ್ ಹಾಗೂ ಎಲೆಕ್ಟ್ರಿಕಲ್ ವಸ್ತುಗಳನ್ನು ಬಳಸುತ್ತಿರುವುದರಿಂದ ನಮ್ಮ ನಗರ ಉತ್ತಮ ಗುಣಮಟ್ಟದ ಗಾಳಿ ಹೊಂದಿದೆ. ಇಂತಹ ನಗರದಲ್ಲಿ ನಾವು ವಾಸಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ ಎಂದು ಪರಿಸರ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಲಾಕ್‍ಡೌನ್ ಕಾರಣವೋ ಅಥವಾ ಇಲ್ಲಿನ ಹಸಿರು ಸಹ್ಯಾದ್ರಿಯ ಕಪ್ಪತ್ತಗುಡ್ಡದ ಕಾರಣವೋ ಗೊತ್ತಿಲ್ಲ. ಗದಗ ನಗರ ದೇಶದಲ್ಲಿ ಉತ್ತಮ ಗಾಳಿ ನೀಡುವದರಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಶುದ್ಧ ಗಾಳಿಯನ್ನು ನಗರದ ಜನತೆ ಅಶುದ್ಧ ಮಾಡದ ಹಾಗೆ ಇದೇ ರೀತಿ ಕಾಪಾಡಿಕೊಂಡು ಹೋಗಬೇಕು. ಪರಿಸರಕ್ಕೆ ಮಾರಕವಾದ ಚಟುವಟಿಕೆಗಳನ್ನು ನಿಲ್ಲಿಸಿ ಜಿಲ್ಲೆಗೆ ಉಸಿರಾಗಿರೋ ಹಸಿರನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋದರೆ ಸಾಕು ಎಂಬುವುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ಕೆಎಲ್‍ಇ ಆಸ್ಪತ್ರೆಯಿಂದ ಲಸಿಕೆ ಖರೀದಿಸಿ ಯುವಕರಿಗೆ ಉಚಿತವಾಗಿ ಹಂಚಿದ ಗಣೇಶ್ ಹುಕ್ಕೇರಿ

  • ಪರಂ ಒಡೆತನದ ಕಾಲೇಜಿನಲ್ಲಿ ಯುವ ಕಾಂಗ್ರೆಸ್ ಸಂವಾದ – ವಿದ್ಯಾರ್ಥಿಗಳಿಂದ ಮೋದಿ ಪರ ಘೋಷಣೆ!

    ಪರಂ ಒಡೆತನದ ಕಾಲೇಜಿನಲ್ಲಿ ಯುವ ಕಾಂಗ್ರೆಸ್ ಸಂವಾದ – ವಿದ್ಯಾರ್ಥಿಗಳಿಂದ ಮೋದಿ ಪರ ಘೋಷಣೆ!

    ತುಮಕೂರು: ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಯುವ ಕಾಂಗ್ರೆಸ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮೋದಿಪರ ಘೋಷಣೆ ಕೂಗಿದ್ದಾರೆ.

    ಜಿಲ್ಲಾ ಯುವ ಕಾಂಗ್ರೆಸ್ “ವಿಭಿನ್ನ ವಿಚಾರಗಳ-ಮುಖಾ ಮುಖಿ” ಹೆಸರಿನಲ್ಲಿ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮೋದಿ ಆಡಳಿತ ಅವಧಿಯಲ್ಲಿ ನಿರುದ್ಯೋಗ ಹೆಚ್ಚಾಗಿದೆ. ರಫೇಲ್ ಹಗರಣ ನಡೆದಿದೆ ಎಂಬೆಲ್ಲಾ ಆರೋಪಗಳ ಮೇಲೆ ಸಂವಾದ ನಡೆಯುತ್ತಿತ್ತು. ಈ ವೇಳೆ ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಕೂಗಿ ಕಾರ್ಯಕ್ರಮ ಆಯೋಜಕರಿಗೆ ಮುಖಭಂಗ ಮಾಡಿದ್ದಾರೆ.

    ಸಂವಾದದ ವೇಳೆ ಎದ್ದುನಿಂತ ವಿದ್ಯಾರ್ಥಿಗಳು ನಿರುದ್ಯೋಗ ಸಮಸ್ಯೆ ಕೇವಲ ಐದು ವರ್ಷದಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದೆ. ನೀವ್ಯಾಕೆ ಮೋದಿ ಮೇಲೆ ಆರೋಪ ಮಾಡುತ್ತೀರಿ ಎಂದು ತಿರುಗೇಟು ನೀಡಿದ್ರು. ಇದೇ ವೇಳೆ ವಿದ್ಯಾರ್ಥಿಗಳ ಸಹಾಯಕ್ಕೆ ಬಂದ ಪ್ರಾಂಶುಪಾಲ ರವಿಕುಮಾರ್, ಮನಮೋಹನ್ ಸಿಂಗ್ ಕಾಲದಲ್ಲಿ ಪೆಟ್ರೋಲ್ ರೇಟ್ ಜಾಸ್ತಿಯಾದ್ರೆ ಅದನ್ನ ಸಮರ್ಥಿಸಿಕೊಳ್ಳುತ್ತೀರಿ. ಈಗ ಜಾಸ್ತಿಯಾದರೆ ಕಾರಣ ಕೇಳ್ತೀರಾ ಇದ್ಯಾವ ಸೀಮೆ ನ್ಯಾಯ ಎಂದು ಸಂವಾದ ಸಲಹೆಗಾರ ಚೇತನ್ ರೆಡ್ಡಿ ಮರು ಪ್ರಶ್ನೆ ಕೇಳಿದ್ರು.

    ಪ್ರಾಂಶುಪಾಲರು ಟಾಂಗ್ ಕೊಡುತಿದ್ದಂತೆಯೇ ವಿದ್ಯಾರ್ಥಿಗಳು ಚಪ್ಪಾಳೆ ಹೊಡೆದು “ಮೋದಿ ಮೋದಿ” ಎಂದು ಘೋಷಣೆ ಕೂಗಿದ್ರು. ಇದರಿಂದ ಕಾರ್ಯಕ್ರಮ ಆಯೋಜಕರಿಗೆ ಮುಜುಗರ ಉಂಟಾಯಿತು.

    https://www.youtube.com/watch?v=Whv5zlI1jmw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 7 ವರ್ಷಗಳ ನಂತ್ರ ಕಾಲೇಜಿಗೆ ಕಟ್ಟಡ ಸಿಕ್ರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಫುಟ್‍ಪಾತ್, ಹಾಸ್ಟೆಲ್ ಕಿಚನ್ ನಲ್ಲೇ ಬೋಧನೆ!

    7 ವರ್ಷಗಳ ನಂತ್ರ ಕಾಲೇಜಿಗೆ ಕಟ್ಟಡ ಸಿಕ್ರೂ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಫುಟ್‍ಪಾತ್, ಹಾಸ್ಟೆಲ್ ಕಿಚನ್ ನಲ್ಲೇ ಬೋಧನೆ!

    ಕಾರವಾರ: ಏಳು ವರ್ಷಗಳ ಹಿಂದೆಯೇ ಪ್ರಾರಂಭವಾದ ಕಾಲೇಜಿಗೆ ಈಗ ಹೊಸ ಕಟ್ಟಡ ಸಿಕ್ಕಿದೆ. ಆದರೂ ವಿದ್ಯಾರ್ಥಿಗಳು ಫುಟ್ ಪಾತ್‍ನಲ್ಲಿಯೇ ಓದುವ ದುರ್ಗತಿ ಬಂದಿದೆ.

    ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಏಳು ವರ್ಷಗಳ ಹಿಂದೆಯೇ ಪ್ರಾರಂಭವಾಗಿದ್ದು, ಈಗ ಹೊಸ ಕಟ್ಟಡ ವಿದ್ಯಾರ್ಥಿಗಳಿಗೆ ಸಿಕ್ಕಿದೆ. ಆದರೆ ಸ್ಥಳೀಯ ಶಾಸಕ ಸತೀಶ್ ಸೈಲ್ ಕೃಪಾ ಕಟಾಕ್ಷದಿಂದ ಪಾಳುಬಿದ್ದ ಬಾಯ್ಸ್ ಹಾಸ್ಟೆಲ್ ಮತ್ತು ಫುಟ್ ಪಾತ್‍ನಲ್ಲೇ ಓದಬೇಕಾದ ದುರ್ಗತಿ ಎದುರಾಗಿದೆ. ಫುಟ್‍ಪಾತ್, ಹಾಸ್ಟೆಲ್‍ನ ಕಿಚನ್‍ನಲ್ಲೇ ಭವಿಷ್ಯದ ಎಂಜಿನಿಯರ್ ಗಳಿಗೆ ಬೋಧನೆ ಮಾಡಲಾಗುತ್ತಿದೆ.

    ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕೆಲ ಪ್ರಾಧ್ಯಾಪಕರು ಶಾಸಕ ಸತೀಶ್ ಸೈಲ್ ನಡೆಸುತ್ತಿರುವ ಕಾಲೇಜಿನಲ್ಲೂ ಪಾಠ ಮಾಡುತ್ತಿದ್ದಾರೆ. ಶಾಸಕ ಕಾಲೇಜಿನಲ್ಲಿ ಲ್ಯಾಬ್ ಟೆಸ್ಟೆಲ್ಲಾ ನಡೆಯುತ್ತಿದೆ ಎಂದು ಹೇಳಿ ಸರ್ಕಾರದಿಂದ ಸಂದಾಯವಾಗುತ್ತಿರುವ ಹಣವನ್ನು ವಂಚಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಈ ಅಕ್ರಮದ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ಶಾಂತಲಾರವರು ದೂರು ನೀಡಿದ್ದರು. ಆದರೆ ಅವರನ್ನು ಶಾಸಕರ ಒತ್ತಡದ ಮೇರೆಗೆ ವರ್ಗಾಯಿಸಲಾಗಿದೆ.

    ಸರ್ಕಾರ ನೋಡಿದರೆ ಬಡ ವಿದ್ಯಾರ್ಥಿಗಳೂ ಎಂಜಿನಿಯರಿಂಗ್ ಓದಲಿ ಎಂದು ಕಾಲೇಜು ಕಟ್ಟಿಸಿ ಕೊಟ್ಟಿದ್ದಾರೆ. ಆದ್ರೆ ಅದಕ್ಕೆ ಶಾಸಕ ಸೈಲ್ ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಇದೀಗ ವ್ಯಕ್ತವಾಗುತ್ತಿದೆ.

  • ಸೂರ್ಯನ ಶಾಖದಿಂದಲೇ ಓಡುತ್ತೆ ಈ ಕಾರ್: ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ಆವಿಷ್ಕಾರ

    ಸೂರ್ಯನ ಶಾಖದಿಂದಲೇ ಓಡುತ್ತೆ ಈ ಕಾರ್: ಮಣಿಪಾಲದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಹೊಸ ಆವಿಷ್ಕಾರ

    ಉಡುಪಿ: ನಮ್ಮ ದೇಶದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿದೆ. ಬೇಕಾದಷ್ಟು ಕರೆಂಟಾದ್ರೂ ಇದ್ಯಾ ಅಂದ್ರೆ ಅದೂ ಗಗನ ಕುಸುಮ. ಎಲ್ಲದಕ್ಕೂ ಪರ್ಯಾಯ ಹುಡುಕುವ ಕಾಲ ಬಂದಿದೆ. ಹೀಗಿರುವಾಗ ಎಲ್ಲರೂ ಉಚಿತವಾಗಿ ಸಿಗುವ ಸೂರ್ಯ ಶಕ್ತಿಯತ್ತ ಮುಖ ಮಾಡುತ್ತಿದ್ದು, ಮಣಿಪಾಲದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸೋಲಾರ್ ಕಾರನ್ನು ತಯಾರು ಮಾಡಿದ್ದಾರೆ.

    ನಾಲ್ಕು ಮಂದಿ ಆರಾಮವಾಗಿ ಓಡಾಡಬಹುದಾದ ಈ ಕಾರು ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಓಡುತ್ತೆ. ಕಾರಿನ ಮೇಲೆ, ಮುಂದೆ-ಹಿಂಭಾಗ ಸೋಲಾರ್ ಪ್ಯಾನಲ್ ಜೋಡಿಸಿದ್ದಾರೆ. ಕಾರಿನ ಒಳಗೆ ಬ್ಯಾಟರಿ ಬ್ಯಾಕಪ್ ಇದೆ. ಈ ಮೂಲಕ ಸೋಲಾರ್ ಎನರ್ಜಿ ಸಂಗ್ರಹ ಆಗುತ್ತೆ.

    ಒಂದು ಸಾರಿ ಕಾರೊಳಗಿರುವ ಬ್ಯಾಟರಿ ಫುಲ್ ಆದ್ರೆ ಮಿನಿಮಂ 100 ಕಿಲೋಮೀಟರ್ ಹೋಗ್ಬಹುದು. 40-50 ಸ್ಪೀಡಲ್ಲಿ ಹೋದ್ರೆ 180 ಕಿಲೋಮೀಟರ್ ದೂರ ಕ್ರಮಿಸಬಹುದು. ಸೂರ್ಯನ ಕಿರಣ 7 ಗಂಟೆ ನಿರಂತರವಾಗಿ ಕಾರಿನ ಮೇಲೆ ಬಿದ್ದರೆ ಮತ್ತೆ ಬ್ಯಾಟರಿ ತುಂಬಿಕೊಳ್ಳುತ್ತೆ. ಮೂರು ಗಂಟೆಯಲ್ಲಿ ವಿದ್ಯುತ್ತನ್ನು ಬ್ಯಾಟರಿಗೆ ಚಾರ್ಜ್ ಮಾಡುವ ವ್ಯವಸ್ಥೆಯನ್ನೂ ಕಾರೊಳಗೆ ಅಳವಡಿಸಲಾಗಿದೆ.

    ಎಲೆಕ್ಟ್ರಿಕಲ್, ಐಟಿ, ಮೆಕ್ಯಾನಿಕಲ್, ಏರೋನಾಟಿಕ್ ವಿಭಾಗದ ವಿದ್ಯಾರ್ಥಿಗಳು ಈ ಆವಿಷ್ಕಾರಕ್ಕೆ ಕೈಜೋಡಿಸಿದ್ದಾರೆ. ಚೀನಾ ಮತ್ತು ಜಪಾನ್‍ನಲ್ಲಿ ಒಬ್ಬ ಓಡಾಡುವ ಸೋಲಾರ್ ಕಾರು ತಯಾರು ಮಾಡುತ್ತಿದ್ದು, 3 ಕೋಟಿ ಕೋಟಿ ರೂಪಾಯಿ ಖರ್ಚಾಗಿದೆ. ಮಣಿಪಾಲ ವಿದ್ಯಾರ್ಥಿಗಳು 30 ಲಕ್ಷ ರೂಪಾಯಿಯಲ್ಲಿ ಈ ಸೋಲಾರ್ ಕಾರನ್ನು ತಯಾರಿಸಿದ್ದಾರೆ ಅಂತ ಪ್ರಧ್ಯಾಪಕ ಉಮಾನಂದ ಹೇಳಿದ್ದಾರೆ.

    ಅರ್ಧ ಕ್ವಿಂಟಾಲ್ ತೂಗುವ ಈ ಕಾರಿನ ಇಂಜಿನ್‍ನ ಅಳವಡಿಕೆ ಕೆಲಸ ಬಾಕಿಯಿದೆ. ಟೆಸ್ಟ್ ರೈಡ್‍ನಲ್ಲಿ ಕಾರು ಸಕ್ಸಸ್ಸಾಗಿದ್ದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಹಸಿರು ಇಂಧನ ಅನಿವಾರ್ಯ ಎಂದು ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ ಹೆಚ್ಚಿನ ಮಹತ್ವ ಪಡೆದಿದೆ.

  • ಊಟ ಸೇವಿಸಿ ಚಿಕ್ಕಮಗಳೂರು ಎಐಟಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಊಟ ಸೇವಿಸಿ ಚಿಕ್ಕಮಗಳೂರು ಎಐಟಿ ಕಾಲೇಜಿನ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

    ಚಿಕ್ಕಮಗಳೂರು: ನಗರದ ಎಐಟಿ ಕಾಲೇಜಿನ 20ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.

    ರಾಜ್ಯದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾದ ಎಐಟಿ ಕಾಲೇಜಿಗೆ ಸೇರಿದ ಹಾಸ್ಟೆಲ್‍ನ ವಿದ್ಯಾರ್ಥಿನಿಯರು ಊಟ ಹಾಗು ನೀರು ಸೇವಿಸಿ ವಾಂತಿ, ಬೇದಿ, ಜ್ವರದಿಂದ ಬಳಲುತ್ತಿದ್ದಾರೆ. ಸಾಕಷ್ಟು ವಿದ್ಯಾರ್ಥಿನಿಯರು ಜಿಲ್ಲಾ ಆಸ್ಪತ್ರೆ ಸೇರಿದ್ರೆ, ಕೆಲವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

    ಕಳೆದ ಒಂದು ವಾರದಿಂದ ವಾರ್ಡನ್‍ಗೆ ನೀರು ಸರಿಯಿಲ್ಲ, ಊಟ ಸರಿಯಿಲ್ಲ ಅಂತ ಹೇಳಿದ್ರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಊಟ ಹಾಗೂ ನೀರಿನಿಂದ ಈ ರೀತಿ ಸಮಸ್ಯೆಯಾಗಿದೆ ಅಂತ ವೈದ್ಯರು ಹೇಳಿದ್ದಾರೆ. ಇನ್ನೂ ಎರಡು ದಿನ ಚಿಕಿತ್ಸೆ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.